ಕಲಬುರಗಿ: ʻತಾಯಿ ನಮ್ಮ ಅತ್ತೆ ಬೇಗ ಸಾಯಬೇಕುʼ ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ (currency) ಪತ್ತೆಯಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಹಿಳೆ 20 ರೂ. ನೋಟ್ ಮೇಲೆ ಅತ್ತೆ ಸಾಯಲೆಂದು ಬರಹ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಹರಕೆ ಮಾಡಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ
ಗುರುವಾರ (ಡಿ.26) ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಹರಕೆ ಹೊತ್ತು ಕಾಣಿಕೆ ಅರ್ಪಿಸಿರುವ ನೋಟ್ ಪತ್ತೆಯಾಗಿದೆ. ಸದ್ಯ ಈ ಲೆಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರ ಬರೆದ ಸೊಸೆ ಯಾರು ಅಂತಾ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೆ ಕೊಂದ ಮಗ – ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ!
ಗದಗ: ಇಂದು ವಿಜಯ ದಶಮಿ (Vijaya Dashami) ಅಂಗವಾಗಿ ಗದಗ (Gadag) ನಗರದಲ್ಲಿ ಲಕ್ಷ್ಮಿ ದೇವಿಗೆ ನೋಟುಗಳಿಂದ (Note) ಅದ್ಭುತವಾಗಿ ಅಲಂಕಾರ ಮಾಡಲಾಗಿದೆ.
ನಗರದ ಹುಡ್ಕೊ ಕಾಲೋನಿಯ ನೀಲಮ್ಮ ತಾಯಿ ಆಧ್ಯಾತ್ಮ ಆಶ್ರಮದಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪನೆ ಮಾಡಲಾಗಿದೆ. ನವರಾತ್ರಿ ಆರಂಭದಿಂದ ನಿತ್ಯ ವಿಭಿನ್ನವಾದ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತಿತ್ತು. ಇಂದು 500, 100, 50, 20, 10 ರೂ. ನೋಟುಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ
ಚಕ್ರ, ಮಾಲೆ, ತೋರಣ, ಕಮಲ ಹೀಗೆ ಅನೇಕ ರೂಪದಲ್ಲಿ ನೋಟುಗಳನ್ನು ಜೋಡಿಸಿ ಅಲಂಕಾರ ಮಾಡಲಾಗಿದೆ. ಸುಮಾರು 2 ಲಕ್ಷ 50 ಸಾವಿರ ರೂ.ಗಳಿಂದ ದೇವಿಗೆ ಶೃಂಗಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ಆಶ್ರಮಕ್ಕೆ ಬಂದ ಭಕ್ತರು ದೇವಿಯ ವಿಭಿನ್ನವಾದ ಅಲಂಕಾರ ಕಣ್ತುಂಬಿಕೊಂಡು, ಭಕ್ತಿಯಿಂದ ಬೇಡಿಕೊಂಡು ಪುನೀತರಾಗಿದ್ದಾರೆ. ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನ
ನವದೆಹಲಿ: ಅಕ್ಟೋಬರ್ 7 ರವರೆಗೆ 2,000 ರೂ. ನೋಟುಗಳನ್ನು (Rs. 2000 Note) ಬದಲಾಯಿಸಿಕೊಳ್ಳಲು ಮತ್ತು ಠೇವಣಿ ಇಡಲು ಕೊನೆಯ ದಿನಾಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಸ್ತರಿಸಿದೆ.
2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ 4 ತಿಂಗಳ ಗಡುವು ನಿನ್ನೆಗೆ (ಸೆಪ್ಟೆಂಬರ್ 30) ಮುಕ್ತಾಯಗೊಂಡಿತ್ತು. ಇದೀಗ ಪರಿಶೀಲನೆಯ ಆಧಾರದ ಮೇಲೆ 2,000 ರೂ. ನೋಟುಗಳನ್ನು ಠೇವಣಿ ಇಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಇದೇ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಶನಿವಾರ ತಿಳಿಸಿದೆ.
ಅಕ್ಟೋಬರ್ 8 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯವನ್ನು ನಿಲ್ಲಿಸಲಾಗುತ್ತದೆ. ಆದರೂ 2,000 ರೂ. ನೋಟುಗಳು ಅಕ್ಟೋಬರ್ 7ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಅವುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: 10 ಸಾವಿರ ಕೋಟಿ ಮೀಸಲು – ಮುಸ್ಲಿಂ ಮುಖಂಡರನ್ನು ಸೆಳೆಯಲು ಕಾಂಗ್ರೆಸ್‌ನಿಂದ ಭರಪೂರ ಅನುದಾನದ ಭರವಸೆ
ಮೇ 19ರಂದು ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ನೋಟುಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಠೇವಣಿ ಇಡಲು ಸಾರ್ವಜನಿಕರಿಗೆ ಸಾಕಷ್ಟು ಸಮಯ ಒದಗಿಸಲು ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ನೀಡಿತ್ತು.
ಮೇ 19ರಿಂದ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ಸುಮಾರು 95% ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿ ಬಂದಿದೆ. ಎಂದರೆ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ನೋಟುಗಳ ಪೈಕಿ ಸುಮಾರು 3.42 ಲಕ್ಷ ಕೋಟಿ ನೋಟುಗಳನ್ನು ಮರಳಿ ಪಡೆಯಲಾಗಿದೆ. ಇದೀಗ ಕೇವಲ 1.14 ಲಕ್ಷ ಕೋಟಿ ನೋಟುಗಳು ಮಾತ್ರವೇ ಬಾಕಿ ಉಳಿದಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಇದನ್ನೂ ಓದಿ: ನೀರು ಹರಿಸಲು ಸಾಧ್ಯವಿಲ್ಲ; CWMA, ಸುಪ್ರೀಂಗೆ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಸಲ್ಲಿಕೆ
ಬೆಂಗಳೂರು: ಗಣೇಶ ಚತುರ್ಥಿಗೆ (Ganesh Chaturthi) ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಜೆಪಿ ನಗರದ ಬಳಿ ಇರೋ ಪುಟ್ಟೇನಹಳ್ಳಿಯ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.
ಹೌದು, ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್‍ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ. ಇದನ್ನೂ ಓದಿ: ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?
ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.
ಒಟ್ಟಿನಲ್ಲಿ ನೋಟು ಹಾಗೂ ಕಾಯಿನ್ಸ್‍ಗಳಿಂದ ಅಲಂಕಾರವಾಗಿರೋ ದೇವಾಲದಲ್ಲಿ ಗಣೇಶನ ದರ್ಶನ ಪಡೆಯೋ ಫೀಲೇ ಬೇರೆ. ಇನ್ನೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಭಕ್ತರು, ದೇವಾಲಯದ ಟ್ರೆಸ್ಟಿಗಳು, ಮತ್ತು ಸಿನಿ ನಾಯಕರು ದಾನವಾಗಿ ನೀಡಿದ್ದಾರೆ. ಭಕ್ತರ ಡಿಮ್ಯಾಂಡ್ ಇರೋವರೆಗೆ ಈ ಅಲಂಕಾರವನ್ನ ಉಳಿಸಿಕೊಳ್ಳೋ ಯೋಜನೆಯನ್ನ ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿದೆ.
ರಾಮನಗರ: ವರಮಹಾಲಕ್ಷ್ಮಿ ಹಬ್ಬವನ್ನು (Kabbalamma Temple) ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕನಕಪುರದ (Kanakapura) ಕಬ್ಬಾಳಮ್ಮ ದೇವಿಗೆ (Kabbalamma Temple) ವಿವಿಧ ನೋಟುಗಳಿಂದ (Note) ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ನವದೆಹಲಿ: ಹೊಸ ನೋಟುಗಳ ಮೇಲೆ ಇನ್ಮುಂದೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಒತ್ತಾಯಿಸಿದ್ದಾರೆ.
ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ (Mahatma Gandhi) ಫೋಟೋ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ (Lakshmi) ಮತ್ತು ಗಣೇಶನ (Ganesh) ಫೋಟೋಗಳನ್ನು ಮುದ್ರಿಸಬಹುದು. ಕರೆನ್ಸಿ ನೋಟುಗಳ ಮೇಲೆ ಎರಡು ದೇವರ ಫೋಟೋಗಳಿರುವುದು ದೇಶದ ಏಳಿಗೆಗೆ ಸಹಾಯವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು
ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ ನಮ್ಮ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಸೇರಿಸುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರ ಚುಕ್ಕಾಣಿಗೂ ಮುನ್ನ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಖರ್ಗೆ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಹಾಗೂ ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ಶಾಸಕ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪತ್ತೆಯಾದ ಪಾಕಿಸ್ತಾನ ನೋಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪಾಟೀಲ್, ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿರುವ ಕೆಲವು ಪ್ರದೇಶಗಳನ್ನು ಪರಿಶೀಲಿಸಿದರೆ ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಸಿಗುತ್ತವೆ. ಶಸ್ತ್ರಾಸ್ತ್ರಗಳು ಕೂಡ ಸಿಗುತ್ತವೆ ಎಂದು ಗಂಭೀರ ಆರೋಪ ಮಾಡಿದರು.
ಬೆಳಗಾವಿಯಲ್ಲಿರುವ ಪೊಲೀಸ್ ಡಿಪಾರ್ಟ್‍ಮೆಂಟ್ ಇನ್ನೂ ಅಷ್ಟೊಂದು ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಸರಿಯಾಗಿ ದಾರಿಗೆ ತರುವಂತಹ ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ. ಬೆಳಗಾವಿಯಲ್ಲಿಯೂ ಸ್ಫೋಟಕ ಪರಿಸ್ಥಿತಿ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಭಾರತದಲ್ಲಿ ಇರಲು ಹಕ್ಕಿಲ್ಲ: ಅಭಯ್ ಪಾಟೀಲ್
ಬೆಳಗಾವಿಯ ಕೆಲವು ಏರಿಯಾಗಳಲ್ಲಿ ಪೊಲೀಸರೂ ಹೋಗುವುದಿಲ್ಲ. ಅಂತಹ ವಾತಾವರಣ ಇದೆ. ಇವರೇ, ಅವರೇ ಹೋಗಬೇಕು ಎಂದೇನಿಲ್ಲ. ಎಲ್ಲೆಡೆ ಹುಡುಕಾಡಬೇಕು ಎಂದು ಪೊಲೀಸ್ ಇಲಾಖೆಗೆ ವಿನಂತಿ ಮಾಡುತ್ತೇನೆ. ಬೆಳಗಾವಿಯಲ್ಲಿ ಅದೆಷ್ಟೋ ತಲ್ವಾರ್‍ಗಳು ಅವೈದ್ಯಕೀಯವಾಗಿ ಬಂದಿವೆ. ಯಾವುದಾದರೂ ಗಲಾಟೆ ನಡೆದರೆ ಯಾರ ಕೈಯಲ್ಲಿ ತಲ್ವಾರ್ ಇರುತ್ತದೆ? ಅದು ಪೊಲೀಸರಿಗೆ ಗೊತ್ತಿಲ್ವಾ ಎಂದು ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದರು.
ನನ್ನ ವೈಯಕ್ತಿಕ ಅಭಿಪ್ರಾಯ ಪ್ರಕಾರ ಶೇ.60 ರಿಂದ 70ರಷ್ಟು ಕಂಟ್ರೋಲ್ ಇದೆ. ನಾನು ಪ್ರಶ್ನೆ ಎತ್ತಿದ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಗಂಭೀರವಾಗಿ ತಗೆದುಕೊಂಡಿದ್ದರು. ಮಟ್ಕಾ ಆಡುವವರು, ಜೂಜುಕೋರರು, ಗಾಂಜಾ ಮಾರುವವರು ಬೆಳಗಾವಿ ಬಿಟ್ಟು ಹೋಗಿದ್ದಾರೆ. ಇನ್ನೂ ಕೆಲವರು ಉಳಿದಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು ಎಂದರು. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ
ಚಿಕ್ಕೋಡಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಅಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿದೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪಾಕಿಸ್ತಾನ ದೇಶದ 10 ರೂ. ಮುಖಬೆಲೆಯ ನೋಟು ಪತ್ತೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಆದಾಯದಲ್ಲಿ 58% ಕ್ಕಿಂತ ಹೆಚ್ಚು ಕುಸಿತ
ಕರೋಶಿ ಗ್ರಾಮದ ಬಸ್ ನಿಲ್ದಾಣದ ಬಳಿ ನೋಟು ಬಿದ್ದಿದ್ದನ್ನು ನೋಡಿದ ಯುವಕ ತಕ್ಷಣವೇ ಇದು ಪಾಕಿಸ್ತಾನದ ನೋಟು ಎಂದು ಖಾತರಿ ಪಡಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿ, ಅವರಿಗೆ ಒಪ್ಪಿಸಿದ್ದಾನೆ. ತಕ್ಷಣವೇ ಚಿಕ್ಕೋಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಕರೆನ್ಸಿ ದೊರೆತಿರುವುದು ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಗ್ರಾಮದಲ್ಲಿ ನುಸುಳಿಕೊಂಡಿದ್ದಾರಾ ಎನ್ನುವ ಆತಂಕ ಮನೆ ಮಾಡಿದ್ದು, ಪೊಲೀಸರು ಆದಷ್ಟು ಬೇಗ ತನಿಖೆಯನ್ನು ಚುರುಕುಗೊಳಿಸಿ ಸತ್ಯಾಂಶ ಬಯಲಿಗೆ ಎಳೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನವದೆಹಲಿ: ಟೈರ್ ಕೆಳಗೆ ನೋಟ್ ಸಿಕ್ಕಿ ಹಾಕಿಕೊಂಡಿದ್ದು, ಅದನ್ನು ತೆಗೆದುಕೊಳ್ಳಲು ವ್ಯಕ್ತಿಯೊಬ್ಬ ಸರ್ಕಸ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಾರಿನ ಟೈರ್ ಕೆಳಗೆ ಸಿಕ್ಕಿಕೊಂಡಿದ್ದ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್ ಮಾಡುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವೀಡಿಯೋವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಸ್ಕ್ರಿಪ್ಟ್ ಮಾಡಿ ಚಿತ್ರೀಕರಿಸಲಾಗಿದ್ದು, ಇನ್‌ಸ್ಟಾಗ್ರಾಮ್ ನ ‘ಘಂಟಾ’ ಹೆಸರಿನ ಬಳಕೆದಾರರು ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರಲ್ಲಿ ಕ್ರೇಜ್ ಮೂಡಿಸಿದೆ. ಇದನ್ನೂ ಓದಿ: ಎಲೆರಾಂಪುರಗೆ ಕೇಂದ್ರ ಸರ್ಕಾರದಿಂದ ಉತ್ತಮ ಪಂಚಾಯ್ತಿ ಪುರಸ್ಕಾರ
ಈ ವೀಡಿಯೋದಲ್ಲಿ, ಕೆಫೆ ಬಳಿ ನಿಲ್ಲಿಸಿದ್ದ ಕಾರಿನ ಟೈರ್ ಅಡಿಯಲ್ಲಿ ಹಣ ಸಿಕ್ಕಿಹಾಕಿಕೊಂಡಿರುತ್ತೆ. ಆಗ ವ್ಯಕ್ತಿಯೊಬ್ಬ ಇಂದು ನನ್ನ ಅದೃಷ್ಟದ ದಿನ ಎಂದು ಭಾವಿಸುತ್ತಾನೆ. ಅಲ್ಲದೆ ಸುತ್ತಮುತ್ತ ನೋಡಿ ಹಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಅದಕ್ಕೆ ಟೈರ್ ಬಳಿ ಹೋಗಿ ತನ್ನ ಶೂಲೇಸ್ ಅನ್ನು ಕಟ್ಟಿಕೊಳ್ಳುವ ನೆಪದಲ್ಲಿ ಟೈರ್ ಬಳಿ ಬಗ್ಗುತ್ತಾನೆ. ಯಾರಿಗೂ ಅನುಮಾನ ಬಾರದಂತೆ ನೋಟ್ ತೆಗೆದುಕೊಳ್ಳಲು ಪ್ರಯತ್ನನಿಸುತ್ತಾನೆ. ಆದರೆ ನೋಟ್ ತೆಗೆಯುವಲ್ಲಿ ವಿಫಲವಾಗುತ್ತಾನೆ.
ನಂತರ ಅವನು ಅಲ್ಲೇ ಇದ್ದ ಕೆಫೆಯಲ್ಲಿ ಕುಳಿತುಕೊಂಡು ಆ ಕಾರನ್ನೆ ಗಮನಿಸುತ್ತಿರುತ್ತಾನೆ. ಆಗ ಕಾರ್ ಮಾಲೀಕ ಬಂದು ಕಾರ್ ಅನ್ನು ತೆಗೆಯುತ್ತಾನೆ. ಇವನು ನೆಮ್ಮದಿಯಿಂದ ಎದ್ದು ಆ ನೋಟ್ ತೆಗೆದುಕೊಳ್ಳಬೇಕು ಎಂದು ಹೋಗುತ್ತಾನೆ. ಆದರೆ ಆ ಕೆಫೆಯಲ್ಲಿ ಕುಳಿತುಕೊಂಡಿದ್ದ ಎಲ್ಲ ಜನರು ಕಾರನ್ನು ತೆಗೆಯುವುದನ್ನೆ ಕಾಯುತ್ತಿದ್ದು, ನೋಟ್ ತೆಗೆದುಕೊಳ್ಳಲು ಧಾವಿಸುತ್ತಾರೆ. ಈ ವೀಡಿಯೋ ನೋಡಿದರೆ ನಗದೆ ಇರಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ವೀಡಿಯೋ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕಾಮೆಂಟ್ ನಲ್ಲಿ, ಇದು ಕೆಫೆ ಮಾಲೀಕರ ಟ್ರಿಕ್ ಆಗಿರಬಹುದು ಎಂದು ತಮಾಷೆ ಮಾಡಿದ್ದಾರೆ. ಈ ವೇಳೆ ಪೋಸ್ಟ್ ನೋಡಿದ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಚಿಕ್ಕಮಗಳೂರು: ದೇವಸ್ಥಾನದ ಹುಂಡಿಯ 100 ಮುಖ ಬೆಲೆಯ ಲಕ್ಷಗಟ್ಟಲೆ ನೋಟುಗಳ ಬದಲಾಗಿ 500 ಹಾಗೂ 2000 ಮುಖ ಬೆಲೆಯ ನೋಟುಗಳನ್ನು ಕೊಟ್ಟು ಒಂದು ಲಕ್ಷಕ್ಕೆ 30% ಹೆಚ್ಚು ಕೊಡುವುದಾಗಿ ನಂಬಿಸಿ ವಂಚಿಸಿದ ಗ್ಯಾಂಗ್ ನನ್ನು ಜಿಲ್ಲೆಯ ಕಡೂರು ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಮೂಲದ ಕೃಪಾ 30% ಆಸೆಗೆ ಬಿದ್ದು ಮೋಸ ಹೋದವರು. 100 ರೂ. ಮುಖಬೆಲೆ ದೇವಸ್ಥಾನದ ಹುಂಡಿಯಲ್ಲಿ ಲಕ್ಷಗಟ್ಟಲೆ ಇದೆ. 500-2000 ಮುಖಬೆಲೆಯ ನೋಟು ಕೊಟ್ಟರೆ ಒಂದು ಲಕ್ಷಕ್ಕೆ 1,30,000 ರೂ. ಹಣ ಕೊಡುತ್ತಾರೆ ಎಂದು ಕೃಪಾ ಎಂಬವರಿಗೆ ಸ್ನೇಹಿತ ನಾರಾಯಣ ರೈ ಎಂಬುವರು ಹೇಳಿದ್ದರು. ಅದಕ್ಕೆ ಕೃಪಾ ಅಡ್ರೆಸ್ ಹಾಗೂ ಫೋನ್ ನಂಬರ್ ಪಡೆದು ಒಮ್ಮೆ ಜಿಲ್ಲೆಯ ಕಡೂರಿಗೆ ಬಂದು ಮಾತನಾಡಿಕೊಂಡು ಹೋಗಿದ್ದರು.
ಬಳಿಕ 500-2000 ಮುಖಬೆಲೆಯ 10 ಲಕ್ಷ ಹಣದೊಂದಿಗೆ ಕಡೂರು ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದರು. ಆಗ ಅಲ್ಲಿಗೆ ಬಂದ ಖಾವಿ ತೊಟ್ಟಿದ್ದ ಕಪಟ ಸನ್ಯಾಸಿ ಮಹೇಶ್ ಎಂಬುವರು 10 ಲಕ್ಷ ಹಣ ಪಡೆದುಕೊಂಡು, 13 ಲಕ್ಷ ಇದೆ ಎಂದು ಹೇಳಿ ಕೃಪಾ ಅವರಿಗೆ ಹಣದ ಬ್ಯಾಗ್ ನೀಡಿದ್ದರು. ಕಡೂರು ಪಟ್ಟಣವಾದ್ದರಿಂದ ಇಲ್ಲಿ ಎಣಿಸಬೇಡಿ. ಪಬ್ಲಿಕ್ ಪ್ಲೇಸ್, ಜನ ಓಡಾಡುತ್ತಿರುತ್ತಾರೆ. ಕಾರಿನಲ್ಲಿ ಹೋಗುತ್ತ ಎಣಿಸಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!
ಕೃಪಾ ಕಾರಿನಲ್ಲಿ ಕೂತು ಹಣದ ಬ್ಯಾಗ್ ಓಪನ್ ಮಾಡಿದ್ದಾರೆ. ಅದರಲ್ಲಿ ಪ್ರತಿಯೊಂದು ಕಂತೆಯ ಮೇಲೆ ಮಾತ್ರ 100 ರೂಪಾಯಿ ನೋಟು ಇದ್ದು, ಉಳಿದದ್ದೆಲ್ಲಾ ವೈಟ್ ಪೇಪರ್ ಇತ್ತು. ಕೃಪಾ ಅವರು ಫೋನ್ ಮಾಡಿದರೆ ಸ್ವಾಮೀಜಿ ನಂಬರ್ ಸ್ವಿಚ್ ಆಫ್. ಇಡೀ ಕಡೂರು ಪಟ್ಟಣ ಹುಡುಕಿದರು ಸ್ವಾಮೀಜಿಯ ಸುಳಿವು ಸಿಗಲಿಲ್ಲ. ಮನನೊಂದು ಊರಿಗೆ ವಾಪಸ್ಸ್ ಹೋಗಿದ್ದರು. ಬಳಿಕ ಕಡೂರಿಗೆ ಬಂದು ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಕಡೂರು ಪೊಲೀಸರು 48 ಗಂಟೆಯೊಳಗೆ ಕಳ್ಳ ಖಾವಿ ಸ್ವಾಮೀಜಿ ಮಹೇಶ್ ಸೇರಿದಂತೆ ಆರು ಜನರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.10 ಲಕ್ಷ ನಗದು, ಒಂದು ಓಮಿನಿ ಕಾರು, 1 ಸ್ಕೂಟಿ ಹಾಗೂ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?
ಈ ನಕಲಿ ಸ್ವಾಮೀಜಿಯ ಗುಂಪನ್ನು ಪತ್ತೆ ಹಚ್ಚುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸೈ ಎನ್.ಕೆ.ರಮ್ಯ, ಪ್ರೊಬೇಷನ್ ಪಿಎಸೈ ಆದರ್ಶ್, ನವೀನ್, ಎ.ಎಸ್.ಐ. ವೇದಮೂರ್ತಿ ಸೇರಿದಂತೆ ಪೇದೆಗಳಾದ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ, ಶಿವರಾಜ್ ಅವರನ್ನು ಎಸ್ ಪಿ ಅಕ್ಷಯ್ ಶ್ಲಾಘಿಸಿದ್ದಾರೆ. ಇನ್ನೂ ಹಣ ಕಳೆದುಕೊಂಡಿದ್ದ ಕೃಪಾ ಹಣ ಸಿಗುವ ನಿರೀಕ್ಷೆಯಲ್ಲಿದ್ದಾರೆ.