Tag: Nobel

  • ಟ್ರಂಪ್‌ಗೆ ಭಾರೀ ಮುಖಭಂಗ – ವೆನೆಜುವೆಲಾದ ವಿಪಕ್ಷ ನಾಯಕಿಗೆ ಶಾಂತಿ ನೊಬೆಲ್‌

    ಟ್ರಂಪ್‌ಗೆ ಭಾರೀ ಮುಖಭಂಗ – ವೆನೆಜುವೆಲಾದ ವಿಪಕ್ಷ ನಾಯಕಿಗೆ ಶಾಂತಿ ನೊಬೆಲ್‌

    ಓಸ್ಲೋ: ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ (Donald Trump) ನಿರಾಸೆಯಾಗಿದೆ. ನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾದೋ (Maria Corina Machado) ಅವರಿಗೆ ಪ್ರಶಸ್ತಿ ಸಿಕ್ಕಿದೆ.

    ವೆನೆಜುವೆಲಾದ (Venezuela) ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಅವಿಶ್ರಾಂತ ಕೆಲಸ ಮತ್ತು ಸರ್ವಾಧಿಕಾರಿ ಪ್ರಜಾಪ್ರಭುತ್ವದ ವಿರುದ್ಧ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಹೋರಾಟ ನಡೆಸುತ್ತಿರುವ ಮಾರಿಯಾ ಕೊರಿನಾ ಮಚಾದೋ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆಯ  ನೊಬೆಲ್ ಸಮಿತಿ ನಿರ್ಧರಿಸಿದೆ.

    ಇಂದು ಸಹ ಟ್ರಂಪ್‌ ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಬರಾಕ್‌ ಒಬಾಮ ಏನು ಮಾಡಿದ್ದಾರೆ? ಏನು ಮಾಡದ ಒಬಾಮಗೆ ನೊಬೆಲ್‌ ಸಿಗುವುದಾದರೆ ನನಗೆ ಯಾಕೆ ಸಿಗಬಾರದು ಎಂದು ಪ್ರಶ್ನಿಸಿ ನನಗೆ ನೊಬೆಲ್‌ ಪ್ರಶಸ್ತಿಯ ಕನಸನ್ನು ವ್ಯಕ್ತಪಡಿಸಿದ್ದರು.

  • ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಇಸ್ರೇಲ್‌

    ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಇಸ್ರೇಲ್‌

    ವಾಷಿಂಗ್ಟನ್‌: ಇಸ್ರೇಲ್‌ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

    ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್‌ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಸಹ ಹಸ್ತಾಂತರಿಸಿದರು.

    ಟ್ರಂಪ್‌ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್‌ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್‌ ಅವರ ಈ ಕೆಲಸಕ್ಕೆ ಎಲ್ಲಾ ಇಸ್ರೇಲಿಗಳು ಮಾತ್ರವಲ್ಲದೆ,ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ನೆತನ್ಯಾಹು ಅವರು ತನ್ನನ್ನು ನೊಬೆಲ್‌ಗೆ ನಾಮನಿರ್ದೇಶನ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್‌, ಇದು ನನಗೆ ತಿಳಿದಿರಲಿಲ್ಲ. ವಿಶೇಷವಾಗಿ ನಿಮ್ಮಿಂದ ಈ ಮಾತು ಬಂದಿರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.

    ಟ್ರಂಪ್ ತಮ್ಮ ಬೆಂಬಲಿಗರು ಮತ್ತು ನಿಷ್ಠಾವಂತ ಅಮೆರಿಕದ ಸಂಸದರಿಂದ ಹಲವು ವರ್ಷಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತದ ಜೊತೆಗಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಪಾಕಿಸ್ತಾನ ಸಹ ಟ್ರಂಪ್‌ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಇದನ್ನೂ ಓದಿ: ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ಇಲ್ಲಿಯವರೆಗೆ ಅಮೆರಿಕದ ಮೂವರು ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1906 ರಲ್ಲಿ ಥಿಯೋಡರ್ ರೂಸ್‌ವೆಲ್ಟ್‌, 1919 ರಲ್ಲಿ ವುಡ್ರೋ ವಿಲ್ಸನ್ ಮತ್ತು 2009 ರಲ್ಲಿ ಬರಾಕ್ ಒಬಾಮಾ ಅವರಿಗೆ ನೊಬೆಲ್‌ ಸಿಕ್ಕಿದೆ.

  • ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ಆಯ್ಕೆ

    ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ಆಯ್ಕೆ

    ಢಾಕಾ: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ, ಗ್ರಾಮೀಣ ಬ್ಯಾಂಕ್‌ ಸ್ಥಾಪಿಸಿದ್ದ ಮೊಹಮ್ಮದ್‌ ಯೂನುಸ್‌ (Muhammad Yunus) ಬಾಂಗ್ಲಾದೇಶ (Bangladesh) ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.

    ಸಂಸತ್ತನ್ನು ವಿಸರ್ಜಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಬುಧವಾರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಇದನ್ನೂ ಓದಿ: ಪಲಾಯನಕ್ಕೆ ಯತ್ನಿಸಿದ್ದ ಬಾಂಗ್ಲಾ ಮಾಜಿ ವಿದೇಶಾಂಗ ಸಚಿವ ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

    ಸಂಸತ್ತನ್ನು ವಿಸರ್ಜಿಸಿದ ಬಳಿಕ ಶಹಾಬುದ್ದೀನ್ ಅವರು ರಕ್ಷಣಾ ಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ (Student Protest) 13 ಸದಸ್ಯರೊಂದಿಗೆ ಮಧ್ಯಂತರ ಸರ್ಕಾರದ ರಚನೆ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಯೂನುಸ್‌ ಅವರಿಗೆ ಅಧಿಕಾರ ನೀಡಬೇಕೆಂದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ ಎಂಬುದಾಗಿ ವಿದ್ಯಾರ್ಥಿ ನಾಯಕ ನಹೀದ್‌ ಇಸ್ಲಾಂ ಹೇಳಿದ್ದರು. ಇದನ್ನೂ ಓದಿ: Bangladesh Unrest |ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾ ಮನೆಗೆ ನುಗ್ಗಿ ಬೆಂಕಿ

    ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ಮಧ್ಯಂತರ ಸರ್ಕಾರದ ಇತರ ಸದಸ್ಯರನ್ನು ಅಂತಿಮಗೊಳಿಸಲಾಗುವುದು ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ  ಜಾಯ್ನಲ್ ಅಬೆದಿನ್ ಹೇಳಿದ್ದಾರೆ. ಯೂನುಸ್ ಅವರಿಗೆ ಬಾಂಗ್ಲಾದೇಶದ ಸೇನೆ (Bangladesh Army) ಬೆಂಬಲ ನೀಡಿದ್ದರಿಂದ ಸದ್ಯ ತಲೆದೋರಿರುವ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತಾಗಿದೆ.

     

    ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಯೂನುಸ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಮನವಿಯನ್ನು ಸೋಮವಾರ ಯೂನುಸ್‌ ಪುರಸ್ಕರಿಸಿದ್ದರು. ಮಧ್ಯಂತರ ಸರ್ಕಾರದ ಸಾರಥ್ಯ ವಹಿಸುವ ಹೊಣೆ ನೀಡಿದರೆ ಜವಾಬ್ದಾರಿ ವಹಿಸಲು ನಾನು ಸಿದ್ಧ ಎಂದು ಯೂನುಸ್‌ ಹೇಳಿದ್ದರು. ಯೂನುಸ್‌ ಕಡೆಯಿಂದ ಒಪ್ಪಿಗೆ ಸಿಕ್ಕಿದ ಬೆನ್ನಲ್ಲೇ ಅವರನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

  • ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

    ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

    ನ್ಯೂಯಾರ್ಕ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇಡೀ ಪ್ರಪಂಚವೇ ತತ್ತರಿಸಿ ಹೋಗಿತ್ತು. ಈ ಸಮಯದಲ್ಲಿ ಸಾಂಕ್ರಾಮಿಕಕ್ಕೆ ಮದ್ದಾಗಿದ್ದೇ ಕೋವಿಡ್ ಲಸಿಕೆ. ಈ ವರ್ಷ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ದೊರಕಬಹುದು ಎಂದು ಹಲವು ಊಹೆ ಮಾಡಿದ್ದರು. ಆದರೆ ಅದು ಸಿಗಲಿಲ್ಲ, ಇದಕ್ಕೆ ಕಾರಣ ಏನು ಎಂಬುದು ಬಯಲಾಗಿದೆ.

