Tag: non veg

  • ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

    ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

    ಬಿರಿಯಾನಿ, ಕಬಾಬ್, ಪ್ರೈ ಪ್ರತಿ ವಾರ ಮಾಡಿ ತಿಂತಾನೇ ಇರ್ತಿರಾ. ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು. ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ.

    ಬೇಕಾಗುವ ಸಾಮಗ್ರಿಗಳು:
    * ಮಟನ್ ಖೀಮಾ- ಅರ್ಧ ಕೆಜಿ
    * ಲಿವರ್- ಕಾಲು ಕೆಜಿ
    * ಈರುಳ್ಳಿ- 3
    * ಬೆಳ್ಳುಳ್ಳಿ-1
    * ಶುಂಠಿ – ಸ್ವಲ್ಪ
    * ಹಸಿಮೆಣಸಿನ ಕಾಯಿ-1
    * ಜೀರಿಗೆ- 1 ಚಮಚ
    * ಕರಿಮೆಣಸಿನಕಾಳು- 1 ಚಮಚ
    * ಚಕ್ಕೆ, ಲವಂಗ
    * ಕೆಂಪು ಮೆಣಸಿನ ಪುಡಿ -1 ಚಮಚ
    * ದನಿಯಾ- 1 ಚಮಚ
    * ಟೊಮೆಟೋ- 1
    * ಮೊಸರು- 2 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಅಡುಗೆಎಣ್ಣೆ 2 ಚಮಚ
    * ಪಲಾವ್ ಎಲೆ -1
    * ರುಚಿಗೆ ತಕ್ಕ ಉಪ್ಪು

    ಮಾಡುವ ವಿಧಾನ:
    * ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೆನೆಯಲು ಬಿಡಿ.

    * ಬಳಿಕ ಮಟನ್ ಖೀಮಾ, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    * ನಂತರ ಈರುಳ್ಳಿ , ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಬಳಿಕ ಇದನ್ನೂ ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.

    * ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ, ಪಲಾವ್ ಎಲೆ, ಈರುಳ್ಳಿ, ಖೀಮಾ ಮತ್ತು ಲಿವರ್, ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

    * ಟೊಮೆಟೊ, ಕೊತ್ತಂಬರಿ ಸೊಪ್ಪು , ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ಬೇಯಿಸಬೇಕು. ನಂತರ 2 ಚಮಚ ಮೊಸರು, ಈಗಾಗಲೇ ತಯಾರಿಸಿದ ಮಸಾಲೆಯನ್ನು ಹಾಕಿ ಬೇಯಿಸಿದರೆ ರುಚಿಯಾದ ಖೀಮಾ ಸವಿಯಲು ಸಿದ್ಧವಾಗುತ್ತದೆ.

  • ಮಟನ್ ಅಂದ್ರೆ ಇಷ್ಟಾನಾ? ಮಟನ್ ಕೈಮಾ ಉಂಡೆ ಸಾಂಬಾರ್‌ ಒಮ್ಮೆ ಟ್ರೈ ಮಾಡಿ

    ಮಟನ್ ಅಂದ್ರೆ ಇಷ್ಟಾನಾ? ಮಟನ್ ಕೈಮಾ ಉಂಡೆ ಸಾಂಬಾರ್‌ ಒಮ್ಮೆ ಟ್ರೈ ಮಾಡಿ

    ಳಿಗಾಲದ ಸಂದರ್ಭದಲ್ಲಿ ನಾಲಿಗೆಯು ರುಚಿ ರುಚಿಯಾದ ಖಾದ್ಯವನ್ನು ಸೇವಿಸಲು ಬಯಸುತ್ತದೆ. ನಾನ್‌ವೆಜ್ ಪ್ರಿಯರಿಗಂತು ನಾನ್‌ವೆಜ್ ಪದಾರ್ಥಗಳ ಪರಿಮಳ ಮೂಗಿಗೆ ಸೋಕಿದಾಗ ಬಾಯಲ್ಲಿ ನೀರೂರುತ್ತದೆ. ಹಾಗಾದ್ರೆ ಮಟನ್ ಕೈಮಾ ಉಂಡೆ ಸಾಂಬಾರ್‌ ನ್ನು ನೀವು ಎಂದಾದರೂ ಊಟ, ರೊಟ್ಟಿಗೆ ಹಾಕಿ ತಿಂದಿದ್ದೀರಾ? ಇಲ್ಲವಾದಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ಊಟದೊಂದಿಗೆ ಮಿಶ್ರಣ ಮಾಡಿ ತಿನ್ನಿ. ಈ ಮಟನ್ ಕೈಮಾ ಉಂಡೆ ಸಾಂಬಾರು ಮಾಡುವ ವಿಧಾನ ನಿಮಗಾಗಿ.

    ಉಂಡೆಗೆ ಬೇಕಾಗುವ ಸಾಮಾಗ್ರಿಗಳು:
    * ಮಟನ್ – 500 ಗ್ರಾಂ
    * ಮಟನ್ ಮೂಳೆ
    * ಕೊತ್ತಂಬರಿ ಪುಡಿ – 1 ಚಮಚ
    * ಕೊಬ್ಬರಿ – ಸ್ವಲ್ಪ
    * ಬೆಳ್ಳುಳ್ಳಿ – 1
    * ಖಾರದ ಪುಡಿ – 1 ಚಮಚ
    * ಕರಿಮೆಣಸು – ಸ್ವಲ್ಪ
    * ಚಕ್ಕೆ – 4
    * ಲವಂಗ – 4
    * ಮೊಟ್ಟೆ – 1
    * ಕರಿಕಡಲೆ – ಸ್ವಲ್ಪ
    * ತೆಂಗಿನ ಕಾಯಿ – 1
    * ಈರುಳ್ಳಿ – 1
    * ಬೆಳ್ಳುಳ್ಳಿ – 1
    * ಟೊಮೆಟೋ – 1
    * ಗಸಗಸೆ – ಸ್ವಲ್ಪ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಎಣ್ಣೆ ಸ್ವಲ್ಪ
    * ಉಪ್ಪು ರುಚಿಗೆ ತಕ್ಕಷ್ಟು ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮಟನ್, ಮಟನ್ ಮೂಳೆ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಕೊಬ್ಬರಿ, ಕರಿಮೆಣಸು, ಚಕ್ಕೆ, ಲವಂಗ ಪದಾರ್ಥಗಳನ್ನು ನೀರು ಹಾಕದೇ ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ


    * ಕರಿಕಡಲೆಯನ್ನು ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು.

    * ನಂತರ ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು ಹುರಿಕಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.

    * ನಂತರ ಕುಕ್ಕರನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    * ಬಳಿಕ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಟೊಮೆಟೋ, ಗಸಗಸೆ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
    * ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಬೇಕು.

    * ಕುದಿಯುತ್ತಿರುವ ಮಸಾಲೆಗೆ ಈಗಾಗಲೇ ಮಾಡಿಟ್ಟಿರುವ ಉಂಡೆಗಳನ್ನು ಹಾಕಿ 10-15 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕೈಮಾ ಉಂಡೆ ಸಾರು ಸಿದ್ಧವಾಗುತ್ತದೆ.

  • ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಟನ್, ಚಿಕನ್, ಫಿಶ್, ಮೊಟ್ಟೆ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ನಾವು ಇಂದು ಹೇಳಿರುವ ಹಂದಿ ಮಾಂಸದ ಗ್ರೇವಿಯನ್ನು ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹಂದಿ ಮಾಂಸ – 1ಕೆಜಿ
    * ಒಣ ಮೆಣಸಿನಕಾಯಿಗಳು – 12
    * ಬಿಸಿ ನೀರು – 2 ಕಪ್
    * ಹುಣಸೆ ಹಣ್ಣಿನ ರಸ – 1ಚಮಚ
    * ಅರಿಶಿಣ ಪುಡಿ – 1ಚಮಚ
    * ಈರುಳ್ಳಿ – 1
    * ಬೆಳ್ಳುಳ್ಳಿ – 2
    * ಶುಂಠಿ- ಸ್ವಲ್ಪ
    * ದಾಲ್ಚಿನಿ – 2
    * ಕರಿ ಬೇವು – ಸ್ವಲ್ಪ
    * ಮೆಂತ್ಯೆಕಾಳುಗಳು- ಸ್ವಲ್ಪ
    * ತೆಂಗಿನ ಹಾಲು – ಅರ್ಧ ಕಪ್
    * ತುಪ್ಪ- ಅರ್ಧ ಕಪ್
    *ನಿಂಬೆ ರಸ – 2 ಟೀ ಸ್ಪೂನ್ ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಮಾಡುವ ವಿಧಾನ:
    * ಒಣ ಮೆಣಸಿನಕಾಯಿಂದ ಬೀಜಗಳನ್ನು ಬೇರ್ಪಡಿಸಿ 10 ನಿಮಿಷ ಅರ್ಧ ಬಟ್ಟಲು ಬಿಸಿ ನೀರಿನಲ್ಲಿ ನೆನೆಸಿ.
    * ಹುಣಸೆ ಹಣ್ಣನ್ನ  ಉಳಿದಿರುವ ಬಿಸಿ ನೀರಿನಲ್ಲಿ ನೆನಸಿಟ್ಟಿರಬೇಕು.

