Tag: Nuclear Site

  • ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

    ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

    ಬೆಂಗಳೂರು: ಇರಾನ್ (Iran) ಹಾರ್ಮುಝ್ ಜಲಸಂಧಿ (Hormuz Strait) ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟವಾಗಲಿದೆ, ಆರ್ಥಿಕತೆಗೂ ಹೊಡೆತ ಬೀಳಲಿದೆ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್ (SR Keshav) ಹೇಳಿದ್ದಾರೆ.

    ಇರಾನ್‌-ಇಸ್ರೇಲ್‌ ನಡುವೆ ಸಂಘರ್ಷ (Israel Iran Conflict) ತೀವ್ರಗೊಂಡಿದ್ದು, ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸಂಘರ್ಷ ಮುಂದುವರಿದ್ರೆ ಅಥವಾ ಇರಾನ್‌ ಮುಂದಿನ ಕ್ರಮ ಭಾರತದ (India) ಮೇಲೆ ಏನು ಪರಿಣಾಮಗಳು ಬೀರಬಹುದು ಅನ್ನೋ ಕುರಿತು ಎಸ್. ಆರ್ ಕೇಶವ್ ಮಾತನಾಡಿದ್ದಾರೆ.

    ಆಮದು-ರಫ್ತಿನ ಪ್ರಮುಖ ಮಾರ್ಗ
    ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಕಷ್ಟವಾಗುತ್ತದೆ. ಸಹಜವಾಗಿಯೇ ವಿಶ್ವದಲ್ಲಿ ಯಾವುದೇ ಯುದ್ಧವಾದ್ರೂ ವಿಶ್ವದ ಎಲ್ಲಾ ದೇಶಗಳಿಗೂ ಪರಿಣಾಮ ಬೀರುತ್ತೆ. ಅದೇ ರೀತಿ ಇಸ್ರೇಲ್-ಇರಾನ್ ಯುದ್ಧ ಸುದೀರ್ಘವಾದಷ್ಟು ಭಾರತಕ್ಕೆ ಲಾಸ್. ಏಕೆಂದ್ರೆ ಭಾರತದ 80% ರಷ್ಟು ಕಚ್ಚಾ ತೈಲವನ್ನ (Crude oil) ಆಮದು ಮಾಡಿಕೊಳ್ಳುತ್ತೆ. ಹಾರ್ಮೂಝ್ ಜಲಸಂಧಿ ಮಾರ್ಗದಿಂದಲೇ ಭಾರತಕ್ಕೆ ಆಮದು ಆಗಬೇಕು. ಭಾರತದಿಂದ ರಫ್ತಾಗುವ ಎಲ್ಲ ವಸ್ತುಗಳು ಸಹ ಈ ಜಲಸಂಧಿಯಿಂದಲೇ ಹೋಗಬೇಕು ಎಂದು ವಿವರಿಸಿದ್ರು.

    ಈಗಾಗಲೇ ಆಮದು, ರಫ್ತು ಎರಡಲ್ಲೂ ಭಾರತಕ್ಕೆ ನಷ್ಟ ಶುರುವಾಗಿದೆ. ಇಸ್ರೇಲ್‌ ಜೊತೆಗಿನ ಸಂಘರ್ಷ ತೀವ್ರವಾದ ಬೆನ್ನಲ್ಲೇ ಇರಾನ್ ಜೊತೆಗೆ ವಹಿವಾಟು ಕಡಿಮೆ ಆಗಿದೆ. ಜೊತೆಗೆ ಸೌದಿ ಅರೇಬಿಯಾ, ಯುಎಇ, ಅರಬ್ ದೇಶಗಳಿಂದ ಸಾಗಣಿಕೆಗೆ ಈ ಜಲಸಂಧಿಯಲ್ಲೇ ಬರಬೇಕು. ಎಲ್ಲಾ ಆಮದು ಬರೋದಕ್ಕೆ ಈ ಜಲಸಂಧಿ ಮಾರ್ಗವೇ ಹತ್ತಿರವಾಗುತ್ತೆ. ಯೂರೋಪ್ ದೇಶಗಳಿಗೆ ಭಾರತ ರಪ್ತು ಮಾಡೋದಕ್ಕೂ ಈ ಮಾರ್ಗವೇ ಮುಖ್ಯ. ಹಾಗಾಗಿ ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೇ ಭಾರತಕ್ಕೆ ಭಾರೀ ನಷ್ಟವಾಗುತ್ತದೆ ಎಂದು ತಿಳಿಸಿದರು.

