Tag: North Bengal

  • ವೇದಿಕೆಯಲ್ಲಿಯೇ ಅನಾರೋಗ್ಯಕ್ಕೀಡಾದ ಸಚಿವ ನಿತಿನ್ ಗಡ್ಕರಿ

    ವೇದಿಕೆಯಲ್ಲಿಯೇ ಅನಾರೋಗ್ಯಕ್ಕೀಡಾದ ಸಚಿವ ನಿತಿನ್ ಗಡ್ಕರಿ

    ಕೋಲ್ಕತ್ತಾ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಯವರು ವೇದಿಕೆಯಲ್ಲಿಯೇ ಅನಾರೋಗ್ಯಕ್ಕೊಳಗಾದ ಘಟನೆ ಉತ್ತರ ಬಂಗಾಳದಲ್ಲಿ ನಡೆದಿದೆ.

    ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ರಸ್ತೆಯ ಶಂಕು ಸ್ಥಾಪನೆ ಮಾಡಲು ಕೇಂದ್ರ ಸಚಿವರು ಸಿಲಿಗುರಿಗೆ ಬಂದಿದ್ದರು. ಕಾರ್ಯಕ್ರಮವನ್ನು ಡಾರ್ಜಿಲಿಂಗ್ ಜಂಕ್ಷನ್ ಬಳಿ ದಗಾಪುರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಹೀಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ವೇದಿಕೆ ಮೇಲೆ ಕುಳಿತಿದ್ದರು.

    ಆಗ ಏಕಾಏಕಿ ಅನಾರೋಗ್ಯ (Sick) ಕ್ಕೀಡಾದರು. ಕೂಡಲೇ ವೇದಿಕೆಯ ಹಿಂದಿನ ಗ್ರೀನ್ ರೂಮ್‍ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಲಿಗುರಿಯಿಂದ ಗ್ರೀನ್ ಕಾರಿಡಾರ್ ಮೂಲಕ ಓರ್ವ ವೈದರನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರು ಸಚಿವರನ್ನು ಮನೆಗೆ ಕರೆದುಕೊಂಡು ಹೋದರು.

    ಗಡ್ಕರಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಿದೆ. ಹೀಗಾಗಿ ವೈದ್ಯರ ಸೂಚನೆಯಂತೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಮನೆಯಲ್ಲಿಯೇ ಚಿಕಿತ್ಸೆ ನಡೆಯುತ್ತಿದ್ದು, ವೈದ್ಯರು ಕೂಡ ಅಲ್ಲಿಯೇ ಇದ್ದಾರೆ. ಇದನ್ನೂ ಓದಿ: ಮಾಜಿ ಸಂಸದನ ಮೇಲೆ ಅರ್ಚಕನ ವೇಷ ಧರಿಸಿದ್ದ ವ್ಯಕ್ತಿಯಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಪ್ರವಾಸಿಗರ ಕಣ್ಮನ ಸೆಳೆಯುತ್ತಿರೋ ಅತ್ಯಾಧುನಿಕ ರೈಲ್ವೆ ರೆಸ್ಟೋರೆಂಟ್ – ಎಲ್ಲಿದೆ ಗೊತ್ತಾ?

    ಪ್ರವಾಸಿಗರ ಕಣ್ಮನ ಸೆಳೆಯುತ್ತಿರೋ ಅತ್ಯಾಧುನಿಕ ರೈಲ್ವೆ ರೆಸ್ಟೋರೆಂಟ್ – ಎಲ್ಲಿದೆ ಗೊತ್ತಾ?

    ಕೊಲ್ಕತ್ತಾ: ಸಾಮಾನ್ಯವಾಗಿ ಗ್ರೀನರಿ, ಬೆಟ್ಟ, ಗುಡ್ಡಗಳು ಹೆಚ್ಚಾಗಿ ಈಶಾನ್ಯ ಭಾರತದಲ್ಲಿ ಕಂಡು ಬರುತ್ತದೆ. ಆದರೆ ಉತ್ತರ ಬಂಗಾಳದ (North Bengal) ಪ್ರವಾಸಿಗರು ಟಿಕೆಟ್ ಇಲ್ಲದೇ ರೈಲ್ವೆ ಕ್ಯಾಬಿನ್‍ನಲ್ಲಿ ಕುಳಿತುಕೊಂಡು ಈ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಹೌದು, ಇದೇ ಮೊದಲ ಬಾರಿಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆಯು (North-East Frontier Railway) ಪ್ರತಿ ವರ್ಷ ಉತ್ತರ ಬಂಗಾಳಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗಾಗಿ ವೀಲ್‍ಗಳ ಮೇಲೆ ನಿರ್ಮಿಸಲಾಗಿರುವ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದೆ. ಈ ರೆಸ್ಟೋರೆಂಟ್‍ನಲ್ಲಿ ಸುಮಾರು 40 ಜನ ಕೆಲಸ ಮಾಡುತ್ತಿದ್ದಾರೆ.  ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

    ಹಾಳಾಗಿರುವ ರೈಲ್ವೆ ಕೋಚ್ ಅನ್ನು ಸಿಂಗರಿಸಿ, ಸುಂದರವಾದ ರೆಸ್ಟೋರೆಂಟ್ ಆಗಿ ರೈಲ್ವೆ ಅಧಿಕಾರಿಗಳು ಪರಿವರ್ತಿಸಿದ್ದಾರೆ. ಸಿಲಿಗುರಿಯ ನ್ಯೂ ಜಲ್ಪೈಗುರಿ ರೈಲು (New Jalpaiguri railway) ನಿಲ್ದಾಣದಲ್ಲಿ ಈ ಹವಾನಿಯಂತ್ರಿತ ರೆಸ್ಟೋರೆಂಟ್ ಇದ್ದು, ಒಳಗಡೆ ಬಗೆಬಗೆಯ ತಿಂಡಿ, ತಿನಿಸುಗಳಿರುವಂತೆ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಚುನಾವಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

    ರೈಲಿನ ಹೊರಗೆ ದೆಹಲಿಯ ಕೆಂಪು ಕೋಟೆ, ಸೇತುವೆ, ವಿಕ್ಟೋರಿಯಾ ಸ್ಮಾರಕವನ್ನು ಯೆಲ್ಲೋ ಕಲರ್ ಪೇಯಿಟಿಂಗ್‍ನಿಂದ ಚಿತ್ರಬಿಡಿಸಲಾಗಿದೆ. ಭಾರತೀಯ, ಚೈನೀಸ್ ಮತ್ತು ಸೌತ್ ಫುಡ್ ಹೀಗೆ ಎಲ್ಲಾ ರೀತಿಯ ಆಹಾರಗಳು ಲಭ್ಯವಿದೆ ಎಂದು ರೆಸ್ಟೋರೆಂಟ್‍ನ ವ್ಯವಸ್ಥಾಪಕ ಬಿಸ್ವಜಿತ್ ಜಾನಾ ಹೇಳಿದ್ದಾರೆ.

    ಈ ರೆಸ್ಟೋರೆಂಟ್ ಅನ್ನು ನಿರ್ಮಾಣ ಮಾಡುವ ಬಗ್ಗೆ ಮೊದಲ ಬಾರಿಗೆ ಜನರಲ್ ಮ್ಯಾನೇಜರ್ ಅನ್ಸುಲ್ ಗುಪ್ತಾ ಅವರು ಯೋಚಿಸಿದರು. ಇದನ್ನು ಮೊದಲ ಬಾರಿಗೆ ನ್ಯೂ ಜಲ್ಪೈಗುರಿ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಎಡಿಆರ್‍ಎಂ ಸಂಜಯ್ ಚಿಲವರ್ವಾರ್ ತಿಳಿಸಿದ್ದಾರೆ. ಅತ್ಯಾಧುನಿಕ ಈ ರೆಸ್ಟೋರೆಂಟ್ ಬೆಳಗ್ಗೆ 6 ರಿಂದ 10ರವರೆಗೆ ತೆರೆದಿರುತ್ತದೆ.

    Live Tv
    [brid partner=56869869 player=32851 video=960834 autoplay=true]