Tag: Nomination Papers

  • 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು  ತಮ್ಮ ಠೇವಣಿ (Deposite) ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದು, ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಅಧಿಕಾರಿಗಳು ಸುಸ್ತಾಗಿದ್ದಾರೆ.

    ಒಂದೊಂದು ರೂ. ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಪಕ್ಷೇತರ ಅಭ್ಯರ್ಥಿ (Independent Candidate) ಹೆಸರು ಯಂಕಪ್ಪ. ಇವರು ಕಳೆದ ಒಂದು ವರ್ಷದಿಂದ ಯಾದಗಿರಿ ವಿಧಾನಸಭಾ ಕ್ಷೇತ್ರದ 10 ಸಾವಿರ ಮನೆಗಳಲ್ಲಿ ಭಿಕ್ಷೆ (Beg) ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು. ಇದನ್ನೂ ಓದಿ: ಮತ್ತೊಂದು ವಿಕೆಟ್ ಪತನ – ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ 

    ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಜ್ಞಾನಜ್ಯೋತಿ ಬಸವೇಶ್ವರ, ಸಂತ ಕವಿ ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. ಇದು ಜನರನ್ನು ಆಕರ್ಷಿಸಿದೆ. ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ 

    ಕಲಬುರಗಿ (Kalaburagi) ಜಿಲ್ಲೆಯ ಗುಲ್ಬರ್ಗ (Gulbarga) ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಇವರು, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ 

    ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸುವ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಕೆಲವೆಡೆ ಅಭ್ಯರ್ಥಿಗಳ ಆಸ್ತಿ ಘೋಷಣೆ ಕೇಳಿ ಜನಸಾಮಾನ್ಯರು ತಲೆ ಕೆಡಿಸಿಕೊಂಡರೆ ಮತ್ತೆ ಕೆಲವು ಅಭ್ಯರ್ಥಿಗಳು ಚುನಾವಣಾ ಠೇವಣಿ ಹಣ ಕಟ್ಟುವ ಸಮಯದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

  • ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ: ರಮೇಶ್ ಜಾರಕಿಹೊಳಿ

    ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ: ರಮೇಶ್ ಜಾರಕಿಹೊಳಿ

    ಬೆಳಗಾವಿ: ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಿ ಚುನಾವಣೆಯನ್ನು (Election) ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ.

    ಗೋಕಾಕ್ (Gokak) ಬಿಜೆಪಿ (BJP) ಅಭ್ಯರ್ಥಿಯಾಗಿ ನಾಮಪತ್ರ (Nomination Papers) ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ನಾಮಪತ್ರ ಸಲ್ಲಿಸಲು ಯುವಕರ ದಂಡೇ ಹರಿದು ಬಂದಿದೆ. ನಾನು ಯಾವತ್ತೂ ನನ್ನ ಎದುರಾಳಿಯನ್ನು ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸುತ್ತೇನೆ. ಜನ ಹೆಚ್ಚಿದ್ದಾರೆ ಎಂದು ಹಿಗ್ಗುವುದಿಲ್ಲ. ಹಾಗೆಯೇ ಕಡಿಮೆ ಜನ ಸೇರಿದ್ದಾರೆ ಎಂದು ಕುಗ್ಗುವುದಿಲ್ಲ. ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ತಿಳಿದು ಚುನಾವಣೆ ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದರು. ಇದನ್ನೂ ಓದಿ: ಸೋಮಣ್ಣನನ್ನು ಬಲವಂತವಾಗಿ ವರುಣಾದಲ್ಲಿ ನಿಲ್ಲಿಸಿದ್ದಾರೆ: ಸಿದ್ದರಾಮಯ್ಯ 

    ಅಮರನಾಥ ಜಾರಕಿಹೊಳಿ (Amaranath Jarkiholi) ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಪುತ್ರ ಮಂಗಳವಾರ ಡಮ್ಮಿ ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ 

    ತನಗೆ ಹೈಕಮಾಂಡ್ (High Command) ಜವಾಬ್ದಾರಿ ನೀಡಿದ ವಿಚಾರದ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಜಿಲ್ಲೆಯಲ್ಲಿ ಹಲವು ನಾಯಕರು ಇದ್ದಾರೆ. ನಾನು ಮೇ 10ರ ವರೆಗೆ ಯಾವುದೇ ಪತ್ರಿಕಾಗೋಷ್ಠಿ ನಡೆಸಲು, ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ವಿಚಿತ್ರವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಚುನಾವಣಾ ಫಲಿತಾಂಶ ಬರುವವರೆಗೆ ನಾನು ಮಾತನಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ರೋಡ್ ಶೋ ಮುಖಾಮುಖಿ – ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು

  • 1 ರೂ. ಲಂಚ ಪಡೆದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಸುಧಾಕರ್

    1 ರೂ. ಲಂಚ ಪಡೆದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಸುಧಾಕರ್

    ಚಿಕ್ಕಬಳ್ಳಾಪುರ: ನಾನು ರಾಜಕಾರಣಕ್ಕೆ (Politics) ಬಂದು 15 ವರ್ಷ ಆಗಿದೆ. ಯಾವುದೇ ರೈತ ಹಾಗೂ ಕ್ಷೇತ್ರದ ವ್ಯಕ್ತಿ ನನಗೆ 1 ರೂ. ಲಂಚ (Bribe) ಕೊಟ್ಟಿದ್ದರೆ, ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸಚಿವ ಕೆ.ಸುಧಾಕರ್ (K.Sudhakar) ಜೆಡಿಎಸ್ (JDS) ಅಭ್ಯರ್ಥಿಗಳ ಆರೋಪಕ್ಕೆ ತಿರುಗೇಟು ನೀಡಿದರು.

    ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೃಹತ್ ರೋಡ್ ಶೋ (Road Show) ನಡೆಸಿದ ಬಳಿಕ ಸುಧಾಕರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ (Nomination Papers) ಸಲ್ಲಿಕೆಯ ಈ ಮೆರವಣಿಗೆ 2023ರ ಚುನಾವಣೆಯ (Election) ವಿಜಯದ ದಿಕ್ಸೂಚಿ. ನಾನು ಈಗಾಗಲೇ ಗೆದ್ದಿದ್ದೇನೆ. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಅಹಂಕಾರದಿಂದ ಈ ಮಾತು ಹೇಳುತ್ತಿಲ್ಲ. ನಿಮ್ಮ ಪ್ರೀತಿ ನೋಡಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ (Congress) ಅಭ್ಯರ್ಥಿ ಪ್ರದೀಪ್ ಈಶ್ವರ್‌ಗೆ (Pradeep Eshwar) ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್ 

    ಕಾಂಗ್ರೆಸ್ ಅಭ್ಯರ್ಥಿ ನನ್ನನ್ನು ಸೋಲಿಸಲು ಬಂದಿರುವ ಸುನಾಮಿ ಎನ್ನುತ್ತಿದ್ದಾರೆ. ಆದರೆ ನಾನು ಸುನಾಮಿಯಾಗಲು ಇಷ್ಟಪಡುವುದಿಲ್ಲ. ಬದಲಿಗೆ ಜನರ ಪಾಲಿನ ಸಂಜೀವಿನಿ ಆಗಿ ಬಂದಿದ್ದೇನೆ ಎಂದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್

  • ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ: ಆರ್.ಅಶೋಕ್ ಟೀಕೆ

    ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ: ಆರ್.ಅಶೋಕ್ ಟೀಕೆ

    ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ಸೇರ್ಪಡೆ ಪೂರ್ವ ನಿಯೋಜಿತವಾಗಿದೆ. ಅವರ ಮಕ್ಕಳಿಗೆ ಮತ್ತು ಶ್ರೀಮತಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರೂ ಒಪ್ಪದೇ ಹೋಗಿರುವುದು ನೋಡಿದರೆ ಮೊದಲೇ ಪ್ಲಾನ್ (Plan) ಮಾಡಿಕೊಂಡು ಹೋಗಿದ್ದಾರೆ ಎಂದು ಅನಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ (R.Ashok) ಟೀಕಿಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಹೋಗಿದ್ದು ನನಗೆ ಆಶ್ಚರ್ಯ ಉಂಟುಮಾಡಿದೆ. ಮುಖ್ಯಮಂತ್ರಿ ಆಗಬೇಕು ಎನ್ನುವ ಕೊರಗು ಅವರಿಗೆ ಇದ್ದಿದ್ದರೆ ಕಾಂಗ್ರೆಸ್‌ಗೆ ಹೋಗಿದ್ದಾರೆ ಎನ್ನಬಹುದು. ಆದರೆ ಅವರಿಗೆ ಈ ರೀತಿಯಾದ ಕೊರಗು ಇರಲಿಲ್ಲ. ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಎಂದರೂ ಹೋಗಿದ್ದಾರೆ. ಅವರ ಏರಿಯಾದಲ್ಲಿ ಏನೋ ಕೆಲಸ ಪೆಂಡಿಂಗ್ ಇದೆ ಎಂದಾಗಿದ್ದರೆ ಅವರ ಮಗ ಅಥವಾ ಶ್ರೀಮತಿ ಕೈಯಲ್ಲಿಯೇ ಮಾಡಿಸಬಹುದಿತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶೆಟ್ಟರ್‌ನಿಂದ ಉತ್ತರ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ: ಖರ್ಗೆ  

    ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ಅವರ ಕಷ್ಟ ಕಾಲದಲ್ಲಿ ಬಿಜೆಪಿ (BJP) ಅವರ ಜೊತೆಗಿತ್ತು. ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕಾದರೆ ಬಿಬಿ ಶಿವಪ್ಪನವರ (B.B.Shivappa) ಹೆಸರಿತ್ತು. ಇವರಿಗೆ ಬೆಂಬಲ ಇಲ್ಲದಿರುವ ಸಮಯದಲ್ಲಿ ಯಡಿಯೂರಪ್ಪ (B.S.Yediyurappa) ಹಾಗೂ ಅನಂತ್‌ಕುಮಾರ್ ಇವರ ಹೆಸರನ್ನು ಸೂಚಿಸಿ ಅವರಿಗೆ ಅವಕಾಶ ಮಾಡಿಕೊಟ್ಟರು. ಇದಾದ ಬಳಿಕ ಎಲ್ಲಾ ರೀತಿಯಾದ ಅಧಿಕಾರವನ್ನು ಅನುಭವಿಸಿದ್ದಾರೆ. ಇಷ್ಟೆಲ್ಲಾ ಅಧಿಕಾರವನ್ನು ಕೊಟ್ಟಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವುದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ‘ಕೈ’ ಸೇರ್ಪಡೆ : ಶೆಟ್ಟರ್ 

    ಯಡಿಯೂರಪ್ಪನವರು ನಮ್ಮ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರು. ಅವರ ಮಟ್ಟಕ್ಕೆ ಇವರು ಯಾರೂ ಅವರ ಹತ್ತಿರ ಸುಳಿಯಲು ಆಗುವುದಿಲ್ಲ. ಆ ರೀತಿಯಾದ ವರ್ಚಸ್ಸು ಇವರಿಗಿಲ್ಲ. ಯಡಿಯೂರಪ್ಪನವರು ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಬಿಜೆಪಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ಸುಳ್ಳು. ಯಾಕೆಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಲಿಂಗಾಯತರು. ಯಡಿಯೂರಪ್ಪನವರು ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿದ್ದಾರೆ. ಅದು ಉನ್ನತ ಹುದ್ದೆಯಾಗಿದೆ. ಈಗಾಗಲೇ ಯಡಿಯೂರಪ್ಪನವರು ಕ್ಷೇತ್ರಗಳಲ್ಲಿ ಓಡಾಡಿ ಬಿಜೆಪಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ನಾವು ನಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ತೊರೆದು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ 

    ಸೋಮವಾರ ಪದ್ಮನಾಭನಗರ (Padmanabhanagar) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ನಾಮಪತ್ರ (Nomination Papers) ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮಂಗಳವಾರ ಕನಕಪುರದಲ್ಲಿ (Kanakapura) ನಾಮಪತ್ರ ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸ್ವಾಭಿಮಾನಕ್ಕೆ ಧಕ್ಕೆಯಾದವರೆಲ್ಲ ಕಾಂಗ್ರೆಸ್‌ಗೆ ಬರ್ತಿದ್ದಾರೆ: ಡಿಕೆಶಿ

  • ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಹಾಸನ: ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ (Election) ಒಂದು ಲಕ್ಷ ಮತ ಪಡೆದು ಗೆಲ್ಲಬೇಕು ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗುರಿ ನಿಶ್ಚಯವಾಗಿದೆ. ದಾರಿ ಸೊಗಸಾಗಿದೆ. ಆ ನಿಟ್ಟಿನಲ್ಲಿ ಸಾಗುವೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.

    ಹಾಸನದಲ್ಲಿ (Hassan) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸಬೇಕೆಂಬುದು ಜನರ ಹಾಗೂ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತ ನಾನೇ ಮತದಾರ ಎಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಆಕ್ಷೇಪ ಇದ್ದರೆ ಈಗಲೇ ಇವಿಎಂ (EVM) ಚೆಕ್ ಮಾಡಿಕೊಳ್ಳಲಿ. ಅಲ್ಲದೇ ಕೋವಿಡ್ ಸಂದರ್ಭ ಸೇರಿದಂತೆ ಎಲ್ಲಾ ಹಂತದಲ್ಲೂ ನಮ್ಮ ಶಾಸಕರು ಎಂಬ ಭಾವನೆಯಿಂದ ಎಲ್ಲರೂ ಸೇರಿ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ 

    ಜೆಡಿಎಸ್ (JDS) ಅಭ್ಯರ್ಥಿ ಕಿತ್ತಾಟ ನಿಮಗೆ ಪ್ಲಸ್ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಅಭ್ಯರ್ಥಿಯಾದರೂ ಪ್ರೀತಂ ಗೌಡ ಒಂದು ಲಕ್ಷ ಮತ ಪಡೆಯಬೇಕು ಎಂದು ಜನತೆ ಸಂಕಲ್ಪ ಮಾಡಿದ್ದಾರೆ. ನನಗೆ ನನ್ನದೇ ಆದ ಬಳಗವಿದೆ. ವೋಟು ಹಾಕಿಸುವ ಶಕ್ತಿ ಇದೆ. ನಾನು ವಿಪಕ್ಷಗಳ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಐವತ್ತು ಸಾವಿರ ಲೀಡ್‌ನಿಂದ ಗೆಲ್ಲುವೆ ಎಂದು ಹದಿನೆಂಟು ತಿಂಗಳ ಹಿಂದೆ ಹೇಳಿದ್ದೆ. ಆಗಲೇ ಉತ್ತರ ಕೊಟ್ಟಿದ್ದರೆ ಅಸ್ತಿತ್ವ ಇರುತ್ತಿತ್ತು. ಈಗ ಸಮಯ ಮೀರಿದೆ. ಆದರೆ ನನ್ನ ಹೇಳಿಕೆಗೆ ಈಗಲೂ, ಮುಂದೆಯೂ ಬದ್ಧವಾಗಿರುತ್ತೇನೆ ಎಂದು ಹೇಳಿದರು.

    ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಿರಿಯರು. ಅವರಿಗೆ ಶಕ್ತಿ ಇಲ್ಲ ಎನ್ನುವುದಿಲ್ಲ. ಇಡೀ ರಾಜ್ಯದಲ್ಲಿ ಜೆಡಿಎಸ್ ಎಂಪಿ (MP) ಚುನಾವಣೆಯಲ್ಲಿ ಸೋತಾಗ ಹಾಸನದಲ್ಲಿ ಗೆಲ್ಲಿಸಿದರು. ಅವರು ಜಿಲ್ಲೆಯ ಜೆಡಿಎಸ್ ಶಕ್ತಿ. ಆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಹಾಸನ ಕ್ಷೇತ್ರದಲ್ಲಿ ನನ್ನ ಶಕ್ತಿ ಇದೆ. ಆದರೆ ರೇವಣ್ಣನವರ ಆಶೀರ್ವಾದ ಇಲ್ಲದೆ ಹಾಸನ ಅಭ್ಯರ್ಥಿ ಡೆಪಾಸಿಟ್ ಪಡೆಯಲು ಸಾಧ್ಯವಿಲ್ಲ. ರೇವಣ್ಣ ಒಂದು ಶಕ್ತಿ. ಅವರ ಮುಖ ನೋಡಿಯೇ ಜನ ವೋಟ್ ಹಾಕೋದು. ಅವರ ಧೋರಣೆ ಒಪ್ಪದಿರಬಹುದು ಆದರೆ ಅವರಲ್ಲಿ ಶಕ್ತಿ ಇದೆ ಎಂದು ರೇವಣ್ಣ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌  

    ಹೊಳೆನರಸೀಪುರದಲ್ಲಿ ದೇವೇಗೌಡರ (H.D.Deve Gowda) ಕುಟುಂಬ ಹಾಗೂ ಹಾಸನದಲ್ಲಿ ಹೆಚ್.ಎಸ್.ಪ್ರಕಾಶ್ (H.S.Prakash) ಅವರ ಕುಟುಂಬದ ಹಿಡಿತದಲ್ಲೇ ಎಲ್ಲವೂ ನಡೆಯುತ್ತಿತ್ತು. ಈಗ ಜನ ಸಾಮಾನ್ಯ ಕುಟುಂಬದ ಪ್ರೀತಂ ಅವರನ್ನು ಬೆಂಬಲಿಸಿ ಬದಲಾವಣೆ ತರಬೇಕು ಎಂದು ಜನ ಬಯಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಟಿಕೆಟ್ ನೀಡುವಾಗ ವರಿಷ್ಠರು ನನ್ನ ಫೀಡ್‌ಬ್ಯಾಕ್ (Feedback) ಕೇಳಿದ್ದರು. ಈಗ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನಾನೇ ಮೊದಲಾಗುತ್ತೇನೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ (Congress) ಪೈಪೋಟಿ ನಡೆಸಬೇಕು ಎಂದರು.

    ನಾನು ಐದು ದಿನ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ಮೂರು ದಿನ ಜಿಲ್ಲೆಯಲ್ಲಿ ಸುತ್ತಾಡುತ್ತೇನೆ. ಉಳಿದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿಯವರು (Narendra Modi) ಹಾಸನಕ್ಕೆ ಬರುವ ವಿಶ್ವಾಸವಿದೆ. ಪ್ರೀತಂ ಸಚಿವರಾಗಬೇಕು, ಅವರಿಗೆ ಮತ ಹಾಕುತ್ತೇವೆ ಎಂದು ಜನರು ಹೇಳುವುದಕ್ಕೆ ನನ್ನ ಸಹಮತವಿದೆ. ನಾನೇನು ಸನ್ಯಾಸಿಯಲ್ಲ. ಕಾರ್ಯಕರ್ತರ ಬಯಕೆ ತಪ್ಪಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ 

    ಶುಕ್ರವಾರ ಹಾಸನದಲ್ಲಿ ನಾಮಪತ್ರ (Nomination Papers) ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ರ‍್ಯಾಲಿ (Rally) ಹೊರಡಲಿದ್ದು, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್‌ಆರ್ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ. ಪಕ್ಷ ಎರಡನೇ ಬಾರಿಗೆ ಶಾಸಕರಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾವೆಲ್ಲರೂ ಬೃಹತ್ ರ‍್ಯಾಲಿ ಮೂಲಕ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ರ‍್ಯಾಲಿಯ ಮತ್ತೊಂದು ವಿಶೇಷವೆಂದರೆ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, ರಂಜಾನ್ ಹಾಗೂ ಲಕ್ಷ್ಮಿವಾರ. ಸರ್ವಧರ್ಮ ಸಮನ್ವಯ ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ದಿನಾಂಕ ನಂತರ ತಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