Tag: Noida Police

  • ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಲಕ್ನೋ: ʻಇದ್ದಕ್ಕಿದ್ದಂತೆ ಬಿಲ್ಡಿಂಗ್‌ವೊಂದರಿಂದ ಮಹಿಳೆಯ ಚೀರಾಟ ಕೇಳಿಬಂತು, ಕುತೂಹಲದಿಂದ ನೆರೆಯವರೆಲ್ಲ ಕಿಟಕಿ, ಬಾಲ್ಕನಿಯಲ್ಲಿ ನಿಂತು ಇಣುಕಿದ್ರು. ಕೆಲ ಸೆಕೆಂಡುಗಳಲ್ಲಿ ತಾಯಿ ಮಗು ಇಬ್ಬರ ದೇಹ ನೆಲ್ಲಕ್ಕೆ ರಪ್ಪನೆ ಅಪ್ಪಳಿಸಿತು, ರಸ್ತೆಗೆಲ್ಲ ರಕ್ತ ಚಿಮ್ಮಿತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ತಾಯಿ, ಮಗುವಿನ ಪ್ರಾಣ ಪಕ್ಷಿ ಹಾರಿತು. ಇದೀಗ ಈ ಘಟನೆ ಅಲ್ಲಿನ ಸ್ಥಳೀಯರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಹೃದಯ ಕಲಕುವ ಈ ಘಟನೆ ನಡೆದಿದ್ದು, ಗ್ರೇಟರ್‌ ನೋಯ್ಡಾದಲ್ಲಿ (Greater Noida).

    ಹೌದು. ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ (Sakshi Chawla) (37) ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ vs ಪಾಕ್ | 26 ಜೀವಗಳಿಗಿಂತ ಹಣಕ್ಕೆ ಅಷ್ಟೊಂದು ಮಹತ್ವವೇ? – ಅಸಾದುದ್ದೀನ್ ಓವೈಸಿ ಕಿಡಿ

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ. ಈವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಇದು ಆತ್ಮಹತ್ಯೆಯೇ. ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!

    ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಪತಿ ದರ್ಪಣ್‌ ಚಾವ್ಲಾ, ಹೆಂಡತಿಯನ್ನ ಎಬ್ಬಿಸಿ ಮಗನಿಗೆ ಔಷಧಿ ಕೊಡುವಂತೆ ಹೇಳಿದ್ದರು. ಅದರಂತೆ ಔಷಧಿ ಕೊಟ್ಟು ಬಳಿಕ ಮಗನನ್ನ ಬಾಲ್ಕನಿಗೆ ವಾಕಿಂಗ್‌ಗೆ ಕರೆದೊಯ್ದಿದ್ದಳು ಸಾಕ್ಷಿ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ದುರಂತವು ನೆರೆಹೊರೆಯವರನ್ನೂ ಬೆಚ್ಚಿಬೀಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

