Tag: Nominet

  • ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ. ಅದರಂತೆಯೇ ಅವರಿಬ್ಬರು ಬಿಗ್ ಬಾಸ್ ಮೆನಯಲ್ಲಿ ಯಾವಾಗಲೂ ಒಟ್ಟಿಗೆ ಇದ್ದು ಟಾಸ್ಕ್ ಮಾಡುತ್ತಿರುತ್ತಾರೆ.

    ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರು ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯಿಂದ ಹೊರ ಹೋಗಲು ರಾಕೇಶ್ ಕೂಡ ನಾಮಿನೇಟ್ ಆಗಿದ್ದರು. ಆದ ಕಾರಣ ಬಿಗ್ ಬಾಸ್ ಒಂದು ವಿಶೇಷವಾದ ಅಧಿಕಾರವನ್ನು ರಾಕೇಶ್‍ಗೆ ಕೊಟ್ಟಿದ್ದರು.

    ಈ ವಾರ ಜಯಶ್ರೀ, ಕವಿತಾ, ಆ್ಯಂಡಿ, ಮುರಳಿ, ಅಕ್ಷತಾ, ರಶ್ಮಿ ಮತ್ತು ರಾಕೇಶ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಬಿಗ್‍ಬಾಸ್ ಕೊಟ್ಟ ವಿಶೇಷ ಅಧಿಕಾರದಲ್ಲಿ ರಾಕೇಶ್, ನಾಮಿನೇಟ್ ಯಿಂದ ತಮ್ಮನ್ನು ಸೇವ್ ಮಾಡಿಕೊಳ್ಳಬಹುದಿತ್ತು ಅಥವಾ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಿತ್ತು. ಆಗ ರಾಕೇಶ್ ಮುರಳಿ ಅವರನ್ನು ಸೇವ್ ಮಾಡಿದರು.

    ರಾಕೇಶ್ ಮುರಳಿಯನ್ನು ಸೇವ್ ಮಾಡಿದ ತಕ್ಷಣ ಬೇಸರ ಮಾಡಿಕೊಂಡ ಅಕ್ಷತಾ ಕೋಪಗೊಂಡು ಬಾತ್‍ರೂಮಿಗೆ ಹೋಗಿ ಜಯಶ್ರೀ ಅವರನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದಾರೆ. ಈ ವೇಳೆ ನಾನಾಗಿದ್ದರೆ ಅವರನ್ನೇ ಉಳಿಸುತ್ತಿದ್ದೆ ಎಂದು ಹೇಳಿಕೊಂಡು ಅತ್ತಿದ್ದಾರೆ.

    ರಾಕೇಶ್ ಸ್ಪರ್ಧಿಗಳಿಗಾಗಿ ಒಂದು ಆಟ ಆಡಿಸಲು ಎಲ್ಲರನ್ನು ಕರೆದಿದ್ದರು. ಆಗ ಅಕ್ಷತಾ ಸ್ನಾನಕ್ಕೆಂದು ಬಾತ್‍ರೂಮಿಗೆ ಹೋಗಿದ್ದರು. ರಾಕೇಶ್ ಕರೆಯಲು ಹೋಗಿದ್ದಾರೆ. ಆಗ ರಾಕೇಶ್ ಮೇಲೆ ಕೋಪಗೊಂಡು ಗುಡುಗಿದ್ದಾರೆ. ಕೆಲ ಸಮಯ ಬಾತ್‍ರೂಮಿನಲ್ಲಿಯೇ ಕುಳಿತ ಅಕ್ಷತಾ ಜೋರು ಜೋರಾಗಿ ಕೂಗಿ ಅತ್ತರು. ಕೊನೆಗೆ ಅಕ್ಷತಾ ಬಳಿ ಹೋದ ಆ್ಯಂಡಿ ಸಮಾಧಾನ ಮಾಡಿ ಹೊರ ತಂದರು. ನಾನು ಮನೆಯವರ ವಿರೋಧ ಕಟ್ಟಿಕೊಂಡಿದ್ದೇನೆ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕ್ಷಮೆ ಕೇಳಬೇಕು ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡರು.

    ದಿನಪೂರ್ತಿ ರಾಕೇಶ್ ಮೇಲೆ ಮುನಿಸಿಕೊಂಡಿದ್ದ ಅಕ್ಷತಾ, ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಮತ್ತೆ ಆತನೊಂದಿಗೆ ಗುಸು ಗುಸು ಚರ್ಚೆಯಲ್ಲಿ ಭಾಗಿಯಾದ್ರು. ನನ್ನನ್ನು ಯಾಕೆ ಸೇವ್ ಮಾಡಿಲ್ಲ ಅಂತ ಸೂಕ್ತವಾದ ಕಾರಣ ಕೊಡು ಎಂದು ಅಕ್ಷತಾ ಕೇಳಿದ್ರು. ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಬೆಳಗ್ಗೆಯಿಂದ ರಾಕೇಶ್ ಮಾಡತೊಡಗಿದ್ದು ಸಂಚಿಕೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv