Tag: North Kannada

  • ಮಳೆಯಲ್ಲಿಯೇ ಬೈಕ್ ಚಾಲನೆ: ಮರ ಬಿದ್ದು ತಂದೆ-ಮಗನ ದುರ್ಮರಣ

    ಮಳೆಯಲ್ಲಿಯೇ ಬೈಕ್ ಚಾಲನೆ: ಮರ ಬಿದ್ದು ತಂದೆ-ಮಗನ ದುರ್ಮರಣ

    ಕಾರವಾರ: ಬೈಕ್ ಮೇಲೆ ಮರ ಬಿದ್ದು ತಂದೆ ಹಾಗೂ ಮಗ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಇಡಗುಂದಿಯಲ್ಲಿ ನಡೆದಿದೆ.

    ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಷ್ ಚಿಪ್ಕರ್ ಹಾಗೂ ನಾಗರಾಜ್ ಸಲಗಾವ್ಕರ್ ಮೃತ ದುರ್ದೈವಿಗಳು. ಇಂದು ಸಂಜೆ ಯಲ್ಲಾಪುರದಿಂದ ಅಂಕೋಲಕ್ಕೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.

    ಭಾರೀ ಗಾಳಿ ಮಳೆಯಲ್ಲಿಯೇ ಸುಭಾಷ್ ಹಾಗೂ ನಾಗರಾಜ್ ಬೈಕಿನಲ್ಲಿ ಸಂಚರಿಸುತ್ತಿದ್ದರು. ದಾರಿ ಮಧ್ಯದಲ್ಲಿ ಬೃಹತ್ ಮರವೊಂದು ಅವರ ಮೇಲೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ಗಂಟೆಗೂ ಹೆಚ್ಚು ಕಾಲ ಹೆಡೆ ಎತ್ತಿ ನಿಂತು ರಸ್ತೆ ಬಂದ್ ಮಾಡಿದ ಕಾಳಿಂಗ

    ಒಂದು ಗಂಟೆಗೂ ಹೆಚ್ಚು ಕಾಲ ಹೆಡೆ ಎತ್ತಿ ನಿಂತು ರಸ್ತೆ ಬಂದ್ ಮಾಡಿದ ಕಾಳಿಂಗ

    ಕಾರವಾರ: ಒಂದು ಗಂಟೆಗೂ ಹೆಚ್ಚು ಕಾಲ ಕಾಳಿಂಗ ಸರ್ಪವೊಂದು ಹೆಡೆ ಎತ್ತಿ ನಿಂತು ರಸ್ತೆಯನ್ನು ಬಂದ್ ಮಾಡಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಿಗದ್ದೆಯ ಬಳಿ ನಡೆದಿದೆ.

    ಕಾಡಲ್ಲಿ ಆಹಾರ ಸಿಗದೆ ಕಾಡಿನಿಂದ ನಾಡಿಗೆ ಆಹಾರ ಅರಸಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಶಿರಸಿಯ ಮೆಣಸಿಗದ್ದೆಯ ಗ್ರಾಮಕ್ಕೆ ಬಂದಿತ್ತು. ಗ್ರಾಮದ ಮನೆಗಳಲ್ಲಿದ್ದ ಕೋಳಿ ಮರಿಗಳನ್ನ ನುಂಗುತ್ತಿದ್ದ ಕಾಳಿಂಗ ದಾರಿಯಲ್ಲಿ ಸಂಚರಿಸುವ ಜನರ ಮುಂದೆ ಹೆಡೆಎತ್ತಿ ನಿಂತು ಬುಸುಗುಡುತಿತ್ತು. ಹೆಡೆ ಎತ್ತಿ ನಿಂತ ಈ ಕಾಳಿಂಗ ಸರ್ಪವನ್ನು ನೋಡಿ ಜನರು ಭಯಭೀತರಾಗಿದ್ದರು.

    ಗ್ರಾಮಸ್ಥರು ಉರುಗ ತಜ್ಞ ಪ್ರಶಾಂತ್ ಹುಲೇಕಲ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಅವರು ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

     

  • ಟಾಟಾ ಎಸ್ ಪಲ್ಟಿ: 10 ಮಂದಿಗೆ ಗಂಭೀರ ಗಾಯ

    ಟಾಟಾ ಎಸ್ ಪಲ್ಟಿ: 10 ಮಂದಿಗೆ ಗಂಭೀರ ಗಾಯ

    ಕಾರವಾರ: ಟಾಟಾ ಎಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಾಹನದಲ್ಲಿದ್ದ ಹತ್ತು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಿಂಗನಳ್ಳಿ ಬಳಿ ನೆಡೆದಿದೆ.

    ಮುಂಡಗೋಡಿನಿಂದ ಸಿಂಗನಳ್ಳಿಗೆ ಕೂಲಿ ಕೆಲಸಗಾರರನ್ನು ಕರೆದುಕೊಂಡು ಹೋಗುವ ವೇಳೆ ಈ ಅವಘಡ ನೆಡೆದಿದೆ.

    ಚಾಲಕ ಟಾಟಾ ಏಸ್ ವಾಹನವನ್ನು ಅತಿ ವೇಗದಲ್ಲಿ ಚಲಾಯಿಸಿದ ಕಾರಣ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.