Tag: noise pollution

  • ಹಾರ್ನ್ ಮಾಡ್ತೀರಾ? ಇದನ್ನು ಓದಲೇಬೇಕು ನೀವು : ಜನಜಾಗೃತಿಗಾಗಿ ಸ್ಟಾರ್ ಗಳ ವಿನೂತನ ಬಳಕೆ

    ಹಾರ್ನ್ ಮಾಡ್ತೀರಾ? ಇದನ್ನು ಓದಲೇಬೇಕು ನೀವು : ಜನಜಾಗೃತಿಗಾಗಿ ಸ್ಟಾರ್ ಗಳ ವಿನೂತನ ಬಳಕೆ

    ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮಾಡುವವರ ವಿರುದ್ಧ ವಿನೂತನ ರೀತಿಯಲ್ಲಿ ತಿಳುವಳಿಕೆ ನೀಡಲು ಮುಂದಾಗಿದೆ. ಕನ್ನಡದ ಹೆಸರಾಂತ ನಟರ ಚಿತ್ರಗಳ ಡೈಲಾಗ್ ಇಟ್ಟುಕೊಂಡು ಪೋಸ್ಟರ್ ತಯಾರಿಸಿದ್ದು, ಡಾ.ರಾಜ್ ಕುಮಾರ್, ಉಪೇಂದ್ರ, ಯಶ್, ಪುನೀತ್ ರಾಜ್ ಕುಮಾರ್ ಹೀಗೆ ಹಲವು ಕಲಾವಿದರ ಪಾಪ್ಯುಲರ್ ಡೈಲಾಗ್ ಬಳಸಿಕೊಂಡು ಶಬ್ದ ಮಾಡಬೇಡಿ ಎಂದು ಹೇಳುವುದಕ್ಕೆ ಹೊರಟಿದೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಡಾ.ರಾಜ್ ಕುಮಾರ್ ನಟನೆಯ ಚಿತ್ರಗಳ ಡೈಲಾಗ್ ಗಳಾದ “ಇದೇ ನನ್ನ ಗುರಿ ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ ನಾನ್ ಹಾರ್ನ್ ಮಾಡೋದಿಲ್ಲ’, ‘ಮೀನಾಕ್ಷಿ ಮೀನಾಕ್ಷಿ ಎಂಥ ಒಳ್ಳೆಯ ಮಗ್ಳಿಗೆ ಜನ್ಮ ಕೊಟ್ಟೆ ಸೌಂಡೇ ಮಾಡೋದಿಲ್ಲ.. ಆಹಾ’, ‘ ಆ ನಿನ್ನ ಸಂಪತ್ತಿಗೆ ನನ್ನ ಸವಾಲ್. ಹಾರ್ನ್ ಮಾಡಬೇಡ ಬಡವ ರಾಸ್ಕಲ್’, ‘ ಭೋರ್ಗರೆದು ನುಗ್ಗುವ ಟ್ರಾಫಿಕ್ ಪ್ರವಾಹವನ್ನು ಪ್ರತಿರೋಧಿಸಬಲ್ಲೆ. ಈ ಶಬ್ದವನ್ನು ಮಾತ್ರ ನಾ ಸಹಿಸಲಾರೆ. ಹಾರ್ನ್ ಮಾಡಬೇಡ ಗಾಂಢೀವಿ’ ಹೀಗೆ ಸಂಭಾಷಣೆಯನ್ನು ಬಳಸಿಕೊಂಡು ಪೋಸ್ಟರ್ ಮಾಡಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಯಶ್ ಅವರ ಕೆಜಿಎಫ್ 2 ಸಿನಿಮಾದ ಸಂಭಾಷಣೆ ಇಟ್ಟುಕೊಂಡು. “ಆಳೋಕೆ ಬಂದರೆ ಸುಲ್ತಾನ್ ಇವನೆ, ಅಡ್ಡಡ್ಡ ಬಂದ್ರೆ ಸೈತಾನ್ ಇವನೆ ‘ಐ ಡೋಂಟ್ ಲೈಕ್ ಇಟ್ ಹಾಂಕಿಂಗ್’ ಎಂಬ ಪೋಸ್ಟರ್ ಮಾಡಿದ್ದು, ಈ ಪೋಸ್ಟರ್ ಕಂಡು ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಐ ಡೋಂಟ್ ಲೈಕ್ ಇಟ್ ಅಂದಾಕ್ಷಣ ಥಟ್ಟನೆ ನೆನಪಾಗುವ ಕಲಾವಿದ ಉಪೇಂದ್ರ. ಉಪೇಂದ್ರ ಸಿನಿಮಾದ ಈ ಪಾಪ್ಯುಲರ್ ಡೈಲಾಗ್ ಅನ್ನು ಆಯ್ಕೆ ಮಾಡಿಕೊಂಡಿರುವ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು “ಹಾರ್ನ್ ಮಾಡಬೇಡ ಕಾಂತ.. ಈ ಡೋಂಟ್ ಲೈಕ್ ಇಟ್ “ ಎಂಬ ಪೋಸ್ಟರ್ ರಿಲೀಸ್ ಮಾಡಿದೆ.

    ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರ ಪೋಸ್ಟರ್ ಕೂಡ ಶಬ್ದ ಮಾಡಬೇಡಿ ಎಂದು ಹೇಳುತ್ತಿದ್ದು, “ಡೋಂಟ್ ಬಿ ಎ ಹಾಂಕಿಂಗ್ ಸ್ಟಾರ್, ಬಿ ಎ ಪವರ್ ಸ್ಟಾರ್’ ಎಂಬ ಕ್ಯಾಚಿ ಕೋಟ್ ಅನ್ನು ಈ ಪೋಸ್ಟರ್ ಗಾಗಿ ಬಳಸಲಾಗಿದೆ. ಈ ಪೋಸ್ಟರ್ ಗೆ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ.

  • ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸರಿಂದ ನೋಟಿಸ್

    ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸರಿಂದ ನೋಟಿಸ್

    ಬೆಂಗಳೂರು: ನಗರದ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ.

    venu gopala swamy

    ಮಲ್ಲೇಶ್ವರಂ 11ನೇ ಕ್ರಾಸ್‍ನಲ್ಲಿರುವ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಸಮಯದಲ್ಲಿ ಶಬ್ದ ವಾಹಕದ ಮೂಲಕ ಜೋರಾಗಿ ಶಬ್ದ ಮಾಡುತ್ತಾರೆ. ಇದರಿಂದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ ಸೃಷ್ಠಿಸುವವರ ವಿರುದ್ಧ ಯುಪಿ ಅಸ್ತ್ರ ಬಳಸಿ: ಸಿಎಂಗೆ ರೇಣುಕಾಚಾರ್ಯ ಮನವಿ

    venu gopala swamy

    ಹೀಗಾಗಿ ಇದೇ ತಿಂಗಳ 9ನೇ ತಾರಿಖು ಜನವಸತಿ ಪ್ರದೇಶದಲ್ಲಿ ರೂಲ್ಸ್ ಫಾಲೋ ಮಾಡುವಂತೆ ದೇವಸ್ಥಾನಕ್ಕೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ನೀಡಿದ್ದು, ಮಾಲಿನ್ಯ 2000 ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮೀರದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಬೇಕು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಬಾರುಕೋಲು ಬೀಸುತ್ತೇನೆ: ಸಿದ್ದರಾಮಯ್ಯ

  • ವಾಲಗದ ಸದ್ದು, ನಾದಸ್ವರ ಇಲ್ಲದೇ ಮದ್ವೆ ಆಗಬೇಕಂತೆ!

    ವಾಲಗದ ಸದ್ದು, ನಾದಸ್ವರ ಇಲ್ಲದೇ ಮದ್ವೆ ಆಗಬೇಕಂತೆ!

    ಬೆಂಗಳೂರು: ಸೌಂಡಿಲ್ಲದೇ ಮದ್ವೆ ಆಗ್ರಪ್ಪ…! ವಾಲಗದ ಸದ್ದು ನಾದಸ್ವರದ ಸದ್ದಿದೊಂದಿಗೆ ಮದ್ವೆ ಆದರೆ ಕೇಸ್ ಹಾಕೋದಕ್ಕೆ ಅಧಿಕಾರಿಗಳು ರೆಡಿಯಾಗಿದ್ದಾರೆ. ಮದುವೆಯಲ್ಲಿ ಸಂಗೀತ ಇರಲೇಬೇಕು. ಮಾಂಗಲ್ಯಧಾರಣೆ ವೇಳೆ ಗಟ್ಟಿಮೇಳ ಆಗಲೇಬೇಕು. ಈ ಸಂಗೀತದಿಂದ ಶಬ್ಧ ಮಾಲಿನ್ಯ ಆಗುತ್ತೆ ಎಂದು ಅಧಿಕಾರಿಗಳು ಮದುವೆ ನಡೆಯುವ ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ.

    ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಫೇಮಸ್ ಜಯಮಹಲ್ ಹೋಟೆಲ್‍ಗೆ ನೋಟಿಸ್ ನೀಡಿದೆ. ಬೆಂಗಳೂರಿನ ರಸ್ತೆಯ ಕೆಟ್ಟು ಹೋದ ವಾಹನ, ಕಾರ್ಖನೆಗಳಿಂದ ಶಬ್ಧ ಮಾಲಿನ್ಯವಾಗ ಆಗಲ್ವಂತೆ. ಮದುವೆಯಲ್ಲಿ ಬಳಸುವ ಸಂಗೀತದಿಂದ ಸಿಕ್ಕಾಪಟ್ಟೆ ಶಬ್ಧಮಾಲಿನ್ಯ ಆಗುತ್ತಿದೆ ಎಂದು ಅಧಿಕಾರಿಗಳು ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಟ್ರಾಫಿಕ್‍ನಲ್ಲಿ ಕರ್ಕಶ ಶಬ್ಧ ಮಾಡ್ಕೊಂಡು ಓಡಾಡುವ ವಾಹನ, ಕೆಟ್ಟ ಶಬ್ಧ ಬರುವ ಕಾರ್ಖಾನೆಗಳ ಬಗ್ಗೆ ಕ್ಯಾರೆ ಮಾಡದೇ ಮದ್ವೆ ವಾಲಗ ಸದ್ದು, ರಿಸೆಪ್ಶನ್ ಫಂಕ್ಷನ್‍ನಲ್ಲಿ ಹಾಕುವ ಲೈಟ್ ಮ್ಯೂಸಿಕ್‍ನ ಬಗ್ಗೆ ಹೆವ್ವಿ ತಲೆಕೆಡಿಸಿಕೊಂಡಿದೆ.

    ಬೆಂಗಳೂರಿನ ಕಂಟೋನ್ಮೆಂಟ್‍ನಲ್ಲಿರುವ ಜಯಮಹಲ್ ಹೋಟೆಲ್‍ನಲ್ಲಿ ಮದುವೆ, ಆರತಕ್ಷತೆಯಿಂದ ಶಬ್ಧ ಮಾಲಿನ್ಯವಾಗುತ್ತಿದೆ ಅಂತಾ ನೋಟಿಸ್ ನೀಡಲಾಗಿದೆ. ನೋಟಿಸ್ ನೋಡಿ ತಬ್ಬಿಬ್ಬಾಗಿರುವ ಹೋಟೆಲ್‍ನವರು, ಮದುವೆ ವಾಲಗದ ಸೌಂಡ್‍ಗೆ ನೋಟಿಸ್ ಕೊಟ್ರೇ ಹೇಗೆ? ವಾಲಗ, ನಾದಸ್ವರ, ಲೈಟ್ ಮ್ಯೂಸಿಕ್ ಇಲ್ಲದೇ ಇದ್ರೆ ಮದುವೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.

    ಅಧಿಕಾರಿಗಳು ನೋಟಿಸ್ ನೀಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv