Tag: non veg

  • ಬಿಸಿ ಬಿಸಿಯಾದ ಎಗ್ ಫ್ರೈಡ್ ರೈಸ್ ಮಾಡುವ ವಿಧಾನ ನಿಮಗಾಗಿ

    ಬಿಸಿ ಬಿಸಿಯಾದ ಎಗ್ ಫ್ರೈಡ್ ರೈಸ್ ಮಾಡುವ ವಿಧಾನ ನಿಮಗಾಗಿ

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಎಗ್ ಫ್ರೈಡ್ ರೈಸ್ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಬೀದಿ ಬದಿಯ ಅಂಗಡಿಯಲ್ಲಿ ಚಳಿಗಾಲದಲ್ಲಿ ಎಗ್ ಫ್ರೈಡ್ ರೈಸ್ ಸವಿಯುವ ಮಜವೇ ಬೇರೆ ಎಂದು ಆಹಾರ ಪ್ರಿಯರು ಹೇಳುತ್ತಾರೆ. ಆದರೆ ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಇನ್ನೂ ಚೆನ್ನಾಗಿರುತ್ತದೆ. ಎಗ್ ಫ್ರೈಡ್ ರೈಸ್ ಮಾಡುವುದು ಸುಲಭವಾಗಿದೆ. ಅದಕ್ಕೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಎಗ್ ಫ್ರೈಡ್ ರೈಸ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ಬೇಕಾಗುವ ಸಾಮಗ್ರಿಗಳು:
    * ಅನ್ನ – 2 ಕಪ್
    * ಎಲೆಕೋಸು – ಅರ್ಧ ಕಪ್
    * ಕ್ಯಾರೆಟ್- ಅರ್ಧ ಕಪ್
    * ಈರುಳ್ಳಿ- 2
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಹಸಿಮೆಣಸು-1
    * ರುಚಿಗೆ ತಕ್ಕಷ್ಟು ಉಪ್ಪು
    * ಖಾರದಪುಡಿ- ಅರ್ಧ ಚಮಚ
    * ಗರಂಮಸಾಲೆ – 1 ಚಮಚ
    * ವಿನೆಗರ್- 1 ಚಮಚ
    * ಕಾಳುಮೆಣಸಿನ ಪುಡಿ- 1 ಚಮಚ
    * ಟೊಮೆಟೊ ಸಾಸ್- 1 ಚಮಚ
    * ಗ್ರೀನ್‍ಚಿಲ್ಲಿ ಸಾಸ್ – 1 ಚಮಚ
    * ಸೋಯಾ ಸಾಸ್ – 1 ಚಮಚ
    * ಮೊಟ್ಟೆ – 4
    * ಅಡುಗೆ ಎಣ್ಣೆ – ಅರ್ಧ ಕಪ್ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಎಲೆಕೋಸು ಹಾಕಿ ಹುರಿದು ಬದಿಗೆ ತೆಗೆದಿಟ್ಟುಕೊಳ್ಳಬೇಕು.
    * ನಂತರ ಅದೇ ಪಾತ್ರೆಗೆ ಒಡೆದ ಮೊಟ್ಟೆ ಹಾಕಿ. ಮೊಟ್ಟೆಯನ್ನು ಆಮ್ಲೆಟ್‍ಗೆ ಬೇಯಿಸುವಂತೆ ಅರ್ಧ ಬೇಯಿಸಿಕೊಳ್ಳಿ.

    * ಅದೇ ಎಣ್ಣೆಗೆ ಕ್ಯಾರೆಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಹಾಗೂ ಈಗಾಲೇ ಹುರಿದ ಎಲೆಕೋಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ
    * ಅದಕ್ಕೆ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಅನ್ನ ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ಬಿಸಿಯಾದ ಎಗ್ ಫ್ರೈಡ್ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

  • ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಹೋಟೆಲ್ ಆಹಾರಗಳಿಗಿಂತ ಮನೆಯಲ್ಲಿ ಮಾಂಸಹಾರ ಅಡುಗೆ ಮಾಡುವುದು ಎಂದರೆ ನಾನ್‍ವೆಜ್‍ಪ್ರಿಯರಿಗೆ ಸಖತ್ ಇಷ್ಟವಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಚಿಕನ್ ಮಸಾಲ ತಯಾರಿಸಬಹುದು. ಮಾಂಸಹಾರಿಗಳು ಬಗೆ ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಈ ಖಾರವಾದ ಚಿಕನ್ ಮಸಾಲ  ಅಕ್ಕಿ ರೊಟ್ಟಿಯ ಜೊತೆಗೆ ಸೇವಿಸಲು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – ಅರ್ಧ ಕೆಜಿ
    * ಕೆಂಪು ಮೆಣಸಿನಕಾಯಿ – 8
    * ಈರುಳ್ಳಿ – 2
    * ಟೊಮೆಟೊ – 2
    * ಗೋಡಂಬಿ – 2 ಟೇಬಲ್ ಚಮಚ,
    * ಅರಿಸಿಣ – 1 ಚಮಚ,
    * ಅಡುಗೆಎಣ್ಣೆ- 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ದನಿಯಾ ಪುಡಿ- 1 ಚಮಚ
    * ಗರಂಮಸಾಲ – 1 ಚಮಚ
    * ಕಸೂರಿ ಮೇಥಿ- 1 ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಒಣಮೆಣಸಿನಕಾಯಿ, ಟೊಮೆಟೋ, ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಒಂದು ಬಾಣಲೆಯನ್ನು ಬಿಸಿಗೆ ಇಟ್ಟು 2 ಟೇಬಲ್ ಚಮಚ ಎಣ್ಣೆ ಹಾಕಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಾಡಿಸಿಕೊಳ್ಳಿ.

    * ನಂತರ ಚಿಕನ್ ಸೇರಿಸಿ ಅದಕ್ಕೆ ಅರಿಶಿಣ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ.
    * ಕೊನೆಯಲ್ಲಿ ಗರಂಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು, ಅರ್ಧ ಲೋಟ ನೀರು ಸೇರಿಸಿದರೆ ರುಚಿಯಾದ ಚಿಕನ್ ಮಸಾಲ  ಸವಿಯಲು ಸಿದ್ಧವಾಗುತ್ತದೆ.

    </p>

  • ಸ್ಪೆಷಲ್‌ ಚಿಕನ್ ಸೂಪ್ ಸಖತ್ ಟೇಸ್ಟಿ

    ಸ್ಪೆಷಲ್‌ ಚಿಕನ್ ಸೂಪ್ ಸಖತ್ ಟೇಸ್ಟಿ

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‌ವೆಜ್‌ ಅಡುಗೆಯಲ್ಲಿ ಸೂಪ್‌ ಕೂಡ ವಿಶಿಷ್ಟ ಖಾದ್ಯ. ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಇನ್ನೂ ಚೆನ್ನಾಗಿರುತ್ತೆ. ಸೂಪ್‌ ಮಾಡುವುದು ಸುಲಭ. ಅದಕ್ಕೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‌ವೆಜ್‌ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಸೂಪ್‌ ಮಾಡಿ, ಅದರ ರುಚಿ ಸವಿದು ಎಂಜಾಯ್‌ ಮಾಡಿ. ಇದನ್ನೂ ಓದಿ: ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ

     

    ಬೇಕಾಗುವ ಸಾಮಗ್ರಿಗಳು:
    * ಬೆಣ್ಣೆ – ಅರ್ಧ ಕಪ್
    * ಈರುಳ್ಳಿ-1
    * ಬೆಳ್ಳುಳ್ಳಿ-4
    * ಹಸಿಮೆಣಸು -4
    * ಕ್ಯಾರೆಟ್ -ಅರ್ಧ ಕಪ್
    * ಕೊತ್ತಂಬರಿ ಸೊಪ್ಪು -ಸ್ವಲ್ಪ
    * ಬೇಯಿಸಿದ ಚಿಕನ್- 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಾಳುಮೆಣಸಿನ ಪುಡಿ- 2 ಚಮಚ

    ಮಾಡುವ ವಿಧಾನ:
    * ದಪ್ಪ ತಳದ ಪಾತ್ರೆಯೊಂದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕ್ಯಾರೆಟ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದನ್ನೂ ಓದಿ: ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    * ನಂತರ ಬೇಯಿಸಿದ ಚಿಕನ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಮತ್ತೆ ಚೆನ್ನಾಗಿ ಕುದಿಸಿ.
    * ಇದಕ್ಕೆ ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿದರೆ ಸ್ಪೆಷಲ್ ಚಿಕನ್ ಸೂಪ್ ಸಿದ್ಧವಾಗುತ್ತದೆ.

  • ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಆದರೆ ಹೋಟೆಲ್‍ಗಳಿಗೆ ಹೋಗಿ ತಿಂದರೆ ಕೆಲಮೊಮ್ಮೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಾರದ ಚಿಕನ್  65 ತಿನ್ನಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಹೋಟೆಲ್‍ಗೆ ಹೋಗುವ ಶ್ರಮವೇಕೆ? ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಚಿಕನ್ 65ಯನ್ನು ಸರಳ ವಿಧಾನದ ಜೊತೆಗೆ ಮಾಡಬಹುದು. ಹಾಗಿದ್ದರೆ ಚಿಕನ್ 65 ಮಾಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ (ಬೋನ್ ಲೆಸ್ ಬೆಸ್ಟ್)
    * ಜೋಳದ ಹಿಟ್ಟು-2 ಚಮಚ
    * ಮೈದಾ -2 ಚಮಚ ಖಾರದ ಪುಡಿ
    * ಮೊಟ್ಟೆ- 1
    * ಮೊಸರು- 1ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ- 1ಕಪ್
    * ಹಸಿ ಮೆಣಸಿನಕಾಯಿ-3
    * ಗರಂ ಮಸಾಲ- ಸ್ವಲ್ಪ
    * ನಿಂಬೆ ರಸ- ಅರ್ಧ ಕಪ್
    * ಈರುಳ್ಳಿ -4
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಚಿಕನ್ ಚೆನ್ನಾಗಿ ತೊಳೆದು ತೆಗೆದಿಟ್ಟುಕೊಳ್ಳಿ
    * ಜೋಳದ ಹಿಟ್ಟು, ಮೈದಾ, ಮೊಟ್ಟೆ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕ ಉಪ್ಪನ್ನು ಒಂದು ಬಟ್ಟಲಿಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು.

    * ನಂತರ ಈ ಮಿಶ್ರಣಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಿ.
    * ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಈಗ ಕುದಿಯುತ್ತಿರುವ ಎಣ್ಣೆಗೆ ಚಿಕನ್ ಪೀಸ್ ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.

    * ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.


    * ಈಗ ಗರಂ ಮಸಾಲ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ,
    * ನಂತರ ಫ್ರೈ ಮಾಡಿದ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ 65 ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

  • ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    ಫಿಶ್ ಫ್ರೈ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಭಾರತದ ಈ ಬಗೆಯ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.


    ಬೇಕಾಗುವ ಸಾಮಗ್ರಿಗಳು:
    * ಮೀನು – 1 ಕೆಜಿ (ಬಾಂಗುಡೆ)
    * ಕೆಂಪು ಮೆಣಸಿನಕಾಯಿ ಪುಡಿ – 5 ಚಮಚ
    * ಅರಿಶಿಣ ಪುಡಿ- 1 ಚಮಚ
    * ಶುಂಠಿ – ಸ್ವಲ್ಪ
    * ಬೆಳ್ಳುಳ್ಳಿ- 1
    * ರುಚಿಗೆ ತಕ್ಕಷ್ಟು ಉಪ್ಪು
    * ತೆಂಗಿನ ಎಣ್ಣೆ ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    ಮಾಡುವ ವಿಧಾನ:
    * ಮೀನನನ್ನು ಚೆನ್ನಾಗಿ ತೊಳೆದುಕೊಳ್ಳಿ
    * ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ, 2 ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗೂ 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.
    * ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ನಂತರ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

