Tag: nokia phone

  • ನೋಕಿಯಾದಿಂದ ಎಕ್ಸ್‌ಪ್ರೆಸ್‌ ಮ್ಯೂಸಿಕ್‌ ಫೀಚರ್‌ ಡ್ಯುಯಲ್‌ ಸಿಮ್‌ ಫೋನ್‌ ಬಿಡುಗಡೆ

    ನೋಕಿಯಾದಿಂದ ಎಕ್ಸ್‌ಪ್ರೆಸ್‌ ಮ್ಯೂಸಿಕ್‌ ಫೀಚರ್‌ ಡ್ಯುಯಲ್‌ ಸಿಮ್‌ ಫೋನ್‌ ಬಿಡುಗಡೆ

    ನವದೆಹಲಿ: ನೋಕಿಯಾ ಕಂಪನಿ ಭಾರತದ ಮಾರುಕಟ್ಟೆಗೆ 5310 ಎಕ್ಸ್‌ಪ್ರೆಸ್‌ಮ್ಯೂಸಿಕ್‌ ಹೆಸರಿನ ಡ್ಯುಯಲ್‌ ಸಿಮ್‌ ಫೀಚರ್‌ ಫೋನ್‌ ಅನ್ನು ಬಿಡುಗಡೆ ಮಾಡಿದೆ.

    ಯುರೋಪಿಯನ್‌ ಮಾರುಕಟ್ಟೆಗೆ ಮಾರ್ಚ್‌ ತಿಂಗಳಿನಲ್ಲೇ ಬಿಡುಗಡೆಯಾಗಿದ್ದ ಈ ಫೋನಿಗೆ 3,399 ರೂ. ದರವನ್ನು ನಿಗದಿ ಪಡಿಸಲಾಗಿದೆ.

    ಈ ಫೀಚರ್‌ ಫೋನ್‌ನಲ್ಲಿ ಸ್ಮಾರ್ಟ್‌ಫೋನಿನಲ್ಲಿರುವ ಅಪ್ಲಿಕೇಶನ್‌ಗಳು ರನ್‌ ಆಗುವುದಿಲ್ಲ. ಸಿಎಂಆರ್‌ ಸಂಸ್ಥೆಯೊಂದು ಯಾವುದೇ ಫೋನ್‌ ಆದ್ರೂ ಜನ ಫೋನನ್ನು ಹೆಚ್ಚಾಗಿ ಮ್ಯೂಸಿಕ್‌ ಕೇಳಲು ಬಳಸುತ್ತಾರೆ ಎಂದು ಅಧ್ಯಯನ ವರದಿ ನೀಡಿತ್ತು. ಹೀಗಾಗಿ ನೋಕಿಯಾ ಹೆಸರಿನಲ್ಲಿ ಫೋನ್‌ ತಯಾರಿಸುತ್ತಿರುವ ಎಚ್‌ಎಂಡಿ ಗ್ಲೋಬಲ್‌ ಸಂಸ್ಥೆ ಈ ಫೀಚರ್‌ ಫೋನ್‌ ಬಿಡುಗಡೆ ಮಾಡಿದೆ.

    ಗುಣವೈಶಿಷ್ಟ್ಯಗಳು:
    88.2 ಗ್ರಾಂ, ತೂಕ, ಡ್ಯುಯಲ್‌ ಸಿಮ್‌, 2.4 ಇಂಚಿನ ಟಿಎಫ್‌ಟಿ ಸ್ಕ್ರೀನ್‌(240*320 ಪಿಕ್ಸೆಲ್‌), 167 ಪಿಪಿಐ ಹೊಂದಿರುವ ಫೋನ್‌ ಮೀಡಿಯಾಟೆಕ್‌ ಪ್ರೊಸೆಸರ್‌ ನೀಡಲಾಗಿದೆ.

    ಸೀರಿಸ್‌ 30+ ಸಾಫ್ಟ್‌ವೇರ್‌ ನೀಡಲಾಗಿದ್ದು ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ಇರುವ ವಿಜಿಎ ಕ್ಯಾಮೆರಾ ಇದೆ. 2 ಜಿ ಇಂಟರ್‌ನೆಟ್‌ ಜೊತೆ ಒಪೆರಾ ಮಿನಿ, ಎಫ್‌ಎಂ ರೇಡಿಯೋ, ಎಂಪಿ3 ಪ್ಲೇಯರ್‌, ಗ್ಯಾಲರಿ, ಮೊಬೈಲ್‌ ಸ್ಟೋರ್‌, ಹವಾಮಾನ ಅಪ್ಲಿಕೇಶನ್‌ ಇದೆ.

    16 ಎಂಬಿ ಆಂತರಿಕ ಮೆಮೊರಿ, 8 ಎಂಬಿ ರ‍್ಯಾಮ್‌ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ. 1200 ಎಂಎಎಚ್‌ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌ನೊಂದಿಗೆ ಬಿಡುಗಡೆಯಾಗಿದೆ.

    ಜೂನ್‌ 23 ರಿಂದ ದೇಶದೆಲ್ಲೆಡೆ ಈ ಫೋನಿನ ಮಾರಾಟ ಆರಂಭವಾಗಲಿದ್ದು, ಪ್ರಿ ಆರ್ಡರ್‌ ಈಗಾಗಲೇ ಆರಂಭವಾಗಿದೆ. ನೋಕಿಯಾ.ಕಾಂ ಮತ್ತು ಅಮೇಜಾನ್‌.ಕಾಂ ಮೂಲಕ ಬುಕ್‌ ಮಾಡಬಹುದು.

  • 5 ಇಂಚಿನ ಎಚ್‍ಡಿ ಸ್ಕ್ರೀನ್, 4100 ಎಂಎಎಚ್ ಬ್ಯಾಟರಿ ಹೊಂದಿರೋ ನೋಕಿಯಾ ಫೋನ್ ಬಿಡುಗಡೆ

    5 ಇಂಚಿನ ಎಚ್‍ಡಿ ಸ್ಕ್ರೀನ್, 4100 ಎಂಎಎಚ್ ಬ್ಯಾಟರಿ ಹೊಂದಿರೋ ನೋಕಿಯಾ ಫೋನ್ ಬಿಡುಗಡೆ

    ನವದೆಹಲಿ: ದೇಶೀಯ ಮಾರುಕಟ್ಟೆಗೆ ಮತ್ತೊಂದು ನೋಕಿಯಾ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.

    ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್‍ಎಂಡಿ ಗ್ಲೋಬಲ್ ಈ ಫೋನನ್ನು ಬಿಡುಗಡೆ ಮಾಡಿದ್ದು, ಈ ಫೋನಿಗೆ 99 ಯುರೋ( ಅಂದಾಜು 7 ಸಾವಿರ ರೂ.) ದರವನ್ನು ನಿಗದಿ ಪಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತದಲ್ಲಿ 6 ಸಾವಿರ ರೂ.ದಿಂದ 6,500 ರೂ. ಒಳಗಡೆ ದರ ನಿಗದಿಯಾಗುವ ಸಾಧ್ಯತೆಯಿದೆ ಎಂದು ಮಧ್ಯಮಗಳು ವರದಿ ಮಾಡಿವೆ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ
    143.5*71.3*9.3 ಮಿಲಿ ಮೀಟರ್ ಗಾತ್ರ, ಡ್ಯುಯಲ್ ಸಿಮ್, 5 ಇಂಚಿನ ಎಚ್‍ಡಿ ಸ್ಕ್ರೀನ್(1280*720 ಪಿಕ್ಸೆಲ್,294 ಪಿಪಿಐ, 67% ಸ್ಕ್ರೀನ್ ಬಾಡಿ ಅನುಪಾತ) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3

    ಓಎಸ್ ಮತ್ತು ಪ್ರೊಸೆಸರ್:
    ಆಂಡ್ರಾಯ್ಡ್ ನೂಗಟ್ ಪ್ರೊಸೆಸರ್, ಕ್ವಾಲಕಂ ಸ್ನಾಪ್‍ಡ್ರಾಗನ್  212 1.3 GHz Cortex-A7 ಪ್ರೊಸೆಸರ್, 1 ಜಿಬಿ ರಾಮ್, Adreno 304 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೊರಿ, ಕ್ಯಾಮೆರಾ, ಇತರೇ:
    8 ಜಿಬಿ ಆಂತರಿಕ ಮಮೊರಿ, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 8 ಎಂಪಿ ಹಿಂದುಗಡೆ, 5 ಎಂಪಿ ಮುಂದುಗಡೆ ಕ್ಯಾಮೆರಾ., 4100 ಎಂಎಎಚ್ ಬ್ಯಾಟರಿ

  • ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

    ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

    ನವದೆಹಲಿ: ನೋಕಿಯಾ 3310 ಫೀಚರ್ ಫೋನ್ ಮತ್ತೊಮ್ಮೆ ಬಿಡುಗಡೆಯಾಗಿದೆ. ಆದರೆ ಈ ಫೋನ್ ಎಲ್ಲ ದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

    ಹೌದು. ಇವತ್ತು ಕಂಪೆನಿಯೊಂದು ತಯಾರಿಸಿದ ಫೋನ್ ವಿಶ್ವದೆಲ್ಲೆಡೆ ಕಾರ್ಯನಿರ್ವಹಿಸಬೇಕಾದರೆ ಅದು ಕನಿಷ್ಠ 850MHZ, 900MHz, 1800MHz ಮತ್ತು 1900MHz ಬ್ಯಾಂಡ್‍ಗೆ ಬೆಂಬಲ ನೀಡಬೇಕಾಗುತ್ತದೆ. ಆದರೆ ನೋಕಿಯಾ 3310 ಫೋನ್  900 MHz ಮತ್ತು 1800 MHz ಬ್ಯಾಂಡ್‍ಗಳಿಗೆ ಮಾತ್ರ ಸಪೋರ್ಟ್ ಮಾಡುತ್ತದೆ. ಈ ಜಿಎಸ್ಎಂ ಸೆಲ್ಯೂಲರ್ ಫ್ರಿಕ್ವೆನ್ಸಿ ಹಲವು ದೇಶಗಳಲ್ಲಿ ಇಲ್ಲವೇ ಇಲ್ಲ.

    ವಿಶೇಷವಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್ ಇಲ್ಲದ ಕಾರಣ 3310 ಕಾರ್ಯನಿರ್ವಹಿಸುವುದಿಲ್ಲ. ಸಿಂಗಾಪುರದಲ್ಲಿ ಟೆಲಿಕಾಂ ಕಂಪೆನಿ ಸ್ಟಾರ್‍ಹಬ್, 2ಜಿ ಮಾತ್ರ ಹೊಂದಿರುವ ಫೋನ್‍ಗಳು ಕರೆ, ಎಸ್‍ಎಂಎಸ್ ಮತ್ತು ಡೇಟಾ ಸೇವೆವನ್ನು 2017ರ ಏಪ್ರಿಲ್ ನಂತರ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಇಲ್ಲೂ ಈ ಫೋನನ್ನು ಬಳಸಲು ಸಾಧ್ಯವಿಲ್ಲ.

    ಎರಡನೇ ತ್ರೈಮಾಸಿಕದಲ್ಲಿ  ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಪ್ರಾಚ್ಯ, ಏಷ್ಯಾ ಪೆಸಿಫಿಕ್, ಯುರೋಪ್, ಆಫ್ರಿಕಾ ದೇಶಗಳನ್ನು ಗುರಿಯಾಗಿಸಿಕೊಂಡು ನೋಕಿಯಾ ಈ ಫೋನ್ ತಯಾರಿಸಿದೆ.

    ಭಾರತದಲ್ಲಿ ರಿಲಯನ್ಸ್ ಜಿಯೋ ಸಿಮ್‍ಗೆ ನೋಕಿಯಾ 3310 ಸಪೋರ್ಟ್ ಮಾಡುವುದಿಲ್ಲ. ಎಲ್‍ಟಿಇ ಫೋನ್‍ಗಳಿಗೆ ಮಾತ್ರ ಜಿಯೋ ಸಿಮ್ ಸಪೋರ್ಟ್ ಮಾಡುತ್ತದೆ.

    ಇದನ್ನೂ ಓದಿ: 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

     

    https://www.youtube.com/watch?v=r5hVdeTSm0Y