    ಪ್ರತಿವರ್ಷ ನೊಬೆಲ್ ಪುರಸ್ಕಾರಕ್ಕೆ ಅರ್ಹರ ಹೆಸರು ಶಿಫಾರಸು ಮಾಡಲು ಫೆ.1 ಕಡೆಯ ದಿನ ಅಷ್ಟರೊಳಗೆ ಸಲ್ಲಿಕೆಯಾದ ಹೆಸರುಗಳನ್ನು ಸ್ಟಾಕ್ ಹೋಂ ನೆರಾಯಲ್ ಸ್ವೀಡಿಶ್ ಅಕಾಡೆಮಿ(  Royal Swedish Academy of Sciences in Stockholm) ಪ್ರಶಸ್ತಿಗೆ ಪರಿಗಣತಿಸುತ್ತದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರರ ಪೋರಿ

    ಆದರೆ ಫೆ.1ಕ್ಕೆ ಮೊದಲೇ ಕೋವಿಡ್‍ಗೆ ಮೊದಲು ಎಂಆರ್‍ಎನ್‍ಎ (MRNA) ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತಾದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿಲ್ಲ. ಜೊತೆಗೆ ಅದರ ಪರಿಣಾಮಗಳ ಕುರಿತಾಗಿ ಹೆಚ್ಚನ ಮಾಹಿತಿ ಇರಲಿಲ್ಲ. ಹೀಗಾಗಿ ನಾಮನಿರ್ದೇಶನದ ವೇಳೆ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದವರ ಹೆಸರು ಸೇರ್ಪಡೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಮಕ್ಕಳ ನಾಪತ್ತೆ ಪ್ರಕರಣ – 4 ತಂಡ ಮಾಡಿ ಪತ್ತೆ ಕಾರ್ಯ

    ನೊಬೆಲ್ ಪ್ರಶಸ್ತಿ ನಾಮ ನಿರ್ದೇಶನ ಮಾಡಲು ನಿಗಧಿ ಕಾಲಮಿತಿ ಇರುತ್ತದೆ. ಇದರೊಟ್ಟಿಗೆ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕೋವಿಡ್ ಲಸಿಕೆ ಸಂಬಂಧಿದಂತೆ ಸಕಾಲದಲ್ಲಿ ಸಲ್ಲಿಕೆಯಾಗದಿದ್ದರಿಂದ ಪ್ರಶಸ್ತಿ ಪಟ್ಟಿಯಲ್ಲಿ ಇರಲಿಲ್ಲ. ಸಮಯ ಇದೇ ಕಾಯೋಣ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿಯ ಮಖ್ಯ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ಹೇಳಿದ್ದಾರೆ.

    ಕೋವಿಡ್ ಲಸಿಕೆ ನೀಜಕ್ಕೂ ಅದ್ಭುತವಾದ್ದು, ಮನುಕುಲಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಲಸಿಕೆ ತಯಾರಿಸಲು ಶ್ರಮಿಸಿದ ವಿಜ್ಞಾನಿಗಳಿಗೆ ಇಡೀ ಮನುಕುಲವೇ ಆಭಾರಿಯಾಗಿದೆ.

  • ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆ – 10 ದಿನ ತಿಹಾರ್ ಜೈಲು ಸೇರಿದ್ದ ಅಭಿಜಿತ್ ಬ್ಯಾನರ್ಜಿ

    ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆ – 10 ದಿನ ತಿಹಾರ್ ಜೈಲು ಸೇರಿದ್ದ ಅಭಿಜಿತ್ ಬ್ಯಾನರ್ಜಿ

    ನವದೆಹಲಿ: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಅಭಿಜಿತ್ ಬ್ಯಾನರ್ಜಿ ಅ ವಿದ್ಯಾರ್ಥಿಯಾಗಿದ್ದಾಗ ತಿಹಾರ್ ಜೈಲಿನಲ್ಲಿ 10 ದಿನ ಕಳೆದಿದ್ದರು.

