Tag: nude photoshoot

  • ನಾನು ವಿವಾದಾತ್ಮಕ ಬೆತ್ತಲೆ ಫೋಟೋಶೂಟ್ ಅಪ್‌ಲೋಡ್ ಮಾಡಿಲ್ಲ: ರಣ್‌ವೀರ್‌ ಸಿಂಗ್

    ನಾನು ವಿವಾದಾತ್ಮಕ ಬೆತ್ತಲೆ ಫೋಟೋಶೂಟ್ ಅಪ್‌ಲೋಡ್ ಮಾಡಿಲ್ಲ: ರಣ್‌ವೀರ್‌ ಸಿಂಗ್

    ಬಾಲಿವುಡ್ ನಟ ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಬಳಿಕ ರಣ್‌ವೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ನಟ ರಣ್‌ವೀರ್ ಹಾಜರಾಗಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ನಂಬರ್ ಒನ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಪ್ರಕರಣ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ರಣ್‌ವೀರ್ ಬೆತ್ತಲೆ ಫೋಟೋಗೆ ಸಾಕಷ್ಟು ಜನ ಧ್ವನಿ ಎತ್ತಿದ್ದರು. ಆದರೆ ಬಾಲಿವುಡ್‌ನ ಸಾಕಷ್ಟು ಸ್ಟಾರ್ಸ್‌ ರಣ್‌ವೀರ್ ಸಿಂಗ್ ಪರ ನಿಂತು ಧ್ವನಿಗೂಡಿಸಿದ್ದರು.

    Ranveer Singh

    ನಗ್ನ ಫೋಟೋಶೂಟ್ ವಿವಾದದ ಬೆನ್ನಲ್ಲೇ ರಣ್‌ವೀರ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿತ್ತು. ಮುಂಬೈ ಎನ್.ಜಿ.ಓ ಸಂಸ್ಥೆಯೊಂದು ನಟ ದೂರು ದಾಖಲಿಸಿತ್ತು. ಇದೊಂದು ಮಹಿಳೆಯರಿಗೆ ಅವಮಾನ ಎಂದು ಪ್ರಕರಣ ದಾಖಲಾಗಿತ್ತು. ಇನ್ನು ಆಗಸ್ಟ್ 22ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಶೂಟಿಂಗ್ ನಿಮಿತ್ತ ರಣ್‌ವೀರ್ ಗೈರಾಗಿದ್ದರು. ಈಗ ಸೋಮವಾರ (ಆಗಸ್ಟ್ 29)ರಂದು ಮುಂಬೈ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ನಟ ಕಮಾಲ್ ಖಾನ್ ಗೆ 14 ದಿನಗಳ ನ್ಯಾಯಾಂಗ ಬಂಧನ: ಕಣ್ಣೀರಿಟ್ಟ ಖಾನ್

    ರಣ್‌ವೀರ್ ಸಿಂಗ್ ಮುಂಬೈ ಪೊಲೀಸ್ ಠಾಣೆಗೆ ಆಗಮನಿಸಿ, ಬೆತ್ತಲೆ ಫೋಟೋಶೂಟ್ ಕುರಿತು ಹೇಳಿಕೆ ನೀಡಿದ್ದಾರೆ. ನಾನು ವಿವಾದಾತ್ಮಕ ಫೋಟೋಶೂಟ್ ಅಪ್‌ಲೋಡ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಬೆತ್ತಲೆ ಫೋಟೋಶೂಟ್‌ನಿಂದ ನನಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ನಟ ಹೇಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್‌ಗೆ ಬೆಂಬಲಿಸಿದ ವಿದ್ಯಾ ಬಾಲನ್

    ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್‌ಗೆ ಬೆಂಬಲಿಸಿದ ವಿದ್ಯಾ ಬಾಲನ್

    ಬಾಲಿವುಡ್‌ನ ಸದ್ಯದ ಹಾಟ್ ಟಾಪಿಕ್ ಅಂದ್ರೆ ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್ ವಿಚಾರ. ಅಶ್ಲೀಲ ಫೋಟೋಗಳೊಂದಿಗೆ ಮಹಿಳೆಯರ ಭಾವನೆಗೆ ಧಕ್ಕೆ ಮಾಡಿದ್ದಕ್ಕಾಗಿ ರಣ್‌ವೀರ್ ಮೇಲೆ ಕೇಸ್ ಕೂಡ ದಾಖಲಾಗಿದೆ. ಇದೀಗ ರಣ್‌ವೀರ್ ಸಿಂಗ್ ಪರವಾಗಿ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ.

