Tag: nomination file

  • ನಾನು ನೇಣು ಹಾಕಿಕೊಳ್ಳುತ್ತೇನೆಂದು ಹೆಚ್‍ಡಿಕೆಗೆ ಹೇಳಿದ್ದೆ: ಶ್ರೀಮಂತ್ ಪಾಟೀಲ್

    ನಾನು ನೇಣು ಹಾಕಿಕೊಳ್ಳುತ್ತೇನೆಂದು ಹೆಚ್‍ಡಿಕೆಗೆ ಹೇಳಿದ್ದೆ: ಶ್ರೀಮಂತ್ ಪಾಟೀಲ್

    ಬೆಳಗಾವಿ(ಚಿಕ್ಕೋಡಿ): ಮಾಜಿ ಸಿಎಂ ಕುಮಾರಸ್ವಾಮಿ ಅವರು ನನಗೆ ತುಂಬಾ ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ಕೆಲಸದಿಂದ ನಾನು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅವರ ಬಳಿ ನಾನು ಹೇಳಿದ್ದೆ ಎಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ರೋಡ್ ಶೋನಲ್ಲಿ ಹೇಳಿದ್ದಾರೆ.

    ನಾಮಪತ್ರ ಸಲ್ಲಿಕೆಯ ಬಳಿಕ ಅಥಣಿ ಪಟ್ಟಣದಲ್ಲಿ ರೋಡ್ ಶೋ ನಂತರ ಭಾಷಣ ಮಾಡಿದ ಅವರು, ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು. ಕುಮಾರಸ್ವಾಮಿ ಅವರು ನನಗೆ ತುಂಬಾ ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ಕೆಲಸದಿಂದ ನಾನು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅವರ ಬಳಿ ನಾನು ಹೇಳಿದ್ದೆ. ಆದರೆ ಅದಕ್ಕೂ ಅವರು ಕೇರ್ ಮಾಡದೆ ಹೋಗಿದ್ದರು. ಕುಮಾರಸ್ವಾಮಿ ಅವರಿಂದಾಗಿಯೇ ನಾನು ಪಕ್ಷ ಬಿಟ್ಟಿದ್ದು. ಅವರು ಸಿಎಂ ಆಗಿ ಮುಂದುವರಿದರೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಗೊತ್ತಿತ್ತು. ಆದ್ದರಿಂದ ನಾನು ರಾಜೀನಾಮೆ ಕೊಟ್ಟೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ:ಅಧಿಕಾರ, ದುಡ್ಡಿಗಾಗಿ ಬಿಜೆಪಿ ಸೇರಿಲ್ಲ: ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ

    ಇದೇ ವೇಳೆ ಬಿಜೆಪಿ ಸೇರಲು ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳಿದರು. ಭಾನುವಾರ ಉಗಾರ ಪಟ್ಟಣದಲ್ಲಿ ಬಿಜೆಪಿ ಸೇರಲು ಹಣ ಪಡೆದಿಲ್ಲ ಎಂದು ಮಕ್ಕಳ ಮೇಲೆ ಶ್ರೀಮಂತ್ ಪಾಟೀಲ್ ಪ್ರಮಾಣ ಮಾಡಿದ್ದರು. ಅಷ್ಟೇ ಅಲ್ಲದೆ ಕೇವಲ ಅಭಿವೃದ್ಧಿಗಾಗಿ ಮಾತ್ರ ನಾನು ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದರು.

  • ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಪುರಸಭೆ ಕಚೇರಿಗೆ ಕೋತಿ ಎಂಟ್ರಿ ಕೊಟ್ಟಿದೆ.

    ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ವೇಳೆ ಮಂಗವೊಂದು ಪುರಸಭೆ ಕಚೇರಿಗೆ ನುಗ್ಗಿ ಟೇಬಲ್ ಮೇಲೆ ಕುಳಿತು ಚೇಷ್ಟೆ ಮಾಡಿದೆ. ಅಲ್ಲದೆ ಅಧಿಕಾರಿಗಳ ಕೈ ಎಳೆದು, ಮೊಬೈಲ್ ಹಿಡಿದು ಟೇಬಲ್ ಮೇಲೆ ಕುಳಿತು, ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ತನ್ನ ದರ್ಬಾರ್ ನಡೆಸಿದೆ.

    ಹೊರಗಡೆ ಪೊಲೀಸರ ಕಂಗಾವಲಿನಲ್ಲೇ ಚುನಾವಣೆ ಕಚೇರಿಗೆ ಕೋತಿ ನುಗ್ಗಿ ತನ್ನ ತುಂಟಾಟ ನಡೆಸಿದೆ. ನಂತರ ತುಂಟ ಕಪಿರಾಯನಿಗೆ ಚುನಾವಣಾ ಸಿಬ್ಬಂದಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ರಿಜ್ವಾನ್ ನಾಮಪತ್ರ ಸಲ್ಲಿಕೆ ವೇಳೆ ಕೇಸರಿ ಆರ್ಭಟ!

    ರಿಜ್ವಾನ್ ನಾಮಪತ್ರ ಸಲ್ಲಿಕೆ ವೇಳೆ ಕೇಸರಿ ಆರ್ಭಟ!

    ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಅವರ ಬೆಂಬಲಿಗರು ಕೇಸರಿ ಪೇಟಾ ತೊಟ್ಟು, ಕುಂಕುಮ ಇಟ್ಟುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

    ಇಂದು ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಬೆಂಬಲಿಗರೊಂದಿಗೆ ಸಾಗುತ್ತಿದ್ದರು. ಈ ವೇಳೆ ಅವರ ಬೆಂಬಲಿಗರೇ ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದ ದೃಶ್ಯ ಕಂಡುಬಂದಿತ್ತು. ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ, ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ ಎಂದು ಸಂದೇಶ ಸಾರಲು ರಿಜ್ವಾನ್ ಅರ್ಷದ್ ಬೆಂಬಲಿಗರು ಕುಂಕುಮ, ಪೇಟಾ ಧರಿಸಿದ್ದರು.

    ರಿಜ್ವಾನ್ ಅವರು ಕೇವಲ ಮುಸ್ಲಿಮರ ಪರವಾಗಿ ಮಾತ್ರ ಇರಲ್ಲ, ಹಿಂದೂಗಳ ಪರ ಕೂಡ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟಾ, ಕೇಸರಿ ಕುಂಕುಮ ತೊಟ್ಟಿದ್ದೇವೆ ಎಂದು ಹೇಳಿದ ರಿಜ್ವಾನ್ ಬೆಂಬಲಿಗರು ಕೇಸರಿ ಕೇವಲ ಬಿಜೆಪಿಯ ಸ್ವತ್ತಲ್ಲ ಎಂದು ಹೇಳಿ ಕಿಡಿಕಾರಿದರು.