Tag: North India

  • ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಬೆಂಗಳೂರು: ಕರ್ನಾಟಕ ಸಾರ್ವಜನಿಕ ‌ಲೆಕ್ಕಪತ್ರ ಸಮಿತಿ ಸದಸ್ಯರು ಉತ್ತರ ಭಾರತದಲ್ಲಿ (North India) ಅಧ್ಯಯನ ಪ್ರವಾಸ (Study Tour) ನಡೆಸುತ್ತಿದ್ದಾರೆ.

    ಶಾಸಕ ಸಿಸಿ ಪಾಟೀಲ್ (CC Patil) ನೇತೃತ್ವದ ಸಾರ್ವಜನಿಕ ಖಾತೆಗಳ ಸಮಿತಿ ಅಧ್ಯಯನ ಪ್ರವಾಸ ನಡೆಸುತ್ತಿದ್ದು ಸದ್ಯ ಲಡಾಖ್‌ನಲ್ಲಿ (Ladakh) ಶಾಸಕರಿದ್ದಾರೆ. ಇದನ್ನೂ ಓದಿ: WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಕಳೆದ ಗುರುವಾರದಿಂದ ಸಮಿತಿ ಸದಸ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಲೇಹ್, ದೆಹಲಿ, ಇಂದೋರ್ ಮತ್ತು ಅಮೃತಸರದಲ್ಲಿ ಅಧ್ಯಯನ ಪ್ರವಾಸ ನಡೆಯುತ್ತಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು

  • ನಾಗ್ಪುರದಲ್ಲಿ ದಾಖಲೆಯ 56 ಡಿಗ್ರಿ ಉಷ್ಣಾಂಶ- ಉತ್ತರಭಾರತದಲ್ಲಿ ಶಾಖಾಘಾತಕ್ಕೆ 210 ಸಾವು

    ನಾಗ್ಪುರದಲ್ಲಿ ದಾಖಲೆಯ 56 ಡಿಗ್ರಿ ಉಷ್ಣಾಂಶ- ಉತ್ತರಭಾರತದಲ್ಲಿ ಶಾಖಾಘಾತಕ್ಕೆ 210 ಸಾವು

    ನವದೆಹಲಿ: ದೇಶದಲ್ಲಿ ರಣ ಬಿಸಿಲು ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಮೊನ್ನೆಯಷ್ಟೇ ದೆಹಲಿಯಲ್ಲಿ 42.9 ಡಿಗ್ರಿ ತಾಪಮಾನ ದಾಖಲಾಗಿತ್ತು. ಆದರಿಂದು ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpura, Maharastra) ಬರೋಬ್ಬರಿ 56 ಡಿಗ್ರಿ ಉಷ್ಣಾಂಶ ನಮೂದಾಗಿದೆ.

    ನಾಗ್ಪುರದ ಉತ್ತರ ಅಂಬಾಜರಿ ರಸ್ತೆಯ ಐಎಂಡಿ ಕೇಂದ್ರದಲ್ಲಿ 56 ಡಿಗ್ರಿ ತಾಪಮಾನ ದಾಖಲಾಗಿದೆ. ಸೊನೆಗಾಂವ್‍ನಲ್ಲಿ 54 ಡಿಗ್ರಿ ತಾಪಮಾನ ಕಂಡುಬಂದಿದೆ. ಜನರಂತೂ ಉಸ್ಸಪ್ಪ ಎಂದಿದ್ದಾರೆ. ಅಂದ ಹಾಗೇ, ಉತ್ತರ ಭಾರತದಲ್ಲಿ ರಣಬಿಸಿಲಿಗೆ ಕಳೆದ 24 ಗಂಟೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಜನ ಮೃತಪಟ್ಟಿದ್ದಾರೆ. ಈವರೆಗೂ 210ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ.

    ಬರೀ ಉತ್ತರಪ್ರದೇಶವೊಂದರಲ್ಲಿಯೇ (Uttarpradesh) ಬಿಸಿಗಾಳಿಯ ಶಾಖಾಘಾತಕ್ಕೆ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದ್ರಲ್ಲಿ ವಾರಣಾಸಿ ನಿವಾಸಿಗಳ ಸಂಖ್ಯೆ 34. ಬಿಹಾರದಲ್ಲಿ 65, ಒಡಿಶಾದಲ್ಲಿ 41, ಜಾರ್ಖಂಡ್‍ನ ರಾಂಚಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಈವರೆಗೂ ಸಾವಿರಾರು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ದೆಹಲಿ, ರಾಜಸ್ಥಾನ, ಹರಿಯಾಣ, ಪಂಜಾಬ್, ಬಿಹಾರ, ಉತ್ತರಪ್ರದೇಶದಲ್ಲಿ ಉಷ್ಣಾಂಶ 45 ಡಿಗ್ರಿ ಮೇಲ್ಪಟ್ಟೆ ಇದೆ. ಇದನ್ನೂ ಓದಿ: ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?

  • ದಕ್ಷಿಣದಲ್ಲಿ ಮಳೆಯ ಅಬ್ಬರ – ಉತ್ತರ ಭಾರತದಲ್ಲಿ ನೆತ್ತಿ ಸುಡುವ ಬಿಸಿಲು; ಜನರಿಗೆ ಹೀಟ್‌ ಸ್ಟ್ರೋಕ್‌ ಆತಂಕ!

    ದಕ್ಷಿಣದಲ್ಲಿ ಮಳೆಯ ಅಬ್ಬರ – ಉತ್ತರ ಭಾರತದಲ್ಲಿ ನೆತ್ತಿ ಸುಡುವ ಬಿಸಿಲು; ಜನರಿಗೆ ಹೀಟ್‌ ಸ್ಟ್ರೋಕ್‌ ಆತಂಕ!

    ನವದೆಹಲಿ: ದಕ್ಷಿಣ ಭಾರತದಲ್ಲಿ (South India) ಎಲ್ಲೆಡೆ ಮಳೆಯ ಅಬ್ಬರ ಹೆಚ್ಚುತ್ತಿದ್ದರೆ, ಉತ್ತರ ಭಾರತದಲ್ಲಿ ಸೂರ್ಯನ ಶಾಖ ನೆತ್ತಿ ಸುಡುತ್ತಿದೆ. ಮುಂದಿನ ಐದು ದಿನಗಳ ಕಾಲ ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರೀ ಬಿಸಲು (Heatwave) ಕಂಡು ಬರಲಿದ್ದು ಗರಿಷ್ಠ ಉಷ್ಣಾಂಶ ತಲುಪಲಿದೆ ಎಂದು ಭಾರತೀಯ ಹವಮಾನ ಇಲಾಖೆ ಎಚ್ಚರಿಸಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ಮೇ ತಿಂಗಳಲ್ಲಿ ಇದು ಗರಿಷ್ಠ ತಾಪಮಾನವಾಗಿದೆ. ದೆಹಲಿಯ (New Delhi) ನಜಾಫ್‌ಗಢ್ ಪ್ರದೇಶದಲ್ಲಿ 47.7 ಡಿಗ್ರಿ ತಾಪಮಾನ ವರದಿಯಾಗಿದ್ದು ಜನರನ್ನು ಹೈರಾಣಾಗಿಸಿದೆ. ಇದರ ಜೊತೆಗೆ ಮಂಗಳವಾರದಿಂದ ಶುಕ್ರವಾರದವರೆಗೆ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಪ್ರದೇಶದ (Uttar Pradesh) ಕೆಲವು ಪ್ರದೇಶಗಳಲ್ಲಿ ತೀವ್ರವಾದ ಶಾಖದ ವಾತಾವರಣ ಇರಲಿದೆ.

    ಈ ವಾರ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ಗುಡ್ಡಗಾಡು ರಾಜ್ಯಗಳಾದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳನ್ನು ಅಂದಾಜಿಸಿದೆ. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಬಿಜೆಪಿ ವಿರುದ್ಧ ಕ್ರಮಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಚಾಟಿ

    ರಾಜಸ್ಥಾನದ ಶ್ರೀಗಂಗಾನಗರ ಮತ್ತು ಅಂತಾದಲ್ಲಿ 46.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಹರಿಯಾಣದಲ್ಲಿ ನುಹ್ ಅತಿ ಹೆಚ್ಚು ಉಷ್ಣಾಂಶ 47.2 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಗರಿಷ್ಠ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಫರೀದ್‌ಕೋಟ್ ಪಂಜಾಬ್‌ನಲ್ಲಿ 44 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ್ದು, 43.9 ಡಿಗ್ರಿಗಳೊಂದಿಗೆ ಅಮೃತಸರ 2ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ದಾತಿಯಾದಲ್ಲಿ 47.5 ಡಿಗ್ರಿ, ಉತ್ತರ ಪ್ರದೇಶದ ಆಗ್ರಾದಲ್ಲಿ 47.7 ಡಿಗ್ರಿ ಮತ್ತು ಝಾನ್ಸಿಯಲ್ಲಿ 47.2 ಡಿಗ್ರಿ ದಾಖಲಾಗಿದೆ.

    ಬಿರುಸಿನ ಶಾಖದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಬಿಸಿಗಾಳಿ ಪೀಡಿತ ಪ್ರದೇಶಗಳಲ್ಲಿ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು, ತಲೆಯನ್ನು ರಕ್ಷಿಸಲು ಟೋಪಿಗಳು ಮತ್ತು ಛತ್ರಿಗಳನ್ನು ಬಳಸುವಂತೆ ತಿಳಿಸಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಹೀಟ್ ಸ್ಟ್ರೋಕ್‌ನ ಹೆಚ್ಚಿನ ಸಂಭವನೀಯತೆ ಇದ್ದು ಶಿಶುಗಳು, ವೃದ್ಧರು ಆರೋಗ್ಯ ಕಾಳಜಿವಹಿಸಲು ಹೇಳಿದೆ.

    ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಮಂಗಳವಾರ (ಮೇ 21) ಭಾರೀ ಮಳೆಯಾಗಲಿದೆ ಎಂದು ಅದು ಹೇಳಿದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂದಿನ 7 ದಿನಗಳವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇದನ್ನೂ ಓದಿ: ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್‌ ಅಂಬಾನಿ ಕುಟುಂಬ! 

  • ಭಾರೀ ಮಳೆ- ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್

    ಭಾರೀ ಮಳೆ- ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್

    ಚೆನ್ನೈ: ಮಿಚಾಂಗ್ ಚಂಡಮಾರುತ (Michaung Cyclone) ಪ್ರಭಾವದಿಂದ ದೇಶದ ಕೆಲವೆಡೆ ಹಲವು ದಿನಗಳಿಂದ ಅಬ್ಬರದ ಮಳೆಯಾಗಿತ್ತು. ಅದರಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಹಾಗೆಯೇ ಮುಂದಿನ 7 ದಿನಗಳ ಕಾಲ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನಿಡಿದೆ.

    ದಕ್ಷಿಣ ತಮಿಳುನಾಡು (Tamilnadu) ಮತ್ತು ಕೇರಳದಲ್ಲಿ (Kerala) ಭಾರೀ ಮಳೆ ಆಗ್ತಿದೆ. ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಕನ್ಯಾಕುಮಾರಿ, ತೂತುಕುಡಿ, ತಿರುನಲ್ವೇಲಿ, ತೇನ್‍ಕಾಶಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗ್ತಿದೆ. ತಿರುನಲ್ವೇಲಿಯ ಬಳಿ ಪೆಟ್ರೋಲ್ ಬಂಕ್ ಮುಳುಗಡೆ ಆಗಿದೆ. ಹಳ್ಳಕೊಳ್ಳಗಳು ತುಂಬಿ ಹರೀತಿದ್ದು, ಮಣಿಮುತಾರ್‍ನಲ್ಲಿ ಪ್ರವಾಹ ಉಂಟಾಗಿದೆ.

    ಪಾಳ್ಯಂಕೊಟ್ಟೈ ಎಂಬಲ್ಲಿ ದಾಖಲೆಯ 260 ಮಿಲಿಮೀಟರ್ ಮಳೆಯಾಗಿದೆ. ತೂತುಕುಡಿ ಜಿಲ್ಲೆಯ ಶ್ರೀವೈಕುಂಠಂನಲ್ಲಿ ಇಂದು ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಸುಮಾರು 500 ಮಿ.ಮಿ ಮಳೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಹೇಳಿದೆ.

    ಸೋಮವಾರ ಭಾರೀ ಮಳೆ ಹಿನ್ನೆಲೆ ತಮಿಳುನಾಡಿನ ರಾಮನಾಥಪುರಂ, ಶಿವಗಂಗಾ, ಪುದುಕೊಟ್ಟೈ, ತಂಜಾವೂರು, ವಿರುಧನಗರ ಮತ್ತು ಥೇಣಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ನೀಡಿದೆ. ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ, ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರ ದಕ್ಷಿಣ ತಮಿಳುನಾಡು, ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ ಅಲ್ಲಲ್ಲಿ ಮಿಂಚು, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬುಧವಾರದಿಂದ ಶನಿವಾರದವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

    ಇತ್ತ ಉತ್ತರಭಾರತದಲ್ಲಿ ಕೊರೆವ ಚಳಿ, ಹಿಮ ಮಳೆ ಆಗುತ್ತಿದೆ.‌ ದೆಹಲಿ ಸೇರಿ ಉತ್ತರ ಭಾರತದಾದ್ಯಂತ ಚಳಿ ಮತ್ತಷ್ಟು ಹೆಚ್ಚಾಗಿದೆ. ದಟ್ಟ ಮಂಜು ಆವರಿಸಿರುವ ಕಾರಣ ವಿಸಿಬಲಿಟಿಯೂ ಕಡಿಮೆ ಆಗಿದೆ. ಇದ್ರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಜನ ಪರದಾಡಿದ್ರು. ಇತ್ತ ಬೆಂಗಳೂರಿನಲ್ಲಿ ಚಳಿಯ ವಾತಾವರಣ ಕಂಡುಬಂದಿದೆ.

  • ಒಂದೇ ತಿಂಗಳಲ್ಲಿ ಮೂರು ಬಾರಿ ಕಂಪನ- ದೆಹಲಿಯಲ್ಲಿ ನಿರಂತರ ಭೂಕಂಪನಕ್ಕೆ ಕಾರಣವೇನು?

    ಒಂದೇ ತಿಂಗಳಲ್ಲಿ ಮೂರು ಬಾರಿ ಕಂಪನ- ದೆಹಲಿಯಲ್ಲಿ ನಿರಂತರ ಭೂಕಂಪನಕ್ಕೆ ಕಾರಣವೇನು?

    ನವದೆಹಲಿ: ನೇಪಾಳದಲ್ಲಿ 6.4 ತೀವ್ರತೆಯಲ್ಲಿ ಭೂಕಂಪನ (Earthquake) ಸಂಭವಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ (Delhi) ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಒಂದೇ ತಿಂಗಳಲ್ಲಿ ದೆಹಲಿಯಲ್ಲಿ ಮೂರನೇ ಬಾರಿಗೆ ಭೂಮಿ ಕಂಪಿಸಿದ್ದು, ಆತಂಕಕ್ಕೂ ಕಾರಣವಾಗಿದೆ.

    ದೆಹಲಿಯಲ್ಲಿ ಪದೇ ಪದೇ ಭೂಕಂಪನ ಯಾಕೆ ಎನ್ನುವ ಪ್ರಶ್ನೆ ಈಗ ಮೂಡಿದ್ದು, ಅದಕ್ಕೆ ತಜ್ಞರು ಉತ್ತರ ನೀಡಿದ್ದಾರೆ. ದೆಹಲಿ ಮತ್ತು ರಾಜಧಾನಿ ಪ್ರದೇಶದಲ್ಲಿ ಭೂಕಂಪನ ವಲಯ-IV ರಲ್ಲಿ ಕಂಡು ಬರುತ್ತದೆ. ಇದನ್ನು ಭಾರತೀಯ ಮಾನದಂಡಗಳ ಬ್ಯೂರೋ ಭೂಕಂಪನ ವಲಯ ನಕ್ಷೆಯ ಪ್ರಕಾರ ಹೆಚ್ಚಿನ ಭೂಕಂಪನ ಅಪಾಯದ ವಲಯವೆಂದು ಪರಿಗಣಿಸಲಾಗಿದೆ. ಈ ವಲಯ ಮಧ್ಯಮದಿಂದ ಹೆಚ್ಚಿನ ಮಟ್ಟದ ತೀವ್ರತೆಯೊಂದಿಗೆ ಭೂಕಂಪಗಳನ್ನು ಅನುಭವಿಸುವ ಸಂಭವ ಇದೆ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    ಈ ವರ್ಗೀಕರಣವು ಮುಖ್ಯವಾಗಿ ದೆಹಲಿಯ ಭೌಗೋಳಿಕ ಸ್ಥಾನದ ಮೇಲೆ ನಿರ್ಧರಿತವಾಗುತ್ತದೆ. ದೆಹಲಿ ಹಿಮಾಲಯ ಶ್ರೇಣಿಗಳಿಗೆ ಸಮೀಪದಲ್ಲಿದೆ. ಸರಿಸುಮಾರು 200-300 ಕಿಲೋಮೀಟರ್‌ಗಳ ಆಸುಪಾಸಿನಲ್ಲಿದೆ. ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‍ಗಳ ನಿರಂತರ ಘರ್ಷಣೆಯಿಂದಾಗಿ ಹಿಮಾಲಯವು ರೂಪುಗೊಂಡಿತು. ಈ ನಿರಂತರ ಟೆಕ್ಟೋನಿಕ್ ಚಟುವಟಿಕೆಯು ನಿಯಮಿತ ಕಂಪನಗಳಿಗೆ ಕಾರಣವಾಗುತ್ತದೆ. ಭೂಕಂಪಗಳು ಮತ್ತು ಭೂಕುಸಿತಗಳಂತಹ ಮರುಕಳಿಸುವ ನೈಸರ್ಗಿಕ ವಿಪತ್ತುಗಳಿಗೆ ಈ ಪ್ರದೇಶವನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

    ಭೂಮಿಯ ಹೊರಪದರದ ಮೇಲಿನ ಪದರದಲ್ಲಿರುವ ಟೆಕ್ಟೋನಿಕ್ ಪ್ಲೇಟ್‍ಗಳ ಚಲನೆಯಿಂದ ನಡುಕಗಳು ಸಾಮಾನ್ಯವಾಗಿ ಉಂಟಾಗುತ್ತವೆ. ಈ ಪದರದಲ್ಲಿ ಹೆಚ್ಚಿನ ಚಟುವಟಿಕೆಗಳಿಂದ ಭೂಕಂಪನದ ಸಾಧ್ಯತೆಗಳು ಹೆಚ್ಚು. ಪ್ರದೇಶದ ಭೂಕಂಪನದ ಅಪಾಯವು ಪ್ರಾಥಮಿಕವಾಗಿ ಹಿಮಾಲಯದ ಟೆಕ್ಟೋನಿಕ್ ಪ್ಲೇಟ್ ಗಡಿಯ ಸಾಮೀಪ್ಯದೊಂದಿಗೆ ಸಂಬಂಧಿಸಿದೆ, ಭಾರತೀಯ ಪ್ಲೇಟ್ ಯುರೇಷಿಯನ್ ಪ್ಲೇಟ್‍ನೊಂದಿಗೆ ಡಿಕ್ಕಿ ಹೊಡೆಯುತ್ತದೆ ಇದು ದೆಹಲಿ ಮತ್ತು ಅದರ ನೆರೆಹೊರೆಯ ಪ್ರದೇಶಗಳು ಸೇರಿದಂತೆ ಉತ್ತರ ಭಾರತದಲ್ಲಿ ಗಮನಾರ್ಹ ಭೂಕಂಪನ ಚಟುವಟಿಕೆಗಳಿಗೆ ಘರ್ಷಣೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ನೇಪಾಳ, ಉತ್ತರಾಖಂಡ ಮತ್ತು ಪಕ್ಕದ ಹಿಮಾಲಯ ಪ್ರದೇಶವು ರಿಕ್ಟರ್ ಮಾಪಕದಲ್ಲಿ 8.5 ಕ್ಕಿಂತ ಹೆಚ್ಚು ತೀವ್ರತೆಯ ವಿನಾಶಕಾರಿ ಭೂಕಂಪಕ್ಕೆ ಒಳಗಾಗುತ್ತದೆ. ಹಿಮಾಲಯದ ಸಾಮೀಪ್ಯವು ದೆಹಲಿಯನ್ನು ವಲಯ IVರಲ್ಲಿ ಇರಿಸಿದ್ದು, ಹಿಮಾಲಯ ಪ್ರದೇಶವು ವಲಯ 5ರಲ್ಲಿ ಬರುತ್ತದೆ, ಇದು ಭೂಕಂಪಗಳಿಂದ ಹಾನಿಗೊಳಗಾಗುವ ಪ್ರದೇಶವಾಗಿ ಗುರುತಿಸಲಾಗಿದೆ.

    ಭೌಗೋಳಿಕ ಅಂಶಗಳ ಹೊರತಾಗಿ ದೆಹಲಿ ವಿಶಿಷ್ಟ ಮಾದರಿಯು ದುರ್ಬಲತೆ ಭೂಕಂಪನಕ್ಕೆ ಕಾರಣವಾಗಿದೆ. ಹಲವಾರು ಬಹುಮಹಡಿ ಕಟ್ಟಡಗಳಿರುವ ಯಮುನಾ ಮತ್ತು ಹಿಂಡನ್ ನದಿಗಳ ದಡದಲ್ಲಿರುವ ಪ್ರದೇಶಗಳು ಹೆಚ್ಚು ಭೂಕಂಪನ-ಪೀಡಿತ ವಲಯಗಳಲ್ಲಿದೆ. ಹಳೆಯ ದೆಹಲಿಯ ಭಾಗಗಳು ಮತ್ತು ನದಿ ದಂಡೆಗಳಲ್ಲಿರುವ ಅನಧಿಕೃತ ಕಟ್ಟಡಗಳು ಈ ಅಪಾಯವನ್ನು ಹೆಚ್ಚಿಸುತ್ತವೆ.

    ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಗಮನಾರ್ಹ ಭೂಕಂಪನದ ಸಂಭಾವ್ಯತೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಜನಸಾಂದ್ರತೆಯಿರುವ ನಗರ ಪ್ರದೇಶ, ಹಳೆಯದಾದ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗುವ ಭೀತಿ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ

    ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ

    ನವದೆಹಲಿ: ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ (North India) ಹಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ಪ್ರಬಲ ಭೂಕಂಪನದ (Earthquake) ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

    ಮಧ್ಯಾಹ್ನ 2:15ರ ವೇಳೆಗೆ ನೇಪಾಳದಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿತು. ಇದರ ಪರಿಣಾಮ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ 4.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ ಹರಿಯಾಣದಲ್ಲಿ 2.7 ತೀವ್ರತೆಯಲ್ಲಿ ಮತ್ತು 3.0 ತೀವ್ರತೆಯಲ್ಲಿ ಅಸ್ಸಾಂನಲ್ಲಿ ಭೂಕಂಪನ ಸಂಭವಿಸಿತು.

    ಇಂಡೋ, ನೇಪಾಳ, ಚೀನಾ ಗಡಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸುತ್ತಿದೆ. ಸೋಮವಾರ ರಾತ್ರಿ ಮಯನ್ಮಾರ್‌ನಲ್ಲಿ ಭೂಮಿ ಕಂಪಿಸಿದ್ದು, ಇದರ ಪರಿಣಾಮ ಈಶಾನ್ಯ ಭಾರತದಲ್ಲೂ ಭೂಕಂಪನದ ಅನುಭವವಾಯಿತು. ಜನರು ಪ್ರಬಲ ಭೂಕಂಪನವನ್ನು ಅನುಭವಿಸಿದಾಗ ಕಟ್ಟಡಗಳಿಂದ ಹೊರಗೆ ಧಾವಿಸಿದರು. ಇದನ್ನೂ ಓದಿ: ಬೀದರ್ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿ ಮೋದಿ

    ನೆಲ ಮಹಡಿಯಲ್ಲಿದ್ದ ಜನರಿಗೆ ಭೂಕಂಪನದ ಅನುಭವಗಳು ಆಗಿಲ್ಲ. ಬಹು ಅಂತಸ್ತಿನ ಕಟ್ಟಡಗಳಲ್ಲಿದ್ದ ಜನರಿಗೆ ಭೂಕಂಪನದ ತೀವ್ರತೆ ಅರಿವಾಗಿದ್ದು, ಕಂಪ್ಯೂಟರ್, ಲ್ಯಾಪ್‌ಟಾಪ್, ಮೇಜು, ಕುರ್ಚಿಗಳು ಅಲುಗಾಡುತ್ತಿದ್ದಂತೆ ಕಟ್ಟಡಗಳಿಂದ ಹೊರ ಬಂದಿದ್ದಾರೆ. ಎಕ್ಸ್ ಪೊಸ್ಟ್‌ನಲ್ಲಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರ ಭಾರತದಲ್ಲಿ ಮಳೆಯಿಂದ ಜಲಪ್ರಳಯ – ಈವರೆಗೆ 19 ಬಲಿ, ಇಂದೂ ಭಾರೀ ಮಳೆ ಸಾಧ್ಯತೆ

    ಉತ್ತರ ಭಾರತದಲ್ಲಿ ಮಳೆಯಿಂದ ಜಲಪ್ರಳಯ – ಈವರೆಗೆ 19 ಬಲಿ, ಇಂದೂ ಭಾರೀ ಮಳೆ ಸಾಧ್ಯತೆ

    – ಹಿಮಾಚಲಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ

    ನವದೆಹಲಿ: ಉತ್ತರ ಭಾರತದಲ್ಲಿರುವ (North India) ಹಿಮಾಚಲಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರ, ಪಂಜಾಬ್, ಹರ್ಯಾಣ ರಾಜ್ಯಗಳು ಕುಂಭದ್ರೋಣ ಮಳೆಗೆ (Heavy Rainfall) ತತ್ತರಿಸಿವೆ. ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.

    ಇಂದೂ ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರವಾಹ, ಭೂಕುಸಿತ ಸಾಮಾನ್ಯ ಎಂಬಂತಾಗಿದ್ದು ಹಿಮಾಚಲದಲ್ಲಂತೂ (Himachal Pradesh) ಅಲ್ಲೋಲಕಲ್ಲೋಲವಾಗಿದೆ. ನದಿಗಳೆಲ್ಲಾ ಅಪಾಯದ ಮಟ್ಟ ಮೀರಿದ್ದು, ಸಿಕ್ಕಿದ್ದನ್ನೆಲ್ಲಾ ಆಪೋಷನ ಪಡೆಯುತ್ತಿವೆ.

    ಬೀಯಾಸ್ ನದಿ (Beas River) ರಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿದೆ. ಕುಲು ಬಳಿ ಕಾರುಗಳು ಕೊಚ್ಚಿ ಹೋಗಿದ್ದು, ಶಿಮ್ಲಾದ ಡಿಂಗು ಮಾತೆಯ ಮಂದಿರದ ರಸ್ತೆ ನೋಡನೋಡುತ್ತಲೇ ಕುಸಿದುಬಿದ್ದಿದೆ. ಅಟಲ್ ಸುರಂಗದ (Atal Tunnel) ಬಳಿಯೇ ಗುಡ್ಡ ಕುಸಿತವಾಗಿದ್ದು ಕುಲು-ಮನಾಲಿ ನಡುವಿನ ರಸ್ತೆ ಬಂದ್ ಆಗಿದೆ.  ಇದನ್ನೂ ಓದಿ: ಅಮರನಾಥ ಯಾತ್ರೆ ಕೈಗೊಂಡಿದ್ದ ಮಾಗಡಿಯ 5 ಮಂದಿ ಸೇಫ್‌

    ಪಂಧೋ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನೀರು ಹೊರಗೆ ಬಿಡಲಾಗಿದ್ದು, ಸಣ್ಣ ಸೇತುವೆಯೊಂದು ಮಾಯವಾಗಿದೆ. ಪಂಚವಕ್ತ್ರ ಎಂಬಲ್ಲಿ ಮರದ ದಿಮ್ಮಿಗಳ ಸಮೇತ ಜಲರಕ್ಕಸ ನಗರಕ್ಕೆ ನುಗ್ಗಿದೆ. ನಿರಂತರ ಗುಡ್ಡ ಕುಸಿತದ ಪರಿಣಾಮ ಮಾರ್ಗಮಧ್ಯೆಯೇ ಸಾವಿರಾರು ವಾಹನ ಸಿಲುಕಿವೆ.

    ಊಟ ನೀರಿಲ್ಲದೇ ಪ್ರವಾಸಿಗರು ಒದ್ದಾಡುವಂತಾಗಿದೆ. ಪ್ರವಾಹ, ಭೂಕುಸಿತದ ಪರಿಣಾಮ 700ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಹಿಮಾಚಲದಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದ್ದು, 2 ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಉತ್ತರಾಖಂಡ್‍ನ (Uttarakhand) ಉಧಾಂಸಿಂಗ್‍ನಗರದಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ತೆಹ್ರಿಯಲ್ಲಿ ದಕ್ಷಿಣ ಭಾರತೀಯರಿದ್ದ ಪ್ರವಾಸಿ ವಾಹನವೊಂದು ಅಪಘಾತಕ್ಕೀಡಾಗಿದೆ. 11 ಮಂದಿ ಪೈಕಿ ಐವರನ್ನು ರಕ್ಷಣೆ ಆಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.

    ಜಮ್ಮು ಕಾಶ್ಮೀರದ (Jammu Kashmir) ಪೋಶನಾ ನದಿಯಲ್ಲಿ ಇಬ್ಬರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 44 ಹಲವೆಡೆ ಸಮಸ್ಯೆಯಾಗಿದೆ. ಪಂಜಾಬ್‍ನ ಮೊಹಾಲಿ ಜಲಾವೃತವಾಗಿದ್ದು, ಅಪಾರ್ಟ್‍ಮೆಂಟ್‍ಗಳು ಜಲದಿಗ್ಬಂಧನದಲ್ಲಿವೆ. ಬೋಟ್‍ಗಳ ಮೂಲಕ ಜನರನ್ನ ರಕ್ಷಿಸಲಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    – ಮುಂದಿನ 6 ದಿನ ದೆಹಲಿಗೆ ಎಲ್ಲೋ ಅಲರ್ಟ್
    – ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದಾಖಲು

    ನವದೆಹಲಿ: ಉತ್ತರ ಭಾರತ (North India) ಪ್ರವಾಸ ಮಾಡುವ ಯೋಜನೆಯಲ್ಲಿದ್ದರೆ ಕೆಲ ದಿನಗಳ ಕಾಲ ನಿಮ್ಮ ಪ್ರವಾಸ ಮುಂದೂಡುವುದು ಒಳಿತು. ತೀವ್ರ ಶೀತಗಾಳಿಯಿಂದ ದೆಹಲಿ (Delhi) ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಷ್ಣಾಂಶ ಕುಸಿದಿದ್ದು ಭಾರೀ ಮಂಜು (Fog) ಮತ್ತು ಚಳಿ (Cold) ಆವರಿಸಿಕೊಂಡಿದೆ.

    ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಸೋಮವಾರದಿಂದ ಮುಂದಿನ 6 ದಿನಗಳವರೆಗೆ ದೆಹಲಿಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮೊದಲ 3 ದಿನಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ನಂತರದ 3 ದಿನ ದಟ್ಟ ಮಂಜು ಆವರಿಸಿಕೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಹವಾಮಾನ ಇಲಾಖೆಯ ಪ್ರಕಾರ, ಹಿಮಾಲಯದಿಂದ ವಾಯುವ್ಯ ಭಾರತದ ಬಯಲು ಪ್ರದೇಶದತ್ತ ವಾಯುವ್ಯ ಮಾರುತಗಳು ಬೀಸುತ್ತಿದ್ದು, ಮುಂದಿನ 2 ದಿನಗಳಲ್ಲಿ ಕನಿಷ್ಠ ತಾಪಮಾನವು 2-4 ಡಿಗ್ರಿಗಳಷ್ಟು ಕುಸಿಯುವ ಸಾಧ್ಯತೆಯಿದೆ. ಇದರ ಪರಿಣಾಮ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿರಲಿದೆ.

    ತಾಪಮಾನ ಕುಸಿದ ಹಿನ್ನಲೆ ಉತ್ತರ ರೈಲ್ವೆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇನ್ನು ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ನವದೆಹಲಿ: ಜನವರಿ 16 – 18ರ ನಡುವೆ ದೆಹಲಿಯ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬರಲಿದ್ದು, ಬಯಲು ಪ್ರದೇಶದಲ್ಲಿ -4° ತಲುಪಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಲೈವ್ ವೆದರ್ ಆಫ್ ಇಂಡಿಯಾ ಹೆಸರಿನ ಆನ್‌ಲೈನ್ ಹವಾಮಾನ (Weather) ವೇದಿಕೆಯ ಸಂಸ್ಥಾಪಕ ನವದೀಪ್ ದಹಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು ನನ್ನ ವೃತ್ತಿಜೀವನದಲ್ಲಿ ತಾಪಮಾನವು ಈ ಮಟ್ಟಕ್ಕೆ ಇಳಿಯುವುದನ್ನು ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಉತ್ತರ ಭಾರತದಲ್ಲಿ (North India) ಚಳಿಗಾಳಿಯು ಜನವರಿ 14-19ರ ಅವಧಿಯಲ್ಲಿ ಕಂಡು ಬರಲಿದ್ದು, 16-18ರ ನಡುವೆ ಗರಿಷ್ಠವಾಗಿ ಕಾಣಿಸುತ್ತದೆ. ಬಯಲು ಪ್ರದೇಶಗಳಲ್ಲಿ -4 °c ನಿಂದ +2 °c ತಾಪಮಾನ ದಾಖಲಾಗಲಿದೆ ಎಂದು ನವದೀಪ್ ದಹಿಯಾ ಹೇಳಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ

    ದೀರ್ಘಾವಧಿಯಲ್ಲಿ ಏಕ ಸಂಖ್ಯೆಯ ತಾಪಮಾನ ದೆಹಲಿಯಲ್ಲಿ ಇರಲಿದ್ದು, 2023ರ ಜನವರಿ 21ನೇ ಶತಮಾನದ ಅತ್ಯಂತ ಚಳಿಯ ದಿನಗಳಿರಬಹುದು ಎಂದು ಎಚ್ಚರಿಸಿದ್ದಾರೆ. ಉತ್ತರ ಮತ್ತು ವಾಯುವ್ಯ ಭಾರತದ ಭಾಗಗಳು ಈಗಾಗಲೇ ತೀವ್ರ ಚಳಿ ಮತ್ತು ದಟ್ಟವಾದ ಮಂಜಿನಿಂದ ಮುಚ್ಚಿಹೋಗಿವೆ. ಈ ವಾರದ ಆರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಹವಾಮಾನ ಕೇಂದ್ರದಲ್ಲಿ ಕನಿಷ್ಠ 1.9 ಡಿಗ್ರಿ ತಾಪಮಾನ ದಾಖಲಾಗಿದೆ.

    ಅದೇ ರೀತಿ ದಕ್ಷಿಣ ಭಾರತದಾದ್ಯಂತ ಶೀತದ ಪರಿಸ್ಥಿತಿಗಳು ವರದಿಯಾಗಲಿವೆ. ಹವಾಮಾನ ಅಧಿಕಾರಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರದಲ್ಲಿ ಈ ಶೀತ ಮತ್ತು ಮಂಜಿನ ಪರಿಸ್ಥಿತಿಗಳು ರೈಲು ಮತ್ತು ವಾಯು ಸಂಚಾರಕ್ಕೆ ಅಡ್ಡಿಪಡಿಸಿವೆ, ಪ್ರತಿದಿನ ಡಜನ್‌ಗಟ್ಟಲೆ ರೈಲುಗಳು ವಿಳಂಬವಾಗುತ್ತವೆ, ವಿಮಾನಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • RRR ದಾಖಲೆ ಸರಿಗಟ್ಟಿದ ರಾಕಿಭಾಯ್: ಟಿಕೆಟ್ ಬುಕ್ಕಿಂಗ್‌ನಲ್ಲಿ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

    RRR ದಾಖಲೆ ಸರಿಗಟ್ಟಿದ ರಾಕಿಭಾಯ್: ಟಿಕೆಟ್ ಬುಕ್ಕಿಂಗ್‌ನಲ್ಲಿ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

    ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್-2’ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದ್ದು, ಚಿತ್ರವೂ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಚಿತವ್ರು ರಿಲೀಸ್‌ಗೂ ಮುನ್ನವೇ 20 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದ್ದು, ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್ ಸಿನಿಮಾದ ದಾಖಲೆಯನ್ನೂ ಸರಿಗಟ್ಟಿದೆ.

    kgf

    ಮಧ್ಯರಾತ್ರಿಯಿಂದಲೇ ತೆರೆಗೆ ಬಂದ ಕೆಜಿಎಫ್-2ಗೆ ಎಲ್ಲ ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗಗಳಲ್ಲೂ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಕೋವಿಡ್ ನಂತರ ಬಿಡುಗಡೆಯಾದ ಹಿಂದಿ ಚಲನಚಿತ್ರಗಳನ್ನೂ ಕೆಜಿಎಫ್-2 ಹಿಂದಿಕ್ಕಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಕೆಜಿಎಫ್ 2 : ಈ ಎಲ್ಲ ಸೆಲೆಬ್ರಿಟಿಗಳು ಮಧ್ಯೆ ರಾತ್ರಿಯೇ ಸಿನಿಮಾ ನೋಡಿದ್ರು

    rrr - kgf

    ಮಧ್ಯರಾತ್ರಿಯಿಂದಲೇ ಶೋ ನೋಡಿ ಬಂದವರು ರಾಕಿಭಾಯ್‌ಯನ್ನು ಹೊಗಳುತ್ತಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳು, ಮಕ್ಕಳು ಫಿದಾ ಆಗಿದ್ದು, ರಾಕಿಭಾಯ್‌ಗಾಗಿ ಥಿಯೇಟರ್ ಮುಂದೆಯೇ ಸ್ಟೆಪ್ ಹಾಕುತ್ತಿದ್ದಾರೆ. 5 ಭಾಷೆಗಳಲ್ಲಿ ಸುಮಾರು 70 ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದ್ದು, ಉತ್ತರ ಭಾರತದಲ್ಲಿ ಕೂಡ ಕೆಜಿಎಫ್-2 ಹವಾ ಆರಂಭವಾಗಿದೆ. ಇದನ್ನೂ ಓದಿ: ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?

    kgf 2

    ಈಗಾಗಲೇ ಟಿಕೆಟ್ ಬುಕ್ಕಿಂಗ್ ಆದಾಯದಲ್ಲಿ ಕನ್ನಡದಲ್ಲಿ 4.90 ಕೋಟಿ, ಹಿಂದಿಯಲ್ಲಿ 11.40 ಕೋಟಿ, ಮಲಯಾಳಂನಲ್ಲಿ 1.90 ಕೋಟಿ, ತೆಲುಗಿನಲ್ಲಿ 5 ಲಕ್ಷ, ತಮಿಳಿನಲ್ಲಿ 2 ಕೋಟಿಗೆ ಸೇರಿ 20.25 ಕೋಟಿ ರೂ.ಗೆ ಮುಂಗಡ ಟಿಕೆಟ್ ಮಾರಾಟವಾಗಿದೆ. ಸದ್ಯ ಕೆಜಿಎಫ್‌ಗೆ ಸವಾಲೊಡ್ಡಲು ಸಿದ್ಧವಾಗಿದ್ದ ಶಾಹಿದ್ ಕಪೂರ್ ನಟನೆಯ `ಜೆರ್ಸಿ’ ಚಿತ್ರವು ಕಾಪಿರೈಟ್ ಸಮಸ್ಯೆ ಎದುರಿಸುತ್ತಿದ್ದು, ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.