Tag: non veg

  • ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್

    ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್

    ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಷವರ್ಮಾ ಹೆಚ್ಚಿನವರು ಸವಿದಿರುತ್ತಾರೆ. ಮಕ್ಕಳು ಮಾತ್ರವಲ್ಲದೇ ಯುವಕರಿಗೂ ಷವರ್ಮಾ ಅಚ್ಚುಮೆಚ್ಚು. ಆದರೆ ಈ ಬಾರಿ ಷವರ್ಮಾದ ರುಚಿಯನ್ನು ನೀವು ಮನೆಯಲ್ಲೇ ಟ್ರೈ ಮಾಡಿ ನೋಡಿ. ನಾವಿಂದು ಹೇಳಿಕೊಡುತ್ತಿರೋ ಚಿಕನ್ ಷವರ್ಮಾ ಸಲಾಡ್ ರೆಸಿಪಿ ಖಂಡಿತಾ ರೆಸ್ಟೊರೆಂಟ್‌ನ ಷವರ್ಮಾವನ್ನು ನೆನಪಿಸುತ್ತದೆ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಷನ್‌ಗೆ:
    ಮೂಳೆ, ಚರ್ಮರಹಿತ ಕೋಳಿ ತೊಡೆ – 1 ಕೆಜಿ
    ಎಣ್ಣೆ – ಅರ್ಧ ಕಪ್
    ಕೊಚ್ಚಿದ ಬೆಳ್ಳುಳ್ಳಿ – 3
    ನಿಂಬೆ ಹಣ್ಣು – 2
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಏಲಕ್ಕಿ ಪುಡಿ – 1 ಟೀಸ್ಪೂನ್
    ಉಪ್ಪು – 2 ಟೀಸ್ಪೂನ್
    ಕರಿಮೆಣಸಿನಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಸಲಾಡ್ ತಯಾರಿಸಲು:
    ಅರ್ಧಕ್ಕೆ ಕತ್ತರಿಸಿದ ಚೆರಿ ಟೊಮೆಟೊ – ಒಂದೂವರೆ ಕಪ್
    ಹೆಚ್ಚಿದ ಸೌತೆಕಾಯಿ – 1
    ಕತ್ತರಿಸಿದ ಈರುಳ್ಳಿ – 1
    ಹೆಚ್ಚಿದ ಎಲೆಕೋಸು – ಅರ್ಧ
    ಸಣ್ಣಗೆ ಹೆಚ್ಚಿ ಪುದೀನಾ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಮೆಯೋನೀಸ್/ಡ್ರೆಸ್ಸಿಂಗ್ – ಅರ್ಧ ಕಪ್ ಇದನ್ನೂ ಓದಿ: ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಚಿಕನ್ ಅನ್ನು ಹೊರತುಪಡಿಸಿ ಮ್ಯಾರಿನೇಷನ್‌ಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಒಂದು ಝಿಪ್ಪರ್ ಪ್ಲಾಸ್ಟಿಕ್ ಚೀಲದಲ್ಲಿ ಚಿಕನ್ ಅನ್ನು ಹಾಕಿ ಅದಕ್ಕೆ ಮ್ಯಾರಿನೇಷನ್ ಮಿಶ್ರಣವನ್ನು ಸುರಿದು ಚೆನ್ನಾಗಿ ಉಜ್ಜಿಕೊಳ್ಳಿ. (ನಿಮ್ಮ ಬಳಿ ಝಿಪ್ಪರ್ ಬ್ಯಾಗ್ ಇಲ್ಲವೆಂದರೆ ಅದೇ ಪಾತ್ರೆಯಲ್ಲಿ ಚಿಕನ್ ಹಾಕಿ ಮ್ಯಾರಿನೇಷನ್ ಮಾಡಬಹುದು)
    * ಬಳಿಕ ಚೀಲದಿಂದ ಸಂಪೂರ್ಣ ಗಾಳಿಯನ್ನು ಹೊರಹಾಕಿ ಝಿಪ್ಪರ್ ಅನ್ನು ಮುಚ್ಚಿ, 4 ಗಂಟೆಗಳ ಕಾಲ ಅದನ್ನು ಫ್ರಿಜ್‌ನಲ್ಲಿಡಿ. (ಇಡೀ ರಾತ್ರಿ ಬಿಡಬಹುದು)
    * ಈಗ ಓವನ್ ಅನ್ನು 425 ಡಿಗ್ರಿ ಪ್ಯಾರಾಹೀಟ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಬೇಕಿಂಗ್ ಶೀಟ್‌ಗೆ ಫಾಯಿಲ್ ಅನ್ನು ಜೋಡಿಸಿ, ಅದರ ಮೇಲೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಹಾಕಿಕೊಳ್ಳಿ.
    * ಈಗ ಚಿಕನ್ ಅನ್ನು ಸುಮಾರು 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
    * ಈಗ ಸಲಾಡ್ ಬೇಸ್ ಅಥವಾ ತಟ್ಟೆಯಲ್ಲಿ ಚೆರಿ ಟೊಮೆಟೊ, ಸೌತೆಕಾಯಿ, ಈರುಳ್ಳಿ, ಎಲೆಕೋಸು ಹಾಕಿ, ಅದರ ಮೇಲೆ ಚಿಕನ್ ತುಂಡುಗಳನ್ನು ಇರಿಸಿ.
    * ಮೆಯೋನೀಸ್ ಅಥವಾ ನಿಮ್ಮಿಷ್ಟದ ಡ್ರೆಸ್ಸಿಂಗ್ ಅನ್ನು ಅದರ ಮೇಲೆ ಸುರಿಯಿರಿ.
    * ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಷವರ್ಮಾ ಸಲಾಡ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ನಾನು ಸಸ್ಯಹಾರಿ, ನಾನ್ ವೆಜ್ ತಿನ್ನಲ್ಲ : ಡಿ.ಕೆ ಶಿವಕುಮಾರ್

    ನಾನು ಸಸ್ಯಹಾರಿ, ನಾನ್ ವೆಜ್ ತಿನ್ನಲ್ಲ : ಡಿ.ಕೆ ಶಿವಕುಮಾರ್

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಆಹಾರ ಕ್ರಮ ಮತ್ತು ತಮಗಿಷ್ಟವಾದ ಊಟದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಡಿಕೆಶಿ ಇದೀಗ ಅಪ್ಪಟ ಸಸ್ಯಹಾರಿಯಂತೆ. ಜೈಲಿನಿಂದ ಬಂದ ನಂತರ ನಾನ್ ವೆಜ್ (Non Veg) ತ್ಯೆಜಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಮಶ್ರೂಮ್ ಮತ್ತು ಕಡೆಲೆಕಾಯಿ ಅಂದರೆ ಡಿಕೆಶಿಗೆ ಪ್ರಾಣ ಎಂದು ಡಿಕೆಶಿ ಪತ್ನಿ ಉಷಾ (Usha) ತಿಳಿಸಿದ್ದಾರೆ.

    ಶಿಕ್ಷಣ ಮತ್ತು ರಾಜಕಾರಣದ ಬಗ್ಗೆಯೂ ಅವರು ಮಾತನಾಡಿದ್ದು, ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಈ ಶನಿವಾರ- ಭಾನುವಾರ ಪ್ರಸಾರವಾದರೆ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh) ಮುಕ್ತಾಯವಾಗಲಿದೆ. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ವೀಕೆಂಡ್ ಟೆಂಟ್ ನಲ್ಲಿ ಕೂತು ತಮ್ಮ ಬದುಕನ್ನು ರಿವೈಂಡ್ ಮಾಡಿ ನೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ  ಈ ಸೀಸನ್ ಮುಗಿಯಲಿದೆ. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ (Grand Finale)ಎಂದು ಹಾಕಲಾಗಿದೆ.  ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ (D.K. Shivakumar) ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ನಟ ರಮೇಶ್ ಅರವಿಂದ್ (Ramesh Aravind) ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ.

     

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.

  • ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ನೀವು ಖಾರವಾದ ಭಾರತೀಯ ನಾನ್‌ವೆಜ್ ಅಡುಗೆ ಸವೀಬೇಕು ಎಂದೆನಿಸಿದ್ರೆ ಚಿಕನ್ ಮದ್ರಾಸ್ ರೆಸಿಪಿಯನ್ನು ಖಂಡಿತಾ ಇಷ್ಟಪಡುತ್ತೀರಿ. ಜಗತ್ತಿನಲ್ಲಿ ಚಿಕನ್ ರೆಸಿಪಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡಲಾಗುತ್ತದೆ. ಕೆಲವೊಂದುಕಡೆ ಹೆಚ್ಚು ಖಾರ ಬಳಸುವುದಿಲ್ಲ ಹಾಗೂ ಕೆಲವೊಂದು ಕಡೆ ಹೆಚ್ಚು ಖಾರ ಬಳಸಲಾಗುತ್ತದೆ. ಭಾರತದಲ್ಲೂ ಅಷ್ಟೇ ಒಂದೊಂದು ಭಾಗದಲ್ಲಿ ಮಾಡೋ ಖಾದ್ಯ ಒಂದೊಂದು ರೀತಿಯ ರುಚಿ ನೀಡುತ್ತದೆ. ಚಿಕನ್ ಮದ್ರಾಸ್ ಭಾರತದಲ್ಲಿ ಫೇಮಸ್ ಆಗಿರೋ ನಾನ್‌ವೆಜ್ ರೆಸಿಪಿಗಳಲ್ಲೊಂದು. ಚಿಕನ್ ಮದ್ರಾಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ – 700 ಗ್ರಾಂ (ಬ್ರೆಸ್ಟ್, ತೊಡೆ ಭಾಗಗಳು ಸೂಕ್ತ)
    ಹಸಿರು ಮೆಣಸಿನಕಾಯಿ – 3
    ಎಣ್ಣೆ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 4
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಜಾಯಿಕಾಯಿ ಪುಡಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 200 ಗ್ರಾಂ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಚಿಕನ್‌ನಲ್ಲಿರುವ ಚರ್ಮದ ಭಾಗಗಳನ್ನು ತೆಗೆದುಹಾಕಿ, ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
    * ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಅರ್ಧ ನಿಮಿಷ ಫ್ರೈ ಮಾಡಿ.
    * ಬಳಿಕ ಕೆಂಪು ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ, ಅರಿಶಿನ ಮತ್ತು ಉಪ್ಪು ಸೇರಿಸಿ, ಬೆರೆಸಿ.
    * ಚಿಕನ್ ಹಾಗೂ 50 ಮಿ.ಲೀ ನೀರನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಜಾಯಿಕಾಯಿ ಮತ್ತು ಟೊಮೆಟೊ ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ.
    * ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
    * ಇದೀಗ ಚಿಕನ್ ಮದ್ರಾಸ್ ತಯಾರಾಗಿದ್ದು, ಬಾಸ್ಮತಿ ರೈಸ್ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ನೆಯಲ್ಲಿ ಏನೇ ಅಡುಗೆ ಮಾಡಿದರೂ ಮಕ್ಕಳ ಮನವೊಲಿಸಿ ಅದನ್ನು ಅವರಿಗೆ ತಿನ್ನಿಸೋದು ಕಷ್ಟವೇ ಸರಿ. ಆದರೆ ನಾನ್‌ವೆಜ್ ವಿಷಯ ಬಂದಾಗ ಮಕ್ಕಳು ಅದನ್ನು ಬೇಡ ಎನ್ನೋದೇ ವಿರಳ. ಅದರಲ್ಲೂ ಇತ್ತೀಚಿನ ಮಕ್ಕಳು ವೆಸ್ಟರ್ನ್ ಸ್ಟೈಲ್‌ನ ರೆಸಿಪಿಗಳನ್ನು ಇನ್ನಷ್ಟು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಮಕ್ಕಳಿಗಾಗಿ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಕ್ರೀಮಿ ಗಾರ್ಲಿಕ್ ಚಿಕನ್. ಮಕ್ಕಳೇ ಏಕೆ, ವೆಸ್ಟರ್ನ್ ಟಚ್ ಇರೋ ದೇಸೀ ಚಿಕನ್ ರೆಸಿಪಿ ಇದಾಗಿರೋದ್ರಿಂದ ದೊಡ್ಡವರಿಗೂ ಇದು ಖಂಡಿತಾ ಇಷ್ಟವಾಗುತ್ತದೆ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಟ್ ಮಾಡಲು:
    ಚಿಕನ್ – 1 ಕೆಜಿ (ಬ್ರೆಸ್ಟ್, ತೊಡೆ ಭಾಗಗಳು ಉತ್ತಮ)
    ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
    ಕರಿ ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – 1 ಟೀಸ್ಪೂನ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಗ್ರೇವಿ ತಯಾರಿಸಲು:
    ಬೆಣ್ಣೆ – 1 ಟೀಸ್ಪೂನ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1 ಕಪ್
    ತುರಿದ ಬೆಳ್ಳುಳ್ಳಿ – 6
    ದಪ್ಪಗೆ ಕತ್ತರಿಸಿದ ಮಶ್ರೂಮ್ – 2 ಕಪ್
    ಚಿಕನ್ ಸ್ಟಾಕ್ – ಒಂದೂವರೆ ಕಪ್
    ಹೆವಿ ಕ್ರೀಮ್ – 500 ಮಿ.ಲೀ
    ತುರಿದ ಚೀಸ್ – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಒರಿಗಾನೋ – 1 ಟೀಸ್ಪೂನ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬೆಳ್ಳುಳ್ಳಿ ಪುಡಿ, ಕರಿ ಮೆಣಸಿನ ಪುಡಿ, ಉಪ್ಪು ಹಾಗೂ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಲೇಪಿಸಿಕೊಳ್ಳಿ.
    * ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ.
    * ಚಿಕನ್ ತುಂಡುಗಳ ಪ್ರತಿ ಭಾಗ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
    * ಈಗ ಅದೇ ಪ್ಯಾನ್ ಅನ್ನು ಸ್ವಚ್ಛಗೊಳಿಸಿ, ಅದರಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿದುಕೊಳ್ಳಿ.
    * ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
    * ನಂತರ ಮಶ್ರೂಮ್ ಸೇರಿಸಿ, 2-3 ನಿಮಿಷ ಬೇಯಿಸಿಕೊಳ್ಳಿ.
    * ಚಿಕನ್ ಸ್ಟಾಕ್, ಕ್ರೀಮ್, ಚೀಸ್, ಓರಿಗಾನೋ, ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿಕೊಳ್ಳಿ. ಅದನ್ನು 5 ನಿಮಿಷ ಕುದಿಸಿಕೊಳ್ಳಿ.
    * ಈಗ ಉರಿಯನ್ನು ಮಧ್ಯಮಕ್ಕೆ ತಂದು ಹುರಿದ ಚಿಕನ್ ಅನ್ನು ಸೇರಿಸಿ 10 ನಿಮಿಷ ಕುದಿಸಿಕೊಳ್ಳಿ.
    * ಇದೀಗ ಕ್ರೀಮಿ ಗಾರ್ಲಿಕ್ ಚಿಕನ್ ತಯಾರಾಗಿದ್ದು, ಅನ್ನ ಅಥವಾ ಪಾಸ್ತಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಮೊಟ್ಟೆ ಬಳಸಿ ಎಷ್ಟು ಬಗೆಯ ಅಡುಗೆ ಮಾಡಬಹುದು ಎಂದರೆ ಲೆಕ್ಕ ಹಿಡಿಯುವುದೇ ಕಷ್ಟ. ಮನೆಯಲ್ಲಿ ಒಂದಷ್ಟು ಮೊಟ್ಟೆ ಇದ್ದಾಗ ಫಟಾಫಟ್ ಅಂತ ಯಾವ ರೀತಿಯ ಅಡುಗೆಯನ್ನೂ ಮಾಡಬಹುದು. ಪಲ್ಯವಾಗಲಿ, ಸಾರು ಆಗಲಿ ಅಥವಾ ಹುರಿದ ಅಡುಗೆಗಳನ್ನೂ ಕೆಲವೇ ನಿಮಿಷಗಳಲ್ಲಿ ಮಾಡಬಹುದು. ನಾವಿಂದು ಕೇವಲ 15 ನಿಮಿಷಗಳಲ್ಲಿ ಮೊಟ್ಟೆಯ ಸೂಪ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಚೈನೀಸ್ ಅಡುಗೆಗಳ ಪಟ್ಟಿಗೆ ಸೇರೋ ಈ ರೆಸಿಪಿಯನ್ನು ಎಗ್ ಡ್ರಾಪ್ ಸೂಪ್ ಎಂತಲೂ ಕರೆಯಬಹುದು.

    ಬೇಕಾಗುವ ಪದಾರ್ಥಗಳು:
    ಚಿಕನ್ ಸ್ಟಾಕ್/ ವೆಜ್‌ಟೇಬಲ್ ಸ್ಟಾಕ್ – 4 ಕಪ್
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಹೆಪ್ಪುಗಟ್ಟಿದ ಕಾರ್ನ್ – 1 ಕಪ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ
    ಅರಿಶಿನ – ಕಾಲು ಟೀಸ್ಪೂನ್
    ನೀರು – ಕಾಲು ಕಪ್
    ಮೊಟ್ಟೆ – 6 ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಚಿಕನ್ ಸ್ಟಾಕ್, ಶುಂಠಿ, ಸ್ಪ್ರಿಂಗ್ ಆನಿಯನ್, ಕಾರ್ನ್ ಹಾಕಿ ಕುದಿಯಲು ಬಿಡಿ.
    * ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಪುಡಿ, ಉಪ್ಪು, ಕರಿ ಮೆಣಸಿನಪುಡಿ, ಅರಿಶಿನ ಹಾಕಿ, ಕಾಲು ಕಪ್ ನೀರನ್ನು ಸುರಿದು ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
    * ಕಾರ್ನ್ ಫ್ಲೋರ್ ಮಿಶ್ರಣವನ್ನು ಸೂಪ್‌ಗೆ ಸುರಿದು ಮಿಶ್ರಣ ಮಾಡಿ ಹಾಗೂ ಉರಿಯನ್ನು ಕಡಿಮೆ ಮಾಡಿ.
    * ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಕಲಡಿಕೊಳ್ಳಿ.
    * ಈಗ ಕುದಿಯುತ್ತಿರುವ ಸೂಪ್‌ಗೆ ಮಿಶ್ರಣ ಮಾಡಿಟ್ಟ ಮೊಟ್ಟೆಯನ್ನು ನಿಧಾನವಾಗಿ ಸುರಿಯಿರಿ. ಈ ವೇಳೆ ಚಮಚದ ಸಹಾಯದಿಂದ ನಿಧಾನವಾಗಿ ಮಿಶ್ರಣ ಮಾಡಿ.
    * ಈಗ ಉರಿಯನ್ನು ಆಫ್ ಮಾಡಿ, ಇನ್ನಷ್ಟು ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ.
    * ಇದೀಗ ರುಚಿಕರ ಎಗ್ ಡ್ರಾಪ್ ಸೂಪ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

  • ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

    ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

    ಕ್ಷಿಣ ಭಾರತ ಎಂದರೇನೇ ಇಲ್ಲಿ ಸುತ್ತ ಸಮುದ್ರ. ಮೀನು ಖಾದ್ಯ ಪ್ರಿಯರ ಈ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಮೀನುಗಳನ್ನು ವಿಧವಿಧವಾದ ರೀತಿಯಲ್ಲಿ ಅಡುಗೆ ಮಾಡಿ ಬಡಿಸಲಾಗುತ್ತದೆ. ಒಂದೊಂದು ಬಗೆಯ ಮೀನಿನ ರುಚಿಯೂ ಒಂದೊಂದು ರೀತಿ. ನಾವಿಂದು ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿಯನ್ನು ಹೇಳಿಕೊಡುತ್ತೇವೆ. ಪ್ರತಿ ಸಲ ಸಾಮಾನ್ಯ ಮೀನಿನ ಖಾದ್ಯಗಳನ್ನು ಮಾಡುವವರು ಈ ಬಾರಿ ಏಡಿ ಕರಿಯನ್ನೂ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಎಣ್ಣೆ – 2 ಟೀಸ್ಪೂನ್
    ಸೋಂಪು – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಜೀರಿಗೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 2
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 3
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಅರಿಶಿನ – 1 ಟೀಸ್ಪೂನ್
    ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
    ಏಡಿ – 1 ಕೆಜಿ
    ತೆಂಗಿನ ಹಾಲು – 1 ಕಪ್
    ನಿಂಬೆ ಹಣ್ಣು – 1
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ಮಾಡಿ ಕ್ರಿಸ್ಪಿ ಚಿಕನ್ ವಿಂಗ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬಾಣಲೆ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ ಸೋಂಪು, ಸಾಸಿವೆ, ಜೀರಿಗೆ ಹಾಗೂ ಕರಿಬೇವಿನ ಎಲೆ ಸೇರಿಸಿ ಹುರಿಯಿರಿ.
    * ಈಗ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿ ಸೇರಿಸಿ 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
    * ಬಳಿಕ ಟೊಮೆಟೊ ಸೇರಿಸಿ ಅದು ಮೃದುವಾಗುವವರೆಗೆ ಹುರಿಯಿರಿ.
    * ಈಗ ಅರಿಶಿನ, ತೆಂಗಿನ ಹಾಲು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಕುದಿಸಿಕೊಳ್ಳಿ.
    * ಈಗ ಏಡಿಗಳನ್ನು ಸೇರಿಸಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಸುಮಾರು 10 ನಿಮಿಷಗಳ ವರೆಗೆ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಆಫ್ ಮಾಡಿ.
    * ಈಗ ಏಡಿ ಸಾರಿಗೆ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ

  • ಏರ್ ಫ್ರೈಯರ್‌ನಲ್ಲಿ ಮಾಡಿ ಕ್ರಿಸ್ಪಿ ಚಿಕನ್ ವಿಂಗ್ಸ್

    ಏರ್ ಫ್ರೈಯರ್‌ನಲ್ಲಿ ಮಾಡಿ ಕ್ರಿಸ್ಪಿ ಚಿಕನ್ ವಿಂಗ್ಸ್

    ಚಿಕನ್ ವಿಂಗ್ಸ್ ಎಂದರೆ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಕೆಎಫ್‌ಸಿ ಅಥವಾ ಇನ್ನಿತರ ರೆಸ್ಟೊರೆಂಟ್‌ಗಳು ಈ ಖಾದ್ಯಕ್ಕೆ ಫೇಮಸ್ ಅನ್ನೋದು ಎಲ್ಲರಿಗೂ ಗೊತ್ತು. ಈ ರೆಸಿಪಿಗಳನ್ನು ಮಾಡೋದು ಕಷ್ಟ ಎನಿಸಬಹುದು. ಆದರೆ ನಿಮ್ಮ ಬಳಿ ಏರ್ ಫ್ರೈಯರ್ ಇದ್ದರೆ ಈ ರೆಸಿಪಿಯನ್ನು ತುಂಬಾ ಸುಲಭವಾಗಿ ಮಾಡಬಹುದು. ಕ್ರಿಸ್ಪಿ, ಜ್ಯೂಸಿ ಹಾಗೂ ಟೇಸ್ಟಿಯಾದ ಈ ರೆಸಿಪಿಯನ್ನೊಮ್ಮೆ ನೀವು ಟ್ರೈ ಮಾಡಿದರೆ ಮತ್ತೆ ಮತ್ತೆ ಇದನ್ನು ಮಾಡುತ್ತಲೇ ಇರುತ್ತೀರಿ. ಹಾಗಿದ್ದರೆ ಏರ್ ಫ್ರೈಯರ್‌ನಲ್ಲಿ ಕ್ರಿಸ್ಪಿ ಚಿಕನ್ ವಿಂಗ್ಸ್ (Crispy Chicken Wings) ಮಾಡೋದು ಹೇಗೆಂದು ನೋಡಿಕೊಂಡು ಬರೋಣ.

    ಬೇಕಾಗುವ ಪದಾರ್ಥಗಳು:
    ತಾಜಾ ಚಿಕನ್ ವಿಂಗ್ಸ್ – ಅರ್ಧ ಕೆಜಿ
    ಕೆಂಪು ಮೆಣಸಿನಪುಡಿ – 2 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ನಿಂಬೆ ಹಣ್ಣು – ಅರ್ಧ ಇದನ್ನೂ ಓದಿ: ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ತಾಜಾ ಚಿಕನ್ ವಿಂಗ್ಸ್‌ಗಳನ್ನು ತೊಳೆದು ಅದರಲ್ಲಿರುವ ನೀರಿನಂಶವನ್ನು ತೆಗೆದು ಹಾಕಲು ಶುಭ್ರ ಬಟ್ಟೆಯಿಂದ ಒರೆಸಿಕೊಳ್ಳಿ.
    * ಒಂದು ಬೌಲ್‌ನಲ್ಲಿ ಕೆಂಪು ಮೆಣಸಿನಪುಡಿ, ಉಪ್ಪು, ಕರಿ ಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ.
    * ಈ ಮಸಾಲೆ ಮಿಶ್ರಣಕ್ಕೆ ಚಿಕನ್ ವಿಂಗ್ಸ್‌ಗಳನ್ನು ಸೇರಿಸಿ, ನಿಮ್ಮ ಬೆರಳುಗಳಿಂದ ಚಿಕನ್ ತುಂಡುಗಳಿಗೆ ಮಸಾಲೆ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಅಡುಗೆ ಸ್ಪ್ರೇ ಅಥವಾ ಸ್ವಲ್ಪ ಎಣ್ಣೆಯನ್ನು ಸವರಿ, 5 ನಿಮಿಷಗಳ ವರೆಗೆ ಪೂರ್ವಭಾವಿಯಾಗಿ 200 ಡಿಗ್ರಿಗೆ ಬಿಸಿ ಮಾಡಿಕೊಳ್ಳಿ.
    * ಏರ್ ಫ್ರೈಯರ್ ಕಾದ ಬಳಿಕ ಚಿಕನ್ ವಿಂಗ್ಸ್‌ಗಳನ್ನು ಅದರಲ್ಲಿ ಜೋಡಿಸಿ, 15 ನಿಮಿಷ ಬೇಯಿಸಿಕೊಳ್ಳಿ. (ಒಂದರ ಮೇಲೊಂದು ಚಿಕನ್ ತುಂಡುಗಳು ಇರದಂತೆ ನೋಡಿಕೊಳ್ಳಿ)
    * ಐದೈದು ನಿಮಿಷಗಳಿಗೊಮ್ಮೆ ಚಿಕನ್ ವಿಂಗ್ಸ್‌ಗಳನ್ನು ತಿರುವಿ ಹಾಕಿ ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಫ್ರೈ ಮಾಡಿಕೊಳ್ಳಿ.
    * ಇದೀಗ ಚಿಕನ್ ವಿಂಗ್ಸ್‌ಗಳನ್ನು ಸರ್ವಿಂಗ್ ಬೌಲ್ ಅಥವಾ ತಟ್ಟೆಗೆ ಹಾಕಿ, ಅದಕ್ಕೆ ನಿಂಬೆ ರಸವನ್ನು ಸಿಂಪಡಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಇದೀಗ ಕ್ರಿಸ್ಪಿ ಚಿಕನ್ ವಿಂಗ್ಸ್ ತಯಾರಾಗಿದ್ದು, ಚಿಲ್ಲಿ ಸಾಸ್ ಅಥವಾ ನಿಮ್ಮಿಷ್ಟದ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋವಾ ಸ್ಟೈಲ್‌ನ ಮಾವಿನಕಾಯಿ, ಒಣ ಸಿಗಡಿ ಕರಿ – ಸಖತ್ ರುಚಿ ಈ ರೆಸಿಪಿ

  • ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ

    ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಈ ರೀತಿ ಮಾಡಿ

    ಚೈನೀಸ್ ಸ್ಟೈಲ್‌ನ ಸ್ಟ್ರೀಟ್ ಫುಡ್ ಎಂದರೆ ಈಗಿನ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಆ ಖಾದ್ಯಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ಪ್ರಶ್ನೆ ಪ್ರತಿಯೊಬ್ಬ ಪೋಷಕರಿಗೂ ಮೂಡುತ್ತದೆ. ಆದರೆ ಅಂತಹುದೇ ಅಡುಗೆಗಳನ್ನು ಮನೆಯಲ್ಲಿ ಮಾಡಿದರೆ ಅದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಸಾಧ್ಯವಾಗುತ್ತದೆ. ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಸ್ಟ್ರೀಟ್ ಫುಡ್ ಸ್ಟೈಲ್‌ನ ಚಿಕನ್ ಮೀಟ್‌ಬಾಲ್. ಇದನ್ನು ತುಂಬಾ ರುಚಿಕರವಾಗಿ ಹೇಗೆ ಮಾಡೋದು ಎಂಬುದನ್ನು ನೀವೂ ಇಲ್ಲಿ ನೋಡಿ ಕಲಿಯಿರಿ.

    ಬೇಕಾಗುವ ಪದಾರ್ಥಗಳು:
    ಕೊಚ್ಚಿದ ಚಿಕನ್ – 750 ಗ್ರಾಂ (ಮೂಳೆ, ಚರ್ಮ ರಹಿತ)
    ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಮೊಟ್ಟೆ – 1
    ಓಟ್ಸ್ – ಅರ್ಧ ಕಪ್
    ಓಟ್ಸ್ ಹಿಟ್ಟು – ಕಾಲು ಕಪ್
    ರೆಡ್ ಚಿಲ್ಲಿ ಸಾಸ್ – 1 ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಸೋಯಾ ಸಾಸ್ – ಅರ್ಧ ಕಪ್
    ವಿನೆಗರ್ – ಕಾಲು ಕಪ್
    ಆರೆಂಜ್ ಜ್ಯೂಸ್ – ಕಾಲು ಕಪ್
    ಜೇನುತುಪ್ಪ – ಒಂದೂವರೆ ಟೀಸ್ಪೂನ್
    ಶುಂಠಿ ಪೇಸ್ಟ್ – ಕಾಲು ಟೀಸ್ಪೂನ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಹುರಿದ ಎಳ್ಳು – 2 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್ ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ರೋಸ್ಟೆಡ್ ಟೊಮೆಟೊ ಸೂಪ್ ಮಾಡುವ ವಿಧಾನ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 200 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ ಹಾಗೂ ಬೇಕಿಂಗ್ ಶೀಟ್ ಅನ್ನು ಜೋಡಿಸಿಟ್ಟಿರಿ.
    * ಈಗ ದೊಡ್ಡ ಬಟ್ಟಲಿನಲ್ಲಿ ಕೊಚ್ಚಿದ ಕೋಳಿ ಮಾಂಸ, ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಓಟ್ಸ್, ಓಟ್ಸ್ ಹಿಟ್ಟು, ರೆಡ್ ಚಿಲ್ಲಿ ಸಾಸ್ ಹಾಗೂ ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಂಡು, ಮಾಂಸದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಡು ನಿಂಬೆ ಗಾತ್ರದ ಚೆಂಡುಗಳನ್ನಾಗಿ ಮಾಡಿಕೊಳ್ಳಿ.
    * ಮಾಂಸದ ಚೆಂಡುಗಳನ್ನು ಬೇಕಿಂಗ್ ಶೀಟ್‌ನಲ್ಲಿರಿಸಿ, 30 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ಈ ನಡುವೆ ನೀವು ಸಾಸ್ ಅನ್ನು ತಯಾರಿಸಬೇಕು. ಇದಕ್ಕಾಗಿ ಒಂದು ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಸೋಯಾ ಸಾಸ್, ವಿನೆಗರ್, ಆರೆಂಜ್ ಜೂಸ್, ಜೇನುತುಪ್ಪ ಹಾಗೂ ಶುಂಠಿ ಪೇಸ್ಟ್ ಅನ್ನು ಹಾಕಿ ಎಲ್ಲವನ್ನು ಮಿಶ್ರಣ ಮಾಡಿ.
    * ಈ ಮಿಶ್ರಣವನ್ನು ಕುದಿಯಲು ಬಿಟ್ಟು ನಂತರ 1 ನಿಮಿಷ ಬೇಯಿಸಿಕೊಳ್ಳಿ. ಮಿಶ್ರಣಕ್ಕೆ ಆಗಾಗ ಕೈಯಾಡಿಸುತ್ತಿರಿ.
    * ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಸೇರಿಸಿ ತೆಳ್ಳಗಿನ ಸ್ಲರಿ ತಯಾರಿಸಿ. ಇದನ್ನು ಸಾಸ್ ಮಿಶ್ರಣಕ್ಕೆ ಹಾಕಿ. ಈಗ ಸಾಸ್ ದಪ್ಪವಾಗುತ್ತದೆ.
    * ಬಳಿಕ ಮೀಟ್‌ಬಾಲ್‌ಗಳನ್ನು ಓವನ್‌ನಿಂದ ತೆಗೆದು ಅದನ್ನು ತಯಾರಿಸಿಟ್ಟ ಸಾಸ್‌ಗೆ ಸೇರಿಸಿ ಮಿಶ್ರಣ ಮಾಡಿ.
    * 1-2 ನಿಮಿಷ ಫ್ರೈ ಮಾಡಿ, ಉರಿಯನ್ನು ಆಫ್ ಮಾಡಿ.
    * ಕೊನೆಯಲ್ಲಿ ಹುರಿದ ಎಳ್ಳು ಹಾಗೂ ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿದರೆ ರುಚಿರುಚಿಯಾದ ಚಿಕನ್ ಮೀಟ್‌ಬಾಲ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

  • ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಯುಗಾದಿ ಹಬ್ಬದ ಮಾರನೇ ದಿನ ಆಚರಣೆ ಮಾಡೋದು ಹೊಸ ತೊಡಕು. ಯುಗಾದಿಯಂದು ಸಿಹಿ ಅಡುಗೆಗಳನ್ನು ಮಾಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತೇವೆ. ಅದರ ಮರುದಿನ ಏನಿದ್ದರೂ ಎಲ್ಲೆಡೆ ಬಾಡೂಟದ್ದೇ ಕಾರುಬಾರು. ಚಿಕನ್, ಮಟನ್ ಅಂತ ವಿವಿಧ ಭಕ್ಷ್ಯಗಳನ್ನು ಮಾಡಿ, ಹೊಸ ತೊಡಕನ್ನು ಸಂಭ್ರಮಿಸುತ್ತೇವೆ. ನಾವಿಂದು ಹೊಸ ತೊಡಕಿಗೆ ಸ್ಪೆಷಲ್ ರುಚಿಯಾದ ಮಟನ್ ಕರಿ (Mutton Curry) ರೆಸಿಪಿ ಹೇಳಿಕೊಡುತ್ತೇವೆ. ಈ ದಿನ ಬಾಡೂಟ ಸವಿದು ಹೊಸತೊಡಕನ್ನು ನೀವೂ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆ.ಜಿ
    ಬೆಳ್ಳುಳ್ಳಿ – 1
    ಅರಿಶಿನ – ಚಿಟಿಕೆ
    ಲವಂಗ – 7
    ಏಲಕ್ಕಿ – 3
    ಕೆಂಪು ಮೆಣಸಿನಕಾಯಿ – 8
    ಈರುಳ್ಳಿ – 4
    ತುರಿದ ಕೊಬ್ಬರಿ – 2 ಕಪ್
    ಗಸಗಸೆ – 2 ಟೀಸ್ಪೂನ್
    ಕಾಳು ಮೆಣಸು – 8
    ಖಾರದ ಪುಡಿ – 2 ಟೀಸ್ಪೂನ್
    ಶುಂಠಿ – 1 ಇಂಚು
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 5 ಟೀಸ್ಪೂನ್ ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸರ್ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ತೊಳೆದು ಸಣ್ಣಗೆ ಕತ್ತರಿಸಿದ ಮಟನ್‌ಗೆ ರುಬ್ಬಿದ ಪದಾರ್ಥಗಳನ್ನು ಸವರಿ ಒಂದೂವರೆ ಗಂಟೆ ಇಡಿ.
    * ತುರಿದ ಕೊಬ್ಬರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕತ್ತರಿಸಿದ 1 ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಉಳಿದಿರುವ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿ, ಚಿಟಿಕೆ ಅರಿಶಿನ ಸೇರಿಸಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು.
    * ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರಿ ಸವಿಯಲು ಸಿದ್ಧ. ಇದನ್ನೂ ಓದಿ: ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

  • ಪ್ರೆಷರ್ ಕುಕ್ಕರ್‌ನಲ್ಲಿ ಮಾಡಿ ಸಿಂಪಲ್ ಪಂಜಾಬಿ ಚಿಕನ್ ಕರಿ

    ಪ್ರೆಷರ್ ಕುಕ್ಕರ್‌ನಲ್ಲಿ ಮಾಡಿ ಸಿಂಪಲ್ ಪಂಜಾಬಿ ಚಿಕನ್ ಕರಿ

    ಪ್ರೆಷರ್ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಬಹುದಾದ ಚಿಕನ್ ಕರಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಪಂಜಾಬಿ ಚಿಕನ್ ಕರಿಯನ್ನು ಪಂಜಾಬ್‌ನ ಮನೆಗಳಲ್ಲಿ ಯಾವಾಗಲೂ ತಯಾರಿಸಲಾಗುತ್ತದೆ. ಈ ರೆಸಿಪಿಯಲ್ಲಿ ಹೆಚ್ಚಿನ ಆಡಂಬರತೆ ಏನೂ ಇಲ್ಲ. ಆದರೆ ಇದರ ರುಚಿ ಅದ್ಭುತ ಎನ್ನದೇ ಇರಲು ಸಾಧ್ಯವಿಲ್ಲ. ತಂದೂರಿ ರೊಟ್ಟಿ, ಕುಲ್ಚಾ, ಜೀರಾ ರೈಸ್ ಅಥವಾ ಯಾವುದೇ ಪಂಜಾಬಿ ಅಡುಗೆಗಳೊಂದಿಗೆ ಇದು ಸೂಪರ್ ಎನಿಸುತ್ತದೆ. ಈ ಸಿಂಪಲ್ ಚಿಕನ್ ಕರಿ ರೆಸಿಪಿ ನೀವೂ ಮಾಡಿ ಆಸ್ವಾದಿಸಿ.

    ಬೇಕಾಗುವ ಪದಾರ್ಥಗಳು:
    ಕತ್ತರಿಸಿದ ಚಿಕನ್ – ಅರ್ಧ ಕೆಜಿ
    ಹೆಚ್ಚಿದ ಈರುಳ್ಳಿ – 2
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 5
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 2
    ಮೊಸರು – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ದಾಲ್ಚಿನಿ ಎಲೆ – 1

     

    ಲವಂಗ – 2
    ದಾಲ್ಚಿನಿ – 2
    ಏಲಕ್ಕಿ – 1
    ಕಾಶ್ಮೀರಿ ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಕಸೂರಿ ಮೇಥಿ ಪುಡಿ – ಅರ್ಧ ಟೀಸ್ಪೂನ್
    ನಿಂಬೆ ರಸ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತುಪ್ಪ – 2 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಚಿಕನ್ ಚೌ ಮಿನ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಅನ್ನು ಉಪ್ಪು, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸದೊಂದಿಗೆ ಮ್ಯಾರಿನೇಟ್ ಮಾಡಿ, ಅದನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
    * ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನಿ ಎಲೆ, ಏಲಕ್ಕಿ, ಲವಂಗ ಮತ್ತು ದಾಲ್ಚಿನಿ ಸೇರಿಸಿ, ಹುರಿಯಿರಿ.
    * ನಂತರ ಜೀರಿಗೆ ಸೇರಿಸಿ, ಪರಿಮಳವನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ ಈರುಳ್ಳಿ ಸೇರಿಸಿ. ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಈಗ ಶುಂಠಿ ಪೇಸ್ಟ್ ಹಾಗೂ ತುರಿದ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
    * ಬಳಿಕ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಎಣ್ಣೆ ಬಿಡುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
    * ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ. ಎಲ್ಲವನನ್ನೂ 1 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಚಿಕನ್ ನೀರು ಬಿಡಲು ಪ್ರಾರಂಭಿಸಿದಾಗ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ.
    * ಈಗ ಸ್ಥಿರತೆ ನೋಡಿಕೊಂಡು 1-2 ಕಪ್ ಬೆಚ್ಚಗಿನ ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪ್ರೆಷರ್ ಕುಕ್ಕರ್‌ನ ಮುಚ್ಚಳ ಹಾಕಿ 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು, ಅದಕ್ಕೆ ಕಸೂರಿ ಮೇಥಿ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ಪಂಜಾಬಿ ಚಿಕನ್ ಕರಿ ತಯಾರಾಗಿದ್ದು, ತಂದೂರಿ ರೋಟಿ ಅಥವಾ ಜೀರಾ ರೈಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್