Tag: nupur

  • ಆಮೀರ್ ಖಾನ್ ಮಗಳ ಆರತಕ್ಷತೆಯಲ್ಲಿ ಬಾಲಿವುಡ್ ಕಲಾವಿದರ ಸಮಾಗಮ

    ಆಮೀರ್ ಖಾನ್ ಮಗಳ ಆರತಕ್ಷತೆಯಲ್ಲಿ ಬಾಲಿವುಡ್ ಕಲಾವಿದರ ಸಮಾಗಮ

    ಬಾಲಿವುಡ್ ಸ್ಟಾರ್ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan)- ನೂಪುರ್ ಶಿಖರೆ ಜೋಡಿ ಜ.10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮುಂಬೈನ ಪ್ರತಿಷ್ಟಿತ ರೆಸಾರ್ಟ್‌ವೊಂದರಲ್ಲಿ ಅದ್ದೂರಿ ಆರತಕ್ಷತೆ (Reception) ಆಯೋಜಿಸಿದ್ದಾರೆ. ಈ ಸಮಾರಂಭಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್ (Sharukh Khan) ದಂಪತಿ ಸೇರಿದಂತೆ ಅನೇಕರು ಭಾಗಿದ್ದಾರೆ.

    ಮುದ್ದಿನ ಮಗಳು ಇರಾ ಖಾನ್- ನೂಪುರ್ ಮದುವೆಯ ಬಳಿಕ ಆರತಕ್ಷತೆ ಗ್ರ್ಯಾಂಡ್ ಆಗಿ ಹಮ್ಮಿಕೊಂಡಿದ್ದಾರೆ. ನೂಪುರ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ಇರಾ ಕೆಂಪು ಲೆಹೆಂಗಾ ಧರಿಸಿ ಮಿಂಚಿದ್ದಾರೆ.‌ ಇದನ್ನೂ ಓದಿ:ರಾಜವರ್ಧನ್ ನಟನೆಯ ‘ಗಜರಾಮ’ ಚಿತ್ರದ ಟೀಸರ್ ರಿಲೀಸ್

    ಇರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಗೌರಿ- ಶಾರುಖ್ ಖಾನ್ ಜೋಡಿ, ರಣ್‌ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ತೆಲುಗು ನಟ ನಾಗಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ ದೇಶ್‌ಮುಖ್, ಅದಿತಿ- ಸಿದ್ಧಾರ್ಥ್ ಜೋಡಿ, ಅನಿಲ್ ಕಪೂರ್, ಹೇಮಾ ಮಾಲಿನಿ, ರೇಖಾ ಸೇರಿದಂತೆ ಅನೇಕರು ಭಾಗಿಯಾಗುವ ಮೂಲಕ ನವಜೋಡಿಗೆ ಶುಭಕೋರಿದ್ದಾರೆ.

    ಇರಾ ಖಾನ್- ನೂಪುರ್ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ಕಡೆ ಕುಟುಂಬದವರನ್ನು ಒಪ್ಪಿಸಿ ಗುರುಹಿರಿಯರ ಸಮ್ಮುಖದಲ್ಲಿ ಜ.10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ಆಮೀರ್‌ ಖಾನ್‌ ಪುತ್ರಿ

    ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ಆಮೀರ್‌ ಖಾನ್‌ ಪುತ್ರಿ

    ಬಾಲಿವುಡ್(Bollywood) ಸೂಪರ್ ಸ್ಟಾರ್ ಆಮೀರ್ ಖಾನ್(Ameer Khan) ಪುತ್ರಿ ಇರಾ ಖಾನ್ ಎಂಗೇಜ್‌ಮೆಂಟ್‌ ಇಂದು ಅದ್ದೂರಿಯಾಗಿದೆ ನಡೆದಿದೆ. ತನ್ನ ಬಹುಕಾಲದ ಗೆಳಯ ನುಪೂರ್ ಜೊತೆ ಇರಾ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ಆಮೀರ್ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆಮೀರ್ ಖಾನ್ ಪುತ್ರಿ ಇರಾ ಖಾನ್(Ira Khan) ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ. ಇತ್ತೀಚೆಗೆ ನುಪೂರ್ ರಿಂಗ್ ಹಾಕಿ, ಲಿಪ್ ಕಿಸ್ ಮಾಡಿ ಇರಾಗೆ ಬಹಿರಂಗವಾಗಿ ಪ್ರಪೋಸ್ ಮಾಡಿದ್ದರು. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್(Engagement) ಆಗಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ

     

    View this post on Instagram

     

    A post shared by yogen shah (@yogenshah_s)

    ಸದ್ಯ ಆಮೀರ್ ಖಾನ್ ಮಗಳ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಗಳ ಎಂಗೇಜ್‌ಮೆಂಟ್‌ನಲ್ಲಿ ಸಖತ್ ಆಗಿ ಆಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]