Tag: north africa

  • ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    ರಿಯಾದ್: ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ. ಉತ್ತರ ಆಫ್ರಿಕಾದಿಂದ ವಾಪಸ್ಸಾಗಿದ್ದ ವ್ಯಕ್ತಿ ಸೋಂಕು ಕಾಣಿಸಿಕೊಂಡಿದೆ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

    ಓಮಿಕ್ರಾನ್‌ ಪೀಡಿತ ವ್ಯಕ್ತಿಯನ್ನು ಐಸೊಲೇಷನ್‌ನಲ್ಲಿ ಇರಿಸಲಾಗಿದೆ. ವ್ಯಕ್ತಿಯ ಆರೋಗ್ಯದ ಕುರಿತು ನಿಗಾ ವಹಿಸಲಾಗಿದೆ. ಅಲ್ಲದೇ ಆತನ ಸಂಪರ್ಕಕ್ಕೆ ಬಂದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

    ದಕ್ಷಿಣ ಆಫ್ರಿಕಾದ ಏಳು ದೇಶಗಳಿಂದ ವಿಮಾನ ಸಂಚಾರಕ್ಕೆ ಸೌದಿ ಅರೇಬಿಯಾ ನಿರ್ಬಂಧ ವಿಧಿಸಿತ್ತು. ಆದರೆ ಉತ್ತರ ಆಫ್ರಿಕಾದೊಂದಿಗಿನ ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ ಎನ್ನಲಾಗಿದೆ.

    ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ವಿಧಿಸಿದ್ದ ಕೆಲವು ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆರವುಗೊಳಿಸಿದೆ. ಮುಸ್ಲಿಮರು ಹಬ್ಬಗಳ ಸಂದರ್ಭದಲ್ಲಿ ಪರಸ್ಪರರು ಆಲಿಂಗನ ಮಾಡಿಕೊಂಡು ಶುಭಕೋರುವ ವಿಧಾನಕ್ಕೆ ಅಕ್ಟೋಬರ್‌ನಿಂದ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ಸೌದಿ ಅರೇಬಿಯಾದಲ್ಲಿ ಸುಮಾರು 3.5 ಕೋಟಿ ಜನಸಂಖ್ಯೆ ಇದೆ. ಈವರೆಗೆ ಕೋವಿಡ್‌ ದೃಢಪಟ್ಟ 5,49,000 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 8,836 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೆ 4.7 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ.

  • ಆಫ್ರಿಕಾದಲ್ಲಿ ಬಲಿಯಾದ ಕೊಪ್ಪಳ ವ್ಯಕ್ತಿಯ ಮೃತದೇಹ ಭಾರತಕ್ಕೆ ತರಲು ಸುಷ್ಮಾ ಸಹಾಯ

    ಆಫ್ರಿಕಾದಲ್ಲಿ ಬಲಿಯಾದ ಕೊಪ್ಪಳ ವ್ಯಕ್ತಿಯ ಮೃತದೇಹ ಭಾರತಕ್ಕೆ ತರಲು ಸುಷ್ಮಾ ಸಹಾಯ

    ಕೊಪ್ಪಳ: ಉತ್ತರ ಆಪ್ರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಇದೀಗ ವ್ಯಕ್ತಿಯ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಸೈಯದ್ ಫಾರೂಕ್ ಬಾಷಾ ಖಾದ್ರಿ (25) ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿಯವ ಆಪ್ತ ಸಹಾಯಕ ಸೈಯದ್ ಬದ್ರುದ್ದಿನ್ ಅವರ ಪುತ್ರ ಉತ್ತರ ಆಫ್ರಿಕಾದ ಸೂಡಾನ್ ನ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಕಳೆದ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

    ಕಂಪೆನಿಯ ವಾಹನದಲ್ಲಿ ಕೆಲಸ ತೆರಳುತ್ತಿರುವಾಗ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಫಾರೂಖ್ ಮತ್ತು ವಾಹನದ ಚಾಲಕ ಮೃತಪಟ್ಟಿದ್ದಾರೆ. ಇದೀಗ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಫಾರೂಖ್ ಸಂಬಂಧಿಕರು ವಿದೇಶಾಂಗ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಹಾಯ ಮಾಡುವುದಾಗಿ ಪ್ರತಿಕ್ರಿಯಿಸಿಸಿ, ಸಂಬಂಧಪಟ್ಟವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

    ಸದ್ಯ ಸೈಯದ್ ಬದ್ರುದ್ದಿನ್‍ರ ಕುಟುಂಬಸ್ಥರು ಆಂಧ್ರದ ಕರ್ನೂಲ್ ನಲ್ಲಿ ವಾಸವಾಗಿದ್ದಾರೆ.