Tag: Nityananda

  • ನಿತ್ಯಾನಂದನ ಕೈಲಾಸ ದೇಶಕ್ಕೆ ನಟಿ ರಂಜಿತಾ ಪ್ರಧಾನಿ

    ನಿತ್ಯಾನಂದನ ಕೈಲಾಸ ದೇಶಕ್ಕೆ ನಟಿ ರಂಜಿತಾ ಪ್ರಧಾನಿ

    ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nityananda) ತನ್ನ ಆತ್ಮೀಯ ಶಿಷ್ಯಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ (Prime Minister) ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೈಲಾಸ ದೇಶ (Kailasa Desha) ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ.

    ನಟಿ ರಂಜಿತಾ (Ranjitha) ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ. ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ವಿಮಾನ ಏರಿಸಿ ಹೊರಟೇ ಬಿಟ್ಟ. ಹೊಸ ದೇಶ ಕಟ್ಟಿ ಮತ್ತೆ ಅಚ್ಚರಿ ಮೂಡಿಸಿದೆ. ಈ ದೇಶಕ್ಕೆ ರಂಜಿತಾ ಅವರನ್ನು ಪ್ರಧಾನಿ ಮಾಡಿದ್ದಾನೆ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿವರಣೆಯನ್ನು ಅದರಲ್ಲಿ ನೀಡಿದ್ದಾನೆ.

    ಅದು ಪಕ್ಕಾ ಹಿಂದೂಗಳೇ ಇರುವ ದೇಶವೆಂದು ನಿತ್ಯಾನಂದ ಈ ಹಿಂದೆ ಘೋಷಿಸಿಕೊಂಡಿದ್ದ. ಜೊತೆಗೆ ಶಿಷ್ಯ ರಂಜಿತಾಳ ಹೆಸರನ್ನೇ ಬದಲಾಯಿಸಿ ನಿತ್ಯಾನಂದಮಯಿ (Nityanandamayi)ಎಂದೂ ಹೆಸರಿಟ್ಟಿದ್ದ. 2019ರಲ್ಲಿ ದೇಶದಿಂದ ಪರಾರಿಯಾಗಿ ಇದೀಗ ಹೊಸ ದೇಶದಲ್ಲಿ ಖುಷಿಯಾಗಿದ್ದಾನೆ. ಪ್ರಧಾನಿಯನ್ನೂ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಈ ಕುರಿತು ಖಚಿತ ಮಾಹಿತಿ ಇರದೇ ಇದ್ದರೂ, ತಮಿಳು ಪತ್ರಿಕೆಗಳು ಈ ಸುದ್ದಿಯನ್ನು ದೊಡ್ಡದಾಗಿ ಪ್ರಚಾರ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನವದೆಹಲಿ: ಸ್ವಯಂಘೋಷಿತ ದೇವಮಾನದ ನಿತ್ಯಾನಂದನ ಸ್ವಯಂ ಕೈಲಾಸ ದೇಶಕ್ಕೆ ವೀಸಾ ಆಫರ್ ನೀಡಿದ್ದಾನೆ. ಈ ಕುರಿತ ನಿತ್ಯಾನಂದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ.

    ಮೂರು ದಿನದ ವೀಸಾ: ಕೈಲಾಸಕ್ಕೆ ಮೂರು ದಿನದ ವೀಸಾ ನೀಡಲಾಗುವುದು. ನಿಮ್ಮ ಸ್ವಂತ ಹಣದಲ್ಲಿ ಮೊದಲು ಆಸ್ಟ್ರೇಲಿಯಾಗೆ ಬರಬೇಕು. ಅಲ್ಲಿಂದ ಕೈಲಾಸ ದೇಶದ ಚಾರ್ಟೆಡ್ ಫ್ಲೈಟ್ ಗರುಡ ನಿಮ್ಮನ್ನ ಇಲ್ಲಿಗೆ ಕರೆತರಲಾಗುವುದು. ಮೂರು ದಿನದಲ್ಲಿ ಒಂದು ಬಾರಿ ಅಂದ್ರೆ 10 ನಿಮಿಷ ನನ್ನ ದರ್ಶನ ನಿಮಗೆ ಸಿಗಲಿದೆ. ಈ ವೇಳೆ ನಿಮ್ಮ ಕಷ್ಟಗಳನ್ನ ನನ್ನ ಬಳಿ ಹೇಳಿಕೊಳ್ಳಬಹುದು. ಮೂರು ದಿನಕ್ಕಿಂತ ಹೆಚ್ಚು ಇಲ್ಲಿರಲು ಯಾರಿಗೂ ಅವಕಾಶವಿಲ್ಲ ಎಂದು ನಿತ್ಯಾನಂದ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೈಲಾಸಕ್ಕೆ ಭೇಟಿ ನೀಡುವವರು ವೀಸಾ ಅಪ್ಲೈ ಮಾಡಲು ಲಿಂಕ್ (shrikailasa.org/e-passport) ಸಹ ನೀಡಿದ್ದಾನೆ. ಇಲ್ಲಿಗೆ ಬಂದ ಮೇಲೆ ಇನ್ನಷ್ಟು ದಿನ ಇರುತ್ತೇನೆ ಎಂದು ಹಠ ಹಿಡಿಯುವಂತಿಲ್ಲ. ಕೈಲಾಸದಲ್ಲಿ ನಿಮಗೆ ಆಹಾರ, ವಸತಿ ವ್ಯವಸ್ಥೆಯನ್ನ ಉಚಿತವಾಗಿ ಕಲ್ಪಿಸಲಾಗುವುದು ಎಂದು ನಿತ್ಯಾನಂದ ಹೇಳಿದ್ದಾರೆ.

    ಗಣೇಶ ಚತುರ್ಥಿಯಂದು ನಿತ್ಯಾನಂದ ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದನು. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದನು.

    ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದನು. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದನು.

    ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿತ್ತು. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದನು.

    ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.

    ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್ ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.

    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈಕ್ವೆಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.

  • ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಬೆಂಗಳೂರು: ಮಾಡರ್ನ್ ಸ್ವಾಮೀಜಿ ಎಂದೇ ಖ್ಯಾತರಾಗಿರೋ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಭಾಷಣದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ನಿತ್ಯಾನಂದ ಅವರು ಹೆಂಡತಿ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸದ ವಿಡಿಯೋ ತುಣುಕೊಂದು ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ಶೇರ್ ಆಗುತ್ತಿದೆ. ಹೆಂಡತಿ ಕಾಟಕ್ಕೆ ಬೇಸತ್ತ ಗಂಡಸರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲೇ ನಿತ್ಯಾನಂದ ಹೇಳಿದ್ದೇನು?
    ಯಾವುದೇ ಕಾರಣಕ್ಕೂ ಹೆಂಡತಿಗೆ ಸಲಹೆ ಕೊಡಲು ಹೋಗಬೇಡಿ. ಬೇರೆ ಯಾರಿಗೆ ಬೇಕಾದ್ರ ಅಡ್ವೈಸ್ ಮಾಡಿ. ಆದ್ರೆ ನಿಮ್ಮ ಪತ್ನಿಯರಿಗೆ ಮಾತ್ರ ಮಾಡಬೇಡಿ. ಇದು ನಾನು ನಿಮಗೆ ಕೊಡುತ್ತಿರುವ ಸಲಹೆ.

