Tag: nude photo

  • ನಟಿ ಜಯವಾಣಿ ಬೆತ್ತಲೆ ಫೋಟೋ: ದುರುಳರ ಹೆಡೆಮುರಿ ಕಟ್ಟಲು ಸಜ್ಜು

    ನಟಿ ಜಯವಾಣಿ ಬೆತ್ತಲೆ ಫೋಟೋ: ದುರುಳರ ಹೆಡೆಮುರಿ ಕಟ್ಟಲು ಸಜ್ಜು

    ಟಿ ಜಯವಾಣಿ (Jayavani) ಅವರ ಬೆತ್ತಲೇ ಫೋಟೋಗಳು ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದ್ದವು. ಜಯವಾಣಿ ಅವರ ಹೆಸರಿನಲ್ಲೇ ಇದ್ದ ಟ್ವಿಟರ್ (Twitter) ಖಾತೆಯಿಂದ ಅವು ಹಂಚಲ್ಪಟ್ಟಿದ್ದವು. ಆ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನಟಿ ಜಯವಾಣಿ ಅವುಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ, ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

    ತೆಲುಗಿನ (Telugu) ಖ್ಯಾತ ಪೋಷಕ ನಟಿಯಾಗಿರುವ (Actress) ಜಯವಾಣಿ, ವಿಕ್ರಮಾರ್ಕುಡು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟನೆಯಿಂದ ದೂರ ಉಳಿದರೂ, ಸಿನಿಮಾ ಸಂಬಂಧಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂವಿ ಕಲಾವಿದರ ಸಂಘದ ಕಾರ್ಯಕಾರಿಣಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಕೂಡ. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಇಂತಹ ನಟಿಯ ಹೆಸರಿನಲ್ಲೇ ಟ್ವಿಟರ್ ಖಾತೆ ಇದೆ. ಅದು ಬ್ಲೂಟಿಕ್ ಇರುವುದರಿಂದ ಜಯವಾಣಿ ಅವರೇ ಈ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆ ಖಾತೆಯಿಂದಲೇ ಅವರ ಬೆತ್ತಲೆ ಫೋಟೋಗಳು ಅಪ್ ಲೋಡ್ ಆಗಿದ್ದವು. ಸಾಕಷ್ಟು ಜನರು ಆ ಫೋಟೋಗಳ ಬಗ್ಗೆ ಮಾತಾಡೋಕೆ ಶುರು ಮಾಡಿದ್ದರು. ಇದರಿಂದಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದರು.

    ಈ ಕುರಿತು ಜಯವಾಣಿಯೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಟ್ವಿಟರ್ ಖಾತೆಯನ್ನು ಹೊಂದಿಲ್ಲ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಶುರು ಮಾಡಿದ್ದಾರೆ. ಜೊತೆಗೆ ಎಡಿಟ್ ಫೋಟೋಗಳನ್ನು ಅದರಲ್ಲಿ ಹಾಕಿ, ನನ್ನ ಹೆಸರಿಗೆ ಕಳಂಕ ತಂದಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವೆ’ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.

    ಬೆತ್ತಲೆ ಫೋಟೋಗಳು (Nude Photo) ತಮ್ಮದಲ್ಲ ಎಂದು ಹೇಳಿಕೊಂಡಿರುವ ಜಯವಾಣಿ, ಕೂಡಲೇ ಅಕೌಂಡ್ ಡಿಲಿಟ್ ಮಾಡದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಯಾರೂ ಆ ಫೋಟೋಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಬೆತ್ತಲೆ ಫೋಟೋ ಹಂಚಿಕೊಂಡ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಹಾಲೆ ಬೆರ್ಯೆ

    ಬೆತ್ತಲೆ ಫೋಟೋ ಹಂಚಿಕೊಂಡ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಹಾಲೆ ಬೆರ್ಯೆ

