Tag: Novak Djokovic

  • Wimbledon Final | ಪ್ರಶಸ್ತಿಗಾಗಿ ಅಲ್ಕರಾಜ್‌ Vs ಸಿನ್ನ‌ರ್ ನಡುವೆ ಕಾದಾಟ – ಹ್ಯಾಟ್ರಿಕ್‌ ಗೆಲ್ಲುವ ತವಕದಲ್ಲಿ ಅಲ್ಕರಾಜ್‌

    Wimbledon Final | ಪ್ರಶಸ್ತಿಗಾಗಿ ಅಲ್ಕರಾಜ್‌ Vs ಸಿನ್ನ‌ರ್ ನಡುವೆ ಕಾದಾಟ – ಹ್ಯಾಟ್ರಿಕ್‌ ಗೆಲ್ಲುವ ತವಕದಲ್ಲಿ ಅಲ್ಕರಾಜ್‌

    ಲಂಡನ್: ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿಂದು (Wimbledon Final) ಕಾರ್ಲೋಸ್ ಅಲ್ಕರಾಜ್‌ (Carlos Alcaraz) ಅವರು ಇದೇ ಮೊದಲ ಬಾರಿಗೆ ಫೈನಲ್‌ ತಲುಪಿರುವ ಜಾನಿಕ್ ಸಿನ್ನ‌ರ್ ಅವರನ್ನ ಎದುರಿಸಲಿದ್ದಾರೆ. ಪುರುಷರ ಟೆನ್ನಿಸ್‌ನಲ್ಲಿ ಉತ್ತುಂಗಕ್ಕೇರಲು ಇಬ್ಬರು ಯುವ ತಾರೆಗಳ ಪೈಪೋಟಿ ರಂಗೇರಿಸಲಿದೆ.

    ಲಂಡನ್‌ನಲ್ಲಿ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಫೈನಲ್‌ ಹಣಾಹಣಿ ನಡೆಯಲಿದ್ದು, ರಾತ್ರಿ 8:30ಕ್ಕೆ ಗೇಮ್‌ ಶುರುವಾಗಲಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ದಿಗ್ಗಜ ನೊವಾಕ್ ಜೊಕೊವಿಕ್‌ (Novak Djokovic) ಅವರನ್ನ ಮಣಿಸಿ 2 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದ ಅಲ್ಕರಾಜ್‌ ಸತತ 3ನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ತವಕದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಫೈನಲ್‌ ತಲುಪಿರುವ ಸಿನ್ನರ್‌ (Jannik Sinner) ಕೂಡ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡಿಗ ರಾಹುಲ್‌ ಆಕರ್ಷಕ ಶತಕ; ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ

    Carlos Alcaraz

    ಕೊನೆಯ 8 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಏಳನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ. 2024ರ ಬಳಿಕ ತಲಾ ಮೂರು ಪ್ರಮುಖ ಟೂರ್ನಿಗಳಲ್ಲಿ ಇವರಿಬ್ಬರು ಚಾಂಪಿಯನ್ ಆಗಿದ್ದಾರೆ. ಟೆನಿಸ್‌ನ ‘ಬಿಗ್ ತ್ರೀ’ ಎನಿಸಿದ್ದ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್, ಸ್ಪೇನ್‌ ರಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಪ್ರಾಬಲ್ಯದ ಯುಗ ಅಂತ್ಯಗೊಂಡಿದೆ. ಇದನ್ನೂ ಓದಿ: ಬೌಂಡರಿಯಿಂದಲೇ 196 ರನ್‌ – ವೇಗದ ತ್ರಿಶತಕ ಸಿಡಿಸಿ ದಾಖಲೆ ಬರೆದ ಮುಲ್ಡರ್

    ಸ್ಪೇನ್‌ನ ಅಲ್ಕರಾಜ್‌ ತಮ್ಮ ಮಿಂಚಿನ ಆಟದಿಂದ ಸೆಂಟರ್ ಕೋರ್ಟ್ ಪ್ರೇಕ್ಷಕರ ಹೃದಯ ಗೆದ್ದು ಶೋಮ್ಯಾನ್ ಎನಿಸಿದ್ದಾರೆ. ಇಟಲಿಯ ಸಿನ್ನರ್ ಅವರದ್ದು ಜೊಕೊವಿಚ್ ತದ್ರೂಪದ ಆಟ. ತೀಕ್ಷ್ಣ ಹೊಡೆತಗಳ ಜೊತೆ ಮೇಲುಗೈ ಅವಕಾಶಗಳನ್ನು ಅವರು ತಪ್ಪಿಸಿಕೊಳ್ಳುವುದೇ ವಿರಳ. ಇದನ್ನೂ ಓದಿ: ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ FIR – ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರ ಕ್ರಮ

    ಎರಡು ಬಾರಿಯ ಚಾಂಪಿಯನ್, 22 ವರ್ಷದ ಅಲ್ಕರಾಜ್ ಅವರು ಮೇಲ್ನೋಟಕ್ಕೆ ಭಾನುವಾರ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಸ್ಪೇನ್‌ನ ಆಟಗಾರ, ಇಟಲಿಯ ಆಟಗಾರನ ವಿರುದ್ಧ 12 ಮುಖಾಮುಖಿಗಳಲ್ಲಿ ಕೊನೆಯ ಐದರಲ್ಲಿ ಸೇರಿದಂತೆ ಎಂಟರಲ್ಲಿ ಜಯಗಳಿಸಿದ್ದಾರೆ. ಅಲ್ಕರಾಜ್‌ ಐದು ಗ್ರ್ಯಾಂಡ್‌ಸ್ಲಾಮ್‌ ಮತ್ತು 23 ವರ್ಷದ ಸಿನ್ನರ್ ಮೂರು ಟ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

  • Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

    Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

    ಲಂಡನ್: ಸತತ 10 ವರ್ಷಗಳ ಕಾಲ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ಗೆ ?(Novak Djokovic) ಸತತ 2ನೇ ಬಾರಿಗೆ ಸೋಲಾಗಿದೆ. ಕಾರ್ಲೋಸ್‌ ಅಲ್ಕರಾಜ್‌ (Carlos Alcaraz) ಮತ್ತೆ ಚಾಂಪಿಯನ್‌ ಆಗಿದ್ದಾರೆ.

    ಭಾನುವಾರ ಲಂಡನ್‌ನ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಸತತ 2ನೇ ಬಾರಿಗೆ ವಿಂಬಲ್ಟನ್‌ ಕಿರೀಟ (Wimbledon Crown) ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟರ್‌ಗೆ ಬಿಸಿಸಿಐನಿಂದ 1 ಕೋಟಿ ಆರ್ಥಿಕ ನೆರವು!

    ಕಳೆದ ವರ್ಷ ಸಹ ಅಲ್ಕರಾಜ್‌, ನೊವಾಕ್ ಜೊಕೊವಿಕ್‌ ಅವರನ್ನೇ ಮಣಿಸಿ ಚೊಚ್ಚಲ ವಿಂಬಲ್ಡನ್‌ ಕಿರೀಟಕ್ಕೆ ಮುತ್ತಿಟ್ಟಿದ್ದರು. ಈ ಬಾರಿಯೂ ಜೊಕೊವಿಕ್‌ ಅವರನ್ನೇ ಸೋಲಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ವಿಶೇಷ. 6-2, 6-2, 7-6 (7/4) ಸೆಟ್‌ಗಳಲ್ಲಿ ಮಣಿಸುವ ಮೂಲಕ ಚಾಂಪಿಯನ್‌ ಪಟ್ಟವನ್ನು ತಮ್ಮ ಹೆಸರಿನಲ್ಲೇ ಅಲ್ಕರಾಜ್‌ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    ಮೊದಲ ಎರಡು ಸುತ್ತಿನಲ್ಲಿ ಹಿಡಿತ ಸಾಧಿಸಿದ್ದ ಅಲ್ಕರಾಜ್‌ 6-2, 6-2 ಸೆಟ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರು. ಕೊನೆಯ ಸುತ್ತಿನಲ್ಲಿ ತೀವ್ರ ಪೈಪೋಟಿ ಹೊರತಾಗಿಯೂ 7-6 ಸೆಟ್‌ನಲ್ಲಿ ಜೊಕೊವಿಕ್‌ ಅವರನ್ನ ಸೋಲಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸಂಜು ಅಮೋಘ ಫಿಫ್ಟಿ, ಶಿವಂ ದುಬೆ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ; 4-1ರಲ್ಲಿ ಸರಣಿ ಗೆದ್ದ ಭಾರತ!

    3ನೇ ಗ್ರ್ಯಾಂಡ್‌ಸ್ಲಾಮ್‌ ಕಿರೀಟ:
    ಇದು ಅಲ್ಕರಾಜ್‌ ಗೆದ್ದ 3ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯೂ (Grand Slam Crown) ಸಹ ಆಗಿದೆ. 2022ರ ಯುಎಸ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದರು. ಬಳಿಕ 2023ರಲ್ಲಿ ಆಲ್ ಇಂಗ್ಲೆಂಡ್ ಟೆನ್ನಿಸ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಕ್‌ ವಿರುದ್ಧ 2ನೇ ಗ್ರ್ಯಾಂಡ್‌ಸ್ಲ್ಯಾಮ್‌ ಕಿರೀಟ ಗೆದ್ದುಕೊಂಡಿದ್ದರು.

  • ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!

    ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!

    ಲಂಡನ್: ಕಳೆದ 10 ವರ್ಷಗಳಿಂದ ವಿಂಬಲ್ಡನ್ (Wimbledon) ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ನನ್ನ (Novak Djokovic) ಸೋಲಿಸಿ ವಿಶ್ವ ಶ್ರೇಯಾಂಕ ಆಟಗಾರ ಕಾರ್ಲೊಸ್‌ ಅಲ್ಕರಾಝ್‌ (Carlos Alcaraz) ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ

    ಆಲ್ ಇಂಗ್ಲೆಂಡ್ ಟೆನ್ನಿಸ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ (ಜುಲೈ 16) ನಡೆದ ಹೈ-ವೋಲ್ಟೇಜ್ ಕಣದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, 20 ವರ್ಷದ ಯುವ ತಾರೆ ಕಾರ್ಲೊಸ್‌ ಅಲ್ಕರಾಝ್‌, 1-6, 7-6 (8-6), 6-1, 3-6, 6-4 ಅಂತರದ 5 ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೋವಿಕ್ ವಿರುದ್ಧ ಗೆಲುವು ಸಾಧಿಸಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇದು ಕಾರ್ಲೊಸ್‌ ಗೆದ್ದ 2ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯಾಗಿದೆ. ಈ ಹಿಂದೆ 2022 ಯುಎಸ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದರು.

    ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್‌ ಅಲ್ಕರಾಝ್‌ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನ್ನಿಸ್‌ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೋವಿಕ್, ಆಂಡಿ ಮರ್ರೆ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದನ್ನೂ ಓದಿ: Wimbledon 2023ː ಮಹಿಳಾ ಸಿಂಗಲ್ಸ್‌ ಗೆದ್ದು ಇತಿಹಾಸ ಬರೆದ ವಾಂಡ್ರೊಸೊವಾ

    ನೊವಾಕ್ ಜೊಕೊವಿಕ್‌ ವಿಂಬಲ್ಡನ್‌ನಲ್ಲಿ ಸತತ 5 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ (Grand Slam Crown) ಗೆದ್ದಿದ್ದಾರೆ. ಆದ್ರೆ ಕಳೆದ 10 ವರ್ಷಗಳಿಂದ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರ ನಾಗಿದ್ದ ಆರ್ಭಟಿಸಿದ್ದ ಜೊಕೊವಿಕ್, ವಿಂಬಲ್ಡನ್ ಫೈನಲ್ ನಲ್ಲಿ ಕಾರ್ಲೊಸ್‌ ಅಲ್ಕರಾಝ್‌ ವಿರುದ್ಧ ಸೋತು ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರ ಸತತ 7 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿಕೊಂಡಿದ್ದಾರೆ. ಇದನ್ನೂ ಓದಿ: Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

    ಬಾಯ್ತುಂಬ ಹೊಗಳಿದ ಜೊಕೊವಿಕ್‌:
    ವಿಂಬಲ್ಡನ್‌ ಫೈನಲ್‌ನಲ್ಲಿ ಸೋತ ಬಳಿಕ ಮಾತನಾಡಿದ ಜೊಕೊವಿಕ್‌, ಅಲ್ಕರಾಝ್‌ನನ್ನ ಬಾಯ್ತುಂಬ ಹೊಗಳಿದ್ದಾರೆ. ನನ್ನ ವೃತ್ತಿಬದುಕಿನಲ್ಲಿ ಕಾರ್ಲೊಸ್‌ ಅಲ್ಕರಾಝ್‌ ಮಾದರಿಯ ಆಟಗಾರ ಎದುರಾಗೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ. ಕಾರ್ಲೊಸ್‌ ಅಲ್ಕರಾಝ್‌ ಅವರಲ್ಲಿ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್ ಮತ್ತು ನನ್ನ ಆಟದ ಸಮ್ಮಿಶ್ರಣ ಕಾಣಬಹುದು ಅಂತಾ ಚರ್ಚೆಯಾಗುತ್ತಿದೆ. ಇದನ್ನ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಕಾರ್ಲೊಸ್‌ ಪರಿಪೂರ್ಣ ಆಟಗಾರ. ನನ್ನ ವೃತ್ತಿಬದುಕಿನಲ್ಲಿ ಇಂತಹ ಒಬ್ಬ ಆಟಗಾರನನ್ನ ನೋಡಿಯೇ ಇರಲಿಲ್ಲ. ಅವರು ನಿಜಕ್ಕೂ ಒಬ್ಬ ಪರಿಪೂರ್ಣ ಆಟಗಾರನಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

    ಇದೇ ವೇಳೆ ಅಲ್ಕರಾಝ್‌ ಸಹ ಮಾತನಾಡಿದ್ದು, ಜೊಕೊವಿಕ್‌ನನ್ನ ಹೊಗಳಿದ್ದಾರೆ. ನಾನು ನಿಮ್ಮನ್ನು ನೋಡುತ್ತಲೇ ಟೆನ್ನಿಸ್‌ ಆಟ ಕಲಿತೆ. ನಾನು ಹುಟ್ಟಿದಾಗಿನಿಂದಲೂ ನೀವು ಹಲವು ಪಂದ್ಯಗಳನ್ನ ಗೆದ್ದಿದ್ದೀರಿ. ನಿಜಕ್ಕೂ ಅವೆಲ್ಲವೂ ಅದ್ಭುತ ಎಂದು ಅಭಿನಂದಿಸಿದ್ದಾರೆ. ಅತಿಹೆಚ್ಚು ಬಾರಿ ಗ್ರ್ಯಾನ್‌ಸ್ಲಾನ್‌ ಗೆದ್ದ ರಫಾಲ್‌ ನಡಾಲ್ ಕೂಡ ಅಲ್ಕರಾಝ್‌ಗೆ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    ಲಂಡನ್‌: ಪ್ರತಿಷ್ಠಿತ ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕನ್ನಡದ ಕೆಜಿಎಫ್‌ ಸದ್ದು ಮಾಡಿದೆ.

    ಫೈನಲ್ ಪಂದ್ಯದಲ್ಲಿ ನೋವಾಕ್ ಜೋಕೋವಿಚ್, ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್ ವಿರುದ್ಧ 4-6 6-3 6-4 7-6(3) ಅಂತರದಲ್ಲಿ ಗೆಲುವು ಸಾಧಿಸಿ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.

    ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಂಬಲ್ಡನ್‌ ಫೇಸ್‌ಬುಕ್‌ ಖಾತೆಯಲ್ಲಿ ಕೆಜಿಎಫ್‌ ಸಿನಿಮಾದ ಪ್ರಸಿದ್ಧ ಡೈಲಾಗ್‌ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. “Trophies, trophies, trophies….I like trophies and trophies like me…I can’t avoid” ಎಂದು ಬರೆದು ಜೋಕೋವಿಚ್ ಅವರನ್ನು ಅಭಿನಂದಿಸಲಾಗಿದೆ. ಇದನ್ನೂ ಓದಿ: ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದಲ್ಲಿ ಯಶ್‌ ಅವರ ಡೈಲಾಗ್‌ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. “Violence, violence, violence. I don’t like it. I avoid. But, violence likes me, I can’t avoid” ಈ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ವಿಂಬಲ್ಡನ್‌ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನೋವಾಕ್ ಜೋಕೋವಿಚ್ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಲಸಿಕೆ ಕಾರಣ ಅಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆದ ಅವಮಾವನ್ನು ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ತೀರಿಸಿಕೊಂಡಿದ್ದಾರೆ.

    ನೋವಾಕ್ ಜೋಕೋವಿಚ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ನೋವಾಕ್ ಗೆದ್ದ ಸತತ 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಇಷ್ಟೇ ಅಲ್ಲ ವಿಂಬಲ್ಡನ್‌ನ 8 ಫೈನಲ್ ಪಂದ್ಯದಲ್ಲಿ 7 ಪಂದ್ಯ ಗೆದ್ದ ಮತ್ತೊಂದು ದಾಖಲೆ ಸರಿಗಟ್ಟಿದ್ದಾರೆ. ಈ ಹಿಂದೆ ಅಮೆರಿಕದ ಪೀಟ್‌ ಸ್ಯಾಂಪ್ರಸ್‌ 7 ಬಾರಿ ವಿಂಬಲ್ಡನ್‌  ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ಮುಂಬೈ: ಕೊರೊನಾ ಲಸಿಕೆ ಪಡೆಯಲು ನಿರಾಕರಿಸಿ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‍ಸ್ಲಾಂ ಆಡುವ ಅವಕಾಶ ಕಳೆದುಕೊಂಡಿದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‍ಗೆ ಲಸಿಕೆ ಬಗ್ಗೆ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲ ವಿಶೇಷ ಸಂದೇಶ ರವಾನಿಸಿದ್ದಾರೆ.

    ಕೊರೊನಾ ಲಸಿಕೆ ಪಡೆಯಲು ಬಯಸದ ಜೊಕೊವಿಕ್ ಫ್ರೆಂಚ್ ಓಪನ್, ವಿಂಬಲ್ಡನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಈವರೆಗೆ ಲಸಿಕೆ ಪಡೆಯಲು ಒಪ್ಪದ ಜೊಕೊವಿಕ್‍ಗೆ ಆದಾರ್ ಪೂನಾವಾಲ ಟ್ವಿಟ್ಟರ್‌ನಲ್ಲಿ ತಾವು ಟೆನಿಸ್ ಆಡುವ ವೀಡಿಯೋ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ.  ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಲಸಿಕೆ ಪಡೆಯದೆ ಇರುವ ನಿಮ್ಮ ವೈಯಕ್ತಿಕ ವಿಚಾರವನ್ನು ನಾನು ಗೌರವಿಸುತ್ತೇನೆ. ನಿಮ್ಮ ಆಟವನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ. ಈ ಮೂಲಕ ಇನ್ನೊಂದು ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆಲ್ಲುವ ಅವಕಾಶ ನಿಮ್ಮದಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಜೊಕೊವಿಕ್ ಈಗಾಗಲೇ 20 ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಓಪನ್ ಗೆಲ್ಲುವ ಅವಕಾಶ ಜೊಕೊವಿಕ್‍ಗೆ ಇತ್ತು ಆದರೆ ಲಸಿಕೆ ಪಡೆಯದ ಕಾರಣ ಆಸ್ಟ್ರೇಲಿಯಾ ವೀಸಾ ರದ್ದಾಗಿತ್ತು. ಇವರ ಅನುಪಸ್ಥಿತಿಯಲ್ಲಿ ರಫೇಲ್ ನಡಾಲ್ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.

  • ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

    ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

    ಸಿಡ್ನಿ: ಆಸ್ಟ್ರೇಲಿಯಾ ಸರ್ಕಾರ ವೀಸಾ ರದ್ದು ಮಾಡಿರುವುದರಿಂದ ಅತ್ಯಂತ ನಿರಾಶೆಗೊಂಡಿದ್ದೇನೆ. ಆದರೆ ಕೋರ್ಟ್‍ನ ಈ ತೀರ್ಪನ್ನು ನಾನು ಅನುಸರಿಸುತ್ತೇನೆ ಎಂದು ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತಿಳಿಸಿದ್ದಾರೆ.

