Tag: non veg

  • ಸವಿದಷ್ಟೂ ಬೇಕೆನಿಸುತ್ತೆ ಪೆಪ್ಪರ್ ಮಟನ್

    ಸವಿದಷ್ಟೂ ಬೇಕೆನಿಸುತ್ತೆ ಪೆಪ್ಪರ್ ಮಟನ್

    ವೀಕೆಂಡ್‌ನಲ್ಲಿ ನಾನ್‌ವೆಜ್ ಸವಿಯುವುದು ಹಲವರಿಗೆ ರೂಢಿ. ಆದರೆ ಪ್ರತಿ ಬಾರಿ ನಾನ್‌ವೆಜ್‌ನಲ್ಲಿ ಹೊಸ ಹೊಸ ರೆಸಿಪಿ ಮಾಡೋದು ತಲೆನೋವು. ನಾವಿಂದು ತುಂಬಾ ರುಚಿಕರವಾದ ಪೆಪ್ಪರ್ ಮಟನ್ (Pepper Mutton) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರೊಟ್ಟಿ ಅಥವಾ ಅನ್ನದೊಂದಿಗೆ ಇದು ಸೂಪರ್ ಎನಿಸುತ್ತದೆ. ಖಾರವಾಗಿದ್ದರೂ ನೀವಿದನ್ನು ಸವಿದರೆ ಮತ್ತೆ ಮತ್ತೆ ಬೇಕೆನ್ನುತ್ತೀರಿ. ಪೆಪ್ಪರ್ ಮಟನ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆ.ಜಿ
    ಕೆಂಪುಮೆಣಸಿನ ಪುಡಿ – 1 ಟೀಸ್ಪೂನ್
    ಗರಂ ಮಸಾಲಾ ಪುಡಿ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಅರಿಶಿನ – ಅರ್ಧ ಟೀಸ್ಪೂನ್
    ಸೀಳಿದ ಹಸಿಮೆಣಸಿನಕಾಯಿ – 4
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಕಾಳುಮೆಣಸು – 3 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
    ಎಣ್ಣೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು, ನೀರಿನಿಂದ ಬಸಿದು, ಅರಿಶಿನ ಪುಡಿ ಹಚ್ಚಿ 15 ನಿಮಿಷ ಬದಿಗಿಡಿ.
    * ಬಳಿಕ ಪ್ರೆಶರ್ ಕುಕ್ಕರ್ ತೆಗೆದುಕೊಂಡು, ಸ್ವಲ್ಪ ಎಣ್ಣೆಹಾಕಿ, ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ.
    * ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಟನ್ ತುಂಡುಗಳನ್ನು ಹಾಕಿ ಸ್ವಲ್ಪ ಹುರಿಯಿರಿ.
    * ಇದೀಗ ಸ್ವಲ್ಪ ನೀರು ಸೇರಿಸಿ, ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷ ಬೇಯಲು ಬಿಡಿ.
    * ಇನ್ನೊಂದು ಬಾಣಲೆ ತೆಗೆದುಕೊಂಡು 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಕರಿಬೇವಿನ ಎಲೆ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ, ಹುರಿಯಿರಿ.
    * ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸು ಹಾಕಿ ಹುರಿಯಿರಿ.
    * ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಟನ್ ತುಂಡುಗಳನ್ನು ಬಾಣಲೆಗೆ ಹಾಕಿ ಮಿಶ್ರಣ ಮಾಡಿ.
    * ಸಣ್ಣ ಉರಿಯಲ್ಲಿ ನಡುನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. 10 ನಿಮಿಷದ ಬಳಿಕ ಉರಿಯನ್ನು ಆಫ್ ಮಾಡಿ.
    * ಈಗ ಕೊತ್ತಂಬರಿ ಸೊಪ್ಪನ್ನು ಹಾಕಿ, ಅನ್ನ, ರೊಟ್ಟಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕೊಡವ ಶೈಲಿಯ ಪೋರ್ಕ್ ಕರಿ ಮಾಡಿ ಕಡುಬು ಜೊತೆ ಸವಿಯಿರಿ

    Live Tv
    [brid partner=56869869 player=32851 video=960834 autoplay=true]

  • ‘ಶೆಚುವಾನ್ ಚಿಕನ್’ ಮಾಡುವ ಸಿಂಪಲ್ ವಿಧಾನ

    ‘ಶೆಚುವಾನ್ ಚಿಕನ್’ ಮಾಡುವ ಸಿಂಪಲ್ ವಿಧಾನ

    ಸ್ಪೈಸಿಯಾಗಿರುವ ಆಹಾರ (Spicy food) ಅಂದ್ರೆ ಎಲ್ಲರ ಬಾಯಿಯಲ್ಲಿ ನೀರು ಬರುತ್ತೆ. ಅದರಲ್ಲಿಯೂ ಇತ್ತೀಚೆಗೆ ರೆಸ್ಟೋರೆಂಟ್‍ಗಳಲ್ಲಿ ಫುಲ್ ಫೇಮಸ್ ಆಗಿರುವ ‘ಶೆಚುವಾನ್ ಚಿಕನ್’ (Szechuan-Chicken) ನಾನ್‍ವೆಜ್ ಪ್ರಿಯರು ಸಖತ್ ಖುಷಿಪಟ್ಟು ತಿನ್ನುತ್ತಾರೆ. ಅದಕ್ಕೆ ಇಂದು ಮನೆಯಲ್ಲಿ ಸಿಂಪಲ್ ಮತ್ತು ಸ್ಪೈಸಿಯಾಗಿರುವ ‘ಶೆಚುವಾನ್ ಚಿಕನ್’ ಮಾಡುವುದು ಹೇಗೆ ಎಂದು ಹೇಳಿಕೊಡಲಾಗುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಬೋನ್‍ಲೆಸ್ ಚಿಕನ್ ತುಂಡುಗಳು – ಅರ್ಧ ಕೆಜಿ
    * ಕಾರ್ನ್‍ಸ್ಟಾರ್ಚ್ – ¼ ಕಪ್
    * ಮೆಣಸು ಪುಡಿ – 1 ಟಿಸ್ಟೂನ್
    * ಶೆಚುವಾನ್ ಸಾಸ್ – 1 ಚಿಕ್ಕ ಕಪ್
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟಿಸ್ಟೂನ್


    * ಲವಂಗ – 3
    * ಒಣಗಿದ ಚಿಲ್ಲಿ ಮೆಣಸುಗಳು – 1/2 ಕಪ್
    * ಸೋಡಿಯಂ ಸೋಯಾ ಸಾಸ್ – 1/2 ಕಪ್
    * ಅಕ್ಕಿ ವೈನ್ ವಿನೆಗರ್ – 2 ಟೀಸ್ಪೂನ್
    * ಮೆಣಸಿನಕಾಯಿ ಬೆಳ್ಳುಳ್ಳಿ ಸಾಸ್ – 2 ಟೀ ಸ್ಪೂನ್
    * ಎಳ್ಳಿನ ಎಣ್ಣೆ – 2 ಟೀಸ್ಪೂನ್
    * ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಚಿಕನ್ ಮತ್ತು ¼ ಕಪ್ ಕಾರ್ನ್‍ಸ್ಟಾರ್ಚ್, ಮೆಣಸಿನಪುಡಿಯನ್ನು ಒಂದು ಬಾಣಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಕಾಯಿಸಿ ಅದಕ್ಕೆ ಕಾರ್ನ್‍ಸ್ಟಾರ್ಚ್ ಮಿಶ್ರಿತ ಚಿಕನ್ ಅನ್ನು ಎಣ್ಣೆಯಲ್ಲಿ ಫ್ರೈ ಮಾಡಿ
    * ಚಿಕನ್ ಗೋಲ್ಡನ್ ಆಗುವವರೆಗೆ ಫ್ರೈ ಮಾಡಿ ಅದರ ಮೇಲೆ ಮೆಣಸಿನ ಪುಡಿ ಹಾಕಿ ತಣ್ಣಗಾಗಲೂ ಬಿಡಿ.


    * ಮಧ್ಯಮ ಉರಿಯಲ್ಲಿ ದೊಡ್ಡ ಬಾಣಲೆಯನ್ನು ಇಟ್ಟು ಅದಕ್ಕೆ 1 ಚಮಚ ಎಳ್ಳಿನ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ
    * ನಂತರ ಒಣಗಿದ ಚಿಲ್ಲಿ ಮೆಣಸು ಪುಡಿ ಮೇಲೆ ಚಿಕನ್ ಟೋಸ್ಟ್ ಸೇರಿಸಿ 1 ನಿಮಿಷ ಬಿಡಿ.
    * ಈ ಮಿಶ್ರಣಕ್ಕೆ ಸೋಯಾ ಸಾಸ್, ಅಕ್ಕಿ ವೈನ್ ವಿನೆಗರ್, ಚಿಲ್ಲಿ ಬೆಳ್ಳುಳ್ಳಿ ಸಾಸ್ ಮತ್ತು ಎಳ್ಳಿನ ಎಣ್ಣೆಯನ್ನು ಒಟ್ಟಿಗೆ ಸೇರಿಸಿ.
    * ಕೊನೆಗೆ ಎಳ್ಳಿನಿಂದ ಅಲಂಕರಿಸಿ.

    Live Tv

  • ‘ಬಂಗಾರದ ಗಿಣಿ’ ಮಹಾಲಕ್ಷ್ಮಿಗೆ ಭಾರವಾಗುವಷ್ಟು ಬಂಗಾರ ಕೊಟ್ಟ ರವೀಂದರ್

    ‘ಬಂಗಾರದ ಗಿಣಿ’ ಮಹಾಲಕ್ಷ್ಮಿಗೆ ಭಾರವಾಗುವಷ್ಟು ಬಂಗಾರ ಕೊಟ್ಟ ರವೀಂದರ್

    ಕಿರುತೆರೆ ನಟ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಮದುವೆಯಾದ ನಂತರ ದಿನಕ್ಕೊಂದು ಸುದ್ದಿ ಹೊರ ಬರುತ್ತಿವೆ. ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಮಾಡಿದ್ದ ನೆಟ್ಟಿಗರೇ ಇದೀಗ ಪತ್ನಿ ಮಹಾಲಕ್ಷ್ಮಿಗೆ ಉಡುಗೊರೆಯಾಗಿ ಕೊಟ್ಟ ಚಿನ್ನದ (Gold) ಬಗ್ಗೆ ಕೇಳಿ ಶಾಕ್ ಆಗಿದ್ದರೆ. ಮದುವೆಗಾಗಿ ರವೀಂದರ್ ಬರೋಬ್ಬರಿ ಒಂದೂವರೆ ಕೆಜಿ ತೂಕದ ಒಡೆವೆಗಳನ್ನು ಮಾಡಿಸಿದ್ದರು ಎನ್ನುವುದು ಬ್ರೇಕಿಂಗ್ ನ್ಯೂಸ್. ಅದರಲ್ಲಿ ಕೆಲವು ಒಡವೆಗಳನ್ನು ಮಾತ್ರ ಮಹಾಲಕ್ಷ್ಮಿ ಮದುವೆ ದಿನ ಹಾಕಿದ್ದರಂತೆ.

    ರವೀಂದರ್ ಮತ್ತು ಮಹಾಲಕ್ಷ್ಮಿ (Mahalakshmi) ಒಂದೇ ಸೀರಿಯಲ್ ನಲ್ಲಿ ಕೆಲಸ ಮಾಡಿದವರು. ಮಹಾಲಕ್ಷ್ಮಿ ನಟಿಯಾಗಿ ಕಾಣಿಸಿಕೊಂಡಿದ್ದರೆ, ರವೀಂದರ್ ಆ ಸೀರಿಯಲ್ ನಿರ್ಮಾಪಕರು. ಹೀಗೆ ಪರಿಚಯವಾದವರು, ನಂತರ ಪ್ರೀತಿಸಿ ಇದೀಗ ಹೊಸ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ. ಮಹಾಲಕ್ಷ್ಮಿಯನ್ನು ಅಪಾರವಾಗಿ ಪ್ರೀತಿಸುವ ರವೀಂದರ್, ಆ ಪ್ರೀತಿಗಾಗಿ ಅವರು ಸಾಕಷ್ಟು ಉಡುಗೊರೆಯನ್ನೇ ಕೊಟ್ಟಿದ್ದಾರಂತೆ. ಈ ಹಿಂದೆ ಅವರು ನೂರಾರು ಸೀರೆಗಳನ್ನು ಕೊಟ್ಟಿದ್ದು ಕೂಡ ಸುದ್ದಿ ಆಗಿತ್ತು.

    ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ (Non Veg) ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ಗಾಂಧೀನಗರ: ನಾನ್ ವೆಜ್ ಊಟ ಮಾಡಲು ಹೋಟೆಲ್ ಬಂದ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪದಡಿ ಹೋಟೆಲ್ ಮಾಲೀಕನನ್ನು (Hotel owner) ಪೊಲೀಸರು ಬಂಧಿಸಿದ್ದಾರೆ.

    ರೆಸ್ಟೋರೆಂಟ್ ಮಾಲೀಕನ ಈ ಕೃತ್ಯದ ಬಗ್ಗೆ ತಿಳಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್ (Restaurant) ಮೇಲೆ ದಾಳಿ ನಡೆಸಿದ ಪೊಲೀಸರು ಫ್ರಿಡ್ಜ್‌ನಲ್ಲಿದ್ದ (Fridge) 60 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸೂರತ್‍ನ(Surat) ಲಾಲ್‍ಗೇಟ್ ಪೊಲೀಸ್ ಠಾಣೆಯಲ್ಲಿ (Police Station) ರೆಸ್ಟೋರೆಂಟ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

    ಹೊಡಿಬಂಗ್ಲಾ (Hodibangla) ಪ್ರದೇಶದಲ್ಲಿರುವ ಈ ನಾನ್‍ವೆಜ್ ರೆಸ್ಟೋರೆಂಟ್‍ನಲ್ಲಿ ಮಾಂಸಾಹಾರ (Non-veg) ಹೆಸರಿನಲ್ಲಿ ದನದ ಮಾಂಸ ಬಡಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯ (Hindu Organisations) ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ತನಿಖೆ ಆರಂಭಿಸಿ ದೃಢಪಡಿಸಿಕೊಂಡು, ಈ ವಿಚಾರವನ್ನು ಲಾಲ್‍ಗೇಟ್(Lalgate) ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಹೆಂಡತಿ ಮಕ್ಕಳು ಮಲಗಿದ್ದಾಗಲೇ ವ್ಯಕ್ತಿಯ ಬರ್ಬರ ಹತ್ಯೆ

    ಸೆಪ್ಟೆಂಬರ್ 11 ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಫ್ರಿಡ್ಜ್‌ನಲ್ಲಿ 6 ಚೀಲಗಳಲ್ಲಿ ಇರಿಸಲಾಗಿದ್ದ 60 ಕಿಲೋಗ್ರಾಂಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡರು. ನಂತರ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ತಮ್ಮ ಸಮ್ಮುಖದಲ್ಲಿಯೇ ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡು ವಿಧಿ ವೈಜ್ಞಾನಿಕ ಪ್ರಯೋಗಾಲಯಕ್ಕೆ (Forensic Scientific Laboratory) ಪೊಲೀಸರು ಕಳುಹಿಸಿದ್ದಾರೆ.

    ಸೆಪ್ಟೆಂಬರ್ 14 ರಂದು ಎಫ್‍ಎಸ್‍ಎಲ್ ವರದಿಯನ್ನು ಸ್ವೀಕರಿಸಿದ ನಂತರ, ಅದು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಬಳಿಕ ಲಾಲ್‍ಗೇಟ್ ಠಾಣೆ ಪೊಲೀಸರು (Lalgate police station) ಪ್ರಕರಣ ದಾಖಲಿಸಿ ರೆಸ್ಟೋರೆಂಟ್ ಮಾಲೀಕ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್ ನನ್ನು ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಇದೀಗ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್‍ಗೆ ದನದ ಮಾಂಸ ಪೂರೈಸುತ್ತಿದ್ದ ಮತ್ತೋರ್ವ ಆರೋಪಿ ಅನ್ಸಾರ್ ತಲೆ ಮರೆಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

  • ನೀವೂ ಟ್ರೈ ಮಾಡಿ ರುಚಿಯಾದ ಸ್ಪೈಸಿ ಚಿಕನ್ ಲಿವರ್ ಫ್ರೈ

    ನೀವೂ ಟ್ರೈ ಮಾಡಿ ರುಚಿಯಾದ ಸ್ಪೈಸಿ ಚಿಕನ್ ಲಿವರ್ ಫ್ರೈ

    ನೀವು ಚಿಕನ್ ಪ್ರಿಯರಾಗಿದ್ದರೆ, ಈ ಸ್ಪೈಸಿ ಚಿಕನ್ ಲಿವರ್ ಫ್ರೈ ಅನ್ನು ಖಂಡಿತಾ ಇಷ್ಟ ಪಡುತ್ತೀರಿ. ಚಿಕನ್ ಲಿವರ್ ಅನ್ನು ಇಷ್ಟಪಡದವರು ಇದ್ದರೂ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ, ನೀವೂ ಇದರ ಅಭಿಮಾನಿಗಳಾಗುವುದು ಖಂಡಿತಾ! ಸೈಡ್ ಡಿಶ್ ಅಥವಾ ಎರಡು ಬ್ರೆಡ್ ಸ್ಲೈಸ್‌ಗಳ ಮಧ್ಯದಲ್ಲಿ ಹರಡಿ ಸ್ಯಾಂಡ್ ವಿಚ್‌ನಂತೆ ಆನಂದಿಸಲು ಇದು ಪರ್ಫೆಕ್ಟ್ ಆಗಿರುತ್ತದೆ.

    ಬೇಕಾಗುವ ಪದಾರ್ಥಗಳು:
    * ಚಿಕನ್ ಲಿವರ್- ಅರ್ಧ ಕೆ.ಜಿ
    * ಎಣ್ಣೆ- 3 ಟೀಸ್ಪೂನ್
    * ಜೀರಿಗೆ- 1 ಟೀಸ್ಪೂನ್
    * ಸಾಸಿವೆ ಕಾಳು- ಅರ್ಧ ಟೀಸ್ಪೂನ್
    * ಏಲಕ್ಕಿ- 2
    * ದಾಲ್ಚಿನಿ ಚಕ್ಕೆ- ಅರ್ಧ ಇಂಚು
    * ಕತ್ತರಿಸಿದ ಹಸಿರು ಮೆಣಸಿನಕಾಯಿ- 1
    * ರುಬ್ಬಿದ ಈರುಳ್ಳಿ- ಅರ್ಧ ಕಪ್
    * ಗರಂ ಮಸಾಲೆ- 1 ಟೀಸ್ಪೂನ್
    * ಉಪ್ಪು- 1 ಟೀಸ್ಪೂನ್
    * ಕರಿಮೆಣಸು- ಅರ್ಧ ಟೀಸ್ಪೂನ್
    * ನಿಂಬೆ ಹಣ್ಣು- ಅರ್ಧ ಭಾಗ

    ಮಾಡುವ ವಿಧಾನ:
    * ಚಿಕನ್ ಲಿವರ್ ಅನ್ನು 10 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ಬಳಿಕ ತೊಳೆದು ನೀರಿನಿಂದ ಬೇರ್ಪಡಿಸಿ.
    * ಮಧ್ಯಮ ಉರಿಯಲ್ಲಿ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ ಕಾಳು, ಏಲಕ್ಕಿ, ದಾಲ್ಚಿನಿ ಹಾಕಿ ಫ್ರೈ ಮಾಡಿ.
    * ಜೀರಿಗೆ ಕಂದು ಬಣ್ಣಕ್ಕೆ ತಿರುಗಿದಾಗ ಕತ್ತರಿಸಿದ ಹಸಿರು ಮೆಣಸಿನಕಾಯಿ, ರುಬ್ಬಿದ ಈರುಳ್ಳಿ, ಗರಂ ಮಸಾಲೆ, ಉಪ್ಪು, ಕರಿಮೆಣಸು ಹಾಕಿ ಹುರಿಯಿರಿ.
    * ಬಳಿಕ ಚಿಕನ್ ಲಿವರ್ ಸೇರಿಸಿ, 10-15 ನಿಮಿಷಗಳ ಕಾಲ ಬೇಯಿಸಿ.
    * ದ್ರವ ಆವಿಯಾದ ಬಳಿಕ ನಿಂಬೆ ರಸವನ್ನು ಹಿಂಡಿ, ಉರಿಯನ್ನು ಕಡಿಮೆ ಮಾಡಿ, ಮುಚ್ಚಳದಿಂದ ಮುಚ್ಚಿ 5 ನಿಮಿಷ ಬೇಯಿಸಿ.
    * ರುಚಿಕರ ಸ್ಪೈಸಿ ಚಿಕನ್ ಲಿವರ್ ಫ್ರೈ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸರ್ವ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ರಾವಳಿ ಭಾಗದಲ್ಲಿ ಅತ್ಯಂತ ಫೇಮಸ್ ಈ ಸಿಗಡಿ ಚಟ್ನಿ. ಉಪ್ಪು, ಹುಳಿ ಖಾರದೊಂದಿಗಿನ ಸ್ವಾದ ಯಾವ ರೆಸ್ಟೊರೆಂಟ್‌ನ ರುಚಿಯನ್ನೂ ಹಿಂದಿಕ್ಕಬಲ್ಲದು. ಕುಚಿಲಕ್ಕಿಯ ಗಂಜಿಯೊಂದಿಗಂತೂ ಈ ಚಟ್ನಿ ಇದ್ದರೆ ಬೇರೇನೂ ಬೇಡ. ನಿಮಿಷಗಳಲ್ಲಿ ನಿಮ್ಮ ಬಟ್ಟಲು ಖಾಲಿ ಆಗೋದು ಗ್ಯಾರೆಂಟಿ. ನಾನ್‌ವೆಜ್ ಪ್ರಿಯರು ಟ್ರೈ ಮಾಡಲೇ ಬೇಕಾದ ಸಿಗಡಿ ಚಟ್ನಿಯ ರೆಸಿಪಿ ಇಲ್ಲಿದೆ ನೋಡಿ.

    ಬೇಕಾಗುವ ಪದಾರ್ಥಗಳು:
    * ಎಳೆ ಹಾಗೂ ಒಣ ಸಿಗಡಿ – 1 ಕಪ್
    * ತೆಂಗಿನಕಾಯಿ – 1
    * ಈರುಳ್ಳಿ – 1
    * ಬೆಳ್ಳುಳ್ಳಿ, ಲವಂಗ – 8 ರಿಂದ 10
    * ಅರಿಶಿನ ಪುಡಿ – 4 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 2
    * ಎಣ್ಣೆ – 2 ಟೀಸ್ಪೂನ್
    * ಕರಿಬೇವಿನ ಎಲೆ

    ಮಾಡುವ ವಿಧಾನ:
    * ಎಳೆಯ ಹಾಗೂ ಒಣ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ತೊಳೆದು ಒಣಗಿಸಿ.
    * ಸಣ್ಣ ಉರಿಯಲ್ಲಿ 1/4 ಟೀಸ್ಪೂನ್ ಅರಿಶಿನ ಪುಡಿಯನ್ನು ತವಾದಲ್ಲಿ ಹಾಕಿ, ಒಂದೆರಡು ನಿಮಿಷಗಳ ಕಾಲ ಸುವಾಸನೆ ಬರುವವರೆಗೂ ಹುರಿಯಿರಿ.
    * ಒಂದು ಪ್ಯಾನ್ ತೆಗೆದುಕೊಂಡು, 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ, ಈರುಳ್ಳಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವಿನ ಎಲೆಗಳು, 2 ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ಮೃದುವಾದ ಮೇಲೆ ಪಕ್ಕಕ್ಕೆ ಸರಿಸಿ.
    * ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ 2 ಟೀಸ್ಪೂನ್ ನೀರನ್ನು ಹಾಕಿ ಒರಟಾದ ಪೇಸ್ಟ್ ಆಗುವತನಕ ರುಬ್ಬಿ.
    * ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ತೆಂಗಿನ ತುರಿ ಸೇರಿಸಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಅದಕ್ಕೆ ಹುಣಸೆ ಹಣ್ಣಿನ ರಸ, ರುಬ್ಬಿದ ಮಿಶ್ರಣ, ಹಾಗೂ ಒಣಗಿಸಿದ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ. ತೇವಾಂಶ ಆರುವವರೆಗೂ ಹುರಿಯಿರಿ.

    – ಇದೀಗ ಒಣ ಸಿಗಡಿ ಚಟ್ನಿ ಸಿದ್ಧವಾಗಿದ್ದು, ಬಿಸಿ ಬಿಸಿ ಗಂಜಿಯೊಂದಿಗೆ ಬಡಿಸಿ, ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರಿಗೆ ಕುಷ್ಕಾ ಮಾಡುವ ವಿಧಾನ ತುಂಬಾ ಸುಲಭವಾಗಿದೆ. ಇದು ಎಲ್ಲ ನಾನ್‍ವೆಜ್ ಪ್ರಿಯರಿಗೆ ತುಂಬಾ ಇಷ್ಟವಾದ ಪಾಕವಿಧಾನವಾಗಿದೆ. ‘ಕುಷ್ಕಾ’ ತಿನ್ನಲು ಇಷ್ಟಪಡದವರೂ ಸಹ ಇಂದು ನಾವು ಹೇಳಿಕೊಡುವ ರೆಸಿಪಿ ಮಾಡಿ ಸವಿದ್ರೆ, ಇಷ್ಟಪಡುತ್ತಾರೆ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ನೀರು – 2 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್


    * ಹಸಿರು ಮೆಣಸಿನಕಾಯಿ – 1
    * ಎಣ್ಣೆ – 2 ಟೀಸ್ಪೂನ್
    * ದಾಲ್ಚಿನ್ನಿ – 1
    * ಲವಂಗ – 4
    * ಏಲಕ್ಕಿ – 3
    * ಮೊಸರು – 2 ಟೀಸ್ಪೂನ್
    * ರೆಡ್ ಚಿಲ್ಲಿ ಪೌಡರ್ – 2 ಟೀಸ್ಪೂನ್


    * ಅರಿಶಿನ ಪುಡಿ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಪುದೀನ ಸೊಪ್ಪು – 1 ಕಪ್
    * ಅಗತ್ಯವಿರುವಷ್ಟು ಉಪ್ಪು
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 2

    ಮಾಡುವ ವಿಧಾನ:
    * ಬಾಸ್ಮತಿ ಅಕ್ಕಿಯನ್ನು 2 ಕಪ್ ನೀರಿನಲ್ಲಿ ತೊಳೆದು 15-20 ನಿಮಿಷಗಳ ಕಾಲ ನೆನೆಸಿಡಿ. ಕುಷ್ಕಾ ಮಸಾಲಾ ಪೇಸ್ಟ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ರೆಡಿ ಮಾಡಿಕೊಳ್ಳಿ.
    * ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಮೆಂತ್ಯ ಎಲೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ.
    * ನಂತರ ಕಟ್ ಮಾಡಿದ ಈರುಳ್ಳಿ, ಟೊಮೆಟೊ ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಮಸಾಲಾ ಮಿಶ್ರಣವನ್ನು ಪೇಸ್ಟ್ ಅನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ.
    * ನಂತರ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅಗತ್ಯಕ್ಕೆ ಉಪ್ಪು ಸೇರಿಸಿ. 2-3 ನಿಮಿಷಗಳ ಕಾಲ ಫ್ರೈ ಮಾಡಿ.
    * ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಬೇಯಿಸಿ. ಈಗ ಸಣ್ಣಗೆ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ.

    * ನಂತರ ನೆನೆಸಿದ ಬಾಸ್ಮತಿ ಅಕ್ಕಿಯಿಂದ ನೀರನ್ನು ಸುರಿಯಿರಿ ಮತ್ತು ಅಗತ್ಯವಿದ್ದರೆ ಉಪ್ಪನ್ನು ಹಾಕಿ. ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 12-15 ನಿಮಿಷ ಬೇಯಿಸಿ.
    * ಶಾಖವನ್ನು ಆಫ್ ಮಾಡಿ ಮತ್ತು ಅದನ್ನು ತೆರೆಯುವ ಮೊದಲು 5-10 ನಿಮಿಷಗಳ ಕಾಲ ಬಿಡಿ.

    – ಕುಷ್ಕಾ ಈಗ ಸವಿಯಲು ಸಿದ್ಧವಾಗಿದ್ದು, ಈರುಳ್ಳಿ ಮತ್ತು ರೈಯಿತಾ ಜೊತೆಗೆ ಬಿಸಿಯಾಗಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ‘ಚಿಕನ್ ಫ್ರೈಡ್ ರೈಸ್’ ಇಷ್ಟು ಸುಲಭನಾ..! – ನೀವು ಟ್ರೈ ಮಾಡಿ

    ‘ಚಿಕನ್ ಫ್ರೈಡ್ ರೈಸ್’ ಇಷ್ಟು ಸುಲಭನಾ..! – ನೀವು ಟ್ರೈ ಮಾಡಿ

    ಸಾಮಾನ್ಯವಾಗಿ ಎಲ್ಲರೂ ‘ಫ್ರೈಡ್ ರೈಸ್’ ತಿನ್ನುತ್ತಿರುತ್ತಾರೆ. ಆದರೆ ‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ಆಲಿವ್ ಎಣ್ಣೆ – 2 ಟೀಸ್ಪೂನ್
    * ಕಟ್ ಮಾಡಿದ ಚಿಕನ್ – 2 ಕಪ್
    * ಕರಿಮೆಣಸು – 2 ಟೀಸ್ಪೂನ್
    * ಎಳ್ಳಿನ ಎಣ್ಣೆ – 2 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್

    * ಲವಂಗ – 1 ಟೀಸ್ಪೂನ್
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಬೇಯಿಸಿದ ಅಕ್ಕಿ – 3 ಕಪ್
    * ನೆನೆಸಿಟ್ಟ ಬಟಾಣಿ – ಅರ್ಧ ಕಪ್
    * ಮೊಟ್ಟೆಗಳು – 2
    * ಸೋಯಾ ಸಾಸ್ – 3 ಟೀಸ್ಪೂನ್

