Tag: nuclear base

  • ಉತ್ತರ ಕೊರಿಯಾ ಅಧ್ಯಕ್ಷನ ಹುಚ್ಚು ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರು ಬಲಿ

    ಉತ್ತರ ಕೊರಿಯಾ ಅಧ್ಯಕ್ಷನ ಹುಚ್ಚು ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರು ಬಲಿ

    ಟೋಕಿಯೋ: ಇಡೀ ವಿಶ್ವವನ್ನೇ ಬೆದರಿಸಲು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಪದೇ ಪದೇ ನಡೆಸುತ್ತಿರುವ ಹುಚ್ಚಾಟದ ಪರಮಾಣು ಬಾಂಬ್ ಪರೀಕ್ಷೆಗೆ 200 ಮಂದಿ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ.

    ಅಕ್ಟೋಬರ್ 10 ರಂದು ಉತ್ತರ ಕೊರಿಯಾ ಪುಂಗ್ಯೆ-ಹಿ ಪರಮಾಣು ಪರೀಕ್ಷಾ ಸ್ಥಳದ ಬಳಿ 23 ಕಿ.ಮೀ ನೆಲದಾಳದಲ್ಲಿ ಉತ್ತರ ಕೊರಿಯಾ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು. ಇದಾದ ಕೆಲ ದಿನಗಳ ಬಳಿಕ ಅಲ್ಲಿ ಸುರಂಗ ಕುಸಿದಿದ್ದು ಈ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಜಪಾನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಸುರಂಗ ಕುಸಿದು ಆರಂಭದಲ್ಲೇ 100 ಜನ ಮೃತಪಟ್ಟಿದ್ದರೆ, ನಂತರ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ 100 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭೂಮಿಯೊಳಗಡೆ ನಡೆಸಿರುವ ಈ ಅಣ್ವಸ್ತ್ರ ಪರೀಕ್ಷೆಯಿಂದ ಬೆಟ್ಟಗುಡ್ಡಗಳು ಅಲುಗಾಡಿದರ ಪರಿಣಾಮ ಸುರಂಗ ಕುಸಿದು ಬಿದ್ದಿದೆ ಎಂದು ಉಪಗ್ರಹ ಚಿತ್ರಗಳು ತಿಳಿಸಿವೆ. ಅಷ್ಟೇ ಅಲ್ಲದೇ ವಿಕಿರಣಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಪರಮಾಣು ಬಾಂಬ್ ಪರೀಕ್ಷೆಯಿಂದ ಉಂಟಾದ ಭೂಕಂಪದ ತೀವ್ರತೆ ಎಷ್ಟಿತ್ತು ಎಂದರೆ ರಿಕ್ಟರ್ ಮಾಪನದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿತ್ತು. ಎರಡನೇ ಮಹಾ ಯುದ್ಧದಲ್ಲಿ ಜಪಾನ್ ಮೇಲೆ ಅಮೆರಿಕ ಪ್ರಯೋಗಿಸಿದ ಅಣು ಬಾಂಬ್ ಗಿಂತ ಐದು ಪಟ್ಟು ಹೆಚ್ಚು ಹೆಚ್ಚಿನ ಶಕ್ತಿಯನ್ನು ಈ ಬಾಂಬ್ ಹೊಂದಿತ್ತು ಎಂದು ವರದಿ ಮಾಡಿದೆ.

    ಇದನ್ನೂ ಓದಿ: ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!