    ಜೊತೆಗೆ ಏಷ್ಯಾ ದೇಶಗಳ ಸಂಪರ್ಕಕ್ಕೂ ನೇರ ಹೊಡೆತ ಬೀಳುತ್ತೆ. ಭಾರತ ಮಾತ್ರವಲ್ಲ ಬಹುತೇಕ ಎಲ್ಲ ಏಷ್ಯಾ ರಾಷ್ಟ್ರಗಳಿಗೆ ಹೊಡೆತ ಬೀಳುತ್ತೆ. ಸದ್ಯದ ಪರಿಸ್ಥಿಯಲ್ಲಿ ಇರಾನ್‌ಗೆ ಚೀನಾ ಬೇಕಿದೆ, ಇಸ್ರೇಲ್‌ಗೆ ಅಮೆರಿಕ ಬೇಕಿದೆ ಎಂದು ಮಾಹಿತಿ ನೀಡಿದರು.

  • Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    – ಇರಾನ್‌ನ 170ಕ್ಕೂ ಹೆಚ್ಚು ಸ್ಥಳ, 720 ಮಿಲಿಟರಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಟೆಲ್‌ ಅವಿವ್‌/ಟೆಹ್ರಾನ್‌: ಆಪರೇಷನ್‌ ʻರೈಸಿಂಗ್‌ ಲಯನ್‌ʼ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷ (Israel-Iran Conflict) ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್‌ ಮಿಸೈಲ್‌ ದಾಳಿಗೆ ಇಸ್ರೇಲ್‌ (Israel) ಕೂಡ ಮಿಸೈಲ್‌ಗಳ ಸುರಿಮಳೆಯನ್ನೇ ಸುರಿಸಿದೆ.

    ಅಣ್ವಸ್ತ್ರ (Nuclear Site), ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈವರೆಗಿನ ದಾಳಿಯಲ್ಲಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅಣ್ವಸ್ತ್ರ ವಿಜ್ಞಾನಿಗಳು ಸೇರಿದಂತೆ ಈವರೆಗೆ 14 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಅತ್ತ ಇರಾನ್‌ ಕೂಡ ಇಸ್ರೇಲ್‌ ಮೇಲೆ 200 ಖಂಡಾಂತರ ಕ್ಷಿಪಣಿಗಳು ಹಾಗೂ 100 ಡ್ರೋನ್‌ಗಳಿಂದ ಭೀಕರ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಟೆಲ್‌ ಅವಿವ್‌, ಜೆರುಸಲೆಮ್‌ ಸೇರಿದಂತೆ ಮಿಲಿಟರಿ ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ 4ನೇ ದಿನವೂ ಮುಂದುವರಿದಿದೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಕದನ ವಿರಾಮ ಮಾತುಕತೆ ತಿರಸ್ಕಾರ
    ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಟೆಹ್ರಾನ್‌ ಹೊತ್ತಿ ಉರಿಯಯತ್ತೆ, ನಿರಂತರ ದಾಳಿ ಇರಾನ್‌ ಮೇಲೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅತ್ತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ ಮೇಲೆ ಬೃಹತ್‌ ದಾಳಿ ನಡೆಸುವ ಸೂಚನೆ ಕೊಟ್ಟಿದೆ. ಜೊತೆಗೆ ಇಸ್ರೇಲ್‌ನಿಂದ ದಾಳಿ ಮುಂದುವರಿಯುವವರೆಗೂ ನಾವು ಕದನ ವಿರಾಮದ ಬಗ್ಗೆ ಮಾತನಾಡುವುದಿಲ್ಲ ಎಂದು ಒಮನ್ ಮತ್ತು ಕತಾರ್‌ನ ಮಧ್ಯಸ್ಥಿಕೆಯನ್ನು ಇರಾನ್‌ ತಿರಸ್ಕರಿಸಿದೆ.

    ಇಸ್ರೇಲ್‌ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್‌ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