Tag: Nugge soppina Palya

  • ವಿಟಮಿನ್ ಪೂರೈಸುವ ನುಗ್ಗೆ ಸೊಪ್ಪಿನ ಪಲ್ಯ ಮಾಡುವ ವಿಧಾನ

    ವಿಟಮಿನ್ ಪೂರೈಸುವ ನುಗ್ಗೆ ಸೊಪ್ಪಿನ ಪಲ್ಯ ಮಾಡುವ ವಿಧಾನ

    ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಸೊಗಡಿನ ರುಚಿಯಾದ ಅಡುಗೆ ಮಾಡುವುದೇ ಕಡಿಮೆಯಾಗಿದೆ. ಅದರಲ್ಲೂ ಆರೋಗ್ಯಕ್ಕೆ ಒಳ್ಳೆಯದಾದ ಸೊಪ್ಪು-ತರಕಾರಿಯ ಅಡುಗೆಗಳು ಅತೀ ವಿರಳವಾಗಿದೆ. ಹಾಗಾಗಿ ಹಳ್ಳಿ ಸೊಗಡಿನ ನುಗ್ಗೆ ಸುಪ್ಪಿನ ಪಲ್ಯ ಮಾಡುವ ವಿಧಾನ ಇಲ್ಲಿದೆ.

    ನುಗ್ಗೆ ಸೊಪ್ಪು ಔಷಧಿ ಗುಣಗಳನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ನನ್ನು ಪೂರೈಸುತ್ತದೆ. ಆದ್ದರಿಂದ ಈ ಸೊಪ್ಪನ್ನು ವಾರಕ್ಕೆ ಒಂದು ಬಾರಿಯಾದರೂ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

    ಬೇಗಾಗುವ ಸಾಮಾಗ್ರಿಗಳು
    1. ನುಗ್ಗೆ ಸೊಪ್ಪು – 2 ಬೌಲ್(ದೊಡ್ಡದು)
    2. ತೊಗರಿ ಬೇಳೆ – ಅರ್ಧ ಬೌಲ್
    3. ಈರುಳ್ಳಿ – 2
    4. ತೆಂಗಿನ ತುರಿ – 3/4 ಕಪ್
    5. ಬೆಳ್ಳುಳ್ಳಿ – 3 ರಿಂದ 4
    6. ಉಪ್ಪು – ರುಚಿಗೆ ತಕ್ಕಷ್ಟು
    7. ಎಣ್ಣೆ – 3 ರಿಂದ 4 ಚಮಚ
    8. ಸಾಸಿವೆ – ಅರ್ಧ ಚಮಚ
    9. ಒಣಮೆಣಸಿನ ಕಾಯಿ – 2

    ಮಾಡುವ ವಿಧಾನ
    * ಮೊದಲಿಗೆ ನುಗ್ಗೆ ಸೊಪ್ಪನ್ನು ಬಿಡಿಸಿಟ್ಟಿಕೊಳ್ಳಬೇಕು. ಆದಷ್ಟು ಕಡ್ಡಿಯಿಂದ ಎಲೆಗಳನ್ನು ಬೇರ್ಪಡಿಸಿಕೊಳ್ಳಿ.
    * ಬಳಿಕ ಸೊಪ್ಪನ್ನು ತೊಳೆದು, ಒಂದು ದೊಡ್ಡ ಬೌಲಿಗೆ ಅರ್ಧ ಬೌಲ್ ತೊಗರಿಬೇಳೆ ಮತ್ತು 3 ಲೋಟ ನೀರು ಹಾಕಿ ಬೇಯಿಸಿ.
    * ಬೇಳೆ ಒಂದು ಕುದಿ ಬಂದಾಗ ಬಿಡಿಸಿಕೊಂಡಿದ್ದ ಬೆಳ್ಳುಳ್ಳಿಯನ್ನು ಹಾಕಿರಿ.
    * ಬೇಳೆ ಸಂಪೂರ್ಣವಾಗಿ ಬೆಂದಮೇಲೆ ನುಗ್ಗೆ ಸೊಪ್ಪು ಹಾಕಿ(ಬೇಯಿಸುವಾಗ ತಟ್ಟೆ ಮುಚ್ಚಬಾರದು)
    * ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ನಿಮಿಷ ಬೇಯಿಸಿರಿ.(ನೀರು ಕಡಿಮೆಯಾದರೆ ಬಿಸಿ ನೀರು ಹಾಕಿ)
    * ಸೊಪ್ಪು ಬೆಂದ ಬಳಿಕ ನೀರು ಮತ್ತು ಸೊಪ್ಪು ಎರಡನ್ನೂ ಬೇರೆ ಬೇರೆಯಾಗುವಂತೆ ಸೋಸಿಕೊಳ್ಳಿ.

    ಒಗ್ಗರಣೆಗೆ
    * ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಒಣ ಮೆಣಸಿನ ಕಾಯಿ, ಸಣ್ಣಗೆ ಕತ್ತರಿಸಿದ್ದ ಈರುಳ್ಳಿ ಹಾಕಿ ಫ್ರೈ ಮಾಡಿ.
    * ಈರುಳ್ಳಿ ಫ್ರೈ ಆದ ಮೇಲೆ, ತೆಂಗಿನ ತುರಿ, ಸೋಸಿಕೊಂಡಿದ್ದ  ಸೊಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ರುಚಿರುಚಿಯಾದ ನುಗ್ಗೆ ಸೊಪ್ಪಿನ ಪಲ್ಯ ಸವಿಯಲು ಸಿದ್ಧ.

    ಸೊಪ್ಪನ್ನು ಸೋಸಿಕೊಂಡಾಗ ಉಳಿದ ನೀರನ್ನು, ರಸಂ ಅಥವಾ ಉಪ್ಸಾರನ್ನು ಮಾಡಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv