Tag: Nomadic

  • ಸೋನು ಸೂದ್ ಭೇಟಿಗೆ ಹೊರಟ ಅಲೆಮಾರಿ ಜನಾಂಗದ ಯುವಕರ ತಂಡ

    ಸೋನು ಸೂದ್ ಭೇಟಿಗೆ ಹೊರಟ ಅಲೆಮಾರಿ ಜನಾಂಗದ ಯುವಕರ ತಂಡ

    ಹಾವೇರಿ: ಸೋನು ಸೂದ್ ಭೇಟಿ ಮಾಡಲು ಹಾವೇರಿಯ ಅಲೆಮಾರಿ ಜನಾಂಗದ ಯುವಕರ ತಂಡ ಹೊರಟಿದ್ದಾರೆ. ಇದನ್ನೂ ಓದಿ:  ಯಡಿಯೂರಪ್ಪ ಅವ್ರದು ರಾಕ್ಷಸ ಸರ್ಕಾರ: ಸಿದ್ದರಾಮಯ್ಯ

    ಶಾಶ್ವತ ಸೂರಿಲ್ಲ. ಜೋರಾದ ಗಾಳಿ ಬಿಟ್ಟಾಗ ಹಾರಿ ಹೋಗೋ ಗುಡಿಸಲುಗಳಲ್ಲಿ ಜೀವ ಕೈಯಲ್ಲಿ ಹಿಡ್ಕೊಂಡು ಬದುಕುತ್ತಿದ್ದಾರೆ. ಅವರಿಗೆ ತಾತ್ಕಾಲಿಕ ತಗಡಿನ ಶೆಡ್‍ಗಳನ್ನ ನಿರ್ಮಿಸಿಕೊಟ್ಟಿದ್ದು, ಬಿಟ್ಟರೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಹೀಗಾಗಿ ಈಗ ಅಲ್ಲಿನ ಜನರ ಪೈಕಿ ಆರು ಜನ ಯುವಕರು ಬಹುಭಾಷಾ ನಟ ಸೋನು ಸೂದ್ ಭೇಟಿಗೆ ಮುಂಬೈಗೆ ಹೊರಟು ನಿಂತಿದ್ದಾರೆ.

    ಹಾವೇರಿಯ ಗಣಜೂರು ರಸ್ತೆಯಲ್ಲಿರುವ ಶಾಂತಿನಗರದ ಸುಡುಗಾಡು ಸಿದ್ದರ ಜನಾಂಗದ ಜನರು ಕಳೆದ ಹಲವು ವರ್ಷಗಳಿಂದ ಸುಡುಗಾಡು ಸಿದ್ದರ 25 ಅಧಿಕ ಕುಟುಂಬಗಳ 150 ಜನರು ಇಲ್ಲಿ ವಾಸವಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರಿದ್ದಾರೆ. ಮೂಲತಃ ಅಲೆಮಾರಿ ಜನಾಂಗದವರಾದರೂ ಸುಮಾರು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ. ಇಲ್ಲಿಯ ಪಡಿತರ ಚೀಟಿ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತನ ಕೈಯಲ್ಲಿ ಶೂ ಧರಿಸಿಕೊಂಡ ಸಿದ್ದರಾಮಯ್ಯ

    ಕಳೆದ ಕೆಲವು ವರ್ಷಗಳ ಹಿಂದೆ ಸರಕಾರ ಇವರಿಗೆ ತಾತ್ಕಾಲಿಕ ತಗಡಿನ ಶೆಡ್‍ಳನ್ನು ನಿರ್ಮಿಸಿಕೊಟ್ಟಿತ್ತು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಬೀಸಿದ ಬಿರುಗಾಳಿಗೆ ಶೆಡ್‍ಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಶಾಶ್ವತ ಸೂರು ಕೊಡಿಸಿ ಅಂತಾ ಸಾಕಷ್ಟು ಮನವಿಗಳನ್ನ ಸಲ್ಲಿಸಿದ್ದಾರೆ. ಆದರೆ ಈವರೆಗೂ ಶಾಶ್ವತ ಸೂರು ದೊರೆತಿಲ್ಲ. ಹೀಗಾಗಿ ಈಗ ಈ ಜನಾಂಗದ ಆರು ಜನ ಯುವಕರು ಬಹುಭಾಷಾ ನಟ ಸೋನು ಸೂದ್‍ರಿಂದ ಸಹಾಯ ಬಯಸಿ ಮುಂಬೈಗೆ ಹೊರಟಿದ್ದಾರೆ.

