Tag: Nut

  • ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಚೆನ್ನೈ: ಎಲೆಕ್ಟ್ರಿಷಿಯನ್ (Electrician) ಕೆಲಸ ಮಾಡುತ್ತಿದ್ದ ವೇಳೆ ನಟ್ ನುಂಗಿದ್ದ 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.

    ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿಯನ್ನು ಕೊಯಮತ್ತೂರಿನ (Coimbatore) ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಟ್ ಅನ್ನು ನುಂಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಈ ವೇಳೆ ತಕ್ಷಣ ಕೆಮ್ಮಲು ಪ್ರಯತ್ನಿಸಿದ್ದಾರೆ. ಆದರೆ ನಟ್‍ನಿಂದ ಅವರಿಗೆ ಉಸಿರುಗಟ್ಟಲು ಪ್ರಾರಂಭಿಸಿತು. ಹೀಗಾಗಿ ಅವರನ್ನು ಕೂಡಲೇ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ವ್ಯಕ್ತಿಯನ್ನು ಕರೆದೊಯ್ದು ಎಕ್ಸ್-ರೇ ನಡೆಸಲಾಯಿತು. ಈ ವೇಳೆ ನಟ್ ಶ್ವಾಸನಾಳದಲ್ಲಿ ಸೇರಿಕೊಂಡು ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದುಬಂದಿದೆ.

    ಬಳಿಕ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡ ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಸಂಸುದ್ದೀನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ನಟ್ ಅನ್ನು ಹೊರತೆಗೆದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ: ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    Live Tv
    [brid partner=56869869 player=32851 video=960834 autoplay=true]

  • ಆಮದು ಸುಂಕ ಹೆಚ್ಚಿಸಿ, ಅಡಿಕೆ ಬೆಲೆ ಪರಿಷ್ಕರಿಸಿ – ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರ ನೇತೃತ್ವದ ನಿಯೋಗ ಮನವಿ

    ಆಮದು ಸುಂಕ ಹೆಚ್ಚಿಸಿ, ಅಡಿಕೆ ಬೆಲೆ ಪರಿಷ್ಕರಿಸಿ – ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರ ನೇತೃತ್ವದ ನಿಯೋಗ ಮನವಿ

    ನವದೆಹಲಿ: ವಿದೇಶಗಳಿಂದ ಆಮದಾಗುವ ಅಡಿಕೆ ಮೇಲಿನ ಆಮದು ಸುಂಕ ಹೆಚ್ಚಿಸಬೇಕು. ಅಡಿಕೆ ಆಧರಿತ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಇಳಿಕೆ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಕೇಂದ್ರ ಸಚಿವರಕ್ಕೆ ಮನವಿ ಮಾಡಿದೆ.

    ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜವಳಿ ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ ಅವರನ್ನು ನಿಯೋಗ ಭೇಟಿ ಮಾಡಿದೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    ಭೇಟಿ ವೇಳೆ ಪ್ರತಿ ಕೆಜಿ ಬಿಳಿ ಅಡಿಕೆಗೆ 360 ರೂಪಾಯಿ, ಕೆಂಪು ಅಡಿಕೆಗೆ 408 ರೂಪಾಯಿಗೆ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು. ಎಂಟು ವರ್ಷದ ಹಿಂದೆ ಅಡಿಕೆಗೆ 251 ರೂಪಾಯಿ ಬೆಲೆ ನಿಗದಿಯಾಗಿತ್ತು. ಈಗ ಬೆಳೆ ಬೆಳೆಯಲು ಹೆಚ್ಚಿನ ಹಣ ವ್ಯಯವಾಗುತ್ತಿದ್ದು, ಬೆಲೆ ಪರಿಷ್ಕರಣೆಯಾಗಬೇಕು ಎಂದು ಮನವಿ ಮಾಡಿದರು.

    ಅಲ್ಲದೇ ವಿದೇಶಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಅಡಿಕೆ ಭಾರತಕ್ಕೆ ಆಮದಾಗುತ್ತಿದೆ. ಇದರಿಂದ ಭಾರತದ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಆಮದು ಸುಂಕ ಹೆಚ್ಚಿಸಿ ದೇಶದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇದರ ಜೊತೆಗೆ ಅಡಿಕೆ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು 28% ನಿಂದ ಕಡಿಮೆ ಮಾಡಬೇಕು ಎಂದು ಕೋರಿದರು. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್

    ನಿಯೋಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಕ್ಯಾಂಪ್ಕೊ ಚೇರ್ಮನ್ ಕಿಶೋರ‌ ಕುಮಾರ್ ಕೂಡಗಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.

    Live Tv
    [brid partner=56869869 player=32851 video=960834 autoplay=true]

  • 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

    7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

    ಬೆಳಗಾವಿ: ಜಿಎಸ್‍ಟಿ ಇಲ್ಲದೇ ಸಾಗಿಸುತ್ತಿದ್ದ 7 ಕೋಟಿ ಮೊತ್ತದ ಅಡಿಕೆಯನ್ನು ಜಪ್ತಿ ಮಾಡಿ 7 ಜನರನ್ನು ಬಂಧನಕ್ಕೆ ಪಡೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಾಜ್ಯ ಸರಕು ಸೇವಾ ಇಲಾಖೆಯ ಯಾವ ಕೆಲಸವನ್ನು ಮಾಡಬೇಕೋ ಅದನ್ನು ಕೇಂದ್ರೀಯ ಸರಕು ಮತ್ತು ಸಾಗಾಣಿಕೆ ಇಲಾಖೆ ಮಾಡಿ ತೋರಿಸಿದೆ. ಜಿಎಸ್‍ಟಿ ಇಲ್ಲದೇ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೊತ್ತದ ಅಡಿಕೆ ತುಂಬಿದ 7 ಲಾರಿಗಳನ್ನು ಬೆಳಗಾವಿಯ ಕೇಂದ್ರೀಯ ಜಿಎಸ್‍ಟಿ ಮತ್ತು ಕೇಂದ್ರೀಯ ಅಬಕಾರಿ ಆಯುಕ್ತಾಲಯ ಜಪ್ತಿ ಮಾಡಿ 7 ಜನರನ್ನು ಬಂಧಿಸಿದೆ. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ

    ಮಂಗಳೂರಿನ ಡಿಜಿಜಿಐ ಅವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಬೆಳಗಾವಿಯ ಕೇಂದ್ರೀಯ ಜಿಎಸ್‍ಟಿ ಮತ್ತು ಕೇಂದ್ರೀಯ ಅಬಕಾರಿ ಆಯುಕ್ತಾಲಯದ ವತಿಯಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.

    ಮಾಹಿತಿ ಸಿಕ್ಕ ಕೂಡಲೇ ಕಾಯ್ದು ಕುಳಿತಿದ್ದ ಕೇಂದ್ರ ಇಲಾಖೆಯ ಅಧಿಕಾರಿಗಳು ಹುಬ್ಬಳ್ಳಿ ಮತ್ತು ನವಲಗುಂದ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಲಾರಿಗಳನ್ನು ತಡೆದಿದ್ದಾರೆ. ಅಡಿಕೆಗೆ ಶೇ.5 ರಷ್ಟು ಜಿಎಸ್‍ಟಿ ನೀಡಬೇಕು. ಆದರೆ ಜಿಎಸ್‍ಟಿಯನ್ನು ತುಂಬದೇ ಬಹುದೊಡ್ಡ ತೆರಿಗೆ ವಂಚನೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಲಾರಿಯನ್ನು ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಕೇಂದ್ರಿಯ ಜಿಎಸ್‍ಟಿ ಇಲಾಖೆಯ ಸಹಾಯಕ ಆಯುಕ್ತ ಅಜಿಂಕ್ಯ ಕಾಟಕರ ಅವರ ನೇತೃತ್ವದ ತಂಡ ನಡೆಸಿದ ಸಿನೀಮಿಯ ರೀತಿಯ ಕಾರ್ಯಾಚರಣೆಯಲ್ಲಿ ರಾಜೀವ್ ಹೆಗ್ಗಡೆ, ರಿಯಾಜ್ ಬೆಳಗಾಂವಕರ್, ಎಸ್‍ಪಿ ನಾಯಿಕ್, ಆಬೀದ್‍ಹುಸೇನ್ ನೇಸರಗಿ, ವಿಶ್ವನಾಥ್ ನಿಡಗುಂದಿ ಇನ್ನುಳಿದವರು ಭಾಗಿಯಾಗಿದ್ದರು. ವರಿಷ್ಠ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ. ಇದನ್ನೂ ಓದಿ: ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ

    ಶಿವಮೊಗ್ಗದಲ್ಲಿ ಅಡಿಕೆಗಳನ್ನು ಬೆಳೆದು, ದೆಹಲಿ ಮತ್ತು ಅಹಮದಾಬಾದ್‍ಗೆ ಪೂರೈಸಲಾಗುತ್ತದೆ. ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಮತ್ತು ದಾವಣಗೆರೆ ಅಧಿಕಾರಿಗಳು ಅಕ್ರಮವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ದಾವಣಗೆರೆ, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸಿದ್ದಾರೆ.

  • ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ – ರೈತರ ಮೊಗದಲ್ಲಿ ಮಂದಹಾಸ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್, ಹೊರಟ್ಟಿ ಸುತ್ತಮುತ್ತ ಮಳೆರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ.

    ಕಳಸ ಭಾಗದಲ್ಲೂ ಮಳೆ ಸುರಿದಿದ್ದು, ಚಿಕ್ಕಮಗಳೂರು ನಗರದಲ್ಲೂ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಕಳೆದ ಎಂಟತ್ತು ದಿನದಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಧ್ಯಾಹ್ನದ ನಂತರ ಆರಂಭವಾಗುತ್ತಿರೋ ಮಳೆ ಒಂದೆರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯುತ್ತಿದೆ. ಇಂದು ಕೂಡ ಮಲೆನಾಡಿನ ಕೆಲ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಸಂಜೆ ಬಳಿಕ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು-ಸಿಡಿಲಿನೊಂದಿಗೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ.

    ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ಮಧ್ಯಾಹ್ನ – ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಗುತ್ತಿದ್ದು ರೈತರು, ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಬೆಳೆಗೆ ಬೇಕಾಗುವಷ್ಟು ಮಳೆ ಸುರಿಯುತ್ತಿದ್ದು ಮಲೆನಾಡಿಗರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಮಲೆನಾಡು ಭಾಗದಲ್ಲಿ ಭಾರೀ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ಮುರಿದು ಬಿದ್ದಿವೆ.

  • ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದು ಬೆಂದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ.

    ಇಂದು ಬೆಳಗ್ಗೆಯಿಂದಲೂ ಮಲೆನಾಡು ಭಾಗವಾದ ಕಳಸ, ಮೂಡಿಗೆರೆ ಹಾಗೂ ಕೊಪ್ಪ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮೋಡದ ಮಧ್ಯೆಯೂ ಸಿಕ್ಕಾಪಟ್ಟೆ ಸೆಕೆ ಕೂಡ ಇತ್ತು. ಜನ ಸಂಜೆ ವೇಳೆಗೆ ಮಳೆ ಬರಬಹುದು ಎಂದು ಭಾವಿಸಿದ್ದರು. ಅದರಂತೆ ಜಿಲ್ಲೆಯ ಕಳಸ ತಾಲೂಕಿನ ಕಳಸ, ಹೊರನಾಡು, ಹಿರೇಬೈಲು, ಹುಳುವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.

    ಭಾರೀ ಬಿಸಿಲಿನಿಂದ ಬಳಲುತ್ತಿದ್ದ ಕಾಫಿ ಗಿಡಗಳಿಗೆ ಬೆಳೆಗಾರರು ಕೂಡ ನಾನಾ ರೀತಿಯಲ್ಲಿ ನೀರಾಯಿಸುತ್ತಿದ್ದರು. ಸ್ಪ್ರಿಂಕ್ಲರ್ ಸಾವಿರಾರು ಹಣ ನೀಡಿ ಕಾಫಿಗಿಡವನ್ನು ತಣ್ಣಗೆ ಇಡಲು ಪ್ರಯತ್ನಿಸುತ್ತಿದ್ದರು. ಸದ್ಯಕ್ಕೆ ಮಲೆನಾಡಲ್ಲಿ ಕಾಫಿ-ಮೆಣಸು-ಅಡಿಕೆಗೆ ನೀರು ಬೇಕಿತ್ತು. ಆದರೆ ಸಂಜೆ ವೇಳೆಗೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಕಾಫಿ-ಅಡಿಕೆ ಬೆಳೆಗಾರರಿಗೆ ವರವಾಗಿದೆ ಹಾಗೂ ಮಳೆರಾಯ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಣ ಉಳಿಸಿದ್ದಾನೆ.

    ಧಾರಾಕಾರವಾಗಿ ಸುರಿದ ಮಳೆಯಿಂದ ಸುಮಾರು ಇನ್ನೊಂದು ವಾರಗಳ ಕಾಲ ನೀರಾಯಿಸದಿದ್ದರೂ ಯಾವುದೇ ತೊಂದರೆ ಇಲ್ಲ. ಈ ಅಕಾಲಿಕ ಮಳೆಯಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ. ಆದರೆ ಈ ಸಂತೋಷದ ಮಧ್ಯೆಯೂ ಮಳೆ ಅಂದರೆ ಮಲೆನಾಡಿಗರಿಗೆ ಭಯ- ಆತಂಕ ಕೂಡ ಇದೆ. ಯಾಕೆಂದರೆ ಕಳೆದೆರಡು ವರ್ಷ ಮಳೆಯ ಅವಾಂತರಗಳನ್ನು ನೆನೆದು ಮಲೆನಾಡಿಗರು ಈ ಮಳೆಯಿಂದ ಸಂತಸಗೊಂಡರೂ ಕೂಡ ಭವಿಷ್ಯದ ಮಳೆ ಬಗ್ಗೆ ಭಯ ಹಾಗೆಯೇ ಇದೆ.

  • ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮಲೆನಾಡ ಹೆಬ್ಬಾಗಿಲು ಎಂದೇ ಕರೆಯುವ ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

    ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಹೊಗೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.

    ಈ ಮಧ್ಯೆ ಸ್ಥಳಿಯರು ಕೂಡ ರಸ್ತೆ ಬದಿ ಅಡಿಕೆ ಸಿಪ್ಪೆಯನ್ನು ಸುರಿಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬದಿ ಅಡಿಕೆ ಸಿಪ್ಪೆ ಸುರಿಯಲು ಬಿಡಬಾರದು ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.

  • ಕಾಚಳ್ಳಿ ಕಾಯಿ ತಿಂದು 18 ಮಂದಿ ಅಸ್ವಸ್ಥ

    ಕಾಚಳ್ಳಿ ಕಾಯಿ ತಿಂದು 18 ಮಂದಿ ಅಸ್ವಸ್ಥ

    ಮಂಡ್ಯ: ಬೇಲಿಯಲ್ಲಿ ಬೆಳೆಯುವ ಒಂದು ಬಗೆಯ ಕಾಯಿಯನ್ನು ತಿಂದು ಮಕ್ಕಳು ಸೇರಿದಂತೆ 18 ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    18 ಜನರಲ್ಲಿ 14 ಮಂದಿ ಮಕ್ಕಳಾಗಿದ್ದು, ನಾಲ್ವರು ದೊಡ್ಡವರಾಗಿದ್ದಾರೆ. ಚಿರಂತ್ (14), ದಿಗಂತ್ (9), ಶ್ರೇಯಾ (6), ತರುಣ್ (10), ವರ್ಷಮ್ (11), ಅಜಿತ್ (10), ರೋಜಾ (11), ಶರಣ್ (5), ಜನಿತ್ (9), ದರ್ಶನ್ (16), ಚೇತನ್ (19), ಯಶ್ವಂತ್ (12), ಶಿವ (36), ಮರಿಯಯ್ಯ (70), ವೆಂಕಟೇಶ್ (65), ಗೌರಮ್ಮ (38), ಸಿಂಚನ (16) ಮತ್ತು ಮರಿನಿಂಗಯ್ಯ (35) ಅಸ್ವಸ್ಥಗೊಂಡಿದ್ದಾರೆ.

    ಈ ಭಾಗದಲ್ಲಿ ಕಾಚಳ್ಳಿ ಕಾಯಿ ಎಂದು ಕರೆಯುತ್ತಾರೆ. ಕಾಚಳ್ಳಿ ಕಾಯಿಯನ್ನು ಬೇಲಿಯಲ್ಲಿ ಬೆಳೆಯುತ್ತಾರೆ. ಮೊದಲಿಗೆ ಇದನ್ನು ದೊಡ್ಡವರು ತಿಂದಿದ್ದಾರೆ. ಇದನ್ನು ನೋಡಿದ ಮಕ್ಕಳು ಅದೇ ಕಾಯಿಯನ್ನ ತಿಂದಿದ್ದಾರೆ. ಕಾಯಿ ತಿಂದು ಅರ್ಧಗಂಟೆಯಲ್ಲೇ ಎಲ್ಲರಿಗೂ ವಾಂತಿ ಭೇದಿ ಪ್ರಾರಂಭವಾಗಿದೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನೆಲಸಮ ಮಾಡಿದ ದುಷ್ಕರ್ಮಿಗಳು- ಮುಗಿಲುಮುಟ್ಟಿದ ರೈತನ ಆಕ್ರಂದನ

    ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನೆಲಸಮ ಮಾಡಿದ ದುಷ್ಕರ್ಮಿಗಳು- ಮುಗಿಲುಮುಟ್ಟಿದ ರೈತನ ಆಕ್ರಂದನ

    ದಾವಣಗೆರೆ: ಆಗ ತಾನೇ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ನೆಲಸಮ ಮಾಡಿದ ಆಘಾತಕಾರಿ ಘಟನೆಯೊಂದು ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶೇಖರಯ್ಯ ಎಂಬವರ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ. ಶೇಖರಯ್ಯ ಅವರು ತೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳು ಫಸಲಿಗೆ ಬಂದಿದ್ದವು. ಈ ಸಂತಸದಲ್ಲಿದ್ದ ರೈತನಿಗೆ ದುಷ್ಕರ್ಮಿಗಳ ಕೃತ್ಯದಿಂದ ಆಘಾತವಾಗಿದೆ.

    ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿ ತಂದು ಶೇಖರಯ್ಯ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಸಂಪೂರ್ಣ ನಾಶಮಾಡಿದ್ದಾರೆ. ಇದೀಗ ಕಿಡಿಗೇಡಿಗಳ ಅಟ್ಟಹಾಸದಿಂದ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಳೆದುಕೊಂಡ ರೈತನ ಅಕ್ರಂದನ ಮುಗಿಲು ಮುಟ್ಟಿದೆ.

    ಹಳೆಯ ದ್ವೇಷ ಇರೋ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.