    ಮಹಾದೇವ ಕೂಡ ಆತನ ಹೆಂಡತಿಗೆ ಸಲಹೆ ನೀಡಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಸಲಹೆ ಕೊಡುತ್ತೀರಿ. ಮಹಾದೇವ ಕೊನೆಗೆ ದಕ್ಷನನ್ನು ಕೊಲ್ಲಲು ವೀರಭದ್ರನನ್ನು ಕಳುಹಿಸಬೇಕಾಯಿತು. ಆದ್ರೆ ತನ್ನ ಸತಿಗೆ ಸಲಹೆ ನೀಡಲು ಆತನಿಂದ ಸಾಧ್ಯವಾಗಿಲ್ಲ. ಹೀಗಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪತ್ನಿಯನ್ನು ಮನವೊಲಿಸಲು ನಿಮ್ಮಿಂದ ಮಾತ್ರವಲ್ಲ ಮಹಾದೇವನಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ.

    ಇದೀಗ ಗಂಡಂದಿರುವ ವಿಡಿಯೋವನ್ನು ವಾಟ್ಸಾಪ್ ಮೂಲಕ ತಮ್ಮ ಪತ್ನಿಯಂದಿರಿಗೆ ಕಳುಹಿಸಿ ನೋಡಿ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿತ್ಯಾನಂದರ ಈ ವಿಡಿಯೋಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

    2.39 ನಿಮಿಷದ ವಿಡಿಯೋದಲ್ಲಿ 1.56 ಸೆಕೆಂಡ್ ನಿಂದ ಪತ್ನಿಗೆ ಸಲಹೆ ನೀಡ್ಬೇಡಿ ಎಂಬ ವಿಚಾರ ಪ್ರಸ್ತಾಪವಾಗಿದೆ.

    https://www.youtube.com/watch?v=WxG81DHBfq4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿತ್ಯಾನಂದನಿಗೆ ಜಾಮೀನು ರಹಿತ ವಾರಂಟ್ ಜಾರಿ

    ನಿತ್ಯಾನಂದನಿಗೆ ಜಾಮೀನು ರಹಿತ ವಾರಂಟ್ ಜಾರಿ

    ರಾಮನಗರ: ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ರಹಿತ ವಾರಂಟ್  ಜಾರಿ ಮಾಡಿದೆ.

    ಸತತ ಮೂರನೇ ಬಾರಿಗೆ ವಿಚಾರಣೆ ನಿತ್ಯಾನಂದ ಗೈರಾಗಿದ್ದ. ಈ ಬಗ್ಗೆ ಕಳೆದ ಬಾರಿಯ ವಿಚಾರಣೆಯಲ್ಲೇ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ನಿತ್ಯಾನಂದ ಪರ ವಕೀಲರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕಳೆದ ಎರಡು ವಿಚಾರಣೆ ವೇಳೆ ಪ್ರಕರಣದ ಪ್ರಮುಖ ಸಾಕ್ಷಿ ಲೆನಿನ್ ಕುರುಪ್ಪನ್ ವಿಚಾರಣೆ ನಡೆಸುವಾಗಲೂ ಸಹ ನಿತ್ಯಾನಂದ ಹಾಜರಾಗಿರಲಿಲ್ಲ.

     ಕಳೆದ ವಿಚಾರಣೆಯಲ್ಲಿ ಸಿಐಡಿ ಪರ ವಕೀಲರು ವಿಚಾರಣೆಯನ್ನ ಮಂದಗತಿಗೆ ದೂಡುವ ಯತ್ನ ನಡೆಸಲಾಗುತ್ತಿದೆ. ಅಲ್ಲದೇ ಸುಪ್ರೀಂ ಕೋರ್ಟ್‍ನ ಆದೇಶವಿದ್ದರೂ ನಿತ್ಯಾನಂದ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಗುರುವಾರ ನಡೆದ ವಿಚಾರಣೆಯಲ್ಲಿಯೂ ಗೈರಾದ ಹಿನ್ನೆಲೆಯಲ್ಲಿ ನಿತ್ಯಾನಂದನಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ, ಪ್ರಕರಣದ ವಿಚಾರಣೆಯನ್ನು ಇದೇ ಸೆಪ್ಟೆಂಬರ್ ತಿಂಗಳ 14ಕ್ಕೆ ಮುಂದೂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಷ್ಯೆ ಮೇಲೆ ನಿತ್ಯಾನಂದ ಅತ್ಯಾಚಾರ ಮಾಡಿಲ್ಲ, ಸಮ್ಮತಿಯ ಮೇರೆಗೆ ಸೆಕ್ಸ್ ಮಾಡಲಾಗಿದೆ: ಆರೋಪಿ ಪರ ವಕೀಲ

