Tag: November

  • ನವೆಂಬರ್ 1ಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಯಶ್?: ಟೈಟಲ್-ಟೀಸರ್ ರಿಲೀಸ್

    ನವೆಂಬರ್ 1ಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಯಶ್?: ಟೈಟಲ್-ಟೀಸರ್ ರಿಲೀಸ್

    ವೆಂಬರ್ (November) ಒಂದಕ್ಕೆ ಯಶ್ (Yash) ನಟನೆಯ ಹೊಸ ಸಿನಿಮಾದ (New Movie) ಅಪ್ ಡೇಟ್ ಸಿಗಲಿದೆ ಎನ್ನುವ ಮತ್ತೊಂದು ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಚಿತ್ರದ ಟೈಟಲ್ (Title) ಮತ್ತು ಟೀಸರ್ ಅನ್ನು ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.

    ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ನವೆಂಬರ್ 1ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.

    ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.

     

    ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon)  ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ

    ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ

    ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿರುವ ಗಂಧದ ಗುಡಿ ಪ್ರಾಜೆಕ್ಟ್ ಬಗ್ಗೆ ಹೊಸದೊಂದು ಸುದ್ದಿ ಬಂದಿದೆ. ಅಪ್ಪು ತುಂಬಾ ಇಷ್ಟಪಟ್ಟು ಮಾಡಿರುವ ಡಾಕ್ಯುಮೆಂಟರಿ ಇದಾಗಿದ್ದು, ಇದಕ್ಕಾಗಿ ಅವರು ಹರಸಾಹಸವನ್ನೇ ಪಟ್ಟಿದ್ದಾರೆ. ಈ ಡಾಕ್ಯುಮೆಂಟರಿಯ ಟ್ರೈಲರ್ ಕಳೆದ ವರ್ಷ ನವೆಂಬರ್ ಒಂದರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನ ಪುನೀತ್ ಅಗಲಿದರು. ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ಗಂಧದ ಗುಡಿ ಟ್ರೈಲರ್ ಕೊಡಬೇಕು ಎನ್ನುವ ಅವರ ಕನಸು ಇದೀಗ ಈಡೇರಲಿದೆ.

    ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಮಾಡಬೇಕೆನ್ನುವುದು ಅಪ್ಪು ಕನಸಾಗಿದ್ದರಿಂದ ಅದೇ ತಿಂಗಳು ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ ನಲ್ಲಿ ನೂರಾರು ಥಿಯೇಟರ್ ನಲ್ಲಿ ಈ ಡಾಕ್ಯುಮೆಂಟರಿ ತೆರೆ ಕಾಣಲಿದೆ. ಥಿಯೇಟರ್ ನಲ್ಲೇ ಇದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಕೂಡ ಆಗಿತ್ತು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಈ ಡಾಕ್ಯುಮೆಂಟರಿಗಾಗಿ ಅನೇಕ ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಕಾಡು ಮೇಡು ಸುತ್ತಿದ್ದರು. ಸಮುದ್ರದಾಳಕ್ಕೂ ಇಳಿದಿದ್ದರು. ಮುರುಡೇಶ್ವರ ಸೇರಿದಂತೆ ಹಲವು ಕಡೆ ಈ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಿದ್ದರು. ಇದೊಂದು ರೀತಿಯಲ್ಲೇ ಸಿನಿಮಾದ ಮಾದರಿಯಲ್ಲೇ ಶೂಟ್ ಆಗಿರುವುದರಿಂದ ಒಂದು ಗಂಟೆಗೂ ಅಧಿಕ ಸಮಯದ ಡಾಕ್ಯುಮೆಂಟರಿ ಇದಾಗಿದೆಯಂತೆ. ಅಲ್ಲದೇ, ಉನ್ನತ ತಂತ್ರಜ್ಞಾನವನ್ನು ಇದಕ್ಕಾಗಿ ಬಳಕೆ ಮಾಡಲಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾಗೆ ಮೋಕ್ಷ ಕಾಲ – ಯಾವ್ಯಾವ ರಾಜ್ಯದಲ್ಲಿ ಎಷ್ಟು ತಿಂಗಳು ಇರುತ್ತೆ ಸೋಂಕು?

    ಕೊರೊನಾಗೆ ಮೋಕ್ಷ ಕಾಲ – ಯಾವ್ಯಾವ ರಾಜ್ಯದಲ್ಲಿ ಎಷ್ಟು ತಿಂಗಳು ಇರುತ್ತೆ ಸೋಂಕು?

    ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾಗೆ ಅಂತ್ಯಕಾಲ ಹತ್ತಿರ ಬರುತ್ತಿದೆ. ಚೀನಿ ವೈರಸ್‍ಗೆ ಈ ವರ್ಷದ ಅಂತ್ಯಕ್ಕೆ ಭಾರತದಲ್ಲಿ ಮೋಕ್ಷ ಸಿಗಲಿದೆ.

    2019 ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ನಂತರ ಇಡೀ ವಿಶ್ವವನ್ನೇ ಕಿತ್ತು ತಿನ್ನುವ ಕ್ರಿಮಿಯಾಗಿ ಹೊರ ಹೊಮ್ಮಿದೆ. ಈ ಕೊರೊನಾದಿಂದ ಭಾರತವೂ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಟೈಮ್ಸ್ ನೆಟ್‌ವರ್ಕ್ ಮತ್ತು ಪ್ರೊಟಿವಿಟಿ ದತ್ತಾಂಶ ಸಂಗ್ರಹ ಸಂಸ್ಥೆಯ ಮಾಹಿತಿಯ ಪ್ರಕಾರ ಕೊರೊನಾ ನವೆಂಬರ್ ವೇಳೆಗೆ ಅಂತ್ಯವಾಗಲಿದೆ ಎಂದು ಹೇಳಿದೆ.

    ಯಾವ್ಯಾವ ರಾಜ್ಯದಲ್ಲಿ ಯಾವಾಗ ಅಂತ್ಯ?
    1. ಕರ್ನಾಟಕದಲ್ಲಿ ಆಗಸ್ಟ್ 16ರ ವೇಳೆಗೆ ಗರಿಷ್ಠವಾಗಿ, ನವೆಂಬರ್ 3ರ ನಂತರ ಕೊರೊನಾ ಮುಕ್ತ.
    2. ಮಹಾರಾಷ್ಟ್ರದಲ್ಲಿ ಆಗಸ್ಟ್ 14ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 26ರ ವೇಳೆಗೆ ಕೊನೆ ಸಾಧ್ಯತೆ.
    3. ತಮಿಳುನಾಡಿನಲ್ಲಿ ಆಗಸ್ಟ್ 24ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 17ರ ವೇಳೆಗೆ ಕೊನೆ ಸಂಭವ.
    4. ದೆಹಲಿ ಸೆಪ್ಟೆಂಬರ್ 22ರ ವೇಳೆಗೆ ಕೊರೋನಾ ಕೊನೆಗೊಳ್ಳುವ ನಿರೀಕ್ಷೆ.


    5. ಕೇರಳದಲ್ಲಿ ಆಗಸ್ಟ್ 10ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 15ರ ವೇಳೆಗೆ ಕೊನೆ ಸಾಧ್ಯತೆ.
    6. ತೆಲಂಗಾಣದಲ್ಲಿ ಆಗಸ್ಟ್ 15ರ ವೇಳೆಗೆ ಹೆಚ್ಚಾಗಿ ಅಕ್ಟೋಬರ್ 17ರ ವೇಳೆಗೆ ಸೋಂಕು ಕ್ಷೀಣಿಸಬಹುದು.
    7. ಉತ್ತರ ಪ್ರದೇಶದಲ್ಲಿ ಆಗಸ್ಟ್ 21ರ ವೇಳೆಗೆ ಏರಿಕೆಯಾಗಿ ಅಕ್ಟೋಬರ್ 15 ರಂದು ಕೊನೆಗೊಳ್ಳಬಹುದು.
    8. ರಾಜಸ್ಥಾನದಲ್ಲಿ ಆಗಸ್ಟ್ 15ಕ್ಕೆ ಗರಿಷ್ಠವಾಗಿ, ಅಕ್ಟೋಬರ್ 10ರ ವೇಳೆಗೆ ಸೋಂಕು ಅಂತ್ಯ ಸಾಧ್ಯತೆ.
    9. ಆಂಧ್ರ ಪ್ರದೇಶದಲ್ಲಿ ಆಗಸ್ಟ್ 23ರಂದು ಗರಿಷ್ಠಗೊಂಡು, ಅಕ್ಟೋಬರ್ 28 ರಂದು ಸೋಂಕು ಕೊನೆಗೊಳ್ಳಬಹುದು.
    10. ಮಧ್ಯ ಪ್ರದೇಶ ಆಗಸ್ಟ್ 13 ರಂದು ಗರಿಷ್ಠಗೊಳ್ಳುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ 30ರ ವೇಳೆಗೆ ಕೊನೆ ಸಾಧ್ಯತೆ.
    11. ಗುಜರಾತ್‍ನಲ್ಲಿ ಆಗಸ್ಟ್ 14ರಂದು ಉತ್ತುಂಗಕ್ಕೇರಿ, ಅಕ್ಟೋಬರ್ 12ರ ವೇಳೆಗೆ ಅಂತ್ಯವಾಗಬಹುದು.
    12. ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 12ರಂದು ಗರಿಷ್ಠಗೊಳ್ಳುವ ನಿರೀಕ್ಷೆ ಇದ್ದು, ಅಕ್ಟೋಬರ್ 7ರ ವೇಳೆಗೆ ಕೊನೆಗೊಳ್ಳಬಹುದು.

  • ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ – ಬೈಕ್ ರೈಡರ್ಸ್ ತಂಡದಿಂದ ಅಭಿಯಾನ

    ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ – ಬೈಕ್ ರೈಡರ್ಸ್ ತಂಡದಿಂದ ಅಭಿಯಾನ

    ಬೆಂಗಳೂರು: ನವೆಂಬರ್ ತಿಂಗಳಿನಲ್ಲಿ ಶೇವ್ ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸಲು ಬೆಂಗಳೂರಿನ ಬೈಕ್ ರೈಡರ್ಸ್ ತಂಡ ಮುಂದಾಗಿದೆ.

    ‘ಬ್ರೋಸ್ ಅನ್ ವೀಲ್ಸ್’ ಹೆಸರಿನ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾ,  ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗುವುದು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.

    ಈ ತಿಂಗಳು ಯಾರೂ ಶೇವ್ ಮಾಡ್ಬೇಡಿ. ನಿಮ್ಮ ಶೇವ್ ಗೆ ಬಳಸುವ ಹಣವನ್ನು ಮಿಲ್ಯಾಪ್ ಮೂಲಕ ಬೆಂಗಳೂರಿನ ಕುಂದನಳ್ಳಿಯಲ್ಲಿರುವ ಕರುಣಾಶ್ರಯದಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ತಲುಪಿಸಲಾಗುತ್ತದೆ. ಕ್ಯಾನ್ಸರ್ ಕೊನೆಯ ಸ್ಟೇಜ್ ನಲ್ಲಿರುವವರಿಗೆ ನೀಡಲಾಗುತ್ತದೆ ಎಂದು ತಂಡ ಹೇಳಿದೆ.

    ತಂಡ ೨ ಲಕ್ಷ ರೂ. ಹಣವನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದು, 4  ದಿನದಲ್ಲಿ 14 ಸಾವಿರ ರೂ. ಸಂಗ್ರಹಗೊಂಡಿದೆ. ನವೆಂಬರ್ 30 ರವರೆಗೆ ಜನರು ಹಣವನ್ನು ಹಾಕಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ – www.milaap.org/fundraisers/support-no-shave-november

  • ನವೆಂಬರ್ ನಲ್ಲಿ ಹಸೆಮಣೆ ಏರಲು ತಯಾರಾದ ಧ್ರುವ ಸರ್ಜಾ

    ನವೆಂಬರ್ ನಲ್ಲಿ ಹಸೆಮಣೆ ಏರಲು ತಯಾರಾದ ಧ್ರುವ ಸರ್ಜಾ

    ಬೆಂಗಳೂರು: 2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮತ್ತು ಪ್ರೇರಣಾ ಜೋಡಿ ಈ ವರ್ಷ ನವೆಂಬರ್ ನಲ್ಲಿ ಮದುವೆಯಾಗಲು ಸಿದ್ಧವಾಗಿದೆ.

    ಈ ಜೋಡಿ ನವೆಂಬರ್ 23 ಮತ್ತು 24ರಂದು ವಿವಾಹವಾಗುತ್ತಿದ್ದು, ದಿನಾಂಕವನ್ನು ಗುರುಹಿರಿಯರು ನಿಶ್ಚಯಿಸಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ಸಾಗುತ್ತಿದ್ದು, ಧ್ರುವ ಸದ್ಯ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಬಳಿಕ ಮದುವೆಗಾಗಿ ತಮ್ಮ ಲುಕ್ ಬದಲಾಯಿಸಿಕೊಳ್ಳಲಿದ್ದಾರೆ. ಈ ಮೂಲಕ ಧ್ರುವ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ.

    ಪೊಗರು ರೊಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.