Tag: nuclear power plant

  • ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ ಸ್ಥಾಪನೆ – ಕೊಪ್ಪಳದಲ್ಲಿ ಜಾಗ ಆಯ್ಕೆ?

    ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ ಸ್ಥಾಪನೆ – ಕೊಪ್ಪಳದಲ್ಲಿ ಜಾಗ ಆಯ್ಕೆ?

    – ಅಣು ಸ್ಥಾವರ ಸ್ಥಾಪನೆಗೆ ರೈತರ ವಿರೋಧ

    ಕೊಪ್ಪಳ: ಕರ್ನಾಟಕದಲ್ಲಿ ಇನ್ನೊಂದು ಅಣುಸ್ಥಾವರ (Nuclear Power Plant) ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸ್ಥಳ ಹುಡುಕಾಟ ನಡೆಸಿತ್ತು. ಸದ್ಯ ಕೊಪ್ಪಳ (Koppal) ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಅಣುಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಜಾಗ ಆಯ್ಕೆ ಮಾಡಿಕೊಂಡಿದೆ.

    ಅಣು ಸ್ಥಾವರ ಸ್ಥಾಪನೆಗೆ 1,200 ಎಕರೆ ಜಾಗ ಬೇಕಾಗಿದ್ದು, ಸದ್ಯ 615 ಎಕರೆ ಲಭ್ಯವಿದೆ. ಇನ್ನುಳಿದ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೇಂದ್ರದಿಂದ ಸೂಚನೆ ಬಂದಿದೆ. ಈ ಭಾಗದಲ್ಲಿ ಹೆಚ್ಚಿನ ಕಾಡು ಪ್ರಾಣಿಗಳು ವಾಸ ಸ್ಥಾನವಾಗಿದೆ. ಕರಡಿ, ಜಿಂಕೆ, ಮೊಲ, ಕತ್ತೆ ಕಿರುಬ ಸೇರಿ ಹಲವು ಪ್ರಾಣಿಗಳು ವಾಸ ಮಾಡುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲೊಂದು ದುರಂತ ಪ್ರೇಮ ಕಥೆ | ಲವರ್‌ಗಾಗಿ ನದಿಗೆ ಹಾರಿದ ಗೃಹಿಣಿ – ಪ್ರಿಯಕರ ನೇಣಿಗೆ ಶರಣು

    ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಾಗದ ಪೈಕಿ ಶೇ.90ರಷ್ಟು ಸರ್ಕಾರಿ ಭೂಮಿಯೇ ಇರುವ ಪ್ರದೇಶವಾಗಿದ್ದು, ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಮುಂದಾಗಿರುವುದು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ಈಗಾಗಲೇ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಬಳಿಕ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯನ್ನು ಸ್ಥಾವರಕ್ಕಾಗಿ ಗುರುತಿಸಲಾಗಿತ್ತು. ಆದರೆ ಇದೀಗ ಕೊಪ್ಪಳ ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ವೇ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಸರ್ವೇ ನಡೆಸಿ, ಕೇಂದ್ರಕ್ಕೆ ವರದಿ ನೀಡಲಿದೆ. ಇದನ್ನೂ ಓದಿ: ಪ್ರತಿ ಕೇತ್ರಕ್ಕೆ 26 ಕೋಟಿ ಅನುದಾನ – ಕೈ ಶಾಸಕರಿಗೆ ಸಿಎಂ ಭರವಸೆ

    ಅತ್ಯಂತ ಅಪಾಯಕಾರಿಯಾಗಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸ್ಥಾಪಿಸಲು ನಾವು ಬಿಡುವುದಿಲ್ಲ. ಇದಕ್ಕಾಗಿ ಆತ್ಮಹತ್ಯೆಯಂತಹ ಹೋರಾಟಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಿಳಿಸಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

  • ಉಕ್ರೇನ್ ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ, 14 ಮಂದಿ ದುರ್ಮರಣ – ಭಾರತಕ್ಕೂ ಆತಂಕ

    ಉಕ್ರೇನ್ ನ್ಯೂಕ್ಲಿಯರ್ ಘಟಕದ ಮೇಲೆ ರಾಕೆಟ್ ದಾಳಿ, 14 ಮಂದಿ ದುರ್ಮರಣ – ಭಾರತಕ್ಕೂ ಆತಂಕ

    ಕೈವ್: ಉಕ್ರೇನಿನ ಝಪೋರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಸಮೀಪವೇ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, 14 ಜೀವಗಳು ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ರಷ್ಯಾ ಮೇಲಿನ ನಿಯಂತ್ರಣವು ಇತರ ದೇಶಗಳಿಗೂ ಅಪಾಯವನ್ನುಂಟುಮಾಡುತ್ತವೆ ಎಂದು G7 ರಾಷ್ಟ್ರಗಳು ಎಚ್ಚರಿಸಿವೆ.

    ರಷ್ಯಾ-ಉಕ್ರೇನ್ ದಾಳಿ ನಡೆಸುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಉಭಯ ದೇಶಗಳು ಪರಮಾಣು ಘಟಕದ ಸುರಕ್ಷತೆ ಹಾಗೂ ಭದ್ರತೆಗೆ ಗಮನ ನೀಡಬೇಕು ಎಂದು ಕರೆ ನೀಡಿದೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ಈ ಸಂಬಂಧ ಚರ್ಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿನ್ನೆಯಷ್ಟೇ ತುರ್ತು ಸಭೆ ಕರೆದಿತ್ತು. ಈ ವೇಳೆ ವಿಶ್ವಸಂಸ್ಥೆಯು ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್, ಪರಮಾಣು ಘಟಕದ ಸುರಕ್ಷತೆ ಮತ್ತು ಭದ್ರತೆ ಉದ್ದೇಶದಿಂದ ಘಟಕದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

    ಉಭಯ ದೇಶಗಳ ದಾಳಿಯಿಂದ ಉಂಟಾಗುವ ಯಾವುದೇ ಹಾನಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿ ನಿತೀಶ್? – ದೂರವಾಣಿ ಕರೆಗಳ ಬಗ್ಗೆ ಸಿಎಂ ಹೇಳಿದ್ದೇನು?

    ರಷ್ಯಾ ರಾಕೆಟ್ ದಾಳಿಯಿಂದ 14 ಮಂದಿ ದುರ್ಮರಣಕ್ಕೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ಉದ್ವಿಗ್ನತೆಯು 1986ರ ಸೋವಿಯತ್ ಉಕ್ರೇನ್‌ನಲ್ಲಿ ನಡೆದ ಭೀರಕ ಪರಮಾಣು ದುರಂತದ ನೆನಪುಗಳನ್ನು ಪುನರುಜ್ಜೀವನಗೊಳಿಸಿದೆ. ಸೋವಿಯತ್‌ನಲ್ಲಿ ನಡೆದಿದ್ದ ಶೆಲ್ ದಾಳಿ ನೂರಾರು ಜನರನ್ನು ಕೊಂದಿತ್ತು. ಯುರೂಪ್‌ನ ಅನೇಕ ಭಾಗಗಳಲ್ಲಿ ವಿಕಿರಣದ ಮಾಲಿನ್ಯವನ್ನುಂಟುಮಾಡಿತ್ತು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ 9ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾ ಸೈನಿಕರು ಉಕ್ರೇನ್ ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ದಾಳಿ ಮಾಡಿದ್ದಾರೆ.

    ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೇನೆಯಿಂದ ಜಪೋರಿಝಿಯಾ ಅಣುಸ್ಥಾವರ ಮೇಲೆ ದಾಳಿ ನಡೆದಿದೆ. ಯುರೋಪಿನಲ್ಲಿಯೇ ಅತೀ ದೊಡ್ಡದಾದ ಅಣುಸ್ಥಾವರ ಇದಾಗಿದೆ. ಇದೀಗ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಣುಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್‍ಗೋಡರ್‍ನ ಮೇಯರ್ ಹೇಳಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಧಗಧಗಿಸುತ್ತಿದೆ. ಒಂದು ವೇಳೆ ಈ ಅಣುಸ್ಥಾವರ ಸ್ಫೊಟಗೊಂಡರೆ 1986ರ ಚರ್ನೋಬೆಲ್ ದುರಂತಕ್ಕಿಂತ 10 ಪಟ್ಟು ಭೀಕರವಾಗಲಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಈ ದಾಳಿಯಲ್ಲಿ ಅಪಾರ ಸಾವು ನೋವುಗಳಾಗಿವೆ. ಇದಕ್ಕೂ ಮೊದಲು ರಷ್ಯಾ ಸೇನೆಯು, ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್‍ಳೊಂದಿಗೆ ಜಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು.