Tag: Nonvez

  • ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ರುಚಿರುಚಿಯಾದ ಆಹಾರ ಸೇವಿಸುವುದೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಇಷ್ಟ. ಆದ್ರೆ ಅನ್ನದೊಂದಿಗೆ ಚಿಕನ್ ಕರಿ ಇದ್ರೆ ಎಷ್ಟು ಚಂದ ಅಲ್ವಾ. ಬಹಳ ಮಂದಿಯ ಊಟಕ್ಕೆ ಚಿಕನ್ ಕರಿ ಇರ್ಲೇಬೇಕು. ಚಿಕನ್ ಎಂದಾಕ್ಷಣ ನೆನಪಾಗೋದು ಚಿಕನ್ ಹರಿಯಾಲಿ. ಹಾಗಾದ್ರೆ ಈ ಚಿಕನ್ ಹರಿಯಾಲಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್- 1/5 ಕೆ.ಜಿ
    * ಈರುಳ್ಳಿ _ 2
    * ಎಣ್ಣೆ- 4-5 ಚಮಚ
    * ಪುದಿನಾ – 1/2 ಕಪ್
    * ಹಸಿಮೆಣಸು – 5-6
    * ಏಲಕ್ಕಿ -3
    * ಚೆಕ್ಕೆ -2
    * ಜೀರಾ ಪೌಡರ್ – 1/2 ಚಮಚ
    * ಖಾರದ ಪುಡಿ – 1 ಚಮಚ
    * ಮೊಸರು – 1/2 ಕಪ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಕಪ್
    * ಕೊತ್ತಂಬರಿ ಸೊಪ್ಪು – 1/2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    ಮಿಕ್ಸಿಗೆ ಮೊದಲು ಪುದಿನ ಸೊಪ್ಪು, ಮೊಸರು, ಹಸಿ ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ. ರುಬ್ಬಿದ ಮೇಲೆ ಪಕ್ಕದಲ್ಲಿರುವ ಬಾಣಲೆಗೆ ಎಣ್ಣೆ ಹಾಕಿ. ನಂತರ ಚೆಕ್ಕೆ, ಹಾಗೂ ಏಲಕ್ಕಿ ಹಾಕಿ. ಬಳಿಕ ಕಟ್ ಮಾಡಿದ ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಬೇಕು. ಸ್ವಲ್ಪ ಸಮಯದ ಮೇಲೆ ಚಿಕನ್ ಹಾಕಿ ಫ್ರೈ ಮಾಡಿ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ಚಿಕನ್ ಕಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಫ್ರೈ ಆಗುತ್ತಿರುವಾಗ ಜಿರಾ ಪೌಡರ್, ಖಾರ ಪುಡಿ, ಮೊಸರು ಇವುಗಳನ್ನು ಹಾಕಿ. ನಂತರ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿದ ಪದಾರ್ಥವನ್ನ ಬಾಣಲೆಗೆ ಹಾಕಿ ಸ್ವಲ್ಪ ಕುದಿಸಿ. ಕುದಿಸಿದ ಬಳಿಕ ಉಪ್ಪು ಹಾಕಿ. ನಂತರ 15-20 ನಿಮಿಷದಷ್ಟು ಬಾಣಲೆಯ ಮೇಲೆ ಮುಚ್ಚಳ ಹಾಕಿ ಬೇಯಿಸಿ. ಬೆಂದ ಮೇಲೆ ರುಚಿಯಾದ ಚಿಕನ್ ಹರಿಯಾಲಿ ಸಿದ್ಧವಾಗುತ್ತದೆ.

  • ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡೋ ವಿಧಾನ

    ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡೋ ವಿಧಾನ

    ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಈಗ ತುಂಬಾ ಸಮಯವಿದೆ. ಇತ್ತ ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕಿನ್ ತೆಗೆದುಕೊಂಡು ಬನ್ನಿ. ಸುಲಭವಾಗಿ ಚಿಕನ್ ಡ್ರೈ ರೋಸ್ಟ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಚಿಕನ್- 1/2 ಕೆಜಿ
    2. ಈರುಳ್ಳಿ – 1
    3. ಅರಿಶಿಣ – 1/2 ಟೀ ಸ್ಪೂನ್
    4. ಖಾರದ ಪುಡಿ – 1/2 ಟೀ ಸ್ಪೂನ್
    5. ಗರಂ ಮಸಾಲ – 1/2 ಟೀ ಸ್ಪೂನ್
    6. ಪೆಪ್ಪರ್ – 1/4 ಟೀ ಸ್ಪೂನ್
    7. ಜೀರಿಗೆ ಪೌಡರ್ – 1/4 ಟೀ ಸ್ಪೂನ್
    8. ದನಿಯಾ ಪೌಡರ್ -1/2 ಟೀ ಸ್ಪೂನ್
    9. ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀ ಸ್ಪೂನ್
    10. ಹಸಿ ಮೆಣಸಿನಕಾಯಿ -3
    11. ಕರಿಬೇವು – 5 ರಿಂದ 6 ಎಲೆ
    12. ಎಣ್ಣೆ
    13. ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ತೊಳೆದುಕೊಂಡು ಒಂದು ಬೌಲ್‍ನಲ್ಲಿ ಹಾಕಿಕೊಳ್ಳಿ.
    * ಇದಕ್ಕೆ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪೌಡರ್, ಜೀರಿಗೆ ಪೌಡರ್, ದನಿಯಾ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎರಡು ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಬಿಡಿ.
    * ಈರುಳ್ಳಿಯನ್ನು ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಹಾಕಿಕೊಳ್ಳಿ (ನಿಮ್ಮ ಡಿಶ್ ರೆಡಿ ಆಗೋವರೆಗೂ ಸ್ಟೌವ್ ಸಣ್ಣ ಉರಿಯಲ್ಲಿರಬೇಕು). ಎಣ್ಣೆ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಪೇಸ್ಟ್ ಮತ್ತು ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    * ಈರುಳ್ಳಿ ಪೇಸ್ಟ್ ಫ್ರೈ ಆಗ್ತಿದ್ದಂತೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಚಿಟಿಕೆ ಅರಿಶಿಣ ಮತ್ತು ಅರ್ಧ ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡುತ್ತಿರಬೇಕು.


    * ಈರುಳ್ಳಿ ಪೇಸ್ಟ್ ಗೋಲ್ಡನ್ ಕಲರ್ ಬಂದ ಮೇಲೆ ಮಸಾಲ ಮಿಕ್ಸ್ ಮಾಡಿದ ಚಿಕನ್ ಸೇರಿಸಿಕೊಳ್ಳಿ.
    * ಚಿಕನ್ ಮಿಕ್ಸ್ ಮಾಡಿದ ನಂತರ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಲು ಬಿಡಿ. ಮತ್ತೆ ಮುಚ್ಚಳ ತೆಗೆದ ಮೇಲೆ ಚೆನ್ನಾಗಿ ಕಲಕಬೇಕು. ಹೀಗೆ ಮಸಾಲ ಸೀದು ಹೋಗದಂತೆ ಚೆನ್ನಾಗಿ ಕಲಕುತ್ತಿರಬೇಕು. ( ಡ್ರೈ ರೋಸ್ಟ್ ಆಗಿದ್ದರಿಂದ ನೀರು ಸೇರಿಸಬಾರದು/ ಒಂದು ವೇಳೆ ತುಂಬಾನೇ ಡ್ರೈ ಅನಿಸಿದ್ರೆ ಬಿಸಿನೀರನ್ನ ಸ್ವಲ್ಪ ಸೇರಿಸಬಹುದು)
    * ಹೀಗೆ ಚಿಕನ್ ಕಡಿಮೆ ಉರಿಯಲ್ಲಿ ಏಳರಿಂದ ಎಂಟು ನಿಮಿಷ ಬೇಯಿಸಿದ್ರೆ ನಿಮ್ಮ ಭಾನುವಾರದ ಸ್ಪೈಸಿ ಚಿಕನ್ ಡ್ರೈ ರೋಸ್ಟ್ ರೆಡಿ.

  • ಚಿಕನ್ ಪೆಪ್ಪರ್ ಡ್ರೈ ಮಾಡುವ ಸುಲಭ ವಿಧಾನ

    ಚಿಕನ್ ಪೆಪ್ಪರ್ ಡ್ರೈ ಮಾಡುವ ಸುಲಭ ವಿಧಾನ

    ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದಕ್ಕೆ ರಜೆ ಇದ್ದಾಗೆಲ್ಲ ಮನೆಯಲ್ಲಿ ಚಿಕನ್ ಮಾಡಿ ಎಂದು ಹೇಳುತ್ತಾರೆ. ಆದರೆ ಯಾವಗಲೂ ಒಂದೇ ರೀತಿಯ ಟೇಸ್ಟ್ ಮಾಡಿದರೆ ಬೇಜಾರಾಗುತ್ತದೆ. ಹೀಗಾಗಿ ಮನೆಯಲ್ಲಿ ಕೂತು ಏನಪ್ಪಾ ಸ್ಟೆಷಲ್ ಮಾಡೋದು ಅನ್ನೋರಿಗೆ ಚಿಕನ್ ಪೆಪ್ಪರ್ ಡ್ರೈ ಅತ್ಯಂತ ಸರಳವಾಗಿ ಮಾಡುವಂತಹ ರೆಸಿಪಿಯಾಗಿದೆ. ಚಿಕನ್‍ನಲ್ಲೇ ವಿಭಿನ್ನವಾಗಿ ರೆಸಿಪಿ ಮಾಡುವ ಆಲೋಚನೆ ಮಾಡುವವರಿಗೆ ಚಿಕನ್ ಪೆಪ್ಪರ್ ಡ್ರೈ ತುಂಬಾ ಸುಲಭ ವಿಧಾನವಾಗಿದೆ. ನಿಮಗಾಗಿ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು:
    1. ಚಿಕನ್- ಅರ್ಧ ಕೆ.ಜಿ
    2. ಕಾಳು ಮೆಣಸಿನಪುಡಿ- 1 ಚಮಚ
    3. ಕೊತ್ತಂಬರಿ ಪುಡಿ- 2 ಚಮಚ
    4. ಉಪ್ಪು- ರುಚಿಗೆ ತಕ್ಕಷ್ಟು
    5. ಸ್ವಲ್ಪ ಕರಿಬೇವು
    6. ಸಾಸಿವೆ- ಒಗ್ಗರಣೆಗೆ
    7. ಅರಿಶಿಣ ಪುಡಿ
    8. ಅಡುಗೆ ಎಣ್ಣೆ
    9. ಈರುಳ್ಳಿ – 2
    10. ಹಸಿ ಮೆಣಸಿನಕಾಯಿ -3
    11. ಸ್ವಲ್ಲ ಬೆಳ್ಳುಳ್ಳಿ
    12. ಶುಂಠಿ ಪೇಸ್ಟ್ – ಅರ್ಧ ಚಮಚ
    13. ಜೀರಿಗೆ ಪುಡಿ – ಅರ್ಧ ಚಮಚ
    14. ಕಾನ್ ಫ್ಲವರ್ ಹಿಟ್ಟು

    ಮಾಡುವ ವಿಧಾನ:
    * ಮೊದಲು ಚಿಕನ್ ಚೆನ್ನಾಗಿ ತೊಳೆದು ಕಾನ್‍ಫ್ಲವರ್ ಹಿಟ್ಟಿನಲ್ಲಿ ಚಿಕನ್ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಕಾದ ಎಣ್ಣೆಯ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಬೇಕು.
    * ಕಾಳು ಮೆಣಸು, ಅರಿಶಿಣ ಹಾಗೂ ಜೀರಿಗೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
    * ನಂತರ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಕರಿಬೇವಿನ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್  ಹಾಕಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
    * ಕಾನ್‍ಫ್ಲವರ್ ನಲ್ಲಿ ಕೋಟ್ ಮಾಡಿಟ್ಟ ಚಿಕನ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇತ್ತ ಮಿಶ್ರಣ ಮಾಡಿಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ.
    * ಸ್ವಲ್ಪ ನಿಂಬೆ ರಸ ಹಾಕಿ ಫ್ರೈ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ರೆಡಿ.