Tag: Non Vegetarian

  • ‘ಬೋನ್ ಲೆಸ್ ಮಟನ್ ಫ್ರೈ’ ಮಾಡುವ ಸಿಂಪಲ್ ಟ್ರಿಕ್ಸ್

    ‘ಬೋನ್ ಲೆಸ್ ಮಟನ್ ಫ್ರೈ’ ಮಾಡುವ ಸಿಂಪಲ್ ಟ್ರಿಕ್ಸ್

    ಮಾಂಸಾಹಾರಿ ಪ್ರಿಯರಿಗೆ ಚಿಕನ್ ಎಷ್ಟು ಇಷ್ಟವೂ ಹಾಗೇ ಮಟನ್ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಬೋನ್ ಲೆಸ್ ಮಟನ್ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೇ ವಿತ್ ಬೋನ್‌ಗಿಂತ ಬೋನ್ ಲೆಸ್ ಮಟನ್‍ಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲಿಯೂ ಇಂದು ನಾವು ಹೇಳಿಕೊಡುತ್ತಿರುವ ‘ಬೋನ್ ಲೆಸ್ ಮಟನ್ ಫ್ರೈ’ ಮಾಡಿದರೆ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಅನುಮಾನವಿಲ್ಲ.

    ಬೇಕಾಗುವ ಪದಾರ್ಥಗಳು:
    * ಬೋನ್ ಲೆಸ್ ಮಟನ್ – 1/2 ಕೆಜಿ
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಅರಿಶಿನ ಪುಡಿ – 1 ಪಿಂಚ್
    * ನೀರು – 2 ಕಪ್
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್


    * ಧನಿಯಾ ಪುಡಿ – 1/2 ಟೀಸ್ಪೂನ್
    * ಕಪ್ಪು ಮೆಣಸು ಪುಡಿ – 1/2 ಟೀಸ್ಪೂನ್
    * ಗರಂ ಮಸಾಲಾ ಪುಡಿ – 1/4 ಟೀಸ್ಪೂನ್
    * ಕರಿಬೇವು – 10 ಎಲೆಗಳು
    * ತುಪ್ಪ – 1 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಪ್ರೆಶರ್ ಕುಕ್ಕರ್‌ಗೆ ಮಟನ್ ಸಣ್ಣ ತುಂಡುಗಳಾಗಿ ಕಟ್ ಮಾಡಿ ಅರಿಶಿನ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನೀರು ಹಾಕಿ ಬೇಯಿಸಿ.
    * ಬೇಯಿಸಿದ ಮಟನ್‍ ಕಡಾಯಿಯಲ್ಲಿ ಬಿಸಿ ಮಾಡಿ. ಅದಕ್ಕೆ ಅರಿಶಿನ ಪುಡಿ ಮತ್ತು 1/4 ಟೀಚಮಚ ಉಪ್ಪನ್ನು ಸೇರಿಸಿ ಬಿಸಿ ಮಾಡಿ.
    * ನಂತರ ಕೆಂಪು ಮೆಣಸಿನ ಪುಡಿ, ಧನ್ಯ ಪುಡಿ, ಕರಿಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.
    * ಮಟನ್ ಮಸಾಲ ಜೊತೆಗೆ ಸರಿಯಾಗಿ ಬೇರೆಯುವವರೆಗೂ ಹುರಿಯಿರಿ. ಈ ಹಂತದಲ್ಲಿ ತುಪ್ಪವನ್ನು ಸೇರಿಸಿ ಮತ್ತು ನಿಧಾನವಾಗಿ ರೋಸ್ಟ್ ಮಾಡಿ 10 ನಿಮಿಷಗಳ ಕಾಲ ಫ್ರೈ ಮಾಡಿ.
    * ಕಡಿಮೆ ಉರಿಯಲ್ಲಿ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಸೇರಿಸಿ ಹುರಿಯಿರಿ. ಈ ಹಂತದಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.

    • ನಂತರ ‘ಬೋನ್ ಲೆಸ್ ಮಟನ್ ಫ್ರೈʼ ಸವಿಯಲು ಸಿದ್ಧ.

  • ದೇಸಿ ಸ್ಟೈಲ್‍ನಲ್ಲಿ ಮಾಡಿ ಮಟನ್‌ ಕರಿ

    ದೇಸಿ ಸ್ಟೈಲ್‍ನಲ್ಲಿ ಮಾಡಿ ಮಟನ್‌ ಕರಿ

    ಭಾನುವಾರವೆಂದರೆ ನಾನ್ ವೆಜ್ ಪ್ರಿಯರು ಏನು ಸ್ಪೆಷಲ್ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಅದಕ್ಕೆ ಇಂದು ರುಚಿಕರವಾದ ಮಟನ್ ಅಥವಾ ಮೇಕೆ ಮೇಲೋಗರದ ಸರಳ ರೆಸಿಪಿಯನ್ನು ಇಲ್ಲಿ ತಿಳಿಸಲಾಗುವುದು. ಈ ರೆಸಿಪಿ ತುಂಬಾ ಸುಲಭವಾಗಿದ್ದು, ಈ ರೆಸಿಪಿಗೆ ಮೇಕೆ ಅಥವಾ ಕುರಿ ಮಾಂಸವನ್ನು ಬಳಸಬಹುದು.

    ಬೇಕಾಗಿರುವ ಪದಾರ್ಥಗಳು:
    * ಎಣ್ಣೆ – 4 ಟೀಸ್ಪೂನ್
    * ಕತ್ತರಿಸಿದ ಈರುಳ್ಳಿ- 2 ಕಪ್
    * ಕತ್ತರಿಸಿದ ಟೊಮ್ಯಾಟೊ – 1 ಕಪ್
    * ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಶುಂಠಿ ಪೇಸ್ಟ್ – 1 ಟೀಸ್ಪೂನ್
    * ಗರಂ ಮಸಾಲಾ ಪುಡಿ – 2 ಟೀಸ್ಪೂನ್


    * ಕೊತ್ತಂಬರಿ ಪುಡಿ – 2 ಟೀಸ್ಪೂನ್
    * ಜೀರಿಗೆ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – 1/2 ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್
    * ಬೇಯಿಸಿದ ಮೇಕೆ ಮಾಂಸ – ಅರ್ಧ ಕೆಜಿ
    * ರುಚಿಗೆ ತಕ್ಕಷ್ಟು  ಉಪ್ಪು,
    * ಕತ್ತರಿಸಿದ ಕೊತ್ತಂಬರಿ ಸೊಪ್ಪು

    ಮಾಡುವ ವಿಧಾನ:
    * ಮೊದಲಿಗೆ ಎಲ್ಲ ಪದಾರ್ಥಗಳನ್ನು ಒಂದು ಕಡೆ ಜೋಡಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ದೊಡ್ಡ ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ.
    * ಬಿಸಿ ಎಣ್ಣೆಗೆ ಈರುಳ್ಳಿ ಸೇರಿಸಿ. ಈರುಳ್ಳಿ ತೆಳು ಗೋಲ್ಡನ್ ಬ್ರೌನ್ ಆಗಲು ಪ್ರಾರಂಭವಾಗುವವರೆಗೆ ಹುರಿಯಿರಿ. ನಂತರ ಅದರಲ್ಲಿರುವ ಎಣ್ಣೆ ತೆಗೆದುಹಾಕಿ.
    * ಫ್ರೈ ಮಾಡಿದ ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
    * ಟೊಮ್ಯಾಟೊ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಎಲ್ಲವನ್ನು ಮಿಕ್ಸ್ ಮಾಡಿ ರುಬ್ಬಿ.
    * ಮಧ್ಯಮ ಉರಿಯಲ್ಲಿ ಮತ್ತೆ ಎಣ್ಣೆಯನ್ನು ಬಿಸಿ ಮಾಡಿ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ. 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ.
    * ಟೊಮ್ಯಾಟೊ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ನಂತರ ಗರಂ ಮಸಾಲಾ, ಕೊತ್ತಂಬರಿ, ಜೀರಿಗೆ, ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ, ಚೆನ್ನಾಗಿ ಬೆರೆಸಿ.


