Tag: nrpura

  • ಚಿಕ್ಕಮಗಳೂರು | ಎನ್‍.ಆರ್‌ಪುರ ಪೊಲೀಸ್ ಜೀಪಿಗೆ ಬಿತ್ತು ದಂಡ

    ಚಿಕ್ಕಮಗಳೂರು | ಎನ್‍.ಆರ್‌ಪುರ ಪೊಲೀಸ್ ಜೀಪಿಗೆ ಬಿತ್ತು ದಂಡ

    ಚಿಕ್ಕಮಗಳೂರು: ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಎನ್‍ಆರ್ ಪುರ ಠಾಣೆಯ ಪೊಲೀಸ್ ಜೀಪಿಗೆ ಕೊಪ್ಪದ ಪೊಲೀಸರು ದಂಡ ವಿಧಿಸಿದ್ದಾರೆ.

    ಎನ್‍ಆರ್ ಪುರ ಠಾಣೆಯ ಸಿಪಿಐ ಜೀಪು ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ವಾಹನ ಲಾಕ್ ಮಾಡಿದ್ದರು. ಬಳಿಕ ಪಿಎಸ್‍ಐ 500 ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಕೊಲೆ – ಕಿಲಾಡಿ ಸೊಸೆ, ಪ್ರಿಯಕರ ಅರೆಸ್ಟ್

    500 ದಂಡ ಕಟ್ಟಿ ಚಾಲಕ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕೊಪ್ಪ ಪಿಎಸ್‍ಐ ಬಸವರಾಜ್ ಕಾರ್ಯಕ್ಕೆ ಚಿಕ್ಕಮಗಳೂರು ಜನ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಪಿಎಸ್‍ಐ ಸಾರಿದ್ದಾರೆ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ: ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

  • ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

    ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

    ಚಿಕ್ಕಮಗಳೂರು: ಎನ್.ಆರ್.ಪುರ (NRPura) ತಾಲೂಕಿನ ಮೆಣಸೂರು ರಾವೂರು ಕ್ಯಾಂಪಿನ ಜನ, ಸ್ಮಶಾನವಿಲ್ಲದೇ ಮೃತದೇಹವನ್ನು ತೆಪ್ಪದಲ್ಲಿ ಕೊಂಡೊಯ್ದು ಭದ್ರಾ ಹಿನ್ನೀರಿನ (Bhadra River) ನಡುಗಡ್ಡೆಯಲ್ಲಿ ಶವಸಂಸ್ಕಾರ ನಡೆಸಿದ್ದಾರೆ.

    ರಾವೂರು ಕ್ಯಾಂಪಿನಲ್ಲಿ ಶಿಳ್ಳೆಕ್ಯಾತ ಜನಾಂಗಕ್ಕೆ ಸೇರಿದ 150ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ 600ಕ್ಕೂ ಹೆಚ್ಚು ಜನರಿದ್ದಾರೆ. ರಾವೂರಿನ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಭದ್ರಾ ಹಿನ್ನೀರಿನ ಮಧ್ಯೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸುಮಾರು 1 ಕಿ.ಮೀ. ನದಿ ಮಧ್ಯೆ ತೆಪ್ಪದಲ್ಲಿ ಕೊಂಡೊಯ್ದು ನದಿ ಮಧ್ಯೆಯ ನಡುಗಡ್ಡೆಯಲ್ಲಿ ಶವಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಪ್ಪನನ್ನೇ ಕೊಂದ – ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿ ಲಾಕ್ ಆದ ಮಗ

    ಮೃತದೇಹ ಹೂಳಲು ಗುಂಡಿ ತೆಗೆದಾಗಲೂ ಇಲ್ಲಿ ನೀರು ಬರುತ್ತದೆ. ಆಗ ಗುಂಡಿಯಲ್ಲಿರೋ ನೀರನ್ನ ತೆಗೆದು ಕೆಳಗಡೆ ಸೊಪ್ಪು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಕೆಲವೊಮ್ಮೆ ಹಿಂದೆ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲೇ ಗುಂಡಿ ತೆಗೆದಿರುವಂತಹಾ ಉದಾಹರಣೆಯೂ ಇದೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆ ಹಿಂದೆಯೇ ಬರುತ್ತೆ. ಬೇಸಿಗೆಯಲ್ಲಿ ನೀರು ಇರೋದಿಲ್ಲ ಆಗ ಭದ್ರಾ ಹಿನ್ನೀರಿನ ಮಧ್ಯೆಯೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆಯವರೆಗೂ ಬರುತ್ತದೆ. ಆಗ ತೆಪ್ಪ ಬಳಸಿ ನಡುಗಡ್ಡೆಗೆ ತೆರಳಿ ಅಂತ್ಯಸಂಸ್ಕಾರ ಮಾಡುತ್ತಾರೆ. ರಾವೂರು ಕ್ಯಾಂಪಿನ ಈ ಸ್ಥಿತಿಗೆ ಎರಡು ದಶಕಗಳ ಇತಿಹಾಸವಿದೆ.

    ಸ್ಮಶಾನಕ್ಕಾಗಿ 20 ವರ್ಷಗಳಿಂದ ತಾಲೂಕು ಆಡಳಿತ, ಶಾಸಕರು, ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಈವರೆಗೂ ಯಾರೂ ಕೂಡ ಇವರ ಮನವಿಗೆ ಸ್ಪಂದಿಸಿಲ್ಲ. ಇದನ್ನೂ ಓದಿ: ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

  • ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ಚಿಕ್ಕಮಗಳೂರು: ಕಾಡಾನೆ (Elephant) ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಘಟನೆ ಎನ್.ಆರ್‌ ಪುರ (NRpura) ತಾಲೂಕಿನ ಬನ್ನೂರು ಬಳಿ ನಡೆದಿದೆ.

    ಮೃತ ಮಹಿಳೆಯನ್ನು ದಾವಣಗೆರೆಯ (Davanagere) ಹೊನ್ನಾಳಿ ಮೂಲದ ಅನಿತಾ (25) ಎಂದು ಗುರುತಿಸಲಾಗಿದೆ. ಅವರು ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಆಗುವಾಗ ಆನೆ ದಾಳಿ ಮಾಡಿದೆ.

    ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ಮಕ್ಕಳಾದ ಬಳಿಕ ಮತ್ತೊಂದು ಲವ್‌ – ಸುಪಾರಿ ನೀಡಿ ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಂದಳು!

    2 ಮಕ್ಕಳಾದ ಬಳಿಕ ಮತ್ತೊಂದು ಲವ್‌ – ಸುಪಾರಿ ನೀಡಿ ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಂದಳು!

    ಚಿಕ್ಕಮಗಳೂರು: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪ್ರೀತಿಸಿ (Love) ಮದುವೆಯಾದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಎನ್‌ಆರ್‌ ಪುರ (NR Pura) ತಾಲೂಕಿನ ಕರಗುಂದ ಬಳಿ ನಡೆದಿದೆ.

    ಎನ್ಆರ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಎನ್‌ಆರ್‌ಪುರ ಪಟ್ಟಣದ ಸುದರ್ಶನ್‌ ಎಂದು ಗುರುತಿಸಲಾಗಿದೆ. ಸುದರ್ಶನ್‌ ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್.ಶಿವರಾಜ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ಆಸ್ತಿ ಕೊಡಲೇಬೇಡಿ, ಸಾಯುವ ಹಿಂದಿನ ದಿನ ಸ್ನೇಹಿತರಿಗೆ GPay- ಕಿರಿಮಗಳ ಕೈಯಲ್ಲಿ ಡೆತ್‍ನೋಟ್ ಬರೆಸಿದ್ದ ತಂದೆ

    ಕಡುಹಿನಬೈಲು ಗ್ರಾಮದ ಕರುಗುಂದ ಬಸ್‌ ನಿಲ್ದಾಣದ ಸಮೀಪ ಸುದರ್ಶನ್ ಶವ ಶನಿವಾರ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತನ ಪತ್ನಿ ಕಮಲ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2 ತನಿಖಾ ತಂಡ ರಚಿಸಿದ್ದರು. ತನಿಖೆ ವೇಳೆ, ಕಮಲ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

    ಕಮಲ ಹತ್ತು ವರ್ಷಗಳ ಹಿಂದೆ ಸುದರ್ಶನ್ ಜೊತೆ ಮದುವೆಯಾಗಿದ್ದಳು. ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣ ಕಮಲ ಶಿವರಾಜ್‌ ಜೊತೆ ಸಂಬಂಧ ಹೊಂದಿದ್ದಳು. ಇದಕ್ಕೆ ಪತಿ ಸುದರ್ಶನ್ ಅಡ್ಡಿಯಾಗುತ್ತಾನೆಂದು, ಶಿವರಾಜ್ ಜೊತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿಸಿದ್ದಳು. ಅಲ್ಲದೇ ಹತ್ಯೆಗೂ ಮುನ್ನ ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಸೇರಿಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

    ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಬಂಧಿತರಿಂದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಒನ್‌ವೇಗೆ ನುಗ್ಗಿದ ಕಾರಿನ ಚಾಲಕ – ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸರಿಗೆ ಗಾಯ

  • ಚಿಕ್ಕಮಗಳೂರು | ಕಾಡಾನೆ ದಾಳಿಗೆ ರೈತ ಬಲಿ – ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು | ಕಾಡಾನೆ ದಾಳಿಗೆ ರೈತ ಬಲಿ – ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು: ಕಾಡಾನೆ (Elephant) ದಾಳಿಯಿಂದ ರೈತನೊಬ್ಬ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ (N.R Pura) ತಾಲೂಕಿನ ಸೀತೂರು ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕೆರೆಗದ್ದೆ ಗ್ರಾಮದ ಉಮೇಶ್ (56) ಎಂದು ಗುರುತಿಸಲಾಗಿದೆ. ಸೀತೂರು ಗ್ರಾಮಕ್ಕೆ ಮೂರು ಕಾಡಾನೆಗಳು ಬಂದಿದ್ದು, ಹೊಲ-ಗದ್ದೆ-ತೋಟಗಳ ಮೇಲೆ ದಾಂಧಲೆ ಮಾಡುತ್ತಿದ್ದವು. ಆನೆ ಹಾವಳಿಯಿಂದ ಕಂಗಾಲದ ರೈತರು ಆನೆಗಳನ್ನ ಓಡಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

    ಆನೆಗಳು ಕಂಡ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ (Forest Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರೈತನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾಡಾನೆಗಳನ್ನು ಜಮೀನುಗಳಿಂದ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗುರುಳಿದ ಮರ: ಚಿಕ್ಕಮಗಳೂರು-ಮಂಗಳೂರು ಮಾರ್ಗ ಬಂದ್

    ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗುರುಳಿದ ಮರ: ಚಿಕ್ಕಮಗಳೂರು-ಮಂಗಳೂರು ಮಾರ್ಗ ಬಂದ್

    ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆಯ (Rain) ಅಬ್ಬರ ಹೆಚ್ಚಾಗಿದ್ದು, ಭಾರೀ ಗಾಳಿ ಮಳೆಯಿಂದ ಚಾರ್ಮಾಡಿ ಘಾಟಿಯ (Sringeri) ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ.

    ರಸ್ತೆ ಬಂದ್ ಆಗಿರುವ ಪರಿಣಾಮ ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಮರ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.

    ಮಹಲ್ಗೋಡು ಸೇತುವೆ ಜಲಾವೃತ
    ಮಳೆಯ ಅಬ್ಬರದಿಂದ ಎನ್‌ಆರ್‌ಪುರ (NRPura) ತಾಲೂಕಿನ ಮಹಲ್ಗೋಡು ಸೇತುವೆ ಸಹ ಮುಳುಗಡೆಯಾಗಿದೆ. ಪರಿಣಾಮ ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಸೇತುವೆ ಜಾಲಾವೃತವಾಗಿದ್ದು ಜನ ಪರದಾಡುವಂತಾಗಿದೆ.

    ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಬಂದ್
    ಇನ್ನೂ ಶೃಂಗೇರಿಯ (Sringeri) ನೆಮ್ಮಾರು ಬಳಿ ಹೆದ್ದಾರಿ 169ರಲ್ಲಿ ತುಂಗಾ ನದಿ ಸೇತುವೆ ಮೇಲೆ ಹರಿಯುತ್ತಿದ್ದು, ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಇನ್ನೂ ನದಿಯ ಆರ್ಭಟ ಕಂಡು ವಾಹನ ಚಾಲಕರು ಭಯಗೊಂಡು ವಾಪಸ್ಸಾಗಿದ್ದಾರೆ.

  • ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ 30 ಮಂಗಗಳನ್ನು ಹತ್ಯೆಗೈದ ದುಷ್ಕರ್ಮಿಗಳು

    ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ 30 ಮಂಗಗಳನ್ನು ಹತ್ಯೆಗೈದ ದುಷ್ಕರ್ಮಿಗಳು

    ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು (Monkeys) ಹತ್ಯೆಗೈದ ಅಮಾನವೀಯ ಕೃತ್ಯ ಎನ್‌ಆರ್‌ಪುರದ (NRPura) ದ್ಯಾವಣ ಬಳಿ ನಡೆದಿದೆ.

    ದುಷ್ಕರ್ಮಿಗಳು ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ, ಬಳಿಕ ಅದನ್ನು ತಿಂದ ಮಂಗಗಳು ಎಚ್ಚರ ತಪ್ಪಿದಾಗ, ಅವುಗಳ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಸಾವಿಗೀಡಾದ 30 ಮಂಗಗಳ ತಲೆಯ ಮೇಲೂ ಒಂದೇ ರೀತಿಯ ಗಾಯಗಳಾಗಿವೆ. 16 ಗಂಡು, 14 ಹೆಣ್ಣು ಹಾಗೂ 4 ಮರಿ ಮಂಗಗಳನ್ನು ಹತ್ಯೆ ಮಾಡಿದ್ದಾರೆ. ಬಳಿಕ ದ್ಯಾವಣ ಬಳಿಯ ರಸ್ತೆಯಲ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಾಲಕ, ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು – ಮೂವರ ದುರ್ಮರಣ!

    ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪರಿಸ್ಥಿತಿ ಬಳಸಿಕೊಂಡು ಭಯೋತ್ಪಾದನೆ ಹರಡಲು ಯತ್ನ – ಆರೋಪಿ ಅರೆಸ್ಟ್

  • ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎನ್‍ಆರ್‍ಪುರ ಠಾಣೆಯ ಪಿಎಸ್‍ಐ

    ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಎನ್‍ಆರ್‍ಪುರ ಠಾಣೆಯ ಪಿಎಸ್‍ಐ

    ಚಿಕ್ಕಮಗಳೂರು: ಆರೋಪಿಗಳನ್ನು ಠಾಣೆಯಿಂದ ಬಿಟ್ಟು ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಶೋಕಾಸ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಎನ್‍ಆರ್‍ಪುರ ಠಾಣೆ ಪಿಎಸ್‍ಐ ಸುನೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಭೇಟಿ ನೀಡಿ ಮನವೊಲಿಸಿದ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಣ್ಣಾಮಲೈ ಶುಕ್ರವಾರ ಮುಂಜಾನೆ 4.30ರವರೆಗೂ ಎನ್.ಆರ್.ಪುರದಲ್ಲೇ ಇದ್ದು, ಪರಿಸ್ಥಿತಿಯನ್ನು ನಿಭಾಯಿಸಿದರು.

    ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದರು. ಠಾಣೆ ಪೊಲೀಸರು ಆರೋಪಿಗಳನ್ನು ಬಿಟ್ಟುಕಳುಹಿಸಿ, ನಂತರ ಪ್ರಕರಣ ದಾಖಲಿಸಿದ್ದರು. ಎಎಸ್ಪಿ ಅಣ್ಣಪ್ಪನಾಯ್ಕ ಅವರಿಗೆ ತನಿಖೆ ನಡೆಸಲು ಎಸ್ಪಿ ಸೂಚಿಸಿದ್ದರು.

    ಪ್ರಕರಣ ನಿರ್ವಹಿಸುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಜಗನ್ನಾಥ ಮತ್ತು ಪಿಎಸ್‍ಐ ಸುನೀತಾ ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಎಸ್ಪಿ ಇಬ್ಬರಿಗೂ ನೋಟಿಸ್ ನೀಡಿದ್ದರು. ತಪ್ಪು ಮಾಡಿರುವುದು ಸಾಬೀತಾದರೆ ಇಬ್ಬರ ವಿರುದ್ಧವೂ ಕ್ರಮಜರುಗಿಸುವ ಅಧಿಕಾರ ತನಗೆ ಇದೆ ಎಂದು ಎಸ್ಪಿ ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

    ಅಮಾನತು ಆಗುವ ಭೀತಿಯಲ್ಲಿ ಪಿಎಸ್ ಐ ಆತ್ಮಹತ್ಯೆಗೆ ಯತ್ನಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.