Tag: Nominate

  • ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಆಸ್ಕರ್ ಪ್ರಶಸ್ತಿ2024: ನಾಮಿನೇಷನ್ಸ್ ಪಟ್ಟಿ ಪ್ರಕಟ

    ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿವೆ. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗಂತ ತೀರಾ ನಿರಾಸೆ ಪಟ್ಟುವಂಥದ್ದು ಇಲ್ಲ. ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ, ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿದೆ.

    ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

    ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ  ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ ಸ್ಟೊನ್, ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.

  • ಬಿಗ್ ಬಾಸ್ ಮನೆಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ ರೂಪೇಶ್ ಮತ್ತು ಗುರೂಜಿ

    ಬಿಗ್ ಬಾಸ್ ಮನೆಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ ರೂಪೇಶ್ ಮತ್ತು ಗುರೂಜಿ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬಾರದೇ ದೊಡ್ಮನೆ ಸದಸ್ಯರು ಗಲಿಬಿಲಿಗೊಂಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ನಡವಳಿಕೆ. ಮೊದಲ ವಾರ ಸೈಲೆಂಟ್ ಆಗಿದ್ದವರು, ಎರಡನೇ ವಾರಕ್ಕೆ ಅಬ್ಬರಿಸುತ್ತಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಕೆಲವರ ಬಣ್ಣ ಬಯಲಾಗುತ್ತಿದ್ದಂತೆಯೇ ಅವರನ್ನು ಇತರರು ನೋಡುವ ರೀತಿಯೇ ಬದಲಾಗಿದೆ.

    ಈ ನಡುವೆ ಎರಡನೇ ವಾರದ ನಾಮಿನೇಟ್ ಪ್ರಕ್ರಿಯೆ ಕೂಡ ನಡೆದಿದ್ದು, ಇಬ್ಬರು ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಮೊದಲನೇ ವಾರದಲ್ಲೇ ಮನೆಯಿಂದ ಹೊರ ನಡೆದ ಐಶ್ವರ್ಯ ಪಿಸ್ಸೆಗೆ (Aishwarya Pisse) ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಮನೆಯಿಂದ ಆಚೆ ಹೋಗುವಾಗ ಒಬ್ಬರನ್ನು ನಾಮಿನೇಟ್ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ ಆರ್ಯವರ್ಧನ್ ಗುರೂಜಿಯನ್ನು (Aryavardhan Guruji) ಐಶ್ವರ್ಯ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಇದೇ ರೀತಿಯಾಗಿಯೇ ಮತ್ತೊಂದು ವಿಶೇಷ ಅಧಿಕಾರ ಸಿಕ್ಕಿದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ವಿನೋದ್ ಗೊಬ್ರಗಾಲಗೆ. ವಿನೋದ್ (Vinod Gobragala) ಕೂಡ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಹೊಂದಿದ್ದರಿಂದ ಅವರು ರೂಪೇಶ್ ರಾಜಣ್ಣ ಅವರ ಹೆಸರು ಸೂಚಿಸಿದ್ದರು. ಹೀಗಾಗಿ ಗುರೂಜಿ ಜೊತೆಗೆ ನೇರವಾಗಿ ರೂಪೇಶ್ ರಾಜಣ್ಣ (Rupesh Rajanna) ಕೂಡ ನಾಮಿನೇಟ್ ಆಗಿದ್ದಾರೆ.

    ಗುರೂಜಿ ಮತ್ತು ರೂಪೇಶ್ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ನಾಮಿನೇಟ್  (Nominate)ಆಗಿದ್ದಾರೆ. ಇವರ ಜೊತೆ ಇತರರ ಏಳು ಜನರು ನಾಮಿನೇಟ್ ಯಾದಿಯಲ್ಲಿ ಇದ್ದಾರೆ. ಒಟ್ಟು ಒಂಭತ್ತು ಜನರ ಮೇಲೆ ಈ ಬಾರಿ ನಾಮಿನೇಟ್ ತೂಗುಕತ್ತಿ ತೂಗುತ್ತಿದೆ. ಈ ಒಂಭತ್ತು ಜನರಲ್ಲಿ ಯಾರು ಎರಡನೇ ವಾರಕ್ಕೆ ಮನೆಯಿಂದ ಆಚೆ ಬರಲಿದ್ದಾರೆ ಎನ್ನುವುದು ಕುತೂಹಲ.  

    Live Tv
    [brid partner=56869869 player=32851 video=960834 autoplay=true]

  • ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ಈ ವಾರ ಔಟ್ ಆಗಲ್ಲ ಸೋನು ಶ್ರೀನಿವಾಸ್ ಗೌಡ: ಲಕ್ಕಿ ಹುಡುಗಿಯಾದ ಸೋನು

    ವಾರ ವಾರದಿಂದ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಎರಡು ವಾರಗಳ ಕಾಲ ದೊಡ್ಮನೆಯಲ್ಲಿ ನಾನಾ ರೀತಿಯ ಆಟಗಳನ್ನು ಆಡುತ್ತಿರುವ ಸ್ಪರ್ಧಿಗಳು ವಾರಂತ್ಯದ ಕಿಚ್ಚನ ಪಂಚಾಯತಿಗಾಗಿ ಭಯದಿಂದಲೇ ಕಾಯುತ್ತಾರೆ. ಆಯಾ ವಾರ ಮನೆಯಲ್ಲಿ ಉಳಿದುಕೊಳ್ಳುವವರು ಯಾರು, ಮನೆಯಿಂದ ಹೊರ ಬರುವವರು ಯಾರು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ತಾನು ಸೇಫ್ ಆಗಿ ಮನೆಯಲ್ಲೇ ಉಳಿಯಲಿ ಎನ್ನುವುದು ಬಹುತೇಕ ಆಸೆ. ಆದರೆ, ಒಬ್ಬರು ಮನೆಯಿಂದ ಹೊರ ಹೋಗಲೇಬೇಕಾದ ಅನಿವಾರ್ಯ.

    ಈಗಾಗಲೇ ಮನೆಯಿಂದ ಇಬ್ಬರು ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಇಬ್ಬರಿಗೆ ಗಾಯವಾಗಿದ್ದರಿಂದ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಒಟ್ಟು ನಾಲ್ಕು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದಿದ್ದು ಆಗಿದೆ. ಇದೀಗ ಉಳಿದವರ ಮಧ್ಯ ಪೈಪೋಟಿ ನಡೆದಿದೆ. ಈ ಬಾರಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಅವರಲ್ಲಿ ಯಾರು ಹೊರ ಬರುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಆದರೆ, ಸತತವಾಗಿ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ವಾರ ಬಚಾವ್ ಆಗಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಈ ವಾರ ನಾಮಿನೇಟ್ ಪ್ರಕ್ರಿಯೆಗಾಗಿ ಬಿಗ್ ಬಾಸ್ ಎರಡು ಬಾಕ್ಸ್ ಕಳುಹಿಸಿದ್ದರು. ಒಂದು ಬಾಕ್ಸ್ ನಲ್ಲಿ ಕಣ್ಣಿನ ಚಿತ್ರ ಮತ್ತೊಂದು ಬಾಕ್ಸ್ ನಲ್ಲಿ ಕನ್ಫೆಷನ್ ರೂಮ್ ಎಂದು ಬರೆಯಲಾಗಿದೆ. ಕಣ್ಣಿನ ಚಿತ್ರ ಇದ್ದವರು ನೇರವಾಗಿ, ಕನ್ಫೆಷನ್ ರೂಮ್ ಅಂತ ಇದ್ದರೆ ಕನ್ಫೆಷನ್ ರೂಮ್ ಗೆ ತೆರಳಿ ನಾಮಿನೇಟ್ ಮಾಡಬೇಕಿತ್ತು. ಚೈತ್ರಾ, ಜಯಶ್ರೀ, ಆರ್ಯವರ್ಧನ್, ನಂದಿನಿ, ಅಕ್ಷತಾ, ರೂಪೇಶ್, ಸೋಮಣ್ಣ ಹೀಗೆ ಏಳು ಜನರು ವೋಟು ಪಡೆದುಕೊಂಡು ನಾಮಿನೇಟ್ ಆದರು. ಆದರೆ, ಸೋನು ಶ್ರೀನಿವಾಸ್ ಗೌಡಗೆ ಯಾರೂ ವೋಟು ಮಾಡದೇ ಇರುವ ಕಾರಣಕ್ಕಾಗಿ ಸೇಫ್ ಆದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಯಿಂದ ಹೊರ ಹೋಗಲಿರುವ ‘ಆ’ ಸ್ಪರ್ಧಿ ಯಾರು?

    ಬಿಗ್‍ಬಾಸ್ ಮನೆಯಿಂದ ಹೊರ ಹೋಗಲಿರುವ ‘ಆ’ ಸ್ಪರ್ಧಿ ಯಾರು?

