Tag: nuclear bomb

  • ಪಾಕ್ ಬಳಿ ಅಣುಬಾಂಬ್ ಇದೆ ಆದ್ರೆ ಅದನ್ನು ನಿರ್ವಹಿಸಲು ಹಣವಿಲ್ಲ: ಪ್ರಧಾನಿ ಮೋದಿ

    ಪಾಕ್ ಬಳಿ ಅಣುಬಾಂಬ್ ಇದೆ ಆದ್ರೆ ಅದನ್ನು ನಿರ್ವಹಿಸಲು ಹಣವಿಲ್ಲ: ಪ್ರಧಾನಿ ಮೋದಿ

    ಲಕ್ನೋ: ಪಾಕಿಸ್ತಾನದ ಬಳಿ ಅಣುಬಾಂಬ್‌ (Nuclear Bomb) ಇದೆ. ಆದರೆ ಅದನ್ನು ನಿರ್ವಹಿಸಲು ಅವರ ಬಳಿ ಹಣವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡುತ್ತಾ ಮೋದಿಯವರು (Narendra Modi) ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಅದನ್ನು ನಿರ್ವಹಿಸಲು ಪಾಕಿಸ್ತಾನದ ಬಳಿ ಹಣವಿಲ್ಲ ಎಂದು ಪಕ್ಷಕ್ಕೆ ತಿಳಿದಿಲ್ಲ ಎಂದು ಕುಟುಕಿದರು.

    370 ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್ (Congress) ಯೋಜಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದ ಪ್ರಧಾನಿ, ಕಾಂಗ್ರೆಸ್ 370 ನೇ ವಿಧಿಯನ್ನು ಮತ್ತೆ ಹಿಂಪಡೆಯುವುದಾಗಿ ಹೇಳುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ವಿವಾದಾತ್ಮಕ ನಿಬಂಧನೆಯ ಬಗ್ಗೆ ಪಕ್ಷದ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.‌ ಇದನ್ನೂ ಓದಿ: ಪಾಕ್‌ ಸಹ ಅಣುಬಾಂಬ್‌ ಹೊಂದಿದೆ, ಕೆರಳಿಸಿದ್ರೆ ಭಾರತದ ಮೇಲೆ ಎಸೆಯುತ್ತಾರೆ: ಕಾಂಗ್ರೆಸ್‌ ಮಾಜಿ ಸಚಿವ ಪ್ರಚೋದನಕಾರಿ ಹೇಳಿಕೆ!

    ಈ ಹಿಂದೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) , ಪಾಕಿಸ್ತಾನವು ಸಹ ಅಣುಬಾಂಬ್‌ಗಳನ್ನ (Nuclear Bombs) ಹೊಂದಿದೆ. ನಮ್ಮ ಸರ್ಕಾರ ಅವರನ್ನ ಕೆರಳಿಸಿದರೆ, ಭಾರತದ ಮೇಲೆ ಎಸೆಯಬಹುದು. ಆದ್ದರಿಂದ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಇಲ್ಲದಿದ್ದರೆ ದೇಶವು ಭಾರೀ ಬೆಲೆ ತೆರಬೇಕಾಗುತ್ತದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಹಳೆಯ ವೀಡಿಯೋ ಆಗಿದ್ದು, ಇತ್ತೀಚೆಗೆ ಭಾರೀ ವೈರಲ್‌ ಆಗಿತ್ತು.

  • ವಿಕಿರಣ ವಿರೋಧಿ ಔಷಧಿ ಸಂಗ್ರಹಿಸಿ – ಉಕ್ರೇನಿಯನ್ನರಿಗೆ ಝೆಲೆನ್ಸ್ಕಿ ಕರೆ

    ವಿಕಿರಣ ವಿರೋಧಿ ಔಷಧಿ ಸಂಗ್ರಹಿಸಿ – ಉಕ್ರೇನಿಯನ್ನರಿಗೆ ಝೆಲೆನ್ಸ್ಕಿ ಕರೆ

    ಕೀವ್: ರಷ್ಯಾ ಉಕ್ರೇನ್ ಮೇಲೆ ಪರಮಾಣು ಬಾಂಬ್ ದಾಳಿ ನಡೆಸುವ ಬೆದರಿಕೆ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನಿಯನ್ನರಿಗೆ ವಿಕಿರಣ ವಿರೋಧಿ ಔಷಧಿಗಳನ್ನು ಸಂಗ್ರಹಿಸಲು ಕರೆ ನೀಡಿದ್ದಾರೆ.

    ನಾವು ರಷ್ಯಾದ ಯಾವುದೇ ಬೆದರಿಕೆಗೂ ತಯಾರಾಗಿರಬೇಕು. ರಷ್ಯಾ ನಮ್ಮ ಮೇಲೆ ಯಾವುದೇ ಆಯುಧಗಳನ್ನೂ ಬಳಸಬಹುದು ಎಂಬುದು ನನಗೆ ಮನವರಿಕೆಯಾಗಿದೆ. ಹೀಗಾಗಿ ಇವುಗಳಿಂದಾಗಬಹುದಾದ ಅಡ್ಡ ಪರಿಣಾಮವನ್ನು ನಿಗ್ರಹಿಸಲು ವಿಕಿರಣ ವಿರೋಧಿ ಔಷಧಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್‌ಫೋನ್‌ನಿಂದ ಉಳಿಯಿತು ಉಕ್ರೇನ್‌ ಸೈನಿಕನ ಜೀವ

    ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. ಇದಾದ ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಯಾವುದೇ ದೇಶ ಉಕ್ರೇನ್ ಪರವಾಗಿ ನಮ್ಮ ಮೇಲೆ ನೇರವಾಗಿ ಯುದ್ಧ ಮಾಡಿದರೆ ಪರಮಾಣು ದಾಳಿ ಮಾಡುವುದಕ್ಕೂ ನಾವು ಹಿಂಜರಿಯಲ್ಲ ಎಂದ ರಷ್ಯಾ ಹೇಳಿತ್ತು. ಉಕ್ರೇನ್ ಮೇಲೆ ಪರಮಾಣು ದಾಳಿಯ ಬೆದರಿಕೆಯಿದ್ದರೂ, ರಷ್ಯಾ ಇಲ್ಲಿಯವರೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

  • ಭೂಮಿಯ ಸಮೀಪದಿಂದ ಹಾದುಹೋಗಲಿದೆ ಪರಮಾಣು ಬಾಂಬ್‌ಗಿಂತ 30 ಪಟ್ಟು ಹೆಚ್ಚು ಶಕ್ತಿಯ ಕ್ಷುದ್ರಗ್ರಹ

    ಭೂಮಿಯ ಸಮೀಪದಿಂದ ಹಾದುಹೋಗಲಿದೆ ಪರಮಾಣು ಬಾಂಬ್‌ಗಿಂತ 30 ಪಟ್ಟು ಹೆಚ್ಚು ಶಕ್ತಿಯ ಕ್ಷುದ್ರಗ್ರಹ

    ಮಾಸ್ಕೋ: ಮಾನವನಿಂದ ಇದುವರೆಗೆ ಸ್ಪೋಟಿಸಲು ಸಾಧ್ಯವಾಗಿರುವ ಪರಮಾಣು ಬಾಂಬ್‌ಗಿಂತಲೂ 30 ಪಟ್ಟು ಹೆಚ್ಚು ಶಕ್ತಿಶಾಲಿ ಕ್ಷುದ್ರಗ್ರಹವೊಂದು ಭೂಮಿಗೆ ಸಮೀಪಿಸುತ್ತಿದೆ. ಇದು 2029ರಲ್ಲಿ ಭೂಮಿಯನ್ನು ಹಾದು ಹೋಗುವ ನಿರೀಕ್ಷೆಯಿದೆ.

    ಹೌದು, ಭಾರೀ ಶಕ್ತಿಯ ಕ್ಷುದ್ರಗ್ರಹವೊಂದು ಭೂಮಿಯ ಬಳಿಯಿಂದ ಹಾದು ಹೋಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಕ್ಷುದ್ರಗ್ರಹ 1,717 ಮೆಗಾಟನ್ ಮೌಲ್ಯದ ಶಕ್ತಿ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.

    ರಷ್ಯಾದ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಅಪೋಫಿಸ್ ಕ್ಷುದ್ರಗ್ರಹ ಎಪ್ರಿಲ್ 2029ರಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗುವ ನಿರೀಕ್ಷೆಯಿದೆ. ಅದು ಭೂಮಿಯ ಮೇಲ್ಮೈಯಿಂದ ಕೇವಲ 39,000 ಕಿ.ಮೀ ದೂರದಲ್ಲಿ ಹಾದು ಹೋಗಲಿದೆ ಎನ್ನಲಾಗಿದೆ. ಇಷ್ಟೇ ದೂರದ ಭೂಮಿಯ ಕಕ್ಷೆಯಲ್ಲಿ ಟಿವಿ ಪ್ರಸಾರದ ಉಪಗ್ರಹಗಳನ್ನು ಇರಿಸಲಾಗುತ್ತದೆ. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

    340 ಮೀಟರ್ ವ್ಯಾಸದ ಅಪೋಫಿಸ್ ಕ್ಷುದ್ರಗ್ರಹ ಭೀತಿ ಮೂಡಿಸುವಷ್ಟು ದೊಡ್ಡದಲ್ಲವಾದರೂ ಅದರ ಶಕ್ತಿ ಅಪಾರವಾದುದು ಎಂದು ಹೇಳಲಾಗಿದೆ. ಇತ್ತೀಚಿನ ಇತಿಹಾಸದಲ್ಲಿ ಇಷ್ಟು ಶಕ್ತಿಶಾಲಿ ಕ್ಷುದ್ರಗ್ರಹ ಭೂಮಿಗೆ ಇಷ್ಟು ಸಮೀಪದಲ್ಲಿ ಹಾದು ಹೋಗುತ್ತಿರುವುದು ಇದೇ ಮೊದಲು. ಸದ್ಯ ಇದರ ಹಾದುಹೋಗುವಿಕೆಯಿಂದ ಭೂಮಿಗೆ ಅಥವಾ ಉಪಗ್ರಹಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಬಳಕೆದಾರರಿಗೆ 5ಜಿಬಿ ಉಚಿತ ಡೇಟಾ