Tag: norway

  • ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    – ಭಾರತದ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು

    ಉಡುಪಿ: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ (Udupi) ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ (Norway) ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.

    ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಮಾಡಿಕೊಂಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗಳು ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು. ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ (Ship) ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

    ಆತ್ಮನಿರ್ಭರ (Aatmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make In India) ಕಾನ್ಸೆಪ್ಟ್‌ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟ್ ಅನ್ನು ಭಾರತ ಸರ್ಕಾರ ನೀಡಿದೆ. ಇದನ್ನೂ ಓದಿ: Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!

  • RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ

    RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ

    ನವದೆಹಲಿ: ವಿರೋಧ ಪಕ್ಷಗಳ ಮೈತ್ರಿ ಕೂಟ ಇಂಡಿಯಾ (INDIA) ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಮತ್ತು ಪ್ರಜಾಪ್ರಭುತ್ವದ ಹತ್ಯೆಯನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

    ಈ ತಿಂಗಳ ಆರಂಭದಲ್ಲಿ ರಾಗಾ ಸಂಸ್ಥೆಗೆ ಭೇಟಿ ನೀಡಿದ ಕ್ಲಿಪ್‌ಅನ್ನು ಕಾಂಗ್ರೆಸ್ (Congress) ಹಂಚಿಕೊಂಡಿದೆ. ಅದರಲ್ಲಿ ಅವರು ಭಾರತೀಯ ಪ್ರಜಾಪ್ರಭುತ್ವದ ಕೊಲೆಯನ್ನು ನಾವು ಸಹಿಸುವುದಿಲ್ಲ ಎಂದು ನಮ್ಮ ಮೈತ್ರಿಕೂಟದ ಪ್ರತಿಯೊಬ್ಬ ವ್ಯಕ್ತಿಯೂ ಒಪ್ಪಿಕೊಂಡಿದ್ದಾರೆ. ಎರಡನೆಯದಾಗಿ ನಮ್ಮ ಸಾಂಸ್ಥಿಕ ಚೌಕಟ್ಟನ್ನು ಆರ್‌ಎಸ್‌ಎಸ್ ವಶಪಡಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಪ್ರತಿಯೊಬ್ಬ ವ್ಯಕ್ತಿಯೂ ಅಭಿಪ್ರಾಯಪಟ್ಟಿದ್ದಾರೆ ಎಂದು ರಾಹುಲ್ ಹೇಳಿದರು.

    ಭಾರತದಲ್ಲಿ 2-3 ವ್ಯಾಪಾರ ಸಂಸ್ಥೆಗಳ ಏಕಸ್ವಾಮ್ಯವಿದೆ. ಕಳೆದ 9 ವರ್ಷಗಳಲ್ಲಿ 20 ಕೋಟಿ ಜನರು ಬಡತನಕ್ಕೆ ಜಾರಿದ್ದಾರೆ. ಮೂರನೆಯದಾಗಿ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೆಚ್ಚು ಖರ್ಚು ಮಾಡಬೇಕು ಮತ್ತು ತೊಡಗಿಸಿಕೊಳ್ಳಬೇಕು ಎಂದು ನಾವೆಲ್ಲರೂ ಒಪ್ಪುತ್ತೇವೆ. ದಲಿತರು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಸೇರಿದಂತೆ ಕೆಲವು ಜನರ ಗುಂಪುಗಳು ಭಾರತದ ಬೆಳವಣಿಗೆಯ ಕಥೆಗಳಲ್ಲಿಯೇ ಸೇರಿಸಲಾಗಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು

    ಆದರೂ ಹಲವಾರು ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳಿವೆ. ಉದಾಹರಣೆಗೆ ಕೇರಳದಲ್ಲಿ ಎಡಪಕ್ಷಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಹೋರಾಟವಿದೆ. ಆದರೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಎಂದಿಗೂ ಅಧಿಕಾರ ಹಿಡಿಯದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಬಂಗಾಳದಲ್ಲಿ ಬಿಜೆಪಿ ವಿರುದ್ಧ ನಿಲ್ಲುವುದು ಪ್ರಯೋಜನಕಾರಿ ಎಂಬುದು ಸ್ಪಷ್ಟವಾಗಿದೆ. ಆ ಗುರಿಯನ್ನು ಸಾಧಿಸಬಹುದೇ? ಇದು ಮುಂದೆ ಏನಾಗಬಹುದು? ಎಂಬುದನ್ನು ಈಗಲೇ ಹೇಳುವುದು ಅಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಓಲಾ ಬೈಕ್ ನಿಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಓಸ್ಲೋ: ಕಿಂಗ್ ಹರಾಲ್ಡ್ ಹಾಗೂ ರಾಣಿ ಸೋಂಜಾ ಅವರ ಹಿರಿಯ ಪುತ್ರಿ ನಾರ್ವೆಯ ರಾಜಕುಮಾರಿ (Norway Princess) ಮಾರ್ಥಾ ಲೂಯಿಸ್ (Martha Louise) ಮುಂದಿನ ವರ್ಷ ಆಗಸ್ಟ್ 31ರಂದು ಮಾಂತ್ರಿಕ ಶಾಮನ್ ಡ್ಯುರೆಕ್ ವೆರೆಟ್ (Durek Verrett) ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ.

    51 ವರ್ಷದ ರಾಜಕುಮಾರಿ ಮಾಂತ್ರಿಕ, ಅಮೆರಿಕದ ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕನಾದ ಡ್ಯುರೆಕ್ ವೆರೆಟ್ ಅವರೊಂದಿಗೆ 2022ರ ಜೂನ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಏಕೆಂದರೆ ಡ್ಯುರೆಕ್‌ನನ್ನು ವಂಚಕ, ಹಣಕ್ಕಾಗಿ ರಾಜಕುಮಾರಿಯನ್ನು ಬಳಸಿಕೊಳ್ಳುತ್ತಿರುವುದಾಗಿ ಸ್ಥಳೀಯವಾಗಿ ವೀಡಿಯೋಗಳು ಹರಿದಾಡಿತ್ತು.

    ಈ ಹಿನ್ನೆಲೆ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್ ಅವರನ್ನು ಮದುವೆಯಾಗಲು ಅಧಿಕೃತ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದರು. ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ಸಂಸ್ಥೆಯಲ್ಲಿ ರಾಯಲ್ ಪದವನ್ನು ಬಳಸುವುದಿಲ್ಲ ಎಂದಿದ್ದರು.

    ಇದೀಗ ಜೋಡಿ ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿಕೊಂಡಿದ್ದಾರೆ. ಮಾತ್ರವಲ್ಲದೇ 1968ರಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಸೋಂಜಾ ಅವರನ್ನು ವಿವಾಹವಾಗಿದ್ದ ಕಿಂಗ್ ಹರಾಲ್ಡ್ ಅವರ ಆಶೀರ್ವಾದವನ್ನೂ ಜೋಡಿ ಪಡೆದುಕೊಂಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

    ಬುಧವಾರ ಪ್ರತ್ಯೇಕ ಹೇಳಿಕೆಯಲ್ಲಿ ರಾಜ, ರಾಣಿ, ಹಾಗೂ ಕ್ರೌನ್ ಪ್ರಿನ್ಸ್ ಹಾಕಾನ್ ಜೋಡಿಯನ್ನು ಅಭಿನಂದಿಸಿದ್ದಾರೆ. ಡ್ಯುರೆಕ್ ವೆರೆಟ್ ಅವರನ್ನು ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದಿದ್ದಾರೆ. ಇಬ್ಬರ ಮದುವೆ ನೈಋತ್ಯ ನಾರ್ವೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾದ ಫ್ಜೋರ್ಡ್ ತೀರದಲ್ಲಿರುವ ಗೈರಾಂಜರ್ ಪಟ್ಟಣದಲ್ಲಿ ನಡೆಯಲಿದೆ.

    ರಾಜಕುಮಾರಿ ಮಾರ್ಥಾ ಲೂಯಿಸ್ ಈ ಹಿಂದೆ ಖ್ಯಾತ ಬರಹಗಾರ ಅರಿ ಬೆಹ್ನ್ ಅವರನ್ನು ಮದುವೆಯಾಗಿದ್ದರು. ಬಳಿಕ ವಿಚ್ಛೇದಿತರಾಗಿ 3 ವರ್ಷಗಳ ಬಳಿಕ 2019ರಲ್ಲಿ ಬೆಹ್ನ್ ಆತ್ಮಹತ್ಯೆಗೆ ಶರಣಾಗಿದ್ದರು. ಮಾರ್ಥಾ ಲೂಯಿಸ್‌ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ.    ಇದನ್ನೂ ಓದಿ: ಲಿಬಿಯಾದಲ್ಲಿ ಭೀಕರ ಪ್ರವಾಹ – 5,300 ಜನರ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಂತ್ರಿಕನಿಗಾಗಿ ಅರಮನೆಯನ್ನೇ ತೊರೆದ ನಾರ್ವೇಯ ರಾಜಕುಮಾರಿ

    ಮಾಂತ್ರಿಕನಿಗಾಗಿ ಅರಮನೆಯನ್ನೇ ತೊರೆದ ನಾರ್ವೇಯ ರಾಜಕುಮಾರಿ

    ಓಸ್ಲೋ: ನಾರ್ವೇ (Norway) ದೇಶದ ರಾಜಕುಮಾರಿ (Princess) ಮಾಂತ್ರಿಕನನ್ನು ಮದುವೆಯಾಗಲು ತನ್ನ ರಾಜಮನೆತನದ ಎಲ್ಲಾ ಜವಾಬ್ದಾರಿ ಹಾಗೂ ಸ್ಥಾನಮಾನವನ್ನು ತ್ಯಜಿಸಿದ್ದಾಳೆ.

    ಕಿಂಗ್ ಹೆರಾಲ್ಡ್ ಮತ್ತು ನಾರ್ವೆಯ ರಾಣಿ ಸೋಂಜಾ ಅವರ ಮಗಳು ರಾಜಕುಮಾರಿ ಮಾರ್ಥಾ ಲೂಯಿಸ್ (51) ಜೂನ್‍ನಲ್ಲಿ ಮಾಂತ್ರಿಕ ಹಾಗೂ ಅಮೆರಿಕದ (America) ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕ ಡ್ಯುರೆಕ್ ವೆರೆಟ್ ಎಂಬಾತನೊಂದಿಗೆ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ರಾಜಕುಮಾರಿಯ ನಿಶ್ಚಿತಾರ್ಥ ಅಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹೆಚ್ಚು ಸುದ್ದಿ ಆಗಿತ್ತು.

    ಅಲ್ಲಿನ ಸ್ಥಳೀಯರು ಆತನನ್ನು ವಂಚಕ ಎಂದು ಕರೆದರು. ಅಷ್ಟೇ ಅಲ್ಲದೇ ವಾಣಿಜ್ಯ ಲಾಭಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ವೀಡಿಯೋ ಹರಿದಾಡುತ್ತಿತ್ತು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ

    ಇದರಿಂದಾಗಿ ರಾಜಕುಮಾರಿ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್‍ನನ್ನು ಮದುವೆಯಾಗಲು ಅಧಿಕೃತವಾಗಿ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ರಾಜಮನೆತದ ಸುತ್ತಲೂ ಶಾಂತಿಯನ್ನು ಸೃಷ್ಟಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ರಾಜಕುಮಾರಿ ಮಾರ್ಥಾ ಲೂಯಿಸ್ ಇನ್ನು ಮುಂದೆ ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ವ್ಯವಸ್ಥೆಯಲ್ಲಿ ರಾಯಲ್ ಎನ್ನುವ ಪದವನ್ನು ಉಲ್ಲೇಖಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಓಸ್ಲೋ: ಕುರಾನ್ ಅನ್ನು ಸುಟ್ಟುಹಾಕಿದ ನಿಮಿಷಗಳ ನಂತರ ತೀವ್ರಗಾಮಿ ನಾರ್ವೇಜಿಯನ್ ಇಸ್ಲಾಮಿಕ್ ವಿರೋಧಿ ಗುಂಪಿನ ನಾಯಕನ ಕಾರಿಗೆ ಅಪಘಾತ ಮಾಡಿ ಜಖಂಗೊಳಿಸಿರುವ ಘಟನೆ ನಾರ್ವೆಯ ಓಸ್ಲೋದ ಹೊರವಲಯದಲ್ಲಿ ನಡೆದಿದೆ.

