Tag: Nitu Ghanghas

  • Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್

    Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್

    ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ಬಾಕ್ಸಿಂಗ್‌ ಕ್ರೀಡಾಪಟು ನೀತು ಘಂಘಾಸ್‌ (Nitu Ghanghas) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (Women’s World Boxing Championships) ಚಿನ್ನದ ಪದಕ ಗೆದ್ದು ವಿಶ್ವದಾಖಲೆ ಮಾಡಿದ್ದಾರೆ.

    ಶನಿವಾರ ನವದೆಹಲಿಯಲ್ಲಿ ನಡೆದ ವಿಶ್ವಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ನಿತು 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್‌ಸೆಟ್ಸೆಗ್ ವಿರುದ್ಧ ಜಯ ಸಾಧಿಸಿ, ವಿಶ್ವದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    2-3ನೇ ಸುತ್ತಿನಲ್ಲಿ ಸಮತೋಲನ ಕಳೆದುಕೊಂಡರೂ ತಮ್ಮ ಆಕ್ರಮಣಕಾರಿ ಆಟದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ 2023ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ.

    ಆಕ್ರಮಣಕಾರಿ ಪ್ರದರ್ಶನ ನೀಡಿದ ನಿತು ಮೊದಲ ಸುತ್ತಿನಲ್ಲೇ 5-0 ಮುನ್ನಡೆ ಸಾಧಿಸಿದರು. 2ನೇ ಸುತ್ತಿನಲ್ಲಿ ಪಾಯಿಂಟ್ಸ್‌ಗಳನ್ನ 3-2ಕ್ಕೆ ಕಳೆದುಕೊಂಡರು. ಕೊನೆಯ 3 ನಿಮಿಷಗಳಲ್ಲಿ ನಿತು ರಕ್ಷಣಾತ್ಮಕ ಆಟವಾಡಿ ಕೊನೆಗೆ 3-2 ಅಂತರದಲ್ಲಿ ಗೆಲುವು ಸಾಧಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ

    ಇದುವೆರೆಗೆ ಭಾರತ 11 ಬಾರಿ ಮಹಿಳಾ ವಿಶ್ವಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದೆ. ಅದರಲ್ಲಿ ಬಾಕ್ಸಿಂಗ್‌ ದಂಥಕತೆ ಮೇರಿ ಕೋಮ್‌ 6 ಬಾರಿ ‌(2002, 2005, 2006, 2008, 2010 ಮತ್ತು 2018) ವಿಶ್ವಚಾಂಪಿಯನ್‌ ಆಗಿದ್ದಾರೆ. ಸರಿತಾ ದೇವಿ (2006), ಆರ್‌.ಎಲ್ ಜೆನ್ನಿ (2006), ಕೆ.ಸಿ ಲೇಖಾ (2006) ಮತ್ತು ನಿಖತ್ ಜರೀನ್ (2022) ತಲಾ ಒಂದೊಂದು ಬಾರಿ ಚಾಂಪಿಯನ್‌ ಆಗಿದ್ದರು. ಇದೀಗ ಈ ದಿಗ್ಗಜರ ಸಾಲಿಗೆ ನಿತು ಘಂಘಾಸ್‌ ಸೇರಿದ್ದಾರೆ.