    ಶಿಷ್ಯೆ ಮೇಲೆ ನಿತ್ಯಾನಂದ ಅತ್ಯಾಚಾರ ಮಾಡಿಲ್ಲ, ಸಮ್ಮತಿಯ ಮೇರೆಗೆ ಸೆಕ್ಸ್ ಮಾಡಲಾಗಿದೆ: ಆರೋಪಿ ಪರ ವಕೀಲ

    ಬೆಂಗಳೂರು: ನಿತ್ಯಾನಂದ ಸ್ವಾಮೀಜಿ ಶಿಷ್ಯೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಶಿಷ್ಯೆಯ ಸಮ್ಮತಿಯ ಮೇರೆಗೆ ಸೆಕ್ಸ್ ಮಾಡಿದ್ದಾರೆ ಅಂತಾ ನಿತ್ಯಾನಂದ ಪರ ವಕೀಲರು ಕೋರ್ಟ್ ನಲ್ಲಿ ಬಹಿರಂಗವಾಗಿ ಹೇಳಿದ್ದಾರೆ.

    ನಿತ್ಯಾನಂದ ನನ್ನ ಮೇಲೆ ಅತ್ಯಾಚಾರ ನಡೆಸಿಲ್ಲ. ಸಮ್ಮತಿಯ ಮೇರೆಗೆ ಸೆಕ್ಸ್ ಮಾಡಿದ್ದಾರೆ. ಶಿವ-ಪಾರ್ವತಿ ಕೂಡ ಲೈಂಗಿಕ ಕ್ರಿಯೆ ನಡೆಸಿದರು ಅಂತಾ ಈ ಹಿಂದೆ ಸಂತ್ರಸ್ತೆ ತನಿಖಾಧಿಕಾರಿ ಮುಂದೆ ಹೇಳಿಕೊಂಡಿದ್ದರು. ಆದ್ರೆ ನಿತ್ಯಾನಂದ ಮಾತ್ರ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಿಲ್ಲ, ನನ್ನ ದೇಹ 6 ವರ್ಷದ ಮಗುವಿನ ಹಾಗೆ ಎಂದು ನ್ಯಾಯಾಲಯದ ಮುಂದೆ ವಿದೇಶಿ ವೈದ್ಯರ ವರದಿಯನ್ನು ನೀಡಿದ್ದ.

     

    ನಿತ್ಯಾನಂದ ನೀಡಿದ್ದ ವರದಿ ವಿದೇಶದ್ದು ಅಂತಾ ತನಿಖಾಧಿಕಾರಿಗಳು ಪುರುಷತ್ವ ಪರೀಕ್ಷೆ ಮಾಡಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ನಿತ್ಯಾನಂದನ ಪುರುಷತ್ವ ಪರೀಕ್ಷೆಯಲ್ಲಿ ವಯಸ್ಸಿಗೆ ತಕ್ಕಂತೆ ನಿತ್ಯಾನಂದನ ಬೆಳವಣಿಗೆ ಇದೆ. ನಿತ್ಯಾನಂದ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಿದ್ದಾನೆ ಎಂದು ಹೇಳಲಾಗಿತ್ತು.

     

  • ನಿತ್ಯಾನಂದ ಸ್ವಾಮೀಜಿ ಭಕ್ತರಿಂದ ಹಿಟ್ ಆ್ಯಂಡ್ ರನ್- ಶಿಷ್ಯೆ, ನಟಿ ರಂಜಿತಾ ಎಸ್ಕೇಪ್

    ನಿತ್ಯಾನಂದ ಸ್ವಾಮೀಜಿ ಭಕ್ತರಿಂದ ಹಿಟ್ ಆ್ಯಂಡ್ ರನ್- ಶಿಷ್ಯೆ, ನಟಿ ರಂಜಿತಾ ಎಸ್ಕೇಪ್

    ಬೆಂಗಳೂರು: ಕಾಮಿ ಸ್ವಾಮಿ ಕುಖ್ಯಾತಿಯ ನಿತ್ಯಾನಂದ ಸ್ವಾಮೀಜಿಯ ಶಿಷ್ಯೆ ರಂಜಿತಾ ಹೋಗ್ತಿದ್ದ ಧ್ಯಾನಪೀಠ ಆಶ್ರಮಕ್ಕೆ ಸೇರಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ನಟಿ, ಶಿಷ್ಯೆ ರಂಜಿತಾ ಬೇರೊಂದು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.

    ಇಂದು ಮಧ್ಯಾಹ್ನ ನೆಲಮಂಗಲದ ಜಿಂದಾಲ್ ಬಳಿ ರಂಜಿತಾ ಮತ್ತು ಸಹಚರರಿದ್ದ ಫೋರ್ಡ್ ಕಾರ್, ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನಾರಾಯಣ ಗೌಡ ಮತ್ತು ಹಿಂಬದಿ ಸವಾರ ಲಕ್ಷ್ಮೀಕಾಂತ್ ರಕ್ತದ ಮಡುವಿನಲ್ಲಿ ಬಿದ್ದಿದ್ರೂ ಕಾರ್ ನಿಲ್ಲಿಸದೆ ನಿತ್ಯಾನಂದ ಭಕ್ತರು ಎಸ್ಕೇಪ್ ಆಗಿದ್ದಾರೆ.

    ಕಾರು ನಿಲ್ಲಿಸದೇ ಎಸ್ಕೇಪ್ ಆದ ರಂಜಿತಾ ಆ್ಯಂಡ್ ಟೀಂನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ನಗರದ ಎಂಟನೇ ಮೈಲಿನ ಬಳಿ ಕಾರನ್ನು ತಡೆದು ನೋಡಿದಾಗ ಒಳಗಡೆ ರಂಜಿತಾ ಇರೋದು ಗೊತ್ತಾಗಿದೆ. ಎಲ್ಲರಿಗೂ ಕಾರಿನಿಂದ ಕೆಳಗೆ ಇಳಿಯುವಂತೆ ಸಾರ್ವಜನಿಕರು ಹೇಳಿದ್ರೂ, ಯಾರು ಹೊರಗಡ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಕಾರಿನ ಗ್ಲಾಸ್ ಪುಡಿ ಪುಡಿ ಆಗುತ್ತಿದ್ದಂತೆ ರಂಜಿತಾ ಮತ್ತೊಂದು ವಾಹನದಲ್ಲಿ ಪರಾರಿ ಆಗಿದ್ದಾರೆ.

    ಈ ಸಂಬಂಧ ನೆಲಮಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಜಿತಾ ಚೆಲಿಸುತ್ತಿದ್ದ ಕಾರಿನ ಚಿತ್ರೀಕರಣಕ್ಕೆ ತೆರಳಿದ್ದ ಮಾದ್ಯಮದವರ ಮೇಲೆ ನಿತ್ಯಾನಂದರ ಶಿಷ್ಯರು ಹರಿಹಾಯ್ದಿದ್ದಾರೆ. ಮಾಧ್ಯಮದವರ ಫೋಟೋ ಕ್ಲಿಕ್ಕಿಸಿ ಬೆದರಿಕೆ ಹಾಕಿರುವ ಘಟನೆಯೂ ನಡೆದಿದೆ.

    https://www.youtube.com/watch?v=o6GPPAzSC-Y