    “ಸ್ಟಾಪ್ ದಿ ಇಸ್ಲಾಮೈಸೇಷನ್ ಆಫ್ ನಾರ್ವೆ” (ನಾರ್ವೆ ಇಸ್ಲಾಮೀಕರಣ ನಿಲ್ಲಿಸಿ) ಹೆಸರಿನ ಗುಂಪಿನ ನಾಯಕ ಲಾರ್ಸ್ ಥಾರ್ಸನ್ ಅವರ ಎಸ್‌ಯುವಿ ಅಪಘಾತ ಮಾಡಿದ್ದ ಆರೋಪದ ಮೇಲೆ ಕಾರಿನ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ನಾರ್ವೇಜಿಯನ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಎಸ್‌ಯುವಿಯಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಒಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಓಸ್ಲೋ ಉಪನಗರ ಮಾರ್ಟೆನ್ಸ್ರುಡ್‌ಗೆ ಇಸ್ಲಾಮಿಕ್ ವಿರೋಧಿ ಗುಂಪಿನ ಥಾರ್ಸನ್ ತನ್ನ ಕಾರ್ಯಕರ್ತರೊಂದಿಗೆ ಹೋಗಿದ್ದಾರೆ. ಅಲ್ಲಿ ನೆರೆದಿದ್ದ ಜನಸಂದಣಿ ಮಧ್ಯೆ ಕುರಾನ್ ಅನ್ನು ಸುಟ್ಟು ಹಾಕಿದ್ದಾರೆ. ಈ ವೇಳೆ ಬೆಂಕಿ ಆರಿಸಲು ಮುಂದಾದ ಜನರನ್ನೂ ತಡೆದಿದ್ದಾರೆ. ಆಗ ಜನಸ್ತೋಮ, ಥಾರ್ಸನ್ ವಿರುದ್ಧ ಕಿಡಿಕಾರಿತು. ಇದನ್ನೂ ಓದಿ: ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

    ಇದಾದ ಬಳಿಕ ಥಾರ್ಸನ್ ಮತ್ತು ಕಾರ್ಯಕರ್ತರು ಕಾರಿನಲ್ಲಿ ಹೋಗುವಾಗ ಮತ್ತೊಂದು ವಾಹನ ಬಂದು ಅಪಘಾತ ಮಾಡಿದೆ. ಅಲ್ಲದೇ ಥಾರ್ಸನ್ ಇದ್ದ ಕಾರನ್ನು ಜಖಂಗೊಳಿಸಿದೆ. ಈ ಘಟನೆಯ ವೀಡಿಯೋ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.

    ನಾರ್ವೆಯ ದೇಶೀಯ ಗುಪ್ತಚರ ಈ ದಾಳಿಯನ್ನು ‘ಇಸ್ಲಾಮಿ ಭಯೋತ್ಪಾದನೆಯ ಕೃತ್ಯ’ ಎಂದು ಬಣ್ಣಿಸಿದೆ. ಸ್ಕ್ಯಾಂಡಿನೇವಿಯನ್ ಇಸ್ಲಾಂ ವಿರೋಧಿ ಕಾರ್ಯಕರ್ತರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಭಾಗಗಳಿಗೆ ಹೋಗಿ ಕುರಾನ್ ಸುಡುವ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

    ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ

    ಓಸ್ಲೋ: ನೈಟ್‍ಕ್ಲಬ್ ಹಾಗೂ ಹತ್ತಿರದ ಬೀದಿಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡ ಘಟನೆ ನಾರ್ವೆ ರಾಜಧಾನಿಯ ಓಸ್ಲೋದಲ್ಲಿ ನಡೆದಿದೆ.