  • ನೋಯ್ಡಾದ ಡೇಕೇರ್‌ನಲ್ಲಿ 15 ತಿಂಗಳ ಹೆಣ್ಣುಮಗು ಮೇಲೆ ಹಲ್ಲೆ – ತೊಡೆ ಮೇಲೆ ಕಚ್ಚಿ ವಿಕೃತಿ

    ನೋಯ್ಡಾದ ಡೇಕೇರ್‌ನಲ್ಲಿ 15 ತಿಂಗಳ ಹೆಣ್ಣುಮಗು ಮೇಲೆ ಹಲ್ಲೆ – ತೊಡೆ ಮೇಲೆ ಕಚ್ಚಿ ವಿಕೃತಿ

    ನವದೆಹಲಿ: 15 ತಿಂಗಳ ಹೆಣ್ಣು ಮಗುವಿನ ಅಳು ನಿಲ್ಲಿಸಲು ಡೇಕೇರ್‌ನ (Daycare) ಮಹಿಳಾ ಸಿಬ್ಬಂದಿ ತೊಡೆಗೆ ಕಚ್ಚಿ, ನೆಲಕ್ಕೆ ಬೀಸಾಕಿ ಹಲ್ಲೆ ನಡೆಸಿರುವ ಘಟನೆ ಗ್ರೇಟರ್ ನೋಯ್ಡಾದ (Greater Noida) ವಸತಿ ಸಂಕೀರ್ಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆ.4ರಂದು ತಾಯಿಯೊಬ್ಬರು ತಮ್ಮ ಮಗುವನ್ನು ಡೇಕೇರ್ ಸೆಂಟರ್‌ನಿಂದ ಮನೆಗೆ ಕರೆತಂದಿದ್ದರು. ಆಗ ಮಗು ಜೋರಾಗಿ ಅಳುತ್ತಿತ್ತು. ಈ ವೇಳೆ ಮಗುವಿನ ಬಟ್ಟೆ ಬದಲಾಯಿಸುತ್ತಿದ್ದ ತಾಯಿ ತೊಡೆಯ ಮೇಲೆ ವೃತ್ತಾಕಾರದ ಗುರುತುಗಳನ್ನು ಕಂಡರು. ಇದರಿಂದ ಗಾಬರಿಗೊಂಡು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಆಗ ವೈದ್ಯರು ಮಗುವಿಗೆ ಯಾರೋ ಕಚ್ಚಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಡೇಕೇರ್ ಸೆಂಟರ್‌ಗೆ ತೆರಳಿದ ಪೋಷಕರು ಅಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಹಲ್ಲೆ ಮಾಡಿರುವುದಾಗಿ ಕಂಡುಬಂದಿದೆ.ಇದನ್ನೂ ಓದಿ: ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

    ಸಿಸಿಟಿವಿಯಲ್ಲಿ (CCTV) ಮಗುವಿನ ಅಳು ನಿಲ್ಲಿಸಲು ನೆಲಕ್ಕೆ ಬೀಸಾಕಿರುವುದು, ಕೆನ್ನೆಗೆ ಹೊಡೆದಿರುವುದು, ಕಚ್ಚಿರುವುದು, ಪ್ಲಾಸ್ಟಿಕ್ ಬ್ಯಾಟ್‌ನಿಂದ ಹೊಡೆದಿರುವ ದೃಶ್ಯಗಳು ಸೆರೆಯಾಗಿವೆ.

    ಈ ಕುರಿತು ಮಗುವಿನ ಪೋಷಕರು ನೋಯ್ಡಾದ ಸೆಕ್ಟರ್-142 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡೇಕೇರ್ ಮಹಿಳಾ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಡೇಕೇರ್ ಮುಖ್ಯಸ್ಥರು ಮಗುವನ್ನು ಸಮಾಧಾನಪಡಿಸಲು ಹಾಗೂ ಸಿಬ್ಬಂದಿ ಹೊಡೆಯುತ್ತಿರುವಾಗ ರಕ್ಷಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಮಗುವಿಗೆ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

  • ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ನವದೆಹಲಿ: ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಚರ್ಚೆಗೆ ಒತ್ತಾಯಿಸಿ ಪಂಜಾಬ್‌ನ ರೈತರು ಈ ವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ (farmers’ march) ನಡೆಸುವುದಾಗಿ ಘೋಷಿಸಿದ್ದಾರೆ. ಭಾರತೀಯ ಕಿಸಾನ್ ಪರಿಷತ್‌ (BKP) ನೇತೃತ್ವದ ರೈತರ ಮೊದಲ ಗುಂಪು ಇಂದು ತಮ್ಮ ನೋಯ್ಡಾದಿಂದ ದೆಹಲಿ ವರೆಗೆ ಮೆರವಣಿಗೆ ಪ್ರಾರಂಭಿಸಲಿದೆ. ಈ ಹಿನ್ನೆಲೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನ ಅಳವಡಿಸಿದ್ದಾರೆ.

    ಅಲ್ಲದೆ, ನೋಯ್ಡಾದಿಂದ ದೆಹಲಿಗೆ (Dehli) ಪ್ರಯಾಣಿಸುವ ಪ್ರಯಾಣಿಕರಿಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಸಲಹೆಗಳನ್ನು ನೀಡಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಮುಂತಾದ ಮಾರ್ಗಗಳಿಂದ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ನಿಜವಾದ ಕಾನೂನು ಪಾಲಕರಾಗಿದ್ರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ – ಅಶ್ವಥ್ ನಾರಾಯಣ

    ಫೆಬ್ರುವರಿ 13ರಿಂದ ರೈತರು, ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮನ್ಸೂ‌ರ್ ಮೋರ್ಚಾ (ಕೆಎಂಎಂ) ನೇತೃತತ್ವದಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಅವರನ್ನು ನಿರ್ಬಂಧಿಸಿದೆ. ಹೀಗಾಗಿ 200ಕ್ಕೂ ಹೆಚ್ಚು ಧರಣಿ ನಿರತ ರೈತರು ರಸ್ತೆಯಲ್ಲೇ ರಾತ್ರಿ ಕಳೆಯುವಂತಾಗಿದೆ.

    ಪ್ರತಿಭಟನಾ ನಿರತ ರೈತರು ಮಧ್ಯಾಹ್ನದ ವೇಳೆಗೆ ನೋಯ್ಡಾದ ಮಹಾ ಮಾಯಾ ಮೇಲ್ಸೇತುವೆಯಿಂದ ತಮ್ಮ ಮೆರವಣಿಗೆ ಪ್ರಾರಂಭಿಸಲಿದ್ದಾರೆ. ಹೀಗಾಗಿ ದೆಹಲಿಗೆ ಹೋಗುವ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಡಿಸೆಂಬರ್ 6 ರಿಂದ ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮೆರವಣಿಗೆ ನಡೆಯಲಿದ್ದು, ಹೆಚ್ಚಿನ ರೈತರು ಪ್ರತಿಭಟನೆಗೆ ಧುಮುಕಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉತ್ತರ ಕನ್ನಡ| ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ದುರ್ಮರಣ

    ರೈತರ ಬೇಡಿಕೆಗಳೇನು?
    ಗುತ್ತಿಗೆ ಆಧಾರದಲ್ಲಿ ಕೃಷಿಯನ್ನ ತಿರಸ್ಕರಿಸಬೇಕು, ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. 2014ರ ಜನವರಿ 1ರ ನಂತರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಶೇ.10ರಷ್ಟು ನಿವೇಶನ ಹಂಚಿಕೆ, ಹಳೇ ಸ್ವಾಧೀನ ಕಾನೂನಿನಡಿ ಪರಿಹಾರ ನೀಡಬೇಕು, ಶೇ.20ರಷ್ಟು ನಿವೇಶನ ನೀಡಬೇಕು. ಭೂರಹಿತ ರೈತರಿಗೆ ಉದ್ಯೋಗ ಮತ್ತು ಪುನರ್ವಸತಿ ಕಲ್ಪಿಸಬೇಕು. ಅಲ್ಲದೇ ಕೃಷಿ ಸಾಲ ಮನ್ನಾ ಮಾಡಬೇಕು, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ಸೌಲಭ್ಯ ದರದಲ್ಲಿ ಕಡಿತ, ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು. ಭೂಸ್ವಾಧೀನ ಕಾಯಿದೆ, 2013 ಮತ್ತು ಹಿಂದಿನ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಕಿಸಾನ್ ಮಜ್ದೂರ್ ಮೋರ್ಚಾ (KMM) ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಫೆಬ್ರವರಿ 18 ರಿಂದ ರೈತರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ರೈತರು ಗುತ್ತಿಗೆ ಕೃಷಿಯನ್ನು ತಿರಸ್ಕರಿಸುತ್ತಾರೆ, ಬದಲಿಗೆ ಬೆಳೆಗಳಿಗೆ ಎಂಎಸ್‌ಪಿ ಮೇಲೆ ಕಾನೂನು ಖಾತ್ರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರ ಮೂರು ಸದಸ್ಯರ ಸಮಿತಿ ಫೆಬ್ರವರಿ 18 ರಂದು ರೈತ ಪ್ರತಿನಿಧಿಗಳನ್ನು ಭೇಟಿ ಮಾಡಿತ್ತು, ಆದ್ರೆ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಎಂಎಸ್‌ಪಿಯಲ್ಲಿ 5 ವರ್ಷಗಳವರೆಗೆ ಖರೀದಿಸುವ ಪ್ರಸ್ತಾಪವನ್ನು ಇಟ್ಟಿದ್ದರು. ಇದನ್ನು ರೈತರು ತಿರಸ್ಕರಿಸಿದರು.

  • ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಲಕ್ನೋ: ಇತ್ತೀಚೆಗೆ ಪ್ರೀತಿಯ (Love) ಪರಿಭಾಷೆಯೇ ಬದಲಾಗಿದೆ. ಪ್ರೀತಿಯ ಹುಟ್ಟಿನ ರೀತಿಯೂ ಬದಲಾಗಿದೆ. ಪ್ರೀತಿ ಎಂಬುದು ಹೇಳಿ ಕೇಳಿ ಹುಟ್ಟುವುದಿಲ್ಲ. ಇದರ ಹುಟ್ಟಿಗೆ ದಿನಾಂಕ, ಸಮಯ ಬೇಕಿಲ್ಲ. ಪ್ರೀತಿಯ ಭಾವ ಮನಸ್ಸಿನೊಳಗೆ ಮೂಡಿದಾಗ ಹೊಟ್ಟೆಯೊಳಗೆ ಕಚಗುಳಿ ಇಟ್ಟಂತಾಗುವುದು ಸುಳ್ಳಲ್ಲ. ಅದರಲ್ಲೂ ಮಾಡರ್ನ್ ಪ್ರೇಮಿಗಳಿಗೆ (Lovers) ಮೊದಲ ನೋಟದಲ್ಲೇ ಪ್ರೀತಿ ಚಿಗುರುತ್ತದೆ. ಇಂತ ಪ್ರೇಮಿಗಳ ನಡುವೆ ಕೆಲವರು ಹುಚ್ಚುತನದಿಂದ ಪೆಚ್ಚಾಗಿ ಪೇಚಿಗೆ ಸಿಲುಕುತ್ತಾರೆ. ಉತ್ತರ ಪ್ರದೇಶದಲ್ಲಿ (Uttar Pradesh) ನಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು. ಉತ್ತರ ಪ್ರದೇಶದ ನೋಯ್ಡಾದ ಪಾರ್ಕ್‌ವೊಂದರಲ್ಲಿ (Noida Park) ಪ್ರೇಮಿಗಳಿಬ್ಬರು ಅತಿರೇಖದ ವರ್ತನೆ ತೋರಿದ್ದು, ವಿವಾದಕ್ಕೆ ಕಾರಣವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪ್ರೇಮಿಗಳ ವಿರುದ್ಧ ನೆಟ್ಟಿಗರು ಸಿಡಿದಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌ 

    ನೋಯ್ಡಾದಲ್ಲಿರುವ ವಾನ್‌ವೇದ್‌ ಪಾರ್ಕ್‌ನಲ್ಲಿ ಚಿತ್ರೀಕರಿಸಿದ ವೀಡಿಯೋದಲ್ಲಿ, ಯುವಕ ಮೊದಲು ತನ್ನ ಪ್ರೇಯಸಿಗೆ ಉಂಗುರ ತೊಡಿಸಿದ್ದಾನೆ. ನಂತರ ಆಕೆ ತನ್ನ ಪ್ರೀತಿ ವ್ಯಕ್ತಪಡಿಸಿಲು ತನ್ನ ಬಾಯಿಂದ ಎಂಜಲು ನೀರನ್ನು ತನ್ನ ಪ್ರೇಮಿ ಬಾಯಿಗೆ ಉಗುಳಿದ್ದಾಳೆ. ಅದಕ್ಕೆ ಪ್ರತಿಯಾಗಿ ಯುವಕನೂ ಅದೇ ರೀತಿ ಮಾಡಿದ್ದಾನೆ. ಇದು ಅಸಭ್ಯ ವರ್ತನೆಯಂತೆ ತೋರಿದು, ವೀಡಿಯೋ ಸದ್ದು ಮಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ಕೆಲ ದಿನಗಳ ಹಿಂದೆ ದೆಹಲಿಯ ಮೆಟ್ರೋದಲ್ಲಿ (Delhi Metro) ಪ್ರೇಮಿಗಳಿಬ್ಬರು ಲಿಪ್‌ ಲಾಕ್‌ ಮಾಡಿದ್ದ ದೃಶ್ಯ ಕಂಡುಬಂದಿತ್ತು. ಇದೀಗ ಪಾರ್ಕ್‌ಗಳಲ್ಲಿ ಹೀಗೆ ಆದ್ರೆ, ಸಭ್ಯಸ್ಥರು ಓಡಾಡುವುದು ಹೇಗೆ? ಹೇಳುವವರು ಕೇಳುವವರು ಇಲ್ಲದಂತಾಗಿದೆ ಪೊಲೀಸರು ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್‌ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ

    ಅಲ್ಲದೇ ವೀಡಿಯೋವನ್ನು ಟ್ಬಿಟ್ಟರ್‌ ಎಕ್ಸ್‌ ಖಾತೆಯಲ್ಲಿ ನೋಯ್ಡಾದ ಉಪ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಲಾಗಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು, ನೋಯ್ಡಾದ ಸೆಕ್ಟರ್-113 ಠಾಣೆಗೆ ಮತ್ತು ಸೈಬರ್‌ ಸೆಲ್‌ ವಿಭಾಗಕ್ಕೆ ಸೂಚಿಸಿದ್ದಾರೆ. ಪಾರ್ಕ್‌ನಲ್ಲಿ ಚೆಲ್ಲಾಟವಾಡಿದ ಪ್ರೇಮಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

    ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

    ಲಕ್ನೋ: ಫ್ಯಾಷನ್‌ ರನ್‌ವೇನಲ್ಲಿ ರ‍್ಯಾಂಪ್‌ವಾಕ್‌ (Ramp Walk) ಮಾಡುತ್ತಿದ್ದ ವೇಳೆ ಕಬ್ಬಿಣದ ಪಿಲ್ಲರ್‌ ಬಿದ್ದು 24 ವರ್ಷದ ಮಾಡೆಲ್‌ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.

    ಮೃತ ಮಾಡೆಲ್‌ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್‌ 16ಎ ನಲ್ಲಿರುವ ಫಿಲ್ಮ್‌ ಸಿಟಿಯ (Noida Film City) ಲಕ್ಷ್ಮೀ ಸ್ಟುಡಿಯೋನಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ – ಗ್ರಾಪಂ ಸದಸ್ಯ ಸ್ಥಳದಲ್ಲೇ ಸಾವು

    ಲೈಟಿಂಗ್‌ ವ್ಯವಸ್ಥೆಗಾಗಿ ಕಬ್ಬಿಣದ ಪಿಲ್ಲರ್‌ ನಿರ್ಮಿಸಲಾಗಿತ್ತು. ಅದು ವೇದಿಕೆ ಮೇಲೆ ಬಿದ್ದು ಮಾಡೆಲ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಾಬಿ ರಾಜ್‌ ಎಂಬ ವ್ಯಕ್ತಿ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಶೋ (Fashion Show) ಆಯೋಜಕರು ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ

    ವಂಶಿಕಾ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ, ಫ್ಯಾಷನ್ ಶೋಗೆ ಅನುಮತಿ ನೀಡಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.

  • ಭಾರತದ ಸಂಸ್ಥೆಯ ಕೆಮ್ಮಿನ ಸಿರಪ್‌ ಸೇವಿಸಿ ಉಜ್ಬೇಕಿಸ್ತಾನ ಮಕ್ಕಳ ಸಾವು ಕೇಸ್‌ – ನೋಯ್ಡಾದಲ್ಲಿ ಮೂವರು ಅರೆಸ್ಟ್‌

    ಭಾರತದ ಸಂಸ್ಥೆಯ ಕೆಮ್ಮಿನ ಸಿರಪ್‌ ಸೇವಿಸಿ ಉಜ್ಬೇಕಿಸ್ತಾನ ಮಕ್ಕಳ ಸಾವು ಕೇಸ್‌ – ನೋಯ್ಡಾದಲ್ಲಿ ಮೂವರು ಅರೆಸ್ಟ್‌

    ಲಕ್ನೋ: ಭಾರತದ ಔಷಧೀಯ ಸಂಸ್ಥೆ ಮರಿಯನ್‌ ಬಯೋಟೆಕ್ (Marion Biotech) ತಯಾರಿಸುವ ಕೆಮ್ಮಿನ ಸಿರಪ್‌ (Cough Syrup) ಸೇವಿಸಿ ಉಜ್ಬೇಕಿಸ್ತಾನದ (Uzbekistan) ಕೆಲವು ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧಿ ಮಾರಾಟ ಮಾಡುತ್ತಿದ್ದ ಮೂವರನ್ನು ನೋಯ್ಡಾ ಪೊಲೀಸರು (Noida Police) ಬಂಧಿಸಿದ್ದಾರೆ.

    ಆರೋಪಿಗಳನ್ನು ಅತುಲ್ ರಾವತ್, ತುಹಿನ್ ಭಟ್ಟಾಚಾರ್ಯ ಮತ್ತು ಮೂಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಂಧಿಸಲಾಗಿದೆ. 1940ರ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆಕ್ಟ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗೌತಮ ಬುದ್ಧ ನಗರ 3ನೇ ಹಂತದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹರಿಯಾಣದ ಪ್ರತ್ಯೇಕ 3 ಕಡೆ ಭೀಕರ ಅಪಘಾತ – 17 ಮಂದಿ ದುರ್ಮರಣ

    ಕಳೆದ ವರ್ಷ ಮರಿಯನ್‌ ಬಯೋಟೆಕ್‌ ತಯಾರಿಸಿದ ಕೆಮ್ಮಿನ ಸಿರಪ್‌ ಸೇವನೆಯಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿದ್ದರು.

    ಪ್ರಕರಣ ವರದಿಯಾದ ಬಳಿಕ, ಮರಿಯನ್‌ ಬಯೋಟೆಕ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ ತಯಾರಿಸಿರುವ ಅಬ್ರೊನಾಲ್‌ ಮತ್ತು ಡಾಕ್‌-1 ಮ್ಯಾಕ್ಸ್‌ ಕೆಮ್ಮು ಸಿರಪ್‌ ಅನ್ನು ಮಕ್ಕಳಿಗೆ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚನೆ ನೀಡಿತ್ತು. ಇದನ್ನೂ ಓದಿ: ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

    ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯದ ಪರೀಶೀಲನೆಯಲ್ಲಿ ಕೆಮ್ಮಿನ ಸಿರಪ್‌ಗಳಲ್ಲಿ ಎಥಿಲೀನ್ ಗ್ಲೈಕೋಲ್‌ನ ವಿಷಕಾರಿ ರಾಸಾಯನಿಕ ಪತ್ತೆಯಾಗಿತ್ತು.