Tag: nitturu

  • ಬುಕ್ ಹಿಡಿಯೋ ಕೈಯಲ್ಲಿ ಭತ್ತದ ನಾಟಿ – ಉಡುಪಿ ಮಕ್ಕಳಿಗೆ ಕೃಷಿ ಪಾಠ

    ಬುಕ್ ಹಿಡಿಯೋ ಕೈಯಲ್ಲಿ ಭತ್ತದ ನಾಟಿ – ಉಡುಪಿ ಮಕ್ಕಳಿಗೆ ಕೃಷಿ ಪಾಠ

    ಉಡುಪಿ: ಭತ್ತ ಎಲ್ಲಿ ಬೆಳೆಯುತ್ತೆ ಮಕ್ಕಳೇ..? ಅಂತ ಮೇಷ್ಟ್ರು ಕೇಳಿದ್ದಕ್ಕೆ ಮಕ್ಕಳು ಕೊಟ್ಟ ಉತ್ತರ ಆ ಶಿಕ್ಷಕರನ್ನು ದಂಗು ಬಡಿಸಿತ್ತು. ಹೀಗೆ ಆದ್ರೆ ಮುಂದೆ ಮಕ್ಕಳ ಜೀವನ ಕಷ್ಟ ಇದೆ ಅಂತ ಅರಿತ ಮೇಷ್ಟ್ರು ಮಕ್ಕಳನ್ನು ಕೆಸರು ಗದ್ದೆಗೆ ಇಳಿಸಿ ಪೈರಿನ ಮೂಟೆಯನ್ನು ಹೊರಿಸಿ ಸತ್ಯದರ್ಶನ ಮಾಡಿಸಿದ್ದಾರೆ.

    ದೇಶದ ಬೆನ್ನೆಲುಬು ರೈತನಿಗಿರುವ ಕಷ್ಟ ಎಷ್ಟಿದೆ ಎಂಬ ಪ್ರ್ಯಾಕ್ಟಿಕಲ್ ನಾಲೇಜ್ ಕೊಡಿಸುವ ಮೂಲಕ ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಣೆ ಮಾಡಲಾಗಿದೆ.

    ಪ್ರೌಢಶಾಲೆಯ ವಿದ್ಯಾರ್ಥಿಗಳು ಗದ್ದೆಯನ್ನು ಉತ್ತು, ಬಿತ್ತಿ, ನಾಟಿ ಮಾಡಿ ನಾಲ್ಕು ತಿಂಗಳು ಅದು ಬೆಳೆದ ನಂತರ ಕಟಾವು ಮಾಡುವ ಪ್ರ್ಯಾಕ್ಟಿಕಲ್ ಪಾಠ ಮಾಡಲಾಗಿದೆ. ಮೂರು ಹೊತ್ತು ಪುಸ್ತಕ ಹಿಡ್ಕೊಂಡು ಪಾಠ ಓದುತ್ತಿದ್ದ ಮಕ್ಕಳಿಗೆ ಕೃಷಿ ಅಂದ್ರೆ ಏನು..? ರೈತನೊಬ್ಬ ಎಷ್ಟು ಕಷ್ಟ ಪಡುತ್ತಾನೆ. ಇಡೀ ಜೀವನವನ್ನು ಕೆಸರು ಗದ್ದೆಯಲ್ಲಿ ಕಳೆದು ಭತ್ತ ಬೆಳೆದು ಅಕ್ಕಿಯಾಗಿ ಅನ್ನ ಬಟ್ಟಲಿಗೆ ಬರುವ ತನಕ ಎಷ್ಟು ಕಷ್ಟಪಡುತ್ತಾನೆ ಅನ್ನೋದನ್ನು ಗದ್ದೆಯಲ್ಲಿ ಕೃಷಿ ಪಾಠದ ಮೂಲಕ ತಿಳಿಸಲಾಯ್ತು ಅಂತ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಳೆದ 5 ವರ್ಷದಿಂದ ಬೇರೆ ಬೇರೆ ಕೃಷಿ ಚಟುವಟಿಕೆಯಲ್ಲಿ ಮಕ್ಕಳನ್ನು ಶಿಕ್ಷಕರು ತೊಡಗಿಸುತ್ತಾರೆ. ಈ ಬಾರಿ ನಾಟಿ, ಬಿತ್ತನೆ ನಂತರ ಕಟಾವು ಕೆಲಸದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಪೂರ್ಣವಾಗಿ ಭತ್ತ ಬೆಳೆಸುವ ಪ್ರಕ್ರಿಯೆಯನ್ನು ಮಕ್ಕಳು ಹತ್ತಿರದಿಂದ ನೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಕೂಡಾ ಭತ್ತದ ಮೂಟೆ ಹೊತ್ತು- ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸುವಲ್ಲಿ ಮಕ್ಕಳ ಜೊತೆ ಪಾಲ್ಗೊಂಡರು. ನಾವು ಕೂಡ ಖುಷಿ ಖುಷಿಯಿಂದ ಎಲ್ಲಾ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದಾಗಿ ವಿದ್ಯಾರ್ಥಿನಿ ದೃಶ್ಯ ತಿಳಿಸಿದ್ದಾಳೆ.

    https://www.youtube.com/watch?v=gArcpAAgrRA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಸರ್ಕಾರಕ್ಕೂ ಮೊದ್ಲೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ ಉಡುಪಿಯ ಮುರಳಿ ಮಾಸ್ಟರ್

    ಉಡುಪಿ: ಒಬ್ಬ ಒಳ್ಳೆಯ ಶಿಕ್ಷಕ ಒಂದು ಶಾಲೆಯನ್ನು ಮಾತ್ರವಲ್ಲ ಒಂದು ಊರನ್ನೇ ಬದಲಾಯಿಸಬಹುದು ಅನ್ನೋ ಮಾತಿದೆ. ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುರಳಿ ಕಡೆಕಾರು ಮಾಸ್ಟರ್ ಸರ್ಕಾರಕ್ಕೂ ಮುನ್ನವೇ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದವರು.

    ಮುರುಳಿ ಅವರು ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹೆಡ್ ಮಾಸ್ಟರ್. ಗಣಿತ ಬೋಧಿಸುವ ಇವರು ಈ ಶಾಲೆಗೆ ಬಂದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. 2000ನೇ ಇಸವಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಶುರು ಮಾಡಿದ ಹೆಗ್ಗಳಿಕೆ ಇವರದ್ದು. ದಾನಿಗಳಿಂದ ದೇಣಿಗೆ ಪಡೆದು ಮಕ್ಕಳಿಗೆ ಗಂಜಿ ಊಟ ಶುರು ಮಾಡಿದ್ದರು. ಇದಾಗಿ ಒಂದು ವರ್ಷದ ನಂತರ ಕೃಷ್ಣಮಠದಿಂದ ಬಿಸಿಯೂಟ ಸರಬರಾಜು ಶುರುವಾಯ್ತು. ಇದಾಗಿ ಆರು ವರ್ಷದ ನಂತರ ರಾಜ್ಯ ಸರ್ಕಾರ ಮಕ್ಕಳಿಗೆ ಬಿಸಿಯೂಟ ನೀಡಿತು.

    ಇದಲ್ಲದೆ ಈ ಶಾಲೆಗೆ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಳಿತಾಯ ಖಾತೆ ತೆರೆಯಲಾಗುತ್ತದೆ. 1 ರೂಪಾಯಿಯಿಂದ ಸೇವಿಂಗ್ ಅಕೌಂಟ್ ಶುರುವಾಗುತ್ತೆ. ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿಹೋಗುವಾಗ ಸುಮಾರು 10 ರಿಂದ 20 ಸಾವಿರ ರೂಪಾಯಿ ಉಳಿಸುತ್ತಾರೆ. ಬರುವ ಬಡ್ಡಿಯಲ್ಲಿ ಅರ್ಧದಷ್ಟು ಖಾತೆ ಹೊಂದಿದ ಮಕ್ಕಳಿಗೆ ನೀಡಿದ್ರೆ, ಮಿಕ್ಕುಳಿದ ಹಣವನ್ನ ಶಾಲೆಯ ಅಭಿವೃದ್ಧಿ, ಬಡ ಮಕ್ಕಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ವಿನಿಯೋಗಿಸಲಾಗುತ್ತದೆ.

    ಶಾಲೆ ಬಿಟ್ಟ ಮೇಲೂ ಮುರಳಿ ಅವರು ಸಂಜೆ 7ರವರೆಗೆ ಕ್ಲಾಸ್ ಮಾಡ್ತಾರೆ. ಯಕ್ಷಗಾನದಲ್ಲೂ ಭಾಗಿಯಾಗ್ತಾರೆ. ಮುರಳಿ ಅವರ ಸೇವ ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಆಶಯ.

     

    https://www.youtube.com/watch?v=gArcpAAgrRA