Tag: noise

  • ಸಿಂಗನಲ್ಲೂರು ಗ್ರಾಮದಲ್ಲಿ ಭಾರಿ ಶಬ್ದ- 12ಕ್ಕೂ ಹೆಚ್ಚು ಮನೆ ಜಖಂ

    ಸಿಂಗನಲ್ಲೂರು ಗ್ರಾಮದಲ್ಲಿ ಭಾರಿ ಶಬ್ದ- 12ಕ್ಕೂ ಹೆಚ್ಚು ಮನೆ ಜಖಂ

    ಚಾಮರಾಜನಗರ: ತಡ ರಾತ್ರಿ ಭಾರಿ ಪ್ರಮಾಣದ ಶಬ್ದದಿಂದ ಸುಮಾರು 10 ರಿಂದ 11 ಮನೆಗಳಿಗೆ ಹಾನಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಂಗಲ್ಲನೂರು ಗ್ರಾಮದಲ್ಲಿ ನಡೆದಿದೆ.

    ಮಧ್ಯರಾತ್ರಿ 2.30ರ ಸುಮಾರಿಗೆ ಕೇಳಿ ಬಂದ ಶಬ್ದ ಜನರ ನಿದ್ದೆಗೆಡಿಸಿದೆ. ಪರಿಣಾಮ ನಿದ್ದೆಯಲ್ಲಿದ್ದ ಜನರೆಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಮಹದೇವಮ್ಮ, ಶೈಲಪ್ಪ, ಸೋಮಣ್ಣ, ಸಿದ್ದರಾಜು, ಸುರೇಶ್ ಸೇರಿದಂತೆ ಹಲವರ ಮನೆಗಳು ಹಾನಿಗೊಳಗಾಗಿವೆ. ದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಸಿದ್ದರಾಜು ಅವರ ಮನೆಯು ಸಂಪೂರ್ಣ ಜಖಂಗೊಂಡಿದೆ. ಸಿದ್ದರಾಜು ಮನೆಯಲ್ಲಿ ವಾಸವಿದ್ದ ರತ್ಮಮ್ಮ ಎಂಬುವರಿಗೆ ಕೈಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಚಾರ ತಿಳಿದ ಶಾಸಕ ಆರ್.ನರೇಂದ್ರ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅವಘಡಕ್ಕೆ ಕಾರಣ ಏನು ಎಂಬುದರ ವರದಿಯನ್ನು ತ್ವರಿತವಾಗಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

  • ಕಲಬುರಗಿಯ ಗಡಿಕೇಶ್ವರ ಗ್ರಾಮದಲ್ಲಿ ಲಘು ಕಂಪನ

    ಕಲಬುರಗಿಯ ಗಡಿಕೇಶ್ವರ ಗ್ರಾಮದಲ್ಲಿ ಲಘು ಕಂಪನ

    ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಬಂದ ಬಾರಿ ಸದ್ದಿನಿಂದ ಜನರಿಗೆ ಕಂಪನದ ಅನುಭನ ಉಂಟಾಗಿದೆ.

    ಮಧ್ಯಾಹ್ನ 1.27ಕ್ಕೆ ದೊಡ್ಡ ಪ್ರಮಾಣದ ಸದ್ದಿನಿಂದ ಹೆದರಿದ ಅಲ್ಲಿನ ಜನ ಮನೆಯೊಳಗಿಂದ ಹೊರಬಂದಿದ್ದಾರೆ. ಕಳೆದ ವರ್ಷ ಕೂಡಾ ಚಳಿಗಾಲದಲ್ಲಿ ಭೂಮಿಯಿಂದ ವಿಚಿತ್ರ ಸದ್ದು ಬಂದಿತ್ತು. ಇದೀಗ ಮತ್ತೆ ಭೂಮಿಯಿಂದ ಸದ್ದು ಬಂದಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

    ರಿಕ್ಟರ್ ಮಾಪನದಲ್ಲಿ ಭೂಕಂಪ ಆಗಿರುವ ಬಗ್ಗೆ ದಾಖಲಾಗಿಲ್ಲ. ಹೀಗಾಗಿ ಗ್ರಾಮದ ಸುತ್ತಮುತ್ತಲಿನಲ್ಲಿರುವ ಕಲ್ಲು ಗಣಿಗಾರಿಕೆಯಲ್ಲಿನ ಸ್ಫೋಟಿಸಿರುವ ಶಬ್ದ ಇರಬಹದು ಎಂದು ಶಂಕಿಸಲಾಗಿದೆ.

  • ಕರ್ಕಶ ಶಬ್ದ – ಜೆಸಿಬಿಯಿಂದ ಸೈಲೆನ್ಸರ್ ಬಿಚ್ಚಿ ಪುಡಿ ಪುಡಿ

    ಕರ್ಕಶ ಶಬ್ದ – ಜೆಸಿಬಿಯಿಂದ ಸೈಲೆನ್ಸರ್ ಬಿಚ್ಚಿ ಪುಡಿ ಪುಡಿ

    ದಾವಣಗೆರೆ: ಕರ್ಕಶವಾಗಿ ಶಬ್ದ ವಾಗುವ ಸೈಲೆನ್ಸರ್ ಅಳವಡಿಕೆ ಮಾಡಿದ ದ್ವಿಚಕ್ರ ವಾಹನಗಳ ಮೇಲೆ ದಾವಣಗೆರೆ ಪೊಲೀಸರು ಸಮರ ಸಾರಿದ್ದಾರೆ.

    ದಾವಣಗೆರೆ ನಗರದಲ್ಲಿ ಇಂದು ಆರ್‌ಟಿಓ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿಯಾಗಿ ಕಾರ್ಯಚರಣೆ ಮಾಡಿ 70ಕ್ಕೂ ಹೆಚ್ಚು ಬುಲೆಟ್ ಸೇರಿದಂತೆ ಹಲವು ಬೈಕ್ ಗಳನ್ನು ಸೀಜ್ ಮಾಡಿದ್ದಲ್ಲದೆ ದಂಡ ಹಾಕಿದ್ದಾರೆ. ಸೀಜ್ ಮಾಡಲಾದ ಬೈಕ್‍ಗಳ ಸೈಲೆನ್ಸರ್ ಕಿತ್ತು ಹಾಕಿ ಜೆಸಿಬಿಯಿಂದ ಪುಡಿ ಮಾಡಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಯುವಕರು ತಮ್ಮ ಬೈಕ್‍ಗಳಿಗೆ ಕರ್ಕಶವಾಗಿ ಶಬ್ದಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಶಬ್ದ ಮಾಲಿನ್ಯದ ಜೊತೆಗೆ ಪರಿಸರ ಮಾಲಿನ್ಯ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದ ರೋಸಿಹೋದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

    ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡು ಓಡಾಡುವ ದ್ವಿಚಕ್ರ ವಾಹನಗಳು ಬಹಳ ಇವೆ. ಅವುಗಳನ್ನು ಸಹ ಹಿಡಿದು ದಂಡ ವಿಧಿಸುವುದರ ಜೊತೆ ಸೈಲೆನ್ಸರ್ ಪುಡಿ ಪುಡಿ ಮಾಡುವುದಾಗಿ ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.

  • ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!

    ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!

    ಮಂಗಳೂರು: ಕೊಡಗಿನ ಜೋಡುಪಾಲದಲ್ಲಿಯೂ ದುರಂತ ಸಂಭವಿಸುವ ಮುನ್ನ ಮೂಕ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಿದ್ದವು ಎಂಬ ಮಾಹಿತಿಯನ್ನು ಜೋಡಪಾಲದ ಸಂತ್ರಸ್ತರು ಹಂಚಿಕೊಂಡಿದ್ದಾರೆ.

    ಸಾಕು ನಾಯಿಗಳು, ತೋಟದಲ್ಲಿದ್ದ ಮಂಗಗಳು ವಿಲಕ್ಷಣವಾಗಿ ಕೂಗು ಹಾಕಿದ್ದವು. ಈ ಬಗ್ಗೆ ದೂರದ ಮಂಗಳೂರಿಗೆ ಬಂದು ಸಂಬಂಧಿಕರ ಮನೆಯಲ್ಲಿ ನೆಲೆಸಿರುವ ಜೋಡುಪಾಲದ ಸಂತ್ರಸ್ತರಾದ ಶಿಶಿರ್ ಅವರು ತಮ್ಮ ಅನುಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಆಗಸ್ಟ್ 16ರ ಬೆಳಗ್ಗೆಯಿಂದಲೇ ನಾಯಿ ವಿಚಿತ್ರವಾಗಿ ಬೊಗಳುವುದು ಮತ್ತು ತಮ್ಮ ಮನೆಯ ಸುತ್ತಮುತ್ತ ಇದ್ದ ಮಂಗಗಳೆಲ್ಲವೂ ಕೂಗಾಡುತ್ತಿದ್ದವು. ರಾತ್ರಿಯ ವೇಳೆ ಆನೆಗಳು ಕೂಡ ಘೀಳಿಡುತ್ತಿದ್ದವು. ಕೊಡಗಿನಲ್ಲಿ ಪ್ರಾಣಿಗಳು ಕೂಗುವುದು ಸಹಜವಾಗಿರುವ ಕಾರಣ ನಾವು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದರು.

    ಪ್ರಾಣಿಗಳು ಕೂಗಾಟ ಜಾಸ್ತಿಯಾಗುತ್ತಿದ್ದಂತೆ ಮನೆಯ ಹೊರಗಡೆ ಬಂದಾಗ ಭೂಮಿ ಒಳಭಾಗದಿಂದ ರೈಲು ಹೋಗುವ ಹಾಗೇ, ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳೆಲ್ಲ ಕೊಚ್ಚಿಕೊಂಡು ಹೋಗುವ ಹಾಗೇ ಶಬ್ದಗಳು ಕೇಳಿಬರುತ್ತಿತ್ತು. ಅಲ್ಲಿದ್ದ ಸಣ್ಣ ಹೊಳೆಯೊಂದು ನೋಡ ನೋಡುತ್ತಲೇ 10 ಪಟ್ಟು ಹೆಚ್ಚಾಗಿ ಹರಿದು ತೋಟಗಳೆಲ್ಲ ನಾಶವಾಯಿತು. ಆದರೂ ಧೈರ್ಯ ಮಾಡಿ ನಮ್ಮ ಕುಟುಂಬ ಮನೆಯಲ್ಲೇ ತಂಗಿತ್ತು. ಮಾರನೇ ದಿನ 17 ರಂದು ಬೆಟ್ಟದಲ್ಲಿ ಸುಮಾರು 5 ರಿಂದ 6 ಬಾರಿ ಭಾರೀ ಸ್ಫೋಟ ಸಂಭವಿಸಿದ ಕೂಡಲೇ ನಾವು ಭಯಗೊಂಡು ಮಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂದು ಶಿಶಿರ್ ವಿವರಿಸಿದರು.

    ಜೋಡುಪಾಲದ ಸುತ್ತಮುತ್ತ ಒಟ್ಟು 700 ಮನೆಗಳಿದ್ದು, 3 ಸಾವಿರ ಜನರಿದ್ದಾರೆ. ಈ ದುರಂತ ನಡೆದ ಬಳಿಕ 150, 200 ಜನ ಬೆಟ್ಟ ಹತ್ತಿ ಮಡಿಕೇರಿಗೆ ತಲುಪಿದ್ದಾರೆ. 500 ರಿಂದ 1000 ಜನರು ದಕ್ಷಿಣ ಕನ್ನಡದ ಕಲ್ಲುಗುಂಡಿ, ಸಂಪಾಜೆ, ಅರಂತೋಡಿಗೆ ಬಂದು ನೆಲೆಸಿದ್ದಾರೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಡುಗಿಯನ್ನ ಚುಡಾಯಿಸಿದ್ದಕ್ಕೆ ಕೋಲಾರ ಉದ್ರಿಕ್ತ- ಪರಿಸ್ಥಿತಿ ಹತೋಟಿಗೆ ಲಘುಲಾಠಿ ಪ್ರಹಾರ

    ಹುಡುಗಿಯನ್ನ ಚುಡಾಯಿಸಿದ್ದಕ್ಕೆ ಕೋಲಾರ ಉದ್ರಿಕ್ತ- ಪರಿಸ್ಥಿತಿ ಹತೋಟಿಗೆ ಲಘುಲಾಠಿ ಪ್ರಹಾರ

    ಕೋಲಾರ: ಅನ್ಯ ಕೋಮಿನ ಹುಡುಗಿಯನ್ನ ಚುಡಾಯಿಸಿದ ಅರೋಪ ಹಿನ್ನೆಲೆ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಸೋಮವಾರ ರಾತ್ರಿ 10.30 ರ ಸುಮಾರಿಗೆ ನಡೆದಿದೆ.

    ಕೋಲಾರದ ರೆಹಮತ್ ನಗರದಲ್ಲಿ ಅನ್ಯ ಕೋಮಿನ ಹುಡುಗಿಯನ್ನ ಸುರೇಶ್ ಎಂಬ ಯುವಕ ಚುಡಾಯಿಸಿದ ಹಿನ್ನೆಲೆ ಯುವತಿ ಕಡೆಯವರು ಗುಂಪಾಗಿ ಸ್ಥಳದಲ್ಲಿ ಜಮಾಯಿಸಿದ್ರು, ಮಾತ್ರವಲ್ಲದೆ ಗಲ್ ಪೇಟೆ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ರು. ಇದರಿಂದ ಪರಿಸ್ಥಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

    ರೆಹಮತ್ ನಗರದ ಸನ್ನಿ ಸ್ಟುಡಿಯೋದ ಸುರೇಶ್ ಎಂಬಾತನೆ ಯುವತಿಯನ್ನ ಚುಡಾಯಿಸದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿಸಿದ ಹಿನ್ನೆಲೆ ಪೊಲೀಸ್ ಠಾಣೆ ಎದುರು ನೂರಾರು ಜನ ಜಮಾವಣೆಯಾಗಿದ್ದರು. ಜನರನ್ನು ಚದುರಿಸಲು ಪೊಲೀಸರಿಂದ ಲಘು ಪಾಠಿ ಪ್ರಹಾರ ನಡೆಸಿದರು. ಗಲ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ರಾಜೀವ್, ಎಸ್ಪಿ ರೋಹಿಣಿ ಕಠೋಚ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಇದೇ ನನ್ನ‌ ಕೊನೆಯ FB ಲೈವ್ ಚಾಟ್ – ಆತ್ಮಹತ್ಯೆ ಗೆ ಯತ್ನಿಸಿದ ಪ್ರಥಮ್

    ಇದೇ ನನ್ನ‌ ಕೊನೆಯ FB ಲೈವ್ ಚಾಟ್ – ಆತ್ಮಹತ್ಯೆ ಗೆ ಯತ್ನಿಸಿದ ಪ್ರಥಮ್

    – ಸ್ನೇಹಿತನ ಜೊತೆ ರಸ್ತೆಯಲ್ಲೇ ಬಡಿದಾಟ?

    ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಮತ್ತು ಅವರ ಸ್ನೇಹಿತ ಲೋಕಲ್ ಲೋಕಿ ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ.

    ಪ್ರಥಮ್ ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನು ರೈತರಿಗೆ ನೀಡಿಲ್ಲ. ಕೇಳೋಕೆ ಹೋದವರಿಗೆಲ್ಲಾ ಬಾಯಿಗೆ ಬಂದಂತೆ ಬೈಯ್ತಾನೆ ಅಂತ ಫೇಸ್‍ಬುಕ್‍ನಲ್ಲಿ ಲೋಕಿ ಪೋಸ್ಟ್ ಮಾಡಿದ್ದರು. ಈ ವಿಷಯದ ಕುರಿತಾಗಿ ಪ್ರಥಮ್ ಮತ್ತು ಲೋಕಿ ನಡುವೆ ವೈಮನಸ್ಸು ಉಂಟಾಗಿತ್ತು.

    ಮಂಗಳವಾರ ರಾತ್ರಿ ಯಾವುದೋ ವಿಚಾರ ಮಾತನಾಡ್ಬೇಕು ಅಂತ ಕುರುಬರಹಳ್ಳಿಯ ಬಳಿ ನನ್ನನ್ನು ಪ್ರಥಮ್ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಲೋಕಿ ಆರೋಪ ಮಾಡಿದ್ದಾರೆ. ರಾತ್ರಿ ಸುಮಾರು 10:30 ರ ಸಮಯದಲ್ಲಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ರಾತ್ರಿ ನಡೆದ ಗಲಾಟೆಯ ನಂತರ ಪ್ರಥಮ್ ತಮ್ಮ ಮನೆಗೆ ಬಂದು ಬಿಗ್‍ಬಾಸ್ ಪ್ರಶಸ್ತಿ ಪಡೆಯುವ ದಿನ ಧರಿಸಿದ್ದ ಬಟ್ಟೆಯನ್ನು ಧರಿಸಿ ಫೇಸ್‍ಬುಕ್‍ನಲ್ಲಿ 20 ನಿಮಿಷ ಲೈವ್ ಚಾಟ್ ಮಾಡಿದ್ದಾರೆ. ಎಲ್ಲರಿಗೂ ಒಳ್ಳೇದಾಗ್ಲಿ. ನನಗೆ ತುಂಬಾ ಡಿಸ್ಟರ್ಬ್ ಮಾಡ್ತಿದ್ದಾರೆ. ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ, ನನ್ನ ಕೆಲಸವನ್ನ ಕೆಟ್ಟದಾಗಿ ತೋರಿಸ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬೇಸರ ಮಾಡೋದಿಲ್ಲ. ಈಗಾಗಲೇ ನಾನು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇನೆ. ಇದು ನನ್ನ ಕೊನೆಯ ಫೇಸ್‍ಬುಕ್ ಲೈವ್ ಚಾಟ್ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.

    ಪ್ರಥಮ್ ನಿಜವಾಗ್ಲೂ ಲೋಕಿ ಮೇಲೆ ಹಲ್ಲೆ ಮಾಡಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲೋಕಿ ಪ್ರಥಮ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

    https://www.facebook.com/iamOlleHudgaPratham/videos/vb.719171738250468/730938370407138/?type=2&theater

    https://www.youtube.com/watch?v=Yq0GHrMSFgM