    ಸುಡುಗಾಡು ಸಿದ್ದರ ಜನಾಂಗದ ಈ ಯುವಕರು ಈವರೆಗೂ ನಟ ಸೋನು ಸೂದ್‍ರನ್ನ ಮುಖಾಮುಖಿ ಭೇಟಿ ಆಗಿಲ್ಲ. ಚಲನಚಿತ್ರಗಳಲ್ಲಿ ಮಾತ್ರ ಸೋನು ಸೂದ್ ರನ್ನ ನೋಡಿದ್ದಾರೆ. ಉಳಿದಂತೆ ಸೋನು ಸೂದ್ ಅನೇಕರಿಗೆ ಸಹಾಯ ಮಾಡಿರುವ ಬಗ್ಗೆ ಮಾದ್ಯಮಗಳು ಹಾಗೂ ಯುಟ್ಯೂಬ್‍ನಲ್ಲಿ ನೋಡಿದ್ದಾರಂತೆ. ಹೀಗಾಗಿ ತಮ್ಮ ಸಮಸ್ಯೆಗೂ ನಟ ಸೋನು ಸೂದ್ ರಿಂದ ಅಲ್ಪಸ್ವಲ್ಪ ಸಹಾಯ ಸಿಗಬಹುದು ಅಂತಾ ಆರು ಜನ ಯುವಕರು ಸೋನು ಸೂದ್ ಬಳಿ ತೆರಳುತ್ತಿದ್ದಾರೆ. ಹಾವೇರಿಯಿಂದ ಮುಂಬೈಗೆ ಪಾದಯಾತ್ರೆ ಮೂಲಕವೆ ತೆರಳಬೇಕು ಅನ್ನೋ ಉದ್ದೇಶ ಹೊಂದಿದ್ದರಂತೆ. ಕಾರಣಾಂತರಗಳಿಂದ ಅದು ಸಾಧ್ಯವಾಗದೆ ಇರೋದ್ರಿಂದ ನಾಳೆ ಬೆಳಿಗ್ಗೆ ರೈಲಿನ ಮೂಲಕ ಹಾವೇರಿಯಿಂದ ಆರು ಜನ ಯುವಕರು ನಟ ಸೋನು ಸೂದ್‍ರ ಭೇಟಿಗಾಗಿ ಅವರನ್ನ ಹುಡುಕಿಕೊಂಡು ಮುಂಬೈಗೆ ಹೋಗುತ್ತಿದ್ದಾರೆ. ಸಹಾಯ ಬಯಸಿ ಜನಾಂಗದ ಯುವಕರು ಬಹುಭಾಷಾ ನಟ ಸೋನು ಸೂದ್ ಮನೆಗೆ ಹೋಗುತ್ತಿದ್ದಾರೆ. ಆದರೆ ಸೋನು ಸೂದ್ ಇವರಿಗೆ ಭೇಟಿಯಾಗಿ, ಅವರಿಂದ ಇವರಿಗೆ ಯಾವ ರೀತಿಯ ಸ್ಪಂಧನೆ ಸಿಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

  • ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ- ಅಲೆಮಾರಿ ಜನಾಂಗ

    ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ- ಅಲೆಮಾರಿ ಜನಾಂಗ

    ಚಿಕ್ಕೋಡಿ: ದುರ್ಗಾ ಮಾತೆ ಇರುವಾಗ ನಮಗೇಕೆ ಕೊರೊನಾ ಲಸಿಕೆ ಎನ್ನುವ ಅಲೆಮಾರಿ ಜನಾಂಗಕ್ಕೆ ಕೊರೊನಾ ಭಯವೇ ಇಲ್ಲದಂತಿರುವುದು ಚಿಕ್ಕೋಡಿಯಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಪ್ರವಾಸಿಗರ ಭೇಟಿಗೆ ತಾಜ್ ಮಹಲ್ ಮುಕ್ತ – ಒಂದೇ ಬಾರಿಗೆ 650 ಮಂದಿಗೆ ಅವಕಾಶ

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಕೊರೊನಾ ರೋಗದ ಭಯವೇ ಇಲ್ಲ. ಕೊರೊನಾ ರೋಗ ನಮಗೆ ಬರುವುದಿಲ್ಲ. ಈ ರೋಗಕ್ಕೂ ನಾವು ಹೆದರುವದಿಲ್ಲ. ಏಕೆಂದರೇ ನಮ್ಮನ್ನ ದುರ್ಗಾಮಾತಾ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ಈ ಜನಾಂಗದ ಜನರಿದ್ದಾರೆ.

    ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ ತನ್ನ ಭಯದಲ್ಲಿ ಇಟ್ಟುಕೊಂಡಿದೆ. ಆದರೆ ಈ ಜನರಿಗೆ ಮಾತ್ರ ಕೊರೊನಾ ಎಂದರೇ ಯಾವುದೇ ಭಯವಿಲ್ಲ. ದೈವ ಶಕ್ತಿಯಿದೆ ಕೊರೊನಾ ರೋಗ ನಮ್ಮ ಬಳಿ ಸುಳಿಯುವುದಿಲ್ಲ ಎನ್ನುವ ನಿರ್ಭಯದಿಂದ ಈ ಜನಾಂಗ ಜೀವನ ನಡೆಸುತ್ತಿದೆ.

    ದುರ್ಗಾಮಾತೆ ಕಾಪಾಡುತ್ತಾಳೆ. ನಾವು ಹಂದಿ ತಿನ್ನುತ್ತೆವೆ. ನಮಗೆ ಕೊರೊನಾ ರೋಗದ ಭಯವೇ ಇಲ್ಲ. ಯಾವುದೇ ಕಾರಣಕ್ಕೂ ನಾವು ಕೊರೊನಾ ಲಸಿಕೆಯನ್ನು ಪಡೆಯುವುದಿಲ್ಲ. ನಮಗೆ ಯಾವುದೇ ಲಸಿಕೆಯ ಅವಶ್ಯಕತೆಯಿಲ್ಲ ಎನ್ನುವ ಈ ಈ ಜನ ಮಾತ್ರ ದೈವ ನಂಬಿಕೆಯಲ್ಲಿರಿವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಜನರಿಗೆ ತಿಳುವಳಿಕೆ ಹೇಳಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.