Tag: Northern Ireland

  • CWG 2022: ಲಾನ್ ಬಾಲ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತದ ಪುರುಷರ ತಂಡ

    CWG 2022: ಲಾನ್ ಬಾಲ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತದ ಪುರುಷರ ತಂಡ

    ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನ ಪುರುಷರ ಲಾನ್ ಬಾಲ್ಸ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕ ಪಡೆದು ಇತಿಹಾಸ ಬರೆದಿದೆ.

    ಉತ್ತರ ಐರ್ಲೆಂಡ್‌ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತದ ಸುನಿಲ್ ಬಹದ್ದೂರ್, ನವನೀತ್ ಸಿಂಗ್, ಚಂದ್ರ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಒಳಗೊಂಡ ಭಾರತ ತಂಡ 5-18 ಅಂಕಗಳ ಅಂತರದಿಂದ ಪರಾಭವಗೊಂಡು ಬೆಳ್ಳಿಗೆ ತೃಪ್ತಿ ಪಟ್ಟಿತು. ಐರ್ಲೆಂಡ್ ತಂಡ ಚಿನ್ನದ ಪದಕ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: CWG 2022: ಇಂಗ್ಲೆಂಡ್ ವಿರುದ್ಧ 4 ರನ್‍ಗಳ ರೋಚಕ ಜಯ – ಫೈನಲ್‍ಗೆ ಲಗ್ಗೆಯಿಟ್ಟ ಭಾರತ

    ಈ ಮೂಲಕ ಭಾರತ 22ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 9 ಚಿನ್ನ, 11 ಬೆಳ್ಳಿ, 9 ಕಂಚು ಸೇರಿ 29 ಪದಕ ತನ್ನದಾಗಿಸಿಕೊಂಡಿದೆ. 9ನೇ ದಿನದ ಆರಂಭದಲ್ಲಿ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದರು. ಇದನ್ನೂ ಓದಿ: CWG 2022: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ

    ಕೆಲದಿನಗಳ ಹಿಂದೆ ಮಹಿಳೆಯರ ಲಾನ್‌ ಬಾಲ್ಸ್‌ನಲ್ಲಿ ಲೌಲಿ ಚೌಬೆ, ಪಿಂಕಿ, ನಯನ್‌ಮೊನಿ ಸೈಕಿಯಾ ಹಾಗೂ ರೂಪಾ ರಾಣಿ ತಿರ್ಕೆ ಅವರನ್ನೊಳಗೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಸೋಲಿಸಿ ಚಿನ್ನ ಗೆದ್ದಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?

    ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?

    ಲಂಡನ್: ಮೊದಲ ಮಹಾಯುದ್ಧದ ವೇಳೆ ತಯಾರಿಸಿದ್ದ ಮಿಲ್ಸ್ ಗ್ರೆನೇಡ್ ಸಜೀವ ಬಾಂಬ್ ಅನ್ನು ಯುಕೆಯ ಉತ್ತರ ಐರ್ಲೆಂಡ್ ಕಡಲತೀರದಲ್ಲಿ ಚಿಕ್ಕ ಹುಡುಗನೊಬ್ಬ ಪತ್ತೆ ಮಾಡಿದ್ದಾನೆ.

    ಕಲ್ಟ್ರಾ ಬೀಚ್ ಬಳಿ ಬಾಂಬ್ ಪತ್ತೆಯಾದ ಬಳಿಕ ಹುಡುಗ ಉತ್ತರ ಐರ್ಲೆಂಡ್‌ನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸೇನೆಯ ತಾಂತ್ರಿಕ ಅಧಿಕಾರಿಯೊಬ್ಬರು ಇದು ಸಜೀವ WW-1 `ಮಿಲ್ಸ್ ಬಾಂಬ್’ ಹ್ಯಾಂಡ್ ಗ್ರೆನೇಡ್ (ಕೈಯಲ್ಲಿ ಹಿಡಿದು ಎಸೆಯುವ ಬಾಂಬ್) ಎಂದು ದೃಢಪಡಿಸಿದರು.

    ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಹುಡುಗನ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಇದು ಮೊದಲ ಮಹಾಯುದ್ಧದಲ್ಲಿ ಬಳಸಲಾಗಿದ್ದ ಹ್ಯಾಂಡ್ ಗ್ರೆನೇಡ್ ಎಂದು ತಿಳಿಯಿತು. ಬಳಿಕ ಬಾಂಬ್ ಅನ್ನು ಕ್ರಾಫೋರ್ಡ್ಸ್ ಬರ್ನ್ ಕಂಟ್ರಿ ಪಾರ್ಕ್‌ಗೆ ಕೊಂಡೊಯ್ದು ಸ್ಫೋಟಿಸಲಾಯಿತು ಎಂದು ಹೇಳಿದರು. ಬಾಂಬ್ ಬಗ್ಗೆ ಸುಳಿವುಕೊಟ್ಟ ಯುವಕನಿಗೆ ಅಭಿನಂದನೆ ಸಲ್ಲಿಸಿದರು.

    ಮಿಲ್ಸ್ ಬಾಂಬ್ ಗ್ರೆನೇಡ್ ಅನ್ನು 1915 ರಲ್ಲಿ ಅಭಿವೃದ್ಧಿಪಡಿಸಿದಾಗ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿತು. 2019 ರಲ್ಲಿಯೂ 7 ಅಡಿ ಅಷ್ಟು ಎತ್ತರದ ಎಲ್‌ಆಫ್‌ವೈಟ್ ಜರ್ಮನ್ ಸ್ಫೋಟಕ ಕರಾವಳಿಯ ಮೀನುಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅನಂತರ 2020ರಲ್ಲಿ ಡಬ್ಲ್ಯೂಡಬ್ಲ್ಯೂ-2 ಲಂಡನ್‌ನ ಸೊಹೊದ ಭಾಗದಲ್ಲಿ ಪತ್ತೆಯಾಗಿತ್ತು.