Tag: Nobin Paul

  • ‘ಬಿಲ್ ಗೇಟ್ಸ್’ ಆಗ ಹೊರಟವರ ಅವಾಂತರ ನೋಡಿ ನಕ್ಕ ಪ್ರೇಕ್ಷಕ!

    ‘ಬಿಲ್ ಗೇಟ್ಸ್’ ಆಗ ಹೊರಟವರ ಅವಾಂತರ ನೋಡಿ ನಕ್ಕ ಪ್ರೇಕ್ಷಕ!

    ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ‘ಬಿಲ್ ಗೇಟ್ಸ್’ ಚಿತ್ರ ಇಂದು ಬಿಡುಗಡೆಯಾಗಿದೆ. ಚಿತ್ರದ ಸ್ಯಾಂಪಲ್‍ಗಳಿಂದ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.

    ಬಿಲ್ ಗೇಟ್ಸ್ ನಂತೆ ಆಗರ್ಭ ಶ್ರೀಮಂತನಾಗಬೇಕೆಂದು ಕನಸು ಯಾರು ಕಾಣೋದಿಲ್ಲ ಹೇಳಿ. ಹಾಗೇಯೇ ಕನಸು ಕಂಡ ಹಳ್ಳಿ ಹುಡುಗರೇ ಚಿಕ್ಕಣ್ಣ, ಶಿಶಿರ್. ಬಿಲ್ ಗೇಟ್ಸ್ ನಂತೆ ಆಗರ್ಭ ಶ್ರೀಮಂತರಾಗಬೇಕೆಂದು ಸಿಟಿ ಬಸ್ಸು ಹತ್ತೋ ಹುಡುಗರು ಶ್ರೀಮಂತರಾಗಲು ಏನೆಲ್ಲ ಸರ್ಕಸ್ ಮಾಡ್ತಾರೆ, ಆ ಸರ್ಕಸ್ ನಲ್ಲಿ ಏನೆಲ್ಲ ರಿಸ್ಕ್ ಅನುಭವಿಸುತ್ತಾರೆ ಅನ್ನೋದನ್ನ ಕಾಮಿಡಿ ಮುಖಾಂತರ ಹೇಳ ಹೊರಟಿದ್ದಾರೆ ನಿರ್ದೇಶಕ ಶ್ರೀನಿವಾಸ.

    ನಗುವಿನ ಜೊತೆ ಸಾಮಾಜಿಕ ಮೌಲ್ಯವನ್ನು ಹೇಳೋ ಈ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಇಷ್ಟವಾಗಿದೆ. ಚಿಕ್ಕಣ್ಣ, ಶಿಶಿರ್ ತರ್ಲೆ, ಪೇಚಾಟಗಳು ತೆರೆ ಮೇಲೆ ನೋಡಲು ಮಜವಾಗಿದೆ. ಇನ್ನು ಕಾಮಿಡಿ ಜೊತೆ ಲವ್ ಕಹಾನಿಯೂ ಚಿತ್ರದಲ್ಲಿದ್ದು ನೋಡುಗರಿಗೆ ಬಿಲ್ ಗೇಟ್ಸ್ ಮನರಂಜನೆಯನ್ನು ನೀಡೋದ್ರಲ್ಲಿ ಮೇಲುಗೈ ಸಾಧಿಸಿದೆ.

    ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ನೋಬಿನ್ ಪೌಲ್ ಸಂಗೀತ, ತಿಲಕ್ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತೆ.

    ಚಿತ್ರ: ಬಿಲ್ ಗೇಟ್ಸ್
    ನಿರ್ದೇಶನ: ಶ್ರೀನಿವಾಸ
    ಸಂಗೀತ: ನೋಬಿಲ್ ಪೌಲ್
    ಛಾಯಾಗ್ರಹಣ: ತಿಲಕ್
    ತಾರಾಬಳಗ: ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ, ಅಕ್ಷರ ರೆಡ್ಡಿ, ರಶ್ಮಿಕಾ ರೋಜಾ, ಕುರಿ ಪ್ರತಾಪ್, ಇತರರು.

    ರೇಟಿಂಗ್: 3.5/5

  • ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಕಾಮಿಡಿ ಕಿಂಗ್ ಚಿಕ್ಕಣ್ಣ ಒಂದು ಸಿನಿಮಾದಲ್ಲಿದ್ದಾರೆ ಅಂದ್ರೆ ಅಲ್ಲಿ ನಗುವಿಗೇನು ಬರವಿಲ್ಲ. ಸ್ಕೀನ್ ಮೇಲೆ ಬಂದಾಗಲೆಲ್ಲ ತಮ್ಮ ಡಿಫರೆಂಟ್ ಮ್ಯಾನರಿಸಂ ಹಾಗೂ ಪಂಚ್ ಡೈಲಾಗ್‍ಗಳಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇನ್ನು ಇಡೀ ಸಿನಿಮಾ ಪೂರ್ತಿ ಅವ್ರೆ ನಾಯಕ ನಟನಾಗಿ ಇರ್ತಾರೆ ಅಂದ್ರೆ ಕೇಳೋದೇ ಬೇಡ ಅಲ್ಲಿ ನಗೆಯ ಸುಗ್ಗಿಯೇ ಹುಟ್ಟಿಕೊಳ್ಳುತ್ತೆ. ಹೌದು. ಚಿಕ್ಕಣ್ಣ ಸ್ಯಾಂಡಲ್‍ವುಡ್ ಒನ್ ಆಫ್ ದಿ ಮೋಸ್ಟ್ ಬ್ಯುಸಿಯೆಸ್ಟ್ ಕಾಮಿಡಿ ಆಕ್ಟರ್. ಸ್ಟಾರ್ ನಟರಷ್ಟೇ ಬ್ಯುಸಿಯಾಗಿರೋ ಚಿಕ್ಕಣ್ಣ ಬಿಲ್ ಗೇಟ್ಸ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

    ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮೆಚ್ಚಿಕೊಂಡಿದ್ದು ಯಮನ ಅವತಾರ ತಾಳೀರೋ ಚಿಕ್ಕಣ್ಣನನ್ನು ನೋಡೋದೆ ಒಂದು ಗಮ್ಮತ್ತು. ಚಿತ್ರದ ಸ್ಯಾಂಪಲ್‍ಗಳು ಟಾಕ್ ಕ್ರಿಯೇಟ್ ಮಾಡಿದ್ದು ಕಿರುತೆರೆಯ ಶಿಶಿರ್ ಶಾಸ್ತ್ರಿ ಕೂಡ ಚಿಕ್ಕಣ್ಣ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಬಿಲ್ ಗೇಟ್ಸ್ ಕಾಮಿಡಿ ಎಂಟರ್ ಟೈನ್ಮೆಂಟ್ ಚಿತ್ರವಾಗಿದ್ದು, ಗಂಭೀರವಾದ ವಿಷಯವೊಂದನ್ನು ಕಾಮಿಕ್ ಆಗಿ ಪ್ರೇಕ್ಷಕರ ಮನಮುಟ್ಟಿಸುವ ಕೆಲಸವನ್ನು ನಿರ್ದೇಶಕ ಶ್ರೀನಿವಾಸ್.ಸಿ ಮಾಡಿದ್ದಾರೆ. ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸ್ ಅವ್ರ ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ತೆರೆ ಮೇಲೆ ಯಾವ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ ಕಾದು ನೋಡಬೇಕು.

  • ಬಿಲ್ ಗೇಟ್ಸ್ ಚಿತ್ರದ ಫನ್ ಫಿಲ್ಲಡ್ ಟ್ರೈಲರ್ ರಿಲೀಸ್

    ಬಿಲ್ ಗೇಟ್ಸ್ ಚಿತ್ರದ ಫನ್ ಫಿಲ್ಲಡ್ ಟ್ರೈಲರ್ ರಿಲೀಸ್

    – ನಕ್ಕು ನಗಿಸೋಕೆ ಬರ್ತಿದ್ದಾರೆ ಕಾಮಿಡಿ ಕಿಂಗ್ ಚಿಕ್ಕಣ್ಣ

    ಕಾಮಿಡಿ ಕಿಂಗ್ ಚಿಕ್ಕಣ್ಣ, ಕಿರು ತೆರೆ ನಟ ಶಿಶಿರ್ ಶಾಸ್ತ್ರಿ ಕಾಮಿಡಿರಸದೌತಣ ನೀಡಲು ಬರ್ತಿರುವ ಬಿಲ್ ಗೇಟ್ಸ್ ಚಿತ್ರದ ಟೈಲರ್ ರಿಲೀಸ್ ಆಗಿದೆ. ಟ್ರೈಲರ್ ಸಖತ್ ಮಜಾವಾಗಿದ್ದು ಕಾಮಿಡಿ ಎಲಿಮೆಂಟ್, ಪಂಚಿಂಗ್ ಡೈಲಾಗ್ ಗಳು ನಕ್ಕು ನಗಿಸುತ್ತವೆ.

    ಸೀರಿಯಸ್ ಆದ ವಿಷಯವೊಂದನ್ನು ಕಾಮಿಕ್ ವೇನಲ್ಲಿ ಹೇಳೋ ಪ್ರಯತ್ನವನ್ನು ನಿರ್ದೇಶಕ ಶ್ರೀನಿವಾಸ್ ಮಾಡಿದ್ದಾರೆ. ಕಾಮಿಡಿ ಜೊತೆ ಹಾರಾರ್ ಸ್ಪರ್ಶ ಕೂಡ ಚಿತ್ರದಲ್ಲಿದ್ದು ಸಾಕಷ್ಟು ಕುತೂಹಲವನ್ನು ಟ್ರೈಲರ್ ಮೂಡಿಸಿದೆ. ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬ್ಯಾಂಕ್ ಜನಾರ್ಧನ್, ಗಿರಿ, ವಿ.ಮನೋಹರ್, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ನಟರ ದಂಡು ಚಿತ್ರದ ತಾರಾಬಳಗದಲ್ಲಿದೆ. ಶ್ರೀನಿವಾಸ ಅವರ ಮೊದಲ ಚಿತ್ರ ಇದಾಗಿದ್ದು ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಇನ್ನಷ್ಟು ಸ್ಯಾಂಪಲ್‍ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

    ಚಿತ್ರದಲ್ಲಿ ನಾಯಕಿಯರಾಗಿ ಅಕ್ಷರ ರೆಡ್ಡಿ, ರಶ್ಮಿಕಾರೋಜಾ ಅಭಿನಯಿಸಿದ್ದು, ಪಾಂಚಜನ್ಯ ಸಿನಿ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಹಾಡುಗಳು ಕೂಡ ಗಮನ ಸೆಳೆದಿದ್ದು, ನೊಬಿಲ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ತೆರೆಗೆ ಬರಲಿದ್ದು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸೋದಂತೂ ಪಕ್ಕಾ.