Tag: non veg

  • ವೆರೈಟಿಯಾಗಿ ಮಾಡಿ ಗಾರ್ಲಿಕ್‌ ಚಿಕನ್‌, ಆರೋಗ್ಯಕ್ಕೂ ಒಳ್ಳೇದು..

    ವೆರೈಟಿಯಾಗಿ ಮಾಡಿ ಗಾರ್ಲಿಕ್‌ ಚಿಕನ್‌, ಆರೋಗ್ಯಕ್ಕೂ ಒಳ್ಳೇದು..

    ಸಾಮಾನ್ಯವಾಗಿ ಚಿಕನ್‌ ಅನ್ನು ಕಬಾಬ್, ಚಿಕನ್ ಪೆಪ್ಪರ್, ಚಿಕನ್ ಬಿರಿಯಾನಿ ಹೀಗೆ ವಿವಿಧ ರೀತಿಯಲ್ಲಿ ಮಾಡುತ್ತಾರೆ. ಜೊತೆಗೆ ಗಾರ್ಲಿಕ್ ಚಿಕನ್ ಕೂಡ ಮಾಡುತ್ತಾರೆ. ಆದ್ರೆ ಈ ಗಾರ್ಲಿಕ್ ಚಿಕನ್ ಮಾಡೋಕು ಸುಲಭ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.               

    ಬೇಕಾಗುವ ಸಾಮಾಗ್ರಿಗಳು:
    – ಚಿಕನ್
    * ಬೆಳ್ಳುಳ್ಳಿ
    * ಈರುಳ್ಳಿ
    * ಹಸಿಮೆಣಸಿನಕಾಯಿ
    * ಶುಂಠಿ
    * ಕರಿ ಮೆಣಸು
    * ಅರಿಶಿನ ಪುಡಿ
    * ಉಪ್ಪು
    * ಎಣ್ಣೆ
    * ಕೊತ್ತಂಬರಿ ಎಲೆ
    * ನಿಂಬೆ ರಸ

    ತಯಾರಿಸುವ ವಿಧಾನ:
    – ಮಾಂಸ ಮ್ಯಾರಿನೇಟ್ ಮಾಡುವುದು:
    ಸಣ್ಣದಾಗಿ ಕತ್ತರಿಸಿದ ಚಿಕನ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಬೇಕು. ಅದಕ್ಕೆ ಉಪ್ಪು, ಅರಿಶಿನ, ಕಪ್ಪು ಮೆಣಸು ಪುಡಿ, ಚಿಕ್ಕದಾಗಿ ಕತ್ತರಿಸಿದ ಅರ್ಧ ಬೆಳ್ಳುಳ್ಳಿ, ಅರ್ಧ ಶುಂಠಿ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷ ಬಿಡಿ.

    – ಎಣ್ಣೆ ಬಿಸಿ ಮಾಡುವುದು
    ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಮೊದಲಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ. ನಂತರ ಈರುಳ್ಳಿ ಮತ್ತು ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ. ಇದಕ್ಕೆ ಮ್ಯಾರಿನೆಟ್ ಮಾಡಿದ ಚಿಕನ್ ಸೇರಿಸಿ. ಬಣ್ಣ ಬದಲಾದ ನಂತರ ಸ್ವಲ್ಪ ನೀರು ಹಾಕಿ ಮುಚ್ಚಿ 10-15 ನಿಮಿಷ ಬೇಯಿಸಿ.

    – ಗಾರ್‍ಲಿಕ್ ಫ್ಲೇವರ್ ಮಾಡಿಕೊಳ್ಳುವುದು
    ಬೇಯಿಸಿದ ಮೇಲೆ ಕೊನೆಯಲ್ಲಿ ಮತ್ತಷ್ಟು ಬೆಳ್ಳುಳ್ಳಿ ಹಾಕಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸೇರಿಸಿ ಚೆನ್ನಾಗಿ ಹುರಿಯಿರಿ. ಇದು ಗಾರ್‍ಲಿಕ್ ರುಚಿಯನ್ನು ಹೆಚ್ಚಿಸುತ್ತದೆ. ಕೊನೆಗೆ ತಯಾರಾದ ಚಿಕನ್ ಮೇಲೆ ಕೊತ್ತಂಬರಿ ಎಲೆ ಹಾಕಿ ಅಲಂಕರಿಸಿ ಬಿಸಿ ಬಿಸಿ ಚಪಾತಿ, ಪರೋಟಾ ಅಥವಾ ಅನ್ನದ ಜೊತೆಗೆ ಸವಿಯಿರಿ.

    ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ದೇಹದಲ್ಲಿ ಕೊಬ್ಬಿನಾಂಶವನ್ನು ನಿಯಂತ್ರಿಸುತ್ತದೆ

  • ಚಿಕನ್‌ ವೆರೈಟಿ ಕೋತು ಪರೋಟಾ ಮಾಡಿ…. ತಿನ್ನಿರಿ

    ಚಿಕನ್‌ ವೆರೈಟಿ ಕೋತು ಪರೋಟಾ ಮಾಡಿ…. ತಿನ್ನಿರಿ

    ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಬೀದಿಬದಿ ಆಹಾರದಲ್ಲಿ ಇದು ಒಂದು. ಇದನ್ನು ಚೂರುಚೂರು ಮಾಡಿದ ಪರೋಟಾ ಮತ್ತು ಚಿಕನ್‌ನಿಂದ ತಯಾರಿಸಲಾಗುತ್ತದೆ, ಚಿಕನ್‌ನಲ್ಲಿ ವೆರೈಟಿಯಾಗಿ ಮಾಡಲಾಗುವ ರುಚಿಕರವಾದ ಖಾದ್ಯವಿದು. ಸಕತ್‌ ಸ್ವಾದಿಷ್ಟವಾಗಿಯೂ ಹಾಗೂ ಬೇಗನೇ ಮಾಡಲು ಹೇಳಿ ಮಾಡಿಸಿದ ಅಡುಗೆಯಾಗಿದೆ.

    ಬೇಕಾಗುವ ಪದಾರ್ಥಗಳು:
    ಪರೋಟಾ: 2-3
    ಚಿಕನ್: 1 ಕಪ್ (ಉಳಿದ ಚಿಕನ್ ಕರಿ ಅಥವಾ ಬೇಯಿಸಿದ ಚಿಕನ್)
    ಈರುಳ್ಳಿ: 1
    ಟೊಮೆಟೊ: 1
    ಹಸಿರು ಮೆಣಸಿನಕಾಯಿ: 2-3
    ಬೆಳ್ಳುಳ್ಳಿ: 2-3 ಎಸಳು
    ಶುಂಠಿ: 1 ಇಂಚು (ಪುಡಿಮಾಡಿದ)
    ಗರಂ ಮಸಾಲಾ: 1/2 ಚಮಚ
    ಮೆಣಸಿನ ಪುಡಿ: 1/2 ಚಮಚ (ರುಚಿಗೆ ತಕ್ಕಂತೆ)
    ಅರಿಶಿನ ಪುಡಿ: 1/4 ಚಮಚ
    ಕೊತ್ತಂಬರಿ ಸೊಪ್ಪು: ಸ್ವಲ್ಪ
    ಕರಿಬೇವಿನ ಎಲೆಗಳು: ಸ್ವಲ್ಪ
    ಎಣ್ಣೆ: 2 ಚಮಚ
    ಉಪ್ಪು: ರುಚಿಗೆ ತಕ್ಕಂತೆ
    ನಿಂಬೆ ರಸ: 1 ಚಮಚ

    ಮಾಡುವ ವಿಧಾನ:
    ಉಳಿದ ಅಥವಾ ಮಾಡಿಟ್ಟ ಪರೋಟಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸ್ವಲ್ಪ ನೀರು ಬಳಸಿ ಅದನ್ನು ಮತ್ತೆಗೆ ಮಾಡಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಹುರಿಯಿರಿ. ಈರುಳ್ಳಿ ಗೋಲ್ಡನ್ ಬ್ರೌನ್ ಆದ ನಂತರ, ಟೊಮೆಟೊ ಸೇರಿಸಿ ಮತ್ತು ಮೆತ್ತಗಾಗುವವರೆಗೆ ಬೇಯಿಸಿ. ನಂತರ ಗರಂ ಮಸಾಲಾ, ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿದ ಚಿಕನ್ ಮತ್ತು ಕಟ್‌ ಮಾಡಿಟ್ಟ ಪರೋಟಾವನ್ನು ಬಾಣಲೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಸುಮಾರು 5-7 ನಿಮಿಷಗಳ ಕಾಲ ಬೇಯಿಸಿ. ಕರಿಬೇವಿನ ಎಲೆಗಳನ್ನು ಸೇರಿಸಿ, ನಿಂಬೆ ರಸವನ್ನು ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

    ಬಿಸಿ ಬಿಸಿಯಾಗಿರುವಾಗ ಈ ರುಚಿಕರವಾದ ಚಿಕನ್ ಕೋತು ಪರೋಟಾವನ್ನು ತಿನ್ನಿರಿ. ಇದು ಸರಳವಾದ ಪಾಕವಿಧಾನವಾಗಿದ್ದು, ನಿಮಗೆ ಬೇಕಾದಂತೆ ಮಸಾಲೆಗಳನ್ನು ಸೇರಿಸಿಕೊಳ್ಳಬಹುದು. ಇದಕ್ಕೆ ಉಳಿದ ಚಿಕನ್ ಗ್ರೇವಿಯನ್ನು ಕೂಡ ಬಳಸಬಹುದು.

  • ಆರೋಗ್ಯಕ್ಕೂ, ಬಾಯಿಗೂ ಹಿತ ನೀಡೋ ಥಾಯ್‌ ಫಿಶ್‌ ನೂಡಲ್ಸ್‌ ತಿಂದು ನೋಡಿ….

    ಆರೋಗ್ಯಕ್ಕೂ, ಬಾಯಿಗೂ ಹಿತ ನೀಡೋ ಥಾಯ್‌ ಫಿಶ್‌ ನೂಡಲ್ಸ್‌ ತಿಂದು ನೋಡಿ….

    ಪ್ರತಿದಿನವೂ ನಮಗೆಲ್ಲರಿಗೂ ಹೊಸ ದಿನ ಎಂಬಂತೆ. ತಿನ್ನುವ ವಿಷಯದಲ್ಲಿಯೂ ಪ್ರತಿದಿನವೂ ಹೊಸ ಅಡುಗೆ, ಖಾದ್ಯಗಳನ್ನು ಸವಿಯಬೇಕು. ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್‌, ಇಟಾಲಿಯನ್‌, ಮೆಕ್ಸಿಕನ್‌ ಹೀಗೆ ವಿಧ ವಿಧವಾದ ಖಾದ್ಯಗಳಿವೆ. ಹಾಗೆಯೇ ಚೀನಿಯರ ಹಳೆಯದಾದ ಹಾಗೂ ಪ್ರಸಿದ್ಧವಾದ ಈ ಪದಾರ್ಥವನ್ನು ಮಾಡಿ ಒಮ್ಮೆ ಸವಿಯಿರಿ. ಜಾಸ್ತಿ ಸಮಯ ಬೇಡ. ಕೇವಲ 25 ನಿಮಿಷ ಸಾಕು. ಥಟ್‌ ಅಂತ ತಯಾರಾಗುತ್ತದೆ. ಕಡಿಮೆ ಕೊಬ್ಬಿನಂಶ ಹಾಗೂ ಹೆಚ್ಚು ಪ್ರೋಟೀನ್‌ ಅಂಶ ಹೊಂದಿರುವ ಇದನ್ನು ತಿಂದರೆ ಆರೋಗ್ಯಕ್ಕೂ ಒಳ್ಳೆಯದು.

    ಬೇಕಾಗುವ ಸಾಮಗ್ರಿಗಳು:
    ಈರುಳ್ಳಿ
    ಬೆಳ್ಳುಳ್ಳಿ
    ಜೀರಿಗೆ ಪುಡಿ
    ಒಣಗಿಸಿದ ಪುದಿನಾ ಪುಡಿ
    ಮೆಣಸಿನ ಪುಡಿ
    ಶುಂಠಿ ಪುಡಿ
    ಮೀನು
    ನೂಡಲ್ಸ್‌
    ಕೆಂಪು ಮತ್ತು ಹಳದಿ ದೊಡ್ಡ ಮೆಣಸಿನಕಾಯಿ
    ಕ್ಯಾರೆಟ್‌
    ನಿಂಬೆ ರಸ
    ಕೊತ್ತಂಬರಿ
    ಸೋಯಾ ಸಾಸ್‌
    ಎಣ್ಣೆ
    ಸೊಯಾಬೀನ್‌ ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ಮಸಾಲಾ ಪುಡಿಗಳನ್ನು ಸೊಯಾಬೀನ್‌ ಎಣ್ಣೆಯೊಂದಿಗೆ ಕಲಸಿಕೊಳ್ಳಬೇಕು. ಬಳಿಕ ಕಲಸಿದ ಮಿಶ್ರಣವನ್ನು ಕತ್ತರಿಸಿಟ್ಟ ಮೀನಿಗೆ ಹಚ್ಚಿಕೊಳ್ಳಬೇಕು. 10 ನಿಮಿಷ ಬಿಟ್ಟು ಮೀನನ್ನು ಮೈಕ್ರೋ ಓವೆನ್‌ನಲ್ಲಿ ಫ್ರೈ ಮಾಡಿಕೊಳ್ಳಬೇಕು.

    ಒಂದು ಬಟ್ಟಲಿಗೆ ನಿಂಬೆ ರಸ ಹಾಕಿ, ಅದಕ್ಕೆ ಸೋಯಾ ಸಾಸ್‌ ಸೇರಿಸಿ ಮಿಕ್ಸ್‌ ಮಾಡಿಕೊಳ್ಳಬೇಕು. ಒಂದು ಕಡೆ ನೂಡಲ್ಸ್‌ನ್ನು ಸ್ವಲ್ಪ ಅರಿಶಿಣ ಹಾಕಿ, ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು.

    ನಂತರ ಒಂದು ಬಾಣಲಿಗೆ ಎಣ್ಣೆ ಹಾಕಿ, ಉದ್ದಾಗಿ ಕತ್ತರಿಸಿಕೊಂಡ ಈರುಳ್ಳಿ, ದೊಡ್ಡ ಮೆಣಸಿನಕಾಯಿ ಹಾಗೂ ಗಜ್ಜರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಬೇಯಿಸಿಟ್ಟ ನೂಡಲ್ಸ್‌ ಹಾಕಿಕೊಳ್ಳಬೇಕು. ನಂತರ ಮಿಕ್ಸ್‌ ಮಾಡಿಟ್ಟ ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ಒಂದು ತಟ್ಟೆಗೆ ಹಾಕಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ. ಬಳಿಕ ಅದರ ಮೇಲೆ ಫ್ರೈ ಮಾಡಿದ ಮೀನು ಇಟ್ಟರೇ ಥಾಯ್‌ ಫಿಶ್‌ ನೂಡಲ್ಸ್‌ ತಯಾರಾಗುತ್ತದೆ.

  • ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…

    ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…

    ಕೆಲವೊಮ್ಮೆ ನಾನ್ ವೆಜ್ ತಿನ್ನಬೇಕೆಂದು ತುಂಬಾ ಆಸೆ ಇರುತ್ತದೆ. ಆದರೆ ನಾನ್ ವೆಜ್ ಮಾಡುವುದೆಂದರೆ ಒಂದು ದೊಡ್ಡ ಕೆಲಸ. ವಿವಿಧ ರೀತಿಯ ಸಾಮಗ್ರಿಗಳು, ತುಂಬಾ ಸಮಯ ತೆಗೆದುಕೊಂಡು ಮಾಡೋದೇ ಬೇಡ ಎನಿಸುತ್ತದೆ. ಹೀಗಿರುವಾಗ ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಈ ನಾನ್ ವೆಜ್ ಪದಾರ್ಥವನ್ನು ತಯಾರಿಸಬಹುದು. ಸುಲಭವಾಗಿ ಕಡಿಮೆ ಸಮಯದಲ್ಲಿ ಚಿಕನ್ ಡ್ರಮ್ ಸ್ಟಿಕ್ ಈ ರೀತಿಯಾಗಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    ಚಿಕನ್ ಲೆಗ್ ಪೀಸ್
    ಮೊಸರು
    ಧನಿಯಾ ಪುಡಿ
    ಅರಿಶಿಣ
    ಕೆಂಪು ಖಾರದಪುಡಿ
    ಕಾಶ್ಮೀರಿ ಮಿರ್ಚಿ ಪುಡಿ
    ಗರಂ ಮಸಾಲ
    ಉಪ್ಪು
    ಎಣ್ಣೆ
    ಟೊಮೆಟೊ ಕೆಚಪ್