    ಜೊಕೊವಿಕ್ ಲಸಿಕೆ ಪಡೆಯದ ಕಾರಣ ವೀಸಾವನ್ನು ಸರ್ಕಾರ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜೊಕೊವಿಕ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫೆಡರಲ್ ನ್ಯಾಯಾಲಯದ ಮೂವರು ನ್ಯಾಯಾಧೀಶರು ಆಸ್ಟ್ರೇಲಿಯಾ ಸರ್ಕಾರ ವಿಧಿಸಿದ್ದ ವೀಸಾ ರದ್ದತಿಯನ್ನು ಎತ್ತಿಹಿಡಿದ್ದಿದ್ದು, ಜೊಕೊವಿಕ್‍ನ ಅರ್ಜಿಯನ್ನು ತಿರಸ್ಕರಿಸಿದೆ.

    ಈ ಕುರಿತು ಮಾತನಾಡಿದ ಅವರು, ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ವೀಸಾವನ್ನು ವಜಾಗೊಳಿಸಿರುವುದರಿಂದ ಆಸ್ಟ್ರೇಲಿಯಾದಿಂದ ನಿರ್ಗಮಿಸುತ್ತೇನೆ ಎಂದು ತಿಳಿಸಿದ್ದಾದ್ದಾರೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಂ ಟೂರ್ನಿಯಲ್ಲಿ ಭಾಗವಹಿಸಲು ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದಿದ್ದರು. ಈ ವೇಳೆ ಕೋವಿಡ್ ನಿಯಮದ ಪ್ರಕಾರ ಲಸಿಕೆ ಪಡೆದಿರಬೇಕಿತ್ತು. ಆದರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಲಸಿಕೆ ಪಡೆದಿರಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಮೊದಲ ಬಾರಿಗೆ ರದ್ದು ಪಡಿಸಿತ್ತು. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

    ಆ ಬಳಿಕ ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೊವಿಕ್‍ಗೆ ಮತ್ತೊಮ್ಮೆ ಹಿನ್ನಡೆಯಾಗಿತ್ತು. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ಜೊಕೊವಿಕ್ ವೀಸಾವನ್ನು ರದ್ದುಪಡಿಸಿ 3 ವರ್ಷಗಳವರೆಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿಷೇಧಿಸಿದೆ.

    ಆಸ್ಟ್ರೇಲಿಯಾಕ್ಕೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದವರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮೊದಲೇ ಪ್ರಕಟಿಸಿತ್ತು. ಹೀಗಿದ್ದರೂ ಜೊಕೊವಿಕ್ ಆಸ್ಟ್ರೇಲಿಯಾದ ವೀಸಾ ಸಿಕ್ಕಿತ್ತು. ಈ ವಿಚಾರ ತಿಳಿದ ಆಸ್ಟ್ರೇಲಿಯಾದ ಜನತೆ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ. ಇದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಸರ್ಕಾರ ವೀಸಾವನ್ನೇ ರದ್ದು ಮಾಡಿತ್ತು.

  • ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಸಿಡ್ನಿ: ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್-19 ಲಸಿಕೆ ಪಡೆಯದೆ ಇದ್ದ ಪರಿಣಾಮ ಆಸ್ಟ್ರೇಲಿಯಾ ಸರ್ಕಾರ ಜೊಕಾವಿಕ್ ವೀಸಾವನ್ನು ಎರಡನೇ ಬಾರಿ ರದ್ದು ಪಡಿಸಿದೆ. ಇದರಿಂದಾಗಿ ಜೊಕೊವಿಕ್ ಇನ್ನೂ 3 ವರ್ಷ ಆಸ್ಟ್ರೇಲಿಯಾಗೆ ಕಾಲಿಡುವಂತಿಲ್ಲ.

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯಲ್ಲಿ ಭಾಗವಹಿಸಲು ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದಿದ್ದರು. ಈ ವೇಳೆ ಕೋವಿಡ್ ನಿಯಮದ ಪ್ರಕಾರ ಲಸಿಕೆ ಪಡೆದಿರಬೇಕಿತ್ತು ಆದರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಲಸಿಕೆ ಪಡೆದಿರಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಮೊದಲ ಬಾರಿಗೆ ರದ್ದು ಪಡಿಸಿತ್ತು. ಆ ಬಳಿಕ ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೊವಿಕ್‍ಗೆ ಮತ್ತೊಮ್ಮೆ ಹಿನ್ನಡೆ ಯಾಗಿದೆ. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ಜೊಕೊವಿಕ್ ವೀಸಾವನ್ನು ರದ್ದು ಪಡಿಸಿ 3 ವರ್ಷಗಳ ವರೆಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿಷೇಧಿಸಿದೆ. ಹಾಗಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಪಾಲ್ಗೊಳ್ಳುವಿಕೆಯ ಮೇಲೆ ಅನುಮಾನದ ತೂಗುಗತ್ತಿ ನೇತಾಡುತ್ತಿದೆ.

    ಜೊಕೊವಿಕ್ ವೀಸಾ ರದ್ದು ಪಡಿಸಿದ ಬಗ್ಗೆ ಸ್ಪಷ್ಟತೆ ನೀಡಿದ ಆಸ್ಟ್ರೇಲಿಯಾದ ಸಚಿವ ಅಲೆಕ್ಸ್ ಹ್ವಾಕೆ, ಇದೀಗ ಎರಡನೇ ಬಾರಿ ಟೆನಿಸ್ ಆಟಗಾರ ಜೊಕೊವಿಕ್ ಅವರ ವೀಸಾವನ್ನು ಇಂದು ರದ್ದು ಪಡಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

    ಜನವರಿ 17 ರಿಂದ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯ ನಿಯಮದ ಪ್ರಕಾರ ಲಸಿಕೆ ಪಡೆದರಷ್ಟೇ ಆಡಲು ಅವಕಾಶವಿದೆ. ಆದರೆ ಜೊಕೊವಿಕ್ ಲಸಿಕೆ ಪಡೆಯಲು ಬಯಸುತ್ತಿಲ್ಲ. ಇದೀಗ ಟೂರ್ನಿ ಆರಂಭಕ್ಕೂ ಮೊದಲು ವಿವಾದ ಕೊನೆಗೊಳ್ಳದಿದ್ದರೆ ವಿಶ್ವ ನಂ.1 ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ ಆಡುವುದು ಅನುಮಾನವಾಗಿದೆ. ಈಗಾಗಲೇ ಜೊಕೊವಿಕ್ ಅವರ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. 9 ಬಾರಿಯ ಚಾಂಪಿಯನ್ ಜೊಕೊವಿಕ್ ಮೊದಲ ಸುತ್ತಿನಲ್ಲಿ ಜ.17 ರಂದು ಸರ್ಬಿಯಾದ ಮಿಯೊಮಿರ್ ಕೆಮನೊವಿಚ್ ವಿರುದ್ಧ ಆಡಬೇಕಿದೆ.

    ಜೊಕೊವಿಕ್ ಇದುವರೆಗೂ 20 ಟೆನಿಸ್ ಗ್ರ್ಯಾನ್‍ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೊತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅದ್ಭುತ ದಾಖಲೆ ಹೊಂದಿರುವ ಜೊಕೊವಿಕ್ ಈ ಬಾರಿ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದರು. ಆದರೆ ಇದೀಗ ಈ ವಿವಾದದಿಂದಾಗಿ ಅವರ ಆ ಕನಸಿಗೆ ಹಿನ್ನಡೆಯಾಗಿದೆ.

    ಯಾಕೆ ಕಠಿಣ ನಿಯಮ?
    ಆಸ್ಟ್ರೇಲಿಯಾಕ್ಕೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದವರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮೊದಲೇ ಪ್ರಕಟಿಸಿತ್ತು. ಹೀಗಿದ್ದರೂ ಜೊಕೊವಿಕ್ ಆಸ್ಟ್ರೇಲಿಯಾದ ವೀಸಾ ಸಿಕ್ಕಿತ್ತು. ಈ ವಿಚಾರ ತಿಳಿದ ಆಸ್ಟ್ರೇಲಿಯಾದ ಜನತೆ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನಾಕ್ರೋಷ ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ವೀಸಾವನ್ನೇ ರದ್ದು ಮಾಡಿದೆ.

  • ಜೋಕಾವಿಕ್‌ರಿಂದಾಗಿ ರದ್ದಾಗುತ್ತಿದ್ದ ಐಪಿಎಲ್‌ – ಜೇ ಶಾ ವಿಶ್ವಾಸದಿಂದಾಗಿ ನಡೆಯಿತು ಟೂರ್ನಿ

    ಜೋಕಾವಿಕ್‌ರಿಂದಾಗಿ ರದ್ದಾಗುತ್ತಿದ್ದ ಐಪಿಎಲ್‌ – ಜೇ ಶಾ ವಿಶ್ವಾಸದಿಂದಾಗಿ ನಡೆಯಿತು ಟೂರ್ನಿ

    ಮುಂಬೈ: 13ನೇ ಆವೃತ್ತಿಯ ಐಪಿಎಲ್‌ ಈಗಾಗಲೇ ಪೂರ್ಣಗೊಂಡಿದ್ದು ಮುಂಬೈ ಇಂಡಿಯನ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದರೆ ನೊವಾಕ್‌ ಜೋಕಾವಿಕ್‌ ಅವರಿಂದಾಗಿ ಈ ಬಾರಿಯ ಐಪಿಎಲ್‌ ನಡೆಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬಿಸಿಸಿಐ ಸಿಲುಕಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಈ ವರ್ಷದ ಐಪಿಎಲ್‌ ಭಾರತದಲ್ಲಿ ಮಾರ್ಚ್‌ 29 ರಿಂದ ನಡೆಯಬೇಕಿತ್ತು. ಈ ಅವಧಿಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಬಳಿಕ ಎಲ್ಲಿ ನಡೆಸಬೇಕು ಬಿಸಿಸಿಐ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿತ್ತು.

    ಯುಎಇಯಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಸರ್ಬಿಯಾದ ಟೆನ್ನಿಸ್‌ ಆಟಗಾರ ನೊವಾಕ್‌ ಜೋಕಾವಿಕ್‌ ತಾನು ಕೋವಿಡ್‌ 19 ತುತ್ತಾಗಿದ್ದೇನೆ ಎಂದು ಜೂನ್‌ 23 ರಂದು ಪ್ರಕಟಿಸಿದರು. ಹೀಗಾಗಿ ಈ ಬಾರಿ ಐಪಿಎಲ್‌ ನಡೆಸಬೇಕೋ ಬೇಡವೋ? ಆಟಗಾರರಿಗೆ ಕೊರೊನಾ ಬಂದರೆ ಏನು ಮಾಡುವುದು ಎಂಬ ಚಿಂತೆ ಬಿಸಿಸಿಐಯನ್ನು ಕಾಡಿತ್ತು. ಆದರೆ ಕೊನೆಗೆ ಸಭೆ ನಡೆಸಿ ಬಿಸಿಸಿಐ ಕಾರ್ಯದರ್ಶಿ ಆಗಿರುವ ಗೃಹ ಸಚಿವ ಅಮಿತ್‌ ಶಾ ಪುತ್ರ ಜೇ ಶಾ ವಿಶ್ವಾಸದ ಮಾತುಗಳ ಬಳಿಕ ಟೂರ್ನಿ ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂಬ ವಿಚಾರವನ್ನು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

    ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ನೊವಾಕ್‌ ಜೋಕಾವಿಕ್‌ ಅವರು ಕೊರೊನಾ ಪಾಸಿಟವ್‌ ಎಂದು ವರದಿಯಾದ ಬಳಿಕ ನಮ್ಮ ತಲೆಯಲ್ಲಿ ಎರಡು ವಿಚಾರಗಳು ಓಡುತ್ತಿತ್ತು. ಬಹಳಷ್ಟು ಮಂದಿ ಈ ಬಾರಿ ಐಪಿಎಲ್‌ ಆಯೋಜಿಸುವುದೇ ಬೇಡ ಎಂದು ಹೇಳಿದ್ದರು. ಐಪಿಎಲ್‌ ಮೂರು ತಿಂಗಳು ಇರುತ್ತದೆ. ಒಂದು ವೇಳೆ ಆಟಗಾರರಿಗೆ ಏನಾದರೂ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದರು. ಆದರೆ ಜೇ ಶಾ ಯಾವುದೇ ಕಾರಣಕ್ಕೆ ರದ್ದು ಮಾಡುವುದು ಬೇಡ. ಆಟ ಆಡಿಸೋಣ. ಈ ವಿಚಾರದಲ್ಲಿ ಮುಂದುವರಿಯೋಣ ಎಂದಿದ್ದರು. ನಮ್ಮೆಲ್ಲರಿಗಿಂತ ಹೆಚ್ಚಿನ ವಿಶ್ವಾಸ ಜೇ ಶಾ ಅವರಿಗಿತ್ತು ಎಂದು ಧುಮಾಲ್‌ ತಿಳಿಸಿದರು.

    17 ಗ್ರಾಂಡ್‌ ಸ್ಲಾಮ್‌ ವಿಜೇತ ನೊವಾಕ್‌ ಜೋಕಾವಿಕ್‌ ಸೇರಿದಂತೆ ಟೂರ್ನಿಯಲ್ಲಿದ್ದ 3 ಮಂದಿಗೆ ಕೊರೊನಾ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಜೋಕಾವಿಕ್‌ ಈ ವಿಷಯ ತಿಳಿಸಿ ಟೂರ್ನಿಯಲ್ಲಿ ಆಡಿದ್ದಕ್ಕೆ ಕ್ಷಮೆ ಕೇಳಿದ್ದರು. ಈ ಕಾರಣಕ್ಕೆ ಬಿಸಿಸಿಐ ಐಪಿಎಲ್‌ ಆಡಿಸಬೇಕೋ? ಬೇಡವೋ ಎಂಬ ಗೊಂದಲಕ್ಕೆ ಸಿಲುಕಿತ್ತು.

    ಈ ನಡುವೆ ಕೇಂದ್ರ ಸರ್ಕಾರ ವಿದೇಶದಲ್ಲಿ ಐಪಿಎಲ್‌ ಆಡಿಸಲು ಅನುಮತಿ ನೀಡಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಗಸ್ಟ್‌ನಲ್ಲಿ ಅಧಿಕೃತವಾಗಿ ಯುಎಇಯಲ್ಲಿ ಟೂರ್ನಿ ಆಡಿಸುವುದಾಗಿ ಪ್ರಕಟಿಸಿದರು. ಕೋವಿಡ್‌ 19 ಬಿಗಿ ನಿಯಮ, ಕ್ವಾರಂಟೈನ್‌, ಸಾಮಾಜಿಕ ಅಂತರ ಪಾಲಿಸಿಕೊಂಡು ಅಬುಧಾಬಿ, ದುಬೈ, ಶಾರ್ಜಾದಲ್ಲಿ ಪಂದ್ಯ ಆಡಿಸುವ ಮೂಲಕ ಈ ಬಾರಿಯ ಐಪಿಎಲ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

  • ಕೋಪ ತಂದ ಸಂಕಷ್ಟ- ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಜೊಕೊವಿಚ್

    ಕೋಪ ತಂದ ಸಂಕಷ್ಟ- ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಜೊಕೊವಿಚ್

    ನ್ಯೂಯಾರ್ಕ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಕೋಪದಿಂದ ಮಾಡಿದ ಪ್ರಮಾದದಿಂದ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರ ಬಿದಿದ್ದಾರೆ.

    ಯುಎಸ್ ಟೆನಿಸ್ ಟೂರ್ನಿಯ ಟೈಟಲ್ ಗೆಲ್ಲುವ ಫೇವರಿಟ್ ಆಟಗಾರನಾಗಿದ್ದ ಜೊಕೊವಿಚ್, ಭಾನುವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೆಂಡನ್ನು ಲೈನ್ ಅಂಪೈರ್ ಗೆ ಎಸೆದು ಪ್ರಮಾದ ಎಸಗಿದ್ದರು. ಎದುರಾಳಿ ಸ್ಪೇನ್‍ನ ಪ್ಯಾಬ್ಲೊ ಕರೆನೊ ಎದುರು ಪಾಯಿಂಟ್ ಕಳೆದುಕೊಂಡ ವೇಳೆ ಉದ್ವೇಗಕ್ಕೆ ಒಳಗಾದ ಅವರು ಬ್ಯಾಟ್‍ನಿಂದ ಚೆಂಡನ್ನು ಅಂಪೈರ್ ಕಡೆಗೆ ಎಸೆದಿದ್ದರು. ಆದರೆ ಇದನ್ನು ಅಂಪೈರ್ ಊಹಿಸದ ಕಾರಣ ಚೆಂಡು ಅಂಪೈರ್ ಅವರ ಕುತ್ತಿಗೆಗೆ ಬಡಿದಿತ್ತು. ಕೂಡಲೇ ಅಂಪೈರ್ ಸ್ಥಳದಲ್ಲೇ ಕುಸಿದರು.

    ತಕ್ಷಣ ತಮ್ಮ ತಪ್ಪನ್ನು ಅರಿತುಕೊಂಡ ಜೊಕೊವಿಚ್ ಅಂಪೈರ್ ಬಳಿ ತೆರಳಿ ಅವರನ್ನು ಮೇಲೆತ್ತುವ ಕೆಲಸ ಮಾಡಿದರು. ಕೆಲ ಕಾಲ ಉಸಿರಾಡಲು ಸಮಸ್ಯೆ ಎದುರಿಸಿದ ಅಂಪೈರ್ ಆ ಬಳಿಕ ಎದ್ದು ನಡೆದರು. ಘಟನೆ ಬಳಿಕ ಪಂದ್ಯದ ರೆಫರಿ ಸೋರೆನ್ ಫ್ರೀಮೆಲ್, ಜೊಕೊವಿಚ್‍ರನ್ನು ಅನರ್ಯಗೊಳಿಸಿದರು. ಇದರಿಂದ ಅಸಮಾಧಾನದಿಂದಲೇ ಅವರು ಅಂಗಳದಿಂದ ಹೊರ ನಡೆದರು.

    ಆ ಬಳಿಕ ಟ್ವೀಟ್ ಮಾಡಿ ಕ್ಷಮೆ ತಿಳಿಸಿದ ಜೊಕೊವಿಚ್, ಘಟನೆಯಿಂದ ಬೇಸರವಾಗಿದ್ದು, ಮನಸ್ಸು ಭಾರವಾಗಿದೆ. ಮಹಿಳಾ ಅಂಪೈರ್ ಗೆ ಅಪಾಯ ಆಗಲಿಲ್ಲ ಎಂಬುದು ಮನಸ್ಸಿಗೆ ಸಮಾಧಾನ ತಂದಿದೆ. ಉದ್ವೇಗದ ವರ್ತನೆಗೆ ಕ್ಷಮೆ ಇರಲಿ ಎಂದು ಯುಎಸ್ ಓಪನ್ ನಿರ್ವಹಕರಿಗೆ ಕ್ಷಮೆ ತಿಳಿಸಿದ್ದಾರೆ. ಅಲ್ಲದೇ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿರುವ ಅವರು, ಈ ಘಟನೆ ನನಗೆ ಒಳ್ಳೆಯ ಗುಣಪಾಠವಾಗಿದೆ ಎಂದಿದ್ದಾರೆ.


    ಆಟಗಾರ ಪ್ರಮಾದಕರ ರೀತಿಯಲ್ಲಿ ಚೆಂಡನ್ನು ಎಸೆಯುವುದನ್ನು ಟೆನಿಸ್ ಕ್ರೀಡೆಯಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೊಕೊವಿಚ್ ಅವರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂದು ಕ್ರಮಕೈಗೊಳ್ಳಲಾಗಿದೆ. ಇದರಿಂದ ನಾಲ್ಕನೇ ಬಾರಿ ಯುಎಸ್ ಓಪನ್ ಗೆಲ್ಲಬೇಕೆಂಬ ಜೊಕೊವಿಚ್ ಆಸೆಗೆ ಬ್ರೇಕ್ ಬಿದಿದ್ದೆ.