Tag: non veg

  • ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಗದಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ತಿಂದು ದೇವರ ಗುಡಿಗೆ ಹೋಗುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ:  ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

    ಈ ಹಿಂದೆ ಕೂಡ ಮಾಜಿ ಸಿಎಂ ಮಂಗಳೂರನಲ್ಲಿ ನಾನ್ ವೆಜ್ ಊಟಮಾಡಿ ದೇವಸ್ಥಾನಕ್ಕೆ ಹೋಗಿ ಸಾಕಷ್ಟು ಪೇಚಿಗೆ ಸಿಲುಕಿದ್ದರು. ಈಗ ಅದೇ ರೀತಿ ಚಿಕನ್, ಫಿಶ್, ಎಗ್ ಊಟಮಾಡಿ ದೇವಸ್ಥಾನಕ್ಕೆ ಹೋಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ. ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರು, ಸೋಮವಾರ ಸಂಜೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮುಂಡವಾಡ ಮನೆಗೆ ಊಟಕ್ಕೆ ಹೋಗಿದ್ದರು. ಅಲ್ಲಿ ಚಿಕನ್, ಫಿಶ್, ಎಗ್ ಭರ್ಜರಿಯಾಗಿ ಬಾಡೂಟ ಸವಿದು ನಂತರ ಶ್ರೀಬೀರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನ ಲೋಕಾರ್ಪಣೆ ಮಾಡಿ, ಬೀರೇಶ್ವರ ಹಾಗೂ ರೇವಣಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಪಕ್ಕದ ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ನಂತರ ಸಮಾರಂಭದ ವೇದಿಕೆಗೆ ಆಗಮಿಸಿದರು.

    ನಾನ್ ವೆಜ್ ಊಟಮಾಡಿ ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸಿರುವ ವಿಚಾರ ಸಿದ್ದರಾಮಯ್ಯನವರು ಹೋದನಂತರ ತಿಳಿದಿದೆ. ಇದರಿಂದ ಅನೇಕರ ಆಕ್ರೋಶಕ್ಕೆ ಸಿದ್ದರಾಮಯ್ಯನವರು ಗುರಿಯಾಗಿದ್ದಾರೆ. ಈ ಊಟದಲ್ಲಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ ಮತ್ತು ಸಲೀಂ ಅಹ್ಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗಿಯಾಗಿದ್ದರು.

     

  • ನಾನು, ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ ವೆಜ್: ಎಚ್. ವಿಶ್ವನಾಥ್

    ನಾನು, ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ ವೆಜ್: ಎಚ್. ವಿಶ್ವನಾಥ್

    ಮೈಸೂರು: ನಾನು ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್‍ವೆಜ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು.

    ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಚ್.ವಿಶ್ವನಾಥ್ ಈ ರೀತಿ ಹೇಳಿದರು. ನಾನು ಹಾಗೂ ಈಶ್ವರಪ್ಪ ಭಾಷಣ ಮುಗಿಸಿ ವೆಜ್ ಊಟಕ್ಕೆ ಹೋಗುತ್ತೇವೆ. ಸಿದ್ದರಾಮಯ್ಯ ಈಗಲೂ ನಾನ್ ವೆಜಿಟೇರಿಯನ್ ಇದ್ದಾರೆ ಎಂದು ತಿಳಿಸಿದ್ದಾರೆ.

    ನಾನು ಈಶ್ವರಪ್ಪ ಅವರ ಸಹವಾಸ ಮಾಡಿ ಬಾಡೂಟ, ಬಳ್ಳೆ ಬಿಟ್ಟಿದ್ದೇನೆ. ಸಿದ್ದರಾಮಯ್ಯ ಈಗಲೂ ಬಾಡೂಟ, ಬಳ್ಳೆ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅವರಿಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕಿ ಐಶ್ವರ್ಯ ಹಾವು ಬತ್ತಿ ಮೀನು ಊಟ ಮಾಡಿಸಿದ್ದಾರೆ. ಹೀಗಾಗಿ ನಾವು ಕೆಆರ್ ನಗರದ ನಮ್ಮ ಮನೆಯಲ್ಲಿ ಊಟ ಮಾಡುತ್ತೇವೆ. ನೀವೆಲ್ಲ ವಿಶ್ವನಾಥ್ ಹಾಗೂ ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳಬಾರದು ಎಂದು ಕಾರ್ಯಕ್ರಮದ ಮಧ್ಯೆ ತೆರಳುತ್ತಿರುವುದಕ್ಕೆ ಎಚ್. ವಿಶ್ವನಾಥ್ ಸಮಜಾಯಿಷಿ ನೀಡಿದರು.

    ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ ವಿಶ್ವನಾಥ್, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ನೆರವು ನೀಡಿದರು. ಸುಮಾರು 262 ಕೋಟಿ ರೂ.ಗಳ ಪ್ಯಾಕೇಜ್ ಕೊಟ್ಟಿದ್ದಾರೆ. ರಾಜಕಾರಣದಲ್ಲಿ ತಿರುವುಗಳು ಬರುತ್ತವೆ, ಹೋಗುತ್ತವೆ. ಕಾವೇರಿ ನದಿಯ ಹರಿವಿನಲ್ಲಿ ತಿರುವುಗಳು ಸಹಜ. ಅದೇ ರೀತಿ ನಾವು ವೇದಿಕೆಯಲ್ಲಿ ಸೇರಿದ್ದೇವೆ ಎಂದರು.

    ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸ್ವತಂತ್ರ ಸೇನಾನಿ. ಗಣರಾಜ್ಯದ ದಿನ ರಾಯಣ್ಣ ಅವರನ್ನು ನಂದಗಢದಲ್ಲಿ ಗಲ್ಲಿಗೆ ಏರಿಸಲಾಯಿತು. ನಂದಗಢವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

  • ಮತ್ತೆ ಮತ್ತೆ ತಿನ್ನಬೇಕೆನಿಸುವ ಮಟನ್ ಮಸಾಲ ಚಾಪ್ಸ್

    ಮತ್ತೆ ಮತ್ತೆ ತಿನ್ನಬೇಕೆನಿಸುವ ಮಟನ್ ಮಸಾಲ ಚಾಪ್ಸ್

    ನಾನ್ ವೆಜ್ ಪ್ರಿಯರಿಗೆ ಸಾಮಾನ್ಯವಾಗಿ ಮಾಂಸದ ಅಡುಗೆ ಅಂದರೆ ಇಷ್ಟಾನೆ ಆಗುತ್ತದೆ. ಭಾನುವಾರ ಬಂತು ಅಂದರೆ ಸಾಕು ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಳ್ಳುತ್ತಾರೆ. ಆದ್ದರಿಂದ ಅತ್ಯಂತ ಸುಲಭವಾಗಿ ಮಟನ್ ಮಸಾಲ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮಟನ್ ಚಾಪ್ಸ್ – 750 ಗ್ರಾಂ (ಕತ್ತರಿಸಿಕೊಳ್ಳಬೇಕು)
    2. ಈರುಳ್ಳಿ – 2
    3. ಟಮೋಟೊ -2
    4. ಅಡುಗೆ ಎಣ್ಣೆ
    5. ಗಟ್ಟಿ ಮೊಸರು – ಅರ್ಧ ಚಮಚ
    6. ಮೆಣಸಿನ ಪುಡಿ – 1 ಚಮಚ
    7. ಪೆಪ್ಪರ್ – ಅರ್ಧ ಚಮಚ
    8. ದನಿಯ ಪುಡಿ – 1 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    10. ಅರಿಶಿಣ ಪುಡಿ – ಅರ್ಧ ಚಮಚ
    11. ಜೀರಿಗೆ ಪುಡಿ -ಅರ್ಧ ಚಮಚ
    12. ಕೊತ್ತಂಬರಿ ಸೊಪ್ಪು -ಸ್ವಲ್ಪ
    13. ಉಪ್ಪು -ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಮಟನ್ ಚಾಪ್ಸ್ ಅನ್ನು ಚೆನ್ನಾಗಿ ತೊಳೆದುಕೊಂಡು ಇಟ್ಟುಕೊಳ್ಳಿ.
    * ಒಂದು ಮಿಕ್ಸಿ ಜಾರಿಗೆ ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಈಗ ಒಂದು ಕುಕ್ಕರ್‌ಗೆ ಮಟನ್ ಚಾಪ್ಸ್, ಅರಿಶಿಣ ಪುಡಿ, ಸ್ವಲ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೂ ಬೇಯಿಸಿಕೊಳ್ಳಿ. ಬೇಯಿಸಿಕೊಂಡ ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಿ ಕೆಳಗಿಳಿಸಿ.
    * ಬಳಿಕ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
    * ನಂತರ ಈಗಾಗಲೇ ರಬ್ಬಿಕೊಳ್ಳಲಾದ ಮಾಸಾಲ, ದನಿಯ ಪುಡಿ ಹಾಕಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.
    * ಈತ ಬೇಯಿಸಿಕೊಂಡಿರುವ ಮಟನ್ ಚಾಪ್ಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಮಾಸಾಲಾ ಮಟನ್ ಚಾಪ್ಸ್ ಸವಿಯಲು ರೆಡಿ.

  • ಹೋಟೆಲ್‍ಗೆ ಹೋಗುವ ಬದ್ಲು ಮನೆಯಲ್ಲೇ ಮಾಡಿ ರುಚಿ ರುಚಿಯಾದ ಚಿಕನ್ ಗ್ರೀನ್ ಫ್ರೈ

    ಹೋಟೆಲ್‍ಗೆ ಹೋಗುವ ಬದ್ಲು ಮನೆಯಲ್ಲೇ ಮಾಡಿ ರುಚಿ ರುಚಿಯಾದ ಚಿಕನ್ ಗ್ರೀನ್ ಫ್ರೈ

    ವೀಕೆಂಡ್‍ನಲ್ಲಿ ಮಾಂಸಾಹಾರಿ ಹೋಟೆಲ್‍ಗಳು ಫುಲ್ ರಶ್ ಆಗಿರುತ್ತವೆ. ಅಷ್ಟರ ಮಟ್ಟಿಗೆ ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಆದರೆ ಹೋಟೆಲ್ ನಲ್ಲಿ ತಿನ್ನೋ ಬದಲು ಮನೆಯಲ್ಲೇ ಮಾಂಸಾಹಾರವನ್ನು ಮಾಡಿ ತಿನ್ನಬಹುದು. ಹೀಗಾಗಿ ತುಂಬಾ ಸರಳವಾಗಿ ಮತ್ತು ಬಹುಬೇಗ ರುಚಿ ರುಚಿಯಾದ ಚಿಕನ್ ಗ್ರೀನ್ ಫ್ರೈ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಚಿಕನ್- ಅರ್ಧ ಕೆಜಿ
    * ಈರುಳ್ಳಿ- 2
    * ಅಡುಗೆ ಎಣ್ಣೆ-
    * ಹಸಿ ಮೆಣಸಿನಕಾಯಿ- 6 (ಖಾರ ಕಡಿಮೆ ಇರುವ)
    * ಪುದಿನ-2 ಎಸಳು
    * ಕಾಳು ಮೆಣಸು ಪುಡಿ- 2 ಚಮಚ
    * ಅರಿಶಿನ ಪುಡಿ- 1 ಚಿಟಿಕೆ
    * ಕೆಂಪು ಮೆಣಸಿನ ಪುಡಿ- 2 ಚಮಚ
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಉಪ್ಪು ರುಚಿಗೆ ತಕ್ಕಷ್ಟು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಹೆವಿ ಕ್ರೀಮ್- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ಒಂದು ದೊಡ್ಡ ಬೌಲ್‍ಗೆ ತೊಳೆದ ಚಿಕನ್ ಹಾಕಿ, ಅದಕ್ಕೆ ಒಂದು ಟೇಬಲ್ ಸ್ಪೂನ್ ಕಾಳು ಮೆಣಸಿನ ಪುಡಿ, ಕೆಂಪುಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅರಿಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ನೆನಸಿಡಿ.
    * ಒಂದು ಮಿಕ್ಸಿ ಜಾರ್ ಗೆ ಹಸಿಮೆಣಸಿನ ಕಾಯಿ, ಪುದಿನ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ರುಬ್ಬಿಕೊಳ್ಳಿ.
    * ನಂತರ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಕತ್ತರಿಸಿದ 2 ಈರುಳ್ಳಿಯನ್ನು ಹಾಕಿ ಗೋಲ್ಡ್ ಕಲರ್ ಬರುವವರೆಗೆ ಹುರಿಯಿರಿ.
    * ಉಳಿದ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಹುರಿಯಿರಿ, ತದನಂತರ ನೆನಸಿಟ್ಟ ಚಿಕನ್‍ನ್ನು ಹಾಕಿ ಅರ್ಧ ಬೇಯಿಸಿಕೊಳ್ಳಿ.

    * ಬಳಿಕ ಅದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಿಶ್ರಣ ಮತ್ತು ಹೆವಿ ಕ್ರೀಮ್‍ನ್ನು ಹಾಕಿ ಜೊತೆಗೆ ಅದಕ್ಕೆ ಉಳಿದ ಕಾಳು ಮೆಣಸಿನ ಪುಡಿ, ಕೆಂಪುಮೆಣಸಿನ ಪುಡಿ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಪ್ಯಾನ್‍ನ ಮುಚ್ಚಳವನ್ನು ಮುಚ್ಚಿ 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
    * ಚೆನ್ನಾಗಿ ಬೆಂದ ಬಳಿಕ ಅದನ್ನು ಕೆಳಗಿಳಿಸಿ ಸರ್ವಿಂಗ್ ಬೌಲ್‍ಗೆ ಹಾಕಿದರೆ ಚಿಕನ್ ಗ್ರೀನ್ ಫ್ರೈ ಸವಿಯಲು ಸಿದ್ಧ.

    ಇದನ್ನು ಅಕ್ಕಿ ರೊಟ್ಟಿ, ದೋಸೆ, ಚಪಾತಿ ಮತ್ತು ಅನ್ನದ ಜೊತೆಯೂ ಸವಿಯಬಹುದು.

     

  • ಖಡಕ್ ಚಿಕನ್ 65 ಮಾಡುವ ವಿಧಾನ

    ಖಡಕ್ ಚಿಕನ್ 65 ಮಾಡುವ ವಿಧಾನ

    ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತೀರಿ. ಆದ್ದರಿಂದ ನಾವು ತಿಳಿಸುವ ಚಿಕನ್ 65 ಟ್ರೈ ಮಾಡಿ ರುಚಿ ನೋಡಿ. ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿ ಚಿಕನ್ 65 ಮಾಡುವ ವಿಧಾನ ಇಲ್ಲಿದೆ. ಈ ಚಿಕನ್ ಚೈನಿಸ್ ಸ್ಟೈಲ್‍ನಲ್ಲಿ ಒಂದಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಚಿಕನ್ – 450 ಗ್ರಾಂ
    2. ಕೊತ್ತಂಬರಿ ಪುಡಿ – 3 ಚಮಚ
    3. ಮೊಸರು – 3 ಚಮಚ
    4. ಹಸಿ ಮೆಣಸಿನ ಕಾಯಿ – 4
    5. ಅಡುಗೆ ಎಣ್ಣೆ – 2 ಚಮಚ
    6. ಕೆಂಪು ಮೆಣಸಿನ ಪುಡಿ – 1 ಚಮಚ
    7. ಅರಿಶಿಣ ಪುಡಿ – 1/2 ಚಮಚ
    8 ಕರಿಬೇವಿನ ಎಲೆಗಳು – 6
    9. ಟೊಮೆಟೋ – ಸ್ವಲ್ಪ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಮೊಟ್ಟೆ – 1
    12. ಈರುಳ್ಳಿ- 2
    13. ಕಾನ್ ಫ್ಲೋರ್ ಹಿಟ್ಟು

    ಮಾಡುವ ವಿಧಾನ:
    * ಮೊದಲು 450 ಗ್ರಾಂ ಚಿಕನ್‍ಗೆ ಕಾನ್ ಫ್ಲೋರ್ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    * ಬಳಿಕ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಹಸಿ ಮೆಣಸಿನ ಕಾಯಿ, ಟೊಮೆಟೋ, ಚಿಕ್ಕದಾಗಿ ಕಟ್ ಮಾಡಿಕೊಂಡ ಈರುಳ್ಳಿ, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ರುಚಿಗೆ ಉಪ್ಪು, ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಫ್ರೈ ಮಾಡಿಕೊಂಡ ಎಲ್ಲ ಐಟಮ್‍ಗೆ ಈಗಾಗಲೇ ಫ್ರೈ ಮಾಡಿದ್ದ ಚಿಕನ್ ಹಾಕಿ. ನಂತರ ಅದಕ್ಕೆ ಮೊಸರು ಹಾಕಿ 3 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಿ.
    * 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಮೊಟ್ಟೆ ಹಾಕಿ ಮತ್ತೆ 5 ನಿಮಿಷಗಳ ಕಾಲ ಫ್ರೈ ಮಾಡಿದರೆ ಖಡಕ್ ಚಿಕನ್ 65 ಸವಿಯಲು ರೆಡಿ.

  • ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನವದೆಹಲಿ: ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ್ದಕ್ಕೆ ಏರ್ ಏಷ್ಯಾ ವಿಮಾನ ಕಂಪನಿಗೆ ಗ್ರಾಹಕರ ನ್ಯಾಯಾಲಯ 1.54 ಲಕ್ಷ ರೂ. ರೂಪಾಯಿ ದಂಡ ವಿಧಿಸಿದೆ.

    ನಾನ್ ವೆಜ್ ಊಟ ನೀಡಿ ನಮ್ಮನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕ ವಿಜಯ್ ಕುಮಾರ್ ಟ್ರೆಹನ್ ಏರ್ ಏಷ್ಯಾ ವಿರುದ್ಧ ಹರ್ಯಾಣದ ಪಂಚಕುಲ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಏರ್ ಏಷ್ಯಾ ಕಂಪನಿಗೆ 1.54 ಲಕ್ಷ ರೂ. ದಂಡ ಕಟ್ಟುವಂತೆ ಆದೇಶಿಸಿದೆ.

    ಏನಿದು ಪ್ರಕರಣ?
    ಅಕ್ಟೋಬರ್ 2018ರಲ್ಲಿ ವಿಜಯ್ ಕುಮಾರ್ ಕುಟುಂಬ ಮಲೇಷ್ಯಾದ ಕೌಲಾಲಂಪುರ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಗಮಿಸುವ ಮೊದಲ ದಿನವೂ ಕೂಡ ಸಿಬ್ಬಂದಿಯ ಅಸಹಕಾರದಿಂದ ವಿಮಾನ ಮಿಸ್ ಆಗಿತ್ತು. ಆ ಬಳಿಕ ಎರಡನೇ ದಿನ ನಾನ್ ವೆಜ್ ಊಟ ನೀಡಿ ನಮ್ಮನ್ನು ಏರ್ ಏಷ್ಯಾ ಸಿಬ್ಬಂದಿ ಹಿಂಸಿಸಿದ್ದಾರೆ. ನಾವು ಹಿಂದೂ ಕುಟುಂಬದವರಾಗಿದ್ದು, ಆದರಲೂ ಇಸ್ಕಾನ್ ಭಕ್ತರಾಗಿದ್ದು, ನವರಾತ್ರಿಯ ವೇಳೆ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ವಿಜಯ್ ಕುಮಾರ್ ಹಾಗೂ ಕುಟುಂಬದ ಐವರು ಕೌಲಾಲಂಪುರ್ ನಿಂದ ಅಮೃತಸರಕ್ಕೆ ಮರಳುತ್ತಿದ್ದರು. ಈ ವೇಳೆ ಸಂಜೆ 5:15 ಗಂಟೆಗೆ ತಮ್ಮ ಕುಟುಂಬದವರ ಜೊತೆ ವಿಜಯ್ ಕುಮಾರ್ ಕೌಲಾಲಂಪುರ್ ವಿಮಾನ ನಿಲ್ದಾಣಕ್ಕೆ ತಲುಪಿ, ಲಗೇಜ್ ತೆರವು ಮತ್ತು ಬೋರ್ಡಿಂಗ್ ಪಾಸುಗಳನ್ನು ಪಡೆದಿದ್ದರು. ಸುಮಾರು 7:20ರ ಹೊತ್ತಿಗೆ ವಿಮಾನದ ಸಮಯ ನಿಗದಿಯಾಗಿತ್ತು.

    ವಲಸೆ ಕೌಂಟರ್ ನಲ್ಲಿ ಬಹಳ ಪ್ರಯಾಣಿಕರು ಇದ್ದ ಕಾರಣಕ್ಕೆ ವಿಜಯ್ ಅವರ ಕುಟುಂಬದ ಲಗೇಜ್ ಪರಿಶೀಲನೆ ಮಾಡುವುದು ತಡವಾಗಿತ್ತು. ಇದರಿಂದ ಅವರು ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಅವರು ಮಾರನೇ ದಿನಕ್ಕೆ ಹೊಸ ಟಿಕೆಟ್ ಬುಕ್ ಮಾಡಿಕೊಂಡು 1 ದಿನ ಹೋಟೆಲ್‍ನಲ್ಲಿ ಇರಬೇಕಾಯ್ತು.

    ಮರು ದಿವಸ ಕುಟುಂಬದೊಡನೆ ವಿಜಯ್ ಕುಮಾರ್ ಅದೇ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದರು. ಪ್ರಯಾಣದ ಮಧ್ಯೆ ಸಿಬ್ಬಂದಿ ಬಳಿ ಸಸ್ಯಾಹಾರ ಊಟ ನೀಡುವಂತೆ ವಿಜಯ್ ಹಾಗೂ ಅವರ ಕುಟುಂಬ ತಿಳಿಸಿತ್ತು. ಆದರೆ ಸಿಬ್ಬಂದಿ ಮಾಂಸಾಹಾರ ಊಟವನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ವಿಜಯ್ ಕುಮಾರ್ ವಿಮಾನ ಕಂಪನಿ ವಿರುದ್ಧ ದೂರು ನೀಡಿದ್ದರು.

    ದೂರು ಆಧರಿಸಿ ವಿಚಾರಣೆ ಮಾಡಿದ ಗ್ರಾಹಕ ವೇದಿಕೆ ಏರ್ ಏಷ್ಯಾಕ್ಕೆ ಮೊದಲು ಸೂಚನೆ ನೀಡಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಹೊಸ ಟಿಕೆಟ್, ಹೋಟೆಲ್ ಕೊಠಡಿ ಬಾಡಿಗೆಗಳು, 9% ರಷ್ಟು ಆಹಾರದ ಬಿಲ್ ಸೇರಿಸಿ 1.54 ಲಕ್ಷವನ್ನು ಪ್ರಯಾಣಿಕ ಕುಟುಂಬಕ್ಕೆ ನೀಡುವಂತೆ ಸೂಚಿಸಿದೆ. ಕಿರುಕುಳ, ನೋವು ಮತ್ತು ಮಾನಸಿಕ ಸಂಕಟಕ್ಕೆ 30,000 ರೂ. ಹಣವನ್ನು ನೀಡುವಂತೆ ಆದೇಶಿಸಲಾಯಿತು. ಅಲ್ಲದೆ ನ್ಯಾಯಾಲಯ ಶುಲ್ಕವಾಗಿ 5,500 ರೂ. ದಂಡ ಕಟ್ಟುವಂತೆ ಸೂಚಿಸಿದೆ.

  • ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ

    ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ

    ಭಾನುವಾರ ಬಂತೆಂದರೆ ಸ್ಪೆಷಲ್ ಅಡುಗೆ ಮಾಡುಬೇಕು. ಅದರಲ್ಲೂ ಸಂಡೆ ಎಂದರೆ ಬಹುತೇಕರ ಮನೆಯಲ್ಲೂ ನಾನ್ ವೆಜ್ ಅಡುಗೆ ಮಾಡುತ್ತಾರೆ. ಪ್ರತಿಬಾರಿ ಕಬಾಬ್, ಬಿರಿಯಾನಿ ಮಾಡುತ್ತೀರ. ಹೀಗಾಗಿ ಒಂದು ಬಾರಿ ಹಳ್ಳಿ ಶೈಲಿಯ ನಾಟಿ ಕೋಳಿ ಸಾಂಬಾರ್ ಟ್ರೈ ಮಾಡಿ. ಟೇಸ್ಟ್ ಮಾಡಿ, ನಿಮಗಾಗಿ ನಾಟಿ ಕೋಳಿ ಸಾಂಬಾರ್ ಮಾಡುವ ವಿಧಾನ.