    ಹಾಲಿವುಡ್ (Hollywood) ಖ್ಯಾತ ನಟಿ, ಆಸ್ಕರ್ (Oscar) ಪ್ರಶಸ್ತಿ ವಿಜೇತೆ ಹಾಲೆ ಬೆರ್ಯೆ (Halle Berry), ‘ನನಗೇನನಿಸುತ್ತೋ ಅದನ್ನೇ ಮಾಡುತ್ತೇನೆ’ ಎಂದು ಬೆತ್ತಲೆ ಫೋಟೋವನ್ನು (Nude Photo) ಶೇರ್ ಮಾಡಿದ್ದಾರೆ. ಈ ಫೋಟೋಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಹೀಗೆ ಮಾಡುವುದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಬೋಲ್ಡ್ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಹಾಲೆ ಬೆರ್ಯೆ, ಜೇಮ್ಸ್ ಬಾಂಡ್ ಸರಣಿಯ ಡೈ ಅನದರ್ ಡೇ ಚಿತ್ರದಲ್ಲಿ ನಟಿಸಿದ್ದಾರೆ. ಕ್ಯಾಟ್ ವುಮನ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹಾಲೆ ನಟಿಸಿದ್ದಾರೆ. ಅತ್ಯುತ್ತಮ ನಟನೆಗಾಗಿ 2002ರಲ್ಲಿ ಆಸ್ಕರ್ ಪ್ರಶಸ್ತಿಯನ್ನೂ ಈ ನಟಿ ಪಡೆದುಕೊಂಡಿದ್ದಾರೆ.

    ಈ ಹಿಂದೆಯೂ ಹಾಲೆ ತಮ್ಮ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಾರಿಯೂ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು, ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿರುವ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.   ಅದಕ್ಕೆ ‘ಅಂದುಕೊಂಡಿದ್ದನ್ನು ಮಾಡುತ್ತೇನೆ’ ಎಂಬ ಕ್ಯಾಪ್ಷನ್ ಬೇರೆ ಕೊಟ್ಟಿದ್ದಾರೆ.

    ಈಗಲೂ ಹಾಲಿವುಡ್ ನಲ್ಲಿ ಉತ್ತಮ ಹೆಸರನ್ನು ಉಳಿಸಿಕೊಂಡಿರುವ ಮತ್ತು ದಿ ಮದರ್ ಶಿಪ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಈ ನಟಿ ಬೆತ್ತಲೆ ಫೋಟೋ ಹಂಚಿಕೊಂಡಿದ್ದು ಕೆಲವರ ಇಷ್ಟವಾಗಿಲ್ಲ. ಹಾಗಾಗಿ ಹಾಲೆಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  • ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸ್ವತಃ ಆ ಫೋಟೋವನ್ನು ಅವರು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಖ್ಯಾತ ನಟನೊಬ್ಬ ಹೀಗೆ ಬೆತ್ತಲೆ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು ಸ್ವತಃ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಬಾಲಿವುಡ್ (Bollywood) ಕೂಡ ಬೆರಗಿನಿಂದಲೇ ಈ ನಡೆಯನ್ನು ಸ್ವೀಕರಿಸಿತ್ತು. ಕೆಲವರಂತೂ ರಸವತ್ತಾಗಿಯೇ ಕಾಮೆಂಟ್ ಮಾಡಿದ್ದರು.

    ರಣವೀರ್ ಹಾದಿಯನ್ನೇ ಕೆಲವರು ತುಳಿದರು. ಹಿಂದಿ ಕಿರುತೆರೆ ನಟನೊಬ್ಬ ಬೆತ್ತಲೆ ಫೋಟೋ (Nude Photo) ಶೂಟ್ ಮಾಡಿಸಿಕೊಂಡ. ತೆಲುಗಿನಲ್ಲೂ ಇಂಥದ್ದೊಂದು ಘಟನೆ ನಡೆಯಿತು. ಇದು ವಿವಾದಕ್ಕೂ ಕಾರಣವಾಯಿತು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಕಾರಣ ಕೊಟ್ಟು ಎನ್.ಜಿ.ಓ ಸಂಸ್ಥೆಯು ಮುಂಬೈನ (Mumbai) ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ:ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

    ರಣವೀರ್ ಸಿಂಗ್ ಮೇಲೆ ದೂರು ದಾಖಲಾದ ನಂತರ ಪೊಲೀಸ್ (Police) ಠಾಣೆಗೆ ಬಂದು ಹೇಳಿಕೆ ನೀಡುವಂತೆ ಕಳೆದ ತಿಂಗಳು ನೋಟಿಸ್ ಕಳುಹಿಸಲಾಗಿತ್ತು. ತಾವು ಊರಲ್ಲಿ ಇರದೇ ಇರುವ ಕಾರಣಕ್ಕಾಗಿ ಹಾಜರಾಗಲು ಆಗುತ್ತಿಲ್ಲ. ಮುಂಬೈಗೆ ಬಂದ ತಕ್ಷಣವೇ ಹಾಜರಾಗುವುದಾಗಿ ತಿಳಿಸಿದ್ದಾರೆ. ಹಾಗಾಗಿ ಆಗಸ್ಟ್ 29 ರಂದು ಬೆಳಗ್ಗೆ 7.30ಕ್ಕೆ ಪೊಲೀಸ್ ಠಾಣೆಗೆ ಅವರು ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಎರಡು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

    ಈ ವೇಳೆ ತನಿಖಾಧಿಕಾರಿಯ ಮುಂದೆ ಬೆತ್ತಲಾಗಿರುವ ಫೋಟೋ ನನ್ನದಲ್ಲ ಎಂದು ರಣವೀರ್ ಸಿಂಗ್ ತಿಳಿಸಿದ್ದಾರಂತೆ. ಗುಪ್ತಾಂಗ ಕಾಣುವ ರೀತಿಯಲ್ಲಿ ವೈರಲ್ (Viral) ಆಗಿರುವ ಆ ಫೋಟೋ ನನ್ನದಲ್ಲ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ. ಅದನ್ನು ವೈರಲ್ ಮಾಡಿದೆ. ಆ ಫೋಟೋದಲ್ಲಿ ಇರುವುದು ನಾನಲ್ಲ ಎಂದು ಹೇಳಿಕೆ ನೀಡಿದ್ದಾರಂತೆ. ಸದ್ಯ ಹೇಳಿಕೆ ಪಡೆದುಕೊಂಡು ಮುಂದಿನ ವಿಚಾರಣೆ ಕೂಡ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಣವೀರ್ ಸಿಂಗ್ ಬೆತ್ತಲೆ ಫೋಟೋ : ಮಹಿಳೆಯರ ಫೋಟೋ ಒಪ್ಪುತ್ತೀರಿ ಎಂದ ವರ್ಮಾ

    ರಣವೀರ್ ಸಿಂಗ್ ಬೆತ್ತಲೆ ಫೋಟೋ : ಮಹಿಳೆಯರ ಫೋಟೋ ಒಪ್ಪುತ್ತೀರಿ ಎಂದ ವರ್ಮಾ

    ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ವಿವಾದ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆಯುತ್ತಿದೆ. ಈಗಾಗಲೇ ಅವರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಎರಡು ಕಡೆ ದೂರು ನೀಡಲಾಗಿದೆ. ಕೆಲವರು ಪರ,  ಇನ್ನೂ ಕೆಲವರು ವಿರೋಧದ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇಂತಹ ವಿವಾದಾತ್ಮಕ ವಿಷಯಗಳಿಗೆ ಸದಾ ಪ್ರತಿಕ್ರಿಯೆ ನೀಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಫೋಟೋ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

    ರಣವೀರ್ ಸಿಂಗ್ ಬೆತ್ತಲೆ ಫೋಟೋ ಬಗ್ಗೆ ಕಾಮೆಂಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಹುಡುಗರು ಬೆತ್ತಲೆಯಾದರೆ ಅದನ್ನು ವಿರೋಧಿಸುತ್ತೀರಿ. ಮಹಿಳೆಯರ ಬೆತ್ತಲೆ ಫೋಟೋಗಳು ಇವೆಯಲ್ಲ, ಅದಕ್ಯಾಕೆ ವಿರೋಧವಿಲ್ಲ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ಕೆಲವರನ್ನು ಕೆರಳಿಸಿದೆ. ನೀವು ಅದೇ ರೀತಿಯ ಸಿನಿಮಾಗಳನ್ನು ಮಾಡುತ್ತೀರಿ. ಹಾಗಾಗಿ ನಿಮಗೆ ಹಾಗೆ ಅನಿಸುತ್ತದೆ ಎಂದು ಕೆಲವರು ವರ್ಮಾಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

    ಕಳೆದ ವಾರದಿಂದ ರಣವೀರ್ ಸಿಂಗ್ ಈ ಫೋಟೋ ಹಾಟ್ ಚರ್ಚೆಗೆ ಕಾರಣವಾಗಿದೆ. ಇವರನ್ನೇ ಮಾದರಿಯಾಗಿಟ್ಟುಕೊಂಡು ಕೆಲವರು ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಕೂಡ ತಮ್ಮ ಪತ್ನಿಯಿಂದಲೇ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಉರ್ಫಿ ಜಾವೇದ್ ಸೇರಿದಂತೆ ಹಲವರು ಈ ರೀತಿಯಲ್ಲೇ ಫೋಟೋ ಶೂಟ್ ಮಾಡಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ವೈರಲ್ ಆಗುತ್ತಿದ್ದಂತೆಯೇ ಹಲವು ನಟರು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಮೊನ್ನೆಯಷ್ಟೇ ಹಿಂದಿಯ ಕಿರುತೆರೆ ನಟನೊಬ್ಬ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ, ನಂತರ ರಣವೀರ್ ಗೆ ಚಾಲೇಂಜ್ ಅನ್ನುವಂತೆ ನಟಿ ಉರ್ಫಿ ಜಾವೇದ್ ಕೂಡ ಅದೇ ದಾರಿ ಹಿಡಿದಿದ್ದರು. ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಸೆರೆ ಹಿಡಿದಿರುವುದು ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಎನ್ನುವುದು ವಿಶೇಷ.

    ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ 2021ರಲ್ಲಿ ಮದುವೆಯಾದವರು. ಅದಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಜೊತೆ ಮದುವೆಯಾಗಿದ್ದರು. ಈ ಇಬ್ಬರೂ ಡಿವೋರ್ಸ್ ಪಡೆದುಕೊಂಡ ನಂತರ ವಿಷ್ಣು ವಿಶಾಲ್ ಜೊತೆ ಜ್ವಾಲಾ ಮದುವೆಯಾಗಿದ್ದಾರೆ. ಇದೀಗ ಗಂಡನ ಬೆತ್ತಲೆ ಫೋಟೋವನ್ನು ತಗೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ ಜ್ವಾಲಾ.

    ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷ್ಣು ವಿಶಾಲ್, ಈ ಫೋಟೋವನ್ನು ಸೆರೆ ಹಿಡಿದಿರುವುದು ತಮ್ಮ ಪತ್ನಿ ಜ್ವಾಲಾ ಗುಟ್ಟಾ ಎನ್ನುವುದನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಈ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹೆಸರಾಂತ ತಾರೆಯರು ಯಾಕೆ ಹೀಗೆ ಹುಚ್ಚಾಟ ಮಾಡುತ್ತಾರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದರಿಂದ ಆಗುವ ಲಾಭ ಏನು ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಬಾಲಿವುಡ್ ಖ್ಯಾತ ನಟ, ಕರ್ನಾಟಕದ ಅಳಿಯ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿಗೆ ಕಾರಣವಾಗಿದ್ದರು. ಸದಾ ಮೈ ತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ರಣವೀರ್, ಇದ್ದಕ್ಕಿದ್ದಂತೆಯೇ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡು ಕುತೂಹಲಕ್ಕೂ ಕಾರಣವಾಗಿದ್ದರು. ಈ ಕಾರಣಕ್ಕಾಗಿ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಸಮಾಜ ಸ್ವಾಸ್ತ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಕ್ರಮ ತಗೆದುಕೊಳ್ಳುವ ಮೂಲಕ ನಟರಿಗೆ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಅದು ಮನವಿ ಮಾಡಿದೆ. ಅಲ್ಲದೇ, ರಣವೀರ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ರಣವೀರ್ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಕೂಡ ರಣವೀರ್ ಸಿಂಗ್ ಈ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವತಃ ಪತ್ನಿ ದೀಪಿಕಾ ಪಡುಕೋಣೆ ಕೂಡ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬೆತ್ತಲೆಯಾದ ವಿಜಯ್ ದೇವರಕೊಂಡಗೆ ಬಟ್ಟೆ ತೊಡಿಸಿ ಟ್ರೋಲ್ :  ಮುಂದುವರೆದ ಚೇಷ್ಟೆ

    ಬೆತ್ತಲೆಯಾದ ವಿಜಯ್ ದೇವರಕೊಂಡಗೆ ಬಟ್ಟೆ ತೊಡಿಸಿ ಟ್ರೋಲ್ : ಮುಂದುವರೆದ ಚೇಷ್ಟೆ

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಲೈಗರ್ ಸಿನಿಮಾಗಾಗಿ ಬೆತ್ತಲೆಯಾಗಿದ್ದಾರೆ. ಆ ಫೋಟೋವನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ವೈರಲ್ ಕೂಡ ಆಗಿತ್ತು. ಮಾನಮುಚ್ಚಿಕೊಳ್ಳಲು ವಿಜಯ್ ಕೇವಲ ಹೂಗುಚ್ಚವನ್ನು ಬಳಸಿದ್ದರಿಂದ ಅಭಿಮಾನಿಗಳು ಫೂರ್ಣ ಬಟ್ಟೆ ತೊಡಗಿಸಿದ್ದಾರೆ. ಪೂರ್ಣಬಟ್ಟೆ ತೊಡಿಸಿದ ಫೋಟೋಗಳನ್ನು ವಿಜಯ್ ದೇವರಕೊಂಡಾಗೆ ಟ್ಯಾಗ್ ಮಾಡಿದ್ದಾರೆ.

    ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರ ಮಾಡಿದ್ದು, ಈ ಪಾತ್ರಕ್ಕಾಗಿ ಸಖತ್ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಿನಿಮಾದ ಈ ಪೋಸ್ಟರ್ ಮೂಲಕ ಈ ಚಿತ್ರಕ್ಕಾಗಿ ಅವರು ಯಾವ ಪ್ರಮಾಣದಲ್ಲಿ ದೇಹ ಹುರಿಗೊಳಿಸಿಕೊಂಡಿದ್ದಾರೆ ಎಂದು ತೋರಿಸುವ ಉದ್ದೇಶವಿತ್ತಂತೆ. ಆದರೆ, ಅದು ಉಲ್ಟಾ ಆದಂತೆ ಕಾಣುತ್ತಿದೆ. ಅಲ್ಲದೇ, ಪೂರ್ಣ ಬಟ್ಟೆಯಲ್ಲೇ ವಿಜಯ್ ಚೆನ್ನಾಗಿ ಕಾಣುತ್ತಾರೆ ಎಂದಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ಈ ಸಿನಿಮಾದ ಪೋಸ್ಟರ್ ಗೆ ಅನನ್ಯ ಪಾಂಡೆ, ಅನುಷ್ಕಾ ಶೆಟ್ಟಿ, ಕರಣ್ ಜೋಹಾರ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದರು. ಅದರಲ್ಲೂ ಅನನ್ಯ ಭಾರತದ ತಾಪಮಾನವೇ ಹೆಚ್ಚಾಗಿದೆ ಎಂದು ವಿಜಯ್ ದೇವರಕೊಂಡ ಹಾಟ್ ಲುಕ್ ಗೆ ಕಾಮೆಂಟ್ ಮಾಡಿದ್ದರು. ಅನನ್ಯ ಅವರ ಈ ಕಾಮೆಂಟ್ ಕೂಡ ಫೋಟೋದಷ್ಟೇ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬೆತ್ತಲಾದ ‘ಲೈಗರ್’ ವಿಜಯ್ ದೇವರಕೊಂಡ : ಹೂವಿನಿಂದ ಮಾನಮುಚ್ಚಿಕೊಂಡ ನಟ

    ಬೆತ್ತಲಾದ ‘ಲೈಗರ್’ ವಿಜಯ್ ದೇವರಕೊಂಡ : ಹೂವಿನಿಂದ ಮಾನಮುಚ್ಚಿಕೊಂಡ ನಟ

    ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದ ಫೋಟೋವೊಂದನ್ನು ಸ್ವತಃ ವಿಜಯ್ ದೇವರಕೊಂಡ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಫೋಟೋ ಕುರಿತು ಅನೇಕರು ಕಾಮೆಂಟ್ ಮಾಡಿದ್ದಾರೆ. ಮಾನಮುಚ್ಚಿಕೊಳ್ಳಲು ವಿಜಯ್ ಹೂವೊಂದನ್ನು ಬಳಸಿಕೊಂಡಿದ್ದು, ಉಳಿದಂತೆ ಅವರು ಬೆತ್ತಲಾಗಿ ನಿಂತಿದ್ದಾರೆ. ಈ ಫೋಟೋ ಇದೀಗ ಅಭಿಮಾನಿಗಳಲ್ಲಿ ಹಲ್ ಚಲ್ ಎಬ್ಬಿಸಿದೆ.

    ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ್ದ ಸಿನಿಮಾವೊಂದರಲ್ಲೂ ಅವರು ಅನೇಕ ದೃಶ್ಯಗಳಲ್ಲಿ ಅರೆಬೆತ್ತಲೆಯಾಗಿ ನಟಿಸಿದ್ದರು. ಇದೀಗ ಲೈಗರ್ ಗಾಗಿಯೂ ಅವರು ಬೆತ್ತಲೆಯಾಗಿದ್ದಾರೆ. ಹಾಗಾಗಿ ವಿಜಯ್ ಅಭಿಮಾನಿಗಳು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ. ಖಾಸಗಿ ಜಾಗಕ್ಕೆ ಕನಿಷ್ಠ ಹೂವನ್ನಾದರೂ ಇಟ್ಟುಕೊಂಡಿದ್ದಾರಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾ ಹಲವು ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ದೈಹಿಕವಾಗಿ ಸವಾಲಿನ ಪಾತ್ರವೇ ಇದಾಗಿದ್ದರಿಂದ, ಅವರು ಈ ಸಿನಿಮಾದಲ್ಲಿ ಹೇಗೆ ಕಂಡಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಕೂಡ ಅಭಿಮಾನಿಗಳಲ್ಲಿ ಮೂಡಿಸಿದೆ. ಇದೇ ಆಗಸ್ಟ್ 25ಕ್ಕೆ ಸಿನಿಮಾ ತೆರೆಗೆ ಬರುತ್ತಿರುವುದರಿಂದ ಈ ಎಲ್ಲ ಪ್ರಶ್ನೆಗಳೂ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.

    Live Tv

  • ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿದ ಪ್ರೇಮಿ ವಿರುದ್ಧ ದೂರು ದಾಖಲು

    ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿದ ಪ್ರೇಮಿ ವಿರುದ್ಧ ದೂರು ದಾಖಲು

    ಹುಬ್ಬಳ್ಳಿ: ಪ್ರೇಮಿಯೊಬ್ಬ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ನಗ್ನ ವೀಡಿಯೋ ಕಾಲ್ ಮಾಡಿದ್ದ. ನಗ್ನ ಫೋಟೋ ಎಡಿಟ್ ಮಾಡಿ ವಾಟ್ಸಪ್ ಸ್ಟೇಟಸ್‍ಗೆ ಇಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮಹಾರಾಷ್ಟ್ರದ ಶಿರಡಿ ಮೂಲದ ಪ್ರೇಮಿ ವಿಕೃತಿ ಮೆರೆದಿದ್ದಾನೆ. ವಾಟ್ಸಪ್ ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿರುವ ಈತನ ವಿರುದ್ಧ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:   ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್

    ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಪ್ರೇಮಿ ಅದೇ ಕಾಲೇಜಿನ ಕಿರಿಯ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ  ವಾಟ್ಸಪ್‌ ನಂಬರ್ ಪಡೆದಿದ್ದಾನೆ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಯುವತಿಯ ನಗ್ನ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ. ನವೆಂಬರ್11 ರಂದು ಆಕೆಯ ನಗ್ನ ಫೋಟೋ ಎಡಿಟ್ ಮಾಡಿ ಸ್ಟೇಟಸ್‍ಗೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

  • ಪ್ರೇಯಸಿಯ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ್ದ ಬೆಂಗಳೂರು ವಿದ್ಯಾರ್ಥಿ ಅರೆಸ್ಟ್

    ಪ್ರೇಯಸಿಯ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ್ದ ಬೆಂಗಳೂರು ವಿದ್ಯಾರ್ಥಿ ಅರೆಸ್ಟ್

    ಬೆಂಗಳೂರು: ಪ್ರೇಯಸಿ ತನ್ನ ಜೊತೆ ಬ್ರೇಕ್ ಆಪ್ ಮಾಡಿಕೊಂಡ ಕಾರಣಕ್ಕೆ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತಿಯ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಶೋವಿಕ್ ಭುವನ್ (22) ಎಂಬ ಯುವಕ ಈ ಕೃತ್ಯವನ್ನು ನಡೆಸಿದ್ದು, ತನ್ನ ಮಾಜಿ ಪ್ರೇಯಸಿಯ ಮೇಲಿನ ದ್ವೇಷದಿಂದ ಆಕೆಯ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಯುವತಿಯು ಅಸ್ಸಾಂ ಮೂಲದ ನಿವಾಸಿಯಾಗಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿ ನೆಲೆಸಿದ್ದಳು. ಈ ಸಂದರ್ಭದಲ್ಲಿ ಭುವನ್ ಆಕೆಯ ಫೋಟೋಗಳನ್ನು ತೆಗೆದುಕೊಂಡಿದ್ದ. ನಂತರ ಯುವತಿ ಮುಂಬೈಗೆ ವಾಪಸ್ಸಗಿದ್ದಳು.

    ಫೋಟೋಗಳನ್ನು ಪೋಸ್ಟ್ ಮಾಡುವ ಮೊದಲು ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ್ದ ಭುವನ್ ತನ್ನ ಜೊತೆಗಿನ ಸಂಬಂಧನವನ್ನು ಮುಂದುವರೆಸುವಂತೆ ಬೇಡಿಕೆ ಇಟ್ಟಿದ್ದ. ಆದರೆ ಯುವತಿ ಅದನ್ನು ನಿರಾಕರಿಸಿದ್ದರಿಂದ ಕುಪಿತನಾಗಿ ಆಕೆಯ ಫೋನ್ ನಂಬರ್ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಅಲ್ಲದೆ ಈಕೆ ವೇಶ್ಯೆಯಾಗಿದ್ದು ಯಾರು ಬೇಕಾದರು ಸಂಪರ್ಕಿಸಬಹುದು ಎಂದು ಪೋಸ್ಟ್ ಮಾಡಿದ್ದ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯು ಯುವಕನ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು. ಯುವತಿಗೆ ಆಕೆಯ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಟೋ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಆಕೆಯ ಮೊಬೈಲ್ ಸಂಖ್ಯೆಗೆ ಹಲವರಿಂದ ಫೋನ್ ಕರೆಗಳು ಬಂದಿವೆ. ಭುವನ್ ಸುಮಾರು 20ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದು. ಆಕೆಯ ಮೊಬೈಲ್ ಸಂಖ್ಯೆಯನ್ನು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮುಂಬೈ ವಲಯ 10ರ ಪೊಲೀಸ್ ಆಯುಕ್ತ ನವಿಚಂದ್ರ ರೆಡ್ಡಿ, ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಶೈಲೇಸ್ ಪಸಾಲ್ವರ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಇದರಂತೆ ಯುವತಿಯನ್ನು ಭೇಟಿ ಮಾಡಲು ಮುಂಬೈಗೆ ಬಂದ ಆರೋಪಿ ಭುವನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯು ಸಂತ್ರಸ್ತೆಯ ನಗ್ನ ಫೋಟೋಗಳ ಮೂಲಕ ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಬೇಡಿಕೆಗೆ ಬದ್ದರಾಗಿರುವಂತೆ ತಿಳಿಸಿದ್ದ. ಯುವ ಜನಾಂಗದವು ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡು ಜಾಗೃತರಾಗಿದಬೇಕು. ತಮ್ಮ ಘನತೆಗೆ ದಕ್ಕೆ ತರುವಂತಹ ಯಾವುದೇ ಭಾವಚಿತ್ರಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ಪಸಾಲ್ವರ್ ತಿಳಿಸಿದರು.