Tag: non veg

  • ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್

    ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್

    ಗ್ರೀಕ್ ಲೆಮನ್ ಚಿಕನ್ (Greek Lemon Chicken) ಅನ್ನು ಚಿಕನ್ ಬ್ರೆಸ್ಟ್ ತುಂಡುಗಳಿಂದ ಮಾಡಲಾಗುತ್ತದೆ. ನಿಂಬೆ ರಸ, ಆಲಿವ್ ಎಣ್ಣೆಯ ಸ್ವಾದ ನಿಮಗೆ ಖಂಡಿತವಾಗಿಯೂ ಹೊಸ ರುಚಿಯ ಅನುಭವ ನೀಡುತ್ತದೆ. ಚಿಕನ್‌ನಿಂದ ಹೊಸದಾಗಿ ಏನಾದರೂ ಸಿಂಪಲ್ ಆಗಿ ಅಡುಗೆ ಮಾಡಲು ಬಯಸುವವರು ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಿ. ಗ್ರೀಕ್ ಚಿಕನ್ ಲೆಮನ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಬೇಕಾಗುವ ಪದಾರ್ಥಗಳು:
    ಚಿಕನ್ ಬ್ರೆಸ್ಟ್ – 1 ಕೆ.ಜಿ
    ಆಲಿವ್ ಎಣ್ಣೆ – ಅರ್ಧ ಕಪ್
    ನಿಂಬೆ ಸಿಪ್ಪೆಯ ತುರಿ – 1 ಟೀಸ್ಪೂನ್
    ನಿಂಬೆ ಹಣ್ಣಿನ ರಸ – ಕಾಲು ಕಪ್
    ಜೇನುತುಪ್ಪ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಓರಿಗಾನೋ – 2 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬೌಲ್‌ನಲ್ಲಿ ಆಲಿವ್ ಎಣ್ಣೆ, ನಿಂಬೆ ಸಿಪ್ಪೆಯ ತುರಿ, ನಿಂಬೆ ರಸ, ಜೇನುತುಪ್ಪ, ಬೆಳ್ಳುಳ್ಳಿ, ಓರಿಗಾನೋ, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ.
    * ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಹಾಕಿ, ಮಿಕ್ಸ್ ಮಾಡಿ.
    * ಈಗ ಬೌಲ್ ಅನ್ನು 1 ಗಂಟೆ ಫ್ರಿಜ್‌ನಲ್ಲಿ ಇಟ್ಟು ಮ್ಯಾರಿನೇಟ್ ಆಗಲು ಬಿಡಿ.
    * ಈಗ ಗ್ರಿಲ್ ಅಥವಾ ಗ್ರಿಲ್ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
    * ಚಿಕನ್ ತುಂಡುಗಳನ್ನು ಗ್ರಿಲ್‌ನಲ್ಲಿಟ್ಟು, ಬೇಯಿಸಿಕೊಳ್ಳಿ.
    * ಚಿಕನ್‌ನ ಪ್ರತಿ ಬದಿಗಳನ್ನು 5-7 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಈ ಚಿಕನ್ ಅನ್ನು ಗ್ರಿಲ್‌ನಿಂದ ತೆಗೆದು, 5 ನಿಮಿಷ ತಣ್ಣಗಾಗಲು ಬಿಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ, ಗ್ರೀಕ್ ಲೆಮನ್ ಚಿಕನ್ ಅನ್ನು ಬಡಿಸಿ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

  • ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

    ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

    ಕ್ಕಳು ಯಾವಾಗಲೂ ರಸ್ತೆ ಬದಿ ಸಿಗುವ ಚೈನೀಸ್ ಅಡುಗೆಗಳಿಗೆ ಹಠ ಹಿಡಿಯೋದು ಸಹಜ. ಆದರೆ ಆ ಆಹಾರಗಳ ಸ್ವಚ್ಛತೆ ಬಗ್ಗೆ ಸವಾಲು ಮೂಡುವುದೂ ಸತ್ಯ. ಮನೆಯಲ್ಲಿಯೂ ಚೈನೀಸ್ ಆಹಾರಗಳನ್ನು ತಯಾರಿಸಬಾರದು ಎಂದೇನಿಲ್ಲ. ನಾವು ಈಗಾಗಲೇ ಚೈನೀಸ್ ಅಡುಗೆಗಳ ಹಲವಾರು ರೆಸಿಪಿಗಳನ್ನು ತಿಳಿಸಿಕೊಟ್ಟಿದ್ದೇವೆ. ಇಂದು ಕೂಡಾ ಒಂದು ಚೈನೀಸ್ ನಾನ್‌ವೆಜ್ ಅಡುಗೆ ಹೇಳಿಕೊಡುತ್ತೇವೆ. ಸೂಪರ್ ಟೇಸ್ಟ್ ಆಗಿರುವ ಆರೆಂಜ್ ಚಿಕನ್ (Orange Chicken) ರೆಸಿಪಿ ನೀವೊಮ್ಮೆ ಟ್ರೈ ಮಾಡಿ ಮಕ್ಕಳಿಗೆ ನೀಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ – ಅರ್ಧ ಕೆಜಿ (ಮೂಳೆಗಳಿಲ್ಲದ ಚರ್ಮ ರಹಿತ ತುಂಡುಗಳು)
    ಮೊಟ್ಟೆ – 2
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಮೈದಾ ಹಿಟ್ಟು – ಅರ್ಧ ಕಪ್
    ಕಾರ್ನ್ ಫ್ಲೋರ್ – ಅರ್ಧ ಕಪ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಬಿಳಿ ಎಳ್ಳು – 1 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಆರೆಂಜ್ ಸಾಸ್ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ತುರಿದ ಶುಂಠಿ – 2 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಕಿತ್ತಳೆ ರಸ – 1 ಕಪ್
    ಸೋಯಾ ಸಾಸ್ – ಕಾಲು ಕಪ್
    ಕಂದು ಸಕ್ಕರೆ – ಅರ್ಧ ಕಪ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ವಿನೆಗರ್ – 2 ಟೀಸ್ಪೂನ್
    ಎಳ್ಳೆಣ್ಣೆ – 1 ಟೀಸ್ಪೂನ್
    ನೀರು – ಅರ್ಧ ಕಪ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಕಲಡಿ ಬದಿಗಿಡಿ.
    * ಇನ್ನೊಂದು ಬಟ್ಟಲಿನಲ್ಲಿ ಉಪ್ಪು, ಕರಿಮೆಣಸಿನ ಪುಡಿ, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿ ಮಾಡಿಕೊಳ್ಳಿ.
    * ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿದ ಚಿಕನ್ ಅನ್ನು ಒಂದೊಂದೇ ಮೊಟ್ಟೆಯಲ್ಲಿ ಅದ್ದಿ, ಬಳಿಕ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಬಳಿಕ ಬಿಸಿ ಮಾಡಿದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
    * ಚಿಕನ್ ತುಂಡುಗಳು ಬೇಯುವವರೆಗೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ 5 ನಿಮಿಷ ಫ್ರೈ ಮಾಡಿ, ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್‌ನಲ್ಲಿ ಹರಡಿ. ಎಲ್ಲಾ ಚಿಕನ್ ತುಂಡುಗಳನ್ನೂ ಹೀಗೇ ಪುನರಾವರ್ತಿಸಿ.
    * ಈಗ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಹುರಿದುಕೊಳ್ಳಿ.
    * ಬಳಿಕ ಕಿತ್ತಳೆ ರಸ, ಸೋಯಾ ಸಾಸ್, ಕಂದು ಸಕ್ಕರೆ, ಕೆಂಪು ಮೆಣಸಿನ ಪುಡಿ, ವಿನೆಗರ್, ಎಳ್ಳೆಣ್ಣೆ ಸೇರಿಸಿ, ಕುದಿಸಿ.
    * ಈಗ ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್ ಫ್ಲೋರ್ ಹಾಗೂ ಅರ್ಧ ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ಯಾನ್‌ಗೆ ಸೇರಿಸಿ, 2-3 ನಿಮಿಷ ಬೇಯಿಸಿ.
    * ಸಾಸ್ ದಪ್ಪವಾಗುತ್ತಾ ಬಂದಂತೆ ಫ್ರೈ ಮಾಡಿ ಇಟ್ಟಿದ್ದ ಚಿಕನ್ ತುಂಡುಗಳನ್ನು ಸೇರಿಸಿ, ಮಿಶ್ರಣ ಮಾಡಿ.
    * ಈಗ ಸ್ಪ್ರಿಂಗ್ ಆನಿಯನ್ ಹಾಗೂ ಬಿಳಿ ಎಳ್ಳನ್ನು ಸೇರಿಸಿ, ಮಿಶ್ರಣ ಮಾಡಿ.
    * ಇದೀಗ ಚೈನೀಸ್ ಸ್ಟೈಲ್‌ನ ಆರೆಂಜ್ ಚಿಕನ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಮಕ್ಕಳಂತೂ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಚಹಾ ಸಮಯದಲ್ಲಿ ಆನಂದಿಸಿ ರುಚಿರುಚಿಯಾದ ಚಿಕನ್ ಬಾಲ್ಸ್

  • ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್

    ಡುಗೆ ಕಲಿಯಲು ಅಂಬೆಗಾಲಿಡುತ್ತಿರುವವರು ಯಾವಾಗಲೂ ಸಸ್ಯಾಹಾರ ರೆಸಿಪಿಗಳನ್ನೇ ಟ್ರೈ ಮಾಡಬೇಕೆಂದೇನಿಲ್ಲ. ಸುಲಭದ, ಬೇಗನೇ ತಯಾರಿಸಬಹುದಾದ ನಾನ್‌ವೆಜ್ ರೆಸಿಪಿಗಳನ್ನೂ ನೀವು ಟ್ರೈ ಮಾಡಬಹುದು. ನಮ್ಮಲ್ಲಿ ಹಂದಿ ಮಾಂಸ ಪ್ರಿಯರು ಹಲವರು ಸಿಗುತ್ತಾರೆ. ಪೋರ್ಕ್ ಪ್ರಿಯರಿಗಾಗಿ ಹಾಗೂ ಸುಲಭದ ರೆಸಿಪಿಗಳನ್ನು ಹುಡುಕುತ್ತಿರುವವರಿಗಾಗಿ ನಾವಿಂದು ಪರ್ಫೆಕ್ಟ್ ಅಡುಗೆ ಹೇಳಿಕೊಡುತ್ತೇವೆ. ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ (Honey Garlic Pork Chops) ಮಾಡಿ, ನೀವು ಸವಿದು ನೋಡಿದರೆ, ಅದ್ಭುತ ಎನ್ನದೇ ಇರಲಾರಿರಿ.

    ಬೇಕಾಗುವ ಪದಾರ್ಥಗಳು:
    ದಪ್ಪಗೆ ಕತ್ತರಿಸಿದ ಮೂಳೆಗಳಿಲ್ಲದ ಹಂದಿ ಚಾಪ್ಸ್ – 6 ತುಂಡುಗಳು
    ಆಲಿವ್ ಎಣ್ಣೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ನಿಮ್ಮ ಸ್ವಾದಕ್ಕನುಸಾರದಂತೆ
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
    ಕೆಚಪ್ – ಅರ್ಧ ಕಪ್
    ಸೋಯಾ ಸಾಸ್ – ಕಾಲು ಕಪ್
    ಜೇನುತುಪ್ಪ – ಕಾಲು ಕಪ್
    ಕಾರ್ನ್ಫ್ಲೋರ್ – 2 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್ ಒಂದನ್ನು ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ, ಪೋರ್ಕ್ ಚಾಪ್ಸ್ಗಳನ್ನು ಅದರಲ್ಲಿಡಿ.
    * ಉರಿಯನ್ನು ಏರಿಸಿ, ಮಾಂಸಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಸುತ್ತಲೂ ಚೆನ್ನಾಗಿ ಹಚ್ಚಿ.
    * ಮಾಂಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಕಡಿಮೆ ಮಾಡಿ.
    * ಈಗ ಒಂದು ಬೌಲ್‌ಗೆ ಬೆಳ್ಳುಳ್ಳಿ, ಕೆಚಪ್, ಸೋಯಾ ಸಾಸ್ ಮತ್ತು ಜೇನುತುಪ್ಪವನ್ನು ಹಾಕಿ, ಮಿಶ್ರಣ ಮಾಡಿ.
    * ಈ ಮಿಶ್ರಣವನ್ನು ಈಗ ಪೋರ್ಕ್ ಚಾಪ್ಸ್ ಮೇಲೆ ಸುರಿಯಿರಿ. ಪ್ಯಾನ್‌ಗೆ ಮುಚ್ಚಳ ಹಾಕಿ, 5 ನಿಮಿಷ ಬೇಯಿಸಿಕೊಳ್ಳಿ.
    * ಈಗ ಒಂದು ಸಣ್ಣ ಬೌಲ್ ತೆಗೆದುಕೊಂಡು, ಅದರಲ್ಲಿ ಕಾರ್ನ್ ಫ್ಲೋರ್ ಹಾಕಿ, ಕಾಲು ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ.
    * ಈ ಮಿಶ್ರಣವನ್ನು ನಿಧಾನಕ್ಕೆ ಪೋರ್ಕ್ ಮಿಶ್ರಣಕ್ಕೆ ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿಕೊಳ್ಳಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
    * ಇದೀಗ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಖತ್ ಟೇಸ್ಟಿ ಬೆಳ್ಳುಳ್ಳಿ ಚಿಕನ್ ರೈಸ್ ಮಾಡಿ

    ಸಖತ್ ಟೇಸ್ಟಿ ಬೆಳ್ಳುಳ್ಳಿ ಚಿಕನ್ ರೈಸ್ ಮಾಡಿ

    ಡುಗೆಯಲ್ಲಿ ಕೆಲವರು ಬೆಳ್ಳುಳ್ಳಿಯನ್ನು ಇಷ್ಟಪಡುವುದಿಲ್ಲ. ಆದರೆ ಅದೇ ಬೆಳ್ಳುಳ್ಳಿ ರುಚಿಯ ಅಭಿಮಾನಿಗಳೂ ಇದ್ದಾರೆ ಎಂದರೆ ತಪ್ಪಲ್ಲ. ಬೆಳ್ಳುಳ್ಳಿಯಲ್ಲಿ ಅದೆಷ್ಟು ಆರೋಗ್ಯಕರ ಅಂಶಗಳಿವೆಯೋ ಅದನ್ನು ಅಡುಗೆಯಲ್ಲಿ ಬಳಸುವುದರಿಂದ ಅಷ್ಟೇ ರುಚಿಯನ್ನೂ ನೀಡುತ್ತದೆ. ನಾವಿಂದು ಬೆಳ್ಳುಳ್ಳಿ ಚಿಕನ್ ರೈಸ್ (Garlic Chicken Rice) ರೆಸಿಪಿಯನ್ನು ಹೇಳಿಕೊಡುತ್ತೇವೆ. ಸಿಂಪಲ್ ವಿಧಾನವನ್ನು ನೀವು ಕೂಡಾ ಈ ವೀಕೆಂಡ್‌ನಲ್ಲಿ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಹೆಚ್ಚಿದ ಈರುಳ್ಳಿ – ಕಾಲು ಕಪ್
    ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ ಕಪ್
    ಜಜ್ಜಿದ ಬೆಳ್ಳುಳ್ಳಿ – 4 ಎಸಳು
    ಅಕ್ಕಿ – ಅರ್ಧ ಕಪ್
    ಎಣ್ಣೆ – 2 ಟೀಸ್ಪೂನ್
    ನಿಂಬೆ ರಸ – ಕಾಲು ಕಪ್
    ಕತ್ತರಿಸಿದ ಚಿಕನ್ ಬ್ರೆಸ್ಟ್ – 1
    ಶುಂಠಿ ಪೇಸ್ಟ್ – 2 ಟೀಸ್ಪೂನ್
    ಸೋಯಾ ಸಾಸ್ – 2 ಟೀಸ್ಪೂನ್
    ಜೇನು – 1 ಟೀಸ್ಪೂನ್
    ಬೇಯಿಸಿದ ಚಿಕನ್ ಸ್ಟಾಕ್ – ಅರ್ಧ ಕಪ್
    ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಪಾತ್ರೆ ತೆಗೆದುಕೊಂಡು, ಅದರಲ್ಲಿ ಚಿಕನ್ ತುಂಡುಗಳು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ, ಉಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸುಮಾರು 1 ಗಂಟೆ ಮ್ಯಾರಿನೇಟ್ ಆಗಲು ಪಕ್ಕಕ್ಕಿಡಿ.
    * ಬಳಿಕ ಕುಕ್ಕರ್ ತೆಗೆದುಕೊಂಡು, ಅದರಲ್ಲಿ ಅಕ್ಕಿ ಹಾಗೂ ನೀರು ಹಾಕಿ ಮುಚ್ಚಳ ಹಾಕದೇ ಅರ್ಧದಷ್ಟು ಬೇಯಿಸಿಕೊಳ್ಳಿ.
    * ಬಳಿಕ ಮ್ಯಾರಿನೇಟ್ ಮಾಡಿದ ಚಿಕನ್, ಕ್ಯಾಪ್ಸಿಕಮ್, ಸೋಯಾಸಾಸ್ ಹಾಕಿ, ಚಿಕನ್ ಸ್ಟಾಕ್ ಸೇರಿಸಿ ಮಿಶ್ರಣ ಮಾಡಿ.
    * ಕುಕ್ಕರ್ ಮುಚ್ಚಳ ಮುಚ್ಚಿ, ಸೀಟಿ ಹಾಕದೇ 5-10 ನಿಮಿಷ ಬೇಯಿಸಿಕೊಳ್ಳಿ.
    * ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಜೇನು ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
    * ಇದೀಗ ಬೆಳ್ಳುಳ್ಳಿ ಚಿಕನ್ ರೈಸ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ, ರಾಯಿತಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಚಿಕನ್ ಸುಕ್ಕ (Chicken Sukka) ಎಂದರೆ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ನಾವಿಂದು ಮಂಗಳೂರು ಶೈಲಿಯಲ್ಲಿ ಚಿಕನ್ ಸುಕ್ಕ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ತುಂಬಾ ಸಿಂಪಲ್ ವಿಧಾನದಲ್ಲಿ ಈ ಚಿಕನ್ ಸುಕ್ಕ ಮಾಡಬಹುದಾಗಿರುವುದರಿಂದ ನೀವೂ ಇದನ್ನು ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 3 ಟೀಸ್ಪೂನ್
    ಒಣ ಕೆಂಪು ಮೆಣಸು – 20
    ಕೊತ್ತಂಬರಿ – 5 ಟೀಸ್ಪೂನ್
    ಅರಿಶಿನ – 1 ಟೀಸ್ಪೂನ್
    ಹುಣಿಸೆ ಹಣ್ಣು – ಸ್ವಲ್ಪ
    ಹೆಚ್ಚಿದ ಈರುಳ್ಳಿ – 1
    ಮೆಂತ್ಯ – ಕಾಲು ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಲವಂಗ – 2
    ಏಲಕ್ಕಿ – 1
    ಬೆಳ್ಳುಳ್ಳಿ – 10
    ಕರಿಬೇವಿನ ಸೊಪ್ಪು – ಕೆಲವು
    ತೆಂಗಿನ ತುರಿ – ಅರ್ಧ ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಚಿಕನ್ ತುಂಡುಗಳು – 1 ಕೆಜಿ
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ ಬಿಸಿಯಾದ ಬಳಿಕ ಕೆಂಪು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಹಾಕಿ ಹುರಿದುಕೊಳ್ಳಿ.
    * ಹುರಿದ ಪದಾರ್ಥಗಳು ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅರಿಶಿನ ಮತ್ತು ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.
    * ಈಗ ಒಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
    * ಈಗ ಮೆಂತ್ಯ, ಜೀರಿಗೆ, ಲವಂಗ ಹಾಗೂ ಏಲಕ್ಕಿ ಸೇರಿಸಿ ಸ್ವಲ್ಪ ಹುರಿಯಿರಿ.
    * ಬಳಿಕ ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಸೇರಿಸಿ ಫ್ರೈ ಮಾಡಿ. ಬಳಿಕ ಉರಿ ಆಫ್ ಮಾಡಿ ಆರಲು ಬಿಡಿ.
    * ಈಗ ಹುರಿದು ತಣ್ಣಗಾಗಿಸಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ಈಗ ಪ್ಯಾನ್‌ನಲ್ಲಿ ತೆಂಗಿನ ತುರಿ ಹಾಕಿಕೊಂಡು ಸ್ವಲ್ಪ ಹುರಿದುಕೊಳ್ಳಿ. ಬಳಿಕ ಪಕ್ಕಕ್ಕಿಡಿ.
    * ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ, ಈರುಳ್ಳಿ ಹಾಗೂ ಟೊಮೆಟೊವನ್ನು ಹುರಿದುಕೊಳ್ಳಿ. ಬಳಿಕ ಸ್ವಲ್ಪ ಕರಿಬೇವಿನ ಸೊಪ್ಪು ಸೇರಿಸಿ ಸ್ವಲ್ಪ ಕೈಯಾಡಿಸಿ.

    * ಈಗ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಕೈಯಾಡಿಸುತ್ತಾ ಬೇಯಿಸಿಕೊಳ್ಳಿ.
    * ಈಗ ರುಬ್ಬಿದ ಕೆಂಪುಮೆಣಸು ಹಾಗೂ ಕೊತ್ತಂಬರಿಯ ಮಿಶ್ರಣವನ್ನು ಸೇರಿಸಿ, ಚಿಕನ್ ಬೇಯಲು ಬೇಕಾಗುವಷ್ಟು ನೀರು ಸೇರಿಸಿ, ಉಪ್ಪು ಹಾಕಿ ಮಿಶ್ರಣ ಮಾಡಿ.
    * ಈಗ ಕಡಾಯಿಗೆ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ.
    * ಚಿಕನ್ ಮುಕ್ಕಾಲು ಭಾಗದಷ್ಟು ಬೆಂದ ಬಳಿಕ ರುಬ್ಬಿಟ್ಟುಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ, ಚೆನ್ನಾಗಿ ಬೇಯಿಸಿ.
    * ಈಗ ಹುರಿದಿಟ್ಟುಕೊಂಡಿದ್ದ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
    * ನೀರಿನಂಶವೆಲ್ಲಾ ಆವಿಯಾದ ಬಳಿಕ ಉರಿಯನ್ನು ಆಫ್ ಮಾಡಿ.
    * ಇದೀಗ ಚಿಕನ್ ಸುಕ್ಕ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ನೀರುದೋಸೆ, ಅಕ್ಕಿ ರೊಟ್ಟಿಯೊಂದಿಗೆ ಇದು ಸೂಪರ್ ಎನಿಸುತ್ತದೆ. ಇದನ್ನೂ ಓದಿ: ನಾಲಿಗೆಯ ರುಚಿ ಹೆಚ್ಚಿಸುವ ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಲಿಗೆಯ ರುಚಿ ಹೆಚ್ಚಿಸುವ ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ ರೆಸಿಪಿ

    ನಾಲಿಗೆಯ ರುಚಿ ಹೆಚ್ಚಿಸುವ ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ ರೆಸಿಪಿ

    ಲವರು ರೆಸ್ಟೊರೆಂಟ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡೋ ಸೂಪ್ ಎಂದರೆ ಹಾಟ್ ಆ್ಯಂಡ್ ಸೋರ್ ಸೂಪ್. ಹುಳಿ, ಸಿಹಿ, ಖಾರದ ಮಿಶ್ರಣದಲ್ಲಿ ನಾಲಿಗೆಯ ರುಚಿ ಹೆಚ್ಚಿಸುವ ಈ ಸೂಪ್ ಹೆಚ್ಚಿನವರ ಎವರ್ ಗ್ರೀನ್ ಫೇವರೆಟ್ ಎಂದರೆ ತಪ್ಪಲ್ಲ. ನಾವಿಂದು ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ (Chicken Hot and Sour Soup) ಮನೆಯಲ್ಲೇ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ರೆಸ್ಟೋರೆಂಟ್‌ ಹೋಗೋ ಬದಲು ಮನೆಯಲ್ಲಿ ಇದನ್ನು ಟ್ರೈ ಮಾಡಿ ನಾಲಿಗೆಗೆ ಮಜ ನೀಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ – ಅರ್ಧ ಕೆಜಿ
    ಹೆಚ್ಚಿದ ಕ್ಯಾರೆಟ್ – ಅರ್ಧ ಕಪ್
    ಹೆಚ್ಚಿದ ಎಲೆಕೋಸು – ಅರ್ಧ ಕಪ್
    ಮೊಟ್ಟೆ – 1
    ಟೊಮೆಟೊ ಕೆಚಪ್ – 1 ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ವಿನೆಗರ್ – 1 ಟೀಸ್ಪೂನ್

    ರೆಡ್ ಚಿಲ್ಲಿ ಪೇಸ್ಟ್ – 1 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಕ್ಕರೆ – 1 ಟೀಸ್ಪೂನ್
    ಕಾಳು ಮೆಣಸಿನಪುಡಿ – ರುಚಿಗೆ ತಕ್ಕಷ್ಟು
    ಕಾರ್ನ್ ಫ್ಲೋರ್ – 1 ಟೀಸ್ಪೂನ್
    ಬೆಣ್ಣೆ – 1 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಹೀಗೊಮ್ಮೆ ಮಾಡಿ ನೋಡಿ – ಕ್ರಿಸ್ಪಿ ಸಿಗಡಿ ಫ್ರೈ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ.
    * ಚಿಕನ್ ಸೇರಿಸಿ ಚೆನ್ನಾಗಿ ಬೇಯಲು ಬಿಡಿ.
    * ಈಗ ಒಂದು ಸ್ಟ್ರೈನರ್ ಬಳಸಿ ಚಿಕನ್ ಹಾಗೂ ಸ್ಟಾಕ್(ಚಿಕನ್ ಬೇಯಿಸಿದ ನೀರು) ಅನ್ನು ಬೇರ್ಪಡಿಸಿ.
    * ಸ್ಟಾಕ್‌ಗೆ ರೆಡ್ ಚಿಲ್ಲಿ ಪೇಸ್ಟ್, ಸೋಯಾ ಸಾಸ್, ವಿನೆಗರ್, ಟೊಮೆಟೊ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪಕ್ಕಕ್ಕಿಡಿ.
    * ಈಗ ಪ್ಯಾನ್‌ನಲ್ಲಿ ಸ್ವಲ್ಪ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿ.
    * ಕ್ಯಾರೆಟ್, ಎಲೆಕೋಸು ಸೇರಿಸಿ 5 ನಿಮಿಷ ಫ್ರೈ ಮಾಡಿ.
    * ಈಗ ಅದಕ್ಕೆ ಸ್ಟಾಕ್ ಅನ್ನು ಸೇರಿಸಿ ಮಿಶ್ರಣ ಮಾಡಿ.
    * ಬಳಿಕ ಉಪ್ಪು, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ.
    * ಚಿಕನ್ ತುಂಡುಗಳನ್ನು ಸೇರಿಸಿ 10 ನಿಮಿಷ ಕುದಿಸಿ.
    * ಈ ನಡುವೆ ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಹಾಕಿ ಸ್ಲರಿ ಮಿಶ್ರಣ ತಯಾರಿಸಿ.
    * ಸ್ಲರಿಯನ್ನು ಸೂಪ್‌ಗೆ ಸೇರಿಸಿ ದಪ್ಪವಾಗುವವರೆಗೆ ಮಿಶ್ರಣ ಮಾಡಿ.
    * ಈಗ ಮೊಟ್ಟೆಯನ್ನು ಒಡೆದು, ಸೂಪ್‌ಗೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
    * ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ಚಿಕನ್ ಹಾಟ್ ಆಂಡ್ ಸೋರ್ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಖಾರವಾದ ಎಗ್ ಪೆಪ್ಪರ್ ಮಸಾಲಾ ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜ್‌ ಹಾಸ್ಟೆಲ್‍ನಲ್ಲಿ ಮಾಂಸಾಹಾರ ಸೇವನೆ ನಿಷೇಧ

    ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜ್‌ ಹಾಸ್ಟೆಲ್‍ನಲ್ಲಿ ಮಾಂಸಾಹಾರ ಸೇವನೆ ನಿಷೇಧ

    ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನ (Delhi Universitys Hansraj College) ಹಾಸ್ಟೆಲ್ (Hostel) ಮತ್ತು ಕ್ಯಾಟಿಂನ್‍ನಲ್ಲಿ (Canteen) ಮಾಂಸಾಹಾರ (Non-veg) ಸೇವಿಸುವುದನ್ನು ನಿಷೇಧ ಮಾಡಿ ಪ್ರಾಂಶುಪಾಲರು ಆದೇಶಿಸಿದ್ದಾರೆ.

    ಕೊರೊನಾ (Corona) ಸೋಂಕಿನ ಬಳಿಕ ಆನ್‍ಲೈನ್‍ನಲ್ಲಿ ನಡೆಯುತ್ತಿದ್ದ ತರಗತಿಗಳು ಇದೀಗ ಆಫ್‍ಲೈನ್‍ನಲ್ಲಿ ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಕಾಲೇಜಿನ ಹಾಸ್ಟೆಲ್ ಮತ್ತು ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಸೇವನೆಯನ್ನು ನಿಷೇಧಿಸಲು ಮುಂದಾಗಿದೆ. ಇದನ್ನೂ ಓದಿ: Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಾಂಶುಪಾಲರಾದ ಪ್ರೋ. ರಾಮ, ಕಾಲೇಜಿನ ಕ್ಯಾಂಟೀನ್‌ ಮತ್ತು ಹಾಸ್ಟೆಲ್‍ನಲ್ಲಿ ಮಾಂಸಾಹಾರ ಸೇವನೆ ನಿಷೇಧದ ಕುರಿತು ಮೂರ್ನಾಲ್ಕು ವರ್ಷಗಳ ಹಿಂದೆ ಚಿಂತಿಸಲಾಗಿತ್ತು. ಇದೀಗ ಮಾಂಸಾಹಾರ ನಿಷೇಧದ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳ ಆರೋಗ್ಯ, ಕ್ಷೇಮದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

    ಕಳೆದ ವರ್ಷ ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಾಮನವಮಿಯಂದು ಎಡಪಂಥೀಯ ವಿದ್ಯಾರ್ಥಿಗಳು ಮಾಂಸಾಹಾರ ಸೇವಿಸಿದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ವಿದ್ಯಾರ್ಥಿಗಳು ತಡೆದಿದ್ದರು. ಆ ಬಳಿಕ ಜೆಎನ್‍ಯುನಲ್ಲಿ (JNU) ಹಲವು ಘರ್ಷಣೆಗಳು ವರದಿಯಾಗಿತ್ತು. ಇದನ್ನೂ ಓದಿ: ಕನ್ನಡಿಗರಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭ ಕೋರಿದ ಮೋದಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯಲ್ಲಿ ನೀರೂರಿಸುತ್ತೆ ಬೋಟಿ ಕಬಾಬ್

    ಬಾಯಲ್ಲಿ ನೀರೂರಿಸುತ್ತೆ ಬೋಟಿ ಕಬಾಬ್

    ನಾನ್‌ವೆಜ್ ಎಂದರೆ ಬೇಡ ಎನ್ನುವವರು ಬಹಳ ವಿರಳ. ಪ್ರತಿಯೊಬ್ಬ ನಾನ್‌ವೆಜ್ ಪ್ರಿಯರು ಭಿನ್ನ ವಿಭಿನ್ನ ರುಚಿಗಳಿಗೆ ಅಭಿಮಾನಿಯಾಗಿರುತ್ತಾರೆ. ನಾವಿಂದು ಸುಲಭವಾಗಿ ಮಟನ್‌ನಿಂದ ಬೋಟಿ ಕಬಾಬ್ (Boti Kebab) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಈ ರೆಸಿಪಿ ಒಮ್ಮೆ ಟ್ರೈ  ಮಾಡಿ, ನಿಮ್ಮ ಬಾಯಲ್ಲಿ ನೀರೂರುವುದನ್ನು ಯಾರಿಂದಲೂ ತಡೆಯಲಾಗದು.

    ಬೇಕಾಗುವ ಪದಾರ್ಥಗಳು:
    ಮಟನ್ – ಅರ್ಧ ಕೆಜಿ (ಬೋನ್‌ಲೆಸ್ ಹಾಗೂ ಸಣ್ಣ ತುಂಡುಗಳನ್ನು ಬಳಸಿ)
    ಹಸಿ ಪಪ್ಪಾಯಿ ಪೇಸ್ಟ್ – 2 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಹಸಿಮೆಣಸಿನ ಪೇಸ್ಟ್ – ಅರ್ಧ ಟೀಸ್ಪೂನ್
    ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಗರಂ ಮಸಾಲಾ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – ಕಾಲು ಕಪ್
    ಸ್ಪ್ರಿಂಗ್ ಆನಿಯನ್ – ಅಲಂಕಾರಕ್ಕೆ ಇದನ್ನೂ ಓದಿ: ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ

    ಮಾಡುವ ವಿಧಾನ:
    * ಮೊದಲಿಗೆ ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ.
    * ಮಟನ್ ತುಂಡುಗಳಿಗೆ ಪಪ್ಪಾಯಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಹಾಗೂ ಗರಂ ಮಸಾಲಾ ಪುಡಿ ಹಾಕಿ ಕಲಸಿ.
    * ಈಗ ಮಟನ್ ಅನ್ನು ಫ್ರಿಡ್ಜ್‌ನಲ್ಲಿ 3-4 ಗಂಟೆಗಳ ಕಾಲ ಇಡಿ.
    * ಬಳಿಕ ಕುಕ್ಕರ್‌ಗೆ 2 ಕಪ್ ನೀರು ಹಾಕಿ, 4 ಸೀಟಿ ಬರುವವರೆಗೆ ಮಟನ್ ಅನ್ನು ಬೇಯಿಸಿ.
    * ಜಾಗರೂಕರಾಗಿ ವಿಶಲ್ ಅನ್ನು ತೆಗೆದು, ಕುಕ್ಕರ್‌ನಲ್ಲಿ ನೀರು ಉಳಿದಿದೆಯೇ ಎಂಬುದನ್ನು ಪರಿಶೀಲಿಸಿ. ನೀರು ಉಳಿದಿದ್ದರೆ ಅದು ಆವಿಯಾಗುವವರೆಗೆ ಬೇಯಿಸಿಕೊಳ್ಳಿ.
    * ಈಗ ಮಟನ್ ತುಂಡುಗಳನ್ನು ಒಂದು ಪಾತ್ರೆಗೆ ವರ್ಗಾಯಿಸಿ.
    * ಗ್ರಿಲ್ಲರ್ ಅಥವಾ ಪ್ಯಾನ್‌ನಲ್ಲಿ ಅವುಗಳನ್ನು ಗ್ರಿಲ್ ಮಾಡಿ.
    * ಮಟನ್ ತುಂಡುಗಳಿಗೆ ಬೆಣ್ಣೆ ಹಚ್ಚಿ ಸಣ್ಣ ಉರಿಯಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ.
    * ಮಟನ್ ಚೆನ್ನಾಗಿ ಬೆಂದ ಬಳಿಕ ಕಬಾಬ್‌ಗಳನ್ನು ಪ್ಲೇಟ್‌ಗೆ ಹಾಕಿ, ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ ಸವಿಯಿರಿ. ಇದನ್ನೂ ಓದಿ: ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ

    ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ

    ಚಿಕನ್‌ ಎಂದರೆ ನಾನ್‌ವೆಜ್‌ ಪ್ರಿಯರ ಲಿಸ್ಟ್‌ನಲ್ಲಿ ಬರುವ ಮೊದಲ ಹೆಸರು. ಇದನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಳಸಿ ಅಡುಗೆ ಮಾಡುವುದರಿಂದಲೇ ಹೊಸ ಹೊಸ ರುಚಿಗಳ ಅನುಭವವೂ ನಮಗಾಗುತ್ತದೆ. ನಾವಿಂದು ಒಂದು ಡಿಫರೆಂಟ್‌ ಸ್ಟೈಲ್‌ನಲ್ಲಿ ಚಿಕನ್‌ ಗ್ರೇವಿ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಗೋಡಂಬಿ ಸೇರಿಸಿ ರುಚಿಯಾದ ಚಿಕನ್‌ ಗ್ರೇವಿ (Cashew Chicken Gravy) ನೀವು ಕೂಡಾ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – ಅರ್ಧ ಕೆಜಿ
    * ಕೆಂಪು ಮೆಣಸಿನಕಾಯಿ – 8
    * ಈರುಳ್ಳಿ – 2
    * ಟೊಮೆಟೊ – 2
    * ಗೋಡಂಬಿ – 2 ಟೀಸ್ಪೂನ್,
    * ಅರಿಶಿನ – ಅರ್ಧ ಟೀಸ್ಪೂನ್
    * ಅಡುಗೆ ಎಣ್ಣೆ – ‌ ಅರ್ಧ ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    * ದನಿಯಾ ಪುಡಿ – 1 ಟೀಸ್ಪೂನ್
    * ಗರಂ‌ ಮಸಾಲ – 1 ಟೀಸ್ಪೂನ್‌
    * ಕಸೂರಿ ಮೇಥಿ – ಅರ್ಧ ಟೀಸ್ಪೂನ್‌
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಮಸಾಲೆ ಮಾಡಲು ನೆನೆಸಿದ ಒಣಮೆಣಸಿನಕಾಯಿ ಟೊಮೆಟೋ ಮತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ಒಂದು ಬಾಣಲೆಯನ್ನು ಬಿಸಿಗೆ ಇಟ್ಟು ಅಡುಗೆ ಎಣ್ಣೆ ಹಾಕಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಬೇಯಿಸಿಕೊಳ್ಳಬೇಕು.

    * ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ, ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ.

    * ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಸೇರಿಸಿ ಕುದಿಸಿಕೊಂಡರೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

    ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

    ಮೀನು ಸಾರು ಎಂದರೆ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಒಂದೊಂದು ಬಗೆಯ ಮೀನುಗಳ ಖಾದ್ಯವನ್ನು ಅದರದೇ ವಿಶಿಷ್ಟ ರೀತಿಯಲ್ಲಿ ಮಾಡಿದರೇನೇ ಹೆಚ್ಚು ರುಚಿ. ನಾವಿಂದು ಹೆಚ್ಚಾಗಿ ಎಲ್ಲಾ ಬಗೆಯ ಮೀನಿಗೂ ಸರಿಯೆನಿಸುವ ರುಚಿಕರವಾದ ಮೀನು ಸಾರು (Fish Curry) ರೆಸಿಪಿ ಹೇಳಿಕೊಡುತ್ತೇವೆ. ಸಿಂಪಲ್ ಆಗಿರುವ ಈ ವಿಧಾನವನ್ನು ನೀವು ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮೀನು – ಅರ್ಧ ಕೆಜಿ
    ಹುಣಸೆಹಣ್ಣು – ನಿಂಬೆ ಹಣ್ಣು ಗಾತ್ರದಷ್ಟು
    ಎಣ್ಣೆ – 2 ಟೀಸ್ಪೂನ್
    ಈರುಳ್ಳಿ – 2
    ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಶುಂಠಿ – ಒಂದು ಇಂಚು
    ಟೊಮೆಟೊ – 2
    ತೆಂಗಿನ ತುರಿ – 1 ಕಪ್
    ಹೆಚ್ಚಿದ ಹಸಿ ಮೆಣಸಿನಕಾಯಿ – 2
    ಕೆಂಪು ಮೆಣಸಿನ ಪುಡಿ – ಖಾರಕ್ಕೆ ತಕ್ಕಷ್ಟು
    ಕರಿಬೇವಿನ ಎಲೆ – ಕೆಲವು
    ನೀರು – 1 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ ಇದನ್ನೂ ಓದಿ: ಸವಿದಷ್ಟೂ ಬೇಕೆನಿಸುತ್ತೆ ಪೆಪ್ಪರ್ ಮಟನ್

    ಮಾಡುವ ವಿಧಾನ:
    * ಮೊದಲಿಗೆ ಮೀನನ್ನು ಶುಚಿಗೊಳಿಸಿ, ಬಳಿಕ ಅದಕ್ಕೆ ಹುಣಸೆ ಹಣ್ಣಿನ ರಸ ಹಾಗೂ ಉಪ್ಪು ಹಾಕಿ ಅರ್ಧ ಗಂಟೆ ಪಕ್ಕಕ್ಕಿಡಿ.
    * ತೆಂಗಿನ ತುರಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನೀರು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
    * ಈಗ ಮಣ್ಣಿನ ಮಡಕೆಯನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಕರಿಬೇವಿನ ಎಲೆ, ಶುಂಠಿ ಹಾಕಿ.
    * ನಂತರ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈಗ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಫ್ರೈ ಮಾಡಿ. ಬಳಿಕ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಫ್ರೈ ಮಾಡಿ.
    * ನಂತರ ರುಬ್ಬಿದ ತೆಂಗಿನ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಕುದಿಸಿ.
    * ಸಾರು ಕುದಿ ಬರುತ್ತಿದ್ದಂತೆಯೇ ಮೀನುಗಳನ್ನು ಹಾಕಿ ಬೇಯಿಸಿ.
    * ಮೀನು ಬೆಂದ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಉರಿಯನ್ನು ಆಫ್ ಮಾಡಿ.
    * ಇದೀಗ ಸಿಂಪಲ್ ವಿಧಾನದ ಮೀನು ಸಾರು ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಗರಿಗರಿಯಾದ ಚಿಕನ್ ಸಮೋಸ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]