  • ಮೀನಿನ ಸಾರು ಮಾಡೋಕೆ ಬರಲ್ವಾ? ಇಲ್ಲಿದೆ ಸುಲಭ ವಿಧಾನ

    ಮೀನಿನ ಸಾರು ಮಾಡೋಕೆ ಬರಲ್ವಾ? ಇಲ್ಲಿದೆ ಸುಲಭ ವಿಧಾನ

    ಭಾನುವಾರ ಎಂದರೆ ನಾಲಿಗೆ ಮೂಳೆ, ಮಾಂಸ ಇರುವ ಅಡುಗೆಯನ್ನು ಸವಿಯಲು ಬಯಸುತ್ತದೆ. ಹೋಟೆಲ್‍ಗಳ ಮೊರೆ ಹೋಗುತ್ತೇವೆ. ಆದರೆ ಕೆಲವರಿಗೆ ಹೋಟೆಲ್ ಆಹಾರ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇಂದು ರುಚಿಯಾದ ಆರೋಗ್ಯಕರವಾದ ಮೀನಿನ ಸಾಂಬಾರ್ ಮಾಡುವ ವಿಧಾನ ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    * ಮೀನು- 1 ಕೆಜಿ (Sea bass)
    * ಈರುಳ್ಳಿ-2
    * ಟೊಮೆಟೊ-2
    * ಅಡುಗೆ ಎಣ್ಣೆ-ಅರ್ಧ
    * ದನಿಯಾ – ಅರ್ಧ ಕಪ್
    * ಬ್ಯಾಡಗಿ ಮೆಣಸು- 5ರಿಂದ 8
    * ತೆಂಗಿನಕಾಯಿ ತುರಿ- 1ಕಪ್
    * ಹುಣಸೆಹಣ್ಣು- ಸ್ವಲ್ಪ
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಕರಿಬೇವು- ಸ್ವಲ್ಪ
    * ಜೀರಿಗೆ- 3 ಟೀ ಸ್ಪೂನ್
    * ಕಾಳುಮೆಣಸು- 1 ಟೀ ಸ್ಪೂನ್
    * ಅರಿಶಿಣ ಪುಡಿ- 1 ಟೀ ಸ್ಪೂನ್
    * ಮೆಂತೆಕಾಳು- ಅರ್ಧ ಟೀ ಸ್ಪೂನ್
    * ಇಂಗು- ಸ್ವಲ್ಪ
    * ಸಾಸಿವೆ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ: 
    * ಹುಣಸೆಹಣ್ಣನ್ನು ನೀರಿನೊಂದಿಗೆ ನೆನೆಸಿಟ್ಟಿರಬೇಕು.
    * ಜೀರಿಗೆ, ದನಿಯಾಕಾಳು, ಮೆಂತೆಕಾಳು, ಬ್ಯಾಡಗಿಮೆಣಸು, ಕಾಳುಮೆಣಸುಗಳನ್ನು ಸೇರಿಸಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.

    * ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಅಡುಗೆ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಈ ಮೊದಲು ಹುರಿದಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಸೇರಿಸಿಕೊಂಡು, ತೆಂಗಿನಕಾಯಿ, ಅರಿಶಿಣ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ಬಳಿಕ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಇಂಗು, ಒಣಮೆಣಸು, ಕರಿಬೇವು, ಹುಣಸೆಹಣ್ಣಿನ ನೀರು, ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ನಿಮಗೆ ಬೇಕಾದ ಪ್ರಮಾಣದಲ್ಲಿ ನೀರು ಮತ್ತು ರುಚಿಗೆ ತಕ್ಕಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಸಾರು ಕುದಿಯುತ್ತಿದ್ದಂತೆ ಮೀನನ್ನು ಸೇರಿಸಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಮೀನಿನ ಸಾರು ಸವಿಯಲು ಸಿದ್ಧವಾಗುತ್ತದೆ.

  • ಸ್ಪೆಷಲ್ ನಾಟಿ ಕೋಳಿ ಸಾರು

    ಸ್ಪೆಷಲ್ ನಾಟಿ ಕೋಳಿ ಸಾರು

    ನಾಟಿ ಸ್ಟೈಲ್ ಆಹಾರ ಎಂದುರೆ ಹಲವರು ತುಂಬಾ ಇಷ್ಟ ಪಟ್ಟು ಸವಿಯುತ್ತಾರೆ. ಅಡುಗೆಮನೆಯಲ್ಲಿರುವ ಕೆಲವು ಸುಲಭ ಪರಿಕರಗಳಿಂದ ಭಿನ್ನವಾದ ರುಚಿಯಲ್ಲಿ ಅತ್ಯುತ್ತಮವಾದ ಖಾದ್ಯದೊಂದನ್ನು ಇಂದೇಕೆ ತಯಾರಿಸಬಾರದು? ಮೊಟ್ಟೆ, ತರಕಾರಿಗಳು ನಾಟಿಬೇಕು ಎಂದು ಕೇಳುವ ನಾವು ಇಂದು ನಾಟಿ ಸ್ಟೈಲ್‍ನಲ್ಲಿ ಅಡುಗೆ ಮಾಡಿ ಕುಟುಂಬದವರಿಗೆ ನೀಡಿದರೆ ನಿಜ್ವಾಗಲೂ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹಾಗಿದ್ದರೆ ಇನ್ನೇಕೆ ತಡ ಬನ್ನಿ ರುಚಿಯಾದ ನಾಟಿಕೋಳಿ ಸಾರು ಮಾಡೋಣ


    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ – 1,
    * ಬೆಳ್ಳುಳ್ಳಿ-2
    * ಶುಂಠಿ – ಸ್ವಲ್ಪ
    * ಮೆಣಸಿನಕಾಯಿ – 6
    * ಹುರಿಗಡಲೆ – 1 ಚಮಚ
    * ಗಸೆಗಸೆ- ಚಮಚ
    * ಚಕ್ಕೆ- 1
    * ಲವಂಗ -2
    * ದನಿಯಾ ಪುಡಿ- 2 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ತೆಂಗಿನತುರಿ- 1 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ಟೊಮೆಟೊ-1
    * ಮೆಂತ್ಯ ಸೊಪ್ಪು- ಸ್ವಲ್ಪ
    * ಅರಿಸಿಣ ಪುಡಿ – 1 ಚಮಚ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ


    ಮಾಡುವ ವಿಧಾನ:

    * ದನಿಯಾ ಪುಡಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹುರಿಗಡಲೆ, ಗಸೆಗಸೆ, ತೆಂಗಿನತುರಿ, ಈ ಎಲ್ಲಾ ಪದಾರ್ಥಗಳನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಬೇಕು.

    * ಕುಕರ್‍ಗೆ ಅಡುಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಲವಂಗ, ಚಕ್ಕೆ, ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ನಂತರ ನಾಟಿ ಕೋಳಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ ಹಾಕಿ 5 ನಿಮಿಷ ಬಾಡಿಸಿಕೊಳ್ಳಿ.

    * ಈಗ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್ ಕೂಗಿಸಿದರೆ ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಮುದ್ದೆಯೊಂದಿಗೆ ಸವಿಯಲು ಸಿದ್ಧವಾಗುತ್ತದೆ.

  • ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಗರಿಗರಿಯಾದ ಪಕೋಡವನ್ನು ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೆಕೆ ತಡ ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಗರಿ ಗರಿಯಾದ ಪಕೋಡಾವನ್ನು ಮಾಡುವ ಬನ್ನಿ.


