Tag: no parking

  • ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವೆಹಿಕಲ್‌ಗಳ ಕಾರ್ಯಾರಂಭ

    ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವೆಹಿಕಲ್‌ಗಳ ಕಾರ್ಯಾರಂಭ

    – ಆದ್ಯತೆ ಮೇರೆಗೆ ಮೆಜೆಸ್ಟಿಕ್‌ ಸುತ್ತಮುತ್ತ ಟೋಯಿಂಗ್‌ಗೆ ಅನುಮತಿ

    ಬೆಂಗಳೂರು: ಕೋವಿಡ್ ಕಾಲದಲ್ಲಿ ನಿಂತಿದ್ದ ಟೋಯಿಂಗ್ (Towing) ಇದೀಗ ಬೆಂಗಳೂರಲ್ಲಿ (Bengaluru) ಪುನರಾರಂಭವಾಗಿದೆ. ಟೋಯಿಂಗ್ ಸಿಬ್ಬಂದಿಗಳ ಮೇಲೆ ಸಾಲು ಸಾಲು ಆರೋಪಗಳು ಬಂದ ಹಿನ್ನೆಲೆ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮೆಜೆಸ್ಟಿಕ್ (Mejestic) ಏರಿಯಾದಲ್ಲಿ ಮತ್ತೆ ಟೋಯಿಂಗ್ ಕಾರ್ಯಾರಂಭವಾಗಿದೆ.

    ಅದು ಕೋವಿಡ್ ಕಾಲ. ಬೆಂಗಳೂರಲ್ಲಿ ಟೋಯಿಂಗ್ ಸಿಬ್ಬಂದಿ ವಾಹನ ಸವಾರರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನೋ ಪಾರ್ಕಿಂಗ್‌ನಲ್ಲಿರುವ ವೆಹಿಕಲ್‌ಗಳನ್ನು ಟೋ ಮಾಡುವ ಮೊದಲು ಅನೌನ್ಸ್ ಮಾಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳು ಬಂದ ಹಿನ್ನೆಲೆ ಟೋಯಿಂಗ್ ಸಂಪೂರ್ಣವಾಗಿ ಸ್ಟಾಪ್ ಮಾಡಿಸಲಾಗಿತ್ತು. ಇದೀಗ ಮತ್ತೆ ಮೂರ್ನಾಲ್ಕು ವರ್ಷಗಳ ಬಳಿಕ ಟೋಯಿಂಗ್ ಆರಂಭವಾಗಿದೆ. ಇದನ್ನೂ ಓದಿ: ಮೆಡಿಕಲ್ ಸೀಟ್ ಸಿಗದೇ ಮನನೊಂದು ಯುವತಿ ಆತ್ಮಹತ್ಯೆ

    ಆದ್ಯತೆ ಮೇರೆಗೆ ಮೆಜೆಸ್ಟಿಕ್‌ನಲ್ಲಿ ಎರಡು ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ. ಮೆಜೆಸ್ಟಿಕ್‌ನ ಜನಸಂದಣಿ ಪ್ರದೇಶದಲ್ಲಿ ನೋ ಪಾರ್ಕಿಂಗ್‌ನಲ್ಲಿರೋ ವೆಹಿಕಲ್‌ಗಳನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಟೋ ಮಾಡುತ್ತಿದ್ದಾರೆ. ಟೋಯಿಂಗ್ ಮಾಡುವ ಮುನ್ನ 5 ನಿಮಿಷಗಳ ಕಾಲ ಅನೌನ್ಸ್ ಮಾಡುತ್ತಿದ್ದು, ಐದು ನಿಮಿಷಗಳ ಒಳಗಾಗಿ ವಾಹನ ತೆಗೆಯದಿದ್ದರೆ ಟೋಯಿಂಗ್ ಮಾಡಲಾಗುತ್ತಿದೆ. ಬಿಬಿಎಂಪಿ ವೆಹಿಕಲ್‌ಗಳನ್ನು ನೀಡಿರೋ ಹಿನ್ನೆಲೆ ಟೋಯಿಂಗ್ ಚಾರ್ಜ್ ಹಾಕದೆ ಕೇವಲ ನೋ ಪಾರ್ಕಿಂಗ್ ಫೈನ್ 1,000 ರೂ. ಹಾಕಲಾಗುತ್ತಿದೆ. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಹಂತ ಹಂತವಾಗಿ ಬೆಂಗಳೂರಿನಾದ್ಯಂತ ಟೋಯಿಂಗ್ ವೆಹಿಕಲ್‌ಗಳು ತಮ್ಮ ಕೆಲಸ ಆರಂಭಿಸಬಹುದು. ಅನೌನ್ಸ್ ಮೆಂಟ್ ರೂಲ್ಸ್ ಏನಿದೆಯೋ ಅದನ್ನು ಪೊಲೀಸರು ಫಾಲೋ ಮಾಡಬೇಕು. ಇನ್ನು ನೋ ಪಾರ್ಕಿಂಗ್‌ನಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡುವ ಸವಾರರು 1,000 ರೂ ಹೆಚ್ಚುವರಿಯಾಗಿ ಇಟ್ಟುಕೊಂಡಿರಿ. ಇಲ್ಲ ಪಾರ್ಕಿಂಗ್ ಜಾಗದಲ್ಲೇ ವೆಹಿಕಲ್ ಪಾರ್ಕಿಂಗ್ ಮಾಡಿ. ಇದನ್ನೂ ಓದಿ: 

  • ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

    ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

    ಬೆಂಗಳೂರು: ನೋ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿ ಎಲ್ಲೆಂದರಲ್ಲಿ ಹೋದ್ರೆ ಎಚ್ಚರ. ಬೆಂಗಳೂರು ಸಂಚಾರಿ ಪೊಲೀಸರಿಂದ ಸಿದ್ಧವಾಗಿದ್ದೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಸೂತ್ರ.

    ಹೌದು. ಬೆಂಗಳೂರಿನಲ್ಲಿ ಟೋಯಿಂಗ್ ನಿಂತ ಮೇಲೆ ನೋ ಪಾರ್ಕಿಂಗ್‍ನಲ್ಲಿ ಕಾರು, ಬೈಕ್‍ಗಳನ್ನ ನಿಲ್ಲಿಸಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಾಹನಗಳನ್ನ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡೋದ್ರಿಂದ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ. ಹಾಗಾಗಿ ಸಂಚಾರಿ ಪೊಲೀಸರು ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡುವವರ ಹಾವಳಿಗೆ ಬ್ರೇಕ್ ಹಾಕಲು ಹಳೆ ಮಾದರಿಯ ಮೊರೆ ಹೋಗಿದ್ದಾರೆ.

    ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನ ಪಾರ್ಕ್ ಮಾಡಿ ಹೋಗುವ ವಾಹನ ಸವಾರರಿಗೆ ಶಾಕ್ ಕೊಡಲು ಬೆಂಗಳೂರು ಸಂಚಾರಿ ಪೊಲೀಸರಿಂದ ಸಿದ್ಧವಾಗಿದೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಸೂತ್ರ. ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿ ಹೋಗಿರೋ ವಾಹನಗಳಿಗೆ ವ್ಹೀಲ್ ಕ್ಲಾಂಪ್ ಹಾಕಿ ಸ್ಥಳದಲ್ಲೇ ನೋ ಪಾರ್ಕ್ ವಾಹನಗಳ ದಂಡದ ಮೊತ್ತ ವಸೂಲಿ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಕೊಡಲಾಗಿದೆ ಎನ್ನಲಾಗಿದೆ.

    ಹಿರಿಯ ಅಧಿಕಾರಿಗಳ ಸೂಚನೆಯಂತೆ ಬೆಂಗಳೂರಿನಲ್ಲಿ ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿ ಹೋಗುವ ವಾಹನ ಸವಾರರಿಗೆ ದಡಂ ದಶಗುಣಂ ಪ್ರಯೋಗ ಮಾಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಫೋಟೋಗೆ 500 ರೂ. ಬಹುಮಾನ: ನಿತಿನ್ ಗಡ್ಕರಿ

    ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಫೋಟೋಗೆ 500 ರೂ. ಬಹುಮಾನ: ನಿತಿನ್ ಗಡ್ಕರಿ

    ನವದೆಹಲಿ: ಸಿಕ್ಕ ಸಿಕ್ಕ ಜಾಗಗಳಲ್ಲಿ ಜನರು ವಾಹನಗಳನ್ನು ಪಾರ್ಕಿಂಗ್ ಮಾಡುವ ಅಭ್ಯಾಸವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಕಾಣುತ್ತದೆ. ಆದರೂ ಜನರ ಈ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದೆ.

    ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ ಫೋಟೋಗಳನ್ನು ತೆಗೆದು, ಅದನ್ನು ಶೇರ್ ಮಾಡಿದ್ದಲ್ಲಿ, ಅವರಿಗೆ 500 ರೂ. ಬಹುಮಾನ ಕೊಡುವ ಹೊಸ ಕಾನೂನನ್ನು ತರುವ ಬಗ್ಗೆ ಯೋಜಿಸಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ, ಯಡಿಯೂರಪ್ಪ ಸಹ ಜೈಲಿಗೆ ಹೋಗ್ತಾರೆ: ಯತ್ನಾಳ್

    ಇಂಡಸ್ಟ್ರಿಯಲ್ ಡಿಕಾರ್ಬೋನೈಸೇಶನ್ ಸಮ್ಮಿಟ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸುವುದರೊಂದಿಗೆ, ಆ ವಾಹನದ ಫೋಟೋವನ್ನು ಕ್ಲಿಕ್ಕಿಸಿದವರಿಗೆ 500 ರೂ. ಬಹುಮಾನ ಕೊಡುವುದಾಗಿ ಹೊಸ ಕಾನೂನನ್ನು ಶೀಘ್ರವೇ ತರುವ ಬಗ್ಗೆ ತಿಳಿಸಿದ್ದಾರೆ.

    ಭಾರತದ ನಗರಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪಾರ್ಕಿಂಗ್ ಸಮಸ್ಯೆಯೂ ಉಂಟಾಗುತ್ತಿದೆ. ಕೆಲವು ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಕಾರುಗಳನ್ನು ಹೊಂದಿರುವವರೂ ಇದ್ದಾರೆ. ಆದರೆ ಯಾರೂ ಪಾರ್ಕಿಂಗ್‌ಗೆ ಜಾಗವನ್ನೇ ನಿರ್ಮಿಸುತ್ತಿಲ್ಲ. ಉದಾಹರಣೆ ಕೊಡುವುದಾದರೆ ದೆಹಲಿಯಲ್ಲಿ ಇರುವ ವಿಶಾಲವಾದ ರಸ್ತೆಗಳನ್ನೇ ಜನರು ಪಾರ್ಕಿಂಗ್ ಜಾಗವಾಗಿ ಪರಿಗಣಿಸುತ್ತಿದ್ದಾರೆ ಎಂದು ಗಡ್ಕರಿ ತಿಳಿಸಿದರು. ಇದನ್ನೂ ಓದಿ: ಮೊದಲ ದಿನ ಸಿಇಟಿ ಪರೀಕ್ಷೆ ಸುಗಮ: ಅಶ್ವಥ್ ನಾರಾಯಣ

    ಅಮೆರಿಕದಲ್ಲಿ ನೈರ್ಮಲ್ಯ ಕಾರ್ಮಿಕರು ಕೂಡಾ ಕಾರುಗಳನ್ನು ಹೊಂದಿದ್ದಾರೆ. ಶೀಘ್ರದಲ್ಲೇ ಭಾರತದಲ್ಲೂ ಆ ಪರಿಸ್ಥಿತಿ ಎದುರಾಗುವಂತೆ ತೋರುತ್ತಿದೆ. ಕೋವಿಡ್ ಹಾವಳಿ ಕಡಿಮೆಯಾಗುತ್ತಿದ್ದಂತೆ ಕಾರುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಕಾರುಗಳನ್ನು ಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    Live Tv

  • ನಿಮ್ಮ ವಾಹನ ನೋ ಪಾರ್ಕಿಂಗ್‍ನಲ್ಲಿದ್ರೆ ಘರ್ಜಿಸುತ್ತೆ `ಟೈಗರ್’

    ನಿಮ್ಮ ವಾಹನ ನೋ ಪಾರ್ಕಿಂಗ್‍ನಲ್ಲಿದ್ರೆ ಘರ್ಜಿಸುತ್ತೆ `ಟೈಗರ್’

    -`ಟೈಗರ್’ ಘರ್ಜನೆಗೆ ವಾಹನಗಳು ಡ್ಯಾಮೇಜ್..!

    ಬೆಂಗಳೂರು: ಟ್ರಾಫಿಕ್ ಪೊಲೀಸರ ಕೆಲ ವರ್ತನೆ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರು ತಮ್ಮ ಟೈಗರ್ ವಾಹನದಲ್ಲಿ ಹೊತ್ತಿಕೊಂಡು ಹೋಗುತ್ತಾರೆ.

    ನಗರದಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೇನು ಕಡಿಮೆ ಇಲ್ಲ. ಎಷ್ಟೇ ದಂಡ ಹಾಕಲಿ ಏನೇ ಮಾಡಲಿ. ಟ್ರಾಫಿಕ್ ಉಲ್ಲಂಘನೆ ಮಾಡುತ್ತಿರುತ್ತಾರೆ. ಇದಕ್ಕೆ ಟಾಂಗ್ ಕೊಡುವಂತೆ ನಮ್ಮ ಟ್ರಾಫಿಕ್ ಪೊಲೀಸರು ಕೂಡ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ನೋ ಪಾರ್ಕಿಂಗ್‍ ನಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಟ್ರಾಫಿಕ್ ಪೊಲೀಸರು ತಮ್ಮ ಟೈಗರ್ ವಾಹನದಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ವಾಹನಗಳಿಗೆ ಸಾಕಷ್ಟು ಡ್ಯಾಮೇಜ್ ಮಾಡಿ ಫೈನ್ ಕೂಡಾ ಕಟ್ಟಿಸಿಕೊಳ್ಳುತ್ತಾರೆ.

    ನಿಯಮ ಉಲ್ಲಂಘನೆ ಮಾಡುವವರ ವಾಹನಗಳನ್ನು ಎತ್ತಿಕೊಂಡು ಹೋಗಿ ಫೈನ್ ಹಾಕುತ್ತಾರೆ. ಈ ವೇಳೆ ಕೆಲವೊಂದು ನಿಯಮ ಪಾಲಿಸಬೇಕು. ಆದರೆ ಫೈನ್ ಕಲೆಕ್ಟ್ ಮಾಡುವ ಆತುರದಲ್ಲಿ ಘೋಷಣೆ ಮಾಡದೇ ಕಡಿಮೆ ಸಂಬಳಕ್ಕೆ ತರಬೇತಿ ಇಲ್ಲದ ಸಿಬ್ಬಂದಿಯನ್ನು ನೇಮಿಸಿಕೊಂಡು ವಾಹನ ಟೋಯಿಂಗ್ ಮಾಡುತ್ತಿರುವುದು ನಿಮ್ಮ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‍ ನಲ್ಲಿ ಬಯಲಾಗಿದೆ.

    ಎಸ್‍ಪಿ ರೋಡ್‍ನ ನೋ ಪಾರ್ಕಿಂಗ್‍ ನಲ್ಲಿ ಬೈಕ್ ನಿಲ್ಲಿಸಿದ್ದ ವ್ಯಕ್ತಿ ತನ್ನ ಬೈಕಿನಲ್ಲಿ ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮನೆ ಪತ್ರಗಳಿಟ್ಟಿದ್ದರಂತೆ. ಬೈಕ್ ನಿಲ್ಲಿಸಿದ 5 ನಿಮಿಷದಲ್ಲಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿ ಸುಮಾರು ಒಂದು ಕಿಲೋಮಿಟರ್ ನಷ್ಟು ದೂರ ಹಿಂದೆಯೇ ಓಡಿ ವಾಹನದ ಮಾಲೀಕರು ಆಸ್ತಿಪತ್ರ ಪಡೆದುಕೊಂಡಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ ಬೈಕ್ ಸವಾರ ಮಾತ್ರೆ ತೆಗೆದುಕೊಳ್ಳೋಕೆ ಮೆಡಿಕಲ್ ಶಾಪ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಮರುಕ್ಷಣ ಟೋಯಿಂಗ್ ವಾಹನದಲ್ಲಿ ಬೈಕ್ ತೆಗೆದುಕೊಂಡು ಹೊರಟಿದ್ದಾರೆ. ಫೈನ್ ಕಟ್ಟಿಸಿಕೊಳ್ಳಿ ನಾನು ಬೇಗ ಹೋಗಬೇಕು ಅಂತ ಸವಾರ ಹೇಳಿದ್ದರೂ ಕೇಳದ ಪೊಲೀಸರು ತಡ ಮಾಡಿದ್ದಾರೆ. ಇದರಿಂದ ಜ್ವರದಿಂದ ಸುಸ್ತಾದ ಸವಾರ ತಲೆಸುತ್ತಿ ಕೆಳಗೆ ಬಿದ್ದಿದ್ದಾರೆ.

    ಇದು ಟೋಯಿಂಗ್ ಸಿಬ್ಬಂದಿ ಭ್ರಷ್ಟಾಚಾರವಾಗಿದ್ದು, ಟ್ರಾಫಿಕ್ ಪೊಲೀಸರಿಗೆ ಗೊತ್ತಿಲ್ಲದೇ ವಾಹನ ಮಾಲೀಕರಿಂದ ಹಣ ತಗೆದುಕೊಂಡು ಬಿಟ್ಟು ಕಳಿಸುತ್ತಿದ್ದಾರೆ. ಕಾರು ಚಾಲಕರೊಬ್ಬರ ಬಳಿ 750 ರೂ.ಪಡೆದಿದ್ದ ಟೋಯಿಂಗ್ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಟ್ರಾಫಿಕ್ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.

    ತುರ್ತು ಕೆಲಸ ನಿಮಿತ್ತ ಎಲ್ಲಂದರಲ್ಲಿ ವಾಹನ ಪಾರ್ಕ್ ಮಾಡುವವರೇ ಸದ್ಯ ಟ್ರಾಫಿಕ್ ಪೊಲೀಸರ ಟಾರ್ಗೆಟ್ ಆಗಿದ್ದಾರೆ. ಟೋಯಿಂಗ್ ಮಾಡಿದ ಸ್ಪಾಟ್‍ ನಲ್ಲಿ ಹಣ ಕಟ್ಟಿಸಿಕೊಂಡು ಬಿಟ್ಟು ಕಳಿಸುತ್ತಿದ್ದಾರೆ. ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರು ಇಂಥ ಗಮನ ಹರಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೈಕ್ ಎತ್ಕೊಂಡು ಹೋಗಿದ್ದಕ್ಕೆ ಪೊಲೀಸರ ವಾಹನದ ಚಕ್ರದ ಕೆಳಗೆ ಮಲಗಿದ ಸವಾರ!

    ಬೈಕ್ ಎತ್ಕೊಂಡು ಹೋಗಿದ್ದಕ್ಕೆ ಪೊಲೀಸರ ವಾಹನದ ಚಕ್ರದ ಕೆಳಗೆ ಮಲಗಿದ ಸವಾರ!

    ಮೈಸೂರು: ಬೈಕನ್ನು ಪೊಲೀಸರು ತಮ್ಮ ಟೈಗರ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರಿಂದ ಸಿಟ್ಟುಗೊಂಡ ಸವಾರ ವಾಹನದಡಿ ಮಲಗಿ ತಡೆದ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

    ಪೊಲೀಸರಿಗೆ ಧಿಕ್ಕಾರ ಕೂಗುತ್ತಲೇ ಟೈಗರ್ ವಾಹನದ ಚಕ್ರದ ಕೆಳಗೆ ಮಲಗಿದ ಬೈಕ್ ಸವಾರನ ವರ್ತನೆ ಕಂಡು ಪೊಲೀಸರು ಕೆಲ ಕಾಲ ಕಂಗಾಲಾದರು. ಕೊನೆಗೆ ಟೈಗರ್ ವಾಹನದಿಂದ ಬೈಕ್ ಅನ್ನು ಪೊಲೀಸರು ಕೆಳಗಿಳಿಸಿದರು.

    ನೋ ಪಾರ್ಕಿಂಗ್ ಬೋರ್ಡ್ ಹಾಕದ ಜಾಗದಲ್ಲಿ ನಾನು ಬೈಕ್ ನಿಲ್ಲಿಸಿದ್ದೆ. ನೀವು ಬೋರ್ಡ್ ಹಾಕಿದ್ದರೆ ನಾನು ಬೈಕ್ ನಿಲ್ಲಿಸುತ್ತಿರಲಿಲ್ಲ ಎಂದು ಬೈಕ್ ಸವಾರ ಹೇಳಿದ್ದಾರೆ. ಹೀಗಾಗಿ ಪೊಲೀಸರು ಬೈಕನ್ನು ತಮ್ಮ ವಾಹನದಿಂದ ಕೆಳಗೆ ಇಳಿಸಿದ್ದಾರೆ.

    ಪೊಲೀಸ್ ಮತ್ತು ಬೈಕ್ ಸವಾರನ ಹೈಡ್ರಾಮವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

  • ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲಿಸಿದ ಟ್ರಾಫಿಕ್ ಪೊಲೀಸ್

    ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲಿಸಿದ ಟ್ರಾಫಿಕ್ ಪೊಲೀಸ್

    ಬೆಂಗಳೂರು: ನಗರದ ಟ್ರಾಫಿಕ್ ಪೊಲೀಸರಿಂದ ಈ ವರ್ಷ ದಾಖಲೆ ಪ್ರಮಾಣದ ಕೇಸ್ ದಾಖಲಾಗಿದೆ.

    ನಗರ ಸಂಚಾರಿ ಪೊಲೀಸರು ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲು ಮಾಡಿದ್ದಾರೆ. ಸೆಪ್ಟಂಬರ್ ತಿಂಗಳ ಅಂತ್ಯದ ವೇಳೆಗೆ 80,93,719 ಪ್ರಕರಣಗಳು ದಾಖಲಾಗಿದ್ದವು. 21 ಸಂಚಾರಿ ನಿಯಮ ಉಲ್ಲಂಘನೆ ಕೇಸುಗಳು ನಗರದಲ್ಲಿ ಪ್ರತಿ ನಿಮಿಷಕ್ಕೆ ದಾಖಲಾಗುತ್ತಿವೆ. ದಶಕಗಳಲ್ಲೇ ಅತ್ಯಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಈ ವರ್ಷ ದಾಖಲಾಗಿವೆ.

    1 ಕೋಟಿ ಕೇಸ್ ಗಳಲ್ಲಿ ನೋ ಪಾರ್ಕಿಂಗ್ ಕೇಸ್ ಗಳೇ ಹೆಚ್ಚಿವೆ. 2015 ರಲ್ಲಿ 76,26,671 ಕೇಸ್ ದಾಖಲಾಗಿತ್ತು. 2016 ರಲ್ಲಿ ಸಂಚಾರಿ ಪೊಲೀಸರು 1,80,438 ಕೇಸು ದಾಖಲಿಸಿದ್ದರು. ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ, ನೋ ಪಾರ್ಕಿಂಗ್ ಕೇಸ್ ಗಳೇ ಹೆಚ್ಚಾಗಿದ್ದು, ಈ ವರ್ಷ 1.08 ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನ ಪೊಲೀಸರು ದಾಖಲಿಸಿದ್ದಾರೆ.

  • ಬೈಕ್ ಮಾಲೀಕನ ಮೇಲೆ ಟ್ರಾಫಿಕ್ ಎಎಸ್‍ಐ ಹಲ್ಲೆ: ವಿಡಿಯೋ ನೋಡಿ

    ಬೈಕ್ ಮಾಲೀಕನ ಮೇಲೆ ಟ್ರಾಫಿಕ್ ಎಎಸ್‍ಐ ಹಲ್ಲೆ: ವಿಡಿಯೋ ನೋಡಿ

    ಬೆಂಗಳೂರು: ಬೈಕ್ ಮಾಲೀಕನ ಮೇಲೆ ಟ್ರಾಫಿಕ್ ಎಎಸ್‍ಐ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಉಮಾಪತಿ ಹಲ್ಲೆಗೊಳಗಾದ ಬೈಕ್ ಮಾಲೀಕ. ಬೆಂಗಳೂರಿನ ಚಾಮರಾಜಪೇಟೆ ಸಾಯಿ ಕೆಫೆ ಹೊಟೇಲ್ ಬಳಿ ಈ ಘಟನೆ ನಡೆದಿದೆ. ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಉಮಾಪತಿ ಮೇಲೆ ಚಾಮರಾಜಪೇಟೆ ಟ್ರಾಫಿಕ್ ಎಎಸ್‍ಐ ಹನುಮಂತರಾಯಪ್ಪ ಹಲ್ಲೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಹಲ್ಲೆಯ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=7AXRS1wEZos&feature=youtu.be