    ಮಾಡುವ ವಿಧಾನ:
    ಮೊದಲಿಗೆ ಚಿಕನ್ ಲೆಗ್ ಪೀಸ್ ಗಳನ್ನು ಚೆನ್ನಾಗಿ ತೊಳೆದು ಇಡಿ. ಒಂದು ಬಟ್ಟಲಿಗೆ ಮೊಸರು, ಅರಿಶಿಣ, ಕೆಂಪು ಖಾರದ ಪುಡಿ, ಕಾಶ್ಮೀರಿ ಮಿರ್ಚಿ ಪುಡಿ, ಗರಂ ಮಸಾಲ, ಧನಿಯ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಕೆಚಪ್ ಹಾಕಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ತೊಳೆದಿಟ್ಟ ಚಿಕನ್ ಲೆಗ್ ಪೀಸ್ ಗಳನ್ನು ಮಧ್ಯದಲ್ಲಿ ಚಾಕುವಿನಿಂದ ಚೆನ್ನಾಗಿ ಕತ್ತರಿಸಿಕೊಳ್ಳಿ.

    ಬಳಿಕ ತಯಾರಿಸಿಟ್ಟ ಮೊಸರಿನ ಮಿಶ್ರಣವನ್ನು ಚಿಕನ್ ಮೇಲೆ ಹಾಕಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ. ಚಿಕನ್ ಮಿಶ್ರಣವನ್ನು 90 ನಿಮಿಷ ಪಕ್ಕಕ್ಕಿರಿಸಿ. ಅದಾದ ಬಳಿಕ ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದರ ಮೇಲೆ ಚಿಕನ್ ಲೆಗ್ ಪೀಸ್ ಗಳನ್ನು ಇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

    ಆಗ ಬಿಸಿ ಬಿಸಿಯಾದ ಚಿಕನ್ ಡ್ರಮ್ ಸ್ಟಿಕ್ ತಯಾರಾಗುತ್ತದೆ. ಇದನ್ನು ನೀವು ಸಾಸ್ ಅಥವಾ ಮಯೋನಿಸ್ ಜೊತೆಗೆ ಸೇವಿಸಬಹುದು.

  • ಮನೆಯಲ್ಲೇ ‘ಬೋಟಿ ಗೊಜ್ಜು’ ಮಾಡಿ ಬಾಯಿ ಚಪ್ಪರಿಸಿ

    ಮನೆಯಲ್ಲೇ ‘ಬೋಟಿ ಗೊಜ್ಜು’ ಮಾಡಿ ಬಾಯಿ ಚಪ್ಪರಿಸಿ

    ನಾನ್ ವೆಜ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಜನರು ನೆಚ್ಚಿನ ಆಹಾರ ಸವಿಯಲು ಪ್ರತಿಷ್ಠಿಯ ಹೋಟೆಲ್‍ಗಳನ್ನೇ ಹುಡುಕಿಕೊಂಡು ಹೋಗ್ತಾರೆ. ಆದ್ರೆ ಇನ್ಮುಂದೆ ಹಾಗೇ ಮಾಡಬೇಕಾದ್ದೇ ಇಲ್ಲ. ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನು ಸುಲಭವಾಗಿ ತಯಾರಿಸಿ ಮನೆಯಲ್ಲಿಯೇ ಸವಿಯಬಹುದಾಗಿದೆ. ಅದರಲ್ಲಿಯೂ ಬೋಟಿ ಗೊಜ್ಜು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ. ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಮಿಲ್ಟ್ರಿ ಹೋಟೆಲ್‍ಗಳ ಮೆನುವಿನಲ್ಲಿ ಕಾಣ ಸಿಗುವ ಬೋಟಿ ಗೊಜ್ಜನ್ನು ಈಗ ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಅದನ್ನು ಮಾಡೋ ವಿಧಾನ ಹೇಗೆ ಎಂಬ ಚುಟುಕು ಮಾಹಿತಿ ಇಲ್ಲಿದೆ.

    ಬೇಕಾಗಿರುವ ವಿಧಾನ:
    * ಬೋಟಿ – 500 ಗ್ರಾಂ
    * ತುರಿದ ತೆಂಗಿನಕಾಯಿ – 1 ಚಮಚ
    * ಕೊತ್ತಂಬರಿ ಪುಡಿ – 1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಗರಂ ಮಸಾಲಾ ಪುಡಿ – 2 ಚಮಚ
    * ಎಣ್ಣೆ – 1 ಚಮಚ
    * ಕೆಂಪು ಮೆಣಸಿನ ಪುಡಿ – 1 ಚಮಚ
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 1 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಲವಂಗ – 2
    * ಏಲಕ್ಕಿ – 1
    * ಚಿಕ್ಕ ಗಾತ್ರದ ದಾಲ್ಚಿನ್ನಿ – 1
    * ಅಗತ್ಯವಿರುವಷ್ಟು ನೀರು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಿಸಿ ನೀರಿನಲ್ಲಿ ಬೋಟಿ ಸ್ವಚ್ಛಗೊಳಿಸಿ, ಕಟ್ ಮಾಡಿ. ಪಕ್ಕಕ್ಕೆ ಇಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ನಂತರ ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಬೀಜಗಳನ್ನು ಸೇರಿಸಿ ಫ್ರೈ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬೋಟಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನೀರು ಹಾಕಿ ಬೇಯಿಸಿ.
    * ಬೋಟಿ ಗೊಜ್ಜುಗೆ ಕೊತ್ತಂಬರಿ ಪುಡಿ, ತೆಂಗಿನಕಾಯಿ ತುರಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಕುದಿಸಿ.
    * ಇದನ್ನು ಬಿಸಿ ಬಿಸಿ ಅನ್ನ, ಚಪಾತಿ, ರೋಟಿಯೊಂದಿಗೆ ಬಡಿಸಿ.

  • ನಾನ್‌ ವೆಜ್‌ ಮಾಡ್ಬೇಕಾ? ಸುಲಭವಾಗಿ ಮಾಡಿ ಚಿಕನ್‌ ಪಾಸ್ತಾ….

    ನಾನ್‌ ವೆಜ್‌ ಮಾಡ್ಬೇಕಾ? ಸುಲಭವಾಗಿ ಮಾಡಿ ಚಿಕನ್‌ ಪಾಸ್ತಾ….

    ಸಾಮಾನ್ಯವಾಗಿ ಎಲ್ಲರೂ ಪಾಸ್ತಾ, ವೈಟ್‌ ಪಾಸ್ತಾ ತಿಂದಿರುತ್ತಾರೆ. ಮಕ್ಕಳಿಗಂತೂ ಪಾಸ್ತಾ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ ಅಂತಲೇ ಹೇಳಬಹುದು. ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ಈ ಬಾರಿ ವಿಭಿನ್ನವಾಗಿ ಚಿಕನ್‌ ಪಾಸ್ತಾ ಮಾಡಿಕೊಡಿ.

    ಬೇಕಾಗುವ ಸಾಮಗ್ರಿಗಳು:
    ಎಣ್ಣೆ
    ಬೆಳ್ಳುಳ್ಳಿ
    ಈರುಳ್ಳಿ
    ಚಿಕನ್‌
    ಧನಿಯಾ ಪುಡಿ
    ಜೀರಿಗೆ ಪುಡಿ
    ಗರಮ್‌ ಮಸಾಲಾ
    ಕೆಂಪು ಮೆಣಸಿನಕಾಯಿ ಪುಡಿ
    ಹಸಿರು ಹಾಗೂ ಕೆಂಪು ದಪ್ಪ ಮೆಣಸಿನಕಾಯಿ
    ಉಪ್ಪು
    ಟೊಮ್ಯಾಟೋ ಕೆಚಪ್‌

    ಮಾಡುವ ವಿಧಾನ:
    ಮೊದಲು ಒಂದು ಬಾಣಲಿಗೆ ಎಣ್ಣೆ ಹಾಕಿ, ಚಿಕ್ಕದಾಗಿ ಕಚ್ಚಿದ ಬೆಳ್ಳುಳ್ಳಿ ಹಾಕಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಕತ್ತರಿಸಿಟ್ಟ ಚಿಕನ್‌ ಹಾಕಿ. ನಂತರ ಚೆನ್ನಾಗಿ ಹುರಿದು ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಗರಮ್‌ ಮಸಾಲಾ, ಕೆಂಪು ಮೆಣಸಿನಕಾಯಿ ಪುಡಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ೫ ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.

    ನಂತರ ಚಿಕ್ಕದಾಗಿ ಹೆಚ್ಚಿಕೊಂಡ ಹಸಿರು ಹಾಗೂ ಕೆಂಪು ದಪ್ಪ ಮೆಣಸಿನಕಾಯಿಯನ್ನು ಹಾಕಿ. ಚೆನ್ನಾಗಿ ಕಲಸಿ. ನಂತರ ಬೇಯಿಸಿಟ್ಟ ಪಾಸ್ತಾವನ್ನು ಹಾಕಿ. ಕೊನೆಗೆ ಚೆನ್ನಾಗಿ ಕಲಸಿ ಅದಕ್ಕೆ ಟೊಮ್ಯಾಟೋ ಕೆಚಪ್‌ ಹಾಕಿದರೆ ಬಿಸಿಬಿಸಿಯಾದ ಚಿಕನ್‌ ಪಾಸ್ತಾ ತಯಾರಾಗುತ್ತದೆ.

  • ಮಲ್ನಾಡ್‌ ಸ್ಪೆಷಲ್‌ ತವಾ ಫ್ರೈ ಮಾಡಿ.. ಸವಿಯಿರಿ

    ಮಲ್ನಾಡ್‌ ಸ್ಪೆಷಲ್‌ ತವಾ ಫ್ರೈ ಮಾಡಿ.. ಸವಿಯಿರಿ

    ಕೆಲವೊಮ್ಮೆ ವೆಜ್‌ ತಿಂದು ಬೇಜಾರಾದಾಗ ನಾನ್‌ ವೆಜ್‌ ಊಟದ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರುಬಿಡುತ್ತೆ. ಅದರಲ್ಲೂ ಮಲ್ನಾಡ್‌ ಕಡೆಯ ನಾನ್‌ ವೆಜ್‌ ಅಂತೂ ಮೃಷ್ಟಾನ್ನ ಸವಿದಂತೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಮೀನಿದ್ದರಂತೂ ಆಹಾ…!  ಅದಕ್ಕೆ ಸುಲಭವಾಗಿ ತವಾ ಫ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು: 
    ಮೀನು
    ಮಸಾಲಾಗಳು
    ಕೆಂಪು ಮೆಣಸಿನ ಪುಡಿ
    ಅರಿಶಿನ ಪುಡಿ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್
    ನಿಂಬೆ ರಸ
    ಉಪ್ಪು
    ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ಮೀನು ಚೆನ್ನಾಗಿ ತೊಳೆದು ಅದನ್ನು ಎರಡು ಭಾಗವಾಗಿ ಕತ್ತರಿಸಿಕೊಳ್ಳಬೇಕು. ಬಳಿಕ ಮಸಾಲೆ ಪದಾರ್ಥಗಳಾದ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಕತ್ತರಿಸಿದ ಮೀನಿನ ಮೇಲೆ ಅಡ್ಡದಾಗಿ ಚಾಕುವಿನಿಂದ ಕೂಯ್ಯಿರಿ. ಅದಕ್ಕೆ ತಯಾರಿಸಿದ ಪೇಸ್ಟ್‌ ಚೆನ್ನಾಗಿ ಮೆತ್ತಿಕೊಳ್ಳಿ.

    ಇನ್ನೊಂದು ತವಾ ಅಥವಾ ಪ್ಯಾನ್‌ ತೆಗೆದುಕೊಂಡು ಅದರ ಮೇಲೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಕಡಿಮೆ ಉರಿಯಲ್ಲಿ ಇಟ್ಟುಕೊಂಡು ತವೆಯ ಮೇಲೆ ಪೇಸ್ಟ್‌ ಹಚ್ಚಿಕೊಂಡ ಮೀನನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣವರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.

  • ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಫ್ರೈಡ್‌ ರೈಸ್ ಅಂದರೆ ನಿಮ್ಗೆ ಇಷ್ಟನಾ? ಚಿಕನ್, ಎಗ್ ಫ್ರೈಡ್‌ ರೈಸ್ ತಿಂದು ಬೇರೆ ವೆರೈಟಿ ಫ್ರೈಡ್‌ ರೈಸ್ ತಿನ್ನಬೇಕು ಅಂತಾ ಅಂದ್ಕೊಂಡಿದ್ರೆ, ಸ್ಪೆಷಲ್ ಆಗಿ ಸೀ ಫುಡ್‌ನಲ್ಲಿ ಫ್ರೈಡ್‌ನ ಟ್ರೈ ಮಾಡಿ. ಹೌದು, ನಾವಿವತ್ತು ಸಮುದ್ರದಲ್ಲಿ ಸಿಗುವ ಸಿಗಡಿ ಅಂದ್ರೆ ಪ್ರಾನ್ಸ್ ಫ್ರೈಡ್‌ ರೈಸ್ ಮಾಡೋದು ಹೇಗೆ ಅಂತಾ ಹೇಳಿ ಕೊಡ್ತೀವಿ. ನೀವು ಮನೆಯಲ್ಲೇ ಟ್ರೈ ಮಾಡಿ ಟೇಸ್ಟಿ ಪ್ರಾನ್ಸ್ ಫ್ರೈಡ್‌ ರೈಸ್.

    ಪ್ರಾನ್ಸ್ ಫ್ರೈಡ್‌ ರೈಸ್‌ಗೆ ಬೇಕಾಗುವ ಸಾಮಾಗ್ರಿಗಳು:
    ಸಿಗಡಿ – ಅರ್ಧ ಕೆಜಿ
    ಬಾಸ್ಮತಿ ಅಕ್ಕಿ – ಅರ್ಧ ಕೆಜಿ
    ಅರಿಸಿನ – ಅರ್ಧ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
    ಚಿಲ್ಲಿ ಪೇಸ್ಟ್ – 1 ಸ್ಪೂನ್
    ಕಾಳುಮೆಣಸಿನ ಪುಡಿ – ಅರ್ಧ ಸ್ಪೂನ್
    ಮೊಟ್ಟೆ – 2
    ಈರುಳ್ಳಿ – 2
    ಕ್ಯಾರೆಟ್ ತುರಿ – ಅರ್ಧ ಕಪ್
    ಬೀನ್ಸ್ – ಅರ್ಧ ಕಪ್
    ಕೊತ್ತಂಬರಿ ಪುಡಿ – 3 ಸ್ಪೂನ್
    ಕೊತ್ತಂಬರಿ ಸೊಪ್ಪು
    ಸೋಯಾ ಸಾಸ್ – 1 ಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ- ಸ್ವಲ್ಪ

    ಪ್ರಾನ್ಸ್ ಫ್ರೈಡ್‌ ರೈಸ್ ಮಾಡುವ ವಿಧಾನ:
    * ಮೊದಲು ಕ್ಯಾರೆಟ್ ಅನ್ನು ತುರಿದುಕೊಂಡು, ಬೀನ್ಸ್ ಅನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
    * ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ನೀರು ಸೇರಿಸಿ ಮತ್ತು 10 ನಿಮಿಷ ಬೇಯಿಸಿಕೊಳ್ಳಬೇಕು.
    * ನಂತರ ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
    * ಈಗ ಒಂದು ಬೌಲ್‌ಗೆ ಮೊಟ್ಟೆಗಳನ್ನು ಒಡೆದು ಹಾಕಿ, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
    * ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಮೊಟ್ಟೆಯನ್ನು ಆಮ್ಮೆಟ್ ಮಾಡಿ. ಆಮ್ಲೆಟ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
    * ಈಗ ಸಿಗಡಿ(ಪ್ರಾನ್ಸ್)ಗಳನ್ನು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ನೀರು ಸೇರಿಸಿ. ಸ್ವಲ್ಪ ಸಮಯದವರೆಗೆ ಅವುಗಳನ್ನು ಬೇಯಿಸಿ.
    * ಸಿಗಡಿ 90% ನೀರಿನಲ್ಲಿ ಬೇಯಬೇಕು.
    * ಬಳಿಕ ಬಾಸ್ಮತಿ ರೈಸ್‌ನಿಂದ ಉದುರುದುರಾದ ಅನ್ನ ಮಾಡಿಟ್ಟುಕೊಳ್ಳಬೇಕು.
    * ಈಗ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಸೇರಿಸಿ. ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.
    * ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬೇಯಿಸಿಟ್ಟುಕೊಂಡ ಸಿಗಡಿಯನ್ನು ಸೇರಿಸಿಕೊಳ್ಳಬೇಕು.
    * ಜೊತೆಗೆ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಉಪ್ಪು, ಮೆಣಸು ಪುಡಿ ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಇದಕ್ಕೆ ಮೊದಲೇ ಬೇಯಿಸಿದ ಕ್ಯಾರೆಟ್ ಮತ್ತು ಬೀನ್ಸ್ಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತರ ಬೇಯಿಸಿಟ್ಟುಕೊಂಡ ಅನ್ನ ಹಾಗೂ ಕತ್ತರಿಸಿಟ್ಟುಕೊಂಡ ಆಮ್ಲೆಟ್ ತುಂಡು ಸೇರಿಸಿ ಎಲ್ಲಾ ಮಿಕ್ಸ್ ಮಾಡಿಕೊಂಡು, ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು.
    * ಈಗ ನಿಮ್ಮ ಮುಂದೆ ರುಚಿಯಾದ ಸಿಗಡಿ ಫ್ರೈಡ್‌ ರೈಸ್ ಸವಿಯಲು ಸಿದ್ದ.

  • ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಕೆಲಸದ ಒತ್ತಡದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವವರು ರುಚಿಕರ ಆಹಾರ ಸವಿಯಬೇಕಾದ್ರೆ ಹೋಟೆಲನ್ನೇ ಅವಲಂಬಿಸಿರ್ತಾರೆ. ಇನ್ನೂ ಕೆಲವರು ಅಷ್ಟು ಟೈಂ ಯಾರ್‌ ಕೊಡ್ತಾರೆ ಅಂತ ಇಷ್ಟವಿದ್ದರೂ ನೆಚ್ಚಿನ ಸ್ಫೈಸಿ ಫುಡ್‌ ಮಾಡೋಕಾಗದೇ ಅರ್ಜೆಂಟ್‌ನಲ್ಲಿ ಆಗಿದ್ದನ್ನು ಮಾಡಿಕೊಳ್ತಾರೆ. ಮನೆಗಳಲ್ಲಿ ಚಿಕನ್‌, ಮಟನ್‌ ಪೆಪ್ಪರ್‌ ಫ್ರೈ ಮಾಡೋದು ಸಹಜ.. ಆದ್ರೆ ಬಂಗುಡೆ ಪೆಪ್ಪರ್‌ ಫ್ರೈ ಕೂಡ ಸುಲಭವಾಗಿ ಮಾಡಬಹುದು ಅನ್ನೋದಕ್ಕೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ.

    ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತೆ ಮತ್ತು ರುಚಿಕರವಾಗಿಯೂ ಇರುತ್ತೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ಒಮ್ಮೆ ಇದನ್ನ ಸವಿದ್‌ರೆ ಮತ್ತೆ ಮತ್ತೆ ಸವಿಯಬೇಕು ಅಂತ ಅನ್ನಿಸುತ್ತೆ. ಇದನ್ನ ಹೇಗೆ ಮಾಡಬೇಕು ಅಂತ ನೋಡೋದಾದ್ರೆ…

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು.
    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು.
    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಯುಗಾದಿ ʼಹೊಸತೊಡಕುʼ ಘಮಲು – ಮಾಂಸದ್ದೇ ಕಾರುಬಾರು

    ಯುಗಾದಿ ʼಹೊಸತೊಡಕುʼ ಘಮಲು – ಮಾಂಸದ್ದೇ ಕಾರುಬಾರು

    ಹಿಂದೂಗಳ ಹೊಸ ವರ್ಷ ಸಂಭ್ರಮದ ಹಬ್ಬ ಯುಗಾದಿ (Ugadi). ಈ ಹಬ್ಬದ ಮಾರನೆಯ ದಿನ ರಾಜ್ಯದೆಲ್ಲೆಡೆ ‘ಹೊಸ ತೊಡಕು’ ಆಚರಿಸುವುದುಂಟು. ಕೆಲವೆಡೆ ಇದನ್ನು ‘ವರ್ಷ ತೊಡಕು’, ‘ವರ್ಷ ತುಡುಕು’, ‘ವರ್ಷದ ಹೆಚ್ಚು’ ಎಂದೆಲ್ಲ ಕರೆಯಲಾಗುತ್ತದೆ. ಆ ಮಾಂಸಾಹಾರಿಗಳ ಮನೆಯಲ್ಲೇ ಮಾಂಸದ ಅಡುಗೆ ಇರುತ್ತದೆ. ಅಂತೆಯೇ ಸಸ್ಯಹಾರಿಗಳ ಮನೆಯಲ್ಲಿ ಪಾಯಸ, ಸಿಹಿ ಅಡುಗೆ ಮಾಡುವುದು ವಾಡಿಕೆ.

    ಯುಗಾದಿಯ ಮಾರನೇ ದಿನವನ್ನು ಹೊಸ ವರ್ಷದ ಸಂಭ್ರಮವಾಗಿ ಆಚರಿಸಲಾಗುವುದು. ಕಷ್ಟಗಳನ್ನು ಮರೆಯುವುದಕ್ಕಾಗಿ ಹಿಂದೆಲ್ಲಾ ಅನೇಕ ಮನರಂಜನೆಯ ಆಟಗಳನ್ನು ಆಡುತ್ತಿದ್ದರು. ಚೌಹಾಬಾರ, ಅಳಿಗುಳಿಮನೆ, ಗಟ್ಟೆಮನೆ, ತೂಗುಯ್ಯಾಲೆ ಮೊದಲಾದ ಆಟಗಳಿದ್ದವು. ತದನಂತರ ಇಸ್ಟೀಟ್ ಆಟ ಬಂತು. ಆ ದಿನ ವರ್ಷದ ತೊಡಕು ಅಂದರೆ, ಯಾವುದೇ ಅಡ್ಡಿ-ಆತಂಕ, ಕಷ್ಟಗಳು ಬಾರದಿರಲೆಂದು ಹೈರೈಸುವ ಶುಭದಿನವಾಗಿ ಆಚರಿಸುವ ಪದ್ಧತಿ ಇದೆ. ಇದನ್ನೂ ಓದಿ: ಯುಗಾದಿ ಸಂಭ್ರಮ – ಬ್ಯಾಚುಲರ್‌ ಹುಡುಗರು, ದೂರವೇ ಉಳಿದವರ ಸಡಗರ

    ಮಾಂಸಾಹಾರಿಗಳಿಗಂತೂ ಈ ದಿನ ಹೆಚ್ಚು ಪ್ರಿಯ. ಅಂದು ಎಲ್ಲೆಡೆ ಚಿಕನ್, ಮಟನ್, ಫಿಶ್ ಅಂಗಡಿಗಳಲ್ಲಿ ಜನ ತುಂಬಿರುತ್ತಾರೆ. ಕೆಜಿ ಕೆಜಿಗಟ್ಟಲೇ ಖರೀದಿಸಿ, ಮಾಂಸಾಹಾರವೇ ಪ್ರಧಾನವಾದ ಅಡುಗೆಯನ್ನು ಮಾಡುತ್ತಾರೆ. ಕುಟುಂಬಸ್ಥರೆಲ್ಲ ಸೇರಿ ಹಬ್ಬದೂಟ ಮಾಡುತ್ತಾರೆ. ಕೆಲವರು ನೆಂಟರಿಷ್ಟರನ್ನೂ ಆಹ್ವಾನಿಸಿ, ಖಾರದೂಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸ ತೊಡಕಿನ ದಿನ ಚಿಕನ್, ಮಟನ್ ಬೆಲೆ ಹೆಚ್ಚಿರುತ್ತದೆ. ಹೊರ ರಾಜ್ಯಗಳಿಂದಲೂ ವಿಶೇಷ ತಳಿಯ ಕುರಿ, ಮೇಕೆಗಳನ್ನು ತರಿಸಿ ಮಾರುವುದುಂಟು. ಹಿಂದೆಯೆಲ್ಲ ಕೆಜಿ ಲೆಕ್ಕ ಇರಲಿಲ್ಲ. ಗುಡ್ಡೆ ಲೆಕ್ಕದಲ್ಲಿ (ಗುಡ್ಡೆಮಾಂಸ) ಮಾರಾಟವಾಗುತ್ತಿತ್ತು. ಈಗಲೂ ಆ ಪರಿಪಾಠ ಇದೆ.

    ಹೊಸ ತೊಡಕಿನ (Hosatodaku) ದಿನದಂದು ಮಾಂಸದ ಜೊತೆಗೆ ಮದ್ಯದ ಕಾರುಬಾರು ಕೂಡ ಇರುತ್ತದೆ. ಎಣ್ಣೆ ಜೊತೆಗೆ ಚಿಕನ್, ಮಟನ್ ಟೇಸ್ಟ್ ಬಲು ಸೂಪರ್ ಎನ್ನುವವರಿಗೆ ಈ ದಿನ ವಿಶೇಷ. ಅಂದು ಮದ್ಯ ಮಾರಾಟ ಕೂಡ ಬಲು ಜೋರಾಗಿಯೇ ಇರುತ್ತದೆ. ಕುಡಿದು ಗಲಾಟೆ ಮಾಡುವುದು, ಹಣವಿಟ್ಟು ಇಸ್ಟೀಪ್ ಆಡುವುದು ಎಲ್ಲಾ ಇರುತ್ತದೆ. ಹೀಗೆ ಖುಷಿ-ಖುಷಿಯಾಗಿ ಆಚರಿಸಿದರೆ ಹೊಸತೊಡಕು ತುಂಬಾ ಮಜವಾಗಿರುತ್ತದೆ ಎಂಬುದು ಹಲವರ ಭಾವನೆ. ಇದನ್ನೂ ಓದಿ: ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಈ ದಿನ ವರ್ಷದ ತೊಡಕ್ಕೆಲ್ಲ ನಿವಾರಣೆಯಾಗಿ ಎಲ್ಲರಿಗೂ ಸುಖಸಮೃದ್ಧಿ ಬರಲಿ ಎಂಬುದೇ ಹೊಸತೊಡಕು ಆಚರಣೆಯ ವಿಶೇಷತೆ. ಈ ಬಾರಿ ಯುಗಾದಿ ಮಾರನೇ ದಿನ ಸೋಮವಾರ ಬಿದ್ದಿದೆ. ಸೋಮವಾರದಂದು ಬಹುತೇಕ ಕಡೆಗಳಲ್ಲಿ ಜನರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹೀಗಾಗಿ, ಮಂಗಳವಾರ ಹೊಸ ತೊಡಕು ಮಾಡುತ್ತಾರೆ. ಇದನ್ನೂ ಓದಿ: ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?