    ಬಿಗ್‍ಬಾಸ್ ಮನೆಯವಾರಾಂತ್ಯದ ಕಟ್ಟೆ ಪಂಚಾಯ್ತಿ ಇಂದು ನಡೆಯಲಿದೆ. ಮನೆಯ ಸದಸ್ಯರಲ್ಲಿ ಒಬ್ಬರು ಬಿಗ್‍ಬಾಸ್ ಜರ್ನಿಯನ್ನು ಇಂದು ಮುಗಿಸಲಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚನನ್ನು ನೋಡುವ ಖುಷಿ ಒಂದೆಡೆಯಾದರೆ ಮನೆಯಿಂದ ಯಾರು ಹೋಗುತ್ತಾರೆ ಎನ್ನುವ ಭಯ ಮನೆಯ ಸದಸ್ಯರಿಗೆ ಶುರುವಾಗಿದೆ.

    ಈ ವಾರ ಅರವಿಂದ್ ಒಬ್ಬರನ್ನು ಬಿಟ್ಟು ಉಳಿದಂತೆ ಮನೆಯ ಎಲ್ಲಾ ಸದಸ್ಯರು ಎಲಿಮಿನೇಷನ್‍ಗೆ ನಾಮಿನೇಟ್ ಆಗಿದ್ದಾರೆ. ಎಲ್ಲರಲ್ಲಿ ನಡುಕ ಶುರುವಾಗಿದೆ. ಎಲ್ಲರೂ ಸಪ್ಪೆ ಮೋರೆಯನ್ನು ಹಾಕಿ ಕುಳಿತ್ತಿದ್ದಾರೆ. ಬಿಗ್‍ಬಾಸ್ ಒಬ್ಬರ ಆಟವನ್ನು ಮುಗಿಸಿ ಮನೆಯಿಂದ ಕಳುಹಿಸಲು ಪ್ಲಾನ್ ಮಾಡಿದ್ದಾರೆ. ಮೊದಲ ವಾರದಿಂದಲೂ ಮಹಿಳೆಯರೆ ಎಲಿಮಿನೇಟ್ ಆಗುತ್ತಿರುವುದರಿಂದ ಈ ವಾರ ಪುರುಷರು ಹೋಗಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ.

    ಕಳೆದ ಬಾರಿ ಅರವಿಂದ್, ದಿವ್ಯ ಜೋಡಿ ಟಾಸ್ಕ್‍ನಲ್ಲಿ ಚೆನ್ನಾಗಿ ಆಡಿದ್ದರು. ಜೊತೆಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಹಾಗಾಗಿ ಅರವಿಂದ್ ಎಲಿಮಿನೇಟ್ ಪ್ರಕ್ರಿಯೆಯಿಂದ ಬಚಾವ್ ಆಗಿದ್ದಾರೆ. 13 ಜನರಲ್ಲಿ ಯಾರಾದರು ಒಬ್ಬರು ಮನೆಯಿಂದ ಹೊರಹೋಗುವುದು ಪಕ್ಕಾ ಆಗಿದೆ. ಹಾಗಾಗಿ ಈ ಕೂತೂಹಲತೆಗೆ ವೀಕ್ಷಕರು ಕಾದು ಕುಳಿತಿದ್ದಾರೆ. ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ 4ನೇ ವಾರಾಂತ್ಯದ ಎಲಿಮಿನೇಷನ್ ಇಂದು ನಡೆಯುವುದಂತೂ ಪಕ್ಕಾ ಆಗಿದೆ. ಕಳೆದವಾರ ಗೀತಾ ಅವರು ಮನೆಯಿಂದ ಹೊರ ಹೋದರು. ಮೊದಲ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ ನಡೆದರೆ. 2ನೇ ವಾರ ನಿರ್ಮಲಾ ಅವರು ಎಲಿಮಿನೇಟ್ ಆಗಿದ್ದಾರೆ.

    ಈ ಬಾರಿ ಕೂಡ ಅರವಿಂದ್ ಅವರನ್ನು ಹೊರತು ಪಡಿಸಿ ಉಳಿದೆಲ್ಲವರು ನಾಮಿನೇಟ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಮೊದಲವಾರದಿಂದಲೂ ಮಹಿಳ ಸ್ಪರ್ಧಿಗಳೆ ಮನೆಯಿಂದ ಆಚೆ ಹೋಗಿದ್ದಾರೆ. ಈ ವಾರ ಪುರುಷ ಸ್ಪರ್ಧಿ ಹೋಗುತ್ತಾರಾ? ಎಂಬ ಅನುಮಾನಮೂಡಿದೆ. ಈವಾರದ ಕಟ್ಟೆ ಪಂಚಾಯತುಯಲ್ಲಿ ಕಾದು ನೋಡ ಬೇಕಿದೆ.

