Tag: NSDL

  • ಭಾಷಣದ ವೇಳೆ ನೀರು ಕೇಳಿದ್ದ ಅಧಿಕಾರಿಯ ನೆರವಿಗೆ ಬಂದ ನಿರ್ಮಲಾ ಸೀತಾರಾಮನ್

    ಭಾಷಣದ ವೇಳೆ ನೀರು ಕೇಳಿದ್ದ ಅಧಿಕಾರಿಯ ನೆರವಿಗೆ ಬಂದ ನಿರ್ಮಲಾ ಸೀತಾರಾಮನ್

    ಮುಂಬೈ: ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ನ್ಯಾಶನಲ್ ಸೆಕ್ಯೂರಿಟಿಸ್ ಡಿ ಪಾಸಿಟರಿ ಲಿಮಿಟೆಡ್ (ಎನ್‍ಎಸ್‍ಡಿಎಲ್) ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀರು ನೀಡಿದ ವೀಡಿಯೋ ವೈರಲ್ ಆಗುತ್ತಿದೆ.

    ಕಾರ್ಯಕ್ರಮದ ವೇಳೆ ಎನ್‍ಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕಿ ನೀರು ನೀಡುವಂತೆ ಅಲ್ಲಿದ್ದ ಸಿಬ್ಬಂದಿಗೆ ಸನ್ನೆ ಮಾಡಿದ್ದರು. ವೇದಿಕೆಯಲ್ಲೇ ಇದ್ದ ನಿರ್ಮಲಾ ಸೀತಾರಾಮನ್ ಅವರೇ ಸ್ವತಃ ಬಂದು ಅವರಿಗೆ ನೀರಿನ ಬಾಟಲಿ ನೀಡಿದ್ದಾರೆ. ವೀಡಿಯೋದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪದ್ಮಜಾ ಅವರಿಗೆ ನೀರು ನೀಡುತ್ತಿದ್ದಂತೆ ಸಭಿಕರು ಚಪ್ಪಾಳೆಯನ್ನು ತಟ್ಟುತ್ತಾರೆ. ಅಷ್ಟೇ ಅಲ್ಲದೇ ಪದ್ಮಜಾ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದವನ್ನು ತಿಳಿಸಿದರು.

    ಈ ವೀಡಿಯೋವನ್ನು ಕೇಂದ್ರ ಸಚಿವ ಧಮೇಂದ್ರ ಪ್ರಧಾನ ಹಂಚಿಕೊಂಡಿದ್ದು, ವಿತ್ತ ಸಚಿವ ಮಾಡಿದ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಮುಂಬೈನಲ್ಲಿ ನಡೆದ ಎನ್‍ಎಸ್‍ಡಿಎಲ್‍ನ ಬೆಳ್ಳಿಹಬ್ಬದ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಎನ್‍ಎಸ್‍ಡಿಎಲ್‍ನ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಮಾರ್ಕೆಟ್ ಕಾ ಏಕಲವ್ಯಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್