Tag: nursing home

  • ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು

    ವಾಕಿಂಗ್ ಮಾಡುವಾಗ ಹೃದಯಾಘಾತ – ನರ್ಸಿಂಗ್ ಹೋಮ್ ಮಾಲೀಕ ಸಾವು

    ರಾಮನಗರ: ವಾಕಿಂಗ್ (Walking) ಮಾಡುವಾಗ ಹೃದಯಾಘಾತಕ್ಕೆ (Heart Attack) ನರ್ಸಿಂಗ್ ಹೋಮ್ (Nursing Home) ಮಾಲೀಕನೋರ್ವ ಬಲಿಯಾಗಿರುವ ಘಟನೆ ಕನಕಪುರ (Kanakapura) ನಗರದಲ್ಲಿ ನಡೆದಿದೆ.

    ಮಂಜುನಾಥ್ (50) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಕನಕಪುರದ ಗಣೇಶ್ ನರ್ಸಿಂಗ್ ಹೋಮ್ ಹಾಗೂ ಗಣೇಶ್ ಮೆಡಿಕಲ್ ಮಾಲೀಕ ಮಂಜುನಾಥ್, ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳುವ ವೇಳೆ ಕುಸಿದುಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಂಜುನಾಥ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

    ಕನಕಪುರ ತಾಲೂಕು ಗ್ರಾಹಕರ ವೇದಿಕೆ ಅಧ್ಯಕ್ಷ ಹಾಗೂ ಔಷಧಿ ಮಾರಾಟಗಾರರ ಸಂಘದ ಅಧ್ಯಕ್ಷರೂ ಆಗಿದ್ದ ಮಂಜುನಾಥ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

  • ರಷ್ಯಾ ನರ್ಸಿಂಗ್ ಹೋಂನಲ್ಲಿ ಅಗ್ನಿ ದುರಂತ – 20 ಮಂದಿ ದಾರುಣ ಸಾವು

    ರಷ್ಯಾ ನರ್ಸಿಂಗ್ ಹೋಂನಲ್ಲಿ ಅಗ್ನಿ ದುರಂತ – 20 ಮಂದಿ ದಾರುಣ ಸಾವು

    ಮಾಸ್ಕೊ: ಸೈಬೀರಿಯಾದ ಕೆಮೆರೊವೊ ನಗರದ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ (Nursing Home) ಸಂಭವಿಸಿದ ಅಗ್ನಿ ದುರಂತದಲ್ಲಿ (Fire Broke) 20 ಮಂದಿ ಮೃತಪಟ್ಟಿರುವುದಾಗಿ ರಷ್ಯಾದ ತುರ್ತು ಸಚಿವಾಲಯ (Russia Emergencies Ministry) ತಿಳಿಸಿದೆ.

    ಮಾಸ್ಕೊದಿಂದ (Moscow) ಪೂರ್ವಕ್ಕೆ 3 ಸಾವಿರ ಕಿಮೀ ದೂರದಲ್ಲಿರುವ ಕೆಮೆರೊವೊ ನಗರದಲ್ಲಿ ಎರಡು ಅಂತಸ್ತಿನ ನರ್ಸಿಂಗ್ ಹೋಂನಲ್ಲಿ ಶನಿವಾರ ಮುಂಜಾನೆಯೇ ಬೆಂಕಿ ಕಾಣಿಸಿಕೊಂಡಿತು. ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಇದನ್ನೂ ಓದಿ: ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಬೆಂಕಿ ಹೊತ್ತಿಕೊಂಡಾಗ ನರ್ಸಿಂಗ್ ಹೋಂನಲ್ಲಿ ಎಷ್ಟು ಜನರು ಇದ್ದರು ಎಂಬುದೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದೆ. ಕಾರ್ಯಾಚರಣೆ ಮುಂದುವರಿಸಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    Live Tv
    [brid partner=56869869 player=32851 video=960834 autoplay=true]

  • ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಅನುಮತಿ ಪಡೆಯದೇ ಉಚಿತ ಕಣ್ಣಿನ ತಪಾಸಣೆ – ಹಾಸನದ ಆಸ್ಪತ್ರೆಯ ಬಾಗಿಲು ಬಂದ್

    ಹಾಸನ: ಸರ್ಕಾರಿ ಯೋಜನೆಯ ಅನ್ವಯ ವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ನಗರ ಖಾಸಗಿ ಆಸ್ಪತ್ರೆ ಅಮಾನುಷವಾಗಿ ನಡೆಸಿಕೊಂಡಿದೆ.

    ನಗರದ ಬಿಎಂ ರಸ್ತೆಯಲ್ಲಿ ಇರುವ ವರ್ಧಮಾನ್ ಜೈನ್ ಹೆಸರಿನ ಆಸ್ಪತ್ರೆ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದ ನರ್ಸಿಂಗ್ ಹೋಂ ಈ ಅಚಾತುರ್ಯ ನಡೆಸಿ ಇದೀಗ ಸಿಕ್ಕಿಬಿದ್ದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಂಪ್ ನಡೆಸಿ ವಯೋವೃದ್ಧರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಯಾವುದೇ ಮಂಚ, ದಿಂಬು ಹೊದಿಕೆ ಇಲ್ಲದೆ ಅಮಾನುಷವಾಗಿ ನೋಡಿಕೊಳ್ಳಲಾಗಿದೆ.

    ಸಿಬ್ಬಂದಿ ನಡವಳಿಕೆಯಿಂದ ಅಸಮಧಾನಗೊಂಡ ರೋಗಿಯ ಕಡೆಯವರು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಂದು ವಿಚಾರಿಸಿದಾಗ ನರ್ಸಿಂಗ್ ಹೋಂ ಸ್ಥಳೀಯ ಆಡಳಿತದ ಅನುಮತಿ ಪಡೆಯದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಮಂಡ್ಯ ಜಿಲ್ಲೆಯ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಹಾಸನದಲ್ಲಿ ಕ್ಯಾಂಪ್‍ಗಳನ್ನು ನಡೆಸಿ ಈ ರೀತಿ ಯಾವುದೇ ಸೌಕರ್ಯ ಇಲ್ಲದೆ ವಯೋವೃದ್ಧರ ಶಸ್ತ್ರ ಚಿಕಿತ್ಸೆ ನಡೆಸುತಿದ್ದ ನರ್ಸಿಂಗ್ ಹೋಂಗೆ ಬಾಗಿಲು ಮುಚ್ಚಿಸಲಾಗಿದೆ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ರೋಗಿಗಳನ್ನು ಸದ್ಯ ಅಂಬುಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

  • ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    – ಆಸ್ಪತ್ರೆಯಲ್ಲಿದ್ದ ಕಂಪ್ಯೂಟರ್, ಕಿಟಕಿ ಗ್ಲಾಸ್ ಪುಡಿಪುಡಿ

    ರಾಮನಗರ: ಗಂಡು ಮಗುವಿಗೆ ಜನ್ಮ ನೀಡಿ ಅರ್ಧ ಗಂಟೆಯ ಬಳಿಕ ಬಾಣಂತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಮೃತ ರಶ್ಮಿ ಸಂಬಂಧಿಕರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ಆಸ್ಪತ್ರೆಗೆ ನುಗ್ಗಿ ಕಂಪ್ಯೂಟರ್, ಕಿಟಕಿ ಗ್ಲಾಸ್ ಗಳು, ಪೀಠೋಪಕರಣಗಳು ಧ್ವಂಸ ಮಾಡಿದ್ದಾರೆ. ರಶ್ಮಿ ಪೋಷಕರು ಸ್ಥಳಕ್ಕೆ ವೈದ್ಯರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಘಟನೆ ವಿವರ:
    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19)ಯನ್ನು ಹೆರಿಗೆಗೆಂದು ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ಆಸ್ಪತ್ರೆಗೆ ಡಿಎಚ್‍ಓ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲೇ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19) ಮೃತಪಟ್ಟ ಬಾಣಂತಿ. ಆಸ್ಪತ್ರೆಯ ವೈದ್ಯೆ ಡಾ.ಶೈಲಜಾ ಅವರ ಎಡವಟ್ಟಿನಿಂದಲೇ ರಶ್ಮಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಹೆರಿಗೆಗೆ ಎಂದು ರಶ್ಮಿಯನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.


    ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.