     

    View this post on Instagram

     

    A post shared by Ranveer Singh (@ranveersingh)

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಹೈಪ್ ಕ್ರಿಯೆಟ್ ಮಾಡಿದ್ದ ರಣ್‌ವೀರ್ ಸಿಂಗ್ ಇದೀಗ ತನ್ನ ನಗ್ನ ಫೋಟೋಶೂಟ್ ಮೂಲಕ ಬಿಟೌನ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಈ ಫೋಟೋಶೂಟ್ ಬಳಿಕ ಸಾಕಷ್ಟು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುವುದರ ಜತೆಗೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ. ಟ್ರೋಲ್ ಮತ್ತು ರಣ್‌ವೀರ್ ಮೇಲಿನ ಕೇಸ್ ಗಮನಿಸಿರುವ ವಿದ್ಯಾ ಬಾಲನ್, ರಣ್‌ವೀರ್ ಪರ ಖಡಕ್ ವಾರ್ನಿಂಗ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ರಣ್‌ವೀರ್ ಸಿಂಗ್‌ಗೆ ಜಾನ್ ಅಬ್ರಾಹಂ, ಪರಿಣಿತಿ ಚೋಪ್ರಾ, ಸಾಥ್ ನೀಡಿದ ಬಳಿಕ ಇದೀಗ ವಿದ್ಯಾ ಬಾಲನ್ ಮಾತನಾಡಿದ್ದಾರೆ. ಯಾರೊಬ್ಬರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ತಪ್ಪು, ನಿಮಗೆ ರಣ್‌ವೀರ್ ಫೋಟೋಶೂಟ್ ಇಷ್ಟವಾಗದಿದ್ದರೆ ಕಣ್ಣು ಮುಚ್ಚಿ ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ನಟನಿಗೆ ವಿದ್ಯಾ ಬಾಲನ್ ಸಾಥ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್

    53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್

    ಜನ್ನಿಫರ್ ಲೊಪೇಜ್ ತಮ್ಮ ನಟನೆ, ಗಾಯನದ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗಷ್ಟೇ ನಟಿ ಜನ್ನಿಫರ್ ನಾಲ್ಕನೇ ಮದುವೆಯಾಗುವ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದರು. ಈಗ ತಮ್ಮ ಬರ್ತಡೇ ದಿನ ಬೆತ್ತಲೆ ಫೋಟೋಶೂಟ್ ಶೇರ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.

     

    View this post on Instagram

     

    A post shared by Jennifer Lopez (@jlo)

    ತಮ್ಮ 53ನೇ ವಯಸ್ಸಿನಲ್ಲಿ ನಾಲ್ಕನೇ ವಿವಾಹ ಆಗುವ ಮೂಲಕ ವೈರಲ್ ಆಗಿದ್ದ ನಟಿ ಹಾಲಿವುಡ್ ಖ್ಯಾತ ನಟಿ ಜನ್ನಿಫರ್ ಲೊಪೇಜ್ ಇದೀಗ ಬೆತ್ತಲಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ನಟ ಬೆನ್ ಅಫ್ಲೆಕ್ ಜತೆ 4ನೇ ಮದುವೆಯಾದ ನಟಿ ಜನ್ನಿಫರ್ ನಿನ್ನೆ (ಜುಲೈ 24)ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ನೆಚ್ಚಿನ ನಟಿಗೆ ಫ್ಯಾನ್ಸ್ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದರು. ಆದರೆ ಜನ್ನಿಫರ್ ತನ್ನ ಹುಟ್ಟುಹಬ್ಬವನ್ನು ಬೆತ್ತಲಾಗುವ ಮೂಲಕ ವಿಭಿನ್ನವಾಗಿ ಆಚರಿಸಿ, ಬರ್ತಡೇಯನ್ನ ಸಂಭ್ರಮಿಸಿದ್ದಾರೆ. ಜನ್ನಿಫರ್ ನಗ್ನರಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

     

    View this post on Instagram

     

    A post shared by Jennifer Lopez (@jlo)

    ೫೩ನೇ ವರ್ಷಕ್ಕೆ ಕಾಲಿಟ್ಟರುವ ಜೆನ್ನಿಫರ್ ಲೊಪೇಜ್ ಬೆತ್ತಲೆ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿಯ ವಿಚಿತ್ರ ಬರ್ತಡೇ ಆಚರಣೆಗೆ ಫ್ಯಾನ್ಸ್ ದಂಗಾಗಿದ್ದಾರೆ. ವಿಡಿಯೋದಲ್ಲಿ ಜನ್ನಿಫರ್ ಮೊದಲು ಕಪ್ಪು ಬಟ್ಟೆ ಧರಿಸಿದ್ದರು. ಬಳಿಕ ಬಾಡಿ ಲೋಷನ್ ಹಚ್ಚುವ ನಟಿ ನಂತರ ಸಂಪೂರ್ಣ ಬೆತ್ತಲಾಗುತ್ತಾರೆ. ವಿವಿಧ ರೀತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಜನ್ನಿಫರ್ ಈ ವಿಡಿಯೊಗೆ ಅನೇಕರು ಹುಟ್ಟುಹಬ್ಬದ ವಿಶ್ ಮಾಡಿದ್ರೆ ಇನ್ನು ಅನೇಕರು ಸಖತ್ ಹಾಟ್, ೫೩ನೇ ವಯಸ್ಸಿನಲ್ಲೂ ಎಷ್ಟು ಬ್ಯೂಟಿಫುಲ್ ಆಗಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ತಮ್ಮ ಹುಟ್ಟುಹಬ್ಬದ ಬೆತ್ತಲೆ ಫೋಟೋಶೂಟ್ ಮೂಲಕ ಜನ್ನಿಫರ್ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]