    * ನಂತರ ಒಣಮೆಣಸಿನಕಾಯಿ, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ನಂತರ ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಹಂದಿ ಮಾಂಸ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆ ರಸ, ತೆಂಗಿನ ಹಾಲು, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಬೇಯಿಸಿಕೊಳ್ಳಿ.

    * ನಂತರ ಈ ಮೊದಲು ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಲು ಬಿಡಿ.
    * ನಂತರ ಇನ್ನೊಂದು ಬಾಣೆಲೆಯಲ್ಲಿ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ ಹಂದಿ ಮಾಂಸ ಮಸಾಲೆಗೆ ಒಗ್ಗರಣೆ ಮಾಡಿದರೆ ರುಚಿಯಾದ ಹಂದಿ ಮಾಂಸದ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ರುಚಿಕರವಾದ ಫಿಶ್ ಕಬಾಬ್ ಮಾಡುವುದು ಹೇಗೆ ಗೊತ್ತಾ?

    ರುಚಿಕರವಾದ ಫಿಶ್ ಕಬಾಬ್ ಮಾಡುವುದು ಹೇಗೆ ಗೊತ್ತಾ?

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಫಿಶ್‌ ಸಾಂಬಾರ್‌, ಫಿಶ್‌ ಫ್ರೈ ಮಾಡಿರುವ ನೀವು ಇಂದು ಫಿಶ್ ಕಬಾಬ್ ಮಾಡಲು ಟ್ರೈ ಮಾಡಿ.  ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಫಿಶ್ ಕಬಾಬ್‌ನ್ನು ಸರಳ ವಿಧಾನದ ಜೊತೆಗೆ ಮಾಡಬಹುದು.


    ಬೇಕಾಗುವ ಸಾಮಗ್ರಿಗಳು:
    * ಮೀನು- 1 ಕೆಜಿ
    * ನಿಂಬೆಹಣ್ಣಿನ ರಸ- 2 ಚಮಚ
    * ಕಡಲೆಹಿಟ್ಟು-1 ಕಪ್
    * ಬೆಳ್ಳುಳ್ಳಿ, ಶುಂಠಿ ಪೆಸ್ಟ್- ಸ್ವಲ್ಪ
    * ಹಸಿಹಸಿಮೆಣಸಿನ ಪೇಸ್ಟ್- ಚಮಚ
    * ದನಿಯಾ ಪುಡಿ- ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ಜೀರಿಗೆ ಪುಡಿ- 1 ಚಮಚ
    * ಗರಂಮಸಾಲೆ- ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಈರುಳ್ಳಿ-1
    * ಅಡುಗೆ ಎಣ್ಣೆ- 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದು ಒಣಗಿಸಿ ಬೌಲ್ ಒಂದರಲ್ಲಿ ಹಾಕಿ ಅದಕ್ಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಎಣ್ಣೆಯನ್ನು ಬಿಸಿಮಾಡಿ ಮೀನನ್ನು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಕರಿದುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ನಂತರ ಮೀನಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ


    * ಈ ಮಿಶ್ರಣವನ್ನು 30 ನಿಮಿಷ ಹಾಗೆ ಇಟ್ಟಿರಬೇಕು.
    * ನಂತರ ಕಡಲೆಹಿಟ್ಟು ಹಾಗೂ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಬಿಸಿ ಮಾಡಿ ಎಣ್ಣೆಯಲ್ಲಿ ಮೀನನ್ನು ಕರಿದರೆ ರುಚಿಯಾದ ಮೀನಿನ ಕಬಾಬ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

  • ಖಾರವಾದ ಮಸಾಲಾ ಚಿಕನ್ ಲೆಗ್ ಸಖತ್ ಟೇಸ್ಟ್

    ಖಾರವಾದ ಮಸಾಲಾ ಚಿಕನ್ ಲೆಗ್ ಸಖತ್ ಟೇಸ್ಟ್

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಮಸಾಲಾ ಚಿಕನ್ ಲೆಗ್‌ನ್ನು ಮನೆಯಲ್ಲಿಯೇ ಸುಲಭವಾಗಿ  ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    * ಚಿಕನ್ ಲೆಗ್ಸ್ – 4
    * ಕಾಳುಮೆಣಸು – 2 ಚಮಚ
    * ಶುಂಠಿ – ಸ್ವಲ್ಪ
    * ಬೆಳ್ಳುಳ್ಳಿ – 2
    * ಮೆಣಸಿನ ಪುಡಿ- 2 ಚಮಚ
    * ಚಿಕನ್ ಮಸಾಲಾ – 2 ಚಮಚ
    * ಗೋಧಿ ಹಿಟ್ಟು – ಅರ್ಧ ಕಪ್
    * ಅಡುಗೆ ಎಣ್ಣೆ – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಚಿಕನ್ ಮಸಾಲಾ- 1 ಪ್ಯಾಕೆಟ್ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಚಿಕನ್ ಲೆಗ್‍ಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ.
    * ಕಾಳುಮೆಣಸು, ಶುಂಠಿ, ಮೆಣಸಿನ ಹುಡಿ, ಹಾಗೂ ಬೆಳ್ಳುಳ್ಳಿ, ಚಿಕನ್ ಮಸಾಲಾವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಚಿಕನ್ ಕಾಲುಗಳಿಗೆ ಈ ಮಸಾಲಾ ಮಿಶ್ರಣವನ್ನು ಸವರಿ ಹಾಗೂ 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.
    * ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿದರೆ ಚಿಕನ್ ಮಸಾಲಾ ಚಿಕನ್ ಲೆಗ್ ಸವಿಯಲು ಸಿದ್ಧವಾಗುತ್ತದೆ.

  • ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಬಂಗುಡೆ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.  ಈ  ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಫಟಾಫಟ್‍ ಮಾಡಿ ಖಾರವಾದ ಚಿಕನ್ ಮಂಚೂರಿಯನ್

    ಫಟಾಫಟ್‍ ಮಾಡಿ ಖಾರವಾದ ಚಿಕನ್ ಮಂಚೂರಿಯನ್

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಬಗೆ ಬಗೆಯ ತಿನಿಸುಗಳಿವೆ. ಚಿಕನ್ ಮಂಚೂರಿಯನ್  ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಚಿಕನ್ ಮಂಚೂರಿಯನ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಕೋಳಿ ಮಾಂಸ (ಮೂಳೆ ಇಲ್ಲದ್ದು) – 1/2 ಕೆಜಿ
    * ಕಾರ್ನ್ ಫ್ಲೋರ್ – 1 ಕಪ್ *ಮೊಟ್ಟೆಗಳು – 2
    * ಹಸಿ ಮೆಣಸಿನ ಕಾಯಿ -4
    * ಸೋಯಾ ಸಾಸ್ – 3 ಚಮಚ
    * ಟೊಮೆಟೋ ಸಾಸ್ – 2 ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಬೆಳ್ಳುಳ್ಳಿ – 4 ತುಂಡು
    * ಶುಂಠಿ – ಸ್ವಲ್ಪ
    * ದಪ್ಪ ಮೆಣಸಿನಕಾಯಿ –
    * ಅಡುಗೆಎಣ್ಣೆ – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್‌, ಮೊಟ್ಟೆ,  ಹಸಿ ಮೆಣಸಿನ ಕಾಯಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿಗಳ ಪೇಸ್ಟನ್ನು ಹಾಕಿ ಅದಕ್ಕೆ 1/2 ಲೋಟ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕೋಳಿ ಮಾಂಸದ ತುಂಡುಗಳನ್ನು ಈ ಮೊದಲು ತಯಾರಿಸಿದ ಮಿಶ್ರಣದಲ್ಲಿ ಚೆನ್ನಾಗಿ ನೆನೆಸಿ ಎಣ್ಣೆಯಲ್ಲಿ ಅವುಗಳನ್ನು ಬಿಡಿ. ಈಗ ಕೋಳಿ ಮಾಂಸದ ತುಂಡುಗಳನ್ನು ಡೀಪ್ ಫ್ರೈ ಮಾಡಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ತದನಂತರ ಅಡುಗೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಬಿಸಿಯಾಗಲು ಬಿಡಿ, ಇದರ ಮೇಲೆ ಶುಂಠಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೋ ಸಾಸ್, 1 ಕಪ್ ನೀರು ಹಾಕಿ ಮತ್ತು ನಂತರ ಫ್ರೈ ಮಾಡಿದ ಕೋಳಿ ಮಾಂಸದ ತುಂಡುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ರುಚಿಯಾದ ಚಿಕನ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

  • ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ

    ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ದೋಸೆಯನ್ನು ನಾವ್ ವೆಜ್ ಹಾಕಿಯೂ ಮಾಡಬಹುದು. ಅದರಲ್ಲಿ ಚಿಕನ್ ದೋಸೆ ಮತ್ತು ಮಟನ್ ದೋಸೆಯನ್ನು ಹೆಚ್ಚಾಗಿ ಮಾಡಲಾಗುವುದು. ನಾನ್ ವೆಜ್ ದೋಸೆ ತಯಾರಿಸಿ, ನಾನ್ ವೆಜ್ ಗ್ರೇವಿ ಜೊತೆ ಸವಿಯಲು ಸ್ವಾದಿಷ್ಟಕರವಾಗಿರುತ್ತದೆ. ಹೀಗಾಗಿ ಮಟನ್ ದೋಸೆ ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ -1 ಕಪ್
    * ಮಟನ್ ಖೀಮಾ -1 ಕಪ್
    * ಬಟಾಣಿ -ಅರ್ಧ ಕಪ್
    * ಹಸಿ ಮೆಣಸಿನಕಾಯಿ – 2
    * ಅರಿಶಿಣ ಪುಡಿ -ಅರ್ಧ ಚಮಚ
    * ಖಾರದ ಪುಡಿ- 1 ಚಮಚ
    * ಗರಂ ಮಸಾಲ- ಅರ್ಧ ಚಮಚ
    * ಕರಿಮೆಣಸಿನ ಪುಡಿ- 1 ಚಮಚ
    * ಕರಿಬೇವಿನ ಎಲೆ- ಸ್ವಲ್ಪ
    * ಚಕ್ಕೆ, ಲವಂಗ 2
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 5-6 ಗಂಟೆಗಳ ನೀರಿನಲ್ಲಿ ನೆನೆ ಹಾಕಿ. ನಂತರ ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ದೋಸೆಯ ಹದಕ್ಕೆ ರುಬ್ಬಿಟ್ಟುಕೊಳ್ಳಬೇಕು.

    * ತವಾಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ ಹಾಕಿ, ನಂತರ ಹಸಿ ಮೆಣಸಿನ ಕಾಯಿ, ಕರಿ ಬೇವಿನ ಎಲೆ ಹಾಕಿ 2 ನಿಮಿಷ ಫ್ರೈ ಮಾಡಿ, ಮಟನ್ ಖೀಮಾ, ಕರಿ ಮೆಣಸಿನ ಪುಡಿ, ಖಾರದ ಪುಡಿ, ಗರಂ ಮಸಾಲ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಮಟನ್ ಅರ್ಧ ಬೆಂದಾಗ ಬಟಾಣಿ ಹಾಕಿ ಸೌಟ್ ನಿಂದ ಆಡಿಸಿ ಪುನಃ ಬೇಯಿಸಿ, ಮಟನ್ ಬೆಂದು ಅದರಲ್ಲಿರುವ ನೀರಿನಂಶ ಆವಿಯಾಗಿ ಸಂಪೂರ್ಣ ಡ್ರೈಯಾಗುವವರೆಗೆ ಬೇಯಿಸಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಈ ಮಿಶ್ರಣವನ್ನು ದೋಸೆ ಹಿಟ್ಟಿನ ಜೊತೆ ಹಾಕಿ ಮಿಕ್ಸ್ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ಈಗ ದೋಸಾ ತವಾವನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಸವರಿ, ದೋಸೆ ಹುಯ್ಯಿರಿ. ನಂತರ ಪಾತ್ರೆಯ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿದರೆ ದೋಸೆಯನ್ನು ಮಟನ್ ಗ್ರೇವಿ ಜೊತೆ ಸವಿಯಲು ರುಚಿಯಾಗಿರುತ್ತದೆ.

  • ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಳಿಗಾಲ ಬಂತೆಂದರೆ ಸಾಕು ಮಾಂಸಾಹಾರ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಮಟನ್ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಟೊಮೆಟೋ- 1
    * ಕರಿಬೇವಿನ ಎಲೆಗಳು- ಸ್ವಲ್ಪ
    * ಎಳ್ಳಿನ ಎಣ್ಣೆ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಆಲೂಗಡ್ಡೆ- 1
    * ಕಾಳುಮೆಣಸು- 1 ಟೀಸ್ಪೂನ್
    * ಜೀರಿಗೆ- 2 ಟೀಸ್ಪೂನ್
    * ಶುಂಠಿ ಸ್ವಲ್ಪ
    * ಬೆಳ್ಳುಳ್ಳಿ – 2
    * ಅರಿಶಿಣ ಪುಡಿ- 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಮಟನ್ ಸ್ವಚ್ಛ ಮಾಡಿಕೊಳ್ಳಬೇಕು.
    * ಟೊಮೆಟೋ, ಆಲೂಗಡ್ಡೆ, ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಅರಿಶಿಣವನ್ನು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಕುಕ್ಕರಲ್ಲಿ ಅಡುಗೆ ಎಣ್ಣೆ, ಮಟನ್ ತುಂಡುಗಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು.


    * ಮಟ್ಟನ್ ಬೇಯಿಸಿದ ನಂತರ ಎಳ್ಳಿನ ಎಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಟ್ಟನ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ:  ಗುಜರಾತ್‌ ಸಿಎಂ ಸಮರ್ಥನೆ

    ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ

    – ಬಿಜೆಪಿ ಸರ್ಕಾರಕ್ಕೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ಅಸಮಾಧಾನ ಇಲ್ಲ

    ಗಾಂಧಿನಗರ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧವಿದೆ. ಆದರೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಬಿಜೆಪಿ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

    ಆನಂದ್ ಜಿಲ್ಲೆಯ ಬಂಧಾನಿ ಗ್ರಾಮದಲ್ಲಿ ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಒಂದಷ್ಟು ಜನರು ಸಸ್ಯಾಹಾರ ತಿನ್ನುತ್ತಾರೆ. ಇನ್ನೊಂದಷ್ಟು ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಆದರೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಬಿಜೆಪಿ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ. ಆದರೆ ಕೆಲವು ಸ್ಥಳಗಳಲ್ಲಿ ಇರುವ ಆಹಾರ ಮಾರಾಟ ಅಂಗಡಿ, ಕೈಗಾಡಿಗಳನ್ನು ತೆಗೆಯಬೇಕೆಂದು ಬೇಡಿಕೆ ಇದೆ. ಹೀಗಾಗಿ ಈ ಆದೇಶ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.

    ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಅನೇಕರು ಸ್ವಚ್ಛತೆ ನಿರ್ವಹಣೆ ಮಾಡದಿರುವುದು ನಮಗೆ ಆತಂಕ ತಂದಿದೆ. ವಾಹನ ಮತ್ತು ಜನರ ಸಂಚಾರಕ್ಕೆ ಅನಾನೂಕೂಲ ಮಾಡುವ ಕೈಗಾಡಿಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ಬಿಜೆಪಿ ಅಧಿಕಾರದಲ್ಲಿರುವ ಅಹ್ಮದಾಬಾದ್ ನಗರಾಡಳಿತ ಹೀಗೊಂದು ರೂಲ್ಸ್ ಮಾಡಿದೆ. ರಸ್ತೆ ಬದಿಯಲ್ಲಿ ಮತ್ತು ಶಾಲೆ, ಧಾರ್ಮಿಕ ಸ್ಥಳಗಳಿಂದ 100 ಮೀಟರ್ ಅಂತರದಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಅದನ್ನು ಈ ಹೇಳಿಕೆಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಬರೀ ಅಹ್ಮದಾಬಾದ್ ಅಷ್ಟೇ ಅಲ್ಲ, ವಡೋದರ, ರಾಜಕೋಟ್, ಭಾವ್‍ನಗರಗಳಲ್ಲೂ ಸ್ಥಳೀಯ ರಾಜಕೀಯ ಮುಖಂಡರು ಇದೇ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್