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ
    * ಮೈದಾ- ಅರ್ಧ ಕಪ್
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಜೋಳದ ಹಿಟ್ಟು- 2 ಚಮಚ
    * ಮೊಟ್ಟೆ-1
    * ಖಾರದ ಪುಡಿ- 1 ಚಮಚ
    * ದನಿಯಾ ಪುಡಿ- 1ಚಮಚ
    * ಕರಿಮೆಣಸು- ಅರ್ಧ ಚಮಚ
    * ಅರಿಶಿಣ- ಅರ್ಧ ಚಮಚ
    * ಈರುಳ್ಳಿ- 2
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬೆಳ್ಳುಳ್ಳಿ- 1
    * ಶುಂಠಿ- ಸ್ವಲ್ಪ
    * ಹಸಿಮೆಣಸಿನಕಾಯಿ- 2
    * ಜೀರಿಗೆ- 1 ಚಮಚ
    * ಗರಂ ಮಸಾಲ ಪುಡಿ- ಅರ್ಧ ಚಮಚ
    * ಅಡುಗೆ ಸೋಡಾ- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ದನಿಯಾ, ಅರಿಶಿಣ, ಮೊಟ್ಟೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಚಿಕನ್ ಮಸಾಲ, ಗರಂ ಮಸಾಲ, ಇಂಗು, ಬೇಕಿಂಗ್ ಪೌಡರ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.
    * ನಂತರ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಸಾಲೆಯೊಂದಿಗೆ ಮಿಶ್ರಣ ಮಾಡಿಕೊಂಡು, ಮಾಂಸಜೊತೆಗೆ ಮಸಾಲೆ ಸೇರಿಕೊಳ್ಳಲು ಕೆಲವು ಸಮಯ ಇಟ್ಟಿರಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಬಳಿಕ ಮಾಂಸದ ತುಂಡುಗಳನ್ನು ಒಂದೊಂದಾಗಿಯೇ ಎಣ್ಣೆಯಲ್ಲಿ ಬಿಡಿ. ಪಕೋಡವು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು. ಈಗ ರುಚಿಯಾದ ಪಕೋಡ ಸವಿಯಲು ಸಿದ್ಧವಾಗುತ್ತದೆ.

  • ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ನೀವು ಎಗ್ ಬುರ್ಜಿ, ಎಗ್ ರೋಸ್ಟ್ ಎಲ್ಲಾ ಮಾಡಿದ್ದರೆ ಇದೊಂದು ಸರಳವಾದ ರೆಸಿಪಿ ಟ್ರೈ ಮಾಡಿ ನೋಡಿ, ರುಚಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಮೊಟ್ಟೆಯನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು, ನೀವು ಮೊಟ್ಟೆಯಿಂದ ಸಾರು ಅಥವಾ ಬುರ್ಜಿ ಮಾಡುವಾಗ ಕೆಲವು ಮಸಾಲೆಯನ್ನು ಹಾಕಿದರೆ ಅದೇ ವಿಭಿನ್ನವಾದ ರುಚಿಯನ್ನು ಕೊಡುತ್ತದೆ. ನಾವು ಇಂದು ಮನೆಯಲ್ಲಿಯೇ ಇರುವ ಕೆಲವೇ ಸಾಮಗ್ರಿಗಳು ಬಳಸಿಕೊಂಡು ರುಚಿಯಾಗಿ ಮಾಡುವ ಮೊಟ್ಟೆ ಪಲ್ಯ ಮಾಡುವ ವಿಧಾನ ಇಲ್ಲಿದೆ.


    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆ – 4
    * ಕ್ಯಾಪ್ಸಿಕಂ -1 (ಇದರ ಬೀಜ ಹಾಕಬೇಡಿ)
    * ಟೊಮೆಟೊ -1
    * ಅಡುಗೆ ಎಣ್ಣೆ -4 ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ಜೀರಿಗೆ ಪುಡಿ -1 ಚಮಚ
    * ರುಚಿಗೆ ತಕ್ಕ ಉಪ್ಪು
    * ಖಾರದ ಪುಡಿ – 1 ಚಮಚ
    * ಕಸೂರಿ ಮೇಥಿ – 1 ಚಮಚ
    * ಎಗ್ ಮಸಾಲ 1 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಮೊದಲು ಮೊಟ್ಟೆಗಳನ್ನು ಬೇಯಿಸಿ ಕಟ್ ಮಾಡಿ ಇಟ್ಟುಕೊಳ್ಳಿ
    * ಒಂದು ಬಾಣಲೆ ತೆಗೆದುಕೊಂಡು ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ

    * ಎಣ್ಣೆ ಬಿಸಿಯಾದಾಗ ಕತ್ತರಿಸಿದ ಕ್ಯಾಪ್ಸಿಕಂ, ಟೊಮೆಟೊ, ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.
    * ನಂತರ ಕಸೂರಿ ಮೇಥಿಯನ್ನು ಕೈಯಲ್ಲೇ ಪುಡಿ ಮಾಡಿ ಹಾಕಿ. ಇದನ್ನೂ ಓದಿ: ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

    * ಈಗ ಕತ್ತರಿಸಿದ ಮೊಟ್ಟೆಯನ್ನು ಮಸಾಲೆಗೆ ಹಾಕಿ.
    * ಈಗ ಒಂದು ಚಮಚ ಎಗ್ ಮಸಾಲ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ

    ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ

    ಮೊಟ್ಟೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಈ ಮೊಟ್ಟೆಯನ್ನು ಉಪಯೋಗಿಸಿಕೊಂಡು ಬಿರಿಯಾನಿ, ಮಂಚೂರಿ, ಆಮ್ಲೆಟ್ ಮಾಡುತ್ತೇವೆ. ಆದರೆ ನಾವು ಇಂದು ಹೇಳುವ ಸರಳ ವಿಧಾನವಾಗಿ ಮೊಟ್ಟೆ ಗ್ರೇವಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಬಿಸಿ-ಬಿಸಿಯಾದ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬನ್ನಿ ಈ ಮೊಟ್ಟೆ ಗ್ರೇವಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆ -6
    * ಅರಿಶಿಣ ಪುಡಿ
    * ಖಾರದ ಪುಡಿ ಚಮಚ
    * ಅಡುಗೆ ಎಣ್ಣೆ
    * ಸಾಸಿವೆ _ ಅರ್ಧ ಚಮಚ
    * ಮೆಂತೆ- ಅರ್ಧ ಚಮಚ
    * ಜೀರಿಗೆ -ಅರ್ಧ ಚಮಚ
    * ಒಣ ಮೆಣಸು-2
    * ಹಸಿ ಮೆಣಸು 1-2
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್-1 ಚಮಚ
    * ಈರುಳ್ಳಿ -1
    * ದನಿಯಾ ಪುಡಿ -ಅರ್ಧ ಚಮಚ
    * ಜೀರಿಗೆ ಪುಡಿ- ಅರ್ಧ ಚಮಚ
    * ಹುಣಸೆ ಹಣ್ಣಿನ ರಸ- 2 ಚಮಚ
    * ರುಚಿಗೆ ತಕ್ಕ ಉಪ್ಪು ಸ್ವಲ್ಪ
    * ಕೊತ್ತಂಬರಿ ಸೊಪ್ಪು

    ಮಾಡುವ ವಿಧಾನ:
    * ಬೇಯಿಸಿದ ಮೊಟ್ಟೆಗಳನ್ನು ಸಮ ಅರ್ಧ ಭಾಗಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.

    * ನಂತರ ಒಂದು ಪಾತ್ರೆಗೆ ಅರಿಶಿಣ ಪುಡಿ ಮತ್ತು ಮೆಣಸಿನ ಪುಡಿ, ಅಡುಗೆ ಎಣ್ಣೆ, ಬೇಯಿಸಿದ ಮೊಟ್ಟೆ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಬೇಕು.

    * ಈಗ ಮತ್ತೋಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಅದರಲ್ಲಿ ಸಾಸಿವೆ ಹಾಕಿ ನಂತರ ಮೆಂತೆ, ಜೀರಿಗೆ, ಒಣ ಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್. ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ:  ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    * ನಂತರ ಅರಿಶಿಣ, ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಸೌಟ್ ನಿಂದ ಆಡಿಸಿ. ನಂತರ 1/4 ಕಪ್ ನೀರು ಸೇರಿಸಿ, ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಮೊಟ್ಟೆ ಹಾಕಿ 2 ನಿಮಿಷ ಬಿಸಿ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.