    ಬೇಕಾಗುವ ಸಾಮಾಗ್ರಿಗಳು:
    1. ನಾಟಿ ಕೋಳಿ – 1.5 ಕೆ.ಜಿ.
    2. ಖಾರದ ಪುಡಿ -1.5 ಚಮಚ
    3. ದನಿಯಾ ಪುಡಿ – 1.5 ಚಮಚ
    4. ಈರುಳ್ಳಿ – 3
    5. ಕೊತ್ತಂಬರಿ ಸೊಪ್ಪು – ಸ್ವಲ್ಪ
    6. ಬೆಳ್ಳುಳ್ಳಿ – 10
    7. ಶುಂಠಿ – ಸ್ವಲ್ಪ
    8. ಚಕ್ಕೆ – 3 ಪೀಸ್
    9. ಲವಂಗ – ಎರಡರಿಂದ ಮೂರು
    10. ಮೆಣಸು- 2 ಚಮಚ
    11. ತೆಂಗಿನ ಕಾಯಿ ತುರಿ -2 ಕಪ್
    12. ಗಸಗಸೆ -1 ಚಮಚ
    13. ಹುರಿಗಡ್ಲೆ – 2 ಚಮಚ
    14. ಎಣ್ಣೆ -3 ಚಮಚ
    15. ಉಪ್ಪು -ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    *  ಮೊದಲಿಗೆ ಚೆನ್ನಾಗಿ ಚಿಕನ್ ತೊಳೆದುಕೊಂಡು ಚಿಟಿಕೆ ಅರಿಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ.
    *  ಈಗ ಒಂದು ಬಾಣಲಿಗೆ 1 ಚಮಚ ಎಣ್ಣೆ ಹಾಕಿ, ನಂತರ ಮುಕ್ಕಾಲು ಭಾಗ ಈರುಳ್ಳಿ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಾಕಿ ಫ್ರೈ ಮಾಡಿಕೊಳ್ಳಿ.
    *  ಅದು ತಣ್ಣಗೆ ಆದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಸ್ವಲ್ಪ ಕೊತ್ತಂಬರಿ, ಅರ್ಧ ಗ್ಲಾಸ್ ನೀರು ಹಾಕಿ ರುಬ್ಬಿಕೊಳ್ಳಿ.
    *  ಈಗ ಕುಕ್ಕರ್ಗೆ  2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉಳಿಸಿಕೊಂಡಿದ್ದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    *  ತೊಳೆದು ಇಟ್ಟಿದ್ದ ಚಿಕನ್, 1 ಚಮಚ ಅರಿಶಿಣ, 1.5 ಚಮಚ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ (ನೀರು ಪಂಗೋವರೆಗೂ ಫ್ರೈ ಮಾಡಿ)
    *  ಈಗ ರುಬ್ಬಿದ ಮುಕ್ಕಾಲು ಭಾಗ ಮಸಾಲೆ ಹಾಕಿ 5 ನಿಮಿಷ ಬೇಯಲು ಬಿಡಿ.
    *  ಇತ್ತ ಅದೇ ಮಸಲಾಗೆ ಖಾರದ ಪುಡಿ ಮತ್ತು ದನಿಯಾ ಪುಡಿ ಎರಡೆರಡು ಚಮಚ ಹಾಕಿ, ಅದಕ್ಕೆ ಅರ್ಧ ಗ್ಲಾಸ್ ನೀರು ಹಾಕಿ ರುಬ್ಬಿಕೊಳ್ಳಿ.
    *  5 ನಿಮಿಷ ಬೆಂದ ಚಿಕನ್‍ಗೆ 2 ಗ್ಲಾಸ್ ನೀರು ಹಾಕಿ ಎರಡು ವಿಶಲ್ ಕೂಗಿಸಿಕೊಳ್ಳಿ.


    * ರುಬ್ಬಿದ ಖಾರ ಮಸಾಲೆಯನ್ನು ಒಂದು ಬೌಲ್ ಹಾಕಿ ಒಂದು ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಅದನ್ನು ಚಿಕನ್‍ಗೆ ಮಿಕ್ಸ್ ಮಾಡಿ 10 ನಿಮಿಷ ಕುದಿಯಲು ಬಿಡಿ.
    *  ಮಿಕ್ಸಿ ಜಾರಿಗೆ ಕಾಯಿ, ಕಡ್ಲೆ, ಗಸಗಸೆ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಕುದಿಯುತ್ತಿರುವ ಚಿಕನ್‍ಗೆ ಹಾಕಿ ಮಿಕ್ಸ್ ಮಾಡಿ.
    *  ಗಟ್ಟೆಯಾದರೆ ಸ್ವಲ್ಪ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕ್ಯಾಪ್ ಮುಚ್ಚಿ. ಒಂದು ವಿಶಲ್ ಕೂಗಿಸಿ.
    *  ಈಗ ನಾಟಿ ಕೋಳಿ ಸಾಂಬಾರ್ ರೆಡಿಯಾಗಿದ್ದು, ಇದನ್ನು ಮುದ್ದೆ, ಅನ್ನ, ಚಪಾತಿ, ರೊಟ್ಟಿ ಜೊತೆ ಸವಿಯಿರಿ.

  • ಸಿಂಪಲ್ ಆಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ

    ಸಿಂಪಲ್ ಆಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ

    ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬೆಚ್ಚನೆಯ ವಾತಾವರಣವಿದೆ. ಇಂದು ಭಾನುವಾರ ರಜೆಯ ಕಾರಣ ಎಲ್ಲರು ಮನೆಯಲ್ಲಿ ಇರುತ್ತಾರೆ. ಈ ವಾತಾವರಣದಲ್ಲಿ ಏನಾದರೂ ಚಿಲ್ ಆಗಿ ಮಾಡಿಕೊಂಡು ತಿನ್ನೋಣ ಅಂದುಕೊಂಡಿರುತ್ತೀರಿ. ಹೀಗಾಗಿ ಸುಲಭವಾಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ ನಿಮಗಾಗಿ ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬೋನ್‍ಲೆಸ್ ಚಿಕನ್ – ಅರ್ಧ ಕೆ.ಜಿ
    2. ಈರುಳ್ಳಿ – ಒಂದು
    3. ಕೊತ್ತಂಬರಿ ಸೊಪ್ಪು – ಸ್ವಲ್ಪ
    4. ಪುದಿನಾ – ಸ್ವಲ್ಪ
    5. ಮೊಸರು – ಅರ್ಧ ಕಪ್
    6. ಒಣಗಿದ ಮೆಂತ್ಯೆ ಎಲೆ ಪುಡಿ – ಒಂದು ಚಮಚ
    7. ಹಸಿರು ಮೆಣಸಿನಕಾಯಿ – 10
    8. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    9. ಚಕ್ಕೆ – 1
    10. ಗರಂ ಮಸಾಲ ಪುಡಿ – 1 ಚಮಚ
    11. ದನಿಯಾ ಪುಡಿ – 1 ಚಮಚ
    12. ಜೀರಿಗೆ ಪುಡಿ – 1 ಚಮಚ
    13. ಚಿಲ್ಲಿ ಪುಡಿ – ಅರ್ಧ ಚಮಚ
    14. ಎಣ್ಣೆ -3-4 ಚಮಚ
    15. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರಿಗೆ ಪುದಿನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿಕಾಯಿ, ಮೊಸರು ಹಾಕಿ ರುಬ್ಬಿಕೊಳ್ಳಿ.
    * ಈಗ ಒಂದು ಬೌಲ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಸಣ್ಣದಾಗಿ ಕತ್ತರಿಸಿದ್ದ ಚಕ್ಕೆ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.
    * ನಂತರ ತೊಳೆದ ಚಿಕನ್ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ದನಿಯಾ, ಜೀರಿಗೆ ಮತ್ತು ಚಿಲ್ಲಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ರುಬ್ಬಿದ ಮಸಲಾ, ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 4-5ರಿಂದ ನಿಮಿಷ ಪ್ಲೇಟ್ ಮುಚ್ಚಿ ಬೇಯಿಸಿ.
    * ಈಗ ಒಣಗಿದ ಮೆಂತ್ಯೆ ಎಲೆ ಪುಡಿ ಹಾಕಿದರೆ ಗ್ರೀನ್ ಚಿಕನ್ ಫ್ರೈ ಸವಿಯಲು ಸಿದ್ಧ.

  • ಬೆಲೆ ಏರಿಕೆಯಾದ್ರೂ ಕಡಿಮೆಯಾಗಿಲ್ಲ ಮಟನ್ ಡಿಮ್ಯಾಂಡ್

    ಬೆಲೆ ಏರಿಕೆಯಾದ್ರೂ ಕಡಿಮೆಯಾಗಿಲ್ಲ ಮಟನ್ ಡಿಮ್ಯಾಂಡ್

    ರಾಮನಗರ: ಒಂದೆಡೆ ಲೋಕಸಭಾ ಚುನಾವಣೆಯ ನಡುವೆ ಬಂದಿರುವ ಯುಗಾದಿಯ ಹೊಸ ತೊಡಕಿನ ದಿನ ಮಾಂಸದ ಖರೀದಿ ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಜೋರಾಗಿಯೇ ಇದೆ.

    ಬಹುತೇಕ ಎಲ್ಲ ಮಟನ್ ಸ್ಟಾಲ್ ಹಾಗೂ ಚಿಕನ್ ಪೌಲ್ಟ್ರಿ ಸೆಂಟರ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮಾಂಸವನ್ನ ಖರೀದಿ ಮಾಡುತ್ತಿದ್ದಾರೆ. ರಾಮನಗರದ ಪ್ರತಿ ಮಟನ್ ಸ್ಟಾಲ್‍ಗಳು ಜನರಿಂದ ಕಿಕ್ಕಿರಿದು ತುಂಬಿದ್ದು, ಮಾಂಸ ಖರೀದಿಯಲ್ಲಿ ನಿರತರಾಗಿದ್ದಾರೆ.

    ಸಾಮಾನ್ಯ ದಿನಗಳಲ್ಲಿ ಮೇಕೆ ಹಾಗೂ ಕುರಿ ಮಾಂಸ ಕೆ.ಜಿಗೆ 380 ರಿಂದ 410 ರೂಪಾಯಿಗಳ ವರೆಗೆ ಇರುತ್ತಿತ್ತು. ಆದರೆ ಇದೀಗ ಹಬ್ಬದ ವಿಶೇಷವಾಗಿರುವುದರಿಂದ ಪ್ರತಿ ಮಟನ್ ಸ್ಟಾಲ್‍ಗಳಲ್ಲೂ ಮಾಂಸದ ದರವನ್ನ ಏರಿಕೆ ಮಾಡಿದ್ದಾರೆ. ಪ್ರತಿ ಕೆ.ಜಿ ಮಾಂಸಕ್ಕೆ 450 ರೂ.ಗಳಿಂದ 500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮಾಂಸದ ದರ ಏರಿಕೆಯಾದರೂ ಸಹ ಜನರು ತಾ ಮುಂದು ನಾ ಮುಂದು ಎಂದು ಬೆಳಗ್ಗಿನಿಂದಲೂ ಮಾಂಸ ಖರೀದಿಗೆ ನಿಂತಿದ್ದಾರೆ.

    ಇತ್ತ ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.

  • 18ರಂದು ಮತ ಹಾಕಿ, ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ ಎಲ್ಲಾ ತಿಂತೀನಿ: ಸುಮಲತಾ

    18ರಂದು ಮತ ಹಾಕಿ, ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ ಎಲ್ಲಾ ತಿಂತೀನಿ: ಸುಮಲತಾ

    ಮಂಡ್ಯ: 18ನೇ ತಾರೀಖು ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ಹಾಕಿ. ಆಮೇಲೆ ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ, ಮಟನ್ ಬಿರಿಯಾನಿ ಎಲ್ಲಾ ತಿಂತೀನಿ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.

    ಮದ್ದೂರಿನ ಅರುವನಹಳ್ಳಿಯಲ್ಲಿ ಮಾತನಾಡಿದ ಅವರು, “ನಾನು ಆಮೇಲೆ ಮಾತಾಡ್ತೀನಿ. ಎಲ್ಲರೂ ಏನ್ ಊಟ ಮಾಡ್ಕೊಂಡ್ ಬಂದ್ರಿ ಇವತ್ತು ಎಂದು ಕೇಳಿದ್ದಾರೆ. ಅಲ್ಲದೆ ಅಂಬರೀಶ್ ಅಣ್ಣನ ಫೇವರೇಟ್ ಯಾವ್ದು ಹೇಳಿ ಎಂದು ಜನರನ್ನು ಪ್ರಶ್ನಸಿದರು. ಆಗ ಜನರು ನಾಟಿ ಕೋಳಿ ಎಂದು ಹೇಳಿದರು. ಅದಕ್ಕೆ ಸುಮಲತಾ ನಾಟಿ ಕೋಳಿ ಅಲ್ಲ, ಯಾವ್ದೇಳಿ ನೋಡೋಣ ಕೇಳುತ್ತಾ ಹಾ.. ಕೈಮ ಉಂಡೆ, ಮುದ್ದೆ ಅಂಬರೀಶ್ ಫೇವರೀಟ್ ಫುಡ್ ಎಂದು ಹೇಳಿದರು. ಎಲ್ಲರೂ ಮಟನ್ ಊಟ ಮಾಡ್ಕೊಂಡ್ ಬಂದಿದ್ದೀರಿ. ಅದಕ್ಕೆ ವಾಯ್ಸ್ ಜೋರಾಗಿದೆ” ಎಂದು ಸುಮಲತಾ ಜನರನ್ನು ಹುರಿದುಂಬಿಸಿದರು.

    18ನೇ ತಾರೀಖು ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ಹಾಕಿ. ಆಮೇಲೆ ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ, ಮಟನ್ ಬಿರಿಯಾನಿ ಎಲ್ಲಾ ತಿಂತೀನಿ ಎಂದು ಜನರಿಗೆ ಹೇಳಿದರು. ಈ ವೇಳೆ ಗ್ರಾಮಸ್ಥರು ದರ್ಶನ್ ಬಗ್ಗೆ ಮಾತನಾಡುವಂತೆ ಪಟ್ಟು ಹಿಡಿದಿದರು. ಆಗ ಸುಮಲತಾ ಅವರು ದರ್ಶನ್ ಕೈಗೆ ಫ್ರಾಕ್ಚರ್ ಆಗಿದೆ. ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.