  • ಈ ವಾರ ಎಲಿಮಿನೇಷನ್ ಇಲ್ಲ, ಆದ್ರೂ ನಾಲ್ವರು ನಾಮಿನೇಟ್

    ಈ ವಾರ ಎಲಿಮಿನೇಷನ್ ಇಲ್ಲ, ಆದ್ರೂ ನಾಲ್ವರು ನಾಮಿನೇಟ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಪ್ರತಿವಾರವೂ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ. ಆದರೆ 13ನೇ ವಾರ ಎಲಿಮಿನೇಷನ್ ಇಲ್ಲ. ಆದರೂ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ನಾಲ್ವರು ನಾಮಿನೇಟ್ ಆಗಿದ್ದಾರೆ.

    ಮನೆಯ ಸದಸ್ಯರ ಅನುಸಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಪ್ರಿಯಾಂಕಾ ಮತ್ತು ಚಂದನ್ ಆಚಾರ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ಒಬ್ಬ ಸ್ಪರ್ಧಿಯೂ ಮನೆಯಿಂದ ಹೋಗಲ್ಲ. ಯಾಕೆಂದರೆ ಈ ವಾರ ಎಲಿಮಿನೇಷನ್ ಇಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹಾಗಾಗಿ ಈ ವಾರ ಯಾರನ್ನೂ ಮನೆಯಿಂದ ಕಳುಹಿಸಲ್ಲ.

    ಬಿಗ್‍ಬಾಸ್ ಸ್ಪರ್ಧಿಗಳ ಮನಸ್ಥಿತಿಯನ್ನು ತಿಳಿದುಕೊಳ್ಳಲು ನಾಮಿನೇಷನ್ ಪ್ರಕ್ರಿಯೆ ಮಾಡಿದ್ದಾರೆ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿಲ್ಲ. ಚಂದನಾ ಮನೆಯಿಂದ ಹೊರ ಹೋಗುವಾಗ ಪ್ರಿಯಾಂಕಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇನ್ನೂ ಕ್ಯಾಪ್ಟನ್ ಕಿಶನ್ ಹಾಗೂ ಕಳೆದ ವಾರವೇ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿರುವ ಕುರಿ ಪ್ರತಾಪ್, ವಾಸುಕಿ ವೈಭವ್‍ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡುವಂತಿರಲಿಲ್ಲ. ಕೊನೆಗೆ ಮನೆಯ ಸದಸ್ಯರು ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಹರೀಶ್ ರಾಜ್ ನಾಲ್ವರನ್ನು ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಿದ್ದರು.

    ಆಗ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಕಿಶನ್‍ಗೆ ಒಂದು ವಿಶೇಷ ಅವಕಾಶವನ್ನು ಕೊಟ್ಟಿದ್ದರು. ಅದೇನೆಂದರೆ ನಾಮಿನೇಟ್ ಆಗಿರುವ ಒಬ್ಬರನ್ನು ಸೇಫ್ ಮಾಡುವ ಅವಕಾಶವನ್ನು ಬಿಗ್‍ಬಾಸ್ ಕೊಟ್ಟಿದ್ದರು. ಅದರಂತೆ ಕಿಶನ್, ಹರೀಶ್ ರಾಜ್ ಅವರನ್ನು ಸೇಫ್ ಮಾಡಿದ್ದಾರೆ. ಕೊನೆಯಲ್ಲಿ ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಹಾಗೂ ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರೂ ಮನೆಯಿಂದ ಹೊರ ಹೋಗುವುದಿಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇರುತ್ತದೆ.

  • ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್ ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಶನ್ ನಡೆಯುತ್ತೆ. ಈ ವಾರ ಕೂಡ ನಾಮಿನೇಶನ್ ನಡೆದಿದ್ದು, ಆಂಡ್ರ್ಯೂ, ಶಶಿ ಹಾಗೂ ಧನರಾಜ್ ಮೂವರು ರಾಕೇಶ್ ಅವರನ್ನು ನಾಮಿನೇಟ್ ಮಾಡಿದರು. 3 ವೋಟ್ ಪಡೆದು ರಾಕೇಶ್ ನಾಮಿನೇಟ್ ಆಗಿದ್ದರು.

    ನಾಮಿನೇಶನ್ ನಂತರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳಿಗೆ ಚಟುವಟಿಕೆಯನ್ನು ನೀಡಿದರು. `ನನ್ ಬಲೂನೇ ಸ್ಟ್ರಾಂಗು ಗುರು’ ಎಂದು ಟಾಸ್ಕ್ ನೀಡಿ ಯಾರ ಬಲೂನ್ ಕೊನೆಯವರೆಗೂ ಒಡೆಯದೇ ಹಾಗೇ ಇರುತ್ತದೆಯೋ ಅವರು ಸೇಫ್ ಆಗಬಹುದು. ಅಷ್ಟೇ ಅಲ್ಲದೇ ಸೇಫ್ ಆಗಿರುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್‍ಬಾಸ್ ಕಡೆಯಿಂದ ಆದೇಶ ಬಂತು.

    ರಾಕೇಶ್ ಈ ಟಾಸ್ಕ್ ನಲ್ಲಿ ಭಾಗವಹಿಸಿ ಕೊನೆಯವರೆಗೂ ಬಲೂನ್ ಒಡೆಯದೇ ನೋಡಿಕೊಂಡರು. ಬಳಿಕ ಈ ಟಾಸ್ಕ್ ನಲ್ಲಿ ಗೆದ್ದು ಅವರು ಸೇಫ್ ಆದರು. ಸೇಫ್ ಆದ ನಂತರ ರಾಕೇಶ್ ಅವರು ಜಯಶ್ರೀಯನ್ನು ನಾಮಿನೇಟ್ ಮಾಡಿದರು.

    ಈ ವಾರ ಬಿಗ್‍ಬಾಸ್ ಮನೆಯಲ್ಲಿ ಜಯಶ್ರೀ, ಆಂಡ್ರ್ಯೂ, ಸೋನು, ಅಕ್ಷತಾ, ಧನರಾಜ್, ನವೀನ್, ರ‍್ಯಾಪಿಡ್ ರಶ್ಮಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬೀಳಲಿದ್ದಾರೆ ಎಂಬುದು ಶನಿವಾರ ಕಿಚ್ಚ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯ ಪ್ರೆಸ್ ಕೌನ್ಸಿಲ್ ಗೆ ಸಂಸದ ಪ್ರತಾಪ್ ಸಿಂಹ ನೇಮಕ

    ಭಾರತೀಯ ಪ್ರೆಸ್ ಕೌನ್ಸಿಲ್ ಗೆ ಸಂಸದ ಪ್ರತಾಪ್ ಸಿಂಹ ನೇಮಕ

    ನವದೆಹಲಿ: ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಸಭೆಯ ಮೂವರು ಸದ್ಯಸರಾದ ಮಿನಾಕ್ಷಿ ಲೇಖಿ, ಪ್ರತಾಪ್ ಸಿಂಹ ಹಾಗೂ ಟಿ.ಸಿ ವೆಂಕಟೇಶ್ ಬಾಬು ಅವರನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    ಭಾರತೀಯ ಪತ್ರಿಕಾ ಮಂಡಳಿಯು ಅಧ್ಯಕ್ಷರ ನೇತೃದ್ವದಲ್ಲಿ 28 ಸದಸ್ಯರನ್ನು ಹೊಂದಿರುವುದು ಕಡ್ಡಾಯ. ಇವರಲ್ಲಿ ಐವರು ಸಂಸತ್ ಸದಸ್ಯರಾಗಿದ್ದು, ಲೋಕಸಭೆಯಿಂದ ಮೂವರನ್ನು ಸ್ಪೀಕರ್ ನೇಮಕ ಮಾಡಿದರೆ, ಇನ್ನಿಬ್ಬರನ್ನು ರಾಜ್ಯಸಭೆಯ ಅಧ್ಯಕ್ಷರು ನೇಮಕ ಮಾಡುತ್ತಾರೆ.

    ಮೂವರು ಎಂ.ಪಿಗಳನ್ನು ಸುಮಿತ್ರಾ ಮಹಾಜನ್ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಮಿನಾಕ್ಷಿ ಲೇಖಿ ಹಾಗೂ ಪ್ರತಾಪ್ ಸಿಂಹ ಬಿಜೆಪಿ ಪಕ್ಷದವರಾಗಿದ್ದು, ಟಿ.ಸಿ ವೆಂಕಟೇಶ್ ಬಾಬು ಎಐಎಡಿಎಂಕೆ ಪಕ್ಷದವರಾಗಿದ್ದಾರೆ.