    ಹೌದು. ದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರತಿಭಟನೆ ನಡೆಸಿದ್ದಕ್ಕೆ ಅಭಿಜಿತ್ ಬ್ಯಾನರ್ಜಿ ತಿಹಾರ್ ಜೈಲ್ ಸೇರಿದ್ದರು.

    ಈ ಸಂಬಂಧ ಪತ್ರಿಕೆಗೆ ಲೇಖನ ಬರೆದಿದ್ದ ಅವರು, 1983 ರಲ್ಲಿ ವಿದ್ಯಾರ್ಥಿ ಸಂಘದ ನಾಯಕನನ್ನು ಡಿಬಾರ್ ಮಾಡಿದ್ದನ್ನು ಖಂಡಿಸಿ ವಿಶ್ವವಿದ್ಯಾಲಯದ ಉಪಕುಲಪತಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದೆವು. ಈ ವೇಳೆ ನಮ್ಮ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರಲಿಲ್ಲ. ಕೊಲೆ ಯತ್ನ ಮತ್ತು ದೊಂಬಿ ಪ್ರಕರಣವನ್ನು ದಾಖಲಿಸಿ ಪೊಲೀಸರು ತಿಹಾರ್ ಜೈಲಿಗೆ ಕಳುಹಿಸಿದ್ದರು ಎಂದು ಬರೆದುಕೊಂಡಿದ್ದರು.

    ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಎಡಪಂಥಿಯ ಒಲವಿನ ಪ್ರಾಧ್ಯಾಪಕರಿಂದಾಗಿ ನಮ್ಮ ಮೇಲೆ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಈ ವೇಳೆ ಪೊಲೀಸರು ನಮ್ಮ ಮೇಲೆ ಹೊಡೆದಿದ್ದರು. 10 ದಿನಗಳ ನಂತರ ನಮ್ಮನ್ನು ಬಿಡುಗಡೆ ಮಾಡಲಾಯಿತು. ಆದರೆ ನಮ್ಮ ವಿರುದ್ಧ ದಾಖಲಾದ ಪ್ರಕರಣಗಳು ಯಾವುದು ಸಾಬೀತಾಗಲಿಲ್ಲ ಎಂದು ಉಲ್ಲೇಖಿಸಿದ್ದರು.

    ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಅವರಿಬ್ಬರಿಗೆ ಈ ಬಾರಿಯ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ದಂಪತಿ ಜೊತೆ ಮೈಕೆಲ್ ಕ್ರೇಮರ್ ಅವರೂ ಸಹ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

    ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಪತಿ ಪತ್ನಿಯರಿಬ್ಬರೂ ಪಡೆದುಕೊಳ್ಳುವುದು ಒಂದು ವಿಶೇಷ. ಅದರಲ್ಲೂ ನೊಬೆಲ್ ನಂತಹ ಮಹೋನ್ನತ ಪ್ರಶಸ್ತಿಯನ್ನು ಒಂದೇ ವಿಷಯದ ಮೇಲೆ ಒಂದೇ ಬಾರಿಗೆಅಭಿಜಿತ್ ದಂಪತಿ ಪಡೆದುಕೊಂಡಿರುವುದು ವಿಶೇಷ ಎನಿಸಿಕೊಂಡಿದೆ.

    ‘ಜಾಗತಿಕ ಬಡತನವನ್ನು ಹೋಗಲಾಡಿಸುವ ಕುರಿತ ಪ್ರಾಯೋಗಿಕ ವಿಧಾನ’ಕ್ಕಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 58 ವರ್ಷದ ಬ್ಯಾನರ್ಜಿ ಕೋಲ್ಕತಾ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.

  • ಅರ್ಥಶಾಸ್ತ್ರ ನೊಬೆಲ್ – ಭಾರತೀಯ ಮೂಲದ ಅಭಿಜಿತ್ ದಂಪತಿಗೆ ಪ್ರಶಸ್ತಿ

    ಅರ್ಥಶಾಸ್ತ್ರ ನೊಬೆಲ್ – ಭಾರತೀಯ ಮೂಲದ ಅಭಿಜಿತ್ ದಂಪತಿಗೆ ಪ್ರಶಸ್ತಿ

    ನವದೆಹಲಿ: ಅರ್ಥಶಾಸ್ತ್ರದ 2019ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಭಾರತೀಯ ಮೂಲದ ಅಮೆರಿಕದಲ್ಲಿ ನೆಲೆಸಿರುವ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಎಸ್ತರ್ ಡುಫ್ಲೋ ಹಾಗೂ ಮಿಷಲ್ ಕ್ರೆಮರ್ ಅವರಿಗೆ ಲಭಿಸಿದೆ.

    ‘ಜಾಗತಿಕ ಬಡತನವನ್ನು ಹೋಗಲಾಡಿಸುವ ಕುರಿತ ಪ್ರಾಯೋಗಿಕ ವಿಧಾನ’ಕ್ಕಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಇಂದು ಪ್ರಶಸ್ತಿಯನ್ನು ಪ್ರಕಟಿಸಿದೆ.

    58 ವರ್ಷದ ಬ್ಯಾನರ್ಜಿ ಕೋಲ್ಕತಾ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. 1988ರಲ್ಲಿ ಇವರು ಪಿಎಚ್‍ಡಿ ಪಡೆದಿದ್ದಾರೆ.

    ಪ್ರಸ್ತುತ ಫೋರ್ಡ್ ಫೌಂಡೇಶನ್ ಇಂಟರ್ ನ್ಯಾಷನಲ್‍ನ ಮ್ಯಾಸಚೂಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. 2003ರಲ್ಲಿ ಬ್ಯಾನರ್ಜಿಯವರು ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ಅವರೊಂದಿಗೆ ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್(ಜೆ-ಪಿಎಎಲ್) ಸ್ಥಾಪಿಸಿದ್ದರು. ಅಲ್ಲದೆ ಲ್ಯಾಬ್‍ನ ನಿರ್ದೇಶಕರಲ್ಲಿ ಇವರೂ ಸಹ ಒಬ್ಬರಾಗಿದ್ದಾರೆ.

    ಇನ್ನೂ ವಿಶೇಷವೆಂದರೆ ಎಸ್ತರ್ ಡುಫ್ಲೋ ಅವರು ಅಭಿಜಿತ್ ಬ್ಯಾನರ್ಜಿ ಅವರ ಪತ್ನಿಯಾಗಿದ್ದಾರೆ. ಈ ಮೂಲಕ ಪತಿ-ಪತ್ನಿ ಇಬ್ಬರಿಗೂ ಒಂದೇ ಬಾರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ.

    ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನು ಪರಿವರ್ತಿಸಿದೆ. ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ ಎಂದು ನೋಬೆಲ್ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

    ಇಲ್ಲಿಯವರೆಗೆ ಆರ್ಥಸಾಸ್ತ್ರದಲ್ಲಿ 81 ಮಂದಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಹಿಂದೆ 1998ರಲ್ಲಿ ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

    ಪ್ರಶಸ್ತಿಯೂ 11.10 ಲಕ್ಷ ಡಾಲರ್(7.90 ಕೋಟಿ ರೂ.) ನಗದು ಬಹುಮಾನ, ಚಿನ್ನದ ಪದಕ ನೀಡಲಾಗುತ್ತದೆ. ಕಳೆದ ವಾರ ಔಷಧಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಸಾಹಿತ್ಯ ಕ್ಷೇತ್ರಗಳ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು.

    ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರನ್ನು ಹೊರತುಪಡಿಸಿ ಎಲ್ಲರೂ ಡಿಸೆಂಬರ್ 10ರಂದು ನೊಬೆಲ್ ಅವರ ಮರಣದ ವಾರ್ಷಿಕೋತ್ಸವದಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಶಾಂತಿ ಪ್ರಶಸ್ತಿ ವಿಜೇತರಿಗೆ ನಾರ್ವೆಯ ಓಸ್ಲೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.