    * ಫ್ರೈ ಮಾಡುವ ವೇಳೆ ಎಣ್ಣೆ ಕರಿಯಿಂದ ಬೇರ್ಪಡಲು ಪ್ರಾರಂಭವಾಗುವವರೆಗೆ ಮಸಾಲಾವನ್ನು ಹುರಿಯಿರಿ. ಇದು 10 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು.
    * ಬೇಯಿಸಿ ಕಟ್ ಮಾಡಿದ ಮೇಕೆ ತುಂಡುಗಳನ್ನು ಮಸಾಲಾಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಮಾಂಸವನ್ನು ಸಂಪೂರ್ಣವಾಗಿ ಮಸಾಲಾದೊಂದಿಗೆ ಬೆರೆಸಿ. ಈ ವೇಳೆ ಮಾಂಸವು ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಪ್ಯಾನ್‍ಗೆ 1/2 ಕಪ್ ಬಿಸಿನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಲು ಬೆರೆಸಿ, ಕುದಿಯಲು ಪ್ಯಾನ್ ಮುಚ್ಚಿ. ಕರಿ ಹೆಚ್ಚು ಸುಟ್ಟು ಹೋಗದಂತೆ ನೋಡಿಕೊಳ್ಳಿ.

    ಕೊನೆಗೆ ಮಟನ್‌ ಕರಿ ಜೊತೆ ಚಪಾತಿ, ರೋಟಿ, ಪರೋಟ ಜೊತೆಗೆ ಸೇವಿಸಿ.

     

  • ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಮುಂಬೈ: ತಮ್ಮ ಹೆಸರಿನಲ್ಲಿ ಆರಂಭವಾಗಿರುವ ಮಟನ್ ಶಾಪ್ ನೋಡಿ ಸಸ್ಯಹಾರಿ ನಟ ಸೋನು ಸೂದ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸೋನು ಸೂದ್ ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮಟನ್ ಅಂಗಡಿಗೆ ಸೋನು ಸೂದ್ ಎಂದು ಹೆಸರಿಡಲಾಗಿದೆ. ಅಂಗಡಿ ಮುಂದೆ ಸೋನು ಸೂದ್ ಫೋಟೋ ಹಾಕಿ ದೊಡ್ಡ ಬ್ಯಾನರ್ ಸಹ ಹಾಕಲಾಗಿದೆ. ಈ ಅಂಗಡಿ ವೀಡಿಯೋ ಕಳೆದೊಂದು ವಾರದಿಂದ ವೈರಲ್ ಆಗಿತ್ತು. ಈ ವೀಡಿಯೋ ನೋಡುತ್ತಿದ್ದಂತೆ ಸೋನು ಸೂದ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಲಾಫಿಂಗ್ ಎಮೋಜಿ ಮೂಲಕ ಪ್ರತಿಕ್ರಿಯಿಸಿರುವ ಸೋನು ಸೂದ್, ನಾನೊಬ್ಬ ಸಸ್ಯಹಾರಿ. ಅರೇ ಇದೇನು ನೋಡುತ್ತಿದ್ದೇನೆ? ನನ್ನ ಹೆಸರಿನಲ್ಲಿ ಮಟನ್ ಶಾಪ್. ಇಲ್ಲಿ ಸಸ್ಯಹಾರಿ ವಸ್ತುಗಳನ್ನ ಮಾರಲು ನಾನು ಸಹಾಯ ಮಾಡಬಲ್ಲೆ ಎಂದು ಬರೆದು ವೀಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸೋನು ಸೂದ್ ಫನ್ನಿ ಸಾಲುಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

    ಆಂಧ್ರಪ್ರದೇಶದಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ಸ್ಥಾಪಿಸೋದಾಗಿ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಚೀನಾ ಮತ್ತು ಫ್ರಾನ್ಸ್ ನಿಂದ ಆಮ್ಲಜನಕ ಸಾಂದ್ರಕ ತರುತ್ತೇನೆ ಎಂದು ಹೇಳಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಕಳೆದ ವರ್ಷದಂತೆ ಈ ಬಾರಿಯೂ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರ ಪಾಲಿಗೆ ದೇವತಾ ಮನುಷ್ಯನಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್

    2020ರಲ್ಲಿ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಪ್ರವಾಸಿ ಕಾರ್ಮಿಕರನ್ನು ಅವರ ಗೂಡು ಸೇರಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈಗ ಎಷ್ಟೋ ಜನ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಸೋನು ಅವರ ನಿಸ್ವಾರ್ಥ ಸೇವೆಗೆ ಅಭಿಮಾನಿಗಳು ಅವರ ಹೆಸರಿನಲ್ಲಿ ಅಂಗಡಿ, ವಿಶೇಷ ಅಭಿಯಾನ, ದೇವಸ್ಥಾನ ಸಹ ನಿರ್ಮಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ವಿಮಾನದ ಮೇಲೆ ಸೋನು ಸೂದ್ ಚಿತ್ರವನ್ನ ಚಿತ್ರಿಸಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿಶೇಷವಾಗಿ ಗೌರವ ಸಲ್ಲಿಸಿತ್ತು.

  • ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ನಾನ್ ವೆಜ್ ಸಿಗೋದು ಡೌಟ್!

    ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ನಾನ್ ವೆಜ್ ಸಿಗೋದು ಡೌಟ್!

    ನವದೆಹಲಿ: ರೈಲ್ವೇ ಬೋರ್ಡ್ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಂಸಾಹಾರ ಸಿಗುವುದಿಲ್ಲ.

    ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆ ಪ್ರಯುಕ್ತ 2018, 2019, 2020 ರ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ಸಸ್ಯಾಹಾರ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಸಸ್ಯಾಹಾರದ ರಾಯಭಾರಿಯಾಗಿದ್ದ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಅಕ್ಟೋಬರ್ 2 ರಂದು ರಾಷ್ಟ್ರೀಯ ಸ್ವಚ್ಛತಾ ದಿವಸದ ಜೊತೆಗೆ ಸಸ್ಯಾಹಾರ ದಿನವನ್ನಾಗಿ ಆಚರಣೆ ಮಾಡಲು ಅನುಮತಿ ನೀಡುವಂತೆ ರೈಲ್ವೇ ಬೋರ್ಡ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.

    ಗಾಂಧೀಜಿಯರ 150ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಸಂಸ್ಕೃತಿ  ಇಲಾಖೆ ಹೊರತಂದಿರುವ ಲೋಗೋವನ್ನು ರೈಲ್ವೆ ಕೋಚ್ ಗಳ ಹೊರ ಭಾಗದಲ್ಲಿ ಬಾಗಿಲ ಬಳಿ ಪ್ರಯಾಣಿಕರಿಗೆ ಕಾಣುವಂತೆ ಹಾಕಲು ಇಲಾಖೆಯ ಅನುಮತಿಯನ್ನು ಕೋರಿದೆ ಎಂದು ತಿಳಿಸಿದೆ.

    ಮಾರ್ಚ್ 12 ರಂದು ದಂಡಿ ಸತ್ಯಾಗ್ರಹದ ಸ್ಮರಣಾರ್ಥ ಸಬರಮತಿಯಿಂದ ಸ್ವಚ್ಛತಾ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುವುದು. ಟಿಕೆಟ್ ಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವಿರುತ್ತದೆ ಎಂದು ತಿಳಿಸಿದೆ.

    ಸಸ್ಯಾಹಾರ ದಿನಾಚಾರಣೆಯನ್ನು ಯಶಸ್ವಿಯಾಗಿ ಆಚರಿಸಬೇಕು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಗೂ ಅವರ ಕಾರ್ಯಗಳ ಕುರಿತಾದ ವಿಡಿಯೋಗಳನ್ನು ಎಲ್ಲ ನಿಲ್ದಾಣಗಳಲ್ಲಿ ಪ್ರದರ್ಶನ ಮಾಡಲು ರೈಲ್ವೇ ಇಲಾಖೆ ಸಿದ್ಧತೆ ನಡೆಸುತ್ತಿದೆ.

    150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆಗೆ ಸಮಿತಿ ರಚನೆಯಾಗಿದ್ದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ತಿಂಗಳ ಹಿಂದೆ ಮೊದಲ ಸಭೆ ನಡೆದಿದೆ.