    ಮಾಡುವ ವಿಧಾನ:
    * ಮಧ್ಯಮ ಉರಿಯಲ್ಲಿ ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಉರಿಯಿರಿ.
    * ಚಿಕನ್ ಬಾಣಲೆಯಿಂದ ತೆಗೆದು 5 ನಿಮಿಷಗಳ ಕಾಲ ಬಿಡಿ.
    * ಅದೇ ಬಾಣಲೆಗೆ ಎಳ್ಳಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ 5 ನಿಮಿಷಗಳು ಬೇಯಿಸಿ.
    * ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ 1 ನಿಮಿಷ ಬಿಡಿ. ಅನ್ನ ಮತ್ತು ಬಟಾಣಿಗಳನ್ನು ಬೆರೆಸಿ 2 ನಿಮಿಷ ಫ್ರೈ ಮಾಡಿ.
    * ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಬೇಯಿಸಿ. ನಂತರ ಮೊಟ್ಟೆಯನ್ನು ಕಟ್ ಮಾಡಿ ರೈಸ್ ಜೊತೆ ಮಿಕ್ಸ್ ಮಾಡಿ.
    * ಅದಕ್ಕೆ ಸೋಯಾ ಸಾಸ್ ಮತ್ತು ಹಸಿರು ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ.

    • ‘ಚಿಕನ್ ಫ್ರೈಡ್ ರೈಸ್’ ಸವಿಯಲು ಸಿದ್ಧವಾಗಿದ್ದು, ಕೆಚಪ್‌ ಜೊತೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ರುಚಿಕರವಾದ ಗರಿ-ಗರಿ ಮಟನ್ ಕೀಮಾ ವಡಾ ಮಾಡಿ

    ರುಚಿಕರವಾದ ಗರಿ-ಗರಿ ಮಟನ್ ಕೀಮಾ ವಡಾ ಮಾಡಿ

    ಇಂದು ನಾನ್‍ವೆಜ್ ಪ್ರಿಯರಿಗೆ ಊಟದ ಜೊತೆಗೆ ಏನಾದರೂ ಗರಿಗರಿಯಾಗಿ ಕುರುಕುಲು ತಿಂಡಿ ತಿನ್ನಬೇಕು ಎಂದು ಆಸೆ ಆಗುತ್ತಿರುತ್ತೆ. ಅದಕ್ಕೆ ನಾವು ಸಿಂಪಲ್ ಮತ್ತು ಗರಿಗರಿಯಾಗಿ ಹೇಗೆ ‘ಮಟನ್ ಕೀಮಾ ವಡಾ’ ಮಾಡುವುದು ಎಂದು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಕಟ್ ಮಾಡಿದ ಮಟನ್ – 500 ಗ್ರಾಂ
    * ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 1 ಕಪ್
    * ಬೆಳ್ಳುಳ್ಳಿ – 10 ರಿಂದ 12
    * ಶುಂಠಿ – 1/2 ಇಂಚು
    * ಲವಂಗ – 4
    * ದಾಲ್ಚಿನ್ನಿ – 2
    * ಕಾಳುಮೆಣಸು – 1/2 ಟೀಸ್ಪೂನ್
    * ಹಸಿರು ಮೆಣಸಿನಕಾಯಿಗಳು – 3-4

    * ಉಪ್ಪು – 1 ಟೀಸ್ಪೂನ್
    * ಕಡ್ಕೆ ಹಿಟ್ಟು – 1/4 ಕಪ್
    * ಬೇಯಿಸಿದ ಮೊಟ್ಟೆ – 1
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಪುದೀನಾ – 10 ರಿಂದ 15 ಎಲೆ
    * ಸಬ್ಬಸಿಗೆ ಸೊಪ್ಪು – 1 ಕಪ್
    * ಅಡುಗೆ ಸೋಡಾ – 1 ಪಿಂಚ್
    * ಡೀಪ್ ಫ್ರೈ ಮಾಡಲು ಎಣ್ಣೆ – 2 ಕಪ್

    ಮಾಡುವ ವಿಧಾನಗಳು:
    * ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ದಾಲ್ಚಿನ್ನಿ, ಕಾಳುಮೆಣಸು, ಹಸಿರು ಮೆಣಸಿನಕಾಯಿಗಳು, ಉಪ್ಪು ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
    * ಈ ಪೇಸ್ಟ್‍ಗೆ ಕಟ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಹದವಾದ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ, ಮೊಟ್ಟೆಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಕಟ್ ಮಾಡಿದ ಕೊತ್ತಂಬರಿ ಸೊಪ್ಪು, ಪುದೀನಾ, ಸಬ್ಬಸಿಗೆ ಸೊಪ್ಪು ಮತ್ತು ಈರುಳ್ಳಿ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಮತ್ತೆ ಸರಿಯಾಗಿ ಮಿಶ್ರಣ ಮಾಡಿ.
    * ಡೀಪ್ ಫ್ರೈ ಮಾಡಲು ಎಣ್ಣೆಯನ್ನು ಬಿಸಿ ಮಾಡಿ. ಅದು ಬಿಸಿಯಾದ ನಂತರ ಮಟನ್ ಮಿಶ್ರಣವನ್ನು ವಡಾ ಆಕಾರಕ್ಕೆ ಚಪ್ಪಟೆ ಮಾಡಿ.
    * ಎಣ್ಣೆ ಬಿಸಿಯಾದ ನಂತರ ಮಧ್ಯಮ ಉರಿಯಲ್ಲಿ ಒಮ್ಮೆಗೆ 4 ರಿಂದ 5 ವಡಾ ಹಾಕಿ ಡೀಪ್ ಫ್ರೈ ಮಾಡಿ.
    * ಈ ಮಿಶ್ರಣವು ಗೋಲ್ಡನ್ ಬ್ರಾನ್ ಬರುವವರೆಗೂ ಎರಡೂ ಬದಿಗಳಿಗೆ ಗರಿಗರಿಯಾಗುವವರೆಗೆ ಫ್ರೈ ಮಾಡಿ.
    * ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳಲು ಟೀಶ್ಯೂ ಮೇಲೆ ವಡಾಗಳನ್ನು ಹಾಕಿ.

