Tag: Noble

  • ‘ನಾನು ಮೋದಿ ವಿರೋಧಿ’ – ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪ್ರಧಾನಿಯ ಜೋಕ್ ಹಂಚಿಕೊಂಡ ಬ್ಯಾನರ್ಜಿ

    ‘ನಾನು ಮೋದಿ ವಿರೋಧಿ’ – ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪ್ರಧಾನಿಯ ಜೋಕ್ ಹಂಚಿಕೊಂಡ ಬ್ಯಾನರ್ಜಿ

    ನವದೆಹಲಿ: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಮೋದಿಯವರು ಟ್ವಿಟ್ಟರಿನಲ್ಲಿ ಅಭಿಜಿತ್ ಬ್ಯಾನರ್ಜಿಯವರನ್ನ ಭೇಟಿಯಾಗಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಧಾನಿ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಜಿತ್ ಬ್ಯಾನರ್ಜಿ, ನನ್ನ ಜೊತೆಗಿನ ಮಾತಿನ ಆರಂಭದಲ್ಲಿ ನಾನು ಹೇಗೆ ಮೋದಿ ವಿರೋಧಿ ಎಂಬುದನ್ನು ಮಾಧ್ಯಮಗಳು ವರದಿ ಮಾಡುತ್ತಿವೆ ಎನ್ನುವುದನ್ನು ಉಲ್ಲೇಖಿಸಿ ಜೋಕ್ ಮಾಡಿ ನಕ್ಕರು. ಮೋದಿಯವರು ಟಿವಿಯನ್ನು ನೋಡುತ್ತಾರೆ. ನೀವು ಏನನ್ನು ಬಿಂಬಿಸಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಮೋದಿಯವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಭೇಟಿಯ ವೇಳೆ ನಡೆದ ಮಾತುಕತೆಯನ್ನು ಹಂಚಿಕೊಂಡರು. ಇದನ್ನೂ ಓದಿ: ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆ – 10 ದಿನ ತಿಹಾರ್ ಜೈಲು ಸೇರಿದ್ದ ಅಭಿಜಿತ್ ಬ್ಯಾನರ್ಜಿ

    ಪ್ರಧಾನಿಗಳಾದ ಮೋದಿಯವರ ಭೇಟಿ ಖುಷಿ ತಂದಿದ್ದು, ತಮ್ಮ ಅಮೂಲ್ಯ ಸಮಯವನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಭಾರತದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ತಳಮಟ್ಟದಿಂದ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಜನರಿಗೆ ಸರ್ಕಾರಗಳ ಮೇಲೆ ನಂಬಿಕೆ ಬಂದಾಗ ಅಭಿವೃದ್ಧಿ ಕೆಲಸ ಸರಳವಾಗಲಿದೆ. ಉದ್ಯೋಗ ನಿರ್ಮಾಣ ಸೇರಿದಂತೆ ಹಲವು ವಿಚಾರಧಾರೆಗಳನ್ನು ಪ್ರಧಾನಿಗಳು ಹಂಚಿಕೊಂಡಿದ್ದು ಖುಷಿ ತಂದಿದೆ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದರು. ಇದನ್ನೂ ಓದಿ: ಅರ್ಥಶಾಸ್ತ್ರ ನೊಬೆಲ್ – ಭಾರತೀಯ ಮೂಲದ ಅಭಿಜಿತ್ ದಂಪತಿಗೆ ಪ್ರಶಸ್ತಿ

    ಅಭಿಜಿತ್ ಬ್ಯಾನರ್ಜಿ ಜೊತೆಗಿನ ಭೇಟಿ ಚೆನ್ನಾಗಿತ್ತು. ಮಾನವ ಸಶಕ್ತೀಕರಣದ ತುಡಿತ ಅವರಲ್ಲಿ ಎದ್ದು ಕಾಣುತ್ತದೆ. ಇಬ್ಬರ ಮಧ್ಯೆ ವಿವಿಧ ವಿಷಯಗಳ ಕುರಿತು ಗಂಭೀರವಾದ ಆರೋಗ್ಯಕರ ಚರ್ಚೆಗಳು ನಡೆದಿವೆ. ಅಭಿಜಿತ್ ಬ್ಯಾನರ್ಜಿ ಭಾರತೀಯರೆಂದು ಹೇಳಲು ಹೆಮ್ಮೆ ಆಗುತ್ತಿದೆ. ಅವರ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ಅರ್ಥಶಾಸ್ತ್ರಜ್ಞ ಎಂದ ಪಿಯೂಷ್ ಗೋಯಲ್ ಗೆ ತಿರುಗೇಟು ನೀಡಿದ ಪ್ರಿಯಾಂಕ ಗಾಂಧಿ

    ವಿಶ್ವದಲ್ಲಿ ಬಡತನ ನಿರ್ಮೂಲನೆಗೆ ಸಂಬಂಧಿಸಿದ ವಿಷಯದ ಸಂಶೋಧನೆಗೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಪ್ಲೋ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪ್ರಸ್ತುತ ಫೋರ್ಡ್ ಫೌಂಡೇಶನ್ ಇಂಟರ್ ನ್ಯಾಷನಲ್‍ನ ಮ್ಯಾಸಚೂಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. 2003ರಲ್ಲಿ ಬ್ಯಾನರ್ಜಿಯವರು ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ಅವರೊಂದಿಗೆ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಯಕ್ಷನ್ ಲ್ಯಾಬ್(ಜೆ-ಪಿಎಎಲ್) ಸ್ಥಾಪಿಸಿದ್ದರು. ಅಲ್ಲದೆ ಲ್ಯಾಬ್‍ನ ನಿರ್ದೇಶಕರಲ್ಲಿ ಇವರೂ ಸಹ ಒಬ್ಬರಾಗಿದ್ದಾರೆ.