Tag: Nude Scene

  • ‘ಪಿಕೆ’ ಚಿತ್ರೀಕರಣದಲ್ಲಿ ನಿಜವಾಗಿಯೂ ಬೆತ್ತಲೆಯಾಗಿದ್ದೆ: ನಟ ಆಮೀರ್ ಖಾನ್

    ‘ಪಿಕೆ’ ಚಿತ್ರೀಕರಣದಲ್ಲಿ ನಿಜವಾಗಿಯೂ ಬೆತ್ತಲೆಯಾಗಿದ್ದೆ: ನಟ ಆಮೀರ್ ಖಾನ್

    ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಪಿಕೆ ಸಿನಿಮಾದ ದೃಶ್ಯವೊಂದರ ಬಗ್ಗೆ ಮಾತನಾಡಿದ್ದಾರೆ ನಟ ಆಮೀರ್ ಖಾನ್. ಕಾಮಿಡಿ ವಿತ್ ಕಪಿಲ್ ಶೋಗೆ ಬಂದಿದ್ದ ಅವರು, ಪಿಕೆ ಸಿನಿಮಾದ ದೃಶ್ಯವೊಂದರಲ್ಲಿ ರಿಯಲ್ ಆಗಿ ಬೆತ್ತಲೆಯಾಗಿಯೇ ನಟಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಪಿಕೆ ಸಿನಿಮಾದಲ್ಲಿ ಖಾಸಗಿ ಅಂಗಾಂಗಕ್ಕೆ  ರೇಡಿಯೋ ಮುಚ್ಚಿಕೊಂಡು ಓಡುವ ದೃಶ್ಯವೊಂದಿದೆ. ಈ ದೃಶ್ಯದಲ್ಲಿ ತಾವು ಸಂಪೂರ್ಣ ಬೆತ್ತಲೆಯಾಗಿಯೇ ನಟಿಸಿದ್ದೆ. ಅದೊಂದು ರೀತಿಯಲ್ಲಿ ಮುಜಗರ ಕೂಡ ತಂದಿತ್ತು. ಮಾಡಲೇಬೇಕಾದ ಅನಿವಾರ್ಯ ಕೂಡ ಎದುರಾಗಿತ್ತು ಎಂದಿದ್ದಾರೆ ಆಮೀರ್.

    ಈ ಮೊದಲು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಶಾರ್ಟ್ಸ್ ಧರಿಸಿದ್ದರು. ಅದನ್ನು ಹಾಕಿಕೊಂಡು ಓಡಲು ಸಾಧ್ಯವಾಗಲಿಲ್ಲ. ಪದೇ ಪದೇ ಬಿಚ್ಚಿ ಬೀಳುತ್ತಿತ್ತು. ಹಾಗಾಗಿ ಶಾರ್ಟ್ಸ್ ಕಿತ್ತಾಕಿ, ನೈಜವಾಗಿಯೇ ಬೆತ್ತಲೆ ದೃಶ್ಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಲ್ಲ ವಿಷ್ಯದಲ್ಲಿ ನಾನು ಫರ್ಫೆಕ್ಟ್ ಎಂದಿದ್ದಾರೆ ಆಮೀರ್.

     

    ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆದಿದ್ದರಿಂದ ಜನರೂ ಇರಲಿಲ್ಲ. ಶೂಟಿಂಗ್ ಸ್ಪಾಟ್ ನಲ್ಲೂ ಕಡಿಮೆ ಸದಸ್ಯರು ಇದ್ದರು. ಆದರೂ, ಆತಂಕದಲ್ಲೇ ಆ ದೃಶ್ಯವನ್ನು ಮುಗಿಸಿದೆ ಎಂದು ಆಮೀರ್ ಹೇಳಿಕೊಂಡಿದ್ದಾರೆ.

  • ಆಂಡ್ರಿಯಾ ಜರೆಮಿಯ ಬೆತ್ತಲೆ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿಲ್ಲ: ನಿರ್ದೇಶಕ ಮಸ್ಕಿನ್ ಸ್ಪಷ್ಟನೆ

    ಆಂಡ್ರಿಯಾ ಜರೆಮಿಯ ಬೆತ್ತಲೆ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿಲ್ಲ: ನಿರ್ದೇಶಕ ಮಸ್ಕಿನ್ ಸ್ಪಷ್ಟನೆ

    ಮಿಳು ಸಿನಿಮಾ ರಂಗದಲ್ಲಿ ಹಾರರ್ ಚಿತ್ರಗಳಿಗೆ ಹೆಸರು ಮಾಡಿರುವ ನಿರ್ದೇಶಕ ಮಸ್ಕಿನ್ (Maskin), ಇದೀಗ ಮತ್ತೊಂದು ಸಿನಿಮಾ ಮಾಡಿದ್ದಾರೆ. 2014ರಲ್ಲಿ ಅವರದ್ದೇ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪಿಸಾಸು ಸಿನಿಮಾದ ಮುಂದುವರೆದ ಭಾಗವನ್ನು ಚಿತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾಗೆ ಸೆನ್ಸಾರ್ ಕೂಡ ಆಗಿದೆ. ಈ ಸಿನಿಮಾಗೆ ‘ಪಿಸಾಸು 2’ (Pisasu 2) ಎಂದು ಹೆಸರಿಡಲಾಗಿದೆ.

    ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಆಂಡ್ರಿಯಾ ಜರೆಮಿಯ (Andrea Jeremiah) ನಿರ್ವಹಿಸಿದ್ದಾರೆ. ಹಾಟ್ ಹಾಟ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಆಂಡ್ರಿಯಾ ಪಿಸಾಸು 2 ಸಿನಿಮಾದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 15 ನಿಮಿಷಗಳ ಕಾಲ ಬೆತ್ತಲೆ ದೃಶ್ಯವೊಂದಿದೆ (Nude Scene) ಎಂದು ಸುದ್ದಿಯಾಗಿದೆ. ಆ ದೃಶ್ಯವನ್ನು ಸೆನ್ಸಾರ್ (Censor) ಮಂಡಳಿ ಕಿತ್ತು ಹಾಕಿದೆ ಎಂದೂ ಹೇಳಲಾಗುತ್ತಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಮಸ್ಕಿನ್, ಸುದ್ದಿಯಾದಂತೆ ನನ್ನ ಸಿನಿಮಾದಲ್ಲಿ ಯಾವುದೇ ಅಶ್ಲೀಲ ದೃಶ್ಯವಿಲ್ಲ. ಆಂಡ್ರಿಯಾ ಅವರನ್ನು ಬೆತ್ತಲೆಯಾಗಿ ತೋರಿಸಿಲ್ಲ. ಶೃಂಗಾರ ಸೂಸುವಂತಹ ಕೆಲವು ದೃಶ್ಯಗಳು ಇವೆ. ಹಾಗಂತ ಸೆನ್ಸಾರ್ ಮಂಡಳಿಯವರು ಯಾವುದೇ ದೃಶ್ಯವನ್ನು ತೆಗೆಯುವಂತೆ ನನಗೆ ಸೂಚಿಸಿಲ್ಲ. ಒಂದು ಡೈಲಾಗ್ ಕೂಡ ಮ್ಯೂಟ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದರ ಜೊತೆಗೆ ಕೆಲವೇ ಕೆಲವು ದೃಶ್ಯಗಳಲ್ಲಿ ಆಂಡ್ರಿಯಾ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ ನಿಜ. ಅವರ ಅನುಮತಿಯನ್ನು ಪಡೆದುಕೊಂಡೇ ಆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮಸ್ಕಿನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]