    – ನಿಮ್ಮ ಮುಂದೆ ರುಚಿಕರವಾದ ಬಿಸಿ ಬಿಸಿ ‘ಮಟನ್ ಕೀಮಾ ವಡಾ’ ಸಿದ್ಧವಾಗಿದೆ. ಇದನ್ನು ಚಟ್ನಿಯೊಂದಿಗೆ ಸವಿಯಿರಿ.

    Live Tv

  • ಸಿಂಪಲ್‌ ಆಗಿ ಟ್ರೈ ಮಾಡಿ ʼಮಟನ್ ಬ್ರೈನ್ ಫ್ರೈʼ

    ಸಿಂಪಲ್‌ ಆಗಿ ಟ್ರೈ ಮಾಡಿ ʼಮಟನ್ ಬ್ರೈನ್ ಫ್ರೈʼ

    ತ್ತೀಚಿಗೆ ನಾನ್‍ವೆಜ್ ಆಹಾರ ಪ್ರಿಯರು ದಿನಕ್ಕೊಂದು ಬಗೆಯ ಖಾದ್ಯಗಳನ್ನು ಹುಡುಕುವುದು ಸಹಜ. ಕೆಲವರಂತೂ ನೆಚ್ಚಿನ ಖಾದ್ಯಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಅರಸಿ ಹೋಗುತ್ತಾರೆ. ವಾರಾಂತ್ಯ ಬಂತೆಂದರೆ ಸಾಕು ವಿಭಿನ್ನ ಖಾದ್ಯಗಳನ್ನೂ ಸಿದ್ಧಪಡಿಸಿ ಗ್ರಾಹಕರನ್ನು ಸೆಳೆಯಲು ಹೋಟೆಲ್ ಮಂದಿ ಕಾಯುತ್ತಿರುತ್ತಾರೆ. ಇದರಲ್ಲಿ ಮಟನ್ ಬ್ರೈನ್ ಫ್ರೈ (ಮೆದುಳು ಫ್ರೈ)ಸಹ ಒಂದು. ಆದರೀಗ ನೀವು ಯಾವುದೇ ಹೋಟೆಲ್‍ಗಳಿಗೆ ಅಲೆದಾಡಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ಮನೆಯಲ್ಲೇ ಬ್ರೈನ್ ಫ್ರೈ ಮಾಡಿ ಸವಿಯಬಹುದು. ಅದರ ಚುಕುಟು ಮಾಹಿತಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಮಟನ್ ಬ್ರೈನ್ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಹಸಿರು ಮೆಣಸಿನಕಾಯಿ – 1
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
    * ಕರಿಬೇವಿನ ಎಲೆಗಳು – ಅರ್ಧ ಕಪ್
    * ಜೀರಿಗೆ – 1/4 ಟೀಸ್ಪೂನ್
    * ಲವಂಗ – 3
    * ಏಲಕ್ಕಿ – 1

    * ದಾಲ್ಚಿನ್ನಿ – 1/2
    * ಮೆಣಸು – 1/2 ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1/4 ಟೀಸ್ಪೂನ್
    * ಕೊತ್ತಂಬರಿ ಪುಡಿ – 1/4 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಅಗತ್ಯಕ್ಕೆ ತಕ್ಕಂತೆ ಅಡಿಗೆ ಎಣ್ಣೆ
    * ಅಗತ್ಯವಿರುವಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಚೆನ್ನಾಗಿ ಮೆದುಳನ್ನು ತೊಳೆಯಿರಿ. ನಂತರ ಬೇರೆ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಮತ್ತು ಮೆದುಳು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಪಕ್ಕದಲ್ಲಿ ಇಡಿ.
    * ಬೇರೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
    * ನಂತರ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ.


    * ಅದಕ್ಕೆ ಅರಿಶಿನ, ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೆದುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಸಾಲಾದಲ್ಲಿ ಮೆದುಳನ್ನು ಸೇರಿಸಿ. ನಂತರ ಮಸಾಲೆ ಜೊತೆ ಮೆದುಳಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
    * ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಲು ಬಿಡಿ.

    – ಈಗ ಮಟನ್ ಬ್ರೈನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧವಾಗಿದೆ.