Tag: Nominee

  • ಮೊದಲ ವಾರದಲ್ಲೇ 12 ಜನರನ್ನು ನಾಮಿನೇಟ್ ಮಾಡಿ ಶಾಕ್ ಕೊಟ್ಟ ಬಿಗ್ ಬಾಸ್

    ಮೊದಲ ವಾರದಲ್ಲೇ 12 ಜನರನ್ನು ನಾಮಿನೇಟ್ ಮಾಡಿ ಶಾಕ್ ಕೊಟ್ಟ ಬಿಗ್ ಬಾಸ್

    ದೊಡ್ಮನೆಯ ಕಾಳಗ ಶುರುವಾಗಿದೆ. ಇನ್ನೂ ಬಿಗ್ ಬಾಸ್  (Bigg Boss Season 9) ಮನೆಗೆ ಬಂದ ಮೇಲೆ ಕಡೆಯ ದಿನಗಳವರೆಗೂ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿ ಸ್ಪರ್ಧಿಯ ಆಸೆಯಾಗಿರುತ್ತದೆ. ಇದೀಗ ಮೊದಲ ವಾರವೇ 12 ಜನರನ್ನು ನಾಮಿನೇಟ್  ಆಗಿ ಡೇಂಜರ್ ಜೋನ್ ನಲ್ಲಿದ್ದಾರೆ‌.

    ಕಿರುತೆರೆ ಲೋಕದ ಬಿಗ್ ಶೋ ಬಿಗ್ ಬಾಸ್ ಸೀಸನ್ 9ನಲ್ಲಿ ಒಟ್ಟು 18 ಜನರಿಗೆ ಅವಕಾಶ ಸಿಕ್ಕಿದೆ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​  ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್​ ಸಂಬರ್ಗಿ (Prashant Sambargi) , ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​ (Sanya Iyer), ಮಯೂರಿ, ರೂಪೇಶ್​ ರಾಜಣ್ಣ (Rupesh Rajanna), ಕ್ಯಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ನಾಮಿನೇಟ್​ ಆದವರು ಪ್ರತಿ ಟಾಸ್ಕ್​ ಕೂಡ ಚೆನ್ನಾಗಿ ಆಡಲೇ ಬೇಕಾಗುತ್ತದೆ. ಮನೆಯ ಸದಸ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ವೀಕ್ಷಕರನ್ನು ಎಷ್ಟರಮಟ್ಟಿಗೆ ಮನರಂಜಿಸುತ್ತಾರೆ ಎಂಬುದೆಲ್ಲವೂ ಪರಿಗಣನೆಗೆ ಬರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಆಟ ಆಡಲು ಎಲ್ಲರೂ ಸಜ್ಜಾಗಿದ್ದಾರೆ. ಇನ್ನೂ ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್​, ನೇಹಾ ಗೌಡ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ.

    ಇನ್ನೂ ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಈ ಬಾರಿ ಬಿಗ್​ ಬಾಸ್​ನಲ್ಲಿ ಪರಿಚಯಿಸಲಾಗಿದೆ. ಹೊಸಬರನ್ನು ಮತ್ತು ಹಳಬರನ್ನು ಜೋಡಿಯಾಗಿಸಿ ಟಾಸ್ಕ್​ಗಳನ್ನು ಆಡಿಸಲಾಗುತ್ತಿದೆ. ಮೊದಲ ದಿನ ನಡೆದ ಟಾಸ್ಕ್​ನಲ್ಲಿ ಪ್ರಶಾಂ​ತ್ ಸಂಬರ್ಗಿ ಹಾಗೂ ವಿನೋದ್​ ಗೊಬ್ಬರಗಾಲ ಜೋಡಿ ವಿನ್​ ಆಗಿದೆ. ಫಸ್ಟ್​ ಟಾಸ್ಕ್​ ಗೆದ್ದಿದ್ದಕ್ಕಾಗಿ ಏನಾದರೂ ಕೊಡಿ ಎಂದು ಬಿಗ್​​ ಬಾಸ್​ ಬಳಿ ಪ್ರಶಾಂತ್​ ಸಂಬರ್ಗಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾಧವ್ ಹೆಸರಿನ ಪಕ್ಷೇತರರಿಗೆ ಫುಲ್ ಡಿಮ್ಯಾಂಡ್

    ಜಾಧವ್ ಹೆಸರಿನ ಪಕ್ಷೇತರರಿಗೆ ಫುಲ್ ಡಿಮ್ಯಾಂಡ್

    ಕಲಬುರಗಿ: ಪಕ್ಷೇತರರಾಗಿ ಗೆದ್ದವರಿಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಡಿಮ್ಯಾಂಡ್ ಹೆಚ್ಚಾಗುವುದು ಗೊತ್ತಿರುವ ವಿಚಾರ. ಆದರೆ ಕಲಬುರಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಈಗಲೇ ಫುಲ್ ಡಿಮ್ಯಾಂಡ್ ಬಂದಿದೆ.

    ಎಪ್ರಿಲ್ 23ಕ್ಕೆ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. ಮತ್ತೊಂದೆಡೆ ಕಲಬುರಗಿಯಲ್ಲಿ ಉಮೇಶ್ ಜಾಧವ್, ವಿಠಲ್ ಜಾಧವ್, ಶಂಕರ್ ಜಾಧವ್, ವಿಜಯ್ ಜಾಧವ್ ಸೇರಿದಂತೆ ನಾಲ್ವರು ಜಾಧವ್ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

     

    ಹಾಗಾಗಿ ಪಕ್ಷೇತರ ಹೆಸರಿನ ಜಾಧವ್‍ರಿಗೆ ನಾಮಪತ್ರ ವಾಪಸ್ ಪಡೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಇದಕ್ಕಾಗಿ ಚೌಕಾಸಿ ಪಾಲಿಟಿಕ್ಸ್ ಕೂಡ ಮಾಡುತ್ತಿದೆ. ಈ ಮೂಲಕ ಕಲಬುರಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಯ ಮುಂಚೆಯೇ ಡಿಮ್ಯಾಂಡ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದಾರೆ. ಆದರೆ ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಬೀದರ್‌ನಲ್ಲಿ ಮೈತ್ರಿ ಜೋಡೆತ್ತುಗಳ ಶಕ್ತಿ ಪ್ರದರ್ಶನ

    ಬೀದರ್‌ನಲ್ಲಿ ಮೈತ್ರಿ ಜೋಡೆತ್ತುಗಳ ಶಕ್ತಿ ಪ್ರದರ್ಶನ

    ಬೀದರ್: ಬೆಂಗಳೂರಲ್ಲಿ ಬೃಹತ್ ಶಕ್ತಿ ಪ್ರದರ್ಶನದ ಬಳಿಕ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬೀದರ್ ನಲ್ಲಿ ಜೊತೆಯಾಗಲಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ಮೆರವಣಿಗೆ ಮೂಲಕ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮ್ಯ ಇಬ್ಬರೂ ಪಾಲ್ಗೊಳ್ಳಲಿದ್ದಾರೆ.

    ನ್ಯಾಷನಲ್ ಕಾಲೇಜ್ ಆವರಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಏರ್ಪಡಿಸಲಾಗಿದೆ. ಉಮೇದುವಾರಿಕೆ ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆಯುವ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ರಾಜಶೇಖರ ಪಾಟೀಲ್, ರಹಿಮ್ ಖಾನ್ ಮತ್ತು ಬಂಡೆಪ್ಪ ಕಾಶೆಂಪೂರ್ ಕೂಡಾ ಸಾಥ್ ನೀಡಲಿದ್ದಾರೆ. ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಸುವ ವೇಳೆ ಸಮ್ಮಿಶ್ರ ಸರ್ಕಾರದ ಶಕ್ತಿ ಪ್ರದರ್ಶನ ತೋರಿಸಲು ಮುಂದಾಗಿದ್ದು, ಮೆರವಣಿಗೆಯಲ್ಲಿ 50 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ.

  • ಮಂಡ್ಯ ಉಪಚುನಾವಣೆಗೆ ಇದೂವರೆಗೆ ಓರ್ವರಿಂದ ಮಾತ್ರ ನಾಮಪತ್ರ ಸಲ್ಲಿಕೆ

    ಮಂಡ್ಯ ಉಪಚುನಾವಣೆಗೆ ಇದೂವರೆಗೆ ಓರ್ವರಿಂದ ಮಾತ್ರ ನಾಮಪತ್ರ ಸಲ್ಲಿಕೆ

    ಮಂಡ್ಯ: ಲೋಕಸಭಾ ಉಪಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ನಿರಾಸಕ್ತಿ ವ್ಯಕ್ತವಾಗುತ್ತಿದ್ದು, ಇದುವರೆಗೂ ಓರ್ವ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಉಪಚುನಾವಣೆ ಯಾರಿಗೂ ಬೇಡವಾಯಿತೇ ಎಂಬ ಚರ್ಚೆ ಜಿಲ್ಲೆಯಲ್ಲಿ ಮನೆ ಮಾಡುತ್ತಿದೆ.

    ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳು ಬಾಕಿ ಇದ್ದು, ಸಮಾಜವಾದಿ ಪಕ್ಷದ ನಂದೀಶ್ ಕುಮಾರ್ ಕೆಬಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿದ್ದರೂ ನಾಮಪತ್ರ ಸಲ್ಲಿಸಿಲ್ಲ. ಇತ್ತ ಕಾಂಗ್ರೆಸ್ ತಟಸ್ಥ ಧೋರಣೆ ತೋರಲಿದ್ದು, ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

    ಮೈತ್ರಿ ಸರ್ಕಾರದ ಭಾಗವಾದ ಜೆಡಿಎಸ್‍ಗೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಪಟ್ಟಿಯಲ್ಲಿ ಲಕ್ಷ್ಮಿ ಅಶ್ವಿನ್‍ಗೌಡ ಅವರ ಹೆಸರು ಮಂಚೂನಿಯಲ್ಲಿದ್ದು, ಮಾಜಿ ಶಾಸಕ ಶಿವರಾಮೇಗೌಡ ಅವರು ಟಿಕೆಟ್ ಆಕಾಂಕ್ಷಿದ್ದಾರೆ.

    ನನಗೆ ಟಿಕೆಟ್ ನೀಡಲೇ ಬೇಕು ಅಂತಾ ಶಿವರಾಮೇಗೌಡ ಅವರು ಪಟ್ಟು ಹಿಡಿದಿದ್ದಾರಂತೆ. ಆದರೆ ಜೆಡಿಎಸ್ ಮುಖಂಡರ ಒಲವು ಲಕ್ಷ್ಮಿ ಅಶ್ವಿನ್‍ಗೌಡ ಅವರತ್ತ ಇದ್ದು, ಅವರೇ ಜೆಡಿಎಸ್‍ನಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರ ಹೆಸರು ಘೋಷಣೆ ಆಗಿದ್ದು, ಇದುವರೆಗೂ ಅವರು ನಾಮಪತ್ರ ಸಲ್ಲಿಸಿಲ್ಲ.

    ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಉಪಚುನಾವಣೆ ಮಂದಗತಿಯಲ್ಲಿ ನಡೆಯುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸಿದ ಯಡೂರಪ್ಪ

    ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸಿದ ಯಡೂರಪ್ಪ

    ಮಡಿಕೇರಿ: ಕೃಷಿಕ ಪಿ.ಎಸ್.ಯಡೂರಪ್ಪನವರು ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಪಿರಿಯಾಪಟ್ಟಣ ಮೂಲದ ಕೃಷಿಕರಾಗಿರುವ ಯಡೂರಪ್ಪನವರು ಇಂದು ಚುನಾವಣಾಧಿಕಾರಿ ರಮೇಶ್ ಪಿ. ಕೋನರೆಡ್ಡಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

    ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದಿಂದ ಯಾರ ಒತ್ತಡ ಇಲ್ಲದೇ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಬಹುದು. ನಾನು ಲಿಂಗಾಯಿತ ಸಮುದಾಯಕ್ಕೆ ಸೇರಿದವನು. ನನ್ನದು ಮನುಷ್ಯ ಧರ್ಮ ಎಂದು ಹೇಳಿದರು.

  • ಮಂಡ್ಯ: ಕನ್ನಡ ನಾಮಫಲಕ ಹಾಕದಿದ್ದಕ್ಕೆ ಮಹಿಳೆಯರಿಂದ ಕ್ಲಾಸ್- ವಿಡಿಯೋ ವೈರಲ್

    ಮಂಡ್ಯ: ಕನ್ನಡ ನಾಮಫಲಕ ಹಾಕದಿದ್ದಕ್ಕೆ ಮಹಿಳೆಯರಿಂದ ಕ್ಲಾಸ್- ವಿಡಿಯೋ ವೈರಲ್

    ಮಂಡ್ಯ: ಕನ್ನಡ ನಾಮಫಲಕ ಹಾಕದೇ ಇರೋ ಅಂಗಡಿ ಮಾಲೀಕನನ್ನು ಪ್ರವಾಸಿಗರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದ್ದು ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ಭಾನುವಾರ ಪ್ರವಾಸಿಗರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್‍ಎಸ್ ಬೃಂದಾವನಕ್ಕೆ ಬಂದಿದ್ದರು. ತೋಟಗಾರಿಕೆ ಇಲಾಖೆಯಿಂದ ಗುತ್ತಿಗೆ ಪಡೆದು ನಡೆಸುತ್ತಿರುವ ಹಣ್ಣಿನ ಅಂಗಡಿಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಕನ್ನಡ ನಾಮಫಲಕ ಹಾಕದೇ ಇರೋದನ್ನ ಗಮನಿಸಿ ವಿಡಿಯೋ ಮಾಡಲು ಮುಂದಾಗಿದ್ದರು.

    ಮಂಡ್ಯದಂತಹ ಅಪ್ಪಟ ಕನ್ನಡ ಪ್ರೇಮಿಗಳ ನೆಲದಲ್ಲಿ ಕನ್ನಡ ನಾಮಫಲಕ ಹಾಕಿಲ್ಲವಲ್ಲ ಎಂದು ಮೊಬೈಲ್‍ನಲ್ಲಿ ಚಿತ್ರೀಕರಿಸಲು ಮುಂದಾದಾಗ ಇದಕ್ಕೆ ಒಪ್ಪದ ಅಂಗಡಿ ಮಾಲೀಕ ಮಹದೇವ್ ಪ್ರಶ್ನೆ ಮಾಡಿದ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಬೇಕಾದರೆ ದೂರು ಕೊಡಿ ಅಂತಾ ಜವಾಬು ನೀಡಿದ್ದಾನೆ. ಇದಕ್ಕೆ ಪ್ರವಾಸಿಗರು ಕೂಡ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ವಿರೋಧಿ ಅಂಗಡಿ ಮಾಲೀಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    https://youtu.be/Yu9vhEPPfQM