Tag: Nursery

  • ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ  – 34 ಮಂದಿಯನ್ನು ಹತ್ಯೆಗೈದ ಪಾಪಿ

    ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    – ವ್ಯಕ್ತಿಯಿಂದ ಮನಬಂದಂತೆ ಗುಂಡಿನ ದಾಳಿ

    ಬ್ಯಾಂಕಾಕ್‌: ಥಾಯ್ಲೆಂಡ್‌ನ(Thailand) ಮಕ್ಕಳ ಡೇ-ಕೇರ್ ಸೆಂಟರ್‌ಗೆ(Day Care Centre) ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿ 22 ಮಕ್ಕಳು ಸೇರಿದಂತೆ 34 ಮಂದಿಯನ್ನು ಹತ್ಯೆ ಮಾಡಿದ್ದಾನೆ.

    https://twitter.com/ThaiEnquirer/status/1577929950610731009?ref_src=twsrc%5Etfw%7Ctwcamp%5Etweetembed%7Ctwterm%5E1577930925178245120%7Ctwgr%5Ebf7f95e5934a1d6e9374e77b3b367ca6cf5bbb0a%7Ctwcon%5Es2_&ref_url=https%3A%2F%2Fwww.indiatoday.in%2Fworld%2Fstory%2Fthailand-mass-shooting-knife-attack-killed-children-2008919-2022-10-06

    ಈಶಾನ್ಯ ಪ್ರಾಂತ್ಯದ ನೊಂಗ್‌ಬುವಾ ಲ್ಯಾಂಫು ಪಟ್ಟಣದದಲ್ಲಿ ಈ ಶೂಟೌಟ್‌ ನಡೆದಿದೆ. ಸಾಮೂಹಿಕ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

    ದಾಳಿಕೋರ 34 ವರ್ಷದ ಮಾಜಿ ಪೊಲೀಸ್‌ ಅಧಿಕಾರಿಯಾಗಿದ್ದು, ಡೇ ಕೇರ್‌ ಕೇಂದ್ರದ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

    ಥಾಯ್ಲೆಂಡ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪವಾದರೂ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಬಂದೂಕು ಮಾಲೀಕತ್ವದ ಪ್ರಮಾಣವು ಅಧಿಕವಾಗಿದೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಇಲ್ಲಿ ಸಾಮಾನ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

    ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

    ದೋಹಾ: ಉಸಿರುಗಟ್ಟಿ ಶಾಲಾ ವಾಹನ (School Bus) ದಲ್ಲಿಯೇ 4 ವರ್ಷದ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಖಾಸಗಿ ನರ್ಸರಿ ಶಾಲೆಯನ್ನು ಮುಚ್ಚಲು ಆದೇಶ ನೀಡಲಾಗಿದೆ.

    ಮಿನ್ಸಾ ಮರಿಯಮ್ ಜಾಕೋಬ್ (4) ಮೃತ ದುರ್ದೈವಿ ಬಾಲಕಿ. ಈಕೆ ಕೇರಳ (Kerala) ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು. ಸೆಪ್ಟೆಂಬರ್ 11 ರಂದು ಮಿನ್ಸಾ ಹುಟ್ಟುಹಬ್ಬ (Birthday) ವಾಗಿದ್ದು, ಈ ದಿನವೇ ಆಕೆ ಕತಾರ್ ನ ಶಾಲಾ ಬಸ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಇದೀಗ ಕತಾರ್ ನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಈ ಆದೇಶ ಹೊರಡಿಸಿದೆ. ಪ್ರಾಥಮಿಕ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    ಏನಿದು ಘಟನೆ?: ವಕ್ರಾದ ಶಿಶುವಿಹಾರದಲ್ಲಿ ಓದುತ್ತಿದ್ದ ಮಿನ್ಸಾ, ಅದೇ ಶಾಲೆಯ ಬಸ್‍ನಲ್ಲಿಯೇ ಬಂಧಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಈಕೆ ಭಾನುವಾರ ಬೆಳಗ್ಗೆ ತನ್ನ ಶಾಲಾ ಬಸ್‍ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ನಿದ್ದೆ ಮಾಡಿದ್ದಾಳೆ. ಆದರೆ ಆಕೆ ನಿದ್ದೆ ಮಾಡಿದ್ದನ್ನು ಬಸ್ (Bus) ಸಿಬ್ಬಂದಿ ಯಾರೂ ಗಮನಿಸಿರಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ, ಶಾಲಾ ವಾಹನವನ್ನು ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ಮೂರುವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಬಸ್‌ ಚಾಲಕನ ಮನೆ ಧ್ವಂಸ

    ಮಧ್ಯಾಹ್ನ ತರಗತಿಗಳು ಮುಗಿದ ನಂತರ ಡ್ರೈವರ್ ಮತ್ತು ಕಂಡಕ್ಟರ್ ಮಕ್ಕಳನ್ನು ಅವರ ಮನೆಗೆ ಬಿಡಲು ಹಿಂದಿರುಗಿದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ವಕ್ರಾ ಆಸ್ಪತ್ರೆ (Hospital) ಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಲೆಯಲ್ಲಿ ಬಸ್ ಬಿಟ್ಟು ಡ್ರೈವರ್ ಹಾಗೂ ನಿರ್ವಾಹಕ ‌ ಡೋರ್‌, ವಿಂಡೋಸ್ ಕ್ಲೋಸ್ ಮಾಡಿದ್ದಾರೆ. ಇದರಿಂದ ನಿದ್ದೆಗೆ ಜಾರಿದ್ದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ.

    weather

    ಕತಾರ್ ನಾದ್ಯಂತ ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು ಎಂದು ಕತಾರ್ ಟ್ರಿಬ್ಯೂನ್ ವರದಿ ಮಾಡಿದೆ. ಇಂತಹ ವಾತಾವರಣದಲ್ಲಿ ಬಿಸಿಯಲ್ಲಿ ಬಾಲಕಿ 4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಡಿದ್ದಾಳೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಿಲ್ಲಾಧಿಕಾರಿಯಿಂದ 30 ಕೋಟಿ ರೂ. ಭ್ರಷ್ಟಾಚಾರ?

    ಜಿಲ್ಲಾಧಿಕಾರಿಯಿಂದ 30 ಕೋಟಿ ರೂ. ಭ್ರಷ್ಟಾಚಾರ?

    -ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿರುವ ವಕೀಲ

    ಹುಬ್ಬಳ್ಳಿ: ಪ್ರಸ್ತುತ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ.ಎ. ಮೇಘಣ್ಣವರ್ ಬಾಗಲಕೋಟೆಯ ಜಿಲ್ಲಾಧಿಕಾರಿಯಾಗಿದ್ದಾಗ ಸುಮಾರು 30 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.

    ಪಿ.ಎ. ಮೇಘಣ್ಣವರ್ ತಮ್ಮ ಅಧಿಕಾರಾವಧಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು 30 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ವಕೀಲ ವೈ.ಎನ್.ಹೆಗಡೆ ಆರೋಪಿಸಿದ್ದಾರೆ. ಹಾಗೆಯೆ ಮೇಘಣ್ಣವರ್ ವಿರುದ್ದ ಡಿ.10ಕ್ಕೆ ಲೋಕಾಯುಕ್ತರಿಗೆ ದೂರು ನೀಡುವದರ ಜೊತೆಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಯುವಶಕ್ತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹಾಗೂ ವಕೀಲರಾಗಿ ವೈ.ಎನ್.ಹೆಗಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. 17/11/2015 ರಿಂದ 26/03/2018 ರವರಗೆ ಪಿ.ಎ ಮೆಘಣ್ಣವರ್ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಆಗ ಅಂಗನವಾಡಿ ಅಹಾರ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಭಷ್ಟಾಚಾರದಲ್ಲಿ ಮೇಘಣ್ಣವರ್ ಸೇರಿದಂತೆ ಹಲವಾರು ಆಧಿಕಾರಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಜಿಲ್ಲೆಯಲ್ಲಿದ್ದ ಅಂಗನವಾಡಿಗಳಿಗೆಂದು ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಅಧಿಕ ಬೆಲೆ ನೀಡಿ ತೊಗರೆ ಬೇಳೆ, ಹೆಸರು ಕಾಳು ಸೇರಿದಂತೆ ಹಲವು ಸಾಮಾಗ್ರಿಗಳನ್ನು ಖರೀದಿ ಮಾಡಿ ಸರ್ಕಾರಕ್ಕೆ ಮೇಘಣ್ಣವರ್ ಮೋಸ ಮಾಡಿದ್ದಾರೆ. ತೊಗರಿ ಬೇಳೆ ಕ್ವಿಂಟಾಲಿಗೆ 5,250 ಇದ್ದಾಗ 17,000, ಶೇಂಗಾ 4,220 ಕ್ವಿಂಟಾಲಿಗೆ ಇದ್ದಾಗ 12,000, ಹೆಸರುಕಾಳು 5,220 ಕ್ವಿಂಟಾಲಿಗೆ ಇದ್ದಾಗ 10,500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಸತತ ಮೂರು ವರ್ಷಗಳು ಇದೆ ದರದಲ್ಲಿ ಖರೀದಿ ಮಾಡಿದ್ದು, 6 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುವ ನಿಯಮವನ್ನು ಪಾಲನೆ ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 2,116 ಅಂಗನವಾಡಿಗಳಿಗೆ. ಎಲ್ಲಾ ಅಂಗನವಾಡಿಗಳಿಗೂ ಇದೇ ಬೆಲೆಯಲ್ಲಿ ಸಾಮಾಗ್ರಿ ಖರೀದಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಅಂತಾ ಹೇಳಿದರು.

    ಅಷ್ಟೆ ಅಲ್ಲದೆ ಮೊದಲೇ ಅಪೌಷ್ಟಿಕತೆಯಿಂದ ಬಳುತ್ತಿರುವ ಬಾಗಲಕೋಟೆಯ ಮಕ್ಕಳು ಮತ್ತು ಗರ್ಭಿಣಿಯರಿಗೆ ಮೋಸ ಮಾಡಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಮೂವತ್ತು ಕೋಟಿ ಹಣ ನುಂಗಿ ನೀರು ಕುಡಿದಿದ್ದಾರೆ. ಆಯುಕ್ತರ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಮೇಘಣ್ಣವರ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv