Tag: nuclear war

  • ಭಾರತಕ್ಕೆ ಪರಮಾಣು ಬಾಂಬ್‌ ಯುದ್ಧದ ಬೆದರಿಕೆ ಹಾಕಿದ ಪಾಕ್‌ ಸಚಿವೆ

    ಭಾರತಕ್ಕೆ ಪರಮಾಣು ಬಾಂಬ್‌ ಯುದ್ಧದ ಬೆದರಿಕೆ ಹಾಕಿದ ಪಾಕ್‌ ಸಚಿವೆ

    ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಬಗ್ಗೆ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ (Bilawal Bhutto) ನೀಡಿದ ವಿವಾದಿತ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪಾಕ್‌ನ ಮತ್ತೊಬ್ಬ ಸಚಿವರು, ಭಾರತಕ್ಕೆ ಪರಮಾಣು ಬಾಂಬ್‌ (Nuclear War) ದಾಳಿಯ ಬೆದರಿಕೆ ಹಾಕಿದ್ದಾರೆ.

    ಬೋಲ್‌ ನ್ಯೂಸ್‌ ಜೊತೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮಾರಿ (Shazia Marri), ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ – ಪಾಕ್‌ ಸಚಿವರಿಗೆ ಮುಸ್ಲಿಂ ಧರ್ಮಗುರು ತಿರುಗೇಟು

    ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಸ್ಥಿತಿಯು ಮೌನವಾಗಿರಲು ಅಲ್ಲ. ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ’’ ಎಂದು ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆ

    ಶಾಜಿಯಾ ಭಾರತಕ್ಕೆ ಬೆದರಿಕೆ ಹಾಕಿದ್ದು, ಮೋದಿ ಸರ್ಕಾರ ಹೋರಾಡಿದರೆ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಪರಮಾಣು ರಾಷ್ಟ್ರದ ಸ್ಥಾನಮಾನ ನೀಡಿ ಸುಮ್ಮನಿರಲು ಆಗಿಲ್ಲ. ಪಾಕಿಸ್ತಾನಕ್ಕೂ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದ್ದಾರೆ.

    ನೀವು ಪಾಕಿಸ್ತಾನದ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುತ್ತಿದ್ದರೆ, ಪಾಕಿಸ್ತಾನವು ಮೌನವಾಗಿ ಕೇಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಮೇಲೆ ಅಣು ಬಾಂಬ್‌ ಹಾಕ್ತೇವೆ, ಅಸ್ಸಾಂವರೆಗೂ ದಾಳಿ – ಪಾಕ್‌

    ಭಾರತದ ಮೇಲೆ ಅಣು ಬಾಂಬ್‌ ಹಾಕ್ತೇವೆ, ಅಸ್ಸಾಂವರೆಗೂ ದಾಳಿ – ಪಾಕ್‌

    ಇಸ್ಲಾಮಾಬಾದ್‌: 4 ಬಾರಿ ಭಾರತದ ಜೊತೆಗಿನ ಯುದ್ಧದಲ್ಲಿ ಸೋತಿರುವ ಪಾಕಿಸ್ತಾನದ ಯುದ್ಧ ದಾಹ ಇನ್ನೂ ಕಡಿಮೆಯಾಗಿಲ್ಲ. ಈಗ ಭಾರತದ ವಿರುದ್ಧ ಅಣುಬಾಂಬ್‌ ದಾಳಿ ಮಾಡುವ ಗೊಡ್ಡು ಬೆದರಿಕೆಯನ್ನು ಹಾಕಿದೆ.

    ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ಸಾಂಪ್ರದಾಯಿಕ ಯುದ್ಧ ಮಾಡುವುದಿಲ್ಲ. ಇನ್ನುಮುಂದೆ ರಕ್ತಸಿಕ್ತ ಮತ್ತು ಅಣು ಯುದ್ಧವೇ ಆಗಲಿದೆ ಎಂದು ಪಾಕ್‌ ರೈಲ್ವೇ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ. ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ನಮ್ಮಲ್ಲಿ ಸಣ್ಣ ಮತ್ತು ನಿಖರವಾದ ಲೆಕ್ಕಾಚಾರದ ಅಸ್ತ್ರಗಳಿವೆ. ಇವು ಮುಸ್ಲಿಮರನ್ನು ಉಳಿಸಲಿದೆ ಎಂದು ಹೇಳಿದ್ದಾರೆ.

    ನಮ್ಮಲ್ಲಿರುವ ಅಸ್ತ್ರಗಳು ಅಸ್ಸಾಂವರೆಗೂ ದಾಳಿ ಮಾಡಬಹುದು. ಹೀಗೆ ಏನಾದರೆ ಸಂಭವಿಸಿದರೆ ಅದು ಅಂತ್ಯವಾಗುತ್ತದೆ ಎಂಬ ವಿಚಾರ ಭಾರತಕ್ಕೂ ತಿಳಿದಿದೆ ಎಂಬ ಬಿಲ್ಡಪ್‌ ಡೈಲಾಗ್‌ ಹೊಡೆದಿದ್ದಾರೆ.

    ಪಾಕಿಸ್ತಾನ ಅಣುಬಾಂಬ್‌ ವಿಚಾರವನ್ನು ಪ್ರಸ್ತಾಪ ಮಾಡುವುದು ಇದೇ ಮೊದಲೆನಲ್ಲ. ಈ ಹಿಂದೆ 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಏನಾದರೆ ಆದರೆ ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಎರಡು ಅಣ್ವಸ್ತ್ರ ಹೊಂದಿರುವ ದೇಶಗಳು ಕಾದಾಡಿದರೆ ಇಡೀ ವಿಶ್ವಕ್ಕೆ ಹಾನಿಯಾಗಲಿದೆ ಎಂದು ಎಂದಿದ್ದರು.

    ಕಾರ್ಗಿಲ್‌ ಯುದ್ಧದ ಬಳಿಕ ಪಾಕಿಸ್ತಾನ 2001ರಲ್ಲಿ ಭಾರತದ ಮೇಲೆ ಅಣ್ವಸ್ತ್ರ ದಾಳಿಗೆ ಯೋಚಿಸಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ, 2001ರಲ್ಲಿ ಭಾರತ ತನ್ನ ಸೇನೆಯನ್ನು ಪಾಕ್ ಗಡಿಯಲ್ಲಿ ನಿಯೋಜಿಸಿತ್ತು. ನಾವು ಯುದ್ಧಕ್ಕೆ ಸಿದ್ಧವಾಗಿದ್ದೆವು. ಒಂದು ಹಂತದಲ್ಲಿ ಭಾರತದ ಮೇಲೆ ಅಣುಬಾಂಬ್ ಪ್ರಯೋಗಿಸುವ ತೀರ್ಮಾನ ಮಾಡಿದ್ದೆವು. ಆದರೆ ಭಾರತದ ಬಳಿಯೂ ಅಣುಬಾಂಬ್‌ ಇರುವ ಕಾರಣ ಈ ನಿರ್ಧಾರವನ್ನು ಕೈಬಿಡಲಾಯಿತು ಎಂದು ಈ ಹಿಂದೆ ತಿಳಿಸಿದ್ದರು.

    ಒಂದು ವೇಳೆ ಅಣುಬಾಂಬ್‌ ದಾಳಿ ಮಾಡಿದರೂ ಭಾರತ ಕೂಡಲೇ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರುವುದು ಪಾಕಿಸ್ತಾನಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಅಣು ಬಾಂಬ್‌ ದಾಳಿಯ ನಿರ್ಧಾರದಿಂದ ಹಿಂದೆ ಸರಿದಿತ್ತು.

  • ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಲಂಡನ್: ಅಮೆರಿಕ, ರಷ್ಯಾ, ಉತ್ತರ ಕೊರಿಯಾಗಳ ನಡುವೆ ಯುದ್ಧದ ಮಾತುಕತೆ ಕೇಳಿ ಬರುತ್ತಿರುವಾಗಲೇ ಮೂರನೇ ಮಹಾಯುದ್ಧ ಮೇ 13ರಿಂದ ಆರಂಭವಾಗಲಿದೆ ಎಂದು ಟೆಕ್ಸಸ್ ದಾರ್ಶನಿಕ ಹೊರಶಿಯೋ ವಿಲೇಗಾಸ್ ಭವಿಷ್ಯ ನುಡಿದಿದ್ದಾರೆ.

    2015ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಹೊರಶಿಯೋ ವಿಲೇಗಾಸ್ ಮೂರನೇ ಮಹಾಯುದ್ಧದಲ್ಲಿ ವಿಶ್ವದ ಹಲವು ಕಡೆ ಅಣುಬಾಂಬ್ ಬೀಳಲಿದೆ ಎಂದು ಹೇಳಿದ್ದಾರೆ.

    ಇಂಗ್ಲೆಂಡಿನ ಡೈಲಿಸ್ಟಾರ್ ಪತ್ರಿಕೆ ಹೊರಶಿಯೋ ವಿಲೇಗಾಸ್ ಭವಿಷ್ಯವಾಣಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಭವಿಷ್ಯವಾಣಿ ಏನು?
    ಮೂರನೇ ಮಹಾಯುದ್ದದ ವೇಳೆ ಅಪಾಯದಿಂದ ಪಾರಾಗಲು ಜನ ವಿಶ್ವದೆಲ್ಲೆಡೆ ವಲಸೆ ಹೋಗುತ್ತಾರೆ. ಈ ಅವಧಿಯಲ್ಲಿ ಹಲವು ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಯಲಿದೆ. ಅಕ್ಟೋಬರ್‍ನಲ್ಲಿ ಯದ್ಧ ಅಂತ್ಯಗೊಳ್ಳುತ್ತದೆ. ಅಮೆರಿಕ, ರಷ್ಯಾ, ಸಿರಿಯಾ, ಕೊರಿಯಾಗಳ ನಡುವೆ ಆರಂಭದಲ್ಲಿ ಯುದ್ಧ ಪ್ರಾರಂಭವಾಗುತ್ತದೆ. ಇದಾದ ಬಳಿಕ ಚೀನಾವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಅಮೆರಿಕದ ಹಿಟ್‍ಲಿಸ್ಟ್ ನಲ್ಲಿ ಈಗ ಉತ್ತರ ಕೊರಿಯಾ ಇದೆ ಎಂದು ಹೇಳಿದ್ದಾರೆ.

    ಮೇ 13 ರಂದೇ ಯಾಕೆ?
    ಈ ವರ್ಷ ಮೇ 13 – ಕ್ರಿಸ್ತನ ತಾಯಿ, ವರ್ಜಿನ್ ಮೇರಿ , ಅಂದರೆ ಅವರ್ ಲೇಡಿ ಆಫ್ ಫಾತಿಮಾ ಭೂಮಿಗೆ ಇಳಿದು ಬಂದ ನೂರನೇ ವರ್ಷಾಚರಣೆಯ ದಿನ. ಅಂದು ಮೂರನೇ ಮಹಾ ಯುದ್ಧ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಭವಿಷ್ಯವಾಣಿ ನಿಜವಾಗುತ್ತಾ?
    ಟೆಕ್ಸಾಸ್‍ನಲ್ಲಿ ವಾಸವಾಗಿರುವ ಕ್ಯಾಥೋಲಿಕ್ ಅನುಯಾಯಿ ಹೊರಶಿಯೋ ವಿಲೇಗಾಸ್ 10 ವರ್ಷದ ಹಿಂದೆ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಮುಂದೆ ಜಗತ್ತಿನಲ್ಲಿ ಏನೇನು ಆಗಲಿದೆ ಎನ್ನುವುದನ್ನು ವಿವರಿಸಿದ್ದಾರೆ. ಸಿರಿಯಾದ ಮೇಲೆ ಆರಂಭದಲ್ಲಿ ದಾಳಿ ಆಗುತ್ತದೆ ನಂತರ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಅಮೆರಿಕವನ್ನು ಶತಕೋಟಿ ಡಾಲರ್‍ಗಳ ಒಡೆಯ ಆಳಲಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ನಾನು ಫಲಿತಾಂಶ ಬರುವ 15 ತಿಂಗಳ ಮೊದಲೇ ಹೇಳಿದ್ದರೂ ಜನ ಯಾರೂ ನಂಬಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಬೈಬಲ್ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಓದಿ ಅಧ್ಯಯನ ನಡೆಸಿದ್ದೇನೆ. ಈ ಕಾರಣದಿಂದಾಗಿ ಯಾವ ದಿನಾಂಕ ಪರಮಾಣು ಯುದ್ಧ ಆರಂಭವಾಗುತ್ತದೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

    ಪ್ರಸ್ತುತ ವಿಶ್ವದಲ್ಲಿ ಏನಾಗ್ತಿದೆ?
    ಸಿರಿಯಾ ನಡೆಸಿದ ಕೆಮಿಕಲ್ ದಾಳಿಗೆ ಪ್ರತಿಯಾಗಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯನ್ನು ರಷ್ಯಾ ಖಂಡಿಸಿದೆ. ಅಮೆರಿಕದ ಜೊತೆ ತಾನು ಯುದ್ಧಕ್ಕೆ ತಯಾರಾಗಿದ್ದೇನೆ ಎಂದು ತೋರಿಸಿಕೊಡಲು ಉತ್ತರ ಕೊರಿಯಾದ ಎರಡನೇ ಪ್ರಭಾವಿ ಅಧಿಕಾರಿ ಚೊ ಯಾಂಗ್, ಅಮೆರಿಕದ ಯಾವುದೇ ದಾಳಿಯನ್ನು ತಡೆದು ತಿರುಗೇಟು ನೀಡಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ದಾಳಿ ನಡೆಸಬಹದು ಎನ್ನುವ ಕಾರಣಕ್ಕೆ ಚೀನಾ ಮತ್ತು ರಷ್ಯಾ ಉತ್ತರ ಕೊರಿಯಾಗೆ ಹೊಂದಿಕೊಂಡಿರುವಗಡಿ ಭಾಗಕ್ಕೆ ಸೇನಾಪಡೆ ಹಾಗೂ ಯುದ್ಧ ಸಾಮಗ್ರಿಗಳನ್ನು ರವಾನಿಸಿದೆ.

    ಮೊದಲ ಮಹಾಯುದ್ಧ 1914 ಜುಲೈ 28ರಿಂದ ಆರಂಭವಾಗಿ 1918ರ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು. ಎರಡನೇ ಮಹಾಯುದ್ಧ, ಎರಡನೇ ಮಹಾಯುದ್ಧ 1939ರ ಸೆಪ್ಟೆಂಬರ್ 1ರಿಂದ ಆರಂಭವಾಗಿ 1945 ಸೆಪ್ಟೆಂಬರ್ 2ರಂದು ಕೊನೆಯಾಗಿತ್ತು.

    https://twitter.com/cassandra17lina/status/854689953724469248

    https://twitter.com/nukewarnews/status/853057591164809216

    https://twitter.com/EmekaGift/status/853938291543916544