    ಲಂಡನ್ ಪಬ್ ಓಸ್ಲೋದ ಮಧ್ಯಭಾಗದಲ್ಲಿರುವ ಜನಪ್ರಿಯ ಸಲಿಂಗಕಾಮಿ ಬಾರ್ ಮತ್ತು ನೈಟ್‍ಕ್ಲಬ್‍ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಶನಿವಾರ ಪಬ್‍ಗೆ ಬಂದು ತನ್ನ ಬ್ಯಾಗ್‍ನಲ್ಲಿದ್ದ ಗನ್ ಅನ್ನು ತೆಗೆದಿದ್ದಾನೆ. ನಂತರ ಆ ಗನ್‍ನಿಂದ ಫೈರಿಂಗ್‍ನ್ನು ಪಬ್‍ನಿಂದ ಪ್ರಾರಂಭಿಸಿ ಅಲ್ಲೇ ಹತ್ತಿರವಿದ್ದ ಬೀದಿವರೆಗೆ ಕೆಲ ನಿಮಿಷಗಳ ಕಾಲ ದಾಳಿ ಮಾಡಿದ್ದಾನೆ.

    ದಾಳಿಯ ಉದ್ದೇಶವೇನು ಎಂಬುದು ಈವರೆಗೆ ಸ್ಪಷ್ಟವಾಗಲಿಲ್ಲ ಸ್ಪಷ್ಟವಾಗಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮೃತಪಟ್ಟಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಜೊತೆಗೆ 14 ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್ – 16 ರೆಬೆಲ್ ಶಾಸಕರಿಗೆ ನೊಟೀಸ್

    Live Tv

  • ಕೋವಿಡ್ ಮಾರ್ಗಸೂಚಿಯನ್ನೇ ತೆಗೆದ ನಾರ್ವೆ

    ಕೋವಿಡ್ ಮಾರ್ಗಸೂಚಿಯನ್ನೇ ತೆಗೆದ ನಾರ್ವೆ

    ಓಸ್ಲೊ: ಪ್ರಪಂಚದಾದ್ಯಂತ ಕೋವಿಡ್ ರೂಪಾಂತರಿ ಓಮಿಕ್ರಾನ್ ಉಲ್ಬಣಗೊಳ್ಳುತ್ತಿದ್ದರೂ ನಾರ್ವೆ ದೇಶದಲ್ಲಿ ಮಾತ್ರ ಕೋವಿಡ್ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ತೆಗೆದು ಹಾಕಿದೆ.

    ನಾರ್ವೆ ಸರ್ಕಾರ ಕೋವಿಡ್-19 ತಡೆಗಟ್ಟಲು ವಿಧಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಹಾಕಿದೆ. ಇದರ ಪ್ರಕಾರ ಅಲ್ಲಿನ ಜನರು ಇನ್ನು ಮುಂದೆ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳನ್ನು ಧರಿಸುವ ಅಗತ್ಯ ಇರುವುದಿಲ್ಲ. ಇದನ್ನೂ ಓದಿ: ಒಟ್ಟು 3,202, ಬೆಂಗ್ಳೂರಲ್ಲಿ 1,293 ಕೇಸ್ – ಪಾಸಿಟಿವಿಟಿ ರೇಟ್ ಶೇ.2.95ಕ್ಕೆ ಇಳಿಕೆ

    ಸಾಮಾಜಿಕ ಅಂತರದ ನಿಯಮವನ್ನು ನಾವು ತೆಗೆದು ಹಾಕುತ್ತಿದ್ದೇವೆ. ಇನ್ನು ಮುಂದೆ ನಾವು ಮೊದಲಿನಂತೆ ಜೀವಿಸಬಹುದು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾವಿನ್ನು ಬೆರೆಯಬಹುದು. ಬಸ್ಸು, ರೈಲು ಹಾಗೂ ದೋಣಿಯಲ್ಲಿ ನಿಶ್ಚಿಂತರಾಗಿ ಪ್ರಯಾಣಿಸಬಹುದು ಎಂದು ನಾರ್ವೆ ಪ್ರಧಾನ ಮಂತ್ರಿ ಜೊನಾಸ್ ಗಹರ್ ಸ್ಟೋರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಇರಬೇಕು – ಸಂಸದೀಯ ಸಮಿತಿ

    ಕೋವಿಡ್ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಲಸಿಕೆ ಹಾಕಿಸಿಕೊಳ್ಳದವರು ಸಾಮಾಜಿಕ ಅಂತರ ಪಾಲಿಸುವುದನ್ನು ಮುಂದುವರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾದಾಗ ಮಾಸ್ಕ್ ಧರಿಸುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

  • ಫೈಝುರ್ ಲಸಿಕೆಗೆ ನಾರ್ವೆಯಲ್ಲಿ 23 ಮಂದಿ ಹಿರಿಯ ನಾಗರಿಕರು ಬಲಿ

    ಫೈಝುರ್ ಲಸಿಕೆಗೆ ನಾರ್ವೆಯಲ್ಲಿ 23 ಮಂದಿ ಹಿರಿಯ ನಾಗರಿಕರು ಬಲಿ

    ನಾರ್ವೆ: ಫೈಝುರ್ ಎಂಆರ್ ಎನ್‍ಎ ಆಧಾರಿತ ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ 23 ಹಿರಿಯ ನಾಗರಿಕರು ಮೃತಪಟ್ಟಿರುವ ಘಟನೆ ನಾರ್ವೆಯಲ್ಲಿ ನಡೆದಿದೆ.

    ದೇಶಾದ್ಯಂತ ಡಿಸೆಂಬರ್ 2019ರ ಅಂತ್ಯದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಗಿತ್ತು, ಇದರಲ್ಲಿ ಮೊದಲ ಹಂತದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು. ಜೊತೆಗೆ ದೇಶದ ಹಿರಿಯ ನಾಗರಿಕರು ಸೇರಿದಂತೆ 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 90 ವರ್ಷಕ್ಕಿಂತ ಮೇಲ್ಪಟ್ಟ ಕೆಲವರು ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಈ ಎಲ್ಲಾ ಸಾವುಗಳು ಆಸ್ಪತ್ರೆ ಸಿಬ್ಬಂದಿಯಲ್ಲಿಯೇ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಅಲ್ಲದೆ ನಾರ್ವೇಜಿನ್ ಮೆಡಿಸಿನ್ ಏಜೆನ್ಸಿ ತ್ನನ ವೈಬ್ ಸೈಟ್ ನಲ್ಲಿ ಮೃತಪಟ್ಟ 23 ಹಿರಿಯರಲ್ಲಿ 13 ಮಂದಿ ಎಂಆರ್‍ಎನ್‍ಸಿ ಲಸಿಕೆ ಪಡೆದ ಬಳಿಕ ಅತಿಸಾರ, ವಾಂತಿ ಮತ್ತು ಜ್ವರದಂತಹ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾರೆ ಎಂದು ಬಹಿರಂಗ ಪಡಿಸಿದೆ.

    ಘಟನೆಯ ಕುರಿತಂತೆ ನಾರ್ವೆ ಸರ್ಕಾರ 13 ಜನ ಹಿರಿಯರು ಫೈಝುರ್-ಬಯೋಎನ್ಟೆಕ್ ಲಸಿಕೆ ಸ್ವೀಕರಿಸಿದ ನಂತರ ಸಾವನ್ನಪ್ಪಿದ್ದಾರಾ ಅಥವಾ ಅದಕ್ಕೂ ಮುನ್ನವೇ ಅವರೆ ಆರೋಗ್ಯ ಸ್ಥಿರವಾಗಿರಲಿಲ್ಲವೋ ಎಂಬುದರ ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ವೈದ್ಯರಿಗೆ ತಿಳಿಸಿದೆ. ಅಲ್ಲದೆ ಈ ಘಟನೆ ಆಕಸ್ಮಿಕವಾಗಿದೆ ಸಂಭವಿಸಿದೆಯೋ ಅಥವಾ ಲಸಿಕೆ ಸ್ವೀಕರಿಸಿದ ನಂತರ ಸಂಭವಿಸಿದೆಯೋ ಎಂಬುವುದರ ಕುರಿತು ಖಚಿತ ಮಾಹಿತಿ ದೊರೆತಿಲ್ಲ ಎಂದು ನಾರ್ವೇಜಿನ್ ಮೆಡಿಸಿನ್ ಏಜೆನ್ಸಿ ವೈದ್ಯಕೀಯ ನಿರ್ದೇಶಕ ಸ್ಟೈನರ್ ಮ್ಯಾಡ್ಸೆನ್ ಹೇಳಿದ್ದಾರೆ.

    ಅಲ್ಲದೆ ಚೀನಾ ತಜ್ಞರು, ರೋಗಿಗಳ ಸ್ಥಿತಿ ಮೊದಲೇ ಹದಗೆಟ್ಟಿತ್ತೋ ಅಥವಾ ಲಸಿಕೆ ಸ್ವೀಕರಿಸಿದ ನಂತರ ಸಾವು ಸಂಭವಿಸಿದೆಯೋ ಎಂಬವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದೆ.

    ಇದೀಗ ಫೈಝುರ್ ಎಂಆರ್‍ಎನ್‍ಎ ಆಧಾರಿತ ಕೋವಿಡ್-19 ಲಸಿಕೆಯನ್ನು ನಾರ್ವೆ ದೇಶದಲ್ಲಿ ಸ್ಥಗಿತಗೊಳಿಸುವಂತೆ ನಾರ್ವೆ ತಜ್ಞರು ತಿಳಿಸಿದ್ದು, ಇತರೆ ದೇಶಗಳಿಗೂ ಲಸಿಕೆ ಬಳಸದಂತೆ ಕರೆ ನೀಡಿದ್ದಾರೆ ಎಂದು ಚೀನಿ ಪತ್ರಿಕಾ ಮಾಧ್ಯಮವೊಂದರಲ್ಲಿ ತಿಳಿಸಲಾಗಿದೆ.

  • ನೀರಿನಲ್ಲಿ ಬಿದ್ದ ಮೊಬೈಲ್ ವಾಪಾಸ್ ತಂದ ಬೆಲುಗ ವೇಲ್- ವಿಡಿಯೋ ನೋಡಿ

    ನೀರಿನಲ್ಲಿ ಬಿದ್ದ ಮೊಬೈಲ್ ವಾಪಾಸ್ ತಂದ ಬೆಲುಗ ವೇಲ್- ವಿಡಿಯೋ ನೋಡಿ

    ನಾರ್ವೆ: ಕಳೆದ ವಾರ ನಾರ್ವೆಯಲ್ಲಿ ಬೆಲುಗ ವೇಲ್ ಒಂದು ಆಳದ ನೀರಿನಲ್ಲಿ ಮಹಿಳೆಯೊಬ್ಬರು ಬೀಳಿಸಿದ್ದ ಮೊಬೈಲ್‍ನನ್ನು ನೀರಿನಿಂದ ವಾಪಾಸ್ ತಂದು ಕೊಟ್ಟಿದೆ. ಈ ತಿಮಿಂಗಲದ ಮೊಬೈಲ್ ತಂದುಕೊಟ್ಟ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋಗೆ ಫಿದಾ ಆಗಿದ್ದಾರೆ.

    ಹೌದು. ಸದ್ಯ ಬೆಲುಗ ತಿಮಿಂಗಿಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೆಮಸ್ ಆಗಿದೆ. ನಾರ್ವೆಯಲ್ಲಿ ಆಕಸ್ಮಿಕವಾಗಿ ಮಹಿಳೆಯ ಫೋನ್ ನೀರಿನಲ್ಲಿ ಬಿದ್ದಿತ್ತು. ಈ ವೇಳೆ ಬೆಲುಗ ತಿಮಿಂಗಲವೊಂದು ನೀರಿನಲ್ಲಿ ಬಿದ್ದಿದ್ದ ಫೊನ್‍ನನ್ನು ಹುಡುಕಿ, ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ವಾಪಾಸ್ ಮಹಿಳೆಗೆ ತಂದು ಕೊಟ್ಟಿದೆ. ಈ ಅಪರೂಪದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಈ ವಿಡಿಯೋದಲ್ಲಿ ತಿಮಿಂಗಲ ತನ್ನ ಬಾಯಲ್ಲಿ ಮೊಬೈಲ್‍ನನ್ನು ಕಚ್ಚಿಕೊಂಡು ನೀರಿಂದ ಮೇಲೆ ಬಂದು ಮಹಿಳೆಗೆ ಫೋನ್ ಕೊಟ್ಟು ನಗುಬೀರಿದ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕ್ಯೂಟ್ ವಿಡಿಯೋ ಸದ್ಯ ನೆಟ್ಟಿಗರ ಮನ ಗೆದ್ದಿದೆ. ಮಾನವ ಸ್ನೇಹಿಯಾಗಿರುವ ಈ ಬೆಲುಗ ತಿಮಿಂಗಲ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೆಮಸ್ ಆಗಿದ್ದು, ವಿಡಿಯೋ ನೋಡಿದವರು ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಈ ತಿಮಿಂಗಲ ರಷ್ಯಾದ ಗೂಡಚಾರಿ, ಇದಕ್ಕೆ ವಿಶೇಷ ತರಬೇತಿ ನೀಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಅದೇನೆ ಆಗಲಿ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ತಿಮಿಂಗಲದ ವಿಡಿಯೋ ನೋಡಿದವರು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದು, ಈ ತಿಮಿಂಗಲದ ವಿಡಿಯೋಗೆ ಫಿದಾ ಆಗಿದ್ದಾರೆ.

  • ಟ್ರಕ್ ಮುಂದೆ ಓಡಿದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾದ- ಎದೆ ಜಲ್ಲೆನಿಸೋ ವಿಡಿಯೋ ನೋಡಿ

    ಟ್ರಕ್ ಮುಂದೆ ಓಡಿದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾದ- ಎದೆ ಜಲ್ಲೆನಿಸೋ ವಿಡಿಯೋ ನೋಡಿ

    ಓಸ್ಲೋ: ಬಾಲಕನೊಬ್ಬ ರಸ್ತೆ ದಾಟುವಾಗ ಟ್ರಕ್‍ಗೆ ಅಡ್ಡವಾಗಿ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನಾರ್ವೇಯಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಮತ್ತೊಂದು ವಾಹನದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ. ಜೂನ್‍ನಲ್ಲಿ ಈ ಘಟನೆ ನಡೆದಿದ್ದು, ಡ್ಯಾಶ್‍ಕ್ಯಾಮ್ ಹೊಂದಿದ್ದ ವಾಹನದ ಮಾಲೀಕ ಪಾದಚಾರಿಗಳಿಗೆ ಎಚ್ಚರಿಕೆ ನೀಡೋ ಸಲುವಾಗಿ ಈಗ ವಿಡಿಯೋವನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

    ಶಾಲಾ ಬಸ್‍ವೊಂದು ರಸ್ತೆಯಲ್ಲಿ ನಿಲುಗಡೆಯಾಗಿ 5 ಮಕ್ಕಳು ಬಸ್‍ನಿಂದ ಕೆಳಗಿಳಿದಿದ್ದಾರೆ. ನಂತರ ಬಾಲಕನೊಬ್ಬ ಟ್ರಕ್ ಬರುತ್ತಿದ್ದುದು ನೋಡದೆ ರಸ್ತೆ ದಾಟಲೆಂದು ಹೋಗಿದ್ದಾನೆ. ಬಾಲಕನ ಹಿಂದೆಯೇ ಮತ್ತೊಬ್ಬ ವಿದ್ಯಾರ್ಥಿಯೂ ಓಡೋದನ್ನ ಕಾಣಬಹುದು. ದೊಡ್ಡ ಟ್ರಕ್ ಬಂದಿದ್ದನ್ನು ನೋಡಿ ಎರಡನೇ ವಿದ್ಯಾರ್ಥಿ ಅಲ್ಲೇ ನಿಂತಿದ್ದು, ಮೊದಲು ಓಡಿದ ಬಾಲಕ ಮಾತ್ರ ಟ್ರಕ್‍ನಿಂದ ಮುಂದೆ ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ. ಈ ವೇಳೆ ಟ್ರಕ್ ಚಾಲಕನೂ ಬ್ರೇಕ್ ಹಾಕಿದ್ದರಿಂದ ದುರಂತವಾಗೋದು ತಪ್ಪಿದೆ.

    ಒಂದು ವೇಳೆ ಬಾಲಕ ಓಡದೇ ಭಯದಿಂದ ಅಲ್ಲೇ ನಿಂತಿದ್ದರೆ ಅನಾಹುತವೇ ಆಗುತ್ತಿತ್ತು. ಹೀಗಾಗಿ ರಸ್ತೆ ದಾಟುವಾಗ ಪಾದಚಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮನದಟ್ಟು ಮಾಡಲು ವಾಹನ ಮಾಲೀಕ ಈ ವಿಡಿಯೋ ಹಂಚಿಕೊಂಡಿದ್ದಾರೆ.

    https://www.youtube.com/watch?v=BGc5El65eWY